Tag: ಡಿಕ್ಕಿ

  • ಅಪರಿಚಿತ ವಾಹನ ಡಿಕ್ಕಿ ಹೊಡೆದು ಗುರುತು ಹಿಡಿಯಲಾಗದಷ್ಟು ವ್ಯಕ್ತಿ ಛಿದ್ರ ಛಿದ್ರ!

    ಅಪರಿಚಿತ ವಾಹನ ಡಿಕ್ಕಿ ಹೊಡೆದು ಗುರುತು ಹಿಡಿಯಲಾಗದಷ್ಟು ವ್ಯಕ್ತಿ ಛಿದ್ರ ಛಿದ್ರ!

    ಬೆಂಗಳೂರು: ಅಪರಿಚಿತ ವಾಹನವೊಂದು ವ್ಯಕ್ತಿಯೊರ್ವನಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ಮೃತನ ದೇಹ ಛಿದ್ರವಾಗಿ ಬಿದ್ದಿರುವ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲದ ಕೆರೆಕತ್ತಿಗನೂರು ಕ್ರಾಸ್ ಬಳಿ ಈ ಘಟನೆ ಸಂಭವಿಸಿದ್ದು, ಮೃತ ವ್ಯಕ್ತಿ ಭಿಕ್ಷುಕ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನೂ ತಡರಾತ್ರಿ ಅಪಘಾತ ನಡೆದಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.

    ರಸ್ತೆ ಪಕ್ಕದಲ್ಲಿ ಛಿದ್ರವಾಗಿ ಬಿದ್ದಿರುವ ವ್ಯಕ್ತಿ ಸುಮಾರು 45 ವರ್ಷದವರು ಎಂದು ಹೇಳಲಾಗಿದ್ದು, ಮೃತ ದೇಹ, ಗುರುತು ಪತ್ತೆಯಾಗದಷ್ಟು ದೇಹ ವಿರೂಪಗೊಂಡಿದೆ. ಮೃತ ದೇಹದ ಮೇಲೆ ಭಾರಿ ವಾಹನಗಳು ಸಂಚರಿಸಿರುವುದರಿಂದ ಗುರುತು ಪತ್ತೆಯಾಗದಷ್ಟು ದೇಹ ವಿರೂಪಗೊಂಡಿದೆ.

    ಸದ್ಯ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • ರಸ್ತೆ ಅಪಘಾತ – ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದ 5 ಮಂದಿ ಸಾವು

    ರಸ್ತೆ ಅಪಘಾತ – ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದ 5 ಮಂದಿ ಸಾವು

    ಹೈದರಾಬಾದ್: ಬೊಲೆರೋ ಐಚರ್ ಗೆ ಬೊಲೆರೋ ವಾಹನ ಡಿಕ್ಕಿಯಾಗಿ 5 ಜನ ಸ್ಥಳದಲ್ಲೇ ಮೃತಪಟ್ಟು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಸಮೀಪದ ಮಂಡೂರು ಬಳಿ ನಡೆದಿದೆ.

    ಬೊಲೆರೋ ತಿರುಪತಿಯಿಂದ ಮಹಾರಾಷ್ಟ್ರ ಕಡೆ ಹೊರಟಿದ್ದಾಗ ರಸ್ತೆಗೆ ವೈಟ್ ಲೈನ್ ಪೈಂಟ್ ಮಾಡುತ್ತಿದ್ದ ಐಚರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

    ಸ್ಥಳಕ್ಕೆ ರೇಣುಗುಂಟ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

  • ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ವೃದ್ಧನಿಗೆ ಡಿಕ್ಕಿ ಹೊಡೆದ ಯುವಕರು!

    ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ವೃದ್ಧನಿಗೆ ಡಿಕ್ಕಿ ಹೊಡೆದ ಯುವಕರು!

    ಮಂಡ್ಯ: ಹೊಸಬೂದನೂರು ಗ್ರಾಮದ ಬಳಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ಯುವಕರು ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಪಾದಚಾರಿ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ನಾಗಪ್ಪ(64) ಎಂಬವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಕಾರಿನಲ್ಲಿ ಲಾಂಗ್ ಡ್ರೈವ್‍ಗೆ ಬಂದಿದ್ದ ಯುವಕರು ಅಪಘಾತ ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕಾರಿನ ಗ್ಲಾಸ್ ಒಡೆದು ಯುವಕರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಘಟನೆಯಲ್ಲಿ ಪೊಲೀಸರ ವಾಹನದ ಗ್ಲಾಸ್ ಕೂಡ ಒಡೆದು ಹೋಗಿದೆ. ಈ ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರ್, ಕಂಟೇನರ್ ಮುಖಾಮುಖಿ ಡಿಕ್ಕಿ- ಮೂವರು ಸಾವು!

    ಕಾರ್, ಕಂಟೇನರ್ ಮುಖಾಮುಖಿ ಡಿಕ್ಕಿ- ಮೂವರು ಸಾವು!

    ಬೀದರ್: ಕಾರು ಮತ್ತು ಕಂಟೇನರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ ಘಟನೆ ನಸುಕಿನ ಜಾವ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಕೌಡಿಯಾಳ ಬಳಿ ಸಂಭವಿಸಿದೆ.

    ರಾಜೇಂದ್ರ ಶಿವಲಿಂಗಪ್ಪಾ ಚಿತಕೋಟೆ(52), ಶ್ರೀಧರ್ ಚಿತಕೋಟೆ(32) ಹಾಗೂ ಸಂತೋಷ್ ಕಾರಮೋರೆ (40) ಮತ ದುರ್ದೈವಿಗಳು. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹೊದಲೂರು ಗ್ರಾಮದವರು ಸಂಬಂಧಿಕರ ಮದುವೆಗೆಂದು ಮಹಾರಾಷ್ಟ್ರಕ್ಕೆ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರು ಓವರ್ ಟೆಕ್ ಮಾಡಿ ಮುಂದೆ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಈ ಕುರಿತು ಬಸವಕಲ್ಯಾಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮರಕ್ಕೆ ಖಾಸಗಿ ಬಸ್ ಡಿಕ್ಕಿ- ಓರ್ವ ಸ್ಥಳದಲ್ಲೇ ದುರ್ಮರಣ

    ಮರಕ್ಕೆ ಖಾಸಗಿ ಬಸ್ ಡಿಕ್ಕಿ- ಓರ್ವ ಸ್ಥಳದಲ್ಲೇ ದುರ್ಮರಣ

    ಹಾವೇರಿ: ಮರಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

    ಈ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕೂರು ಕ್ರಾಸ್ ಬಳಿ ಘಟನೆ ನಡೆದಿದೆ. ಬೆಂಗಳೂರಿನಿಂದ ಶಿರಸಿಯತ್ತ ತೆರಳುತ್ತಿದ್ದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತನ ಬಗ್ಗೆ  ಇನ್ನಷ್ಟೇ ತಿಳಿದುಬರಬೇಕಿದೆ.

    ಗಾಯಾಳುಗಳನ್ನು ಕೂಡಲೇ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಚಾಲಕನ ನಿದ್ದೆ ಮಂಪರು ಅಥವಾ ಅತೀ ವೇಗದ ಚಾಲನೆಯಿಂದಾಗಿ ಈ ಘಟನೆ ಸಂಭವಿಸಿದೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಕಾರು ತಪಾಸಣೆ ವೇಳೆ ಗೂಡ್ಸ್ ಲಾರಿ ಡಿಕ್ಕಿ- ಕರ್ತವ್ಯ ನಿರತ ಮುಖ್ಯಪೇದೆ ದುರ್ಮರಣ

    ಕಾರು ತಪಾಸಣೆ ವೇಳೆ ಗೂಡ್ಸ್ ಲಾರಿ ಡಿಕ್ಕಿ- ಕರ್ತವ್ಯ ನಿರತ ಮುಖ್ಯಪೇದೆ ದುರ್ಮರಣ

    ರಾಮನಗರ: ಚುನಾವಣೆ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಿರತ ಮುಖ್ಯಪೇದೆಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ರಾಮನಗರ ತಾಲೂಕಿನ ಹೆಜ್ಜಾಲ ಬಳಿ ನಡೆದಿದೆ.

    ಮಹಾಲಿಂಗ(39) ಸಾವನ್ನಪ್ಪಿದ ಪೇದೆಯಾಗಿದ್ದು, ಇವರು ಬಿಡದಿ ಪೊಲೀಸ್ ಠಾಣೆಯ ಮುಖ್ಯಪೇದೆ. ಚುನಾವಣೆ ಹಿನ್ನೆಲೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾತ್ರಿ ಚೆಕ್ ಪೋಸ್ಟ್ ನಲ್ಲಿ ಕಾರು ತಪಾಸಣೆ ನಡೆಸುವ ವೇಳೆ ವೇಗವಾಗಿ ಬಂದ ಗೂಡ್ಸ್ ವಾಹನ ಇವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪೇದೆ ಮಹಾಲಿಂಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ತೆರಳುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ಇನ್ನೂ ಗೂಡ್ಸ್ ವಾಹನದ ಚಾಲಕ ಪರಾರಿಯಾಗಿದ್ದು, ಬಿಡದಿಯ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ರಸ್ತೆ ಬದಿ ಗೋಡೆಗೆ ಕಾರು ಡಿಕ್ಕಿ – ವೈದ್ಯ ದಂಪತಿ ಸೇರಿ ಒಂದೇ ಕುಟುಂಬದ ನಾಲ್ವರ ಸಾವು

    ರಸ್ತೆ ಬದಿ ಗೋಡೆಗೆ ಕಾರು ಡಿಕ್ಕಿ – ವೈದ್ಯ ದಂಪತಿ ಸೇರಿ ಒಂದೇ ಕುಟುಂಬದ ನಾಲ್ವರ ಸಾವು

    ಬಳ್ಳಾರಿ: ರಸ್ತೆ ಬದಿ ಗೋಡೆಗೆ ಕಾರು ಡಿಕ್ಕಿಯಾಗಿ ವೈದ್ಯ ದಂಪತಿ ಸೇರಿದಂತೆ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಬಳ್ಳಾರಿಯ ಸೋಮಸಮುದ್ರ ಗ್ರಾಮದ ಹೊರವಲಯದ ರಸ್ತೆ ಬಳಿ ನಡೆದಿದೆ.

    ವೈದ್ಯ ಸಂತೋಷ್, ಅವರ ಪತ್ನಿ ಅರ್ಚನಾ, ಮಗಳು ಲಕ್ಷ್ಮಿ, ತಂದೆ ಸಿದ್ರಾಮಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಸಂತೋಷ್ ತಾಯಿ ಲೀಲಾವತಿ ಹಾಗೂ ಅವರ ಮೊಮ್ಮಗ ತನಿಷ್ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ವಿಫ್ಟ್ ಕಾರಿನಲ್ಲಿ ವೈದ್ಯರ ಕುಟುಂಬ ಪ್ರಯಾಣಿಸುತ್ತಿದ್ದು, ಅತಿವೇಗದಿಂದ ಕಾರು ಚಲಾಯಿಸಿ ರಸ್ತೆ ಬದಿಗೆ ಗೋಡೆಗೆ ಗುದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಸ್ಥಳಕ್ಕೆ ಕುರುಗೋಡು ಪೊಲೀಸರು ಹಾಗೂ ಜಿಲ್ಲಾ ಎಸ್ಪಿ ಅರುಣ್ ರಂಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕಾರು, ಬೈಕ್ ಮುಖಾಮುಖಿ ಡಿಕ್ಕಿ- ಅಯ್ಯೋ ಕಾಪಾಡಿ ಎಂದು ಗಾಯಾಳು ಅಂಗಲಾಚಿದ್ದರು ಸುಮ್ಮನೇ ನಿಂತ ಜನ!

    ಕಾರು, ಬೈಕ್ ಮುಖಾಮುಖಿ ಡಿಕ್ಕಿ- ಅಯ್ಯೋ ಕಾಪಾಡಿ ಎಂದು ಗಾಯಾಳು ಅಂಗಲಾಚಿದ್ದರು ಸುಮ್ಮನೇ ನಿಂತ ಜನ!

    ಹಾಸನ: ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಕಾಲು ಮುರಿದುಕೊಂಡು ಗಂಟೆಗಟ್ಟಲೆ ನರಳಾಡಿದರೂ ಯಾರೊಬ್ಬರು ನೆರವಿಗೆ ಬಾರದೆ ಅಮಾನವೀಯತೆ ತೋರಿದ ಘಟನೆ ಹಾಸನ ಜಿಲ್ಲೆ ಆಲೂರು ಬಳಿ ನಡೆದಿದೆ.

    ಪ್ರಸನ್ನ ಅಪಘಾತದಲ್ಲಿ ಕಾಲು ಮುರಿದುಕೊಂಡ ಬೈಕ್ ಸವಾರ. ಬೇಲೂರು ತಾಲೂಕು ಬಿಕ್ಕೋಡು ಗ್ರಾಮದ ಪ್ರಸನ್ನ ಸುಮಾರು 1 ಗಂಟೆ ಕಾಲ ರಸ್ತೆಯಲ್ಲಿಯೇ ನರಳಾಡಿದ್ದರು. ಆಲೂರು ಹೊರವಲಯದ ಅರೇಬಿಕ್ ಕಾಲೇಜ್ ಹತ್ತಿರ ಸೋಮವಾರ ಮಧ್ಯಾಹ್ನ ಅಪಘಾತ ಸಂಭವಿಸಿತ್ತು.

    ಹಾಸನ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರು, ಆಲೂರು ಕಡೆಯಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಬೈಕ್ ಸವಾರ ಪ್ರಸನ್ನರ ಕಾಲು ಹಾಗೂ ತಲೆಗೆ ಬಲವಾಗಿ ಪೆಟ್ಟು ಬಿದ್ದು, ಕಾಲು ಮುರಿದಿತ್ತು. ಇದರಿಂದ ಮೇಲೆಳಲಾಗದೇ ರಸ್ತೆಯಲ್ಲಿ ರಕ್ತದ ಮಧ್ಯೆ ಗಾಯಾಳು ಒದ್ದಾಡುತ್ತಿದ್ದರು ಯಾರೊಬ್ಬರೂ ಪ್ರಸನ್ನ ನೆರವಿಗೆ ಬಾರದೇ ಮೂಕ ಪ್ರೇಕ್ಷಕರಾಗಿದ್ದರು.

    ಅಯ್ಯೋ ಕಾಪಾಡಿ ಎಂದು ಗಾಯಾಳು ಅಂಗಲಾಚಿದ್ದರು ಜನ ಸುಮ್ಮನೇ ನಿಂತಿದ್ದರು. ನಂತರ ಯಾರೋ ಆಲೂರು ಪೊಲೀಸರು ಮತ್ತು ಹಾಗೂ ಆಂಬುಲೆನ್ಸ್ ಗೆ ಕರೆ ಮಾಡಿದರು. ಫೋನ್ ಮಾಡಿ ಸುದ್ದಿ ತಿಳಿಸಿದ್ದರು. ನಂತರ ಗಂಟೆ ಕಳೆದರು ಪೊಲೀಸರು ಬಾರಲೇ ಇಲ್ಲ.

    ಅತ್ತ ರಿಪೇರಿ ಇದೆ ಎನ್ನುವ ಕಾರಣ ನೀಡಿ ಸರ್ಕಾರಿ ಆಂಬುಲೆನ್ಸ್ ಸಹ ಬರಲಿಲ್ಲ. ಕೊನೆಗೆ ತಡವಾಗಿಯಾದರು ಹಾಸನದಿಂದ ಆಗಮಿಸಿದ ಆಂಬುಲೆನ್ಸ್ ಮೂಲಕ ಪ್ರಸನ್ನ ರನ್ನು ಸಾಗಿಸಲಾಯಿತು. ಸದ್ಯ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಹೆಲ್ಮೆಟ್ ಹಾಕದಕ್ಕೆ ಫೈನ್ ಕಟ್ಟಬೇಕೆಂದು, ಟ್ರಾಫಿಕ್ ಪೊಲೀಸರ ಮೇಲೆಯೇ ಬೈಕ್ ಹರಿಸಿದ ಸವಾರ

    ಹೆಲ್ಮೆಟ್ ಹಾಕದಕ್ಕೆ ಫೈನ್ ಕಟ್ಟಬೇಕೆಂದು, ಟ್ರಾಫಿಕ್ ಪೊಲೀಸರ ಮೇಲೆಯೇ ಬೈಕ್ ಹರಿಸಿದ ಸವಾರ

    ಬೆಂಗಳೂರು: ತಪಾಸಣೆ ವೇಳೆ ಬೈಕ್ ಸವಾರನೊಬ್ಬ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಹೆಚ್‍ಎಸ್‍ಆರ್ ಲೇಔಟ್ ಸಂಚಾರಿ ಠಾಣೆ ಪಿಎಸ್‍ಐ ರವೀಂದ್ರ ರಾವ್‍ಗೆ ಗಾಯಗಳಾಗಿದ್ದು, ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಪೊಲೀಸರಿಗೆ ಡಿಕ್ಕಿ ಹೊಡೆದು ಬೈಕ್ ಸವಾರರು ಪರಾರಿಯಾಗಿದ್ದಾರೆ.

    ಬೈಕ್ ಸವಾರರು ಕಾನೂನು ಉಲ್ಲಂಘಿಸಿದ್ದು, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಫೈನ್ ಹಾಕುತ್ತಿದ್ದರು. ಇದೇ ವೇಳೆ ಬೈಕ್ ಸವಾರರು ಹೆಲ್ಮೆಟ್ ಹಾಕದೇ ಬಂದಿದ್ದರು. ಆಗ ಬೈಕ್ ಸವಾರನನ್ನು ಹಿಡಿಯಲು ಹೋದ ಪೊಲೀಸ್ ಅಧಿಕಾರಿಗಳ ಮೇಲೆ ಬೈಕ್ ನಲ್ಲಿ ಹರಿಸಿ ಪರಾರಿಯಾಗಿದ್ದಾರೆ.

    ಬೈಕ್ ಸವಾರರು ಟ್ರಾಫಿಕ್ ಪಿಎಸ್‍ಐ ರವೀಂದ್ರ ಅವರಿಗೆ ಗುದ್ದಿದ್ದಾರೆ. ಗಾಯಗೊಂಡ ಪಿಎಸ್‍ಐ ರವೀಂದ್ರ ರಾವ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಈ ಬಗ್ಗೆ ಹೆಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಡಿಯೋ: ಬ್ಯಾರಿಕೇಡ್ ಅಡ್ಡವಿರಿಸಿದ್ರೂ ನಾಲ್ವರು ಪೊಲೀಸರ ಮೇಲೆ ಕಾರು ಚಲಾಯಿಸಿಯೇ ಬಿಟ್ಟ!

  • ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ – 12 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ – 12 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

    ಬೆಂಗಳೂರು: ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ 12 ಜನ ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಯಲ್ಲಿ ನಡೆದಿದೆ.

    ಹೊಸಕೋಟೆ ಫ್ಲೈಓವರ್ ಮೇಲೆ ಗೂಡ್ಸ್ ಲಾರಿ ಕೆಟ್ಟು ನಿಂತಿದ್ದಾಗ ಆಂಧ್ರದ ಪಲಮನೇರುನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕ ಸೇರಿ 12 ಪ್ರಯಾಣಿಕರಿಗೆ ಗಾಯಗಳಾಗಿದೆ.

    ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಹೊಸಕೋಟೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯ ಕಾರಣ ಎಂದು ಹೇಳಲಾಗಿದೆ. ಈ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.