Tag: ಡಿಕ್ಕಿ

  • ಖಾಸಗಿ ಬಸ್ ಡಿಕ್ಕಿಯಾಗಿ ಅಂಬುಲೆನ್ಸ್ ಚಾಲಕ, ಸಹಾಯಕ ದುರ್ಮರಣ

    ಖಾಸಗಿ ಬಸ್ ಡಿಕ್ಕಿಯಾಗಿ ಅಂಬುಲೆನ್ಸ್ ಚಾಲಕ, ಸಹಾಯಕ ದುರ್ಮರಣ

    ಕಾರವಾರ: ಖಾಸಗಿ ಬಸ್ ಹಾಗೂ ಅಂಬುಲೆನ್ಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಂಬುಲೆನ್ಸ್ ನ ಚಾಲಕ ಹಾಗೂ ಸಹಾಯಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಸಿದ್ದಾಪುರ ಮೂಲದ ಅಂಬುಲೆನ್ಸ್ ಚಾಲಕ ಬಾಲಕೃಷ್ಣ ನಾಯಕ್, ಸಹಾಯಕ ಜಗದೀಶ್ ಚನ್ನಯ್ಯ ಮೃತ ದುರ್ದೈವಿಗಳು.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಬಿಸಲಕೊಪ್ಪದಲ್ಲಿ ಈ ಅವಘಡ ಸಂಭವಿಸಿದೆ. ಶವವನ್ನು ಸಿದ್ದಾಪುರದಲ್ಲಿರೋ ಗ್ರಾಮಕ್ಕೆ ತಲುಪಿಸಿ ವಾಪಾಸ್ಸಾಗುತ್ತಿದ್ದಾಗ ಅಂಬುಲೆನ್ಸ್ ಗೆ ಹಾವೇರಿ ಕಡೆ ಚಲಿಸುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಂಬುಲೆನ್ಸ್ ಚಾಲಕ ಹಾಗೂ ಸಹಾಯಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


  • ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಬಿಎಂಟಿಸಿ ಬಸ್ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

    ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಬಿಎಂಟಿಸಿ ಬಸ್ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

    ಬೆಂಗಳೂರು: ಅತಿವೇಗದಿಂದ ಬಂದ ಬಿಎಂಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

    ಬನ್ನೇರುಘಟ್ಟದಿಂದ ಮೆಜೆಸ್ಟಿಕ್ ಕಡೆಗೆ ಹೊರಟಿದ್ದ ಬಸ್ ಬೆಂಗಳೂರಿನ ರಿಚ್‍ಮಂಡ್ ಸರ್ಕಲ್ ಫ್ಲೈಓವರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಪ್ರಯಾಣಿಕರಿಗೆ ಗಂಭೀರ ಸ್ಪರೂಪದ ಗಾಯಗಳಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಚಾಲಕನ ಅಜಾಗರೂಕತೆಯಿಂದ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ. ಮಳೆ ಬಂದಿರುವುದರಿಂದ ಡಿವೈಡರ್ ಕಾಣದೆ ಈ ಅಪಘಾತವಾಗಿದೆ. ಡಿವೈಡರ್ ಗಳು ಕಾಣುವಂತೆ ಪೈಂಟ್ ಮಾಡಬೇಕು ಆಗ ಇಂತಹ ಅನಾಹುತಗಳು ತಪ್ಪುತ್ತದೆ ಅಂತಾ ಪ್ರತಕ್ಷ್ಯದರ್ಶಿಯೊಬ್ಬರು ಹೇಳಿದ್ದಾರೆ.

    ಈ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ತೆಲಂಗಾಣ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಪೋಷಕರ ಕಣ್ಣೆದುರೇ ಪ್ರಾಣ ಬಿಟ್ಟ 8ರ ಬಾಲಕ!

    ತೆಲಂಗಾಣ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಪೋಷಕರ ಕಣ್ಣೆದುರೇ ಪ್ರಾಣ ಬಿಟ್ಟ 8ರ ಬಾಲಕ!

    ಯಾದಗಿರಿ: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ತೆಲಂಗಾಣದ ಸರ್ಕಾರಿ ಬಸ್ ಡಿಕ್ಕಿಯಾಗಿ ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಪಸಪುಲ್ ಕ್ರಾಸ್ ಬಳಿ ನಡೆದಿದೆ.

    8 ವರ್ಷದ ಬಾಲಕ ಕಾರ್ತಿಕ್ ಮೃತ ದುರ್ದೈವಿ. ಕಾರ್ತಿಕ್ ತನ್ನ ಪೋಷಕರೊಂದಿಗೆ ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಾಸ್ಸಾಗಲೆಂದು ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಪೋಷಕರ ಕಣ್ಣೆದುರೇ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಬಾಲಕನಿಗೆ ಡಿಕ್ಕಿ ಹೊಡೆದ ನಂತರ ವೇಗವಾಗಿ ಮುಂದೆ ಹೋದ ಬಸ್ಸನ್ನು ಗ್ರಾಮಸ್ಥರು ತಡೆದಿದ್ದಾರೆ. ಘಟನೆ ಸಂಬಂಧ ಬಸ್ ಚಾಲಕ ನರಸಿಂಹಲುನನ್ನ ಪೊಲೀಸರು ಬಂಧಿಸಿದ್ದು, ನಿರ್ವಾಹಕ ಪರಾರಿಯಾಗಿದ್ದಾನೆ.

    ಗುರುಮಠಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿ: ವಿದ್ಯಾರ್ಥಿ ಬಲಿ

    ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿ: ವಿದ್ಯಾರ್ಥಿ ಬಲಿ

    ಬೆಂಗಳೂರು: ಎಲೆಕ್ಟ್ರಿಕ್ ಪೋಲ್‍ಗೆ ಕೆಟಿಎಂ ಬೈಕ್ ಡಿಕ್ಕಿಯಾಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ನಗರದ ಮ್ಯೂಸಿಯಂ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಮೃತ ದುರ್ದೈವಿ ಬೈಕ್ ಸವಾರನನ್ನು ಪ್ರಿಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹಿಂಬದಿ ಸವಾರ ರಿಕ್ಕಿ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೃತ ಪ್ರಿಲ್ ಮತ್ತು ಗಾಯಾಳು ರಿಕ್ಕಿ ಇಬ್ಬರೂ ಮೂಲತಃ ತ್ರಿಪುರಾದವರಾಗಿದ್ದು, ಬೆಂಗಳೂರಿನ ಆಚಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು.

    ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಿದ್ದ ಇವರು ಇಂದು ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮ್ಯೂಸಿಯಂ ರಸ್ತೆಯಲ್ಲಿ ಬೈಕ್ ಕಂಟ್ರೋಲ್‍ಗೆ ಸಿಗದೆ ಎಲೆಕ್ಟ್ರಿಕ್ ಪೋಲ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಬ್ಬ ಮೃತಪಟ್ಟು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.

    ಈ ಬಗ್ಗೆ ಕಬ್ಬನ್ ಪಾರ್ಕ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೈಸೂರಿನಲ್ಲಿ ರಸ್ತೆ ಅಪಘಾತ: ಯೋಧ ದುರ್ಮರಣ

    ಮೈಸೂರು: ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯೋಧ ಮೃತಪಟ್ಟ ಘಟನೆ ಸಂಭವಿಸಿದೆ. ಮಹೇಶ್(26) ಮೃತ ದುರ್ಧೈವಿ ಯೋಧರಾಗಿದ್ದು, ಇವರು ಬಿಎಂಶ್ರೀ ನಗರದ ನಿವಾಸಿ ಮಹದೇವು ಎಂಬವರು ಪುತ್ರರಾಗಿದ್ದಾರೆ.

    ರಾತ್ರಿ ಸ್ನೇಹಿತರನ್ನು ನೋಡಲೆಂದು ಮಹೇಶ್ ಬೈಕ್ ನಲ್ಲಿ ಮನೆಯಿಂದ ಹೊರಹೋಗಿದ್ದರುಶೀ ವೇಳೆ ಆರ್ ಬಿ.ಐ. ಸಮೀಪದ ರಿಂಗ್ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಹೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯೋಧ ಮಹೇಶ್ ಕೆಲ ವರ್ಷಗಳ ಹಿಂದೆ ವಾಯುಪಡೆ ಸೇರಿದ್ದರು. ಸದ್ಯ ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ತಿಂಗಳು ರಜೆ ಹಾಕಿ ಜ.15ರಂದು ಮೈಸೂರಿಗೆ ಬಂದಿದ್ದರು. ಫೆ.15ರಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.

  • ವೀಡಿಯೋ: 2 ಬೈಕ್ ಮುಖಾಮುಖಿ ಡಿಕ್ಕಿ- ಓರ್ವ ಸವಾರ ಸಜೀವ ದಹನ!

    ವಿಜಯಪುರ: ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ರಸ್ತೆ ಮಧ್ಯದಲ್ಲೆ ಬೈಕ್ ಸವಾರ ಸಜೀವ ದಹನವಾದ ಘಟನೆ ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿ ನಡೆದಿದೆ.

    ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, 50 ವರ್ಷದ ರಮೇಶ ಸಿದ್ದಪ್ಪ ಕಾಂಬಳೆ ಎಂಬ ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಇನ್ನೊರ್ವ ಬೈಕ್ ಸವಾರ ಪ್ರಕಾಶ ಚವ್ಹಾಣ ಕಾಲಿಗೆ ಬೆಂಕಿ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

    ರಮೇಶ್ ಬೈಕ್‍ನಲ್ಲಿ ಸೀಮೆಎಣ್ಣೆ ತುಂಬಿದ ಡಬ್ಬಿ ಇಟ್ಟಕೊಂಡಿದ್ರು. ಇದ್ರಿಂದ ಅಪಘಾತದ ವೇಳೆ ಸೀಮೆಎಣ್ಣೆಗೆ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.

    https://www.youtube.com/watch?v=umDpZG14lsE&feature=youtu.be