ಚೆನ್ನೈ: ತಮಿಳುನಾಡಿನಲ್ಲಿ ನಿರೀಕ್ಷೆಯಂತೆ ಸೂರ್ಯೋದಯವಾಗಿದೆ. ಸೂರ್ಯ ಶಾಖಕ್ಕೆ ಎರಡೆಲೆ ಬಾಡಿದೆ. ಕಮಲ ಮುದುಡಿದೆ. ಜಯಲಲಿತಾ, ಕರುಣಾನಿಧಿ ಇಲ್ಲದೇ ನಡೆದ ಮೊದಲ ಚುನಾವಣೆಯಲ್ಲಿ ಆಡಲಿತ ವಿರೋಧಿ ಅಲೆಗೆ ಅಣ್ಣಾ ಡಿಎಂಕೆ ಕೊಚ್ಚಿ ಹೋಗಿದ್ದು, ಡಿಎಂಕೆ ಭರ್ಜರಿ ಗೆಲುವು ಸಾಧಿಸಿದೆ.
ಆರಂಭದಿಂದಲೂ ಮುನ್ನಡೆ ಕಾಯ್ದುಕೊಳ್ಳುತ್ತಲೇ ಬಂದ ಡಿಎಂಕೆಗೆ ಒಂದು ದಶಕದ ಬಳಿಕ ಅಧಿಕಾರ ಸಿಕ್ಕಿದೆ. ಆರಂಭಿಕ ಟ್ರೆಂಡ್‍ನಲ್ಲಿಯೇ ಫಲಿತಾಂಶ ಏನಾಗಬಹುದು ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಿತ್ತು. ಅಧಿಕೃತವಾಗಿ ಒಂದು ಸೀಟ್ ಗೆಲ್ಲದಿರುವ ಹೊತ್ತಲ್ಲಿ ಅಂದರೆ ಮಧ್ಯಾಹ್ನ 12 ಗಂಟೆಗೆ ಡಿಎಂಕೆ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು.

ಪಕ್ಷದ ಮುಖ್ಯಸ್ಥ ಎಂಕೆ ಸ್ಟಾಲಿನ್ ಮೇ 6ರಂದು ತಮಿಳುನಾಡಿನ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ ಎಂದು ಡಿಎಂಕೆ ಘೋಷಿಸಿತ್ತು. ದ್ರಾವಿಡ ರಾಜಕಾರಣದ ಮುಂದೆ, ಹಿಂದುತ್ವ, ರಾಷ್ಟ್ರೀಯ ರಾಜಕಾರಣ ಫಲ ಕೊಟ್ಟಿಲ್ಲ. ಇಲ್ಲಿ ಬಿಜೆಪಿಯ ಪರವಾಗಿ ಚುನಾವಣಾ ಉಸ್ತುವಾರಿಯಾಗಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪ್ರಚಾರ ಮಾಡಿ ಪಕ್ಷ ಸಂಘಟನೆ ಮಾಡಿದ್ದರು.
ತಮಿಳುನಾಡಲ್ಲಿ ಸೂರ್ಯೋದಯ ( ಒಟ್ಟು 234)
* ಡಿಎಂಕೆ – 143 (+45)
* ಎಐಎಡಿಎಂಕೆ – 90 (- 46)
* ಮಕ್ಕಳ್ ನಿಧಿ ಮಯ್ಯಂ – 01 (ಇರಲಿಲ್ಲ)
ಗೆದ್ದ ಪ್ರಮುಖರು
* ಎಂಕೆ ಸ್ಟಾಲಿನ್, (ಡಿಎಂಕೆ)
* ಉದಯನಿಧಿ ಸ್ಟಾಲಿನ್, ಚೆಪಾಕ್ (ಡಿಎಂಕೆ)
* ಪಳನಿಸ್ವಾಮಿ, (ಎಐಎಡಿಎಂಕೆ)
* ಪನ್ನೀರ್ ಸೆಲ್ವಂ, (ಎಐಎಡಿಎಂಕೆ)
* ಕಮಲ್ ಹಾಸನ್, ಕೊಯಮತ್ತೂರು (ಎಂಎನ್‍ಎಂ)
ಸೋತ ಪ್ರಮುಖರು
* ಅಣ್ಣಾಮಲೈ, ಅವರಕುರುಚ್ಚಿ, ಬಿಜೆಪಿ
* ಖುಷ್ಬು, ಥೌಸಂಡ್ ಲೈಟ್ಸ್, ಬಿಜೆಪಿ
* ಟಿಟಿವಿ ದಿನಕರನ್,ಕೋವಿಲ್‍ಪಟ್ಟಿ (ಎಎಂಎಂಕೆ)
ಡಿಎಂಕೆಗೆ ಗೆಲುವಿಗೆ ಕಾರಣ ಏನು?
* ಅಣ್ಣಾ ಡಿಎಂಕೆಗೆ ಆಡಳಿತ ವಿರೋಧಿ ಅಲೆ
* ಅಣ್ಣಾ ಡಿಎಂಕೆಗೆ ಸಮರ್ಥ ನಾಯಕತ್ವ ಕೊರತೆ
* ಡಿಎಂಕೆಗೆ ಎಂಕೆ ಸ್ಟಾಲಿನ್ ನಾಯಕತ್ವ
* ಅಣ್ಣಾ ಡಿಎಂಕೆಗೆ ಬಿಜೆಪಿ ಮೈತ್ರಿ ಮುಳುವು?
* ಬಿಜೆಪಿಯಿಂದ ಶೂನ್ಯ ಸಂಪಾದನೆ
* ಹಿಂದುತ್ವಕ್ಕೆ ಹೆಚ್ಚಿನ ಆದ್ಯತೆ ಸಿಗದೇ ಇರುವುದು
* ರಾಷ್ಟ್ರೀಯ ರಾಜಕಾರಣಕ್ಕೂ ಅವಕಾಶ ಇಲ್ಲದಿರುವುದು