Tag: ಡಿಕೆ ಶಿವುಕುಮಾರ್

  • ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಅಭ್ಯರ್ಥಿ: ಡಿಕೆ ಶಿವಕುಮಾರ್

    ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಅಭ್ಯರ್ಥಿ: ಡಿಕೆ ಶಿವಕುಮಾರ್

    ತುಮಕೂರು: ಮುಂದಿನ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯನವರೇ ಆಗಿದ್ದು ಅವರ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ತುಮಕೂರಿನಲ್ಲಿ ಬೆಸ್ಕಾಂನ ಒಕ್ಕಲಿಗ ನೌಕರರು ಆಯೋಜಿಸಿದ್ದ ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದಲ್ಲಿ  ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾನು ಗೃಹ ಖಾತೆಯ ಆಕಾಂಕ್ಷಿಯಲ್ಲ. ಸದ್ಯ ನನ್ನನ್ನು ಫ್ರೀ ಆಗಿ ನೆಮ್ಮದಿಯಿಂದ ಇರಲು ಬಿಟ್ಟರೆ ಸಾಕು ಎಂದು ಹೇಳಿದರು.

    ನನ್ನ ಆಪ್ತ ಎನ್ನಲಾದ ವರಪ್ರಸಾದ್ ರೆಡ್ಡಿ ಕಾಂಗ್ರೆಸ್ ಗೆ ತೊರೆದು ಬಿಜೆಪಿಗೆ ಸೇರಿರೋದಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡುವುದು ಬೇಡ. ಅವರು ಕಾರ್ಪೋರೇಷನ್ ಚುನಾವಣೆಯಲ್ಲಿ ಸೋತ ಅಭ್ಯರ್ಥಿ. ಆತ ನನ್ನ ಆಪ್ತ ಅನ್ನೋದಕ್ಕಿಂತ ಕಾಂಗ್ರೆಸ್‍ನಿಂದ ಟಿಕೆಟ್ ಕೊಟ್ಟಿದ್ದೇವೆ ಅಷ್ಟೇ. ಯಾವ ಎಂಎಲ್‍ಎ, ಮಂತ್ರಿ ಹೋದರೂ ಏನು ಆಗಲ್ಲ. ಕಾಂಗ್ರೆಸ್ ಬಲಿಷ್ಠವಾಗಿರುತ್ತೆ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಪ್ರತಿಕ್ರಿಯೆ ನೀಡಿದರು.

    ಜೆಡಿಎಸ್ ಅತೃಪ್ತರು ಕಾಂಗ್ರೆಸ್ ಗೆ ಬರುವುದಕ್ಕೆ ಕೆಲವರ ವಿರೋಧ ವ್ಯಕ್ತವಾಗುವುದು ಸಹಜ. ಪಾರ್ಟಿಗೆ ಗೆಲ್ಲುವ ಅಭ್ಯರ್ಥಿಗಳನ್ನ ನಾವು ತೆಗೆದುಕೊಳ್ಳಬೆಕಾಗುತ್ತದೆ. ನಮಗೆ ಗೆಲ್ಲುವ ಅಭ್ಯರ್ಥಿ ತುಂಬಾ ಮುಖ್ಯ. ಆ ದೃಷ್ಟಿಯಿಂದ ಕಾಂಗ್ರೆಸ್ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳತ್ತದೆ ಎಂದು ಹೇಳಿದರು.

    ಹಿಂದೆ ನೆಲಮಂಗಲದಲ್ಲಿ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳಿದ್ದರು. ಮಾಗಡಿ ತಾಲೂಕಿನ ಜನರು ಆಸೆ ಪಟ್ಟರೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕನನ್ನು ಗೆಲ್ಲಿಸಿದರೆ ಮುಂದಿನ ಸಿಎಂ ನಾನೇ ಆಗುತ್ತೇನೆ. ಸಿಎಂ ಸಿದ್ದರಾಮಯ್ಯ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್‍ಗೆ ಬಂದ ಕೇವಲ 3 ವರ್ಷದಲ್ಲಿ ಮುಖ್ಯಮಂತ್ರಿಯಾದವರು. ಆದರೂ ನನಗೆ ಮಂತ್ರಿ ಸ್ಥಾನ ಕೊಟ್ಟಿರಲಿಲ್ಲ. ನಾನು ಮಂತ್ರಿ ಸ್ಥಾನ ನೀವು ಕೊಟ್ಟಿರುವ ಪ್ರಸಾದ ಅಂತ ಕಾಯುತ್ತಿರಲಿಲ್ವ ಎಂದು ಹೇಳುವ ಮೂಲಕ ಸಿಎಂಗೆ ಡಿಕೆಶಿ ಟಾಂಗ್ ನೀಡಿದ್ದರು.

    https://www.youtube.com/watch?v=xe5IdcJyVqo

  • ರಾಜಕೀಯ ಬದ್ಧ ವೈರಿಗಳ ನಡುವೆ ದೋಸ್ತಿ- ಸಾವಿನ ಮನೆಯಲ್ಲಿ ಕೈಕುಲುಕಿದ ಎಚ್‍ಡಿಕೆ-ಡಿಕೆಶಿ

    ರಾಜಕೀಯ ಬದ್ಧ ವೈರಿಗಳ ನಡುವೆ ದೋಸ್ತಿ- ಸಾವಿನ ಮನೆಯಲ್ಲಿ ಕೈಕುಲುಕಿದ ಎಚ್‍ಡಿಕೆ-ಡಿಕೆಶಿ

    ರಾಮನಗರ: ರಾಜ್ಯ ರಾಜಕಾರಣದಲ್ಲಿ ಬದ್ಧ ವೈರಿಗಳೆಂದೇ ಕರೆಸಿಕೊಳ್ಳುವ ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಹಾಗೂ ಇಂಧನ ಸಚಿವ ಡಿ.ಕೆ ಶಿವಕುಮಾರ್ ಮುಖಾಮುಖಿಯಾಗಿ ಕೈ ಕುಲುಕಿ ಮಾತುಕತೆ ನಡೆಸಿದ ಘಟನೆ ರಾಮನಗರ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಹುಣಸನಹಳ್ಳಿ ಗ್ರಾಮದ ನಿವಾಸಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಂಜಪ್ಪ ಶುಕ್ರವಾರದಂದು ಸಾವನ್ನಪ್ಪಿದ್ದರು. ಇಂದು ಅವರ ಅಂತ್ಯಸಂಸ್ಕಾರದ ಕಾರ್ಯ ನೆರವೇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಎಚ್‍ಡಿ ಕುಮಾರಸ್ವಾಮಿ ಬಂದಿದ್ದರು. ಕುಮಾರಸ್ವಾಮಿ ಭೇಟಿಗೂ ಮುನ್ನವೇ ಡಿಕೆ ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಅಲ್ಲದೇ ಅಂತಿಮ ನಮನ ಸಲ್ಲಿಸಿ ಹೊರಟಿದ್ದ ವೇಳೆ ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ಎದುರಾದರು.

    ಈ ವೇಳೆ ಕಾರಿನಲ್ಲಿ ಹೊರಟಿದ್ದ ಡಿ.ಕೆ ಶಿವಕುಮಾರ್ ಅವರು ಕಾರಿನಿಂದ ಇಳಿದು ಕುಮಾರಸ್ವಾಮಿ ಅವರ ಬಳಿಗೆ ನಡೆದು ಹೋಗಿ ಮಾತನಾಡಿಸಿದ್ರು. ಅಲ್ಲದೇ ಕೈ ಕುಲುಕಿ ಇಬ್ಬರೂ ಸಹ ಆತ್ಮೀಯವಾಗಿ ಸಲುಗೆಯಿಂದ ಮಾತನಾಡಿದರು. ಇದನ್ನ ನೋಡಿ ಸಾವಿನ ಮನೆಯ ಬಳಿ ನೆರೆದಿದ್ದ ಜನರೆಲ್ಲಾ ಒಂದು ಕ್ಷಣ ಆಶ್ಚರ್ಯಕ್ಕೆ ಒಳಗಾದ್ರು.