Tag: ಡಿಕೆ ಶಿವಕುಮಾರ

  • ಕಾಂಗ್ರೆಸ್‍ ನಾಯಕರಿಂದ ರಾಜಭವನ ಚಲೋ- ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌

    ಕಾಂಗ್ರೆಸ್‍ ನಾಯಕರಿಂದ ರಾಜಭವನ ಚಲೋ- ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌

    ಬೆಂಗಳೂರು: ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಸೋನಿಯ ಗಾಂಧಿಗೆ ಇಡಿ ಸಮನ್ಸ್ ನೀಡಿರುವುದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಇಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

    2 ದಿನದ ಹಿಂದೆ ಬೆಂಗಳೂರಿನಲ್ಲಿ ಇಡಿ ಕಚೇರಿ ಮುತ್ತಿಗೆಗೆ ಮುಂದಾಗಿದ್ದ ಕೈ ಪಾಳಯ ಹೈಡ್ರಾಮ ನಡೆಸಿತ್ತು. ಇಂದು ರಾಜಭವನ ಚಲೋ ಪ್ರಾರಂಭಿಸಿ ಶಕ್ತಿ ಪ್ರದರ್ಶನಕ್ಕೆ ಮಾಂದಾಗಿದ್ದು, ಹೈಡ್ರಾಮಾ ಸೃಷ್ಟಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಪರಮೇಶ್ವರ್, ಬಿ.ಕೆ.ಹರಿಪ್ರಸಾದ್, ಯು.ಟಿ.ಖಾದರ್ ಸೇರಿದಂತೆ ನೂರಾರು ನಾಯಕರು ರಾಜಭವನ ಚಲೋ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.

    ರಾಹುಲ್ ಗಾಂಧಿಗೆ ಸತತ ಮೂರು ದಿನಗಳ ಕಾಲ ಇಡಿ ವಿಚಾರಣೆಗೆ ಕರೆದಿರುವುದು ಹಾಗೂ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮೇಲೆ ದೌರ್ಜನ್ಯ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ರಾಜ್ಯ ಕಾಂಗ್ರೆಸ್ ನಾಯಕರು ಈ ಸಂಬಂಧ ಪ್ರತಿಭಟನೆಗೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜಭವನ್ ಚಲೋ ಪ್ರಾರಂಭಿಸಿದ್ದು, ರಾಜ್ಯ ಭವನದ ಕದ ತಟ್ಟಲು ಮುಂದಾಗಿದ್ದಾರೆ. ಇದನ್ನೂ ಓದಿ: ಶೆಹಬಾಜ್ ಷರೀಫ್, ಇಮ್ರಾನ್ ಖಾನ್‍ಗಿಂತ ಪತ್ನಿಯರೇ ಹೆಚ್ಚು ಶ್ರೀಮಂತರು

    ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು, ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಈಗಾಗಲೇ ಪೊಲೀಸರು ಬ್ಯಾರಿಕೇಡ್ ಹಾಕಿ ಕ್ವೀನ್ಸ್ ರೋಡ್ ಬಂದ್ ಮಾಡಿದ್ದಾರೆ. ಪ್ರತಿಭಟನಕಾರರನ್ನು ತುಂಬಲು ಕ್ವೀನ್ಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್‍ನ್ನು ಪೊಲೀಸರು ಅಡ್ಡ ಹಾಕಿದ್ದಾರೆ. ಶಾಸಕ ರಿಜ್ವಾನ್, ಮಾಜಿ ಸಚಿವ ಜಾರ್ಜ್, ಜಿ.ಪರಮೇಶ್ವರ್, ಪಿ.ಟಿ ಪರಮೇಶ್ವರ್ ನಾಯಕ್ ಕುಣಿಗಲ್ ಶಾಸಕ ಸೇರಿದಂತೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಹೋರಾಟದಿಂದ ಕೋವಿಡ್ ಹೆಚ್ಚಾದ್ರೆ ಅವರೇ ಹೊಣೆ: ಸಚಿವ ಸುಧಾಕರ್

    Live Tv

  • ಪರಿಷತ್‍ನಿಂದ ಕಾಂಗ್ರೆಸ್ ಸದಸ್ಯರನ್ನ ಅಮಾನತುಗೊಳಿಸಿದ್ದು ಕೆಟ್ಟ ಪದ್ದತಿ: ಡಿಕೆ ಶಿವಕುಮಾರ್

    ಪರಿಷತ್‍ನಿಂದ ಕಾಂಗ್ರೆಸ್ ಸದಸ್ಯರನ್ನ ಅಮಾನತುಗೊಳಿಸಿದ್ದು ಕೆಟ್ಟ ಪದ್ದತಿ: ಡಿಕೆ ಶಿವಕುಮಾರ್

    ಬೆಳಗಾವಿ: ಪರಿಷತ್‍ನಿಂದ ಕಾಂಗ್ರೆಸ್ ಸದಸ್ಯರನ್ನ ಅಮಾನತುಗೊಳಿಸಿದ್ದು ಕೆಟ್ಟ ಪದ್ದತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

    ಪರಿಷತ್‍ನಿಂದ ಕಾಂಗ್ರೆಸ್‍ನ 15 ಸದಸ್ಯರನ್ನು ಅಮಾನತುಗೊಳಿಸಿದ ಹಿನ್ನೆಲೆ ಸುವರ್ಣಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಪಾರ್ಲಿಮೆಂಟ್‍ನಲ್ಲಿ ಮಾಡಿದ್ದಂತೆ ಇಲ್ಲಿಯೂ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕವಾಗಿದ್ದು, ಕಾಂಗ್ರೆಸ್ ಪಕ್ಷದವರು ಇದನ್ನ ತೀವ್ರವಾಗಿ ಖಂಡಿಸುತ್ತೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ನಿಧನ

    ಈ ಕುರಿತಂತೆ ನಾಳೆ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಚರ್ಚೆ ಮಾಡುತ್ತೇವೆ. ನಾನು ಯಾರ ಬಗ್ಗೆಯೂ ಮಾತನಾಡೋದಿಲ್ಲ. ಆರೋಪಗಳು ಬಂದ ಸದಸ್ಯರ ಮೇಲೆ ಹಿಂದೆ ಸದನದಲ್ಲಿ ಚರ್ಚೆ ಮಾಡಿಲ್ಲವೆ? ಕಾನೂನು ಪ್ರಕಾರ ನೋಟಿಸ್ ಕೊಡಬೇಕು ಎಂದರು. ಇದನ್ನೂ ಓದಿ: ಕಲಾಪಕ್ಕೆ ಅಡ್ಡಿ- ವಿಧಾನ ಪರಿಷತ್‌ನ 15 ಕಾಂಗ್ರೆಸ್ ಸದಸ್ಯರು ಅಮಾನತು‌

    ಉತ್ತರ ಹೇಳಿ ನಾವು ಆರೋಪಿ ಅಂತ ಹೇಳಿದ್ದವಾ? ಯಡಿಯೂರಪ್ಪನವರ ಮೇಲೆ ಕೇಸ್ ಆಯ್ತು ಅವರು ಜೈಲಿಗೆ ಹೋದ ತಕ್ಷಣ ಆರೋಪಿಯಾದರಾ? ಅಕ್ರಮ ಮಾಡಿದ ಸಚಿವರ ಮೇಲೆ ಗಂಭೀರ ಆರೋಪ ಬಂದಾಗ ಹಿಂದೆ ಯಾವ ರೀತಿ ನಡೆದುಕೊಂಡಿದ್ದರೋ ಅದೇ ರೀತಿ ನಡೆದುಕೊಳ್ಳಬೇಕು ಎಂದು ಹೇಳಿದರು.

  • ಮುಂದಿನ ಸಿಎಂ ಬಗ್ಗೆ ಕಾಂಗ್ರೆಸ್ ಕಾಣುತ್ತಿರುವುದು ಹಗಲು ಕನಸು: ಸಚಿವ ಸಿ.ಸಿ.ಪಾಟೀಲ್

    ಮುಂದಿನ ಸಿಎಂ ಬಗ್ಗೆ ಕಾಂಗ್ರೆಸ್ ಕಾಣುತ್ತಿರುವುದು ಹಗಲು ಕನಸು: ಸಚಿವ ಸಿ.ಸಿ.ಪಾಟೀಲ್

    – ಹಗಲು ಬೀಳುವ ಕನಸು ತುಂಬಾನೇ ಡೇಂಜರ್

    ಗದಗ: ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಹಗಲು ಕನಸು ಕಾಣುತ್ತಿದ್ದಾರೆ. ಹಗಲು ಬೀಳುವ ಕನಸು ತುಂಬಾನೇ ಡೇಂಜರ್ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಇಲಾಖೆ ಸಚಿವ ಸಿ.ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

    ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಕಡೆ ಸಿದ್ದರಾಮಯ್ಯ ಮತ್ತೊಂದು ಕಡೆ ಡಿಕೆಶಿ ನಾನೇ ಸಿಎಂ ಅಂತಿದ್ದಾರೆ. ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಚುನಾವಣೆಗೆ ಇನ್ನೂ ಸಮಯ ಇದೆ. ಈಗಲೇ ಅವರಲ್ಲೆ ಕುಸ್ತಿ ಹಿಡದಿದ್ದು ನೋಡಿದರೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ ಎಂದರು. ಸಿಎಂ ಆಗಬೇಕು ಅಂದರೆ ಬಿಜೆಪಿಯಲ್ಲಿ ಒಂದು ಸಿಸ್ಟಮ್ ಇದೆ. ಕಾಂಗ್ರೆಸ್ ನಲ್ಲಿ ಮತ್ತೊಂದು ಸಿಸ್ಟಮ್ ಇದೆ. ಬಿಜೆಪಿಯಲ್ಲಿ ಶಾಸಕರು ಒಟ್ಟಾಗಿ ಮುಖ್ಯಮಂತ್ರಿ ಆರಿಸುತ್ತೇವೆ. ಆದರೆ ಕಾಂಗ್ರೆಸ್ ನಲ್ಲಿ ಹಾಗಿಲ್ಲ. ಎದುರಾಳಿಯಿಂದ ಸಿಎಂ ಹೆಸರಿನ ಚೀಟಿ ಬರುತ್ತೆ. ಆ ಚೀಟಿಯಲ್ಲಿ ಯಾರ ಹೆಸರು ಇರುತ್ತದೆ ಎಂಬುವುದು ಯಾರಿಗೂ ಗೊತ್ತಿರಲ್ಲ. ಕನಸು ಕಾಣಬೇಕು, ಆದರೆ ಹಗಲು ಕನಸು ಭಾರೀ ಡೇಂಜರ್ ಎಂದರು.

    ಗದಗನ ಮಿರ್ಚಿ ಕಥೆ ಹೇಳಿ ಕಾಂಗ್ರೆಸ್ ನಾಯಕರಿಗೆ ಅಪಹಾಸ್ಯ ಮಾಡಿದರು. ತೋಂಟದಾರ್ಯ ಮಠದ ಸ್ವಾಮೀಜಿ ಈ ಹಿಂದೆ ಕಥೆಯೊಂದನ್ನು ಹೇಳುತ್ತಿದ್ದರು. ಅದೇನೆಂದರೆ, ಮಠದ ಎದುರಿಗೆ ಒಬ್ಬ ವ್ಯಕ್ತಿ ಕೂತು ಏನೋ ತಿಂದ ಹಾಗೆ ಮಾಡುತ್ತಿದ್ದನಂತೆ. ಸಾಕಾಗಿ ಒಂದೊಮ್ಮೆ ಸ್ವಾಮಿಗಳು ಆ ವ್ಯಕ್ತಿ ಕೇಳಿದರೆ, ಗದುಗಿನ ಮಿರ್ಚಿ ತಿಂದ ಹಾಗೇ ಸುಮ್ನೆ ಕಲ್ಪನೆ ಮಾಡುತ್ತಿದ್ದೇನೆ ಎಂದಿದ್ದನಂತೆ. ಆಗ ಸ್ವಾಮಿಜಿ ಹೇಳಿದರಂತೆ ತಿಂದ ಹಾಗೆ ಮಾಡುವುದಾದರೆ ಮಿರ್ಚಿ ಜೊತೆಗೆ ಧಾರವಾಡ ಪೇಡಾ ತಿನ್ನು. ಗೋಕಾಕ್ ಕರದಂಟು ತಿನ್ನು, ಬೆಳಗಾವಿ ಕುಂದಾ ತಿನ್ನು ಇಲ್ಲದಿರುವುದನ್ನು ಯಾಕೆ ಕಲ್ಪನೆ ಮಾಡಿಕೊತಿಯಾ ಅಂದರಂತೆ. ಹಾಗೇ ಕನಸು ಕಾಣೋದಾದರೆ ಪ್ರಧಾನ ಮಂತ್ರಿಯಾಗುವುದನ್ನು ಕಾಣಲಿ, ವಲ್ರ್ಡ್ ಬ್ಯಾಂಕ್ ಅಧ್ಯಕ್ಷ ಆಗುವುದನ್ನ ಕಾಣಲಿ, ಅದನ್ನು ಬಿಟ್ಟು ಮುಂದಿನ ಸಿಎಂಗಾಗಿ ಕಾಂಗ್ರೆಸ್ ಕಂಡ ಕನಸು, ಹಗಲು ಕನಸು ಎಂದು ಕಥೆಯ ಮೂಲಕ ಅಪಹಾಸ್ಯ ಮಾಡಿದರು.

    ನಂತರ ಪಂಚಮಸಾಲಿ ಸ್ವಾಮಿಗಳ ಪರ್ಯಾಯ ಒಕ್ಕೂಟದ ರಚನೆ ಕುರಿತು, ಸ್ವಾಮೀಜಿಗಳು, ಜಗದ್ಗುರು ಬಗ್ಗೆ ಕಾಮೆಂಟ್ ಮಾಡುವುದು ಸರಿಯಲ್ಲ. ಏಕೆಂದರೆ ಧರ್ಮೊಪದೇಶ ಮಾಡುವ ಕಾವಿ ಧಾರಿಗಳು ತಮ್ಮಷ್ಟಕ್ಕೆ ತಾವೇ ಯೋಚಿಸಬೇಕು. ಸಮಾಜದ ಜಾಗೃತಿ ಮೂಡಿಸಬೇಕು. ಅದನ್ನು ಬಿಟ್ಟು ಗ್ರೂಪಿಸಮ್ ಮಾಡಬಾರದು. ಗ್ರೂಪ್ ಮಾಡುವುದಾದರೆ ಸ್ವಾಮಿಗಳು ಹಾಗೂ ರಾಜಕಾರಣಿಗಳ ಮಧ್ಯೆ ವ್ಯತ್ಯಾಸ ಏನುಳಿತು ಎಂದು ಮಠಾಧೀಶರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

  • ಸಿಬಿಐ ಬಿಜೆಪಿ ಸರ್ಕಾರದ ರಾಜಕೀಯ ದಾಳವಾಗಿದೆ: ಡಿಕೆಶಿ

    ಸಿಬಿಐ ಬಿಜೆಪಿ ಸರ್ಕಾರದ ರಾಜಕೀಯ ದಾಳವಾಗಿದೆ: ಡಿಕೆಶಿ

    ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿ ನಾಯಕರು ಸಿಬಿಐ ಅನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ವಿನಯ್ ಕುಲಕರ್ಣಿಯವರನ್ನು ಸಿಬಿಐ ಪೊಲೀಸರು ವಶಕ್ಕೆ ಪಡೆದಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಕೇಸ್ ಬಗ್ಗೆ ಈ ಹಿಂದೆ ನಾನು ಕುಲಕರ್ಣಿ ಜೊತೆ ಚರ್ಚೆ ಮಾಡಿದ್ದೆ. ವಿನಯ್ ಕುಲಕರ್ಣಿ ಗಟ್ಟಿ ನಾಯಕರಾಗಿ ಬೆಳೆದಿದ್ದಾರೆ. ಈ ಹಿಂದೆ ಒಬ್ಬ ಮಿನಿಸ್ಟರ್, ವಿನಯ್ ಅವರನ್ನ ಬಿಜೆಪಿ ಪಕ್ಷಕ್ಕೆ ಬನ್ನಿ ಎಂದಿದ್ದರು. ಬಿಜೆಪಿ ನಾಯಕರು ಸಿಬಿಐ ಅನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಕೆಲ ಬಿಜೆಪಿ ನಾಯಕರು ಈಗ ಖುಷಿ ಪಟ್ಟಿದ್ದಾರೆ. ಇದು ಶಾಶ್ವತವಾಗಿ ಇರುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸಿಬಿಐ ಮ್ಯಾನುಯಲ್ ನಾನು ಓದಿದ್ದೇನೆ. ಯಾವುದೇ ರಾಜಕೀಯ ಒತ್ತಡಕ್ಕೆ ಸಿಬಿಐ ಅಧಿಕಾರಿಗಳು ಒಳಗಾಗುವುದು ಬೇಡ. ರಾಜಕೀಯ ಚಕ್ರ ತಿರುತ್ತಿರುಗುತ್ತಿರುತ್ತದೆ. ಅಧಿಕಾರಿಗಳು ಇದನ್ನ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಎಷ್ಟು ದಿನ ಬೇಕಿದ್ದರು ವಿಚಾರಣೆ ಮಾಡಲಿ, ನಮ್ಮ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ ಎಂದರು.

    ಸಿಬಿಐ ಅಧಿಕಾರಿಗಳು ಕಾನೂನು ಬದ್ಧವಾಗಿಯೇ ಕೆಲಸ ಮಾಡುತ್ತಿದ್ದಾರೆ. ಕಾನೂನಿನ ಹೊರತಾಗಿ ಯಾವುದೇ ಕೆಲಸ ಮಾಡುವುದಿಲ್ಲ ಎಂದು ನನ್ನ ಮೇಲೆ ಯಡಿಯೂಪ್ಪ ಕೇಸ್ ಹಾಕಿದ್ದಾರೆ. ಸಿಬಿಐ ರಾಜಕೀಯ ಪಕ್ಷಗಳಿಗೆ ತಲೆಬಾಗಬಾರದು. ಜಾರ್ಜ್ ಅವರಿಗೆ ಎಷ್ಟು ಕಿರುಕುಳ ಕೊಟ್ಟಿದ್ರು ನನಗೆ ಎಲ್ಲ ಗೊತ್ತಿದೆ. ಸಿಬಿಐನವರು ರಾಜಕೀಯ ವೆಪನ್ ಆಗಬಾರದು. ದೇಶದ ಕಾನೂನಿನ ಬಗ್ಗೆ ನಮಗೆ ನಂಬಿಕೆ ಇದೆ. ನಮ್ಮ ಪಕ್ಷದವರು ಯಾರೂ ತಪ್ಪು ಮಾಡಿಲ್ಲ. ನಮ್ಮ ನಾಯಕರನ್ನು ಮುಗಿಸೋಕೆ ಇದನ್ನ ಮಾಡ್ತಿದ್ದಾರೆ. ನಾವು ವಿನಯ್ ಕುಲಕರ್ಣಿ ಪರವಾಗಿಯೇ ಇದ್ದೇವೆ ಎಂದು ಕಿಡಿಕಾರಿದರು.

  • ಡಿಕೆ ಶಿವಕುಮಾರ್ ಶ್ರೀ ಕೃಷ್ಣನಿದ್ದಂತೆ: ಜಯಮಾಲಾ

    ಡಿಕೆ ಶಿವಕುಮಾರ್ ಶ್ರೀ ಕೃಷ್ಣನಿದ್ದಂತೆ: ಜಯಮಾಲಾ

    ಬೆಂಗಳೂರು: ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಸಾಕ್ಷಾತ್ ಶ್ರೀ ಕೃಷ್ಣನಂತಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಾಮಾಲ ಹೇಳಿದ್ದಾರೆ.

    ರಾಜ್ಯ ಸರ್ಕಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸಂಧಾನ ಬಂದರೂ, ಹಗಲು ರಾತ್ರಿ ಎನ್ನದೇ ಡಿ.ಕೆ.ಶಿವಕುಮಾರ್ ಸಿದ್ಧರಿರುತ್ತಾರೆ. ಅಲ್ಲದೇ ಖುದ್ದು ಮಧ್ಯಸ್ಥಿಕೆ ವಹಿಸುವ ಮೂಲಕ ಕಾರ್ಯ ನಿರ್ವಹಿಸುತ್ತಾರೆ. ಅಚ್ಚುಕಟ್ಟಾಗಿ ಯಾವುದೇ ಕೆಲಸವನ್ನು ಶಿಸ್ತಿನಿಂದ ನಿರ್ವಹಿಸುತ್ತಾರೆ. ಹೀಗಾಗಿ ಅವರು ಸಾಕ್ಷಾತ್ ಶ್ರೀ ಕೃಷ್ಣ ಎಂದು ವೇದಿಕೆ ಮೇಲೆ ಡಿಕೆಶಿಯವರನ್ನು ಹಾಡಿ ಹೊಗಳಿದ್ದಾರೆ.

    ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 63 ಸಾಧಕರಿಗೆ ರಾಜ್ಯ ಸರ್ಕಾರದ ವತಿಯಿಂದ ಗೌರವಿಸುತ್ತಿದೆ. ಸಾಧಕರಿಗೆ 24 ಗ್ರಾಂ ಚಿನ್ನದ ಪದಕ ಹಾಗೂ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಗೌರವಿಸಿದ್ದಾರೆ.

    ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಹಾಪೌರರಾದ ಗಂಗಾಬಿಕೆ ಮಲ್ಲಿಕಾರ್ಜುನ್, ಸಚಿವರಾದ ಡಿಕೆ ಶಿವಕುಮಾರ್, ಜಮೀರ್ ಅಹಮ್ಮದ್ ಹಾಗೂ ವಿಧಾನಪರಿಷತ್ ಸದಸ್ಯರು ಶರವಣ ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತಪ್ಪು ಮಾಡಿದವ್ರಿಗೆ ಶಿಕ್ಷೆಯಾಗುತ್ತೆ, ಉಪ್ಪು ತಿಂದವರು ನೀರು ಕುಡೀತಾರೆ: ಶೋಭಾ ಕರಂದ್ಲಾಜೆ

    ತಪ್ಪು ಮಾಡಿದವ್ರಿಗೆ ಶಿಕ್ಷೆಯಾಗುತ್ತೆ, ಉಪ್ಪು ತಿಂದವರು ನೀರು ಕುಡೀತಾರೆ: ಶೋಭಾ ಕರಂದ್ಲಾಜೆ

    ಚಿಕ್ಕಮಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಆದಾಯ ತೆರಿಗೆ ಇಲಾಖೆ ದಾಳಿಗೆ ಕೇಂದ್ರ ಸರ್ಕಾರವೇ ಕಾರಣ ಎಂಬ ಕಾಂಗ್ರೆಸ್ ನಾಯಕರುಗಳ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.

    ಕೇಂದ್ರ ಸರ್ಕಾರವು ಕೇವಲ ಕಾಂಗ್ರೆಸ್ ಮುಖಂಡರ ಮನೆಗೆ ಮಾತ್ರ ಐಟಿ ದಾಳಿ ನಡೆಸುತ್ತಿದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಸಂಸ್ಥೆಗಳು ಅವ್ಯವಹಾರಗಳ ಹಿನ್ನೆಲೆಯಲ್ಲಿ ದಾಳಿ ನಡೆಸುತ್ತಿವೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ. ಆರೋಪಗಳಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಮುಖಂಡರುಗಳು ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುತ್ತಿದ್ದಾರೆ.

    ಅವ್ಯವಹಾರ ಮಾಡಿದ್ದರಿಂದ ನಾಯಕರುಗಳಿಗೆ ಭಯ ಕಾಡುತ್ತಿದೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯಾರು ನ್ಯಾಯಯುತವಾಗಿರುತ್ತಾರೆ ಅವರು ಹೆದರಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ತಪ್ಪು ಮಾಡಿದವರಿಗೆ ಭಯ ಇದ್ದೇ ಇರುತ್ತದೆ. ಯಾರು ತಪ್ಪು ಮಾಡಿರುತ್ತಾರೋ ಅವರು ಖಂಡಿತವಾಗಿಯೂ ಶಿಕ್ಷೆ ಅನುಭವಿಸುತ್ತಾರೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ತಿರುಗೇಟು ನೀಡಿದರು.

    ದೇಶದಲ್ಲಿ ಆದಾಯ ತೆರಿಗೆ ದಾಳಿಯು ಸುಮಾರು 70 ವರ್ಷಗಳಿಂದ ದಾಳಿ ನಡಸುತ್ತಿದೆ. ಇದೇನೂ ಮೊದಲೇನಲ್ಲ ಕಾಂಗ್ರೆಸ್ ಸರ್ಕಾರದ 50 ವರ್ಷಗಳ ಅಧಿಕಾರ ಅವಧಿಯಲ್ಲಿ ನಡೆದ ಐಟಿ ದಾಳಿಗಳು ರಾಜಕೀಯ ಪ್ರೇರಿತವೇ ಎಂದು ಈ ವೇಳೆ ಪ್ರಶ್ನಿಸಿದರು.

    ನನ್ನ ಬಳಿ ಹಲವು ಡೈರಿ ಇದೆ ಅಂತ ಡಿಕೆಶಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈವಾಗ ನಿಮ್ಮದೇ ಸರ್ಕಾರ ಹಾಗೂ ನಿಮ್ಮದೇ ಮುಖ್ಯಮಂತ್ರಿಗಳಿದ್ದಾರೆ. ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ನಿಮಗೆ ಇದೆ. ನಿಮ್ಮ ಬಳಿ ಯಾರದ್ದು ಬೇಕಾದರೂ ಡೈರಿ ಇರಲಿ, ಇದ್ದರೆ ಅದರಲ್ಲಿರುವವರ ವಿರುದ್ಧ ತನಿಖೆ ಕೈಗೊಳ್ಳಿ ಎಂದು ಖಾರವಾಗಿ ಉತ್ತರಿಸಿದ್ದಾರೆ.