Tag: ಡಿಎಸ್ಪಿ

  • ತೆಲಂಗಾಣ | ಡಿವೈಡರ್‌ಗೆ ಪೊಲೀಸ್ ವಾಹನ ಡಿಕ್ಕಿ – ಇಬ್ಬರು ಡಿಎಸ್ಪಿ ಸಾವು

    ತೆಲಂಗಾಣ | ಡಿವೈಡರ್‌ಗೆ ಪೊಲೀಸ್ ವಾಹನ ಡಿಕ್ಕಿ – ಇಬ್ಬರು ಡಿಎಸ್ಪಿ ಸಾವು

    ಹೈದರಾಬಾದ್: ತೆಲಂಗಾಣದ ಯಾದಾದ್ರಿಯಲ್ಲಿ (Yadadri) ಪೊಲೀಸ್ ವಾಹನವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಡಿಎಸ್ಪಿ (Deputy Superintendent of Police) ಅಧಿಕಾರಿಗಳು ಸಾವನ್ನಪ್ಪಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.

    ಡಿಎಸ್ಪಿಗಳಾದ ಚಂದ್ರಕರ್ ರಾವ್ ಮತ್ತು ಶಾಂತಾ ರಾವ್‌ರನ್ನು ಮೃತರೆಂದು ಗುರುತಿಸಲಾಗಿದೆ. ಎಎಸ್ಪಿ ಪ್ರಸಾದ್ ಮತ್ತು ಹೆಡ್ ಕಾನ್‌ಸ್ಟೇಬಲ್ ನರಸಿಂಗ್ ರಾವ್ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಅಂಗಡಿ ಬಳಿ ಕುಳಿತವನ ಮೇಲೆ ಡೆಡ್ಲಿ ಅಟ್ಯಾಕ್ – ಚಿಕಿತ್ಸೆ ಫಲಿಸದೇ ಯುವಕ ಸಾವು

    ಪೊಲೀಸ್ ಅಧಿಕಾರಿಗಳು ಕೆಲಸದ ನಿಮಿತ್ತ ವಿಜಯವಾಡದಿಂದ ಹೈದರಾಬಾದ್‌ಗೆ (Hyderabad) ತೆರಳುತ್ತಿದ್ದ ವೇಳೆ ಯಾದಾದ್ರಿ ಜಿಲ್ಲೆಯ ಖೈತಪುರಂನಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: Rajasthan | ಶಾಲಾ ಮೇಲ್ಛಾವಣಿ ಕುಸಿದು 7 ವಿದ್ಯಾರ್ಥಿಗಳು ಸಾವು – ಐವರು ಶಿಕ್ಷಕರ ಅಮಾನತು

    ಚಾಲಕ ಅತಿ ವೇಗದಿಂದ ವಾಹನ ಚಲಾಯಿಸಿದ್ದರಿಂದ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಕಾರು ರಸ್ತೆಯ ಇನ್ನೊಂದು ಬದಿಗೆ ಹಾರಿ ಬಿದ್ದು ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಲಾರಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಮದ್ಯಪಾನ ಮಾಡಿ ಶಾಲಾ ಅಡುಗೆ ಕೋಣೆ ಮುಂದೆ ಮಲಗಿದ್ದ ಮುಖ್ಯ ಶಿಕ್ಷಕ ಅಮಾನತು

    ಭೀಕರ ಅಪಘಾತದಲ್ಲಿ ಡಿಎಸ್ಪಿ ಚಂದ್ರಕರ್ ರಾವ್ ಮತ್ತು ಶಾಂತಾ ರಾವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ನರಸಿಂಗ್ ರಾವ್ ಮತ್ತು ಎಎಸ್‌ಪಿ ಪ್ರಸಾದ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ವಿಜಯವಾಡ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರಾಚಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2007ರ ಟಿ20 ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ

    2007ರ ಟಿ20 ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ

    ಮುಂಬೈ: ಟೀಂ ಇಂಡಿಯಾ 2007ರ ಟಿ20 ವಿಶ್ವಕಪ್ (T20 World Cup) ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಫೈನಲ್ ಪಂದ್ಯದ ಹೀರೋ ಜೋಗಿಂದರ್ ಶರ್ಮಾ (Joginder Sharma) ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ (Retirement) ಘೋಷಿಸಿದ್ದಾರೆ.

     

    2002 ರಿಂದ 2017ರ ವರೆಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ಜೋಗಿದಂರ್ ಶರ್ಮಾ 2007 ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹೀರೋ ಆಗಿದ್ದರು. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲುವಿಗೆ 13 ರನ್ ಬೇಕಾಗಿತ್ತು. ಈ ಮೊತ್ತವನ್ನು ಬಿಟ್ಟುಕೊಡದೆ ತಮ್ಮ ಅದ್ಭುತ ದಾಳಿಯ ಮೂಲಕ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಆ ಬಳಿಕ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಜೋಗಿಂದರ್ ಶರ್ಮಾ ಆಗೊಮ್ಮೆ ಹೀಗೊಮ್ಮೆ ತಂಡದಲ್ಲಿ ಸ್ಥಾನ ಪಡೆದು ಬಳಿಕ ತಂಡದಿಂದ ದೂರ ಉಳಿದಿದ್ದರು. ಇದೀಗ ಎಲ್ಲಾ ಮಾದರಿ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದಾರೆ. ಇದನ್ನೂ ಓದಿ: ಮೂಳೆ ಮುರಿದರೂ ಎಡಗೈ ಒಂದರಲ್ಲೇ ಬ್ಯಾಟಿಂಗ್ – ವಿಹಾರಿ ಫೈಟ್ ಬ್ಯಾಕ್‍ಗೆ ಮೆಚ್ಚುಗೆ

    ಈ ಬಗ್ಗೆ ಬಿಸಿಸಿಐಗೆ (BCCI) ಪತ್ರ ಬರೆದಿದ್ದ ಜೋಗಿಂದರ್ ಶರ್ಮಾ, 2007 ರಿಂದ 2017ರ ವರೆಗಿನ ನನ್ನ ಕ್ರಿಕೆಟ್‌ ಜರ್ನಿಗೆ ಇದೀಗ ವಿದಾಯ ಘೋಷಿಸುತ್ತಿದ್ದು, ಬಿಸಿಸಿಐ, ಹರಿಯಾಣ ಕ್ರಿಕೆಟ್ ಬೋರ್ಡ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ಗೆ (CSK) ಧನ್ಯವಾದ ತಿಳಿಸುತ್ತೇನೆ. ತಂಡದ ಸಹ ಆಟಗಾರರು, ಕೋಚ್, ಮೆಂಟರ್, ಸಹಾಯಕ ಸಿಬ್ಬಂದಿ ಜೊತೆ ನನ್ನ ಕುಟುಂಬ ಸದಸ್ಯರಿಗೆ ಧನ್ಯವಾದ ಎಂದು ವಿದಾಯ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: T20Iː ಧೋನಿ ಹೋದ್ಮೇಲೆ ಜವಾಬ್ದಾರಿ ನನ್ನ ಮೇಲಿದೆ – ಪಾಂಡ್ಯ ಭಾವುಕ

    ಜೋಗಿಂದರ್ ಶರ್ಮಾ ಭಾರತ ಪರ ತಲಾ 4 ಏಕದಿನ ಮತ್ತು ಟಿ20 ಪಂದ್ಯಗಳಿಂದ ಒಟ್ಟು 5 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್‍ನಲ್ಲಿ (IPL) ಒಟ್ಟು 16 ಪಂದ್ಯಗಳಿಂದ 12 ವಿಕೆಟ್ ಪಡೆದಿದ್ದಾರೆ.

    ಹರಿಯಾಣದ ಡಿಎಸ್‍ಪಿ:
    ಜೋಗಿಂದರ್ ಶರ್ಮಾ ಕ್ರಿಕೆಟ್ ಬಳಿಕ ವೃತ್ತಿಯಲ್ಲಿ ಪೊಲೀಸ್ ಆಗಿದ್ದು ಪ್ರಸ್ತುತ ಹರಿಯಾಣದ ಡಿಎಸ್‍ಪಿ (DSP) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಟ್ರಕ್‌ ಹತ್ತಿಸಿ ಕೊಲೆ – 24 ಗಂಟೆಯಲ್ಲಿ 3ನೇ ದುರ್ಘಟನೆ

    ಪೊಲೀಸ್‌ ಕಾನ್‌ಸ್ಟೇಬಲ್‌ ಮೇಲೆ ಟ್ರಕ್‌ ಹತ್ತಿಸಿ ಕೊಲೆ – 24 ಗಂಟೆಯಲ್ಲಿ 3ನೇ ದುರ್ಘಟನೆ

    ಗಾಂಧೀನಗರ: ತಡೆಯಲು ಮುಂದಾದ ಗುಜರಾತ್‌ ಪೊಲೀಸ್‌ಗೆ ಟ್ರಕ್‌ ಹತ್ತಿಸಿ ಕೊಲೆ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಕಳೆದ 24 ಗಂಟೆಯಲ್ಲಿ ಪೊಲೀಸ್‌ ಅಧಿಕಾರಿಗಳನ್ನು ಹತ್ಯೆ ಮಾಡಿದ ಮೂರನೇ ಘಟನೆ ಇದಾಗಿದೆ.

    ಪೊಲೀಸ್‌ ಕಾನ್‌ಸ್ಟೇಬಲ್‌ ಕಿರಣ್‌ ರಾಜ್‌ ಹತ್ಯೆಯಾದವರು. ಗುಜರಾತ್‌ನ ಬೋರ್ಸಾದ್‌ನಲ್ಲಿ ಪೊಲೀಸ್ ಪೇದೆ ಮೇಲೆ ಟ್ರಕ್‌ ಹತ್ತಿಸಿ ಕೊಲೆ ಮಾಡಲಾಯಿತು. ಇದನ್ನೂ ಓದಿ: DSP‌ ಮಾದರಿಯಲ್ಲೇ ಮಹಿಳಾ PSI ಹತ್ಯೆ?- ತಪಾಸಣೆಗೆ ಮುಂದಾದ ಅಧಿಕಾರಿಗೆ ವಾಹನ ಡಿಕ್ಕಿ ಹೊಡೆದು ಸಾವು

    ವಾಹನದಲ್ಲಿ ರಾಜಸ್ಥಾನದ ನಂಬರ್‌ ಪ್ಲೇಟ್‌ ಹೊಂದಿದ್ದ ಅನುಮಾನಾಸ್ಪದ ಟ್ರಕ್ ಅನ್ನು ನಿಲ್ಲಿಸಲು ಕಾನ್‌ಸ್ಟೇಬಲ್‌ ಪ್ರಯತ್ನಿಸಿದ್ದಾರೆ. ಆದರೆ ಟ್ರಕ್ ಚಾಲಕ ನಿಲ್ಲಿಸುವ ಬದಲು ವೇಗವನ್ನು ಹೆಚ್ಚಿಸಿ ಅವರ ಮೇಲೆ ಹತ್ತಿಸಿದ್ದಾರೆ. ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡಿದ್ದ ಕಾನ್‌ಸ್ಟೇಬಲ್‌ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಟ್ರಕ್ ಚಾಲಕನನ್ನು ಗುರುತಿಸಲಾಗಿದ್ದು, ಆತನನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ- ತಡೆಯಲು ಹೋದ DSP ಮೇಲೆ ಟ್ರಕ್ ಹರಿಸಿ ಬರ್ಬರ ಹತ್ಯೆ

    ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಕಲ್ಲು ತುಂಬಿದ ಟ್ರಕ್ ಹರಿಸಿ ಬರ್ಬರ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಮತ್ತೊಬ್ಬರು ಅಧಿಕಾರಿಯನ್ನು ಹತ್ಯೆ ಮಾಡಿರುವ ಘಟನೆ ಈಚೆಗೆ ನಡೆದಿತ್ತು. ಅಂತೆಯೇ ಜಾರ್ಖಂಡ್‌ನಲ್ಲಿ ತಪಾಸಣೆಗೆ ಮುಂದಾದ ಮಹಿಳಾ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ಗೆ ವಾಹನದಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಿರುವ ಘಟನೆಯೂ ಬೆಳಕಿಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • DSP‌ ಮಾದರಿಯಲ್ಲೇ ಮಹಿಳಾ PSI ಹತ್ಯೆ?- ತಪಾಸಣೆಗೆ ಮುಂದಾದ ಅಧಿಕಾರಿಗೆ ವಾಹನ ಡಿಕ್ಕಿ ಹೊಡೆದು ಸಾವು

    DSP‌ ಮಾದರಿಯಲ್ಲೇ ಮಹಿಳಾ PSI ಹತ್ಯೆ?- ತಪಾಸಣೆಗೆ ಮುಂದಾದ ಅಧಿಕಾರಿಗೆ ವಾಹನ ಡಿಕ್ಕಿ ಹೊಡೆದು ಸಾವು

    ರಾಂಚಿ: ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾದ ಡಿಎಸ್‌ಪಿ ಮೇಲೆ ಟ್ರಕ್‌ ಹರಿಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದ ಬೆನ್ನಲ್ಲೇ, ಜಾರ್ಖಂಡ್‌ನಲ್ಲಿ ತಪಾಸಣೆಗೆ ಮುಂದಾದ ಮಹಿಳಾ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ಗೆ ವಾಹನದಿಂದ ಡಿಕ್ಕಿ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

    ಕಳೆದ ರಾತ್ರಿ ವಾಹನ ತಪಾಸಣೆ ವೇಳೆ ಸಂಧ್ಯಾ ಟೋಪ್ನೋ ಹೆಸರಿನ ಮಹಿಳಾ‌ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರನ್ನು ಹತ್ಯೆ ಮಾಡಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂಧ್ಯಾ ಅವರನ್ನು ತೂಪುದಾನ ಪೊಲೀಸ್ ಠಾಣೆಯ ಉಸ್ತುವಾರಿಯಾಗಿ ನಿಯೋಜಿಸಲಾಗಿತ್ತು. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ- ತಡೆಯಲು ಹೋದ DSP ಮೇಲೆ ಟ್ರಕ್ ಹರಿಸಿ ಬರ್ಬರ ಹತ್ಯೆ

    ವಾಹನವೊಂದರಲ್ಲಿ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆಗೆ ಎಸ್‌ಐ ಸಂಧ್ಯಾ ಅವರು ಮುಂದಾಗಿದ್ದಾರೆ. ಈ ವೇಳೆ ವಾಹನ ನಿಲ್ಲಿಸದೆ ಚಾಲಕ, ಅಧಿಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ರಾಂಚಿ ಹಿರಿಯ ಸೂಪರಿಂಟೆಂಡೆಂಟ್‌ ಪೊಲೀಸ್‌ ತಿಳಿಸಿದ್ದಾರೆ.

    ಆರೋಪಿಯನ್ನು ಬಂಧಿಸಲಾಗಿದ್ದು, ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಾಣಿಜ್ಯ ಕ್ಷೇತ್ರದ ಉದ್ಯೋಗಿಗಳಿಗೆ ಗುಡ್‌ನ್ಯೂಸ್: ವರ್ಕ್ ಫ್ರಂ ಹೋಮ್ – ಹೊಸ ನಿಯಮ ಹೇಳೋದೇನು ಗಮನಿಸಿ

    ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಕಲ್ಲು ತುಂಬಿದ ಟ್ರಕ್ ಹರಿಸಿ ಬರ್ಬರ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿತ್ತು. ಈ ಘಟನೆ ಬೆನ್ನಲ್ಲೇ ಮತ್ತೊಬ್ಬರು ಅಧಿಕಾರಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

  • ಅಕ್ರಮ ಗಣಿಗಾರಿಕೆ- ತಡೆಯಲು ಹೋದ DSP ಮೇಲೆ ಟ್ರಕ್ ಹರಿಸಿ ಬರ್ಬರ ಹತ್ಯೆ

    ಅಕ್ರಮ ಗಣಿಗಾರಿಕೆ- ತಡೆಯಲು ಹೋದ DSP ಮೇಲೆ ಟ್ರಕ್ ಹರಿಸಿ ಬರ್ಬರ ಹತ್ಯೆ

    ಚಂಡೀಗಢ: ನುಹ್‍ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಕಲ್ಲು ತುಂಬಿದ ಟ್ರಕ್ ಹರಿಸಿ ಬರ್ಬರ ಹತ್ಯೆ ಮಾಡಿದ ಘಟನೆ ಹರಿಯಾಣದಲ್ಲಿ ನಡೆದಿದೆ.

    ಡಿಎಸ್‍ಪಿ ಶ್ರೇಣಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ಮೃತ ದುರ್ದೈವಿ. ಅರಾವಳಿ ಪರ್ವತ ಶ್ರೇಣಿಯ ಸಮೀಪದ ಪಚಗಾಂವ್‍ನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಡಿಎಸ್‍ಪಿ ಶ್ರೇಣಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ಮಾಹಿತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪೊಲೀಸ್ ತಂಡದೊಂದಿಗೆ ಪಚಗಾಂವ್‍ಗೆ ತೆರಳಿದ್ದಾರೆ.

    ಈ ವೇಳೆ ಪೊಲೀಸ್ ಸಿಬ್ಬಂದಿಯನ್ನು ಕಂಡ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಎಸ್‍ಪಿ ಸುರೇಂದ್ರಸಿಂಗ್ ಅವರು ದಾರಿಯಲ್ಲಿ ನಿಂತು ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಟ್ರಕ್‍ನ ಚಾಲಕ ಅವರ ಮೇಲೆ ಟ್ರಕ್‍ನ್ನು ಹರಿಸಿದ್ದರಿಂದ ಡಿಎಸ್‍ಪಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಡಿಎಸ್‍ಪಿ ಜೊತೆಯಿದ್ದ ಮತ್ತಿಬ್ಬರು ಪೊಲೀಸರು ತಪ್ಪಿಸಿಕೊಂಡಿದ್ದರಿಂದ ಘಟನೆಯಿಂದ ಪಾರಾಗಿದ್ದಾರೆ. ಘಟನೆ ಸಂಬಂಧಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಬೆಳಗಾವಿಯ ಬಿಎಸ್‍ಎಫ್ ಯೋಧ ದುರ್ಮರಣ

    POLICE JEEP

    ಘಟನೆ ಕುರಿತು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಹರಿಯಾಣ ಪೊಲೀಸ್ ಟ್ವೀಟ್ ಮಾಡಿ ಡಿಎಸ್‍ಪಿಗೆ ಸಂತಾಪ ವ್ಯಕ್ತಪಡಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಂಪಾಜೆ ಘಾಟ್‌ ರಸ್ತೆಯಲ್ಲಿ ನಾಳೆಯಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅನುಮತಿ: ಸಿಸಿ ಪಾಟೀಲ್‌

    Live Tv
    [brid partner=56869869 player=32851 video=960834 autoplay=true]

  • ಪತ್ನಿ, ಪುತ್ರ ಆಸ್ಪತ್ರೆಯಿಂದ ಮನೆಗೆ ಬರೋಷ್ಟರಲ್ಲಿ ಶವವಾಗಿ ಡಿಎಸ್‍ಪಿ ಪತ್ತೆ

    ಪತ್ನಿ, ಪುತ್ರ ಆಸ್ಪತ್ರೆಯಿಂದ ಮನೆಗೆ ಬರೋಷ್ಟರಲ್ಲಿ ಶವವಾಗಿ ಡಿಎಸ್‍ಪಿ ಪತ್ತೆ

    – ಕುತ್ತಿಗೆಯಲ್ಲಿ ಹಗ್ಗದ ಗುರುತು ಪತ್ತೆ
    – ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ರು

    ಹೈದರಾಬಾದ್: ಅನುಮಾನಾಸ್ಪದ ರೀತಿಯಲ್ಲಿ ಶ್ರೀಕಾಕುಲಂ ಉಪ ಪೊಲೀಸ್ ವರಿಷ್ಠಾಧಿಕಾರಿ (ವಿಶೇಷ ವಿಭಾಗ) ಕೃಷ್ಣ ವರ್ಮಾ ಅವರು ವಿಶಾಖಪಟ್ಟಣಂನ ತಮ್ಮ ನಿವಾಸದಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.

    ಡಿಎಸ್‍ಪಿ ಅವರ ಮಗನಿಗೆ ಆರೋಗ್ಯ ಸಮಸ್ಯೆಗಳಿದ್ದವು. ಹೀಗಾಗಿ ಡಿಎಸ್‍ಪಿ ಅವರ ಪತ್ನಿ ಮತ್ತು ಮಗ ಆಸ್ಪತ್ರೆಗೆ ಹೋಗಿದ್ದರು. ಡಿಎಸ್‍ಪಿ ವರ್ಮಾ ಮನೆಯಲ್ಲಿಯೇ ಇದ್ದರು. ಆದರೆ ಪತ್ನಿ ಮತ್ತು ಮಗ ಮನೆಗೆ ಹಿಂದಿರುಗಿ ಬಂದು ನೋಡಿದಾಗ ನೆಲದ ಮೇಲೆ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯ ಪ್ರಕಾರ, ಶುಕ್ರವಾರ ಬೆಳಗ್ಗೆ ಸುಮಾರು 10.30 ರಿಂದ ಮಧ್ಯಾಹ್ನ 1.30ರ ನಡುವೆ ಸಾವು ಸಂಭವಿಸಿರಬಹುದು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಲಾಗಿದೆ. ಸದ್ಯಕ್ಕೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ವರದಿಯ ಪ್ರಕಾರ ಡಿಎಸ್‍ಪಿ ಆತ್ಮಹತ್ಯೆಗೆ ಶರಣಾಗಿರಬೇಕು ಎಂದು ಹೇಳಲಾಗಿದೆ.

    ಡಿಎಸ್‍ಪಿ ಮನೆಯೊಳಗೆ ನೇಣು ಹಾಕಿಕೊಳ್ಳಲು ಹಗ್ಗ ಕಟ್ಟುವಾಗ ಕುರ್ಚಿ ಅಥವಾ ಟೇಬಲ್‍ನಿಂದ ಕೆಳಗೆ ಬಿದ್ದಂತೆ ಕಾಣುತ್ತದೆ. ಅಲ್ಲದೆ ಅವರ ಕುತ್ತಿಗೆಯಲ್ಲಿ ಹಗ್ಗದ ಗುರುತು ಇದೆ. ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದೇವೆ. ತನಿಖೆಯ ನಂತರ ಇದು ಆತ್ಮಹತ್ಯೆವೋ ಇಲ್ಲವೋ ಎಂಬುದು ತಿಳಿಯುತ್ತದೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಷಣ್ಮುಖ ರಾವ್ ತಿಳಿಸಿದ್ದಾರೆ.

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಂಗ್ ಜಾರ್ಜ್ ಆಸ್ಪತ್ರೆಗೆ ರವಾನಿಸಲಾಗಿದೆ. ವರ್ಮಾ ಅವರು ಆರೋಗ್ಯದ ಕಾರಣ ಕಳೆದ ಕೆಲವು ದಿನಗಳಿಂದ ರಜೆಯಲ್ಲಿದ್ದರು. ಅವರು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಕೃಷ್ಣ ವರ್ಮಾ ವೈಜಾಗ್‍ನ ಮೂರು ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ಶ್ರೀಕಾಕುಲಂಗೆ ವರ್ಗಾವಣೆಯಾಗುವ ಮೊದಲು ವರ್ಮಾ ಅವರು ವೈಜಾಗ್‍ನಲ್ಲಿ ಪೊಲೀಸ್ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

  • ಕ್ರಿಕೆಟ್ ಆಟಗಾರ್ತಿ ಹರ್ಮನ್‍ಪ್ರೀತ್ ಕೌರ್ ಗೆ  ಡಿಎಸ್‍ಪಿ ಹುದ್ದೆ ರದ್ದು!

    ಕ್ರಿಕೆಟ್ ಆಟಗಾರ್ತಿ ಹರ್ಮನ್‍ಪ್ರೀತ್ ಕೌರ್ ಗೆ ಡಿಎಸ್‍ಪಿ ಹುದ್ದೆ ರದ್ದು!

    ಚಂಡೀಗಡ: ನಕಲಿ ಪದವಿ ಪ್ರಮಾಣ ಪತ್ರಗಳನ್ನು ನೀಡಿದ್ದ ಕಾರಣ ಟೀಂ ಇಂಡಿಯಾ ಮಹಿಳಾ ಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್‍ಪ್ರೀತ್ ಕೌರ್ ಅವರಿಗೆ ಗೌರವಾರ್ಥವಾಗಿ ನೀಡಿದ್ದ ಡಿಎಸ್‍ಪಿ ಹುದ್ದೆಯನ್ನು ಪಂಜಾಬ್ ಸರ್ಕಾರ ಹಿಂಪಡೆದುಕೊಂಡಿದೆ.

    2017ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ನಲ್ಲಿ ಭಾರತ ರನ್ನರ್ ಅಪ್ ಪ್ರಶಸ್ತಿಗಳಿಸಲು ಹರ್ಮತ್‍ಪ್ರೀತ್ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ ಡಿಎಸ್‍ಪಿ ಹುದ್ದೆಯನ್ನು ನೀಡಿ ಗೌರವಿಸಿತ್ತು.

    ಈ ಮೊದಲು ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ದೃಷ್ಟಿಯಿಂದ ರೈಲ್ವೆ ಇಲಾಖೆ ನೀಡಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಡಿಎಸ್‍ಪಿ ಹುದ್ದೆಯನ್ನು ಅಲಂಕರಿಸಿದ್ದರು.

    ಮಾರ್ಚ್ 1 ರಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ಡಿಎಸ್‍ಪಿ ಸುರೇಶ್ ಅರೋರರವರು ಹರ್ಮನ್‍ಪ್ರೀತ್ ಕೌರ್ ರವರಿಗೆ ಡಿಎಎಸ್‍ಪಿ ಹುದ್ದೆ ಜವಾಬ್ದಾರಿಯನ್ನು ನೀಡಿ ಗೌರವಿಸಿದ್ದರು. ಡಿಎಸ್‍ಪಿ ಹುದ್ದೆಗೆ ಸಂಬಂಧಿಸಿದಂತೆ ಅವರು ಉತ್ತರ ಪ್ರದೇಶದ ಮೀರತ್ ನ ಚೌಧರಿ ಸಿಂಗ್ ವಿಶ್ವ ವಿದ್ಯಾನಿಲಯದಲ್ಲಿ ಪದವಿ ಪೂರ್ಣಗೊಳಿಸಿದರ ಪ್ರಮಾಣ ಪತ್ರವನ್ನು ಇಲಾಖೆಗೆ ಸಲ್ಲಿಸಿದ್ದರು.

    ಇಲಾಖೆಗೆ ಸಲ್ಲಿಸಿದ್ದ ದಾಖಲೆಗಳನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯದ ಜೊತೆ ಪರಿಶೀಲನೆ ನಡೆಸಿದಾಗ ಡಿಗ್ರಿ ಪ್ರಮಾಣಪತ್ರಗಳು ನಕಲಿಯೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹರ್ಮನ್‍ಪ್ರೀತ್ ಕೌರ್ ರವರಿಗೆ ನೀಡಿದ ಡಿಎಸ್‍ಪಿ ಹುದ್ದೆಯನ್ನು ಪಂಜಾಬ್ ಸರ್ಕಾರ ಹಿಂತೆಗೆದುಕೊಂಡಿದೆ.

    ಪದವಿ ಪ್ರಮಾಣಪತ್ರಗಳು ನಕಲಿ ಆಗಿರುವುದರಿಂದ ಅವರು ಡಿಎಸ್‍ಪಿ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಅವರ ಕನಿಷ್ಠ ವಿದ್ಯಾರ್ಹತೆ 12ನೇ ತರಗತಿ ಆಗಿರುವುದರಿಂದ ಅವರು ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಯಲ್ಲಿ ಮುಂದುವರೆಯಬಹುದು. ಈ ಕುರಿತು ಕ್ರಿಕೆಟ್ ಆಟಗಾರ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಹಿಂದೆ ಕಾಮನ್‍ವೇಲ್ತ್ ಕೂಟದಲ್ಲಿ ಚಿನ್ನದ ಪದಕ ನೀಡಿದ್ದ ಮಂದೀಪ್ ಕೌರ್ ಅವರಿಗೆ ಪಂಜಾಬ್ ಸರ್ಕಾರ ಡಿಎಸ್‍ಪಿ ಹುದ್ದೆಯನ್ನು ನೀಡಿತ್ತು. ಬಳಿಕ ದಾಖಲಾತಿ ಪರಿಶೀಲನೆ ವೇಳೆ ನಕಲಿ ಪ್ರಮಾಣಪತ್ರ ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಡಿಎಸ್‍ಪಿ ಹುದ್ದೆಯನ್ನು ಹಿಂದಕ್ಕೆ ಪಡೆದುಕೊಂಡಿತ್ತು.