Tag: ಡಿಕೆ

  • ಕಣ್ಣು ಕುಕ್ಕುವಂತೆ ಪಡ್ಡೆಹುಡುಗರ ನಿದ್ದೆಗೆಡಿಸಿದ ಸೇಸಮ್ಮ ನಯಾ ಲುಕ್

    ಕಣ್ಣು ಕುಕ್ಕುವಂತೆ ಪಡ್ಡೆಹುಡುಗರ ನಿದ್ದೆಗೆಡಿಸಿದ ಸೇಸಮ್ಮ ನಯಾ ಲುಕ್

    ನೀಲಿ ತಾರೆಯಾಗಿ ಗುರುತಿಸಿಕೊಂಡಿದ್ದ ಸನ್ನಿ ಲಿಯೋನ್ (Sunny Leone) ಅವರು ಬಾಲಿವುಡ್ (Bollywood) ಸಿನಿಮಾ, ರಿಯಾಲಿಟಿ ಶೋ ಅಂತಾ ಸಿನಿಪರದೆಯಲ್ಲಿ ಮಿಂಚಿದ್ದರು. ಇದೀಗ ಪಡ್ಡೆಹುಡುಗರ ಮೋಹಕ ನಟಿ ಹಾಟ್ ಫೋಟೋಶೂಟ್ ಮೂಲಕ ಎಲ್ಲರ ಕಣ್ಣು ಕುಕ್ಕುವಂತೆ ಮಿಂಚ್ತಿದ್ದಾರೆ.

    ಪೋರ್ನ್ ಸ್ಟಾರ್ ಆಗಿ ಗಮನ ಸೆಳೆದ ಸನ್ನಿ ಇದೀಗ ಬಾಲಿವುಡ್‌ನ ಬೇಡಿಕೆಯ ನಟಿಮಣಿಯರಲ್ಲಿ ಒಬ್ಬರಾಗಿ ಸದ್ದು ಮಾಡ್ತಿದ್ದಾರೆ. ಹಿಂದಿ, ಸೌತ್ ಸಿನಿಮಾಗಳ ಜೊತೆ ಕನ್ನಡ ಚಿತ್ರಕ್ಕೂ ಕೂಡ ಮನ್ನಣೆ ಕೊಡ್ತಿದ್ದಾರೆ. ಕಳೆದ ವರ್ಷ ಕನ್ನಡದ ಡಿಂಗರ್ ಬಿಲ್ಲಿ ಎಂಬ ಹಾಡಿನಲ್ಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಿ ಜನಮನ ಗೆದ್ದಿದ್ದರು. ಇದನ್ನೂ ಓದಿ:ಶಿವಣ್ಣ ಜೊತೆ ಅಜಯ್ ರಾವ್ : ಫಸ್ಟ್ ಲುಕ್ ರಿಲೀಸ್

    ಸನ್ನಿ ಲಿಯೋನ್‌ಗೂ ಕನ್ನಡ ಸಿನಿಮಾಗೂ ನಂಟಿದೆ. ಕನ್ನಡ ಸಿನಿಮಾಗೆ ನಟಿ ಆದ್ಯತೆ ಕೊಡುತ್ತಾರೆ. ಪ್ರೇಮ್ ಅಡ್ಡಾದ ಡಿಕೆ (Dk) ಸಿನಿಮಾದಲ್ಲಿ ಸೇಸಮ್ಮಳಾಗಿ ಹೆಜ್ಜೆ ಹಾಕಿದ್ರು. ಬಳಿಕ ‘ಲವ್ ಯೂ ಆಲಿಯಾ’ ಚಿತ್ರದಲ್ಲಿ ಸೃಜನ್ ಲೋಕೇಶ್‌ಗೆ (Srujan Lokesh) ಜೊತೆ ಸನ್ನಿ ಸೊಂಟ ಬಳುಕಿದ್ದರು. ಬಳಿಕ ಚಾಂಪಿಯನ್ ಸಿನಿಮಾದಲ್ಲಿ ಡಿಂಗರ್ ಬಿಲ್ಲಿಯಾಗಿ ಬೇಬಿ ಡಾಲ್ ಕುಣಿದಿದ್ರು.

    ಹೀರೋಯಿನ್, ಮಹಿಳಾ ಪ್ರಧಾನ ಸಿನಿಮಾ, ಐಟಂ ಡ್ಯಾನ್ಸ್ ಎಲ್ಲದ್ದಕ್ಕೂ ನಟಿ ಆಧ್ಯತೆ ಕೊಡುತ್ತಾ ಮುಂದೆ ಸಾಗುತ್ತಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡಿದ್ದಾರೆ.

    ಇದೀಗ ಸನ್ನಿ ಲಿಯೋನ್ ಹೊಸ ಫೋಟೋಶೂಟ್‌ವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ, ಇಂಟರ್‌ನೆಟ್ ಶೇಕ್ ಮಾಡ್ತಿದೆ. ಕಪ್ಪು ಬಣ್ಣದ ಉಡುಗೆಯಲ್ಲಿ ಸನ್ನಿ ಹಾಟ್ ಹಾಟ್ ಆಗಿ ಪೋಸ್ ಕೊಡುವ ಮೂಲಕ ಗಮನ ಸೆಳೆದಿದ್ದಾರೆ. ಸನ್ನಿ ನಯಾ ಲುಕ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಎಸ್‌ವೈ ಭೇಟಿಯಾದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

    ಬಿಎಸ್‌ವೈ ಭೇಟಿಯಾದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

    ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ್ದಾರೆ.

    ಬಿಎಸ್‍ವೈ ಭೇಟಿ ನಂತರ ಮಾಧ್ಯಮದವರೊಂದಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಯಡಿಯೂರಪ್ಪ ನಮ್ಮ ಸಮಾಜದ ಹಿರಿಯರಾಗಿದ್ದಾರೆ. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಸಮಾಜದ ಬಗ್ಗೆಯೂ ಅವರ ಜತೆ ಚರ್ಚೆ ಮಾಡಿದ್ದೇನೆ. ಇದು ಒಂದು ಸೌಹಾರ್ದಯುತ ಭೇಟಿಯಾಗಿದೆ ಎಂದು ತಿಳಿಸಿದರು.

    ಬಿಎಸ್‍ವೈ ಭೇಟಿಯಲ್ಲಿ ರಾಜಕೀಯದ ವಿಚಾರ ಇರಲಿಲ್ಲ. ರಾಜಕಾರಣಕ್ಕೂ ಈ ಭೇಟಿಗೂ ಸಂಬಂಧ ಇಲ್ಲ. ಕೆಲವೊಂದು ವಿಚಾರಗಳ ಬಗ್ಗೆ ಅವರ ಸಲಹೆ ಪಡೆಯಲು ಬಂದಿದ್ದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮುಂದಿನ ವಾರ ಸೂಕ್ತ ಪೀಠದಲ್ಲಿ ಹಿಜಬ್ ಅರ್ಜಿ ವಿಚಾರಣೆ – ಸುಪ್ರೀಂಕೋರ್ಟ್

    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಳಂಬ ವಿಚಾರದ ಬಗ್ಗೆಯೂ ಯಡಿಯೂರಪ್ಪ ಬಳಿ ಚರ್ಚೆ ಮಾಡಿದ್ದೇನೆ. ತಾಂತ್ರಿಕ ಕಾರಣಕ್ಕೆ ಮೀಸಲಾತಿ ವಿಳಂಬ ಆಗಿದೆ. ಬೊಮ್ಮಾಯಿ ಅವರು ಬೇರೆ ಸಮುದಾಯಗಳಿಗೆ ತೊಂದರೆ ಆಗದಂತೆ ಮೀಸಲಾತಿ ಕೊಡುವ ಭರವಸೆ ನೀಡಿದ್ದಾರೆ. ಈ ಅವಧಿಯಲ್ಲೇ ಮೀಸಲಾತಿ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    Congress

    ಇದೇ ವೇಳೆ ಶಿವಕುಮಾರೋತ್ಸವಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮೋತ್ಸವವನ್ನು ನಾವೆಲ್ಲರೂ ಸೇರಿ ಮಾಡುತ್ತಿದ್ದೇವೆ. ಸಿದ್ದರಾಮೋತ್ಸವ ಕಮಿಟಿಯಲ್ಲಿ ನಾನೂ ಇದ್ದೀನಿ. 75 ವರ್ಷ ಅನ್ನೋದು ಒಬ್ಬ ರಾಜಕಾರಣಿಗೆ ಸಾರ್ಥಕತೆ ತರುವ ವಯಸ್ಸಾಗಿದೆ. ಆದರೆ ಶಿವಕುಮಾರೋತ್ಸವ ಮಾಡಿ ಅಂತ ಪತ್ರ ಬರೆದಿರುವ ವಿಚಾರ ನನಗೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಸಿದ್ದರಾಮೋತ್ಸವ ಮಾದರಿಯಲ್ಲೇ ಶಿವಕುಮಾರೋತ್ಸವ ಮಾಡಿ – ಡಿಕೆಶಿ ಶಿಷ್ಯನಿಂದ ಪತ್ರ

    Live Tv
    [brid partner=56869869 player=32851 video=960834 autoplay=true]