Tag: ಡಿಕ್ಕಿ

  • ಪಾದಚಾರಿಗೆ ಡಿಕ್ಕಿ ಹೊಡೆದು 10 ಅಡಿ ಎತ್ತರಕ್ಕೆ ಹಾರಿ ಬಿತ್ತು ಐ 20 ಕಾರು!

    ಪಾದಚಾರಿಗೆ ಡಿಕ್ಕಿ ಹೊಡೆದು 10 ಅಡಿ ಎತ್ತರಕ್ಕೆ ಹಾರಿ ಬಿತ್ತು ಐ 20 ಕಾರು!

    ಬೆಂಗಳೂರು: ಬಾಡಿಗೆಗೆ ಪಡೆದಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯವಾದ ಘಟನೆ ನೆಲಮಂಗಲದಲ್ಲಿ ನಡೆದಿದೆ.

    ಪಾದಚಾರಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ವೇಗವಾಗಿ ಬರುತ್ತಿದ್ದ ಐ 20 ಕಾರು ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು 10 ಅಡಿ ಮೇಲಕ್ಕೆ ಹಾರಿ ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದೆ.

    ಪಾದಚಾರಿ ಸ್ಥಿತಿ ಚಿಂತಾಜನಕವಾಗಿದ್ದು, ಕಾರಿನಲ್ಲಿದ್ದ ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯವಾಗಿದೆ. ಘಟನೆಯ ನಂತರ ಕಾರು ಚಾಲಕನಿಗೆ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಇತ್ತ ತೀವ್ರ ಪೆಟ್ಟಾಗಿ, ರಕ್ತ ಸ್ರಾವದಿಂದ ನರಳಾಡುತ್ತಿದ್ದ ಪಾದಚಾರಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸದೇ ಮಾನವೀಯತೆ ಮರೆತು, ಮೊಬೈಲ್‍ನಲ್ಲಿ ಘಟನೆ ಚಿತ್ರೀಕರಿಸಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿಎಂಟಿಸಿಗೆ ಶಾಲಾ ವಾಹನ ಡಿಕ್ಕಿ -ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಕ್ಕಳು ಪಾರು

    ಬಿಎಂಟಿಸಿಗೆ ಶಾಲಾ ವಾಹನ ಡಿಕ್ಕಿ -ಅದೃಷ್ಟವಶಾತ್ ಪ್ರಾಣಾಪಾಯದಿಂದ ಮಕ್ಕಳು ಪಾರು

    ಬೆಂಗಳೂರು: ಶಾಲಾ ವಾಹನವೊಂದು ಬಿಎಂಟಿಸಿ ಬಸ್ ಗೆ ಡಿಕ್ಕಿ ಹೊಡೆದ ಘಟನೆ ಇಂದು ಬೆಂಗಳೂರಿನ ಯಲಹಂಕದ ಶೇಷಾದ್ರಿಪುರಂ ಕಾಲೇಜು ಬಳಿ ನಡೆದಿದೆ.

    ಆವಲಹಳ್ಳಿಯ ಪ್ರೆಸಿಡೆನ್ಸಿ ಶಾಲೆಯ ಬಸ್, ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿಗೆ ಗುದ್ದಿದೆ. ಘಟನೆಯಿಂದಾಗಿ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಘಟನೆ ಸಂಭವಿಸಿದೆ ವೇಳೆ ಬಸ್ಸಿನಲ್ಲಿ ಒಂದಿಬ್ಬರು ವಿದ್ಯಾರ್ಥಿಗಳು ಮಾತ್ರ ಇದ್ದು, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರಲೆಂದು ಬಸ್ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

    ಘಟನೆಯಿಂದ ಬಸ್ ಚಾಲಕ ಮಂಜುನಾಥ್ ಕಾಲು ಮುರಿತಕ್ಕೊಳಗಾಗಿದ್ದು, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳು ಚಾಲಕನನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ಳಂಬೆಳಗ್ಗೆ ಕುಡಿದು ಶಾಲಾ ವಾಹನ ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

    ಈ ಸಂಬಂಧ ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಟೋಲ್ ಗೇಟ್ ಸಮೀಪದಲ್ಲಿಯೇ ಸ್ಪೀಡ್ ಬ್ರೇಕರ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಟೋಲ್ ಗೇಟ್ ಸಮೀಪದಲ್ಲಿಯೇ ಸ್ಪೀಡ್ ಬ್ರೇಕರ್

    ಬೆಂಗಳೂರು: ಕಳೆದ ವಾರವಷ್ಟೇ ಕಾರ್ ಚಾಲಕನೊಬ್ಬ ಟೋಲ್ ಶುಲ್ಕ ಪಾವತಿ ಮಾಡದೇ ಪರಾರಿಯಾಗಲು ಹೋಗಿ, ಸಿಬ್ಬಂದಿಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದ ಕುರಿತು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಬಿತ್ತರವಾದ ಬಳಿಕ ಎಚ್ಚೆತ್ತುಕೊಂಡ ಟೋಲ್ ಆಡಳಿತ ಮಂಡಳಿ, ಟೋಲ್ ಗೇಟ್ ಸಮೀಪದಲ್ಲಿಯೇ ಸ್ಪೀಡ್ ಬ್ರೇಕರ್ ಹಾಕಿದ್ದಾರೆ.

    ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನವಯುಗ ಟೋಲ್‍ನಲ್ಲಿ ಘಟನೆ ನಡೆದಿದ್ದು, ತುಮಕೂರು ಕಡೆಯಿಂದ ಬಂದ ಸ್ವಿಫ್ಟ್ ಕಾರಿನ ಚಾಲಕ ಕೇವಲ 20 ರೂ. ಟೋಲ್ ಶುಲ್ಕ ಪಾವತಿ ಮಾಡದೇ ಪರಾರಿಯಾಗಲು ಯತ್ನಿಸಿದ್ದ. ಕಾರನ್ನು ತಡೆಯಲು ಹೋಗಿದ್ದ ಸಿಬ್ಬಂದಿ ವೀರೇಂದ್ರಗೆ ಚಾಲಕ  ಡಿಕ್ಕಿಹೊಡೆದು ಕಾರನ್ನು ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡು ಹೋಗಿದ್ದ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೀರೇಂದ್ರ ಸಹಾಯಕ್ಕೆ ಟೋಲ್ ಆಡಳಿತ ಮಂಡಳಿ ಮುಂದಾಗಿರಲಿಲ್ಲ. ಸಂಸ್ಥೆಯ ಅಮಾನವೀಯ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವೀರೇಂದ್ರ ತಮ್ಮ ಗ್ರಾಮಕ್ಕೆ ಮರಳಿದ್ದರು.

    ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಟೋಲ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಎಚ್ಚೆತ್ತು ಕೊಂಡಿದ್ದಾರೆ. ಇತ್ತ ಅಧಿಕಾರಿಗಳು ಟೋಲ್ ಸಮೀಪದಲ್ಲಿ ಸ್ಪೀಡ್ ಬ್ರೇಕರ್ ಹಾಕಿದರೆ, ಮತ್ತೊಂದು ಕಡೆ ಸಿಬ್ಬಂದಿ ವೀರೇಂದ್ರಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುವ ನಿರ್ಧಾರ ಕೈಗೊಂಡಿದ್ದಾರೆ.

  • ಎರಡು ಬೈಕ್‍ಗಳ ನಡುವೆ ಡಿಕ್ಕಿ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಎರಡು ಬೈಕ್‍ಗಳ ನಡುವೆ ಡಿಕ್ಕಿ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಕಾರವಾರ: ಎರಡು ಬೈಕ್‍ಗಳ ನಡುವೆ ಡಿಕ್ಕಿಯಾಗಿರುವ ಘಟನೆ ನಗರದ ಗ್ಯಾಸ್ ಕಾಲೇಜಿನ ಬಳಿ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಓರ್ವ ಸವಾರನಿಗೆ ಗಾಯಗಳಾಗಿದ್ರೆ, ಮತ್ತೋರ್ವ ಘಟನೆಯ ಬಳಿಕ ಎಸ್ಕೇಪ್ ಆಗಿದ್ದಾನೆ.

    60 ವರ್ಷದ ಗುರುದತ್ ನಾಯ್ಕ್ ಗಾಯಗೊಂಡ ಬೈಕ್ ಸವಾರ. ಗುರುದತ್ ತಮ್ಮ ಬೈಕಿನಲ್ಲಿ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದರು. ಈ ವೇಳೆ ತಮ್ಮ ಬಲಭಾಗದಲ್ಲಿ ಬರುತ್ತಿರುವ ವಾಹನಗಳನ್ನು ಗಮನಿಸದೇ ರಸ್ತೆ ದಾಟುತ್ತಿದ್ದರು. ಇತ್ತ ಬಲಭಾಗದಿಂದ ಬಂದ ಬೈಕ್ ನೇರವಾಗಿ ಗುರುದತ್ತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಓರ್ವ ರಸ್ತೆಯ ಒಂದು ಬದಿಗೆ ಬಂದು ಬಿದ್ದರೂ, ಅದೃಷ್ಟಾವಶ ಬದುಕಿಳಿದಿದ್ದಾರೆ. ಗುರುದತ್ ಪ್ರಜ್ಞೆ ಕಳೆದುಕೊಂಡಿದ್ದರು.

    ರಸ್ತೆಯ ಒಂದು ಬದಿಗೆ ಬಿದ್ದಿದ್ದ ಬೈಕ್ ಸವಾರ ಬಂದ ಗುರುದತ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾನೆ. ಅಪಘಾತದ ಬಳಿಕ ಜನರು ಸೇರುತ್ತಿದ್ದಂತೆ ಬೈಕ್ ಸವಾರ ಪರಾರಿಯಾಗಿದ್ದಾನೆ. ಸದ್ಯ ಈ ಘಟನೆ ಸಂಬಂಧ ಕಾರವಾರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶುಲ್ಕ ಪಾವತಿಸದೆ ಪರಾರಿಯಾಗಲು ಹೋಗಿ ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆದ ಕಾರು ಚಾಲಕ

    ಶುಲ್ಕ ಪಾವತಿಸದೆ ಪರಾರಿಯಾಗಲು ಹೋಗಿ ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆದ ಕಾರು ಚಾಲಕ

    ಬೆಂಗಳೂರು: ತುಮಕೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನವಯುಗ ಟೋಲ್ ನಲ್ಲಿ ಶುಲ್ಕ ಪಾವತಿ ಮಾಡದೆ ಪರಾರಿಯಾಗುತ್ತಿದ್ದ ಕಾರನ್ನು ತಡೆಯಲು ಹೋಗಿದ್ದ ಸಿಬ್ಬಂದಿಗೆ ಚಾಲಕನೊಬ್ಬ ಗುದ್ದಿ ಪರಾರಿಯಾಗಿದ್ದಾನೆ.

    ಆಂಧ್ರ ಮೂಲದ ವೀರೇಂದ್ರ ಗಾಯಗೊಂಡ ಟೋಲ್ ಸಿಬ್ಬಂದಿ. ಎಂದಿನಂತೆ ಕಳೆದ ಭಾನುವಾರ ಕೆಲಸಕ್ಕೆ ವೀರೇಂದ್ರ ಹಾಜರಾಗಿದ್ದರು. ತುಮಕೂರು ಕಡೆಯಿಂದ ಬಂದ ಸ್ವಿಫ್ಟ್ ಕಾರಿನ ಚಾಲಕ ಕೇವಲ 20 ರೂ. ಟೋಲ್ ಶುಲ್ಕ ಪಾವತಿ ಮಾಡದೇ ಪರಾರಿಯಾಗಲು ಯತ್ನಿಸಿದ್ದನು. ಕಾರನ್ನು ತಡೆಲು ಎಡಬದಿಯಿಂದ ಬಂದ ವೀರೇಂದ್ರನಿಗೆ ಗುದ್ದಿದ್ದಾನೆ. ವೇಗವಾಗಿದ್ದ ಕಾರಿನಿಂದ ಕೆಳಗೆ ಬಿದ್ದು, ವೀರೇಂದ್ರ ಗಂಭೀರವಾಗಿ ಗಾಯಗೊಂದಿದ್ದರು. ಆದರೆ ಚಾಲಕ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

    ಇತ್ತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೀರೇಂದ್ರ ಸಹಾಯಕ್ಕೆ ಟೋಲ್ ಆಡಳಿತ ಮಂಡಳಿ ಮುಂದಾಗಿಲ್ಲ. ಸಂಸ್ಥೆಯ ಅಮಾನವೀಯ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವೀರೇಂದ್ರ ತಮ್ಮ ಗ್ರಾಮಕ್ಕೆ ಮರಳಿದ್ದಾರಂತೆ. ದಿನಕ್ಕೆ ಲಕ್ಷ ಲಕ್ಷ ರೂ. ಸಂಪಾದನೆ ಮಾಡುವ ಟೋಲ್ ಸಂಸ್ಥೆ ಆತನ ನೆರವಿಗೆ ಬಂದಿಲ್ಲವೆಂದು ಟೋಲ್ ಗೇಟ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

    ಇಷ್ಟೆಲ್ಲ ಅವಾಂತರ ನಡೆದರೂ ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಇದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

  • ಖಾಸಗಿ ಬಸ್, ಬೈಕ್ ಮುಖಾಮುಖಿ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

    ಖಾಸಗಿ ಬಸ್, ಬೈಕ್ ಮುಖಾಮುಖಿ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

    ಚಾಮರಾಜನಗರ: ಖಾಸಗಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತುರು ಬಳಿ ನಡೆದಿದೆ.

    ಕುಂತುರಿನ ರಸ್ತೆಯ ಕ್ರಾಸ್ ಬಳಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಇದರಿಂದ ಬೈಕ್ ಸವಾರ ಬಸ್ ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಹಿಂಬದಿ ಸವಾರರಿಗೆ ಗಂಭೀರ ಗಾಯಗಳಾಗಿವೆ. ಕೆಆರ್ ನಗರದ ಮೂವರು ಒಂದೇ ಬೈಕ್ ನಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಪ್ರಯಾಣ ಮಾಡುತ್ತಿದ್ದು, ಈ ವೇಳೆ ಅಪಘಾತ ಸಂಭವಿಸಿದೆ.

    ಸದ್ಯ ಈ ಬಗ್ಗೆ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಡಿವೈಡರ್ ಗೆ ಕಾರು ಡಿಕ್ಕಿ- ಆರ್ ಟಿಓ ಇನ್ಸ್ ಪೆಕ್ಟರ್ ಸ್ಥಳದಲ್ಲೇ ದುರ್ಮರಣ

    ಡಿವೈಡರ್ ಗೆ ಕಾರು ಡಿಕ್ಕಿ- ಆರ್ ಟಿಓ ಇನ್ಸ್ ಪೆಕ್ಟರ್ ಸ್ಥಳದಲ್ಲೇ ದುರ್ಮರಣ

    ತುಮಕೂರು: ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಆರ್ ಟಿಓ ಇನ್ಸ್ ಪೆಕ್ಟರ್ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಬಳಿ ನಡೆದಿದೆ.

    ಚಿತ್ರದುರ್ಗದ ಆರ್ ಟಿಓ ಇನ್ಸ್ ಪೆಕ್ಟರ್ ದೇವರಾಜು(50) ಮೃತ ದುರ್ದೈವಿ. ಮುಂಜಾನೆ ಶಿರಾಗೆ ಆಗಮಿಸಿ ವಾಪಸ್ ತೆರಳುವಾಗ ಈ ಘಟನೆ ಸಂಭವಿಸಿದೆ. ಘಟನೆಯಿಂದಾಗಿ ಕಾರು ಚಾಲಕ ಅಶೋಕನಿಗೆ ಗಂಭೀರ ಗಾಯಗಳಾಗಿದ್ದು, ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಬಗ್ಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಲಾರಿ, ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲಿಯೇ ಐವರ ದುರ್ಮರಣ

    ಲಾರಿ, ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲಿಯೇ ಐವರ ದುರ್ಮರಣ

    ತುಮಕೂರು: ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲಿ ಐವರು ಮೃತಪಟ್ಟ ಘಟನೆ ಜಿಲ್ಲೆಯ ಮಧುಗಿರಿ ಸಮೀಪದ ಕೆರೆಗಳ ಪಾಳ್ಯದಲ್ಲಿ ಘಟನೆ ನಡೆದಿದೆ.

    ಬೆಂಗಳೂರಿನ ಬೈಯಪ್ಪನಹಳ್ಳಿ ನಿವಾಸಿಗಳಾದ ಮುರುಳಿ (24), ಮಂಜುನಾಥ್ (20), ರಾಮ್ ಮೋಹನ್ (22), ಶಿವಪ್ರಸಾದ್ (23) ಹಾಗೂ ದಿನೇಶ್ (26) ಮೃತ ದುರ್ದೈವಿಗಳು.

    ಮೃತರು ಪಾವಗಡದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು, ಕಾರಿನಲ್ಲಿ ಮರಳುತ್ತಿದ್ದರು. ಈ ವೇಳೆ ಮಧುಗಿರಿ ಸಮೀಪದ ಕೆರೆಗಳ ಪಾಳ್ಯದಲ್ಲಿ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಲಾರಿ ಹಾಗೂ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಆಗಿದ್ದು, ಸ್ಥಳದಲ್ಲಿಯೇ ಐವರು ಮೃತಪಟ್ಟಿದ್ದಾರೆ.

    ಕಾರಿನ ಮೇಲೆ ಲಾರಿ ಹರಿದ ಪರಿಣಾಮ, ಸಂಪೂರ್ಣವಾಗಿ ಜಖಂಗೊಂಡಿದೆ. ಹೀಗಾಗಿ ಲಾರಿಯಲ್ಲಿದ್ದ ಐವರ ದೇಹಗಳು ಗುರುತು ಸಿಗದಂತಾಗಿವೆ. ಘಟನೆಯು ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ರೈಲು ಡಿಕ್ಕಿ ಹೊಡೆದು ಮೂರು ವರ್ಷದ ಚಿರತೆ ದುರ್ಮರಣ

    ರೈಲು ಡಿಕ್ಕಿ ಹೊಡೆದು ಮೂರು ವರ್ಷದ ಚಿರತೆ ದುರ್ಮರಣ

    ಹಾಸನ: ರೈಲು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಗಂಡು ಚಿರತೆಯೊಂದು ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ಕಡಗರಹಳ್ಳಿ ಸಮೀಪದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರು-ಮಂಗಳೂರು ಮಾರ್ಗದ ರೈಲಿಗೆ ಸಿಲುಕಿ ಚಿರತೆ ಮೃತಪಟ್ಟಿದೆ. ರೈಲ್ವೆ ಹಳಿ ಪರೀಕ್ಷೆ ವೇಳೆ ಚಿರತೆಯ ಮೃತ ದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಚಿರತೆಯು ಮೂರು ವರ್ಷದ್ದಾಗಿದೆ ಎಂದು ತಿಳಿಸಿದ್ದಾರೆ.

    ಜೂನ್ 3 ರಂದು ಶಿರಾಡಿಘಾಟ್‍ನ ಎಡಕುಮರಿ ಸಮೀಪದಲ್ಲಿ ಮಂಗಳೂರು-ಬೆಂಗಳೂರು ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡಾನೆ ಮತ್ತು ಮರಿ ಆನೆ ಮೃತಪಟ್ಟಿದ್ದವು. ರೈಲು ಮಾರ್ಗವು ಕಾಡಿನ ಮಧ್ಯದಲ್ಲಿಯೇ ಹಾದು ಹೋಗಿದ್ದು, ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ಮಧ್ಯದಲ್ಲಿರುವ ಎಡಕುಮರಿ ಸಮೀಪದಲ್ಲಿ ಈ ಘಟನೆ ನಡೆದಿತ್ತು. ತಾಯಿ ಆನೆ ಹಾಗೂ ಅದರ ಮರಿ ರೈಲು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ, ಸ್ಥಳದಲ್ಲಿಯೇ ಮೃತಪಟ್ಟಿದ್ದವು.

  • ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ- ಮೂವರಿಗೆ ಗಾಯ

    ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ- ಮೂವರಿಗೆ ಗಾಯ

    ದಾವಣಗೆರೆ: ಎರಡು ಲಾರಿಗಳ ನಡುವೆ ಡಿಕ್ಕಿಯಾಗಿ ಮೂವರು ಗಾಯಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 13ರ ಬಂಗಾರಕ್ಕನ ಗುಡ್ಡ ಬಳಿ ನಡೆದಿದೆ.

    ಹೊಸಪೇಟೆಯಿಂದ ಬರುತ್ತಿದ್ದ ರಾಜಸ್ಥಾನದ ಲಾರಿಗೂ ಹಾಗೂ ಚಿತ್ರದುರ್ಗದ ಕಡೆಯಿಂದ ಹೋಗುತ್ತಿದ್ದ ಮಹಾರಾಷ್ಟ್ರ ಲಾರಿಗಳು ಮುಖಾಮುಖಿ ಅಪಘಾತಕ್ಕೀಡಾಗಿವೆ. ಲಾರಿಯಲ್ಲಿ ಸಿಲುಕಿಕೊಂಡಿದ್ದ ರಾಜಸ್ಥಾನದ ಚಾಲಕ ಕರಣ್ ಸಿಂಗ್ ಹೊರತೆಗೆಯಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಂದ ಹರ ಸಾಹಸ ಪಡುವಂತಾಯಿತು.

    ಲಾರಿಯಲ್ಲಿ ಗಾಯಗೊಂಡಿದ್ದ ಕರಣ್ ಸಿಂಗ್, ಭಕ್ತರ್ ಸಿಂಗ್ ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಮೂವರು ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ರಾಜಸ್ಥಾನದ ಲಾರಿ ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಮುಖಾಮುಖಿ ಡಿಕ್ಕಿಯಾಗಿವೆ ಎನ್ನಲಾಗಿದೆ.

    ಇನ್ನೂ ಜಗಳೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.