Tag: ಡಿಕೆಶಿವಕುಮಾರ್

  • ಸ್ಕೈವಾಕ್‌  ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ – ಡಿಕೆಶಿಗೆ ಸೂರ್ಯ ಪತ್ರ

    ಸ್ಕೈವಾಕ್‌ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ – ಡಿಕೆಶಿಗೆ ಸೂರ್ಯ ಪತ್ರ

    ಬೆಂಗಳೂರು: ಕೈ  (Congress) ಸರ್ಕಾರದಿಂದ ನಗರದ ಅಭಿವೃದ್ಧಿಗಾಗಿ ದುಡ್ಡು ಬಿಡುಗಡೆ ಮಾಡುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya)  ಡಿಸಿಎಂ ಡಿಕೆ.ಶಿವಕುಮರ್‌ಗೆ  (D.K. Shivakumar) ಪತ್ರ ಬರೆದಿದ್ದಾರೆ.

    ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿಗೆ ದುಡ್ಡು ಬಿಡುಗಡೆ ಮಾಡುವಂತೆ ಬಿಜೆಪಿ ನಾಯಕರು ಒತ್ತಡ ನೀಡುತ್ತಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಶಾಸಕ ಮುನಿರತ್ನ ಮನವಿ ಮಾಡಿದ್ದರು. ಈಗ ತೇಜಸ್ವಿ ಸೂರ್ಯ ಡಿಕೆಶಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ:  ಮುಸ್ಲಿಮರಿಗೆ ಉಡುಗೊರೆ, ರೈತರಿಗೆ ಗಾಯದ ಮೇಲೆ ಬರೆ: ಅಶೋಕ್‌ ಕಿಡಿ

    ನಗರದ ಸಂಚಾರ ದೃಷಿಯಿಂದ ಬಹುಮುಖ್ಯ ಪ್ರದೇಶವಾಗಿರುವ ಬನಶಂಕರಿಯಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ಸಾರ್ವಜನಿಕರ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಇವುಗಳ ಮಧ್ಯೆ ದಿನನಿತ್ಯ ಸಂಚಾರ ಮಾಡುವ ಜನರಿಗಾಗಿ ಸ್ಕೈವಾಕ್‌ ನಿರ್ಮಾಣ ಮಾಡಬೇಕು. ಸ್ಕೈವಾಕ್‌ ನಿರ್ಮಾಣಕ್ಕೆ ಸರ್ಕಾರದಿಂದ ದುಡ್ಡು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಿಖಿಲ್ ಮಂಡ್ಯ ಕಣದಿಂದ ಹಿಂದೆ ಸರಿದಿದ್ದೇಕೆ?

    ಇದೇ ವಿಚಾರವನ್ನು ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಮತ್ತು ನಿಮ್ಮ ಗಮನಕ್ಕೂ ತಂದಿದ್ದೇನೆ. ಅದಕ್ಕೆ ತಾವು ಸಕಾರಾತ್ಮಕವಾಗಿ ಸ್ಪಂದಿಸಿದ್ದೀರಿ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿದ್ದೇನೆ. ಆದರೆ ಕಾಮಗಾರಿ ಬಗ್ಗೆ ಮಾತ್ರ ಇನ್ನೂ ಸ್ಪಷ್ಟನೆ ಇಲ್ಲ. ನಾವು ಅಲ್ಲಿ ಸ್ಕೈವಾಕ್‌ ನಿರ್ಮಿಸುವುದರಿಂದ 50 ಸಾವಿರ ಜನಕ್ಕೆ ಪ್ರಯೋಜನವಾಗಲಿದೆ. ಹೀಗಾಗಿ ಬಿಬಿಎಂಪಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಿ ಎಂದು ಡಿಕೆ.ಶಿವಕುಮಾರ್ ಅವರಿಗೆ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬೇಸಿಗೆಗೂ ಮುನ್ನವೇ ಕುಡಿಯೋ ನೀರಿಗೆ ಹಾಹಾಕಾರ – ವಾಟರ್‌ ಟ್ಯಾಂಕರ್‌ ಮಾಲೀಕರಿಂದ ದುಪ್ಪಟ್ಟು ದರ ಸುಲಿಗೆ!

  • ರಾಜ್ಯದ ಬದಲಾವಣೆಗೆ ಇಂದು ನಾಂದಿ ಹಾಡುತ್ತಿದ್ದೇವೆ: ಡಿಕೆಶಿ

    ರಾಜ್ಯದ ಬದಲಾವಣೆಗೆ ಇಂದು ನಾಂದಿ ಹಾಡುತ್ತಿದ್ದೇವೆ: ಡಿಕೆಶಿ

    ಬೆಳಗಾವಿ: ಕರ್ನಾಟಕ (Karnataka) ರಾಜ್ಯದ ಬದಲಾವಣೆಗೆ ಇಂದು ನಾಂದಿ ಹಾಡುತ್ತಿದ್ದೇವೆ ಎಂದು ಕಾಂಗ್ರೆಸ್ (Congress) ಪ್ರಜಾಧ್ವನಿ ಬಸ್‌ಯಾತ್ರೆ ಚಾಲನೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು ಬ್ರಿಟಿಷ್‌ರನ್ನು ಓಡಿಸಲು ಈ ನಾಡಿನಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಹೋರಾಡಿದ್ದರು. ಅದಾದ ಮೇಲೆ ಪ್ರಜಾಪ್ರಭುತ್ವ ಬಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ (BJP) ಸರ್ಕಾರ ನಮ್ಮ ರಾಜ್ಯಕ್ಕೆ ದೊಡ್ಡ ಕಳಂಕ ತಂದಿದೆ. ಆ ಕಳಂಕ ನಿರ್ಮೂಲನೆ ಮಾಡಲು ಪ್ರಜೆಗಳ ಧ್ವನಿ ತಿಳಿಸಲು ಹೊರಟಿದ್ದೇವೆ ಎಂದು ತಿಳಿಸಿದರು.

    ಐತಿಹಾಸಿಕವಾದ ಈ ಭೂಮಿಯಿಂದ ಪ್ರಜಾಧ್ವನಿ ಗ್ಯಾರಂಟಿ ಯಾತ್ರೆ ಆರಂಭವಾಗಿದೆ. ಈ ತಿಂಗಳು ಜಿಲ್ಲಾ ಕೇಂದ್ರಗಳನ್ನು ಮುಗಿಸಿ ಬಳಿಕ ಕ್ಷೇತ್ರವಾರು ಸಂಚಾರ ಮಾಡುತ್ತೇವೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸಂಚಾರ ಮಾಡುತ್ತೇವೆ. ಆಯಾ ಭಾಗಕ್ಕೆ ಹೋದಾಗ ಆಯಾ ನಾಯಕರು ಬರುತ್ತಾರೆ. 20 ಜಿಲ್ಲೆಗಳಲ್ಲಿ ನಾನು, ಸಿದ್ದರಾಮಯ್ಯ, ಹೆಚ್.ಕೆ.ಪಾಟೀಲ್ ಸೇರಿ ಹಿರಿಯ ನಾಯಕರು ಸಂಚರಿಸಿಸುತ್ತೇವೆ ಎಂದರು. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಸೋಲು ಖಚಿತ: ಗೋವಿಂದ ಕಾರಜೋಳ ಭವಿಷ್ಯ

    ಹೊಸಬರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಖಂಡಿತ ಹೊಸಬರಿಗೆ ಅವಕಾಶ ಕೊಡುತ್ತೇವೆ. ನವ ಕರ್ನಾಟಕಕ್ಕೆ ಕಾಂಗ್ರೆಸ್ ಸಂಕಲ್ಪ ಮಾಡುತ್ತಿದೆ. ಪಂಚಮಸಾಲಿ ಮೀಸಲಾತಿ ಬಗ್ಗೆ ಕೂಡಲಸಂಗಮ ಸ್ವಾಮೀಜಿ ಚೆನ್ನಾಗಿ ವಿಶ್ಲೇಷಿಸಿದ್ದಾರೆ. ತುಪ್ಪವನ್ನು ತಲೆ ಮೇಲೆ ಇಟ್ಟಿದ್ದಾರೆ ಎಂದು ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ. ಎಲ್ಲಾ ವರ್ಗಗಳನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ – ತಪ್ಪಿತಸ್ಥರಿಗೆ ಪೊಲೀಸರಿಂದ ಬುಲಾವ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ದು ವಿರುದ್ಧ ಡಿಕೆಶಿ ಪ್ರಿಯಾಂಕಾ ಗಾಂಧಿ ಅಸ್ತ್ರ..!

    ಸಿದ್ದು ವಿರುದ್ಧ ಡಿಕೆಶಿ ಪ್ರಿಯಾಂಕಾ ಗಾಂಧಿ ಅಸ್ತ್ರ..!

    ಬೆಂಗಳೂರು: ಸಿದ್ದರಾಮಯ್ಯ ಇಮೇಜ್‍ಗೆ ಕೌಂಟರ್ ಕೊಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಿಯಾಂಕಾ ಗಾಂಧಿ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಮೊದಲ ಹಂತದಲ್ಲಿ ಪ್ರಿಯಾಂಕಾ ಗಾಂಧಿಯನ್ನು ರಾಜ್ಯದಿಂದ ರಾಜ್ಯಸಭೆ ಅಭ್ಯರ್ಥಿ ಮಾಡಿಸುವ ಯತ್ನದಲ್ಲಿ ಡಿಕೆಶಿ ವಿಫಲರಾದರು. ಆದರೆ ಮರಳಿ ಯತ್ನವ ಮಾಡು ಎಂದು ಇನ್ನೊಂದು ಪ್ರಯತ್ನಕ್ಕೆ ಡಿಕೆಶಿ ಮುಂದಾಗಿದ್ದಾರೆ. ಆಗಸ್ಟ್ 15ರ ಫ್ರೀಡಂಮಾರ್ಚ್‍ಗೆ ಪ್ರಿಯಾಂಕಾ ಗಾಂಧಿಯೇ ಬರಬೇಕು ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಗಣೇಶೋತ್ಸವ ಆಚರಿಸುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಜಮೀರ್‌ಗೆ ಶ್ರೀರಾಮ ಸೇನೆ ಸವಾಲ್‌

    ರಾಜ್ಯ ಕಾಂಗ್ರೆಸ್‍ಗೆ ಪ್ರಿಯಾಂಕಾ ಮೇನಿಯದ ಬೂಸ್ಟ್ ತುಂಬಲು ಸಿದ್ದರಾಮಯ್ಯಗೆ ಕೌಂಟರ್ ಹೊಡೆಯಲು ಡಿಕೆಶಿ ಈ ಯತ್ನ ಮಾಡುತ್ತಿದ್ದಾರೆ. ಶತಾಯಗತಾಯ ಪ್ರಿಯಾಂಕಾ ಗಾಂಧಿಯನ್ನು ಕರೆತರುವುದು ಡಿಕೆಶಿ ಲೆಕ್ಕಾಚಾರ ಎನ್ನಲಾಗುತ್ತಿದೆ. ಆದ್ದರಿಂದ ಪ್ರಿಯಾಂಕಾ ಗಾಂಧಿಯವರು ಆಗಸ್ಟ್ 15ಕ್ಕೆ ಫ್ರೀಡಂ ಮಾರ್ಚ್‍ಗೆ ಬರಲೇಬೇಕು ಎಂದು ಡಿಕೆಶಿ ಎಐಸಿಸಿ ಮೇಲೆ ಒತ್ತಡ ಹೇರ ತೊಡಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮಲೆಮಹದೇಶ್ವರನ ಭಕ್ತರಿಗೆ ಗುಡ್ ನ್ಯೂಸ್ – ಮಾದಪ್ಪನ ಬೆಟ್ಟಕ್ಕೆ ಮೆಟ್ಟಿಲುಗಳ ನಿರ್ಮಾಣ

    ದಾವಣಗೆರೆಯಲ್ಲಿ ಇತ್ತೀಚಿಗಷ್ಟೇ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನೋತ್ಸವದಲ್ಲಿ ಅವರ ಸಹೋದರ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾಗವಹಿಸಿದ್ದರು. ಇದೀಗ ಆಗಸ್ಟ್ 15 ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ‘ಸ್ವಾತಂತ್ರ್ಯ ನಡಿಗೆ’ಯಲ್ಲಿ ಪಾಲ್ಗೊಳ್ಳುವಂತೆ ಪ್ರಿಯಾಂಕಾಗೆ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದು ರಾಜ್ಯಾದ್ಯಂತ ಒಂದು ವಾರದಿಂದ ನಡೆಯುತ್ತಿರುವ ಕಾಂಗ್ರೆಸ್‍ನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪಾದಯಾತ್ರೆಯ ಸಮಾರೋಪ ಸಮಾರಂಭವಾಗಿದೆ

    Live Tv
    [brid partner=56869869 player=32851 video=960834 autoplay=true]

  • ಸಿಎಂ ಆಯ್ಕೆ ಮಾಡೋದು ಶಾಸಕರು, ಹೈಕಮಾಂಡ್: ಎಂ.ಬಿ.ಪಾಟೀಲ್

    ಸಿಎಂ ಆಯ್ಕೆ ಮಾಡೋದು ಶಾಸಕರು, ಹೈಕಮಾಂಡ್: ಎಂ.ಬಿ.ಪಾಟೀಲ್

    ಬೆಂಗಳೂರು: ಸಿಎಂ ಸ್ಥಾನಕ್ಕೆ ಯಾರು ಬೇಕಾದರು ಆಸೆ ಪಡಬಹುದು ಆದರೆ ಸಿಎಂ ಆಯ್ಕೆ ಮಾಡುವುದು ಶಾಸಕರು ಹಾಗೂ ಹೈಕಮಾಂಡ್ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆಯಾ ಸಮುದಾಯದ ನಾಯಕರು ಆಯಾ ಸಮುದಾಯದ ಬೆಂಬಲ ಕೇಳುವುದು ತಪ್ಪಲ್ಲ. ಕಾಂಗ್ರೆಸ್‍ನಲ್ಲಿ ಯಾರೇ ಸಿಎಂ ಅಭ್ಯರ್ಥಿ ಅಂದರೂ, ಅಂತಿಮವಾಗಿ ತೀರ್ಮಾನ ಮಾಡುವುದು ಕಾಂಗ್ರೆಸ್ ಹೈಕಮಾಂಡ್. ಜಮೀರ್ ಅಹಮ್ಮದ್ ಪದೇ, ಪದೇ ಹೇಳಿಕೆ ಕೊಡುತ್ತಿರುವ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸಿಎಂ ಅರ್ಹತೆ ಇರುವವರು ಇದ್ದರು, ಮೊದಲು ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಅಲ್ಲಿ ಶಾಸಕಾಂಗ ಪಕ್ಷದ ನಾಯಕ ಆಯ್ಕೆ ಆಗಿ ಅವರು ಸಿಎಂ ಆಗುತ್ತಾರೆ ಅದನ್ನು ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಎಲ್ಲಾ 224 ಶಾಸಕರು ಸಿಎಂ ಸ್ಥಾನದ ಆಕಾಂಕ್ಷಿಗಳು ಎನ್ನುವ ಡಿಕೆಶಿ ಹೇಳಿಕೆ ಸರಿ ಇದೆ. ಎಲ್ಲರು ಆಕಾಂಕ್ಷಿಗಳಾಗಿರುತ್ತಾರೆ ಎಂದು ಹೇಳಿದ್ದಾರೆ.

    ಪಕ್ಷದಲ್ಲಿ ಸಮೂಹಿಕ ನಾಯಕತ್ವ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು ಸರಿಯಾಗಿದೆ. ನಾನು ಅದನ್ನೆ ಹೇಳಿದ್ದು ಖರ್ಗೆ ಅವರು ಹೇಳಿದ್ದು ಸ್ವಾಭಾವಿಕ ಶಾಸಕಾಂಗ ಪಕ್ಷದಲ್ಲಿ ಶಾಸಕರು ನಿರ್ಧಾರ ಮಾಡುತ್ತಾರೆ. ಅವರು ಹಿರಿಯ ನಾಯಕರು ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಅವಕಾಶ ಕೊಡುತ್ತಾರೋ ಅವರು ಸಿಎಂ ಆಗುತ್ತಾರೆ. ಶಾಸಕರು ಹಾಗೂ ಹೈಕಮಾಂಡ್ ಖರ್ಗೆ ಅಥವಾ ಬೇರೆ ಯಾರದೇ ಹೆಸರು ಹೇಳಿದರೂ, ಅವರೇ ಸಿಎಂ ಆಗುತ್ತಾರೆ ಎಂದಿದ್ದಾರೆ.  ಇದನ್ನೂ ಓದಿ: ದೇಶಕ್ಕಾಗಿ ಮನೆಯವರನ್ನೇ ಕಳೆದುಕೊಂಡವರು ಹಣಕ್ಕಾಗಿ ಅವ್ಯವಹಾರ ಮಾಡುತ್ತಾರೇನ್ರಿ: ಖರ್ಗೆ

    ಯಡಿಯೂರಪ್ಪನವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ. ಯಡಿಯೂರಪ್ಪ ಅವರಿಗೆ ಬೇರೆ ಏನು ಮಾರ್ಗ ಇದೆ ಹೇಳಿ, ಅವರನ್ನು ಅವಧಿಗೆ ಮುನ್ನವೇ ಸಿಎಂ ಸ್ಥಾನದಿಂದ ತೆಗೆದರು. ರಾಜೀನಾಮೆ ಕೊಡುವ ಪರಿಸ್ಥಿತಿ ತಂದಿಟ್ಟರು. ಬಿಜೆಪಿಯನ್ನು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಯಶಸ್ವಿಯಾಗಿ ಕೆಳ ಮಟ್ಟದಿಂದ ಕಟ್ಟಿದವರು, ಸುದೀರ್ಘ ಹೋರಾಟದಿಂದ ಅಧಿಕಾರಕ್ಕೆ ತಂದಂತಹ ಅವರ ಕೈಯಲ್ಲಿ ರಾಜೀನಾಮೆ ಕೊಡಿಸಿದರು. ಅವರ ಕೈಯಲ್ಲಿ ಆಪರೇಷನ್ ಕಮಲದಂತ ಕೆಟ್ಟ ಕೆಲಸ ಮಾಡಿಸಿದರು ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಗ್ಯಾಂಗ್ ರೇಪ್ – ನಾಲ್ವರು ರೈಲ್ವೆ ಸಿಬ್ಬಂದಿ ಅರೆಸ್ಟ್

    ಮೊದಲು ಸಿಎಂ ಆಗಿದ್ದಾಗ ಅವರು ಅವಧಿ ಪೂರ್ಣ ಮಾಡಲಿಲ್ಲ. ಜೈಲಿಗೆ ಹೋದರು. ಕೇಸು ಅಂತ ತೆಗೆದು ಹಾಕಿದರು. ಈ ಬಾರಿಯು ಅವಧಿ ಪೂರ್ಣ ಮಾಡಲಿಲ್ಲ. ಈ ಬಾರಿಯು ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಅವರನ್ನು ಉಪಯೋಗಿಸಿಕೊಂಡು ಸಿಎಂ ಸ್ಥಾನದಿಂದ ತೆಗೆದು ಹಾಕಲಾಯಿತು. ಅವರನ್ನು ಮೂಲೆಗುಂಪು ಮಾಡಲಾಯಿತು. ಹೇಗಿದ್ದರೂ, ಮುಂದೆ 75 ವರ್ಷದ ಕಾರಣ ನೀಡಿ ಇವರಿಗೆ ಅವಕಾಶ ನಿರಾಕರಿಸುತ್ತಾರೆ. ಅವರಿಗೆ ಒತ್ತಡ ನೀಡಿ ಸಿಎಂ ಸ್ಥಾನದಿಂದ ಕೆಳಗಿಳಿಸಿದರು ಮತ್ತು ಅವರನ್ನು ಮೂಲೆ ಗುಂಪು ಮಾಡಿದರು ಎಂದು ತಿಳಿಸಿದ್ದಾರೆ.

    ಸ್ಬಾಭಾವಿಕವಾಗಿ ಶಿಕಾರಿಪುರದಿಂದ ತಮ್ಮ ಪುತ್ರ ಸ್ಪರ್ಧೆ ಮಾಡುತ್ತಾರೆ ಎಂದು ಘೋಷಿಸಿದರು. ಅವರನ್ನು ಯಾವ ರೀತಿ ದೆಹಲಿಗೆ ಕರೆಸಿಕೊಂಡರು. ಮೊದಲೇ ರಾಷ್ಟ್ರೀಯ ವಾಹಿನಿ ಮೂಲಕ ರಾಜೀನಾಮೆ ಕೊಟಿದ್ದಾರೆ ಅಂತ ಮೊದಲೇ ಲೀಕ್ ಮಾಡಿದರು. ಅವರ ಆತ್ಮ ಸ್ಥೈರ್ಯ ಕುಗ್ಗಿಸಿದರು. ಅವರನ್ನು ಕೆಳಗೆ ಇಳಿಸಿದರು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮೋತ್ಸವ ಸಮಾವೇಶಕ್ಕಾಗಿ ವಿವಿಧ ಸಮಿತಿಗಳ ರಚನೆ – ಡಿಕೆಶಿಗಿಲ್ಲ ಸ್ಥಾನ

    ಸಿದ್ದರಾಮೋತ್ಸವ ಸಮಾವೇಶಕ್ಕಾಗಿ ವಿವಿಧ ಸಮಿತಿಗಳ ರಚನೆ – ಡಿಕೆಶಿಗಿಲ್ಲ ಸ್ಥಾನ

    ಬೆಂಗಳೂರು: ಸಿದ್ದರಾಮೋತ್ಸವ ಸಮಾವೇಶಕ್ಕಾಗಿ ವಿವಿಧ ಸಮಿತಿಗಳ ರಚನೆಯಾಗಿದ್ದು, ಯಾವ ಸಮಿತಿಯಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಸ್ಥಾನವಿಲ್ಲ. ಉಳಿದಂತೆ ಮಲ್ಲಿಕಾರ್ಜುನ ಖರ್ಗೆ ಹೊರತುಪಡಿಸಿ ಬಹುತೇಕ ಕಾಂಗ್ರೆಸ್‍ನ ಎಲ್ಲಾ ಪ್ರಮುಖ ನಾಯಕರಿಗೆ ವಿವಿಧ ಸಮಿತಿಗಳಲ್ಲಿ ಅವಕಾಶ ನೀಡಲಾಗಿದೆ.

    ಮಾಜಿ ಸಚಿವರು, ಹಾಲಿ ಮಾಜಿ ಶಾಸಕರಿಗೆ ವಿವಿಧ ಸಮಿತಿಗಳಲ್ಲಿ ಸ್ಥಾನ ನೀಡಲಾಗಿದ್ದು, ಪಕ್ಷದಿಂದ ಹೊರ ಹೋಗಲು ಮುಂದಾಗಿರುವ ಎಂ.ಆರ್.ಸೀತಾರಾಂಗೂ ಅವಕಾಶ ದೊರೆತಿದೆ. ಅಷ್ಟೇ ಅಲ್ಲದೇ ನಿರೀಕ್ಷೆಯಂತೆ ಸಿದ್ದರಾಮಯ್ಯ ವಿರೋಧಿ ಪಾಳಯದಲ್ಲಿರುವ ಕೆ.ಹೆಚ್.ಮುನಿಯಪ್ಪ, ಎಸ್.ಆರ್.ಪಾಟೀಲ್ ಹಾಗೂ ಬಿ.ಕೆ.ಹರಿಪ್ರಸಾದ್‍ಗೂ ಸ್ಥಾನವಿಲ್ಲ. ಆದರೆ ಅಚ್ಚರಿ ಮೂಡಿಸುಂತೆ ಸ್ವಾಗತ ಸಮಿತಿಯಲ್ಲಿ ಸಂಸದ ಡಿ.ಕೆ.ಸುರೇಶ್‍ಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ.

    SIDDARAMAIAH

    ಈ ಪಟ್ಟಿಯ ಅನುಸಾರ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರು ಸಿದ್ದರಾಮೋತ್ಸವದ ಗೌರವಧ್ಯಕ್ಷರಾಗಿದ್ದು, ಕೆ. ಎನ್. ರಾಜಣ್ಣ, ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮಹಾಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ರಾಯರಡ್ಡಿ, ಖಜಾಂಚಿಯಾಗಿ ಭೈರತಿ ಸುರೇಶ್, ಸುದ್ದಿ ಮಾಧ್ಯಮ ಸಮಿತಿಯ ಅಧ್ಯಕ್ಷರಾಗಿ ಪಿ.ಜಿ. ಆರ್. ಸಿಂಧ್ಯಾ, ಪ್ರಚಾರ ಸಮಿತಿ ಸದಸ್ಯರಾಗಿ ವಿ. ಆರ್. ಸುದರ್ಶನ್, ಕಾರ್ಯಕ್ರಮ ಮತ್ತು ವೇದಿಕೆ ಸಮಿತಿ ಅಧ್ಯಕ್ಷರಾಗಿ ಬಿ. ಎಲ್. ಶಂಕರ್ ಹಾಗೂ ಸಾಹಿತ್ಯ ಸಮಿತಿ ಪದನಿಮಿತ್ತ ಅಧ್ಯಕ್ಷರಾಗಿ ಡಾ. ಎಲ್. ಹನುಮಂತಯ್ಯ ಅವರನ್ನು ನೇಮಕ ಮಾಡಲಾಗಿದೆ. ಇದನ್ನೂ ಓದಿ: ಪಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರ ಆದೇಶ

    Congress

    ಉಳಿದಂತೆ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ, ಅಧ್ಯಕ್ಷರಾಗಿ ಹೆಚ್.ಸಿ. ಮಹದೇವಪ್ಪ, ಸಂಚಾಲಕರಾಗಿ ಮಲ್ಲಿಕಾರ್ಜುನ ಶಾಮನೂರು ಅವರು ಆಯ್ಕೆ ಆಗಿದ್ದಾರೆ. ಉಳಿದಂತೆ ಕಾಗೋಡು ತಿಮ್ಮಪ್ಪ, ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್, ಕೆ. ಜೆ. ಜಾರ್ಜ್, ಎಂ. ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಕೆ. ಆರ್. ರಮೇಶ್ ಕುಮಾರ್, ಎಂ. ಸಿ. ನಾಣಯ್ಯ, ಅಲ್ಲಮ್ ವೀರಭದ್ರಪ್ಪ, ಕೆ. ಬಿ. ಕೋಳಿವಾಡ್, ಟಿ. ಬಿ. ಜಯಚಂದ್ರ, ಬಿ. ಆರ್. ಯಾವಗಲ್, ಜಮೀರ್ ಅಹ್ಮದ್, ಮೋಟಮ್ಮ, ರಾಣಿ ಸತೀಶ್, ಪ್ರಕಾಶ್ ಹುಕ್ಕೇರಿ, ಚಲುವರಾಯ ಸ್ವಾಮಿ, ವಿ. ಮುನಿಯಪ್ಪ, ಹೆಚ್. ಆಂಜನೇಯ, ಹೆಚ್.ವೈ. ಮೇಟಿ, ಗೊವಿಂದರಾಜ್ ಎಮ್.ಎಲ್.ಸಿ ಸಾಗತ ಸಮಿತಿಯಲ್ಲಿ ಸದಸ್ಯರ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ನೌಕಾಪಡೆ ಆಫೀಸರ್ ಎಂದು ಕಾರವಾರ ನೆಲೆಗೆ ನುಗ್ಗಲು ಯತ್ನಿಸಿದವ ಅರೆಸ್ಟ್‌

    Live Tv
    [brid partner=56869869 player=32851 video=960834 autoplay=true]

  • ನನ್ನ ಮೇಲೆ ಯಾವ ಕೇಸ್ ಇತ್ತು, ಹೆಂಗೆ ನನ್ನ ಜೈಲಿಗೆ ಕಳಿಸಿದ್ರು, ನನ್ನ ಮೇಲೆ ಯಾವ ದಾಖಲೆ ಇದೆ: ಡಿಕೆಶಿ

    ನನ್ನ ಮೇಲೆ ಯಾವ ಕೇಸ್ ಇತ್ತು, ಹೆಂಗೆ ನನ್ನ ಜೈಲಿಗೆ ಕಳಿಸಿದ್ರು, ನನ್ನ ಮೇಲೆ ಯಾವ ದಾಖಲೆ ಇದೆ: ಡಿಕೆಶಿ

    ಬೆಂಗಳೂರು: ನನ್ನ ವಿರುದ್ಧ ಕೇಸ್ ಹಾಕಿದಾಗ ನನ್ನ ವಿರುದ್ಧ ಯಾರಾದರೂ ಕಾಗದ ಬರೆದಿದ್ದಾರಾ? ಅಥವಾ ಯಾವುದಾದರೂ ತನಿಖೆ ಆಗಿದೆಯೇ, ಆದರೂ ಹೇಗೆ ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರ ವಿರುದ್ಧ ಗುತ್ತಿಗೆದಾರರು ಮಾಡಿದ ಕಮಿಷನ್ ಆರೋಪ ಮಾಡಿ ಕಾಗದ ಬರೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿ, ನನ್ನ ವಿರುದ್ಧ ಯಾವುದೇ ದಾಖಲೆಯಿಲ್ಲದೇ ನನ್ನನ್ನು ಜೈಲಿಗೆ ಕಳಿಸಿದ್ದಾರೆ. ನನ್ನ ಮೇಲೆ ಯಾವ ದಾಖಲೆ ಇದೆ. ನಾನು ಏನು ಕೊಲೆ ಮಾಡಿದ್ದೀನಾ? ರೇಪ್ ಮಾಡಿದ್ದೀನಾ? ಲಂಚದ ಕೇಸ್ ಏನಾದರೂ ಇತ್ತಾ, ಆದರೂ ನನ್ನನ್ನು ಒಳಗೆ ಹಾಕಲಿಲ್ಲವೇ. ಆ ಸಂದರ್ಭದಲ್ಲಿ ನನ್ನ ವಿರುದ್ಧ ಯಾವುದಾದರೂ ಕಮಿಷನ್ ವರದಿ ಕೊಟ್ಟಿತ್ತಾ? ನನ್ನ ವಿರುದ್ಧ ಯಾವುದಾದರೂ ಪತ್ರ ಬರೆದಿದ್ದಾರಾ ಎಂದು ವಾಗ್ದಾಳಿ ನಡೆಸಿದರು.

    ಈಶ್ವರಪ್ಪನವರ ವಿರುದ್ಧ ಕೇಳಿಬಂದ ಕಮಿಷನ್ ಆರೋಪಕ್ಕೆ ಬಿಜೆಪಿ ಏನು ಕ್ರಮಗೊಳ್ಳುತ್ತಾರೆ ಎಂದು ನೋಡೋಣ. 40% ಕಮಿಷನ್ ವಿಚಾರದ ಬಗ್ಗೆ ಈಶ್ವರಪ್ಪನವರ ವಿರುದ್ಧದ ಆರೋಪದ ಬಗ್ಗೆ ಶಾಸಕಾಂಗ ಪಕ್ಷದ ನಾಯಕರು ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಏನು ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ. ಆನಂತರದಲ್ಲಿ ನಾವು ಮುಂದಿನ ಕ್ರಮ ಕೈಗೊಳ್ಳುವುದರ ಕುರಿತು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಟಿಪ್ಪು ಬಗ್ಗೆ ಶೃಂಗೇರಿ ಮಠಕ್ಕೆ ಹೋಗಿ ಕೇಳಲಿ ಕೊಲ್ಲೂರಿನಲ್ಲಿ ತಿಳಿದುಕೊಳ್ಳಲಿ: ಡಿಕೆಶಿ

    ಈಶ್ವರಪ್ಪನವರ ಮೇಲೆ ಆರೋಪ ಮಾಡಿರುವುದು ಷಡ್ಯಂತ್ರ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಸರ್ಕಾರದ ವಿರುದ್ಧ ಈಶ್ವರಪ್ಪನವರೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಆಗ ಅವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದಾರೆ. ಯತ್ನಾಳ್ ಹಾಗೂ ವಿಶ್ವಾಥ್ ಕೂಡಾ ಸರ್ಕಾರದ ವಿರುದ್ಧ ಮಾತನಾಡಿದ್ದರು, ಅವರಿಗೆ ಬುದ್ಧಿ ಇಲ್ಲವಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾರವಾರ ಬಂದರು ವಿಸ್ತರಣೆ ಕಾಮಗಾರಿ ಮುಂದುವರಿಸಬೇಡಿ – ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ

  • ಬಿಜೆಪಿಯಿಂದ ನಿತ್ಯ ಪಿಕ್ ಪಾಕೆಟ್ ನಡೀತಿದೆ: ಡಿಕೆಶಿ

    ಬಿಜೆಪಿಯಿಂದ ನಿತ್ಯ ಪಿಕ್ ಪಾಕೆಟ್ ನಡೀತಿದೆ: ಡಿಕೆಶಿ

    ಕೊಪ್ಪಳ: ರಾಜ್ಯ, ದೇಶದಲ್ಲಿ ನಿತ್ಯ ಪಿಕ್ ಪಾಕೆಟ್ ನಡೀತಾ ಇದೆ. ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಳ ಮಾಡುವ ಮೂಲಕ ಆಡಳಿತದಲ್ಲಿರುವ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಕೊಪ್ಪಳದ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ನಡೆದ ಕಾಂಗ್ರೆಸ್‍ನ ಡಿಜಿಟಲ್ ಸದಸ್ಯತ್ವ ನೋಂದಣಿಯ ಪ್ರಗತಿ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ರಾಜ್ಯದಲ್ಲೇ ಹೆಚ್ಚಾಗಿರುವುದು ಸಂತೋಷದ ಸಂಗತಿ. ಅದರಲ್ಲೂ ಗಂಗಾವತಿ ವಿಧಸನಸಭಾ ಕ್ಷೇತ್ರ, ರಾಮನಗರವನ್ನೆ ಮೀರಿಸಿದೆ ಎಂದರೆ ಜನ ಬಿಜೆಪಿ ಆಡಳಿತದಿಂದ ಎಷ್ಟು ರೋಸಿ ಹೋಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.

    ಬಿಜೆಪಿಯದ್ದು ಭ್ರಷ್ಟ ಸರ್ಕಾರ. ಎಲ್ಲದರಲ್ಲೂ ಪರ್ಸೆಂಟೇಜ್. ಜನರಿಗೆ ಕರೆಂಟ್ ಕಟ್. ಜನರ ಜೇಬೂ ಕಟ್. ಈಗ ಪುನೀತ್ ಸಿನಿಮಾ ಜೇಮ್ಸ್ ಕಿತ್ತು ಹಾಕಲು ಹೊರಟಿದ್ದಾರೆ. ಇದು ಕನ್ನಡದ ಸ್ವಾಭಿಮಾನದ ಪ್ರಶ್ನೆ. ಬಿಜೆಪಿ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ

    ಇವತ್ತಿನವರೆಗೆ ಕೊಪ್ಪಳ ಜಿಲ್ಲೆಯಲ್ಲಿ 1,84,302 ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿಯಾಗಿದೆ. ಅತಿ ಹೆಚ್ಚು ಜನರನ್ನು ನೋಂದಣಿ ಮಾಡಿದವರನ್ನು ಇಲ್ಲಿಯೇ ಸನ್ಮಾನ ಮಾಡುವುದು ದೊಡ್ಡ ವಿಷಯವಲ್ಲ, ಇನ್ನೂ 7 ದಿನ ಸಮಯಾವಕಾಶ ಇದೆ. ಈ ಸಮಯವನ್ನು ಕಾಂಗ್ರೆಸ್ ಬಂಧುಗಳು ಸದುಪಯೋಗ ಪಡೆದುಕೊಳ್ಳಬೇಕು. ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿದವರನ್ನು ರಾಜಧಾನಿ ಬೆಂಗಳೂರಿಗೆ ಆಹ್ವಾನಿಸಿ ಗೌರವಿಸುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ

    ಅವರಿವರನ್ನು ಟೀಕೆ ಮಾಡುವ ಬದಲು ಮೊದಲಿಗೆ ನಮ್ಮ ಮನೆಯನ್ನು ಸುಭದ್ರವಾಗಿ ಕಟ್ಟೋಣ. ಆನಂತರ ಇನ್ನೊಬ್ಬರ ಮನೆ ವಿಚಾರದ ಬಗ್ಗೆ ಮಾತಾಡೋಣ. ಮುಂಬರುವ 7 ದಿನಗಳಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ 1 ಲಕ್ಷ ಸದಸ್ಯತ್ವ ನೋಂದಣಿಯಾಗಲಿ. ಬಿಜೆಪಿ, ದಳ ಸೇರಿದಂತೆ ಎಲ್ಲ ಕಾರ್ಯಕರ್ತರನ್ನು ಕಾಂಗ್ರೆಸ್‍ಗೆ ಕರೆ ತನ್ನಿ. ನಮ್ಮಷ್ಟಕ್ಕೆ ನಾವೇ ಕಾಲು ಎಳೆಯದಿದ್ದರೆ ಜಿಲ್ಲೆಯ 5ಕ್ಕೆ 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.

    ಇದೇ ವೇಳೆ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿಸಿದ ಗಂಗಾವತಿ ವಿಧಾನಸಭಾ ಕ್ಷೇತ್ರದ ಮುಖಂಡರು, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಮಾತನಾಡಿ, ಸದಸ್ಯತ್ವ ನೋಂದಣಿಗೆಂದು ಮನೆ ಮನೆಗೆ ತೆರಳುವ ನಮ್ಮ ಕಾಂಗ್ರೆಸ್ ಮುಖಂಡರಿಗೆ ಜನರಿಂದ ಅದ್ದೂರಿ ಸ್ವಾಗತ ಸಿಗುತ್ತಿದೆ. ಬಿಜೆಪಿಯವರು ಜಾತಿ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ಹೇಳಿ ಸಂತೋಷದಿಂದ ಕಾಂಗ್ರೆಸ್ ಸದಸ್ಯತ್ವ ಪಡೆಯುತ್ತಿದ್ದಾರೆ. ಸದಸ್ಯತ್ವ ನೋಂದಣಿಯ ಸಾಧನೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

  • ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ

    ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿಕೆಶಿ

    ಕೊಪ್ಪಳ: ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಭಗವದ್ಗೀತೆ ನಮ್ಮ ದೇಶದ ಅಸ್ಮೀತೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಧರ್ಮ ಗ್ರಂಥವನ್ನ ಪಠ್ಯದಲ್ಲಿ ಅಳವಡಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಇಡೀ ದೇಶಕ್ಕೆ ರಾಮಾಯಣ, ಮಹಾಭಾರತ ಪರಿಚಯ ಮಾಡಿಕೊಟ್ಟಿದ್ದೆ ಕಾಂಗ್ರೆಸ್. ದೂರದರ್ಶನದ ಮೂಲಕ ಭಗವದ್ಗೀತೆಯನ್ನು ಪ್ರಚಾರ ಮಾಡಿದ್ದು ನಮ್ಮ ಪಕ್ಷ. ಇದರ ಜೊತೆಗೆ ದೇಶದ ಎಲ್ಲಾ ಧರ್ಮವನ್ನ ಕಾಂಗ್ರೆಸ್ ಗೌರವಿಸಿತ್ತದೆ ಎಂದಿದ್ದಾರೆ. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ

    ಇದೇ ವೇಳೆ ನಮ್ಮ ನಿರೀಕ್ಷೆಯಷ್ಟು ಡಿಜಿಟಲ್ ಸದಸ್ಯತ್ವ ಮಾಡಿಸುತ್ತೇವೆ. ಇನ್ನೂ 7 ದಿನ ಸಮಯ ಇದೆ. ನಾವು ನಿರೀಕ್ಷೆ ರೀಚ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತ್ರಕರ್ತರಿಗೆ ಮಧ್ಯರಾತ್ರಿಯ ಸರ್ಪ್ರೈಸ್ ಕೊಟ್ಟ RRR ಟೀಮ್..!

  • ಮೊದಲು ಮಕ್ಕಳ ಭವಿಷ್ಯ ಮುಖ್ಯ, ಆಮೇಲೆ ರಾಜಕೀಯ: ಡಿಕೆಶಿ

    ಮೊದಲು ಮಕ್ಕಳ ಭವಿಷ್ಯ ಮುಖ್ಯ, ಆಮೇಲೆ ರಾಜಕೀಯ: ಡಿಕೆಶಿ

    ಚಿಕ್ಕಬಳ್ಳಾಪುರ: ಮೊದಲು ಮಕ್ಕಳ ವಿದ್ಯಾಭ್ಯಾಸ ಅವರ ಭವಿಷ್ಯ ಮುಖ್ಯ. ರಾಜಕೀಯ ಆಮೇಲೆ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

    ದೆಹಲಿಯಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಡಿಕೆಶಿವಕುಮಾರ್ ಅವರು ಹಿಜಬ್ ತೀರ್ಪು ಕುರಿತಂತೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ತೀರ್ಪಿನ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಯಾವುದೇ ರಾಜಕೀಯ ಪಕ್ಷ ತೀರ್ಪುನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದು. ಆದರೆ ತೀರ್ಪು ತೀರ್ಪೆ. ತೀರ್ಪನ್ನು ಎಲ್ಲರೂ ಕೂಡ ಗೌರವದಿಂದ ಸ್ವೀಕಾರ ಮಾಡಬೇಕು ಎಂದಿದ್ದಾರೆ.

    ತೀರ್ಪಿನಲ್ಲಿ ಮಾಡಿರುವ ಸಂಪೂರ್ಣವಾದ ಉಲ್ಲೇಖಗಳನ್ನು ನೋಡದೇ ನಾನು ರಾಜಕೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ಪ್ರತಿಕ್ರಿಯೆ ನೀಡಲಾರೆ. ನಮ್ಮ ಹಿರಿಯ ನಾಯಕರ ಜೊತೆ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ. ನಮಗೆ ಶಾಂತಿ ಬೇಕು, ಮಕ್ಕಳ ವಿದ್ಯಾಭ್ಯಾಸ ಮುಖ್ಯವೇ ಹೊರತು ರಾಜಕೀಯ ಎಲ್ಲ ಆಮೇಲೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ಕುರಿತ ಹೈಕೋರ್ಟ್‌ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್‌ ಮಾಡಿದ ಓವೈಸಿ

    ಮತ್ತೊಂದೆಡೆ ಹಿಜಬ್ ಕುರಿತಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಜಬ್ ವಿವಾದದಲ್ಲಿ ನನ್ನ ಪ್ರಮುಖ ಕಾಳಜಿ ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆಯಾಗಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆ, ಕೋಮು ಸೌಹಾರ್ದತೆಯ ಜವಾಬ್ದಾರಿ ಇನ್ನೂ ಕರ್ನಾಟಕ ಸರ್ಕಾರದ ಮೇಲಿದೆ ಎಂದಿದ್ದಾರೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬೆನ್ನಲ್ಲೇ ಪರೀಕ್ಷೆ ಬಿಟ್ಟು ಹೊರ ನಡೆದ ವಿದ್ಯಾರ್ಥಿನಿಯರು

    ನಾನು ಕರ್ನಾಟಕ ಸರ್ಕಾರಕ್ಕೆ ಪ್ರಬುದ್ಧ ನಾಯಕತ್ವವನ್ನು ಪ್ರದರ್ಶಿಸಲು ಮತ್ತು ಖಚಿತಪಡಿಸಿಕೊಳ್ಳಲು ಮನವಿ ಮಾಡುತ್ತೇನೆ.
    1) ಶಾಲೆಗಳು ಮತ್ತು ಕಾಲೇಜುಗಳ ಸುತ್ತಮುತ್ತ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಬೇಕಾಗುತ್ತದೆ.
    2) ಧರ್ಮ ಮತ್ತು ಲಿಂಗದ ಲೆಕ್ಕದ ಮೇಲೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ.
    3) ಕೋಮು ಸೌಹಾರ್ದತೆ ಇದೆ.

     

  • ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ

    ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ

    ಚಿಕ್ಕಬಳ್ಳಾಪುರ: ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ, ಬತ್ತಳಿಕೆ ಅವರೇ ಮಾಡಿಕೊಂಡವ್ರೆ ನಾನು ಕೇವಲ ಮತದಾರ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆ ಫಲಿತಾಂಶ ನಮಗೆ ಸಮಾಧಾನ ತಂದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ರವಿ ಕಣಕ್ಕಿಳಿಸಿದ್ದೇವು. ರವಿಗೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮತ ಹಾಕಿದ್ದಾರೆ. ಕೇವಲ ಕಾಂಗ್ರೆಸ್ ಪಕ್ಷದವರು ಮಾತ್ರ ವೋಟು ಹಾಕಿಲ್ಲ. ಪಕ್ಷೇತರ ಬಿಜೆಪಿ ಜನತಾದಳದವರು ವೋಟು ಹಾಕಿ ರವಿ ಗೆಲುವು ಸಾಧಿಸಿದ್ದಾರೆ. ಇದರಿಂದ ಭಾರೀ ಅಂತರದಿಂದ ರವಿ ಗೆಲುವು ಸಾಧಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ: ಡಿಕೆಶಿ

    ರಾಜ್ಯದಲ್ಲಿ 11 ಸ್ಥಾನ ಗೆದ್ದಿದ್ದೇವೆ. ಡಬಲ್ ಡಿಜಿಟ್ ಕ್ರಾಸ್ ಮಾಡುವುದಾಗಿ ನಾನು ಹೇಳಿದ್ದೆ. ಇನ್ನೂ ಮೂರು ಸೀಟು ಗೆಲ್ಲುವ ಎಲ್ಲಾ ಸಾಧ್ಯತೆ ಇತ್ತು. ನಮ್ಮ ಲೆಕ್ಕಾಚಾರ ತಪ್ಪಿರುವುದರಿಂದ ಮೂರು ಸೀಟು ಕಳೆದುಕೊಂಡಿದ್ದೇವೆ. ಚಿಕ್ಕ ಅಂತರದಿಂದ ಗುಲ್ಬರ್ಗ ಚಿಕ್ಕ ಮಗಳೂರು ಕೊಡಗು ಕಳೆದುಕೊಂಡಿದ್ದೇವೆ. 12-13 ಅಂತ ನೀರೀಕ್ಷೆ ಇತ್ತು. ಆದರೂ 11 ಸಮಾಧಾನಕಾರ ತಂದಿದೆ. ಹಳೇ ಮೈಸೂರು ಭಾಗದ ಫಲಿತಾಂಶದ ಬಗ್ಗೆ ವಿಶ್ಲೇಷಣೆ ಬೇಡ. ಮಂಡ್ಯದಲ್ಲಿ ಸಹ ಎಲ್ಲಾ ಪಕ್ಷದವರು ನಮಗೆ ಸಹಾಯ ಮಾಡಿದ್ದಾರೆ. ಚುನಾವಣೆಯಲ್ಲಿ ಮತ ಹಾಕಿದವರು ನಾಯಕರು, ಜನ ಪ್ರತಿನಿಧಿಗಳು ಕಾಂಗ್ರೆಸ್ ಪಕ್ಷ ಬರಲಿ ಅಂತ ಇಷ್ಟು ಸೀಟು ಕೊಟ್ಟಿದ್ದಾರೆ. ಇದು ರಾಜ್ಯಕ್ಕೆ ಯಾವ ದಿಕ್ಕಿನಲ್ಲಿ ಜನ ಸಾಗುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಪರೋಕ್ಷವಾಗಿ ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದರು. ಇದನ್ನೂ ಓದಿ:  ನಾನು ಹೇಳಿದ್ದು ನಿಜವಾಗಿದೆ, ಬೊಮ್ಮಾಯಿ ನಾಯಕತ್ವಕ್ಕೆ ಬೆಂಬಲ: ಬಿಎಸ್‌ವೈ

    ಇದೇ ವೇಳೆ ಕುಮಾರಸ್ವಾಮಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಕುಮಾರಸ್ವಾಮಿ ನಂಬಿಕೆ ಅವರ ನಂಬಿಕೆ ಅವರದ್ದು, ನಮ್ಮ ನಂಬಿಕೆ ನಮ್ಮದು. ಕುಮಾರಸ್ವಾಮಿ ಅವರಿಗೆ ಓಳ್ಳೆಯದಾಗಲಿ ಎಂದು ಹೇಳಿದ್ದಾರೆ.