Tag: ಡಿಕ್ಕಿ

  • ಸರಕು ಹಡಗುಗಳ ನಡುವೆ ಡಿಕ್ಕಿ-ಬೆಲೆಬಾಳುವ ಕಾರುಗಳಿದ್ದ 21 ಕಂಟೈನರ್ ಸಮುದ್ರಕ್ಕೆ ಬೀಳೋದನ್ನು ನೋಡಿ

    ಸರಕು ಹಡಗುಗಳ ನಡುವೆ ಡಿಕ್ಕಿ-ಬೆಲೆಬಾಳುವ ಕಾರುಗಳಿದ್ದ 21 ಕಂಟೈನರ್ ಸಮುದ್ರಕ್ಕೆ ಬೀಳೋದನ್ನು ನೋಡಿ

    ಲಾಹೋರ್: ಕಾರ್, ಬಸ್, ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗುವುದು ಸಾಮಾನ್ಯ. ಆದರೆ ಸಮುದ್ರದಲ್ಲಿ ಹಡಗಗಳು ಒಂದಕ್ಕೊಂದು ಡಿಕ್ಕಿಯಾಗಿರುವ ಘಟನೆ ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ನಡೆದಿದೆ .

    ದಕ್ಷಿಣ ಏಷ್ಯಾದ ದೊಡ್ಡ ಬಂದರುಗಳಲ್ಲಿ ಒಂದಾಗಿರುವ ಕರಾಚಿಯ ಬಂದರಿನಲ್ಲಿ ಎರಡು ಕಾರ್ಗೊ ಹಡಗುಗಳು ನಿಲ್ಲುವ ವೇಳೆ ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ಬೆಲೆಬಾಳುವ ಕಾರುಗಳನ್ನು ಒಳಗೊಂಡಿದ್ದ ಕಂಟೈನರ್ ಗಳನ್ನು ಒಂದು ಹಡಗು ಸಾಗಿಸುತ್ತಿತ್ತು. ಡಿಕ್ಕಿಯಾಗಿದ್ದರಿಂದ 21 ಕಂಟೈನರ್ ಗಳು ಸಮುದ್ರಕ್ಕೆ ಬಿದ್ದಿದೆ.

    ಈ ಘಟನೆ ಮಾರ್ಚ್ 19ರಂದು ನಡೆದಿದ್ದು, ಬಂದರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಹಡಗು ಡಿಕ್ಕಿಯಾಗುವ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಕಂಟೈನರ್ ಗಳನ್ನು ನಂತರ ಸಮುದ್ರದಿಂದ ಮೇಲೆತ್ತಲಾಗಿದೆ ಅಂತಾ ವರದಿಯಾಗಿದೆ.

    https://www.youtube.com/watch?time_continue=181&v=97Xp-PBmDD4

  • ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ

    ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ- ಮೂವರ ದುರ್ಮರಣ

    ಬೀದರ್: ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೌಡಿಯಾಳ ಗ್ರಾಮದ ಬಳಿ ನಡೆದಿದೆ.

    ಯರಂಡಗಿ ಗ್ರಾಮದ ನಿವಾಸಿಗಳಾದ ಇಸ್ಮಾಯಿಲ್ ಜಾಧವ್(48), ಯಲ್ಲಪ್ಪ ನಿಲೆ(34) ಹಾಗೂ ಸುಭಾಶ್ ಗುಂಡೆ(38) ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಚರಂಡಿಗೆ ಗ್ರಾಮದಿಂದ ಹುಮ್ನಾಬಾದ್ ಗೆ ತೆರಳುವ ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದೆ.

    ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಿಡಿಯೋ ನೋಡಿ: ಆಗಸದಲ್ಲಿ ಹಾರಾಡುತ್ತಿದ್ದ ಪ್ಯಾರಾಚೂಟ್ ಗಳ ಮಧ್ಯೆ ಡಿಕ್ಕಿ-ಮಹಿಳೆ ಸಾವು

    ವಿಡಿಯೋ ನೋಡಿ: ಆಗಸದಲ್ಲಿ ಹಾರಾಡುತ್ತಿದ್ದ ಪ್ಯಾರಾಚೂಟ್ ಗಳ ಮಧ್ಯೆ ಡಿಕ್ಕಿ-ಮಹಿಳೆ ಸಾವು

    ಮೆಕ್ಸಿಕೊ ಸಿಟಿ: ವಾಹನಗಳು ಒಂದಕ್ಕೊಂದು ಡಿಕ್ಕಿಯಾಗುವುದನ್ನು ಮತ್ತು ರೈಲ್ವೆ ಅಪಘಾತಗಳನ್ನು ನೋಡಿದ್ದೇವೆ ಮತ್ತು ಕೇಳಿರುತ್ತವೆ. ಆದ್ರೆ ಆಕಾಶದಲ್ಲಿ ಪ್ಯಾರಾಚೂಟ್ ಬಳಸಿ ಹಾರಾಡುತ್ತಿರುವವರು ಒಬ್ಬರಿಗೊಬ್ಬರು ಡಿಕ್ಕಿ ಆಗಿರುವ ಘಟನೆಯೊಂದು ಮೆಕ್ಸಿಕೋ ನಗರದ ಬೀಚ್ ನಲ್ಲಿ ನಡೆದಿದೆ.

    ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಅಂತಾ ಹೇಳಲಾಗಿದೆ. ಎರಡು ಪ್ಯಾರಾಚೂಟ್‍ಗಳು ಒಂದಕ್ಕೊಂದು ಡಿಕ್ಕಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸೀರೆಯಲ್ಲಿ ಸ್ಕೈ ಡೈವಿಂಗ್ ಮಾಡಿ ದಾಖಲೆ ಬರೆದ ಮಹಿಳೆ

    47 ವರ್ಷದ ಉರ್ಸುಲಾ ಹೆರ್ನಾಂಡೆಜ್ ಎಂಬ ಮಹಿಳೆ ಪ್ಯಾರಾಚೂಟ್ ನಲ್ಲಿ ಹಾರಾಡುತ್ತಾ ಬೀಚ್‍ನಲ್ಲಿ ಲ್ಯಾಂಡಿಂಗ್ ಆಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಬಂದ ಮತ್ತೊಂದು ಪ್ಯಾರಾಚೂಟ್, ಲ್ಯಾಂಡ್ ಆಗ್ತಿದ್ದ ಉರ್ಸುಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಉರ್ಸುಲಾ ಸೇಫ್ ಆಗಿ ಲ್ಯಾಂಡ್ ಆಗದೇ ಬೀಚ್ ನಲ್ಲಿ ಬಿದ್ದಿದ್ದಾರೆ. ಕೂಡಲೇ ಉರ್ಸುಲಾರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ರೂ ಗಂಭೀರವಾಗಿ ಗಾಯಗೊಂಡಿದ್ದರಿಂದ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪ್ಯಾರಾಚೂಟ್ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿಲ್ಲ ಅಂತ ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಪತ್ರಕರ್ತ ಜಾನ್ ಪೆರೆಜ್ ಎಂಬ ಮೆಕ್ಸಿಕೋದಲ್ಲಿ ರಜಾದಿನಗಳ ಪ್ರಾರಂಭಕ್ಕೂ ಮುನ್ನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಬೀಚ್‍ಗಳಲ್ಲಿ ಪ್ಯಾರಾಚೂಟ್ ಬಳಸಿ ಹಾರಾಡುವುದು ಟ್ರೆಂಡಿಂಗ್ ಆಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಸಾಹಸಿಗಳು ಎಚ್ಚರಿಕೆಯಿಂದಿರಬೇಕು ಅಂತಾ ಜಾನ್ ಬರೆದುಕೊಂಡಿದ್ದಾರೆ.

    https://youtu.be/pwyJbQO7TdU

  • ಯುಗಾದಿ ಹಬ್ಬಕ್ಕೆ ಅಕ್ಕನ ಮಕ್ಕಳನ್ನು ಕರೆದೊಯ್ಯುವಾಗ ಬೈಕಿಗೆ KSRTC ಬಸ್ ಡಿಕ್ಕಿ- ಯುವಕ ಸಾವು, ಚಾಲಕ ಪರಾರಿ

    ಯುಗಾದಿ ಹಬ್ಬಕ್ಕೆ ಅಕ್ಕನ ಮಕ್ಕಳನ್ನು ಕರೆದೊಯ್ಯುವಾಗ ಬೈಕಿಗೆ KSRTC ಬಸ್ ಡಿಕ್ಕಿ- ಯುವಕ ಸಾವು, ಚಾಲಕ ಪರಾರಿ

    ಚಿಕ್ಕಬಳ್ಳಾಪುರ: ಬೈಕಿಗೆ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಡಬಲ್ ರೋಡ್ ನಲ್ಲಿ ನಡೆದಿದೆ.

    ಅಂಜಿ(18) ಸಾವನ್ನಪ್ಪಿದ್ದ ಯುವಕ. ಅಫಘಾತದಲ್ಲಿ ಮತ್ತಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುಗಾದಿ ಹಬ್ಬ ಎಂದು ತನ್ನ ಇಬ್ಬರು ಅಕ್ಕನ ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಅಂಜಿ ಮೃತಪಟ್ಟಿದ್ದಾನೆ.

    ಈ ಘಟನೆ ನಂತರ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದು, ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟ್ರ್ಯಾಕ್ ದಾಟುವಾಗ ರೈಲು ಡಿಕ್ಕಿ- 6 ಯುವಕರ ಸಾವು

    ಟ್ರ್ಯಾಕ್ ದಾಟುವಾಗ ರೈಲು ಡಿಕ್ಕಿ- 6 ಯುವಕರ ಸಾವು

    ಲಕ್ನೋ: ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಹಳಿ ದಾಟುತ್ತಿದ್ದ 7 ಜನರಲ್ಲಿ 6 ಯುವಕರು ಸಾವನ್ನಪ್ಪಿರುವ ಘಟನೆ ಭಾನುವಾರದಂದು ಉತ್ತರಪ್ರದೇಶದ ಹಾಪುರ್‍ನಲ್ಲಿ ನಡೆದಿದೆ.

    ಮೃತರನ್ನು ಸಲೀಮ್, ಆರಿಫ್, ಅಜಯ್, ಅಮೀರ್, ಆಕಾಶ್ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ. ಯುವಕರು 14 ರಿಂದ 16 ವರ್ಷ ವಯಸ್ಸಿನವರಾಗಿದ್ದು, ರೈಲ್ವೇ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಮೃತರೆಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದು, ಹೈದರಾಬಾದ್‍ಗೆ ಕೆಲಸಕ್ಕೆ ಹೋಗಲು ಘಜಿಯಾಬಾದ್‍ನಲ್ಲಿ ರೈಲು ಏರಬೇಕಿತ್ತು. ಆದ್ರೆ ರೈಲು ಮಿಸ್ ಆದ ಕಾರಣ ಮಧ್ಯರಾತ್ರಿಯ ನಂತರ ಪಿಲಾಕುವಾಗೆ ಹಿಂದಿರುಗಿದ್ದರು.

    ರೈಲು ಡಿಕ್ಕಿ ಹೊಡೆದ ಸಂದರ್ಭದಲ್ಲಿ ಯುವಕರು ಹಳಿ ದಾಟಲು ಯತ್ನಿಸಿದ್ದರು. ಆದ್ರೆ ವೇಗವಾಗಿ ಬಂದ ರೈಲು ಡಿಕ್ಕಿಯಾದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮತ್ತಿಬ್ಬರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿತ್ತು. ಅವರಲ್ಲಿ ಒಬ್ಬ ಯುವಕ ತೀವ್ರ ಗಾಯಗಳಿಂದ ಮೃತಪಟ್ಟಿದ್ದಾನೆ. ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

    ಘಟನೆ ಬಳಿಕ ಸ್ಥಳೀಯರು ಟ್ರ್ಯಾಕ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರದೇಶದಲ್ಲಿ ರಾತ್ರಿ ಹೊತ್ತು ಕಡಿಮೆ ಬೆಳಕು ಇರುತ್ತದೆ ಹಾಗೂ ರೈಲು ಬರುತ್ತಿರುವ ಬಗ್ಗೆ ಯಾವುದೇ ಘೋಷಣೆ ಮಾಡಲ್ಲ ಎಂದು ಹೇಳಿದ್ದಾರೆ.

  • KSRTC ಬಸ್ ಗೆ ಬಾಗಲಕೋಟೆ ಜಿ.ಪಂ ಅಧ್ಯಕ್ಷೆಯ ಕಾರು ಡಿಕ್ಕಿ!

    KSRTC ಬಸ್ ಗೆ ಬಾಗಲಕೋಟೆ ಜಿ.ಪಂ ಅಧ್ಯಕ್ಷೆಯ ಕಾರು ಡಿಕ್ಕಿ!

    ಬಾಗಲಕೋಟೆ: ಕೆಎಸ್‍ಆರ್‍ಟಿಸಿ ಬಸ್ ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯೊಬ್ಬರ ಕಾರ್ ಡಿಕ್ಕಿ ಹೊಡೆದ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ಪಟ್ಟಣದಲ್ಲಿ ನಡೆದಿದೆ.

    ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ಹಾಗೂ ಬಾಗಲಕೋಟೆ ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಕಾರ್ ಇಳಕಲ್ ನಗರದಿಂದ ಬಾಗಲಕೋಟೆ ಮಾರ್ಗದಿಂದ ಬರುವಾಗ ಹಿಂಬದಿಯಿಂದ ಬಸ್ ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಜಿ.ಪಂ ಅಧ್ಯಕ್ಷೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಲು ಹೋಗುವಾಗ ಈ ಅಪಘಾತ ಸಂಭವಿಸಿದ್ದು, ಕಾರಿನ ಹೆಡ್ ಲೈಟ್ ಜಖಂಗೊಂಡಿದೆ. ಅಪಘಾತದ ಬಳಿಕ ಅಧ್ಯಕ್ಷೆ ಬೇರೆ ಕಾರಿನಲ್ಲಿ ಬಾಗಲಕೋಟೆಗೆ ತಲುಪಿದ್ದಾರೆ.

  • ವಾಹನವನ್ನು ಹಿಂದಿಕ್ಕುವ ಭರದಲ್ಲಿ ಖಾಸಗಿ ಬಸ್ಸಿನಿಂದ ಅಪಘಾತ- ಅಂಗಡಿಯೆದುರು ನಿಂತಿದ್ದ ವ್ಯಕ್ತಿ ದುರ್ಮರಣ

    ವಾಹನವನ್ನು ಹಿಂದಿಕ್ಕುವ ಭರದಲ್ಲಿ ಖಾಸಗಿ ಬಸ್ಸಿನಿಂದ ಅಪಘಾತ- ಅಂಗಡಿಯೆದುರು ನಿಂತಿದ್ದ ವ್ಯಕ್ತಿ ದುರ್ಮರಣ

    ರಾಮನಗರ: ವಾಹನವನ್ನು ಹಿಂದಿಕ್ಕುವ ಭರದಲ್ಲಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ ಡಿವೈಡರ್‍ಗೆ ಡಿಕ್ಕಿಯಾಗಿ ಪಕ್ಕದ ರಸ್ತೆಯ ಅಂಗಡಿ ಬದಿ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಮನಗರ ಹೊರವಲಯದ ವಡೇರಹಳ್ಳಿ ಸಮೀಪ ನಡೆದಿದೆ.

    ವಡೇರಹಳ್ಳಿ ಗ್ರಾಮದ ಕೃಷ್ಣಪ್ಪ ಮೃತ ದುರ್ದೈವಿ. ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ ಉದಯರಂಗ ವಡೇರಹಳ್ಳಿ ಸಮೀಪ ಗೂಡ್ಸ್ ಟೆಂಪೋ ಹಿಂದಿಕ್ಕಲು ಯತ್ನಿಸಿದೆ.

    ಆದ್ರೆ ಟೆಂಪೋಗೆ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಪಿದ ಬಸ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಪಕ್ಕದ ರಸ್ತೆಗೆ ನುಗ್ಗಿದ ಬಸ್ ಅಂಗಡಿ ಬದಿ ನಿಂತಿದ್ದ ಕೃಷ್ಣಪ್ಪಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೃಷ್ಣಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ದೊಣ್ಣೆಯಿಂದ ಬಸ್ ನ ಕಿಟಕಿ ಹಾಗೂ ಗ್ಲಾಸ್ ಗಳನ್ನ ಪುಡಿಪುಡಿ ಮಾಡಿದ್ದಾರೆ. ಅಲ್ಲದೇ ಕಲ್ಲು ತೂರಾಟ ಕೂಡ ನಡೆಸಿದ್ದಾರೆ. ಬಳಿಕ ರಾಮನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಪಘಾತ ಸ್ಥಳವನ್ನು ಪರಿಶೀಲಿಸಿದ್ದಾರೆ. ನಂತರ ಕಿಲೋಮೀಟರ್ ದೂರ ಉಂಟಾಗಿದ್ದ ಟ್ರಾಫಿಕ್ ಜಾಮ್ ನ್ನು ತೆರವು ಗೊಳಿಸಿದ್ದಾರೆ.

  • ಮರಕ್ಕೆ ಕ್ರೂಸರ್ ಡಿಕ್ಕಿ- ಪ್ರವಾಸಕ್ಕೆ ಹೋಗಿದ್ದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಗಂಭೀರ ಗಾಯ

    ಮರಕ್ಕೆ ಕ್ರೂಸರ್ ಡಿಕ್ಕಿ- ಪ್ರವಾಸಕ್ಕೆ ಹೋಗಿದ್ದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಗಂಭೀರ ಗಾಯ

    ಚಿತ್ರದುರ್ಗ: ಶೈಕ್ಷಣಿಕ ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹಿರಿಯೂರು ತಾಲೂಕಿನ ಹುಳಿಯಾರು ರಸ್ತೆಯಲ್ಲಿ ನಡೆದಿದೆ.

    ಬುಧವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದ್ದು, ಗಾಯಗೊಂಡವರು ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಹಟ್ಟಿ ಚಿನ್ನದಗಣಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

    ಕ್ರೂಸರ್ ವಾಹನದಲ್ಲಿದ್ದ ಮೂರು ಮಂದಿ ಶಿಕ್ಷಕರು, ಡ್ರೈವರ್, ಅಡುಗೆ ಕೆಲಸದವನು ಸೇರಿದಂತೆ ಒಟ್ಟು 16 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಹಿರಿಯೂರು ತಾಲೂಕು ಆಸ್ಪತ್ರೆ, ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆ ಹಾಗೂ ದಾವಣಗೆರೆ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಡ್ರೈವರ್ ನಿದ್ದೆಯ ಮಂಪರಿನಲ್ಲಿದ್ದ ಕಾರಣ ಶ್ರೀನಿವಾಸ್ ಎಂಬ ಮತ್ತೊಬ್ಬ ವ್ಯಕ್ತಿ ವಾಹನ ಚಲಾಯಿಸುತ್ತಿದ್ದರು ಎಂದು ಶಿಕ್ಷಕ ಲಿಂಗಪ್ಪ ಪೂಜಾರ್ ತಿಳಿಸಿದ್ದಾರೆ.

    ಅಪಘಾತವಾದ ನಂತರ ನಮಗೆ ಎಚ್ಚರವಾಯಿತು, ಅಪಘಾತ ಯಾಕೆ ಸಂಭವಿಸಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಲಿಂಗಪ್ಪ ಪೂಜಾರ್ ಪ್ರತಿಕ್ರಿಯಿಸಿದ್ದಾರೆ.

     

  • ಬಾದಾಮಿ ಜಾತ್ರೆಗೆ ಪಾದಯಾತ್ರೆ ತೆರಳುತ್ತಿದ್ದಾಗ ಬೈಕ್ ಡಿಕ್ಕಿ: ಭಕ್ತ ಸಾವು

    ಬಾದಾಮಿ ಜಾತ್ರೆಗೆ ಪಾದಯಾತ್ರೆ ತೆರಳುತ್ತಿದ್ದಾಗ ಬೈಕ್ ಡಿಕ್ಕಿ: ಭಕ್ತ ಸಾವು

    ಬಾಗಲಕೋಟೆ: ಬಾದಾಮಿ ಜಾತ್ರೆಗೆ ಪಾದಯಾತ್ರೆ ತೆರಳುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಭಕ್ತರೊಬ್ಬರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಹಲಕುರ್ಕಿ ಗ್ರಾಮದ ಬಳಿ ನಡೆದಿದೆ.

    ಕೆರೂರ ಪಟ್ಟಣದ ನಿವಾಸಿ ರಾಜು ಡೊಳ್ಳಿ(38) ಮೃತ ವ್ಯಕ್ತಿ. ರಾಜು ಸ್ನೇಹಿತರೊಂದಿಗೆ ಇಂದು ನಡೆಯಲಿರೋ ಬಾದಾಮಿಯ ಬನಶಂಕರಿ ಜಾತ್ರೆಗೆ ಪಾದಯಾತ್ರೆ ತೆರಳುತ್ತಿದ್ದರು. ಈ ವೇಳೆ ಬೈಕ್ ಡಿಕ್ಕಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾಜು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

     

  • ಹೊಸ ವರ್ಷಾಚರಣೆ ಮುಗಿಸಿ ಗೋವಾದಿಂದ ಬರುವಾಗ ಭೀಕರ ಅಪಘಾತ: ಮೂವರ ಸಾವು

    ಹೊಸ ವರ್ಷಾಚರಣೆ ಮುಗಿಸಿ ಗೋವಾದಿಂದ ಬರುವಾಗ ಭೀಕರ ಅಪಘಾತ: ಮೂವರ ಸಾವು

    ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಈ ಅಪಘಾತ ನಡೆದಿದೆ. ಸಾವಿತ್ರಿ ಗುಪ್ತಾ(47), ಶೋಭಾ ಗುಪ್ತಾ(27) ಹಾಗೂ ಆರತಿ ಗುಪ್ತಾ(21) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಯಿ ಸೇರಿದಂತೆ ಇಬ್ಬರು ಮಕ್ಕಳ ಸಾವನ್ನಪ್ಪಿದ್ದು, ಸಾವಿತ್ರಿ ಗುಪ್ತಾ ಅವರ ಪತಿ, ಸಹೋದರ ಹಾಗೂ ಕಾರು ಚಾಲಕನಿಗೆ ಗಂಭಿರ ಗಾಯವಾಗಿದೆ.

    ಗಾಯಾಳುಗಳನ್ನು ಮಹಾರಾಷ್ಟ್ರದ ಕೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ಮತ್ತು ಗಾಯಾಳುಗಳು ಮುಂಬೈ ಮೂಲದವರಾಗಿದ್ದು, ಗೋವಾದಿಂದ ಹೊಸ ವರ್ಷಾಚರಣೆ ಮುಗಿಸಿ ಮುಂಬೈಗೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

    ಸ್ಥಳಕ್ಕೆ ನಿಪ್ಪಾಣಿ ಶಹರ ಪಿಎಸ್‍ಐ ಶಶಿಕಾಂತ ವರ್ಮಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.