Tag: ಡಿಕ್ಕಿ

  • ಗಿರ್ ಅರಣ್ಯದಲ್ಲಿ ಮತ್ತೆ ಮೂರು ಸಿಂಹಗಳ ಸಾವು

    ಗಿರ್ ಅರಣ್ಯದಲ್ಲಿ ಮತ್ತೆ ಮೂರು ಸಿಂಹಗಳ ಸಾವು

    ಸಾಂದರ್ಭಿಕ ಚಿತ್ರ

    ಅಹಮದಾಬಾದ್: ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯಲ್ಲಿರುವ ಗಿರ್ ಅರಣ್ಯಪ್ರದೇಶದಲ್ಲಿ ರೈಲು ಡಿಕ್ಕಿ ಹೊಡೆದು ಮೂರು ಸಿಂಹಗಳು ಸಾವನ್ನಪ್ಪಿವೆ.

    ಸಂರಕ್ಷಿತ ಸಿಂಹಗಳ ಅರಣ್ಯ ಪ್ರದೇಶವಾಗಿರುವ ಗಿರ್ ಅರಣ್ಯ ಪ್ರದೇಶದಲ್ಲಿ ಮತ್ತೆ ಮೂರು ಸಿಂಹಗಳು ಸಾವನ್ನಪ್ಪಿವೆ. ಮಂಗಳವಾರ ಸಾವರ್ ಕುಡ್ಲ ತಾಲೂಕಿನ ಬೋರಾಲ ಗ್ರಾಮದ ಬಳಿ ರೈಲ್ವೆ ಹಳಿ ಮೇಲೆ ಆರು ಸಿಂಹಗಳು ಸಂಚರಿಸುತ್ತಿದ್ದವು. ಈ ವೇಳೆ ಏಕಾಏಕಿ ಬಂದ ರೈಲು ಸಿಂಹಗಳ ಗುಂಪಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂರು ಸಿಂಹಗಳು ಸ್ಥಳದಲ್ಲೇ ಮೃತಪಟ್ಟರೇ, ಮತ್ತೆ ಮೂರು ಸಿಂಹಗಳು ತಪ್ಪಿಸಿಕೊಂಡಿವೆ. ಸಾವನ್ನಪ್ಪಿರುವ ಸಿಂಹಗಳ ಪೈಕಿ ಎರಡು ಗಂಡು ಹಾಗೂ ಒಂದು ಹೆಣ್ಣು ಸಿಂಹವೆಂದು ತಿಳಿದು ಬಂದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಅರಣ್ಯಾಧಿಕಾರಿ ದುಶ್ಯಂತ್ ವಸವದ್, ಮಂಗಳವಾರ ಬೋಟಡ್‍ನಿಂದ ಪಿಪವಾವ್ ಕಡೆಗೆ ಹೊರಟಿದ್ದ ಗೂಡ್ಸ್ ಟ್ರೈನ್ ಗಿರ್ ಅರಣ್ಯಪ್ರದೇಶದಲ್ಲಿ ಸಿಂಹಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂರು ಸಿಂಹಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ರೈಲು ಅತಿ ವೇಗದಲ್ಲಿತ್ತೇ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಅಲ್ಲದೇ ಸಿಂಹಗಳ ಚಲನವಲನ ವೀಕ್ಷಿಸಲು ನೇಮಿಸಿದ್ದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದ್ದರ ಕುರಿತಾಗಿಯೂ ತನಿಖೆ ನಡೆಯುತ್ತಿದೆ. ಒಂದು ವೇಳೆ ಅವರ ತಪ್ಪು ಕಂಡುಬಂದರೇ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಂದು ಹೇಳಿದ್ದಾರೆ.

    ಸಿಂಹಗಳ ವಾಸಸ್ಥಾನವೆಂದೇ ಹೆಸರಾಗಿರುವ ಗಿರ್ ಅರಣ್ಯಪ್ರದೇಶದಲ್ಲಿ ಸೆಪ್ಟಂಬರ್ ತಿಂಗಳಿನಿಂದ ಇದೂವರೆಗೂ 30 ಸಿಂಹಗಳು ಸಾವನ್ನಪ್ಪಿದೆ. ಕೆಲವು ಸಿಂಹಗಳು ಪರಸ್ಪರ ಕಿತ್ತಾಡಿಕೊಂಡು ಸಾವನ್ನಪ್ಪಿದ್ದರೇ, ಇನ್ನೂ ಕೆಲವು ನಿಗೂಢವಾಗಿ ಸಾವನ್ನಪ್ಪಿದ್ದವು. ಈ ಬಗ್ಗೆ ಖುದ್ದು ಗುಜರಾತ್ ಸರ್ಕಾರ ತಲೆಕೆಡಿಸಿಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡಿಕಾ ಕಾರು ಡಿಕ್ಕಿ- 30 ಕುರಿಗಳ ದಾರುಣ ಸಾವು

    ಇಂಡಿಕಾ ಕಾರು ಡಿಕ್ಕಿ- 30 ಕುರಿಗಳ ದಾರುಣ ಸಾವು

    ಬಾಗಲಕೋಟೆ: ಇಂಡಿಕಾ ಕಾರೊಂದು ವೇಗವಾಗಿ ಬಂದು ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 30 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಸಮೀಪ ನಡೆದಿದೆ.

    ಬಾಗಲಕೋಟೆ ಕಡೆಯಿಂದ ವಿಜಯಪುರಕ್ಕೆ ಹೊರಟಿದ್ದ ಇಂಡಿಕಾ ಕಾರೊಂದು, ಬಾಡಗಂಡಿ ಬಳಿ ವೇಗವಾಗಿ ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 30 ಕ್ಕೂ ಹೆಚ್ಚು ಕುರಿಗಳು ಬಲಿಯಾಗಿವೆ. ಕುರಿಗಳು ಯಲ್ಲಪ್ಪ ಲಕ್ಷ್ಮಣ ಕಗಣವರ ಎಂಬವರಿಗೆ ಸೇರಿದ್ದವು ಎಂದು ತಿಳಿದು ಬಂದಿದೆ.

    ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೈಕಿಗೆ ಲಾರಿ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು

    ಬೈಕಿಗೆ ಲಾರಿ ಡಿಕ್ಕಿ- ಸವಾರ ಸ್ಥಳದಲ್ಲೇ ಸಾವು

    ಹಾಸನ: ಬೈಕಿಗೆ ಲಾರಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಕಳೆದ ರಾತ್ರಿ ನಡೆದಿದೆ.

    ಸೋಮಶೇಖರ್(38) ಮೃತ ದುರ್ದೈವಿ. ಸೋಮಶೇಖರ್ ಪಟ್ಟಣದ ಜೆಪಿ ನಗರದ ನಿವಾಸಿಯಾಗಿದ್ದು, ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಜೀಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಸೋಮಶೇಖರ್ ಕೆಲಸ ಮುಗಿಸಿ ಬರುವಾಗ ಈ ಅಪಘಾತ ಸಂಭವಿಸಿದೆ.

    ಸೋಮಶೇಖರ್ ಕರ್ತವ್ಯ ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸೋಮಶೇಖರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳೀಯರು ಲಾರಿಯನ್ನು ಹಿಡಿದು ಬೆನ್ನಟ್ಟಿದ್ದು, ಚಾಲಕ ಪರಾರಿಯಾಗಿದ್ದಾನೆ.

    ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರಿಂದ ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಪೆಟ್ರೋಲ್ ಬಂಕ್ ಬಳಿ ಹಂಪ್ಸ್ ಹಾಕದಿರುವುದೇ ಈ ಅಪಘಾತಕ್ಕೆ ಕಾರಣ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಪ್ರತಿಭಟನೆಯಿಂದಾಗಿ ಕೆಲಕಾಲ ಸಂಚಾರಕ್ಕೆ ಅಡಚಣೆಯಾಯಿತು. ಸದ್ಯ ಈ ಬಗ್ಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗೋವಾದಲ್ಲಿ ಮದ್ವೆ ಕಾರ್ಯ ಮುಗಿಸಿ ವಾಪಸ್ಸಾಗ್ತಿದ್ದವರು ಮಸಣ ಸೇರಿದ್ರು..!

    ಗೋವಾದಲ್ಲಿ ಮದ್ವೆ ಕಾರ್ಯ ಮುಗಿಸಿ ವಾಪಸ್ಸಾಗ್ತಿದ್ದವರು ಮಸಣ ಸೇರಿದ್ರು..!

    ಕಾರವಾರ: ಅತೀ ವೇಗದ ಚಾಲನೆಯಿಂದ ನಿಂತ್ರಣ ತಪ್ಪಿದ ಸ್ಕಾರ್ಪಿಯೋ ವಾಹನವು ಗುಡ್ಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಆರೊಳ್ಳಿ ಕ್ರಾಸ್ ಬಳಿ ನಡೆದಿದೆ.

    ಮೃತ ದುರ್ದೈವಿಗಳನ್ನು ಫಾತಿಮಾ, ರುಕಿಯಾ, ಚಾಬುಸಾಬ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಆನಂದಪುರ ಮೂಲದವರು ಎಂದು ಹೇಳಲಾಗುತ್ತಿದೆ. ಗೋವಾದಲ್ಲಿ ಮದುವೆ ಕಾರ್ಯ ಮುಗಿಸಿ ವಾಪಸ್ಸಾಗುತ್ತಿದ್ದಾಗ ಇಂದು ಬೆಳಗ್ಗಿನ ಜಾವ ಈ ಅಪಘಾತ ಸಂಭವಿಸಿದೆ.

    ಕಾರಿನಲ್ಲಿದ್ದ ಆರು ಜನರ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಹೊನ್ನಾವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ಟ್ರೈನ್ ಡಿಕ್ಕಿ- 10 ಲಕ್ಷ ರೂ. ಮೌಲ್ಯದ 100 ಕುರಿಗಳ ಸಾವು

    ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ಟ್ರೈನ್ ಡಿಕ್ಕಿ- 10 ಲಕ್ಷ ರೂ. ಮೌಲ್ಯದ 100 ಕುರಿಗಳ ಸಾವು

    ಸಾಂದರ್ಭಿಕ ಚಿತ್ರ

    ಕಲಬುರಗಿ: ರೈಲ್ವೇ ಹಳಿ ದಾಟುತ್ತಿದ್ದ ಕುರಿ ಹಿಂಡಿನ ಮೇಲೆ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ಟ್ರೈನ್ ಹರಿದ ಪರಿಣಾಮ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ 100 ಕುರಿಗಳು ಸಾವಿಗೀಡಾದ ಘಟನೆ ಜಿಲ್ಲೆಯ ಸೇಡಂ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಕುರಿಗಾಹಿ ಅಂಬಲಪ್ಪ ಎಂಬವರಿಗೆ ಸೇರಿದ್ದ 100 ಕುರಿಗಳು ಸಾವನ್ನಪ್ಪಿವೆ. ಸೇಡಂ ಪಟ್ಟಣದ ಹೊರವಲಯದ ಬಳಿ ಇಂದು ಸಂಜೆ ರೈಲ್ವೇ ಹಳಿ ದಾಟುತ್ತಿದ್ದ ಕುರಿಗಳ ಹಿಂಡಿನ ಮೇಲೆ, ವಿಶಾಖಪಟ್ಟಣಮ್‍ನಿಂದ ಮುಂಬೈಗೆ ತೆರಳುತ್ತಿದ್ದ ಎಲ್‍ಟಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ಟ್ರೈನ್ ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ 100 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

    ವಿಷಯ ತಿಳಿಯುತ್ತಿದ್ದಂತೆ ರೈಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಅಂಬಲಪ್ಪ ಎಂಬವರಿಗೆ ಸೇರಿದ್ದ ಕುರಿ ಹಿಂಡು ಇದಾಗಿದ್ದು, ಸುಮಾರು 10 ಲಕ್ಷ ಮೌಲ್ಯದ 100 ಕುರಿಗಳು ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂಬಂಧ ವಾಡಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾದಚಾರಿಗೆ ಲಾರಿ ಡಿಕ್ಕಿಯಾಗಿದ್ದಕ್ಕೆ ಚಾಲಕನಿಗೆ ಗೂಸಾ

    ಪಾದಚಾರಿಗೆ ಲಾರಿ ಡಿಕ್ಕಿಯಾಗಿದ್ದಕ್ಕೆ ಚಾಲಕನಿಗೆ ಗೂಸಾ

    ಕಾರವಾರ: ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದಿದ್ದಕ್ಕೆ ಲಾರಿ ಚಾಲಕನಿಗೆ ಗೂಸ ಕೊಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ತಮಿಳುನಾಡು ಮೂಲದ ಸೆಲ್ವಂ ಗೂಸ ತಿಂದ ಲಾರಿ ಚಾಲಕ. ಕಾರವಾರದ ಬೈತಕೋಲ್ ಬಂದರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಘಟನೆ ನಡೆದಿದೆ. ಪಾದಚಾರಿ ಬೈತಕೋಲ್‍ನಿಂದ ಕಾರವಾರಕ್ಕೆ ತೆರಳುತ್ತಿದ್ದ ವೇಳೆ ಬೈತಕೋಲ್ ಕ್ರಾಸ್ ನಲ್ಲಿ ತಮಿಳುನಾಡು ನೋಂದಣಿ ಹೊಂದಿದ ಗೂಡ್ಸ್ ಲಾರಿ ತಿರುವು ಪಡೆಯುವಾಗ ಪಕ್ಕದಲ್ಲಿ ನಿಂತಿದ್ದ ಪಾದಚಾರಿಗೆ ತಾಗಿದೆ. ಇದರಿಂದ ಸಿಟ್ಟಿಗೆದ್ದ ಸ್ಥಳಿಯರು ಚಾಲಕನನ್ನು ಹಿಡಿದು ಗೂಸಾ ನೀಡಿದ್ದಾರೆ.

    ಲಾರಿ ಡಿಕ್ಕಿಯಾಗಿ ಪಾದಚಾರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಹೇಳಲಾಗುತ್ತಿದೆ. ಸೆಲ್ವಂ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ಕೋಪಗೊಂಡ ಪಾದಚಾರಿ ಸ್ವೆಲಂಗೆ ಸಖತ್ ಗೂಸ ಕೊಟ್ಟು ಬುದ್ದಿ ಹೇಳಿದ್ದಾರೆ.

    ಸದ್ಯ ಈ ಘಟನೆ ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾಲಕನಿಂದ ಸಡನ್ ಬ್ರೇಕ್- ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ

    ಚಾಲಕನಿಂದ ಸಡನ್ ಬ್ರೇಕ್- ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ

    – ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

    ಬೆಂಗಳೂರು: ಮುಂದೆ ಹೋಗುತ್ತಿದ್ದ ಲಾರಿ ಚಾಲಕ ಸಡನ್ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಸ್ಪೀಡಾಗಿ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಭಾರೀ ಅನಾಹುತ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎರಡೂ ಲಾರಿಯಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರ ತುಮಕೂರು-ಬೆಂಗಳೂರು ರಸ್ತೆಯ ವೃತ್ತವೊಂದರಲ್ಲಿಯೇ ಘಟನೆ ಸಂಭವಿಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು.

    ಎರಡೂ ಲಾರಿಗಳು ಬೆಂಗಳೂರು ಕಡೆಗೆ ಬರತ್ತಿದ್ದು, ವೇಗವಾಗಿದ್ದವು. ಮುಂದಿನ ಲಾರಿ ಚಾಲಕ ಸಡನ್ ಬ್ರೇಕ್ ಹಾಕಿದ್ದರಿಂದ ಹಿಂದೆ ಬರುತ್ತಿದ್ದ ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಆ ಲಾರಿ ಮುಂದಿನ ಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಮುಂದಿನ ಲಾರಿಯೂ ಜಖಂಗೊಂಡಿದ್ದು, ಭಾರೀ ಅನಾಹುತದಿಂದ ಚಾಲಕರಿಬ್ಬರೂ ಪಾರಾಗಿದ್ದಾರೆ.

    ಹಿಂದೆ ಬರುತ್ತಿದ್ದ ಲಾರಿ ರಸ್ತೆ ಮಧ್ಯದಲ್ಲಿಯೇ ನಿಂತಿದ್ದರಿಂದ ಕೆಲಹೊತ್ತು ಭಾರೀ ಪ್ರಮಾಣದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಖಾಸಗಿ ಶಾಲಾ ಬಸ್, ಬೈಕ್ ನಡುವೆ ಭೀಕರ ಅಪಘಾತ- ಇಬ್ಬರು ದುರ್ಮರಣ

    ಖಾಸಗಿ ಶಾಲಾ ಬಸ್, ಬೈಕ್ ನಡುವೆ ಭೀಕರ ಅಪಘಾತ- ಇಬ್ಬರು ದುರ್ಮರಣ

    ಬೆಂಗಳೂರು: ಬೆಳ್ಳಂ ಬೆಳ್ಳಗೆ ಖಾಸಗಿ ಶಾಲಾ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಸಾವಿಗಿಡಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬಿದರಗುಪ್ಪೆ ಗ್ರಾಮದ ಬಳಿ ನಡೆದಿದೆ.

    ಖಾಸಗಿ ಶಾಲಾ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಬೈಕ್ ಸ್ವಲ್ಪ ದೂರಕ್ಕೆ ಬಿದ್ದು ಬೆಂಕಿ ಹೊತ್ತಿ ಉರಿದಿದ್ದು ಬಾರಿ ಅನಾಹುತ ತಪ್ಪಿದಂತಾಗಿದೆ.

    ಶಾಲಾ ಬಸ್ ನಲ್ಲಿ 10ಕ್ಕೂ ಹೆಚ್ಚು ಮಕ್ಕಳಿದ್ದು ಬಾರಿ ಅನಾಹುತದಿಂದ ಪಾರಾಗಿದ್ದಾರೆ. ನಂತರ ಬೇರೊಂದು ಬಸ್ ವ್ಯವಸ್ಥೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಲಾಗಿದೆ. ಈ ಘಟನೆ ನಡೆದ ಬಳಿಕ ಶಾಲಾ ಬಸ್ ಚಾಲಕ ಪರಾರಿಯಾಗಿದ್ದು, ಮೃತರ ವಿವರ ಇನ್ನು ತಿಳಿದು ಬಂದಿಲ್ಲ.

    ಸದ್ಯ ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 20 ವರ್ಷದ ಯುವತಿಯ ಕಾರು ಹುಚ್ಚಾಟಕ್ಕೆ ಮಹಿಳೆ ಬಲಿ!

    20 ವರ್ಷದ ಯುವತಿಯ ಕಾರು ಹುಚ್ಚಾಟಕ್ಕೆ ಮಹಿಳೆ ಬಲಿ!

    ನವದೆಹಲಿ: 20 ವರ್ಷದ ಯುವತಿಯ ಕಾರು ಹುಚ್ಚಾಟಕ್ಕೆ 50 ವರ್ಷದ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಫ್ಯಾಶನ್ ಡಿಸೈನ್ ಓದುತ್ತಿದ್ದ ಶ್ರೇಯಾ ಅಗರ್ವಾಲ್ ಎಸ್‍ಯುವಿಯನ್ನು ರಾಂಗ್ ಸೈಡಿನಿಂದ ಚಲಾಯಿಸಿದ ಪರಿಣಾಮ ರಸ್ತೆ ದಾಟುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ.

    ವೇಗ ಎಷ್ಟಿತ್ತು ಎಂದರೆ ಮಹಿಳೆಗೆ ಗುದ್ದಿ ಆಕೆಯನ್ನು 300 ಮೀಟರ್ ದೂರದವರೆಗೆ ಕಾರು ಎಳೆದುಕೊಂಡು ಹೋಗಿತ್ತು. ಕಾರು ನಿಂತ ಬಳಿಕ ಶ್ರೇಯಾ ಸ್ಥಳದಿಂದ ಪರಾರಿಯಾಗಲು ಮುಂದಾಗಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿದ್ದು ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ.

    ಶ್ರೇಯಾ ಮುಂಬೈಯಲ್ಲಿ ಫ್ಯಾಶನ್ ಡಿಸೈನಿಂಗ್ ಓದುತ್ತಿದ್ದು, ಈ ಘಟನೆ ನಡೆಯುವಾಗ ಆಕೆಯ ಜೊತೆಗೆ ಸ್ನೇಹಿತರು ಕಾರಿನಲ್ಲಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ- ಗುರುತು ಸಿಗದಷ್ಟು ಅಪ್ಪಚಿಯಾಯ್ತು ದೇಹ

    ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ- ಗುರುತು ಸಿಗದಷ್ಟು ಅಪ್ಪಚಿಯಾಯ್ತು ದೇಹ

    ಬೆಂಗಳೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಚಿತ್ರದುರ್ಗದ ದೊಡ್ಡಿಗನಹಾಲ ಗ್ರಾಮದ ಮಾರುತಿ(22) ಮೃತಪಟ್ಟ ಯುವಕ. ಆನೇಕಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಹೆನ್ನಾಗರ ಗೇಟ್ ಬಳಿ ಮುಂಜಾನೆ ಮಾರುತಿ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.

    ಡಿಕ್ಕಿಯ ರಭಸಕ್ಕೆ ಮಾರುತಿಯ ಶವ ಛಿದ್ರವಾಗಿದ್ದು, ಎನ್. ಎಚ್.ಐ ಅಂಬುಲೆನ್ಸ್ ಚಾಲಕ ಗಣಪತಿ ಶವದ ಭಾಗಗಳನ್ನು ಒಟ್ಟುಗೂಡಿಸಿ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಅಪಘಾತದ ತೀವ್ರತೆಗೆ ಸಾಕ್ಷಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv