Tag: ಡಿಎಂಕೆ

  • 5 ಲಕ್ಷದ ವಾಚ್‌ ವಿವಾದ: ದೇಶಭಕ್ತಿಯ ಟ್ವಿಸ್ಟ್‌ ನೀಡಿ ಸವಾಲೆಸೆದ ಅಣ್ಣಾಮಲೈ

    5 ಲಕ್ಷದ ವಾಚ್‌ ವಿವಾದ: ದೇಶಭಕ್ತಿಯ ಟ್ವಿಸ್ಟ್‌ ನೀಡಿ ಸವಾಲೆಸೆದ ಅಣ್ಣಾಮಲೈ

    ಚೆನ್ನೈ: ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡು(Tamil Nadu) ಬಿಜೆಪಿ ಅಧ್ಯಕ್ಷ ಅಣ್ಣಾಮಲೈ(Annamalai) ಅವರು ಧರಿಸುತ್ತಿರುವ 5 ಲಕ್ಷ ರೂ. ಮೌಲ್ಯ ವಾಚ್‌ ಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

    ಇಂಧನ ಖಾತೆಯ ಸಚಿವ ವಿ ಸೆಂಥಿಲ್ ಬಾಲಾಜಿ ಅವರು, “ನಮ್ಮ ಬಳಿ ನಾಲ್ಕು ಮೇಕೆಗಳಿವೆ ಎಂದು ಹೇಳುವ ರಾಜ್ಯ ಬಿಜೆಪಿ ಮುಖ್ಯಸ್ಥರು 5 ಲಕ್ಷ ರೂಪಾಯಿಗೆ ಬೆಲೆಬಾಳುವ ವಾಚ್ ಖರೀದಿಸಿದ್ದು ಹೇಗೆ” ಎಂದು ಪ್ರಶ್ನಿಸುವ ಮೂಲಕ ಚರ್ಚೆಯನ್ನು ಹುಟ್ಟುಹಾಕಿದ್ದರು.

    ಈ ಪ್ರಶ್ನೆಯನ್ನು ಅಣ್ಣಾಮಲೈ ನಿರ್ಲಕ್ಷಿಸಬಹುದು ಎಂದು ರಾಜ್ಯ ಬಿಜೆಪಿ ನಾಯಕರು ಊಹಿಸಿದ್ದರು. ಆದರೆ ತನ್ನ ವ್ಯಕ್ತಿತ್ವದ ಬಗ್ಗೆ ಆರೋಪ ಬಂದ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಂಡ ಅಣ್ಣಾಮಲೈ ಉತ್ತರ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದಿರುವ ಇವರು ನಾನು ಹಣವನ್ನು ಪಾವತಿ ಮಾಡಿಯೇ ಈ ವಾಚ್‌ ಖರೀದಿಸಿದ್ದೇನೆ. ನಾನು ದೇಶ ಭಕ್ತನಾಗಿದ್ದು ರಫೇಲ್‌ ಜೆಟ್‌ ಹಾರಿಸಲು ಸಾಧ್ಯವಿಲ್ಲದ ಕಾರಣ ಈ ವಾಚನ್ನು(Rafale watch) ಖರೀದಿಸಿದ್ದೇನೆ. ನಾನು ಸಾಯುವವರೆಗೂ ಈ ವಾಚ್‌ ನನ್ನ ಬಳಿಯೇ ಇರಲಿದೆ ಎಂದು ತಿರುಗೇಟು ನೀಡಿದ್ದಾರೆ.

    ಅಣ್ಣಮಲೈ ಹೇಳಿದ್ದೇನು?
    ಈ ರಫೇಲ್‌ ವಾಚನ್ನು ನಾನು ತಮಿಳುನಾಡು ಬಿಜೆಪಿ ಅಧ್ಯಕ್ಷನಾಗುವ ಮೊದಲು ಮೇ, 2021 ರಲ್ಲಿ ಖರೀದಿ ಮಾಡಿದ್ದೇನೆ. ಈ ವಾಚ್‌ ಖರೀದಿಯ ಬಿಲ್‌ ಜೊತೆಗೆ ನನ್ನ ಎಲ್ಲಾ ಜೀವಮಾನದ ಆದಾಯ ತೆರಿಗೆ ಪಾವತಿಗಳು, 10 ವರ್ಷದ ನನ್ನ ಎಲ್ಲಾ ಬ್ಯಾಂಕ್ ಬ್ಯಾಲೆನ್ಸ್‌ ಫೋಟೋಕಾಪಿಗಳು ತೋರಿಸುತ್ತೇನೆ. ಇದನ್ನೂ ಓದಿ: ಕೋವಿಡ್ ಮಾರ್ಗಸೂಚಿ ಅನುಸರಿಸಿ ಇಲ್ಲಾ ಜೋಡೋ ಯಾತ್ರೆ ನಿಲ್ಲಿಸಿ – ಕಾಂಗ್ರೆಸ್‌ಗೆ ಕೇಂದ್ರ ಸೂಚನೆ

    2011ರ ಆಗಸ್ಟ್‌ನಿಂದ ಐಪಿಎಸ್‌ ಅಧಿಕಾರಿಯಾಗಿ ರಾಜೀನಾಮೆ ನೀಡುವವರೆಗೂ ನನ್ನ ಎಲ್ಲಾ ಗಳಿಕೆಗಳು ಮತ್ತು ನಾನು ರಾಜೀನಾಮೆ ನೀಡುವವರೆಗೆ ಬ್ಯಾಂಕ್‌ ಬ್ಯಾಲೆನ್ಸ್‌ ವಿವರ, ಕುರಿ ಮತ್ತು ಹಸುಗಳ ಸಂಖ್ಯೆ ಸೇರಿದಂತೆ ನಾನು ಹೊಂದಿರುವ ಎಲ್ಲಾ ಸ್ಥಿರಾಸ್ತಿಗಳ ವಿವರವನ್ನು ತಮಿಳುನಾಡಿನಲ್ಲಿ ನಡೆಸಲಿರುವ ಪಾದಯಾತ್ರೆಯ ಆರಂಭದ ದಿನ ಬಿಡುಗಡೆ ಮಾಡುತ್ತೇನೆ. ಯಾರಾದರೂ ನನ್ನ ಆಸ್ತಿಗಿಂತ 1 ಪೈಸೆ ಆಸ್ತಿ ಹೆಚ್ಚಿದೆ ಎಂದು ಸಾಬೀತು ಪಡಿಸಿದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ನೀಡುತ್ತೇನೆ. ಅಷ್ಟೇ ಅಲ್ಲದೇ ಡಿಎಂಕೆ ನಾಯಕರು ಈ ರೀತಿಯಾಗಿ ತಮ್ಮ ಆಸ್ತಿಗಳ ವಿವರನ್ನು ಬಹಿರಂಗ ಪಡಿಸಲಿ ಎಂದು ಸವಾಲು ಎಸೆದಿದ್ದಾರೆ.

    ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ದುಬಾರಿ ವಾಚ್ ಧರಿಸುತ್ತಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ದುಬಾರಿ ವಾಚ್ ಧರಿಸುತ್ತಾರೆ ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಈಗ ಸ್ಟಾಲಿನ್ ಅವರ ಪುತ್ರ ಉದಯನಿಧಿ 14 ಲಕ್ಷ ರೂಪಾಯಿ ಮೌಲ್ಯದ ವಾಚ್ ಧರಿಸಿರುವುದು ಕಂಡುಬಂದಿದೆ ಎಂದು ಬಿಜೆಪಿ ಮುಖಂಡ ಎಸ್.ಜಿ.ಸೂರ್ಯ ಆರೋಪಿಸಿದ್ದಾರೆ. ಅವರಿಗೆ ಹಣ ಎಲ್ಲಿಂದ ಬಂತು? ಅವರ ವೃತ್ತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ತಮಿಳುನಾಡು ರೈತ ಸಾವು

    ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ತಮಿಳುನಾಡು ರೈತ ಸಾವು

    ಚೆನ್ನೈ: ಹಿಂದಿ ಹೇರಿಕೆ (Hindi imposition) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹಿರಿಯ ಡಿಎಂಕೆ ಕಾರ್ಯಕರ್ತರೊಬ್ಬರು ಮೈಗೆ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ಸೇಲಂ ಜಿಲ್ಲೆಯ ಪಕ್ಷದ ಕಚೇರಿ ಬಳಿ ನಡೆದಿದೆ.

    MK STALIN AND ANNAMALAI

    ಗಾಯಗೊಂಡಿರುವ ವ್ಯಕ್ತಿಯನ್ನು ಡಿಎಂಕೆ ರೈತ (DMK farmer) ವಿಭಾಗದ ಮಾಜಿ ಕಾರ್ಯಕರ್ತ 85 ವರ್ಷದ ತಂಗವೇಲ್ ಎಂದು ಗುರುತಿಸಲಾಗಿದೆ. ಪಕ್ಷದ ಕಚೇರಿ ಮುಂದೆ ಶನಿವಾರ ತಂಗವೇಲ್ ಅವರು ಹಿಂದಿ ಹೇರಿಕೆ ವಿರುದ್ಧ ಘೋಷಣೆಯನ್ನು ಕೂಗುತ್ತಾ, ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಇದೇ ವೇಳೆ ಪಕ್ಷದ ಕೆಲವು ಕಾರ್ಯಕರ್ತರು ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟೋತ್ತಿಗೆ ಬೆಂಕಿ ಮೈ ತುಂಬಾ ಹರಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: `ಗಾಲ್ವಾನ್ ಸೇಸ್ ಹಾಯ್’ – ರಿಚಾ ಚಡ್ಡಾ ಬೆಂಬಲಿಸಿದ ನಟ ಪ್ರಕಾಶ್ ರಾಜ್

    ತಮಿಳು ಭಾಷೆ ಇರುವಾಗ ಹಿಂದಿ ಹೇರುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಬರೆದ ಕಾಗದವನ್ನು ಪ್ರತಿಭಟನಾಕಾರರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೊಂದೆಡೆ ವ್ಯಕ್ತಿಯ ಸಾವಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (Chief Minister MK Stalin) ಅವರು, ಇನ್ಮುಂದೆ ಯಾರು ಪ್ರಾಣ ಕಳೆದುಕೊಳ್ಳಬಾರದು. ಹಿಂದಿ ಹೇರಿಕೆಯ ವಿರುದ್ಧ ರಾಜಕೀಯವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಹೋರಾಟ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರದಿಂದ (Central Government) ಪ್ರತಿಕ್ರಿಯೆ ಬರುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರಿನ ವಿವಾದಿತ ಗುಂಬಜ್ ಬಸ್ ನಿಲ್ದಾಣ – ಮೂರರಲ್ಲಿ 2 ಗೋಪುರ ತೆರವು

    Live Tv
    [brid partner=56869869 player=32851 video=960834 autoplay=true]

  • ರಾಜ್ಯಪಾಲರನ್ನು ಕೂಡಲೇ ವಜಾಗೊಳಿಸಿ – ರಾಷ್ಟ್ರಪತಿಗಳಿಗೆ ಡಿಎಂಕೆ ಪತ್ರ

    ರಾಜ್ಯಪಾಲರನ್ನು ಕೂಡಲೇ ವಜಾಗೊಳಿಸಿ – ರಾಷ್ಟ್ರಪತಿಗಳಿಗೆ ಡಿಎಂಕೆ ಪತ್ರ

    ಚೆನ್ನೈ: ತಮಿಳುನಾಡು (Tamilnadu) ರಾಜ್ಯಪಾಲ ಆರ್.ಎನ್. ರವಿ (Governor RN Ravi) ಅವರನ್ನು ಕೂಡಲೇ ವಜಾಗೊಳಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರಿಗೆ ಪತ್ರದ ಮೂಲಕ ಆಡಳಿತರೂಢ ಪಕ್ಷ ಡಿಎಂಕೆ ಮನವಿ ಮಾಡಿದೆ.

    ರಾಜ್ಯಪಾಲ ಆರ್.ಎನ್.ರವಿ ಅವರು “ಶಾಂತಿಗೆ ಬೆದರಿಕೆ” ಆಗಿದ್ದು, ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡಿರುವ ಸರ್ಕಾರಕ್ಕೆ ಮತ್ತು ಜನರ ಸೇವೆಗೆ ಅಡ್ಡಿಪಡಿಸಿದ್ದಾರೆ. ಕೋಮು ದ್ವೇಷವನ್ನು ಪ್ರಚೋದಿಸುತ್ತಾರೆ. ಹೀಗಾಗಿ ಅವರನ್ನು ಪದಚ್ಯುತಿಗೊಳಿಸಬೇಕು ಎಂದು ರಾಷ್ಟ್ರಪತಿಗಳಿಗೆ ಡಿಎಂಕೆ (DMK) ಪತ್ರದ ಮೂಲಕ ಮನವಿ ಸಲ್ಲಿಸಿದೆ.

    ಸಂವಿಧಾನ ಮತ್ತು ಕಾನೂನನ್ನು ಸಂರಕ್ಷಿಸಲು, ರಕ್ಷಿಸಲು ಮತ್ತು ಸಮರ್ಥಿಸಿಕೊಳ್ಳುತ್ತೇನೆ ಎಂಬ ಪ್ರಮಾಣ ವಚನವನ್ನು ರಾಜ್ಯಪಾಲ ಆರ್.ಎನ್.ರವಿ ಉಲ್ಲಂಘಿಸಿದ್ದಾರೆ. ಅಸೆಂಬ್ಲಿ ಅಂಗೀಕರಿಸಿದ ಮಸೂದೆಗಳಿಗೆ ಸಮ್ಮತಿ ನೀಡಲು ಅವರು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಡಿಎಂಕೆ ಆರೋಪಿಸಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಅನ್ಯ ಕೋಮಿನ ಯುವಕನ ಪ್ರೀತಿ ಮಾಡಿದ್ದಕ್ಕೆ ತಂದೆಯಿಂದ್ಲೇ ಮಗಳ ಕೊಲೆ

    ರಾಜ್ಯಪಾಲರ ಹೇಳಿಕೆಗಳು ಸರ್ಕಾರದ ಬಗ್ಗೆ ಅಸಮಾಧಾನವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವಂತೆ ಇದ್ದು, ಕೆಲವರು ಅವರು ದೇಶದ್ರೋಹಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನುತ್ತಿದ್ದು, ಆರ್.ಎನ್. ರವಿ ಅವರು ಸಾಂವಿಧಾನಿಕ ಕಚೇರಿಗೆ ಅನರ್ಹರು, ಅವರನ್ನು ಕೂಡಲೇ ವಜಾಗೊಳಿಸಿ ಎಂದು ಡಿಎಂಕೆ ಆಗ್ರಹಿಸಿದೆ. ಇದನ್ನೂ ಓದಿ: ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿದ ಕೂಡಲೇ ಒಕ್ಕಲಿಗರು ಬಿಜೆಪಿ ಹಿಂದೆ ಹೋಗೋದಿಲ್ಲ: ಕುಮಾರಸ್ವಾಮಿ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಯಲ್ಲಿರುವ ನಟಿಯರು ಐಟಂಗಳು ಹೇಳಿಕೆಗೆ ಕ್ಷಮೆಯಾಚಿಸಿದ ಕನಿಮೋಳಿ

    ಬಿಜೆಪಿಯಲ್ಲಿರುವ ನಟಿಯರು ಐಟಂಗಳು ಹೇಳಿಕೆಗೆ ಕ್ಷಮೆಯಾಚಿಸಿದ ಕನಿಮೋಳಿ

    ಚೆನ್ನೈ: ಬಿಜೆಪಿ (BJP) ನಾಯಕರಾಗಿ ಬದಲಾದ ಹಲವರು ನಟಿಯರ ಬಗ್ಗೆ ಡಿಎಂಕೆ (DMK) ವಕ್ತಾರ ಸೈದಾಯಿ ಸಾಧಿಕ್ (Saidai Sadiq) ಆಕ್ಷೇಪಾರ್ಹ ಹೇಳಿಕೆ ನೀಡಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳುನಾಡು ಬಿಜೆಪಿಯಲ್ಲಿರುವ ನಟಿ ಖುಷ್ಬು ಸುಂದರ್ (Khushbu Sundar), ನಮಿತಾ (Namitha), ಗೌತಮಿ (Gowthami), ಗಾಯತ್ರಿ ರಘುರಾಮ್‍ರನ್ನು ಐಟಂಗಳು ಎಂದು ಬಹಿರಂಗ ಸಮಾವೇಶವೊಂದಲ್ಲಿ ಸಾಧಿಕ್ ವ್ಯಾಖ್ಯಾನಿಸಿದ್ದಾರೆ.

    ತಮಿಳುನಾಡಲ್ಲಿ ಬಿಜೆಪಿ ತಳವೂರುತ್ತಿದೆ ಎಂದು ಖುಷ್ಬು ಹೇಳ್ತಾರೆ. ಅಮಿತ್ ಶಾ (Amit Shah) ನೆತ್ತಿಯ ಮೇಲೆ ಕೂದಲಾದರೂ ಬರಬಹುದು ಆದ್ರೆ, ಇಲ್ಲಿ ಕಮಲದ ವಿಕಸನ ಆಗಲ್ಲ. ಡಿಎಂಕೆಯನ್ನು ನಾಶ ಮಾಡಿ ಬಿಜೆಪಿ ಬಲಿಷ್ಠಗೊಳಿಸಲು ಇಂತವರೆಲ್ಲ ನೆರವಾಗ್ತಾರಾ? ಖಂಡಿತವಾಗಲೂ ಸಾಧ್ಯವಿಲ್ಲ. ನನ್ನ ಬ್ರದರ್ ಇಳಯ ಅರುಣ ಖುಷ್ಬುರನ್ನು ಎಷ್ಟೋ ಬಾರಿ ಭೇಟಿ ಮಾಡಿದ್ರು. ಅಂದ್ರೆ ನಾನು ಹೇಳೋದು, ಆಕೆ ಡಿಎಂಕೆಯಲ್ಲಿದ್ದಾಗ (DMK) ಆರು ಬಾರಿ ಸಮಾವೇಶಗಳಲ್ಲಿ ಮೀಟ್ ಮಾಡಿದ್ರು ಎಂದು ನಾನಾರ್ಥ ಬರುವಂತೆ ಮಾತನಾಡಿದ್ದಾರೆ. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಜುಟ್ಟು ಹಿಡಿದು ರೋಗಿಯನ್ನು ಬೆಡ್ ಮೇಲೆ ಎಳೆದೊಯ್ದ ನರ್ಸ್ – ನಡೆದಿದ್ದೇನು ಗೊತ್ತಾ?

    ಸಾದಿಕ್ ಹೇಳಿಕೆ ಖಂಡಿಸಿ ಬಿಜೆಪಿ ಬೀದಿಗೆ ಇಳಿದಿದೆ. ನಟಿ ಖುಷ್ಬು ಟ್ವೀಟ್ ಮಾಡಿ, ಮಹಿಳೆಯರನ್ನು ಅಪಮಾನಿಸುವುದು ಹೊಸ ದ್ರಾವಿಡ ಮಾದರಿಯ ಭಾಗವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬೆನ್ನಲ್ಲೇ ಡಿಎಂಕೆ ನಾಯಕಿ ಕನಿಮೋಳಿ ಕ್ಷಮೆಯಾಚಿಸಿದ್ದಾರೆ. ನಾನೊಬ್ಬ ಮಹಿಳೆಯಾಗಿ, ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಹೇಳಿದ್ರೂ ಕ್ಷಮಿಸಲು ಸಾಧ್ಯವಿಲ್ಲ. ನನ್ನ ನಾಯಕ ಸ್ಟಾಲಿನ್, ನನ್ನ ಪಕ್ಷ ಡಿಎಂಕೆ ಇದನ್ನು ಎಂದಿಗೂ ಕ್ಷಮಿಸಲ್ಲ ಎಂದು ಕನಿಮೋಳಿ (Kanimozhi) ಟ್ವೀಟ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಮಹಿಳೆಯರನ್ನು ಐಟಂ ಎಂದು ಅವಹೇಳನಕಾರಿ ಎಂದು ಮುಂಬೈ ವಿಶೇಷ ಕೋರ್ಟ್ (Court) ಅಭಿಪ್ರಾಯಪಟ್ಟಿತ್ತು. ಇದನ್ನೂ ಓದಿ: ಭಾರತೀಯ ರೂಪಾಯಿ, ಏಮ್ಸ್ ಯೋಜನೆ ಬಗ್ಗೆ ಟೀಕೆ – ಬಿಜೆಪಿ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ರೂಪಾಯಿ, ಏಮ್ಸ್ ಯೋಜನೆ ಬಗ್ಗೆ ಟೀಕೆ – ಬಿಜೆಪಿ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ

    ಭಾರತೀಯ ರೂಪಾಯಿ, ಏಮ್ಸ್ ಯೋಜನೆ ಬಗ್ಗೆ ಟೀಕೆ – ಬಿಜೆಪಿ ವಿರುದ್ಧ ಉದಯನಿಧಿ ಸ್ಟಾಲಿನ್ ವಾಗ್ದಾಳಿ

    ಚೆನ್ನೈ: ಅಮೆರಿಕ ಡಾಲರ್ ವಿರುದ್ಧ ಭಾರತೀಯ ರೂಪಾಯಿ ಕುಸಿತಗೊಂಡಿರುವ ಮತ್ತು ಮಧುರೈನ AIIMS ಯೋಜನೆ (AIIMS Project) ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ(Dravida Munnetra Kazhagam) (ಡಿಎಂಕೆ) ಶಾಸಕ ಉದಯನಿಧಿ ಸ್ಟಾಲಿನ್ (Udhayanidhi Stalin) ವಾಗ್ದಾಳಿ ನಡೆಸಿದ್ದಾರೆ.

    ಅಕ್ಟೋಬರ್ 27 ರಂದು ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್‍ಗೆ (Nirmala Sitharaman) ಪ್ರಶ್ನೆ ಕೇಳಿದರೆ ಅವರು ನೀಡುವ ಉತ್ತರ ಕೇಳದರೆ ಯಾರನ್ನಾದರೂ ಬೆಚ್ಚಿ ಬೀಳಿಸುತ್ತದೆ. ಇತ್ತೀಚೆಗೆ ಅಮೆರಿಕಾ ಡಾಲರ್ (US Dollar) ಎದುರು ಭಾರತೀಯ ರೂಪಾಯಿ (Indian rupee) ಹೇಗೆ ಕುಸಿಯುತ್ತಿದೆ ಎಂದು ಅವರನ್ನು ಕೇಳಿದರೆ, ನೀವು ಅದನ್ನು ಏಕೆ ನೆಗೆಟಿವ್ ಆಗಿ ನೋಡುತ್ತಿದ್ದೀರಾ, ಅಮೆರಿಕಾ ಡಾಲರ್ ಬಲಗೊಳ್ಳುತ್ತಿರುವುದನ್ನು ಪಾಸಿಟಿವ್ ಆಗಿ ನೋಡಿ ಎಂದಿದ್ದರು. ನಮಗೆ ಎಂತಹ ಹಣಕಾಸು ಮಂತ್ರಿ ಸಿಕ್ಕಿದ್ದಾರೆ ನೋಡಿ. ಮೋದಿ ಹೇಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೋ, ಅದೇ ರೀತಿ ಬಿಜೆಪಿಯ ಬಹುತೇಕ ನಾಯಕರು ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

    ಇದೇ ವೇಳೆ ಮಧುರೈನಲ್ಲಿ (Madurai) ಸ್ಥಾಪಿಸಲಾಗುತ್ತಿರುವ ಏಮ್ಸ್ ಯೋಜನೆಯ ಬಗ್ಗೆ ಮಾತನಾಡಿದ ಅವರು, ಯೋಜನೆಯ ಫಲಿತಾಂಶವನ್ನು ಬಿಜೆಪಿ ನಾಯಕರು ತೋರಿಸಬೇಕು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರು, ಶೇ 95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು. ಆದರೆ ಅವರು ಒಂದೇ ಒಂದು ಕಲ್ಲು ಕೂಡ ಹಾಕಿಲ್ಲ. ಬಿಜೆಪಿಯವರು ಕೇವಲ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪತ್ನಿಯ ಶವ ತರಲು ಹಣವಿಲ್ಲದೇ ಪರದಾಟ – ಸಹಾಯ ಮಾಡಿ ಮಾನವೀಯತೆ ಮೆರೆದ ಅಪ್ಪು ಅಭಿಮಾನಿಗಳು

    Live Tv
    [brid partner=56869869 player=32851 video=960834 autoplay=true]

  • ಡಿಎಂಕೆ ಅಧ್ಯಕ್ಷರಾಗಿ 2ನೇ ಬಾರಿಗೆ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆ

    ಡಿಎಂಕೆ ಅಧ್ಯಕ್ಷರಾಗಿ 2ನೇ ಬಾರಿಗೆ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆ

    ಚೆನ್ನೈ: ಚೆನ್ನೈನಲ್ಲಿ ನಡೆದ ಡಿಎಂಕೆ (DMK) ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಇಂದು ಡಿಎಂಕೆ ಮುಖಂಡ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Tamil Nadu Chief Minister M K Stalin) ಅವರನ್ನು ಪಕ್ಷದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ಹೊಸದಾಗಿ ರಚನೆಯಾದ ಜನರಲ್ ಕೌನ್ಸಿಲ್‍ನಲ್ಲಿ, ಪಕ್ಷದ ಉನ್ನತ ಹುದ್ದೆಗೆ ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಡಿಎಂಕೆ ಘೋಷಣೆ ಮಾಡಿದೆ. ಪ್ರಧಾನ ಕಾರ್ಯದರ್ಶಿ ಪಕ್ಷದ ಹಿರಿಯ ನಾಯಕರಾದ ದುರೈಮುರುಗನ್ (Duraimurugan) ಮತ್ತು ಖಜಾಂಚಿಯಾಗಿ ಟಿ.ಆರ್. ಬಾಲು (T R Baalu) ಅವಿರೋಧವಾಗಿ ಆಯ್ಕೆಯಾದರು. ಈ ಮೂವರು ನಾಯಕರು ಕೂಡ ಎರಡನೇ ಬಾರಿಗೆ ತಮ್ಮ ತಮ್ಮ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು

    ಪಕ್ಷದ ಸಾಮಾನ್ಯ ಮಂಡಳಿ ಸಭೆಗೆ ಆಗಮಿಸಿದ ಸ್ಟಾಲಿನ್ ಅವರಿಗೆ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ಡಿಎಂಕೆಯ 15ನೇ ಸಾಂಸ್ಥಿಕ ಚುನಾವಣೆಯ ಭಾಗವಾಗಿ, ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಗಳನ್ನು ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಪಕ್ಷದ ಹುದ್ದೆಗಳಿಗೆ ನಡೆದ ಚುನಾವಣೆಯ ನಂತರ ಆಯ್ಕೆ ಮಾಡಲಾಯಿತು. ಇದನ್ನೂ ಓದಿ: ಮೇಲುಕೋಟೆಯ ರಾಜಗೋಪುರದಲ್ಲಿ ಬಾರ್ ಸೆಟ್ – ನಾಗಚೈತನ್ಯ ಚಿತ್ರ ತಂಡದಿಂದ ಎಡವಟ್ಟು

    Live Tv
    [brid partner=56869869 player=32851 video=960834 autoplay=true]

  • ನೀವು ಹಿಂದೂ ಆಗಿರುವವರೆಗೂ ಅಸ್ಪೃಶ್ಯರಾಗಿರುತ್ತೀರಾ – ಡಿಎಂಕೆ ಸಂಸದನ ಹೇಳಿಕೆಗೆ ಬಿಜೆಪಿ ಕಿಡಿ

    ನೀವು ಹಿಂದೂ ಆಗಿರುವವರೆಗೂ ಅಸ್ಪೃಶ್ಯರಾಗಿರುತ್ತೀರಾ – ಡಿಎಂಕೆ ಸಂಸದನ ಹೇಳಿಕೆಗೆ ಬಿಜೆಪಿ ಕಿಡಿ

    ಚೆನ್ನೈ: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಡಿಎಂಕೆ ಸಂಸದ ಎ ರಾಜಾ ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

    ಈ ಕುರಿತಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಟ್ವೀಟ್ ಮಾಡಿದ್ದು, ಇವರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 100 ಕಿಲೋಮೀಟರ್ ಕ್ರಮಿಸಿದ ಭಾರತ್ ಜೋಡೋ ಯಾತ್ರೆ – 7ನೇ ದಿನ ಮುಂದುವರಿದ ರಾಗಾ ಪಾದಯಾತ್ರೆ

    ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಹೀಗಿರುವುದಕ್ಕೆ ಕ್ಷಮಿಸಿ. ಅರಿವಾಲಯಂ ಸಂಸದರು ಇತರರನ್ನು ಓಲೈಸುವ ಉದ್ದೇಶದಿಂದ ಮತ್ತೊಂದು ಸಮುದಾಯದ ದ್ವೇಷವನ್ನು ಬಿತ್ತರಿಸುತ್ತಿದ್ದಾರೆ. ತಮಿಳುನಾಡು ತಮ್ಮದೇ ಎಂದು ಭಾವಿಸುವ ಈ ರಾಜಕೀಯ ನಾಯಕರ ಮನಸ್ಥಿತಿ ಅತ್ಯಂತ ದುರದೃಷ್ಟಕರ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ದಾಳಿ ನಡೆಸುವ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ ಅನುಮತಿಗೆ ಕೇರಳ ಸರ್ಕಾರ ನಿರ್ಧಾರ

    ಕಳೆದ ವಾರ ತಮಿಳುನಾಡಿನ ನಾಮಕ್ಕಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎ ರಾಜಾ ಅವರು, ಹಿಂದೂಗಳ ನಂಬಿಕೆ ಹಾಗೂ ಜಾತಿ ಪದ್ಧತಿಯ ವಿಚಾರವಾಗಿ ಮಾತನಾಡಿದ್ದರು. ಈ ವೇಳೆ ವರ್ಣ ವ್ಯವಸ್ಥೆಯಲ್ಲಿ ಅತ್ಯಂತ ಕೆಳವರ್ಗದ ಶೂದ್ರರು, ವೇಶ್ಯೆಯರ ಮಕ್ಕಳು, ಹಿಂದೂ ಧರ್ಮದ ಆಚರಣೆಗಳನ್ನು ಮಾಡುವುದರಿಂದ ಅವರು ಹಿಂದೂಗಳಾಗಿಯೇ ಉಳಿಯುತ್ತಾರೆ.

    ಹಿಂದೂ ಆಗಿರುವವರೆಗೂ ನೀನು ಶೂದ್ರ. ಶೂದ್ರನಾಗಿರುವವರೆಗೂ ನೀನು ವೇಶ್ಯೆಯ ಮಗ. ನೀನು ಹಿಂದೂ ಆಗಿರುವವರೆಗೂ ದಲಿತರು ಮತ್ತು ನೀನು ಹಿಂದೂ ಆಗಿರುವವರೆಗೆ ಅಸ್ಪೃಶ್ಯ ಎಂದು ಹೇಳಿದ್ದರು. ನೀವು ಕ್ರಿಶ್ಚಿಯನ್, ಮುಸ್ಲಿಂ ಅಥವಾ ಪರ್ಷಿಯನ್ ಆಗಿಲ್ಲದಿದ್ದರೆ, ಹಿಂದೂ ಆಗಿರುತ್ತೀರಾ ಎಂದು ಸುಪ್ರೀಂ ಕೋರ್ಟ್ ಹೇಳುತ್ತಿದೆ. ಇಂತಹ ದುಷ್ಕೃತ್ಯವನ್ನು ಬೇರೆ ಯಾವುದೇ ದೇಶದಲ್ಲಿ ನೋಡಿದ್ದೀರಾ ಎಂದು ಟೀಕಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಜೊತೆಗೆ ಯಾವುದೇ ರಾಜಿ ಇಲ್ಲ – ದೆಹಲಿ ಭೇಟಿಗೂ ಮುನ್ನವೇ ಸ್ಟಾಲಿನ್ ಸ್ಪಷ್ಟನೆ

    ಬಿಜೆಪಿ ಜೊತೆಗೆ ಯಾವುದೇ ರಾಜಿ ಇಲ್ಲ – ದೆಹಲಿ ಭೇಟಿಗೂ ಮುನ್ನವೇ ಸ್ಟಾಲಿನ್ ಸ್ಪಷ್ಟನೆ

    ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ದೆಹಲಿಗೆ ಭೇಟಿ ನೀಡುವ ಮುನ್ನವೇ ಬಿಜೆಪಿ ಸರ್ಕಾರದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕ ತೊಳ್ ತಿರುಮಾವಳವನ್ ಅವರ 60ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದ್ರಾವಿಡ ಸಿದ್ಧಾಂತದ ಬಗ್ಗೆ ತಿರುಮಾವಲನ್ ಅವರ ವಿವರಣೆಯೊಂದಿಗೆ ತರ್ಕಿಸಿದರು. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಹೆಡ್ ಕಾನ್ಸ್​ಟೇಬಲ್​ಗೆ ರೌಡಿಶೀಟರ್‌ನಿಂದ ಚಾಕು ಇರಿತ

    PM MET STALIN

    ತಿರುಮಾವಲನ್ ಅವರು ಆರ್ಯನಿಸಂಗೆ ವಿರುದ್ಧವಾಗಿರುವುದು ದ್ರಾವಿಡ ಧರ್ಮ ಎಂದು ಒಮ್ಮೆ ಹೇಳಿದ್ದರು, ಅದು ನಿಜವಾದ ಮಾತು ಎಂದು ಶುರು ಮಾಡಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಯಾವಾಗಲೂ ತನ್ನ ನೀತಿಗಳ ಮೇಲೆ ಬಲವಾಗಿ ನಿಂತಿರುತ್ತದೆ. ತಿರುಮಾವಲನ್ ಹೇಳಿದಂತೆ ಡಿಎಂಕೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳಲು ಅಲ್ಲಿಗೆ ನಾನು ಹೋಗುತ್ತಿಲ್ಲ. ನಾನು ಕಾವಡಿಗೆ ಒಯ್ಯಲು ದೆಹಲಿಗೆ ಹೋಗುತ್ತಿದ್ದೇನೆ ಎಂದು ಅಂದುಕೊಂಡಿದ್ದೀರಾ? ಕೈಗಳನ್ನು ಕಟ್ಟಿ ಅವರು ಹೇಳುವುದನ್ನು ನಾನು ಕೇಳಲು ಅಲ್ಲಿಗೆ ಹೋಗುತ್ತಿದ್ದೇನೆ ಅಂದುಕೊಂಡಿದ್ದೀರಾ? ನಾನು ಕಲೈಂಞರ್ ಅವರ ಮಗ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಡಿಫರೆಂಟ್ ಕೇಶ ವಿನ್ಯಾಸಕ್ಕೆ ಯುವಕರ ಕ್ಯೂ!

    ತಮಿಳುನಾಡಿಗೆ ಕಲ್ಯಾಣ ಯೋಜನೆಗಳನ್ನು ಪಡೆಯಲು ಕೇಂದ್ರ ಸರ್ಕಾರದೊಂದಿಗೆ ಮಾತನಾಡುವ ಜವಾಬ್ದಾರಿಯನ್ನು ಹೊಂದಿರುವುದರಿಂದ ದೆಹಲಿಗೆ ಹೋಗುತ್ತಿದ್ದೇನೆ. ಈ ಸಂಬಂಧವು ಕೇವಲ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಮಾತ್ರ. ಆದರೆ ಡಿಎಂಕೆ ಮತ್ತು ಬಿಜೆಪಿಯ ನಡುವೆಯಲ್ಲ. ಡಿಎಂಕೆ ಮತ್ತು ಬಿಜೆಪಿ ಸಿದ್ಧಾಂತಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಮಿಳುನಾಡಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ – CM ನೇತೃತ್ವದಲ್ಲೇ ಕೇಂದ್ರಕ್ಕೆ ಸಂಸದ ಎ.ರಾಜಾ ಒತ್ತಾಯ

    ತಮಿಳುನಾಡಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ – CM ನೇತೃತ್ವದಲ್ಲೇ ಕೇಂದ್ರಕ್ಕೆ ಸಂಸದ ಎ.ರಾಜಾ ಒತ್ತಾಯ

    ಚೆನ್ನೈ: ಪ್ರತ್ಯೇಕ ತಮಿಳುನಾಡು ರಾಜ್ಯಕ್ಕೆ ಸ್ವಾಯತ್ತತೆ ನೀಡುವಂತೆ ಡಿಎಂಕೆ ಸಂಸದ ಎ.ರಾಜಾ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    DMK ಸಂಸದ ಎ.ರಾಜಾ ಅವರು ಇಲ್ಲಿನ ನಾಮಕ್ಕಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಉಪಸ್ಥಿತಿಯಲ್ಲೇ ಈ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ: ಶಿಂಧೆ ಸರ್ಕಾರ 6 ತಿಂಗಳಲ್ಲಿ ಪತನವಾಗುತ್ತೆ: ಶರದ್ ಪವಾರ್ ಭವಿಷ್ಯ

    ಸಂಸದ ಎ.ರಾಜಾ ಅವರು `ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಸ್ವಾಯತ್ತತೆ’ ವಿಷಯ ಕುರಿತು ಮಾತನಾಡಿದ ಅವರು, ನಮಗೆ ಪ್ರತ್ಯೇಕ ರಾಜ್ಯ ಸ್ವಾಯತ್ತತೆ ಸಿಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸದ್ಯ ಎ.ರಾಜಾ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪರ ವಿರೋಧದ ಚರ್ಚೆ ಆರಂಭವಾಗಿದೆ. ಇದನ್ನೂ ಓದಿ: ಬಾಲಿವುಡ್ ನಿರ್ದೇಶಕರಲ್ಲಿ ಸ್ವಂತ ಯೋಚನೆ ಇಲ್ಲ: ನೀಲ್ ನಿತಿನ್ ಮುಖೇಶ್ 

    MK Stalin (1)

    ನಾವು ಪೆರಿಯಾರ್ ಅವರ ಮಾರ್ಗವನ್ನು ಅನುಸರಿಸುತ್ತಿದ್ದು, ರಾಷ್ಟ್ರೀಯ ಸಮಗ್ರತೆ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಪ್ರತ್ಯೇಕ ತಮಿಳುನಾಡು ಕೂಗನ್ನು ಬದಿಗಿಟ್ಟಿದೆವು. ಆದರೆ ತಮಿಳುನಾಡಿನಲ್ಲಿ ಅಸ್ತಿತ್ವಕ್ಕೆ ಡಿಎಂಕೆ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ನಡುವಿನ ತಿಕ್ಕಾಟವೇ ಪ್ರತ್ಯೇಕ ರಾಜ್ಯದ ಕೂಗಿಗೆ ಕಾರಣವಾಗಿದೆ. ಹಾಗಾಗಿ ನಮ್ಮ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೊಗಳಿದ್ದಕ್ಕೆ ನಾಯಿಗೆ ಕಬ್ಬಿಣದ ರಾಡ್‍ನಿಂದ ಹೊಡೆದ – ಬಿಡಿಸಿಕೊಳ್ಳೋಕೆ ಬಂದವರ ಮೇಲೂ ಹಲ್ಲೆ

    ಕೇಂದ್ರವು ಹೆಚ್ಚಿನ ಅಧಿಕಾರ ಅನುಭವಿಸುವುದನ್ನು ಮುಂದುವರಿಸಿದೆ. ತಮಿಳುನಾಡಿನ ಶೇ.6.5ರಷ್ಟು ಜಿಎಸ್‌ಟಿ ಪಾಲಿನಲ್ಲಿ ಕೇವಲ ಶೇ.2.2 ರಷ್ಟನ್ನು ಪಡೆಯುತ್ತಿದೆ. ಸಣ್ಣ-ಸಣ್ಣ ಸಮಸ್ಯೆಗಳಿಗೂ ರಾಜ್ಯಗಳು ಕೇಂದ್ರವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    2013 ರಲ್ಲೂ ಪ್ರತ್ಯೇಕತೆಯ ಕೂಗು ಕೇಳಿಬಂದಿತ್ತು. 2021 ಮೇ ತಿಂಗಳಿನಲ್ಲಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ತಮಿಳು ನಾಡಿನಲ್ಲಿ ಅಧಿಕಾರವನ್ನು ಹಿಡಿಯುತ್ತಿದ್ದಂತೆ ಈ ಪ್ರತ್ಯೇಕತೆಯ ಕೂಗು ತೀವ್ರಗೊಂಡಿತ್ತು. ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಒಕ್ಕೂಟ ಸರ್ಕಾರ ಎಂದು ಕರೆಯುವ ನಿರ್ಣಯ ಕೈಗೊಂಡಿದ್ದು, ಸ್ಟಾಲಿನ್ ತಂತ್ರಕ್ಕೆ ಬಿಜೆಪಿ ಪ್ರತಿ ತಂತ್ರವಾಗಿ ಪ್ರತ್ಯೇಕ ಕೊಂಗುನಾಡು ಬೇಡಿಕೆಯನ್ನು ಹುಟ್ಟುಹಾಕಿತ್ತು ಎಂದು ವರದಿಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆ – ಡಿಎಂಕೆ ಜಯಭೇರಿ, ಬಿಜೆಪಿ 3ನೇ ಅತಿದೊಡ್ಡ ಪಕ್ಷ

    ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆ – ಡಿಎಂಕೆ ಜಯಭೇರಿ, ಬಿಜೆಪಿ 3ನೇ ಅತಿದೊಡ್ಡ ಪಕ್ಷ

    ಚೆನ್ನೈ: ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ 200 ಕ್ಷೇತ್ರಗಳ ಪೈಕಿ 146 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಆಡಳಿತ ರೂಢ ಡಿಎಂಕೆ ಮೈತ್ರಿಕೂಟ ಅಧಿಪತ್ಯ ಸಾಧಿಸಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ನೇತೃತ್ವದ ಬಿಜೆಪಿ ಇದೇ ಮೊದಲ ಬಾರಿಗೆ ಹಲವು ಕಡೆ ಖಾತೆಗಳನ್ನು ತೆರೆದಿದ್ದು ಮೂರನೇ ಅತಿ ದೊಡ್ಡಪಕ್ಷವಾಗಿ ಹೊರಹೊಮ್ಮಿ ಡಿಎಂಕೆ, ಎಡಿಎಂಕೆ, ಕಾಂಗ್ರೆಸ್‍ಗೆ ಶಾಕ್ ನೀಡಿದೆ.

    ಫೆಬ್ರವರಿ 19 ರಂದು ಮುನ್ಸಿಪಲ್ ಕಾರ್ಪೋರೇಷನ್ ವಾರ್ಡ್, ಪುರ ಸಭೆ ಮತ್ತು ಪಟ್ಟಣ ಪಂಚಾಯತ್‍ಗಳಿಗೆ ಚುನಾವಣೆ ನಡೆದಿತ್ತು. ಇಂದು ನಡೆದ ಮತ ಎಣಿಕೆಯಲ್ಲಿ ಮುನ್ಸಿಪಲ್ ಕಾರ್ಪೋರೇಷನ್ ವಾರ್ಡ್‍ಗಳ ಪೈಕಿ 200 ವಾರ್ಡ್‍ಗಳಲ್ಲಿ ಡಿಎಂಕೆ 146 ಸ್ಥಾನಗಳನ್ನು ಗೆದ್ದುಗೊಂಡಿದೆ. ಇನ್ನುಳಿದಂತೆ ಎಐಡಿಎಂಕೆ 15, ಕಾಂಗ್ರೆಸ್ 13, 5 ಪಕ್ಷೇತರ ಅಭ್ಯರ್ಥಿಗಳು, ಸಿಪಿಐ ಪಕ್ಷ 4, ವಿಸಿಕೆ 3, ಎಮ್‍ಡಿಎಮ್‍ಕೆ 2 ಮತ್ತು ಸಿಪಿಐ, ಐಯುಎಮ್‍ಎಲ್, ಎಎಮ್‍ಎಮ್‍ಕೆ, ಬಿಜೆಪಿ ತಲಾ 1 ಸ್ಥಾನ ಗೆದ್ದುಕೊಂಡಿದೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್‌

    ಒಟ್ಟು 138 ಮುನ್ಸಿಪಲ್ ಕಾರ್ಪೋರೇಷನ್ ವಾರ್ಡ್, 21 ಪುರ ಸಭೆ ವಾರ್ಡ್‍ಗಳು ಮತ್ತು 490 ಪಟ್ಟಣ ಪಂಚಾಯತ್‍ಗಳಿಗೆ ಚುನಾವಣೆ ನಡೆದು ಒಟ್ಟು 57,778 ಅಭ್ಯರ್ಥಿಗಳು 12,607 ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇದನ್ನೂ ಓದಿ: ಉಕ್ರೇನ್ ತೊರೆಯಿರಿ – ವಿದ್ಯಾರ್ಥಿಗಳಿಗೆ ಭಾರತ ಸಲಹೆ

    ಯಾರಿಗೆ ಎಷ್ಟು ಸ್ಥಾನ?
    ಕಾರ್ಪೋರೇಷನ್ ವಾರ್ಡ್ ಅಭ್ಯರ್ಥಿಗಳು
    ಫಲಿತಾಂಶಗಳು: 1128/1374
    ಡಿಎಂಕೆ+ : 879
    ಎಐಎಡಿಎಂಕೆ: 140
    ಬಿಜೆಪಿ: 16
    ಇತರೆ: 93

    ಪುರಸಭೆಗಳು
    ಫಲಿತಾಂಶಗಳು: 3761/3842
    ಡಿಎಂಕೆ+ : 2519
    ಎಐಎಡಿಎಂಕೆ: 621
    ಬಿಜೆಪಿ: 56
    ಡಿಎಂಡಿಕೆ: 12
    ಇತರೆ: 553

    ಪಟ್ಟಣ ಪಂಚಾಯಿತಿಗಳು:
    ಫಲಿತಾಂಶಗಳು: 7601/7621
    ಡಿಎಂಕೆ+ : 4882
    ಎಐಎಡಿಎಂಕೆ: 1207
    ಬಿಜೆಪಿ: 230
    ಡಿಎಂಡಿಕೆ: 23
    ಇತರೆ: 1259

    ಸ್ಥಳೀಯ ಚುನಾವಣಾ ಫಲಿತಾಂಶದ ಬಗ್ಗೆ ಟ್ವಿಟ್ಟರ್ ಮೂಲಕ ಹರ್ಷವ್ಯಕ್ತ ಪಡಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಬಿಜೆಪಿಗೆ ಇದು ಅಭೂತಪೂರ್ವ ಗೆಲುವು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇರುವ ಅಭಿಮಾನವನ್ನು ಇಂದು ತಮಿಳುನಾಡಿನ ಮಕ್ಕಳು ತೋರಿಸಿದ್ದಾರೆ. ಜನರ ಪ್ರೀತಿಗೆ ನಾವು ಅಭಾರಿಯಾಗಿದ್ದೇವೆ ಎಂದು ಧನ್ಯವಾದ ಹೇಳಿದ್ದಾರೆ.