ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೆ ಒಳಗಾದ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ (Senthil Balaji) ಅವರಿಗೆ ಶೀಘ್ರವೇ ಬೈಪಾಸ್ ಸರ್ಜರಿ (Bypass Surgery) ನಡೆಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
ಇಂದು ಬೆಳಗ್ಗೆ ಅಬಕಾರಿ ಮತ್ತು ಇಂಧನ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಬಂಧನವಾಗಿ ಕಾರಿನಲ್ಲಿ ಹೋಗುತ್ತಿದ್ದಾಗ ಹೈಡ್ರಾಮವೇ ಸೃಷ್ಟಿಯಾಗಿತ್ತು. ಎದೆಯ ಮೇಲೆ ಕೈಯನ್ನು ಇಟ್ಟು ಸೆಂಥಿಲ್ ಬಾಲಾಜಿ ಕಣ್ಣೀರು ಹಾಕಿ ಗೋಳಾಡಿದ್ದರು. ನಂತರ ಅವರನ್ನು ಚೆನ್ನೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸೆಂಥಿಲ್ ಅವರನ್ನು ಪರೀಕ್ಷಿಸಿದ ಬಳಿಕ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಮೆಡಿಕಲ್ ಬುಲೆಟಿನ್ ಪ್ರಕಟಿಸಿದ್ದಾರೆ. ಬೆಳಗ್ಗೆ 10:40ಕ್ಕೆ ಕೊರೊನರಿ ಆಂಜಿಯೋಗ್ರಾಮ್ ನಡೆಯಿತು. ಈ ವೇಳೆ ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆ ನೀಡಲಾಗಿದೆ.
ರಾಜ್ಯ ಸಚಿವ ಶೇಖರ್ ಬಾಬು ಪ್ರತಿಕ್ರಿಯಿಸಿ, ಸೆಂಥಿಲ್ ಬಾಲಾಜಿ ಈಗ ಐಸಿಯುನಲ್ಲಿದ್ದಾರೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಮತ್ತು ಅವರ ಹೆಸರನ್ನು ಕರೆದಾಗ ಅವರು ಪ್ರತಿಕ್ರಿಯಿಸಲಿಲ್ಲ. ಈಗ ಅವರು ವೈದ್ಯರ ನಿಗಾದಲ್ಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ತಮಿಳುನಾಡು ಅಬಕಾರಿ ಸಚಿವರ ಬಂಧನ; ಇದು BJP ಸೇಡಿನ ರಾಜಕಾರಣ – ಎಂ.ಕೆ ಸ್ಟಾಲಿನ್
ಎಐಎಡಿಎಂಕೆ ನಾಯಕರಾಗಿದ್ದ ಸೆಂಥಿಲ್ ಬಾಲಾಜಿ ಜಯಲಲಿತಾ ಆಪ್ತರಾಗಿದ್ದರು. ಜಯಲಲಿತಾ ನಿಧನದ ಬಳಿಕ ಪಕ್ಷ ತೊರೆದು ಡಿಎಂಕೆ ಸೇರಿದ್ದರು.
– ಆಸ್ಪತ್ರೆಗೆ ಭೇಟಿ ಮಾಡಿ ಸೆಂಥಿಲ್ ಬಾಲಾಜಿ ಆರೋಗ್ಯ ವಿಚಾರಿಸಿದ ಸಿಎಂ
– ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಂಡನೆ
ಚೆನ್ನೈ: ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಇಡಿ ಬಂಧನಕ್ಕೊಳಗಾದ ತಮಿಳುನಾಡು ಸಚಿವ ವಿ.ಸೆಂಥಿಲ್ ಬಾಲಾಜಿ (V Senthil Balaji) ಅವರನ್ನ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ (MK Stalin) ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇಡಿ ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ ಕೆಲ ಗಂಟೆಗಳಲ್ಲೇ ಭೇಟಿ ಮಾಡಿ ಆರೋಗ್ಯ ಸ್ಥಿತಿಗತಿಯನ್ನ ವೀಕ್ಷಿಸಿದ್ದಾರೆ. ಅಲ್ಲದೇ ಇದು ಬಿಜೆಪಿ ಸೇಡಿನ ರಾಜಕಾರಣ ಎಂದು ಕಿಡಿ ಕಾರಿದ್ದಾರೆ.
#WATCH | Tamil Nadu ministers I.Periyasamy and R Gandhi visit arrive at Omandurar government hospital to meet minister Senthil Balaji in Chennai pic.twitter.com/ShE0I8Tvwn
ಸಚಿವ ವಿ.ಸೆಂಥಿಲ್ ಬಾಲಾಜಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಬುಧವಾರ ಶೋಧ ನಡೆಸಿದ ನಂತರ ಮನಿ ಲಾಂಡರಿಂಗ್ ತಡೆ ಕಾಯ್ದೆ (PMLA) ಅಡಿಯಲ್ಲಿ ಬಂಧಿಸಲು ಮುಂದಾಯಿತು. ಸತತ 24 ಗಂಟೆಗಳ ಕಾರ್ಯಾಚರಣೆ ನಡೆಸಿದ ಇಡಿ ತಂಡ ಮಧ್ಯರಾತ್ರಿ 1:30ರ ಸುಮಾರಿಗೆ ಸಚಿವರನ್ನ ಬಂಧಿಸಲು ಮುಂದಾದಾಗ ತಕ್ಷಣವೇ ಎದು ನೋವು ಕಾಣಿಸಿಕೊಂಡಿತ್ತು. ಕಾರಿನಲ್ಲೇ ಎದೆ ಬಿಗಿಹಿಡಿದುಕೊಂಡು ಅತ್ತು ಗೋಗರೆದಿದ್ದರು. ಆ ನಂತರ ಅವರನ್ನ ಚೆನ್ನೈನ ಒಮಂದೂರಾರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
#WATCH | Rapid Action Force deployed at Omandurar government hospital in Chennai, where Tamil Nadu Electricity Minister V Senthil Balaji has been brought for medical examination
ಇದೇ ವೇಳೆ ಆಸ್ಪತ್ರೆ ಮುಂಭಾಗ ನೆರೆದಿದ್ದ ಕಾರ್ಯಕರ್ತರು, ತನಿಖಾ ಸಂಸ್ಥೆಯೊಂದಿಗೆ ಸಹಕರಿಸಿದರೂ ಸೆಂಥಿಲ್ ಬಾಲಾಜಿ ಅವರ ಮೇಲೆ ಒತ್ತಡ ಹೇರಲಾಗಿತ್ತು. ಇದೇ ಅವರ ಎದೆ ನೋವಿಗೆ ಕಾರಣ ಎಂದು ರಾಜ್ಯಪಾಲ ಆರ್.ಎನ್ ರವಿ ವಿರುದ್ಧ ದೂರಿದರು. ಸೆಂಥಿಲ್ ಬಾಲಾಜಿ ವಕೀಲರು ಮತ್ತು ಡಿಎಂಕೆ ನಾಯಕ ಎನ್.ಆರ್ ಎಲಾಂಗೋ ಸಹ ಇದು ಸಂಪೂರ್ಣ ಅಸಾಂವಿಧಾನಿಕ ಹಾಗೂ ಕಾನೂನು ಬಾಹಿರವಾದ ಬಂಧನ. ನಾವು ಕಾನೂನಿನ ಮೂಲಕವೇ ಹೋರಾಡುತ್ತೇವೆ ಎಂದು ಗುಡುದರು.
ಮತ್ತೋರ್ವ ಸಚಿವ ಉದಯನಿಧಿ ಸ್ಟಾಲಿನ್, ಏನೇ ಬಂದರೂ ನಾವು ಕಾನೂನಾತ್ಮಕವಾಗಿ ಎದುರಿಸುತ್ತೇವೆ. ಬಿಜೆಪಿ (BJP) ನೇತೃತ್ವದ ಕೇಂದ್ರ ಸರ್ಕಾರದ ಬೆದರಿಕೆ ರಾಜಕೀಯಕ್ಕೆ ನಾವು ಹೆದರುವುದಿಲ್ಲ ಎಂದು ತಿರುಗೇಟು ನೀಡಿದರು. ಈ ಬೆನ್ನಲ್ಲೇ ಸಿಎಂ ತಮ್ಮ ನಿವಾಸದಲ್ಲಿ ಹಿರಿಯ ಸಚಿವರು ಮತ್ತು ಕಾನೂನು ತಂಡದೊಂದಿಗೆ ಸಮಾಲೋಚನೆ ನಡೆಸಿದರು. ಇದನ್ನೂ ಓದಿ: ಹಿಮಾಚಲದಲ್ಲಿ ಆರ್ಥಿಕ ಸಂಕಷ್ಟ – 15 ಸಾವಿರ ಮಂದಿಗೆ ಇನ್ನೂ ಪಾವತಿಯಾಗಿಲ್ಲ ಸಂಬಳ
ತನಿಖಾ ಸಂಸ್ಥೆ ನಡೆಸಿದ ದಾಳಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ಹಲವಾರು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇಂದ್ರದ ತ ನಿಖಾ ಏಜೆನ್ಸಿಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ದಾಳಿಗಳು ಕೇವಲ ರಾಜಕೀಯ ಪ್ರೇರಿತವಲ್ಲ, ಸೇಡಿನ ರಾಜಕಾರಣದ ಕ್ರಮ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಅಪಮಾನವಾಗಿದೆ. ಪಶ್ಚಿಮ ಬಂಗಾಳ, ದೆಹಲಿಯಂತ ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳ ವಿರುದ್ಧ ಕೇಂದ್ರ ಸರ್ಕಾರ ದಾಳಿ ಮಾಡುತ್ತಿದೆ. ಮೋದಿ (Narendra Modi) ಸರ್ಕಾರವನ್ನು ವಿರೋಧಿಸುವವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದೆ ಎಂದು ವಿಪಕ್ಷ ನಾಯಕರು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಸೆಂಥಿಲ್ ಅವರನ್ನ ಇಡಿ ಬಂಧಿಸಿರುವುದನ್ನ ಖಂಡಿಸಿದ್ದಾರೆ.
ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತಮಿಳುನಾಡು ವಿದ್ಯುತ್ ಮತ್ತು ಅಬಕಾರಿ ಸಚಿವ ವಿ.ಸೆಂಥಿಲ್ ಬಾಲಾಜಿ (V Senthil Balaji) ಅವರನ್ನ ಬಂಧಿಸಿದೆ. ಸೆಂಥಿಲ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದ ನಂತರ ಬಂಧಿಸಲಾಗಿದೆ.
#WATCH | Rapid Action Force deployed at Omandurar government hospital in Chennai, where Tamil Nadu Electricity Minister V Senthil Balaji has been brought for medical examination
ಭಾರೀ ಹೈಡ್ರಾಮ: ಡಿಎಂಕೆ ನಾಯಕನನ್ನ ಆಸ್ಪತ್ರೆಗೆ ಕರೆತರುತ್ತಿದ್ದಂತೆ ಆಸ್ಪತ್ರೆ ಹೊರಗೂ ಜಮಾಯಿಸಿದ್ದ ಬೆಂಬಲಿಗರು ಭಾರೀ ಹೈಡ್ರಾಮಾ ಮಾಡಿದ್ದಾರೆ. ಇಡಿ ಕ್ರಮ ವಿರೋಧಿಸಿ ಸೆಂಥಿಲ್ ಅವರ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಕಾರಿನಲ್ಲಿ ಮಲಗಿದ್ದಾಗಲೇ ಎದೆಯನ್ನು ಹಿಡಿದುಕೊಂಡು ನೋವು ಅಂತಾ ಕಣ್ಣೀರಿಟ್ಟಿದ್ದಾರೆ. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಚೆನ್ನೈ: ಮುಂದಿನ ದಿನಗಳಲ್ಲಿ ತಮಿಳುನಾಡಿನ ನಾಯಕರೊಬ್ಬರನ್ನು ದೇಶದ ಪ್ರಧಾನಿಯನ್ನಾಗಿ (Tamil PM) ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿಕೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ.
ತಮಿಳುನಾಡು ಪ್ರವಾಸ ಕೈಗೊಂಡಿರುವ ಅಮಿತ್ ಶಾ ಭಾನುವಾರ ರಾಜ್ಯ ಬಿಜೆಪಿಯ ಹಿರಿಯ ನಾಯಕರ ಜೊತೆ ಆಪ್ತ ಸಮಾಲೋಚನಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾಗಿಯಾದ ಹಿರಿಯ ನಾಯಕರು ಅಮಿತ್ ಶಾ ಅವರ ಹೇಳಿಕೆಯ ಬಗ್ಗೆ ಮಾತನಾಡಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.
PM @narendramodi Ji gave wings to the dreams of the marginalised with his politics of performance.
Addressed a rally in Vishakhapatnam on 9 years of the Modi government in pursuit of the cherished goal of Antyodaya and the welfare of the farmers.#9YearsOfSevapic.twitter.com/Iu8kipP6EV
ಮುಂಬರುವ ದಿನಗಳಲ್ಲಿ ತಮಿಳುನಾಡಿನ ವ್ಯಕ್ತಿ ಈ ದೇಶದ ಪ್ರಧಾನಿಯಾಗಲಿದ್ದಾರೆ ಎನ್ನುವ ರೀತಿಯ ಮಾತುಗಳನ್ನು ಆಡಿದ್ದಾರೆ. ಆದರೆ ಈ ಕುರಿತು ಅಮಿತ್ ಶಾ ಹೆಚ್ಚಿನ ವಿವರ ನೀಡಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೀಡಿಯೋ ಮಾಡದಂತೆ ವಿದೇಶಿ ಪ್ರಜೆ ಮೇಲೆ ಬೆಂಗಳೂರಿನಲ್ಲಿ ಹಲ್ಲೆಗೆ ಯತ್ನಿಸಿದ ಪುಂಡ
ಈ ಹಿಂದೆ ತಮಿಳರಿಗೆ ಪ್ರಧಾನಿಯಾಗುವ ಅವಕಾಶ ಎರಡು ಬಾರಿ ಸಿಕ್ಕಿತ್ತು. ಆದರೆ ಡಿಎಂಕೆಯಿಂದಾಗಿ (DMK) ಈ ಅವಕಾಶ ಕೈತಪ್ಪಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕನಿಷ್ಠ 20 ಸ್ಥಾನ ಗೆಲ್ಲಲು ಪ್ರಯತ್ನಿಸಬೇಕು ಎಂದು ಕರೆ ನೀಡಿದ್ದಾರೆ.
ವೆಲ್ಲೂರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ (Congress) ಮತ್ತು ಡಿಎಂಕೆಯನ್ನು ಟೀಕಿಸಿದ ಅಮಿತ್ ಶಾ ಆ ಪಕ್ಷಗಳನ್ನು 2ಜಿ, 3ಜಿ, 4ಜಿ ಪಕ್ಷಗಳು ಎಂದು ವ್ಯಂಗ್ಯವಾಡಿದ್ದಾರೆ.
ನಾನು 2ಜಿ ಬಗ್ಗೆ ಮಾತನಾಡುವುದಿಲ್ಲ. 2ಜಿ ಅಂದರೆ ಎರಡು ತಲೆಮಾರು, 3ಜಿ ಅಂದರೆ ಮೂರು ತಲೆಮಾರು, 4ಜಿ ಅಂದರೆ ನಾಲ್ಕು ತಲೆಮಾರು ಎಂದು ಹೇಳಿ ಕುಟುಕಿದರು.
ಚೆನ್ನೈ: ಡಿಎಂಕೆ ಫೈಲ್ಸ್ (DMK Files) ರಿಲೀಸ್ ಮಾಡಿ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ರಾಜ್ಯ ಬಿಜೆಪಿ (BJP) ಮುಖ್ಯಸ್ಥ ಕೆ ಅಣ್ಣಾಮಲೈ (Annamalai) ವಿರುದ್ಧ ತಮಿಳುನಾಡು ಸರ್ಕಾರ (Tamil Nadu Government) ಬುಧವಾರ ಮಾನನಷ್ಟ ಮೊಕದ್ದಮೆ ದಾಖಲಿಸಿದೆ. ಅಣ್ಣಾಮಲೈ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರ ಮಾನಹಾನಿ ಮಾಡುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ.
2011ರಲ್ಲಿ ಚೆನ್ನೈ ಮೆಟ್ರೋ ಒಪ್ಪಂದವನ್ನು ಸರಿಪಡಿಸಲು ಎಂಕೆ ಸ್ಟಾಲಿನ್‌ಗೆ 200 ಕೋಟಿ ರೂ. ನೀಡಲಾಗಿದೆ ಎಂದು ಅಣ್ಣಾಮಲೈ ಇತ್ತೀಚೆಗೆ ಆರೋಪಿಸಿದ್ದರು. ಸ್ಟಾಲಿನ್ ಅವರ ಪಕ್ಷವಾದ ಡಿಎಂಕೆ ನಾಯಕರು 1.34 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವೆಲ್ಲವನ್ನೂ ಭ್ರಷ್ಟಾಚಾರದ ಮೂಲಕ ಗಳಿಸಿದ್ದಾರೆ. ಮುಖ್ಯಮಂತ್ರಿ ಅವರ ಕುಟುಂಬ ಸದಸ್ಯರು ರಾಜ್ಯದಲ್ಲಿ ಹೂಡಿಕೆ ಮಾಡುತ್ತಿರುವ ದುಬೈ ಕಂಪನಿಯ ನಿರ್ದೇಶಕರು ಎಂದು ಅಣ್ಣಾಮಲೈ ಆರೋಪಿಸಿದ್ದರು.
ಈ ಬಗ್ಗೆ ವಾಗ್ದಾಳಿ ನಡೆಸಿರುವ ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್, ಅಣ್ಣಾಮಲೈ ಅವರಿಗೆ ಶಿಕ್ಷೆ ನೀಡುವುದೇ ಉತ್ತಮ ಕ್ರಮ. ಇದಕ್ಕೆ ಹೋಲಿಸಿದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏನೂ ಹೇಳಿರಲಿಲ್ಲ. ಆದರೂ ಅವರನ್ನು ಅನರ್ಹಗೊಳಿಸಲಾಗಿದೆ. ಇದೀಗ ಅಣ್ಣಾಮಲೈ ವಿರುದ್ಧ ಮೊಕದ್ದಮೆ ಹೂಡಲು ಬೇಕಾದಷ್ಟು ಕಾರಣಗಳಿವೆ ಎಂದಿದ್ದಾರೆ. ಇದನ್ನೂ ಓದಿ: ರಾಮನಗರ, ಉಡುಪಿಯಲ್ಲಿ ಭರ್ಜರಿ ಮತದಾನ – ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ನೀರಸ ಪ್ರತಿಕ್ರಿಯೆ
ಚೆನ್ನೈ: ತಮಿಳುನಾಡಿನ ಈರೋಡ್ ಪೂರ್ವ ಉಪಚುನಾವಣೆಯಲ್ಲಿ (Erode East Bypolls) ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿ ಇವಿಕೆಎಸ್ ಇಳಂಗೋವನ್ (EVKS Elangovan) ಅವರಿಗೆ ಬೆಂಬಲ ಸೂಚಿಸಿರುವ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ (Kamal Haasan), ಕಾಂಗ್ರೆಸ್ ನಿಂದ ಸಂಸದ ಟಿಕೆಟ್ ಏಕೆ ನಿರೀಕ್ಷಿಸಬಾರದು ಎಂದು ಪ್ರಶ್ನಿಸಿದ್ದಾರೆ.
ಈರೋಡ್ ಪೂರ್ವ ಉಪಚುನಾವಣೆಯಲ್ಲಿ ತಮ್ಮ ಪಕ್ಷ ಮಕ್ಕಳ್ ನೀಧಿ ಮೈಯಂ (MNM) ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಿದೆ ಎಂದು ಕಮಲ್ ಘೋಷಿಸಿದ್ದಾರೆ. ಈ ವೇಳೆ `ಕಾಂಗ್ರೆಸ್‌ನಿಂದ (Congress) ಸಂಸದ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದೀರಾ?’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ `ರಾಷ್ಟ್ರದ ಹಿತಕ್ಕಾಗಿ ನಾನೇಕೆ ಆಗಬಾರದು? ದೇಶದ ಹಿತಕ್ಕಾಗಿಯೇ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಬಳಿಕ ಮಾತನಾಡಿರುವ ಅವರು, ಈರೋಡ್ ಪೂರ್ವ ಉಪಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸಲು ಪಕ್ಷದ ಕಾರ್ಯಕಾರಿ ಸದಸ್ಯರು ಸರ್ವಾನುಮತದಿಂದ ನಿರ್ಧರಿಸಿದ್ದಾರೆ. ಇದು ಪ್ರಸ್ತುತ ನಿರ್ಧಾರವಾಗಿದೆ. 2024ರ ಸಾರ್ವತ್ರಿಕ ಚುನಾವಣೆಯ ಬಗ್ಗೆ ಇನ್ನೂ ಒಂದು ವರ್ಷ ಸಮಯ ಇದೆ ಎಂದು ಹೇಳಿದ್ದಾರೆ.
ನಾನು ಈ ಸಂದರ್ಭವನ್ನು ರಾಷ್ಟ್ರದ ಪ್ರಾಮುಖ್ಯತೆ ಎಂದು ಕರೆದಿದ್ದೇನೆ. ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ತೆಗೆದುಕೊಂಡಿದ್ದೇನೆ. ಕೆಲವೊಮ್ಮೆ ರಾಷ್ಟ್ರದ ಪ್ರಾಮುಖ್ಯತೆ ವಿಷಯ ಬಂದಾಗ ಪಕ್ಷದ ಸಿದ್ಧಾಂತಗಳನ್ನ ಬಿಡಬೇಕಾಗುತ್ತದೆ. ಅದಕ್ಕೆ ಜನರು ಪ್ರಾಥಮಿಕರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಈರೋಡ್ (ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ಫೆಬ್ರವರಿ 27 ರಂದು ನಡೆಯಲಿರುವ ಉಪಚುನಾವಣೆಗೆ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಮಾಜಿ ಮುಖ್ಯಸ್ಥ ಇವಿಕೆಎಸ್ ಇಳಂಗೋವನ್ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಕಾಂಗ್ರೆಸ್ ಭಾನುವಾರ ಘೋಷಿಸಿತು.
ಇಳಂಗೋವನ್ ಯಾರು?: 1985 ರಲ್ಲಿ ಸತ್ಯಮಂಗಲಂ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಇಳಂಗೋವನ್, 2004ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಅಲ್ಲಿ ಜವಳಿ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ 2014 ರಿಂದ 2017ರ ವರೆಗೆ ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ತೇಣಿ ಕ್ಷೇತ್ರದಿಂದ ಸ್ಪರ್ಧಿಸಿ ಎಐಎಡಿಎಂಕೆಯ ಪಿ.ರವೀಂದ್ರನಾಥ್ ಕುಮಾರ್ ವಿರುದ್ಧ ಪರಾಭವಗೊಂಡಿದ್ದರು.
ಮುಂದಿನ ಫೆಬ್ರವರಿ 27 ರಂದು ತಮಿಳುನಾಡಿನ ಈರೋಡ್ (ಪೂರ್ವ) ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಮಾರ್ಚ್ 2 ರಂದು ಮತ ಏಣಿಕೆ ಕಾರ್ಯ ನಡೆಯಲಿದೆ. ಇದೇ ತಿಂಗಳ ಜನವರಿ 31 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಫೆಬ್ರವರಿ 7ರಂದು ಕೊನೆಯದಿನವಾಗಿದೆ.
Live Tv
[brid partner=56869869 player=32851 video=960834 autoplay=true]
ಚೆನ್ನೈ: ಕುರ್ಚಿ ತರಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಪಕ್ಷದ ಕಾರ್ಯಕರ್ತರಿಗೆ ತಮಿಳುನಾಡಿನ ಡಿಎಂಕೆ ಪಕ್ಷದ (DMK party) ನಾಯಕ ಹಾಗೂ ರಾಜ್ಯ ಸಚಿವ ಎಸ್.ಎಂ ನಾಸರ್ (SM Nasar) ಅವರು ಕಲ್ಲು ಎಸೆದಿದ್ದಾರೆ.
ತಮಿಳುನಾಡಿನ (Tamil Nadu) ತಿರುವಳ್ಳೂರು (Tiruvallur) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ಏನಿದೆ?: ಪಕ್ಷದ ಕಾರ್ಯಕರ್ತರು ಕುರ್ಚಿಗಳನ್ನು ತರಲು ತುಂಬಾ ಸಮಯ ತೆಗೆದುಕೊಂಡಿದ್ದಕ್ಕೆ ಸಚಿವ ಎಸ್.ಎಂ ನಾಸರ್ ಸಿಟ್ಟಿಗೆದ್ದಿದ್ದಾರೆ. ಅದಾದ ಬಳಿಕ ಸಚಿವ ನಾಸರ್ ಅವರು, ಕಲ್ಲನ್ನು ಎತ್ತಿ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಎಸೆದಿದ್ದಾರೆ. ಈ ವೇಳೆ ನಾಸರ್ ಹಿಂದೆ ನಿಂತಿರುವ ಕೆಲವು ಜನರು ಸಹ ನಗುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ.
#WATCH | Tamil Nadu Minister SM Nasar throws a stone at party workers in Tiruvallur for delaying in bringing chairs for him to sit pic.twitter.com/Q3f52Zjp7F
ಈ ಬಗ್ಗೆ ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಟ್ವೀಟ್ ಮಾಡಿ, ಪಕ್ಷದ ಕಾರ್ಯಕರ್ತರಿಗೆ ಅಗೌರವ ತೋರಿದ್ದಾರೆ. ದೇಶದ ಇತಿಹಾಸದಲ್ಲಿ ಸಚಿವರಾದವರು ಜನರ ಮೇಲೆ ಕಲ್ಲು ಎಸೆಯುವುದನ್ನು ಯಾರಾದರೂ ನೋಡಿದ್ದೀರಾ? ಇದನ್ನು ಡಿಎಂಕೆ ಸರ್ಕಾರದ ಸಚಿವರು ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪತ್ರಕರ್ತರು ವೃತ್ತಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು – ಆರ್. ಅಶೋಕ್
In India’s history, has anybody seen a govt minister throwing stones at people?
ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್.ರವಿ (RN Ravi) ನಡುವಣ ತಿಕ್ಕಾಟ ತೀವ್ರಗೊಂಡಿದೆ. ಈ ನಡುವೆ ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ (Shivaji Krishnamurthy) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದಕ್ಕೆ ಬಿಜೆಪಿ (BJP) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಡಿಎಂಕೆಗೆ ಉಗ್ರರ ಸಂಪರ್ಕ ಇರೋ ಶಂಕೆಯಿದ್ದು, ಈ ಬಗ್ಗೆ ಪೊಲೀಸ್ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ. ಇನ್ನೂ ವಿವಾದಿತ ಹೇಳಿಕೆ ಸಂಬಂಧ ರಾಜ್ಯಪಾಲರ (Tamilnadu Governor) ಉಪ ಕಾರ್ಯದರ್ಶಿ ಪ್ರಸನ್ನ ರಾಮಸಾಮಿ ಅವರು ಚೆನ್ನೈನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮಾಜಿ ಶಾಸಕ ವೈಎಸ್‌ವಿ ದತ್ತಾ, ಶಾಸಕ ಹೆಚ್.ನಾಗೇಶ್ ಕಾಂಗ್ರೆಸ್ ಸೇರ್ಪಡೆ
ಈ ಬೆನ್ನಲ್ಲೇ ರಾಜ್ಯಪಾಲ ಆರ್.ಎನ್.ರವಿ ಕುರಿತು ಡಿಎಂಕೆ (DMK) ನಾಯಕ ಶಿವಾಜಿ ಕೃಷ್ಣಮೂರ್ತಿ ಅವರನ್ನ ಪಕ್ಷದಿಂದ ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಪಕ್ಷದ ನಿಯಮ ಗಾಳಿಗೆ ತೂರಿ ವಿವಾದಿತ ಹೇಳಿಕೆ ನೀಡಿದ್ದರಿಂದ ಪಕ್ಷ ತಕ್ಷಣವೇ ಈ ಕ್ರಮ ಕೈಗೊಂಡಿದ್ದು, ಅವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಅಮಾನತುಗೊಳಿಸಿದೆ.
ಈ ಮಧ್ಯೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈಗೆ ಕೇಂದ್ರ ಸರ್ಕಾರ ಝೆಡ್ ಶ್ರೇಣಿಯ ಭದ್ರತೆ ಒದಗಿಸಿದೆ.
Live Tv
[brid partner=56869869 player=32851 video=960834 autoplay=true]
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ರಾಜ್ಯಪಾಲ ಆರ್. ಎನ್. ರವಿ ಅವರ ನಡುವೆ ನಡೆಯುತ್ತಿರುವ ಜಟಾಪಟಿ ಮಧ್ಯೆಯೇ ಡಿಎಂಕೆ ಪಕ್ಷದ ನಾಯಕ ಶಿವಾಜಿ ಕೃಷ್ಣಮೂರ್ತಿ ಅವರು ತಮಿಳುನಾಡು ರಾಜ್ಯಪಾಲರನ್ನು ಗುಂಡಿಕ್ಕಿ ಕೊಲ್ಲಲು ಉಗ್ರನನ್ನು ಕಳುಹಿಸುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ತಮಿಳುನಾಡಿನ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಡಿಎಂಕೆ (DMK) ಪಕ್ಷದ ನಾಯಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಾಜ್ಯಪಾಲರನ್ನು ನಿಂದಿಸಬೇಡಿ ಎಂದು ಸಿಎಂ ಕೇಳುತ್ತಿದ್ದಾರೆ. ಆದರೆ ರಾಜ್ಯಪಾಲರು ಸರಿಯಾಗಿ ಓದಿದ್ದರೆ ನಾನು ಅವರ ಕಾಲಿಗೆ ಹೂಗಳನ್ನು ಇಟ್ಟು ಕೈಮುಗಿದು ಧನ್ಯವಾದ ಹೇಳುತ್ತಿದ್ದೆ. ಆದರೆ ಅವರು ಅಂಬೇಡ್ಕರರ ಹೆಸರು ಹೇಳಲು ನಿರಾಕರಿಸಿದರೆ ಚಪ್ಪಲಿಯಿಂದ ಹೊಡೆಯುವ ಹಕ್ಕು ನನಗಿಲ್ಲವೇ? ನೀವು ಅವರ ಹೆಸರನ್ನು ನಿರಾಕರಿಸಿದರೆ, ನೀವು ಕಾಶ್ಮೀರಕ್ಕೆ ಹೋಗುತ್ತೀರಿ. ಆಗ ನಿಮ್ಮನ್ನು ಗುಂಡಿಕ್ಕಿ ಕೊಲ್ಲಲು ನಾವು ಓರ್ವ ಉಗ್ರನನ್ನು ಕಳುಹಿಸುತ್ತೇವೆ ಎಂದು ಸಭೆಯಲ್ಲಿ ತಿಳಿಸಿದರು.
ಸದ್ಯ ಈ ಹೇಳಿಕೆಯು ವಿವಾದವನ್ನು ಸೃಷ್ಟಿಸಿದ್ದು, ಬಿಜೆಪಿ (BJP) ಸೇರಿದಂತೆ ಅನೇಕ ಪಕ್ಷಗಳು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಡಿಎಂಕೆಗೆ ಯಾವ ಉಗ್ರನ ಸಂಬಂಧವಿದೆ ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು. ಏಕೆಂದರೆ ಅವರು ಭಾಷಣದಲ್ಲಿ ನಾವು ರಾಜ್ಯಪಾಲರನ್ನು ಕಾಶ್ಮೀರಕ್ಕೆ ಕಳುಹಿಸುತ್ತೇವೆ. ಕಾಶ್ಮೀರಕ್ಕೆ ಭಯೋತ್ಪಾದಕರನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ನಾವು ಎಂದರೆ ಯಾರು? ಶಿವಾಜಿ ಕೃಷ್ಣಮೂರ್ತಿ ಮಾತ್ರ ಇಂತಹ ಹೊಲಸು ಭಾಷೆಯಲ್ಲಿ ಮಾತನಾಡಿಲ್ಲ. ಸಿಎಂ ಎಂ.ಕೆ ಸ್ಟಾಲಿನ್ ಅವರ ಆಶೀರ್ವಾದದಿಂದ, ಡಿಎಂಕೆ ಮುಖ್ಯಸ್ಥರ ಪ್ರಚೋದನೆಯಿಂದ ಅವರು ಮಾತನಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಬಿಜೆಪಿ ನಾಯಕ ಕಿಡಿಕಾರಿದರು.
ಈ ವೇಳೆ ಎಂ.ಕೆ. ಸ್ಟಾಲಿನ್ ಅವರು, ಜಾತ್ಯತೀತತೆ ಸೇರಿದಂತೆ ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖವನ್ನು ರಾಜ್ಯ ಸರ್ಕಾರ ಭಾಷಣದಲ್ಲಿ ಸಿದ್ಧಪಡಿಸಿತ್ತು. ಆದರೆ ಭಾಷಣದ ಆ ಭಾಗಗಳನ್ನು ಅವರು ಬಿಟ್ಟುಬಿಟ್ಟಿದ್ದಾರೆ. ಆಡಳಿತಾರೂಢ ಡಿಎಂಕೆ ಪ್ರಚಾರ ಮಾಡುವ ದ್ರಾವಿಡ ಮಾದರಿಯ ಉಲ್ಲೇಖವನ್ನೂ ಅವರು ಓದಿಲ್ಲ. ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಚೆನ್ನೈ: ಸಾರ್ವಜನಿಕ ಕೊಳದಲ್ಲಿ (Public Pond) ಸ್ನಾನ ಮಾಡುತ್ತಿದ್ದ ದಲಿತ ಮಹಿಳೆ ವಿರುದ್ಧ ಜಾತಿ (Scheduled Caste) ನಿಂದನೆ ಮಾಡಿ, ಆಕೆಯನ್ನು ಅರೆಬರೆ ಬಟ್ಟೆಯಲ್ಲೇ ಓಡಿಸಿದ ಘಟನೆ ತಮಿಳುನಾಡಿನ (TamilNadu) ಪುದುಕೊಟ್ಟೈ ಜಿಲ್ಲೆಯ ಕುತ್ತಂಕುಡಿ ಗ್ರಾಮದಲ್ಲಿ ನಡೆದಿದೆ.
ನಡೆದಿದ್ದೇನು?: ಇದೇ ಜನವರಿ 1ರಂದು ಮಹಿಳೆ ಕುತ್ತಂಕುಡಿ ಗ್ರಾಮದ ಸಾರ್ವಜನಿಕ ಕೊಳದಲ್ಲಿ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಮಹಿಳೆಯನ್ನು ನೋಡಿದ ಅಯ್ಯಪ್ಪನ್ ಎಂಬ ವ್ಯಕ್ತಿ ಆಕೆಯನ್ನ ತಡೆದು ಗದರಿಸಿದ್ದಾನೆ. ಮಹಿಳೆ ಏಕೆ ಸ್ನಾನ ಮಾಡಬಾರದು ಎಂದು ಪ್ರಶ್ನಿಸಿದಾಗ ಮೀನು ಸಾಕಾಣಿಕೆಗಾಗಿ (Fish Breeding) ಈಗಾಗಲೇ ಕೆರೆಯನ್ನು ಹರಾಜು ಮಾಡಲಾಗಿದೆ ಎಂದು ಅಯ್ಯಪ್ಪನ್ ಹೇಳಿದ್ದಾನೆ. ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್‌ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ
ಅಯ್ಯಪ್ಪನ್ ಡಿಎಂಕೆ ಸದಸ್ಯ ಹಾಗೂ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂದು ಮಹಿಳೆ ಶ್ರೀದೇವಿ ಪತಿ ವಡಿವೇಶ್ವರನ್ ಹೇಳಿದ್ದಾರೆ. ಅಲ್ಲದೇ ಮಹಿಳೆ ಸ್ನಾನ ಮಾಡುವಾಗ ಅಯ್ಯಪ್ಪನ್ ಜೊತೆಗೆ ಮುತ್ತುರಾಮನ್ ಎಂಬ ಇನ್ನೊಬ್ಬ ವ್ಯಕ್ತಿಯೂ ಇದ್ದ ಎಂದು ಆರೋಪಿಸಿದ್ದಾರೆ.
ಪುದುಕೊಟ್ಟೈ ಜಿಲ್ಲೆಯಲ್ಲಿ ಜಾತಿ ನಿಂದನೆ ಸಂಬಂಧಿತ ನಡೆದ 2ನೇ ಪ್ರಕರಣ ಇದಾಗಿದೆ. ಕಳೆದ ಡಿಸೆಂಬರ್ 26ರಂದು ವೆಂಗೈವಾಯಲ್‌ನ ಪರಿಶಿಷ್ಟ ಜಾತಿ ಸಮುದಾಯದ ನಿವಾಸಿಗಳು ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮಾನವನ ಮಲ ಬೆರಸಿದ್ದ ಪ್ರಕರಣ ಪತ್ತೆಯಾಗಿತ್ತು. ಈ ಸಂಬಂಧ ಕೇಸ್ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿಲ್ಲ.
Live Tv
[brid partner=56869869 player=32851 video=960834 autoplay=true]