Tag: ಡಿಐಜಿ ರೂಪಾ

  • ‘ರಂಗನಾಯಕಿ’ ಶುರುವಾಯ್ತು!

    ‘ರಂಗನಾಯಕಿ’ ಶುರುವಾಯ್ತು!

    ನಿರ್ದೇಶಕ ದಯಾಳ್ ಪದ್ಮನಾಭನ್ ಕಳೆದ ಒಂಭತ್ತು ತಿಂಗಳಲ್ಲಿ ಮೂರು ಸಿನಿಮಾಗಳನ್ನು ರೂಪಿಸಿ ತೆರೆಗೆ ತಂದಿದ್ದಾರೆ. ಈಗ ಮತ್ತೊಂದು ಸಿನಿಮಾ ಆರಂಭಿಸಿದ್ದಾರೆ. ರಂಗನಾಯಕಿ ಹೆಸರಿನ ಈ ಚಿತ್ರವೀಗ ಟೈಟಲ್ ಲಾಂಚ್ ಮೂಲಕ ಆರಂಭವಾಗಿದ್ದು, ಇದೇ ತಿಂಗಳ 29ರಿಂದ ಚಿತ್ರೀಕರಣ ಶುರುವಾಗಲಿದೆ.

    ಧೈರ್ಯಂ ಸಿನಿಮಾದ ಮೂಲಕ ಸಿನಿಮಾ ನಾಯಕನಟಿಯಾಗಿ ಎಂಟ್ರಿ ಕೊಟ್ಟಿದ್ದ ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿರ್ಭಯಾ ಪ್ರಕರಣ ನಡೆದ ನಂತರ ದಯಾಳ್ ಒಂದು ಕಾದಂಬರಿಯನ್ನು ಬರೆಯಲು ಆರಂಭಿಸಿದ್ದರಂತೆ. ಕನ್ನಡ ಭಾಷೆ ಗೊತ್ತಿಲ್ಲದ ಕಾರಣ ತಾವು ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ರಚಿಸಿದ್ದರಂತೆ. ಇದನ್ನು ದಯಾಳ್ ಅವರ ಅಸೋಸಿಯೇಟ್ಸ್ ಕಿರಣ್ ಹೆಮ್ಮಿಗೆ ಕನ್ನಡೀಕರಿಸಿದ್ದಾರೆ. ರಂಗನಾಯಕಿ ಸಿನಿಮಾದ ಟೈಟಲ್ ಲಾಂಚ್ ಜೊತೆಗೆ ರಂಗನಾಯಕಿ ಕಿರು ಕಾದಂಬರಿ ರೂಪದಲ್ಲೂ ಲೋಕಾರ್ಪಣೆಗೊಂಡಿದೆ. ಡಿಐಜಿ ರೂಪಾ ಅವರು ರಂಗನಾಯಕಿ ಚಿತ್ರದ ಟೈಟಲ್ ಮತ್ತು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ.

    ಕಿರಣ್ ಹೆಮ್ಮಿಗೆ ಕನ್ನಡೀಕರಿಸಿದ್ದಾರೆ. ರಂಗನಾಯಕಿ ಸಿನಿಮಾದ ಟೈಟಲ್ ಲಾಂಚ್ ಜೊತೆಗೆ ರಂಗನಾಯಕಿ ಕಿರು ಕಾದಂಬರಿ ರೂಪದಲ್ಲೂ ಲೋಕಾರ್ಪಣೆಗೊಂಡಿದೆ. ಡಿಐಜಿ ರೂಪಾ ಅವರು ರಂಗನಾಯಕಿ ಚಿತ್ರದ ಟೈಟಲ್ ಮತ್ತು ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ.

    “ರಂಗನಾಯಕಿ ಹೆಸರು ಕೇಳಿದರೇನೇ ರೋಮಾಂಚನಗೊಳ್ಳುತ್ತದೆ. ನಾನು ನನ್ನ ಐದನೇ ವಯಸ್ಸಿನಲ್ಲಿ ನನ್ನ ತಂದೆ ತಾಯಿಯೊಂದಿಗೆ ಪುಟ್ಟಣ್ಣ ಕಣಗಾಲರ ರಂಗನಾಯಕಿಯನ್ನು ಚಿತ್ರಮಂದಿರದಲ್ಲಿ ನೋಡಿದ್ದೆ. ಈಗ ಅದೇ ಹೆಸರಿನ ಸಿನಿಮಾದ ಆರಂಭೋತ್ಸವಕ್ಕೆ ನಾನು ಅತಿಥಿಯಾಗಿ ಬಂದಿರೋದು ಖುಷಿ ಎನಿಸುತ್ತಿದೆ. ಹೆಣ್ಣುಮಕ್ಕಳ ಪರವಾದ ಸಾಮಾಜಿಕ ಸಂದೇಶ ಈ ಸಿನಿಮಾದ ಮೂಲಕ ಜಗತ್ತಿಗೆ ರವಾನೆಯಾಗಲಿ” ಎಂದು ರೂಪಾ ಹೇಳಿದರು.

    ನಾಯಕಿ ಅದಿತಿ ಮಾತನಾಡಿ, ಅತ್ಯಾಚಾರದಂತಹ ಅಮಾನವೀಯ ಪ್ರಕರಣಗಳಾದಾಗ ಅದರ ಸುದ್ದಿಗಳನ್ನು ನೋಡಿ ಮನಸ್ಸು ಹಿಂಡುತ್ತದೆ. ಆದರೆ ಈ ಸಿನಿಮಾದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳ ಪಾತ್ರದಲ್ಲಿ ನಟಿಸಲಿದ್ದೇನೆ. ಇದು ನಿಜಕ್ಕೂ ಛಾಲೆಂಜಿಂಗ್ ಆದ ಪಾತ್ರ ಎಂದರು.

    ಇನ್ನು ಈ ಸಿನಿಮಾದಲ್ಲಿ ನಿರ್ದೇಶಕ ಶ್ರೀನಿ, ತ್ರಿವಿಕ್ರಮ್, ಲಾಸ್ಯಾ, ಶಿವಮಣಿ ಸೇರಿದಂತೆ ಸಾಕಷ್ಟು ಜನ ನಟಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದ ಈ ಸಿನಿಮಾವನ್ನು ಈ ಹಿಂದೆ ಎಟಿಎಮ್ ಸಿನಿಮಾ ನಿರ್ಮಿಸಿದ್ದ ಎಸ್.ವಿ. ನಾರಾಯಣ್ ನಿರ್ಮಿಸುತ್ತಿದ್ದಾರೆ.

     

  • ವರ್ಗಾವಣೆಗೆ ಅಧಿಕಾರಿಗಳು ಹೆದರಬಾರದು: ಡಿಐಜಿ ರೂಪಾ

    ವರ್ಗಾವಣೆಗೆ ಅಧಿಕಾರಿಗಳು ಹೆದರಬಾರದು: ಡಿಐಜಿ ರೂಪಾ

    ದಾವಣಗೆರೆ: ಅಧಿಕಾರಿಗಳು ವರ್ಗಾವಣೆಗೆ ಹೆದರಬಾರದು. ವರ್ಗಾವಣೆಗೆ ಏನಾದ್ರು ಹೆದರಿದ್ರೆ ಇನ್ನೊಬ್ಬರ ಅಡಿಯಾಳಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಸಂಚಾರಿ ವಿಭಾಗದ ಡಿಐಜಿ ಡಿ ರೂಪಾ ಹೇಳಿದ್ದಾರೆ.

    ನಗರದ ಕುವೆಂಪು ಕನ್ನಡ ಭವನದಲ್ಲಿ ಅಯೋಜನೆ ಮಾಡಲಾಗಿದ್ದ ಜಿಲ್ಲಾ ಮಟ್ಟದ ಮಹಿಳಾ ಸಾಹಿತ್ಯ ಸಮೇವೇಶವನ್ನು ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಅಧಿಕಾರಿಗಳು ವರ್ಗಾವಣೆಗೆ ಹೆದರದೇ ಇದ್ದರೆ ಯಾರ ಮುಲಾಜಿಲ್ಲದೆ ಕೆಲಸ ಮಾಡಬಹುದು ಅಂತ ಹೇಳಿದ್ರು.

    ನನ್ನನ್ನು ಡಿಐಜಿ ವಿಭಾಗದಿಂದ ಸಂಚಾರಿ ವಿಭಾಗಕ್ಕೆ ವರ್ಗಾವಣೆ ಮಾಡಿದ್ರಿಂದ ನನಗೆ ಯಾವುದೇ ಬೇಸರವಿಲ್ಲ. ಅಲ್ಲದೇ ಸರ್ಕಾರಕ್ಕೆ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ವರದಿ ನೀಡಿದ್ದೇನೆ. ಇದರ ಬಗ್ಗೆ ತನಿಖೆ ಕೂಡಾ ನಡೆಯುತ್ತಿದೆ. ಈ ಪ್ರಕರಣದಲ್ಲಿ ನನ್ನ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ನಾನು ಒಬ್ಬ ಅಧಿಕಾರಿಯಾಗಿ ಮಾಡಬೇಕಾದ ಕೆಲ್ಸಾ ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದ್ರು.

  • ಅಪಘಾತಗಳಾದ್ರೆ ಕ್ರಿಮಿನಲ್ ಕೇಸ್‍ಗೆ ಅನುಮತಿ ನೀಡಿ: ಡಿಐಜಿ ರೂಪಾ

    ಅಪಘಾತಗಳಾದ್ರೆ ಕ್ರಿಮಿನಲ್ ಕೇಸ್‍ಗೆ ಅನುಮತಿ ನೀಡಿ: ಡಿಐಜಿ ರೂಪಾ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಮತ್ತು ರಸ್ತೆ ಗುಂಡಿಗಳಿಂದ ಸಾಕಷ್ಟು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಪ್ರಕರಣಗಳ ಹೊಣೆಯನ್ನು ರಸ್ತೆ ನಿರ್ಮಾಣ ಮಾಡಿದ ಪ್ರಾಧಿಕಾರವೇ ಹೊರಬೇಕು ಅಂತ ಸಂಚಾರ ಹಾಗೂ ರಸ್ತೆ ಸುರಕ್ಷತಾ ಇಲಾಖೆ ಆಯುಕ್ತೆ ರೂಪಾ ಅಭಿಪ್ರಾಯಿಸಿದ್ದಾರೆ.

    ಈ ಕುರಿತು ಹೊಸ ತಿದ್ದುಪಡಿಗೆ ಕರ್ನಾಟಕ ಪೊಲೀಸರಿಂದ ಎಂ.ವಿ.ಎ ಕಾಯ್ದೆ ತಿದ್ದುಪಡಿಗೆ ರೂಪಾ ಅವರು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲಹಾ ಪಟ್ಟಿ ಸಲ್ಲಿಸಿದ್ದಾರೆ. ರಸ್ತೆ ನಿರ್ಮಾಣ ಮಾಡಿದ ಪ್ರಾಧಿಕಾರವೇ ಅನಾಹುತ ಹೊಣೆ ಹೊರಬೇಕು. ಅಲ್ಲದೇ ಪ್ರಾಧಿಕಾರದ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಅನುಮತಿ ನೀಡಿ ಅಂತ ಮನವಿ ಮಾಡಿದ್ದಾರೆ.

    ಪಾಲಿಕೆ, ಬಿಡ್ಲೂಡಿ, ಪಿಪಿಡಬ್ಲೂಡಿ ಎನ್ ಹೆಚ್ ವಿರುದ್ಧ ಕ್ರಮಕ್ಕೆ ಸಲಹೆ ನೀಡಿದ್ದಾರೆ. ಮೋಟರ್ ವೆಹಿಕಲ್ ಆಕ್ಟ್ ಲೋಕ ಸಭೆಯಲ್ಲಿ ಪಾಸ್ ಆಗಿದ್ದು, ರಾಜ್ಯ ಸಭೆಯಲ್ಲಿದೆ. ಪಾರ್ಕಿಂಗ್ ಜಾಗ ಇದೇಯೆ ಎಂಬ ಬಗ್ಗೆ ಎನ್‍ಒಸಿ ಪಡೆದು ವಾಹನ ನೊಂದಣಿ ಮಾಡಬೇಕು. ಜೀಬ್ರಾ ಕ್ರಾಸಿಂಗ್ ಅಲ್ಲದೆ ಬೇರೆ ಕಡೆ ರಸ್ತೆ ದಾಟಿದ್ರೆ ಕೇಸ್ ಹಾಕುವುದು. ವೀಲಿಂಗ್ ಸೇರಿ ಡೆಂಜರಸ್ ಡ್ರೈವಿಂಗ್ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೀಗೆ ಒಟ್ಟು 15 ಸಲಹೆಗಳ ಪಟ್ಟಿಯನ್ನು ರೂಪಾ ಅವರು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದಾರೆ.

  • ಎಷ್ಟು ಬೇಗ ಸರ್ಕಾರ ತೊಲಗಿದರೆ ಅಷ್ಟು ಬೇಗ ರಾಜ್ಯದ ಜನರಿಗೆ ಅನುಕೂಲ: ಸಿಟಿ ರವಿ

    ಎಷ್ಟು ಬೇಗ ಸರ್ಕಾರ ತೊಲಗಿದರೆ ಅಷ್ಟು ಬೇಗ ರಾಜ್ಯದ ಜನರಿಗೆ ಅನುಕೂಲ: ಸಿಟಿ ರವಿ

    ಬೆಂಗಳೂರು: ಎಷ್ಟು ಬೇಗ ಸರ್ಕಾರ ತೊಲಗಿದರೆ ಅಷ್ಟು ಬೇಗ ರಾಜ್ಯದ ಜನರಿಗೆ ಅನುಕೂಲ ಎಂದು ಬಿಜೆಪಿ ಶಾಸಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

    ಡಿಐಜಿ ರೂಪಾ ಅವರನ್ನು ವರ್ಗಾವಣೆಗೊಳಿಸಿದ ಸಂಬಂಧವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಸತ್ಯದ ಮೇಲೆ ಸಮಾಧಿ ಕಟ್ಟುವ ಕೆಲಸ ಮಾಡುತ್ತಿದೆ. ಈ ಹಿಂದೆ ಗಂಭೀರ ಆರೋಪ ಪ್ರಕರಣಗಳಿಗೆ ಕ್ಲೀನ್ ಚಿಟ್ ಕೊಟ್ಟು ಎಡವಟ್ಟು ಮಾಡಿದ್ದಾರೆ. ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಸರ್ಕಾರದಿಂದ ಆಗುತ್ತಿದೆ ಎಂದು ಅವರು ಕಿಡಿಕಾರಿದರು.

    ಸೆರೆಮನೆ ಅರಮನೆಯಾಗಿದ್ದು, ಶಿಕ್ಷೆಯಾದವರಿಗೆ ಹೇಗೆಲ್ಲ ಸೌಲಭ್ಯ ಸಿಗಲಿದೆ ಎನ್ನುವುದನ್ನು ಸ್ಪಷ್ಟವಾಗಿ ವರದಿ ರವಾನಿಸಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ನಿಷ್ಪಕ್ಷಪಾತವಾಗಿ ತನಿಖೆ ನಡಸಬೇಕಿತ್ತು ಎಂದು ಅವರು ಹೇಳಿದರು.

    ಈ ಸರ್ಕಾರ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮುಂದಿನ ಹೋರಾಟದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

    ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣವನ್ನು ಬಯಲಿಗೆ ಎಳೆದ ಕಾರಾಗೃಹ ಇಲಾಖೆಯ ಡಿಐಜಿ ರೂಪಾ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.

  • ಜೈಲು ರಹಸ್ಯ ಬೇಧಿಸಿದ ರೂಪಾಗೆ ಎತ್ತಂಗಡಿ ಭಾಗ್ಯ

    ಜೈಲು ರಹಸ್ಯ ಬೇಧಿಸಿದ ರೂಪಾಗೆ ಎತ್ತಂಗಡಿ ಭಾಗ್ಯ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣವನ್ನು ಬಯಲಿಗೆ ಎಳೆದ ಡಿಐಜಿ ರೂಪಾ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದೆ.

    ಹೌದು, ಡಿಐಜಿ ರೂಪಾ ಮತ್ತು ಗುಪ್ತಚರ ಇಲಾಖೆಯ ಡಿಜಿಪಿ ಎಂಎನ್ ರೆಡ್ಡಿ ಅವರನ್ನು ವರ್ಗಾವಣೆ ಗೊಳಿಸಿ ಆದೇಶಿಸಿದೆ. ರೂಪಾ ಅವರನ್ನ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ.

    ಬಂಟ್ವಾಳ ಗಲಾಟೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಕ್ಕೆ ಎಂಎನ್ ರೆಡ್ಡಿ ಅವರನ್ನು ಎಸಿಬಿಗೆ ಸರ್ಕಾರ ವರ್ಗಾಯಿಸಿದೆ. ಗುಪ್ತಚರ ಇಲಾಖೆಯ ಐಜಿಯಾಗಿ ಅಮೃತ್ ಪೌಲ್ ನೇಮಕವಾಗಿದ್ದರೆ, ಕಾರಾಗೃಹದ ಎಡಿಜಿಪಿಯಾಗಿ ಮೇಘರಿಕ್ ನೇಮಕವಾಗಿದ್ದಾರೆ.

     

    https://youtu.be/VUvHqCfFg0E

     

    https://youtu.be/5NYUIeTEy-8

  • ಜೈಲು ರಹಸ್ಯ ಬೇಧಿಸಿದ ರೂಪಾ ಶೀಘ್ರವೇ ಎತ್ತಂಗಡಿ?

    ಜೈಲು ರಹಸ್ಯ ಬೇಧಿಸಿದ ರೂಪಾ ಶೀಘ್ರವೇ ಎತ್ತಂಗಡಿ?

    -ತೆಲಗಿ ತಲೆ ಮೇಲಿದೆ 254 ಕೋಟಿ ರೂ. ತೆರಿಗೆ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿ ಸತ್ಯನಾರಾಯಣರಾವ್ ಮತ್ತು ಡಿಐಜಿ ರೂಪಾ ವರ್ಗಾವಣೆ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

    ಮಾಧ್ಯಮದ ಮುಂದೆ ಅಧಿಕಾರಿಗಳು ಪದೇ ಪದೇ ಹೇಳಿಕೆ ನೀಡಬಾರದು ಅಂತ ಸಿಎಂ ಹೇಳಿದ್ದರು. ಪ್ರಕರಣದ ತನಿಖೆ ಪ್ರಾರಂಭಗೊಳ್ಳುವ ಮುನ್ನವೇ ಜೈಲಿಗೆ ಇಬ್ಬರು ಪ್ರವೇಶ ಪಡೆದಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಇಬ್ಬರನ್ನೂ ವರ್ಗಾವಣೆ ಮಾಡಿದ ಬಳಿಕ ಆ ಜಾಗಕ್ಕೆ ಐಜಿಪಿ ಸಲೀಂ ನಿಯೋಜನೆ ಮಾಡುವ ಸಾಧ್ಯತೆಗಳಿವೆ. ಸಲೀಂ ಇಲ್ಲ ಚರಣ್ ರೆಡ್ಡಿ ಗೆ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಇಬ್ಬರು ಅಧಿಕಾರಿಗಳು ಜನವರಿಗೆ ಎಡಿಜಿಪಿ ಆಗಿ ಬಡ್ತಿ ಹೊಂದುವುದರಿಂದ ಅವರನ್ನೇ ಮುಂದುವರೆಸಲು ಸಿದ್ಧತೆ ನಡೆಸಲಾಗಿದೆ ಎಂಬುವುದಾಗಿ ತಿಳಿದುಬಂದಿದೆ.

    ಇನ್ನು ಡಿಜಿ ಸತ್ಯನಾರಾಯಣ ರಾವ್ ಅವರು ಡಿಐಜಿ ರೂಪಾ ಬಗ್ಗೆ 16 ಪುಟಗಳ ವರದಿಯನ್ನು ಗೃಹಿಲಾಖೆಗೆ ಸಲ್ಲಿಸಿದ್ದಾರೆ. ಈ ವರದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಡಿಐಜಿ ರೂಪಾ ಅವರು ಡಿಜಿ ಆದೇಶ ಮೀರಿ 3 ಬಾರಿ ನೋಟಿಸ್ ಪಡೆದಿದ್ದರು. ನನ್ನ ಮೇಲೆ ದ್ವೇಷ ಸಾಧಿಸಲು ಸುಳ್ಳು ಸುದ್ದಿ ಹಬ್ಬಿಸಿದ್ದಾರೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

    ವರದಿಯಲ್ಲೇನಿದೆ?: ಬೆಂಗಳೂರು, ತುಮಕೂರು ಜೈಲಿನ ಜೊತೆ ಹೆಚ್ಚುವರಿ ಜವಬ್ದಾರಿಗೆ ರೂಪಾ ಡಿಮ್ಯಾಂಡ್ ಇಟ್ಟಿದ್ದರು. ಅಲ್ಲದೇ ಬಳ್ಳಾರಿ, ಬೆಳಗಾವಿ, ಧಾರವಾಡ, ಕಲಬುರಗಿ ಜೈಲುಗಳ ಹೊಣೆಗಾಗಿ ರೂಪಾ ಪಟ್ಟು ಹಿಡಿದಿದ್ದರು. ಆದ್ರೆ ಗೃಹ ಇಲಾಖೆ ಅನುಮತಿ ಬೇಕು ಎಂದು ರೂಪಾಗೆ ನಾನು ಬುದ್ಧಿವಾದ ಹೇಳಿದ್ದೆ. ನನಗೆ ತಿಳಿಯದೇ ಗೃಹ ಇಲಾಖೆ ಜೊತೆ ರೂಪಾ ಹೆಚ್ಚಿನ ಅಧಿಕಾರಕ್ಕಾಗಿ ಚರ್ಚೆ ನಡೆಸಿದ್ದರು. ಆಗ ಡಿಜಿಪಿ ಅನುಮತಿ ಪಡೆಯಲು ಗೃಹ ಇಲಾಖೆ ರೂಪಾಗೆ ಸೂಚನೆ ನೀಡಿತ್ತು. ಬಳಿಕ ಡಿಜಿಯಾದ ನನ್ನ ಜೊತೆ ರೂಪಾ ಅವರು ವಾಗ್ವಾದ ನಡೆಸಿ ಹೋಗಿದ್ದರು. ತುಮಕೂರು ಜೈಲಲ್ಲಿ ರೂಪಾಂತರ ಕಾರ್ಯಕ್ರಮದ ವೇಳೆ ಕೆಲವೇ ಕೆಲವು ವರದಿಗಾರರನ್ನ ಕರೆಸಲು ನಾನು ಸೂಚಿಸಿದ್ದೆ. ಆದ್ರೆ ಸುಪ್ರೀಂಕೋರ್ಟ್ ಆದೇಶ ಮೀರಿ ಹೆಚ್ಚು ಪತ್ರಕರ್ತರನ್ನ ಕರೆಸಿ ಪ್ರಚಾರ ಪಡೆದಿದ್ದಕ್ಕೆ ಬುದ್ಧಿ ಹೇಳಿದ್ದೆ. ನೊಟೀಸ್ ನೀಡಿ ರೂಪಾಗೆ ಉತ್ತರಿಸಲು ಕೇಳಿದಾಗ ನನ್ನ ಮೇಲೆ ಜೋರು ಮಾಡಿದ್ರು. ಆಮೇಲೆ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ತಮ್ಮಿಷ್ಟ ಬಂದಂತೆ ಜೈಲಿನ ಬಗ್ಗೆ ತಮ್ಮ ಬಗ್ಗೆ ಮಾತನಾಡಿದ್ರು. ಆ ಫೋಟೋಗಳನ್ನ ಫೇಸ್‍ಬುಕ್‍ನಲ್ಲಿ ಹಾಕಿಕೊಂಡು ನಿಯಮ ಮೀರಿದ್ದಕ್ಕೆ ಮೆಮೋ ನೀಡಿದ್ದೆ. ಜುಲೈ 10 ರಂದು ಮುಖ್ಯಮಂತ್ರಿಗಳು ಸಭೆ ಕರೆದ ದಿನವೇ ಪರಪ್ಪನ ಅಗ್ರಹಾರ ಭೇಟಿಗೆ ತೆರಳಿದ್ರು. ಹಿರಿಯ ಅಧಿಕಾರಿಯಾಗಿ ನಾನು ಸಭೆಗೆ ಯಾಕೆ ಬಂದಿಲ್ಲ ಎಂದು ಉತ್ತರ ಕೇಳಿ 3ನೇ ಬಾರಿ ನೋಟಿಸ್ ನೀಡಿದ್ದೆ. ಆದ್ರೂ ನಿಯಮ ಮೀರಿ ಜೈಲಿನೊಳಗೆ ಹೋಗಿದ್ದಾರೆ. ಜೈಲಧಿಕಾರಿಗಳಿಗೂ ತಿಳಿಸದೇ ವರದಿ ಸಿದ್ಧಪಡಿಸಿದ್ದಾರೆ. ಶಶಿಕಲಾ ಅವರಿಗೆ ಸೌಕರ್ಯ ನೀಡಿದ್ದೀವಿ, ತೆಲಗಿಗೆ ಸೇವಕರನ್ನ ನೀಡಲಾಗಿದೆ ಎಂದು ಸುಳ್ಳು ವರದಿ ಮಾಧ್ಯಮಗಳಿಗೆ ನೀಡಿದ್ದಾರೆ. ಜೈಲಿನಲ್ಲಿ ಶಶಿಕಲಾಗೆ ವಿಶೇಷ ಸವಲತ್ತು ನೀಡಿಲ್ಲ. ಆದ್ರೆ ಕೋರ್ಟ್ ಆದೇಶದಂತೆ ತೆಲಗಿಗೆ ಕೆಲವು ಸವಲತ್ತು ನೀಡಿದ್ದೇವೆ ಅಷ್ಟೇ ಅಂತ ವರದಿಯಲ್ಲಿ ಹೇಳಿದ್ದಾರೆ.

    ತೆಲಗಿ ಮೇಲೆ ತೆರಿಗೆ: ಬಹುಕೋಟಿ ರೂಪಾಯಿ ನಕಲಿ ಛಾಪಾಕಾಗದ ಹಗರಣ ರೂವಾರಿ ಕರೀಂ ಲಾಲ್ ತೆಲಗಿಗೆ ಕೇಂದ್ರ ಕಾರಾಗೃಹದಲ್ಲಿ ರಾಜಮರ್ಯಾದೆ ಸುದ್ದಿ ಬಿತ್ತರಗೊಳ್ಳುತಿದ್ದಂತೆ ಈತನ ಕರಾಳ ಕೃತ್ಯದ ಬಗ್ಗೆ ಇನ್ನೊಂದು ಸ್ಫೋಟಕ ಸುದ್ದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ದೇಶದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕರೀಂ ಲಾಲ್ ತೆಲಗಿ ಸರ್ಕಾರಕ್ಕೆ ಕಟ್ಟಬೇಕಾಗಿರೋದು ಬರೊಬ್ಬರಿ 254 ಕೋಟಿ ರೂಪಾಯಿ. ತೆಲಗಿ ಸರ್ಕಾರಕ್ಕೆ ಕಟ್ಟಬೇಕಾದ ಹಣದ ದಾಖಲಾತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.