Tag: ಡಿಕ್ಕಿ

  • ಊಟ ಮುಗಿಸಿ ಕಾಲೇಜು ಕಡೆ ಹೋಗುವಾಗ ಸ್ಕೂಟಿಗೆ ಕಾರ್ ಡಿಕ್ಕಿ- ವ್ಯಕ್ತಿ ಸಾವು

    ಊಟ ಮುಗಿಸಿ ಕಾಲೇಜು ಕಡೆ ಹೋಗುವಾಗ ಸ್ಕೂಟಿಗೆ ಕಾರ್ ಡಿಕ್ಕಿ- ವ್ಯಕ್ತಿ ಸಾವು

    ರಾಮನಗರ: ಸ್ಕೂಟಿಗೆ ಇನ್ನೋವಾ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು-ಮೈಸೂರು ಹೆದ್ದಾರಿಯ ಚನ್ನಪಟ್ಟಣದ ಮುದುಗೆರೆ ಸಮೀಪದಲ್ಲಿ ನಡೆದಿದೆ.

    ಬೆಂಗಳೂರಿನ ಜಯನಗರ ನಿವಾಸಿ ಮಂಜುನಾಥ್ ಮೃತ ದುರ್ದೈವಿ. ಚನ್ನಪಟ್ಟಣ ತಾಲೂಕಿನ ಸಂಪೂರ್ಣ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪೇಂಟಿಂಗ್ ಕೆಲಸ ಮಾಡ್ತಿದ್ದ ಮಂಜುನಾಥ್ ಊಟಕ್ಕೆಂದು ಮುದುಗೆರೆ ಗೇಟ್‍ಗೆ ತನ್ನ ಸ್ನೇಹಿತನ ಜೊತೆ ಬಂದಿದ್ದರು.

    ಊಟ ಮುಗಿಸಿ ಮತ್ತೆ ಕಾಲೇಜು ಕಡೆಗೆ ತೆರಳಲು ರಸ್ತೆ ದಾಟಲು ಮುಂದಾದ ವೇಳೆ ವೇಗವಾಗಿ ಬಂದ ಇನ್ನೋವಾ ಕಾರ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅಲ್ಲದೆ ಡಿಕ್ಕಿ ಹೊಡೆದ ನಂತರ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರ್ ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸದ್ಯ ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆ ಸಂಬಂಧ ಚನ್ನಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ಟ್ರಕ್, ಬೊಲೆರೋ ಮುಖಾಮುಖಿ ಡಿಕ್ಕಿ- ಐವರ ಸಾವು, ಇಬ್ಬರು ಗಂಭೀರ!

    ಟ್ರಕ್, ಬೊಲೆರೋ ಮುಖಾಮುಖಿ ಡಿಕ್ಕಿ- ಐವರ ಸಾವು, ಇಬ್ಬರು ಗಂಭೀರ!

    ಚಿಕ್ಕೋಡಿ: ಟ್ರಕ್ ಹಾಗೂ ಬೊಲೆರೋ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಐದು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.

    ಗೋಕಾಕ ತಾಲೂಕಿನ ಘಟಪ್ರಭಾದಿಂದ ತರಕಾರಿ ಹೊತ್ತು ಕೊಲ್ಹಾಪುರ ಕಡೆಗೆ ತೆರಳುತ್ತಿದ್ದ ಬೊಲೆರೋ ವಾಹನ, ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ವಿರುದ್ಧ ದಿಕ್ಕಿಗೆ ಹೋಗಿ  ಕೊಲ್ಹಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಈಸರ್ ಮಿನಿ ಟ್ರಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

    ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬೊಲೆರೋ ವಾಹನದಲ್ಲಿದ್ದ ನದೀಮ್, ರಾಜು ಅಹಮ್ಮದ್, ಶಬ್ಬೀರ ಸಯ್ಯದ್ ಹಾಗೂ ಲಾರಿಯಲ್ಲಿದ್ದ ಚಾಲಕ ರಮೇಶ್ ಸ್ಥಳದಲ್ಲಿಯೇ ಸಾವನ್ನಪಿದ್ದಾರೆ.

    ಇನ್ನೂ ಲಾರಿ ಕ್ಲೀನರ್ ಆನಂದ್ ಕೊಲ್ಹಾಪುರ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರು 30 ರಿಂದ 40 ವಯಸ್ಸಿನವರಾಗಿದ್ದಾರೆ. ಘಟನೆಯಲ್ಲಿ ಸಾಹೀಮ್ ಹಾಗೂ ಮತ್ತೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಮಹಾರಾಷ್ಟ್ರದ ಕೊಲ್ಹಾಪುರ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಸದ್ಯ ಸ್ಥಳಕ್ಕೆ ನಿಪ್ಪಾಣಿ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮರಕ್ಕೆ ಡಿಕ್ಕಿಯಾದ KSRTC ಬಸ್- ಇಬ್ಬರ ದುರ್ಮರಣ

    ಮರಕ್ಕೆ ಡಿಕ್ಕಿಯಾದ KSRTC ಬಸ್- ಇಬ್ಬರ ದುರ್ಮರಣ

    ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‍ಆರ್ ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ ದಾವಣಗೆರೆಯ ಹೊನ್ನಾಳಿ ತಾಲೂಕಿನ ಗೋವಿನಕೋವಿ ಗ್ರಾಮದ ಬಳಿ ನಡೆದಿದೆ.

    ಘಟನೆಯಿಂದ ಚಾಲಕ ಸೇರಿ ಪ್ರಯಾಣಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗ ಕಡೆಯಿಂದ ಹೊನ್ನಾಳಿಗೆ ಕೆಎಸ್‍ಆರ್‍ಟಿಸಿ ಬಸ್ ಹೋಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್, ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ.

    ರೀ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರಿಗೆ ಬೈಕ್ ಡಿಕ್ಕಿ- ತಲೆ ಕಾಂಕ್ರೀಟ್ ರಸ್ತೆಗೆ ಅಪ್ಪಳಿಸಿದ್ರೂ ಸವಾರ ಸೇಫ್!

    ಕಾರಿಗೆ ಬೈಕ್ ಡಿಕ್ಕಿ- ತಲೆ ಕಾಂಕ್ರೀಟ್ ರಸ್ತೆಗೆ ಅಪ್ಪಳಿಸಿದ್ರೂ ಸವಾರ ಸೇಫ್!

    ಮಂಗಳೂರು: ವೇಗವಾಗಿ ಧಾವಿಸಿ ಬಂದ ಬೈಕ್ ಸವಾರನೊಬ್ಬ ಕಾರಿಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಘಟನೆ ಮಂಗಳೂರಿನ ಬೋಂದೆಲ್ ಬಳಿಯ ಚರ್ಚ್ ಮುಂಭಾಗದಲ್ಲಿ ಘಟನೆ ನಡೆದಿದೆ.

    ಬೈಕ್ ಸವಾರ ಮಂಗಳೂರಿನ ಬಜಪೆ ಏರ್ ಪೋರ್ಟ್ ಕಡೆಗೆ ವೇಗದಿಂದ ತೆರಳುತ್ತಿದ್ದ ವೇಳೆ ಕಾರಿನ ಚಾಲಕ ಚರ್ಚ್ ಮುಂಭಾಗದಲ್ಲಿ ಯು ಟರ್ನ್ ತೆಗೆದಿದ್ದಾನೆ. ಹೀಗಾಗಿ ವೇಗವಾಗಿ ಬರುತ್ತಿದ್ದ ಬೈಕ್ ನೇರವಾಗಿ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಸವಾರ ಕಾರಿನ ಮೇಲ್ಭಾಗದಿಂದ ಪಲ್ಟಿಯಾಗಿ ರಸ್ತೆಗೆ ಬಿದ್ದಿದ್ದಾನೆ.

    ಆದರೆ ಹೆಲ್ಮೆಟ್ ಹಾಕ್ಕೊಂಡಿದ್ದರಿಂದ ಬೈಕ್ ಸವಾರಿ ಮಾಡುತ್ತಿದ್ದ ಯುವಕನ ತಲೆ ಕಾಂಕ್ರೀಟ್ ರಸ್ತೆಗೆ ಅಪ್ಪಳಿಸಿದ್ದರೂ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾನೆ.

    ಅಪಘಾತದ ದೃಶ್ಯ ಕಟ್ಟಡವೊಂದರ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಿನಿಮೀಯ ರೀತಿಯಲ್ಲಿ ನಡೆದಂತಿದೆ.

  • ವಾಕಿಂಗ್ ಹೋಗಿದ್ದವರು ಹೆಣವಾಗಿ ರಸ್ತೆಯಲ್ಲಿ ಬಿದ್ದರು!

    ವಾಕಿಂಗ್ ಹೋಗಿದ್ದವರು ಹೆಣವಾಗಿ ರಸ್ತೆಯಲ್ಲಿ ಬಿದ್ದರು!

    ಯಾದಗಿರಿ: ಬೆಳಗ್ಗೆ ವಾಕಿಂಗ್ ಹೋಗಿದ್ದ ಇಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ದಾರಿಯಲ್ಲಿಯೇ ಮೃತಪಟ್ಟ ಘಟನೆ ಸುರಪುರ ತಾಲೂಕಿನ ಭಿ.ಗುಡಿ ಬಳಿ ನಡೆದಿದೆ.

    ಗಂಗಾಧರ್‍ಸ್ವಾಮಿ, ಮೋಹನ್(38) ಮೃತ ದುರ್ದೈವಿಗಳು. ಮದುವೆ ನಿಮಿತ್ತ ಗಂಗಾಧರ್ ಸ್ವಾಮಿ ಹಾಗೂ ಮೋಹನ್ ಭಿ.ಗುಡಿ ಗ್ರಾಮಕ್ಕೆ ಬಂದಿದ್ದರು. ಬೆಳಗ್ಗೆ ವಾಕಿಂಗ್ ಅಂತಾ ಹೋಗಿದ್ದಾಗ ಅನಾಹುತ ಸಂಭವಿಸಿದೆ.

    ಡಿಕ್ಕಿ ಹೊಡೆದ ತಕ್ಷಣವೇ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕಿಗೆ ಹಿಂಬದಿಯಿಂದ ಲಾರಿ ಡಿಕ್ಕಿ- ಮಹಿಳೆ ಸ್ಥಳದಲ್ಲೇ ಸಾವು

    ಬೈಕಿಗೆ ಹಿಂಬದಿಯಿಂದ ಲಾರಿ ಡಿಕ್ಕಿ- ಮಹಿಳೆ ಸ್ಥಳದಲ್ಲೇ ಸಾವು

    ಬೆಂಗಳೂರು: ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಬಳಿ ಬೈಕಿಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ.

    ಆಶಾ(24) ಸ್ಥಳದಲ್ಲೇ ಸಾವನ್ನಪ್ಪಿದ ಮಹಿಳೆ. ಆಶಾ ತನ್ನ ಪತಿ ಮಂಜುನಾಥ್ ಜೊತೆ ಬೆಂಗಳೂರಿನಿಂದ ಸ್ವಗ್ರಾಮ ತ್ಯಾಮಗೊಂಡ್ಲುಗೆ ತೆರಳುತ್ತಿದ್ದರು. ಆಗ ಲಾರಿಯೊಂದು ಬೈಕಿನ ಹಿಂಬಂದಿಗೆ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿಯಾದ ರಭಸಕ್ಕೆ ರಸ್ತೆಯ ಬಲಭಾಗಕ್ಕೆ ಬಿದ್ದು ಆಶಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತ ನಡೆಯುತ್ತಿದ್ದಂತೆ ಲಾರಿ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ ಮಂಜುನಾಥ್ ಹಾಗೂ ಆಕೆಯ ಮಕ್ಕಳು ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದಾರೆ.

    ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕಿಗೆ ಟ್ರಕ್ ಡಿಕ್ಕಿ – ಟ್ರಕ್ ಹಿಂಬದಿ ಚಕ್ರಕ್ಕೆ ಸಿಲುಕಿ ಸವಾರ  ದುರ್ಮರಣ

    ಬೈಕಿಗೆ ಟ್ರಕ್ ಡಿಕ್ಕಿ – ಟ್ರಕ್ ಹಿಂಬದಿ ಚಕ್ರಕ್ಕೆ ಸಿಲುಕಿ ಸವಾರ ದುರ್ಮರಣ

    ಬೆಂಗಳೂರು: ಬೈಕಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಟ್ರಕ್‍ನ ಹಿಂಬದಿ ಚಕ್ರಕ್ಕೆ ಸಿಲುಕಿದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ಮಹದೇವಪುರ ಬಳಿಯ ಹೂಡಿಯಲ್ಲಿ ನಡೆದಿದೆ.

    ರಮೀಜ್ ಮೃತ ಬೈಕ್ ಸವಾರ. ರಮೀಜ್ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಟ್ರಕ್ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಘಟನೆ ನಡೆದಿದ್ದು ಹೇಗೆ?
    ಟ್ರಕ್ ಚಾಲಕ ವೇಗವಾಗಿ ಬಂದು ರಮೀಜ್ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ರಮೀಜ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ ಟ್ರಕ್ ಹಿಂಬದಿಯ ಎಡಗಡೆಯ ಚಕ್ರಕ್ಕೆ ಸಿಲುಕಿದ್ದಾನೆ. ಆದರೆ ಬೈಕ್ ಮಾತ್ರ ರಸ್ತೆಯ ಬದಿಗೆ ಬಿದ್ದಿದೆ. ಹೀಗಾಗಿ ಚಕ್ರಕ್ಕೆ ಸಿಲುಕಿದ ಮೃತ ದೇಹವನ್ನು ಸುಮಾರು 50 ಮೀ. ದೂರವರೆಗೆ ಟ್ರಕ್ ಎಳೆದುಕೊಂಡು ಹೋಗಿದೆ. ದೇಹ ಸಂಪೂರ್ಣವಾಗಿ ಗುರುತು ಸಿಗದಂತಾಗಿದೆ.

    ಈ ಕುರಿತು ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

    ಬಳ್ಳಾರಿ: 2 ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕೊಟ್ಟೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಸಾಸಲವಾಡದ ಶಶಿಧರ್(30) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಇನ್ನೂ ಕೊಟ್ಟೂರು ತಾಲೂಕಿನ ಲೊಟ್ಟನಕೆರೆ ನಿವಾಸಿಗಳಾದ ನಾಗರಾಜ್ (22) ಎಂಬವರ ಕಾಲು ಮುರಿದಿದ್ದು, ಹಿಂಬದಿ ಸವಾರ ಮೂಗಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ಮಧ್ಯದಲ್ಲಿಯೇ ಬಿದ್ದಿದ್ದ ಅವರನ್ನು ಸ್ಥಳೀಯ ನಿವಾಸಿಗಳು 108 ಅಂಬುಲೆನ್ಸ್ ಗೆ ಕರೆ ಮಾಡಿ ದಾವಣಗೆರೆ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಪಟ್ಟಣದ ಹೊರವಲಯ ಮುರುಳ ಸಿದ್ಧೇಶ್ವರ ಕಲ್ಯಾಣ ಮಂಟಪದ ಸಮೀಪದಲ್ಲಿ ಅಪಘಾತ ನಡೆದಿದ್ದು, ಬೈಕ್ ಛಿದ್ರ ಛಿದ್ರವಾಗಿದ್ದು, ಬಿಡಿ ಭಾಗಗಳು ರಸ್ತೆ ತುಂಬ ಬಿದ್ದಿವೆ. ಈ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ವಿಫ್ಟ್ ಕಾರಿಗೆ ಅಪರಿಚಿತ ವಾಹನ ಡಿಕ್ಕಿ- ಸ್ಥಳದಲ್ಲೇ ಚಾಲಕ ದುರ್ಮರಣ

    ಸ್ವಿಫ್ಟ್ ಕಾರಿಗೆ ಅಪರಿಚಿತ ವಾಹನ ಡಿಕ್ಕಿ- ಸ್ಥಳದಲ್ಲೇ ಚಾಲಕ ದುರ್ಮರಣ

    ಕಲಬುರಗಿ: ಸ್ವಿಫ್ಟ್ ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ ತಾಲೂಕಿನ ಫರಹತ್ತಬಾದ್ ಬಳಿ ನಡೆದಿದೆ.

    32 ವರ್ಷದ ಓಂಕಾರ್ ಪವಾರ್ ಮೃತ ಚಾಲಕ. ಸ್ವಿಫ್ಟ್ ಕಾರ್ ತಡರಾತ್ರಿ ಯಾದಗಿರಿ ಜಿಲ್ಲೆಯ ಶಹಾಪುರಕ್ಕೆ ಹೋಗುತ್ತಿತ್ತು. ಅಪರಿಚಿತ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಸ್ವಿಫ್ಟ್ ಕಾರು ನುಜ್ಜುಗುಜ್ಜಾಗಿದೆ.

    ಸದ್ಯ ಸ್ಥಳಕ್ಕೆ ಫರಹತ್ತಬಾದ್ ಪಿಎಸ್‍ಐ ವಾಹಿದ್ ಕೋತ್ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

     

  • ಬೈಕಿಗೆ ಕಾರ್ ಡಿಕ್ಕಿ- ಮಗಳ ವರ್ಗಾವಣೆ ಪತ್ರ ತರಲು ಹೋದ ವ್ಯಕ್ತಿ ಸ್ಥಳದಲ್ಲೇ ಸಾವು

    ಬೈಕಿಗೆ ಕಾರ್ ಡಿಕ್ಕಿ- ಮಗಳ ವರ್ಗಾವಣೆ ಪತ್ರ ತರಲು ಹೋದ ವ್ಯಕ್ತಿ ಸ್ಥಳದಲ್ಲೇ ಸಾವು

    ಹಾಸನ: ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಹೊರವಲಯದ ಕೆಂಚಟ್ಟಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ.

    ಧರ್ಮಪ್ರಕಾಶ್ (55) ಮೃತ ದುರ್ದೈವಿ ಸವಾರ. ಧರ್ಮಪ್ರಕಾಶ್ ಅವರು ಮಗಳ ವರ್ಗಾವಣೆ ಪತ್ರ ತರಲೆಂದು ಎಚ್.ಕೆ.ಎಸ್ ಕಾಲೇಜಿಗೆ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ತಂದೆ ಜೊತೆಗೆ ತೆರಳಿದ್ದ ಪುತ್ರಿ ಪ್ರಿಯಾಂಕ ಅಪಾಯದಿಂದ ಪಾರಾಗಿದ್ದಾರೆ.

    ಶಾಲೆ ಕಡೆಯಿಂದ ಪ್ರಮುಖ ರಸ್ತೆಗೆ ಬರುವ ವೇಳೆ ಬೆಂಗಳೂರು ಕಡೆಯಿಂದ ಬಂದ ಕಾರು, ಬೈಕ್ ಗೆ ಡಿಕ್ಕಿ ಹೊಡೆದಿದೆ.

    ಹಾಸನ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.