ಚೆನ್ನೈ: ಸಿನಿಮಾದಲ್ಲಿ ರೌಡಿಗಳು ನಾಯಕಿ ಕಾರನ್ನು ಹಿಂಬಾಲಿಸುವ ದೃಶ್ಯವನ್ನು ನೀವು ನೋಡರಬಹುದು. ಈಗ ಈ ದೃಶ್ಯದಂತೆ ತಮಿಳಿನಾಡಿನಲ್ಲಿ (Tamilndu) ಯುವತಿಯರಿದ್ದ ಕಾರನ್ನು ಡಿಎಂಕೆ (DMK) ಧ್ವಜ ಹಾಕಿದ್ದ ಕಾರಿನಲ್ಲಿ ಯವಕರು ಬೆನ್ನಟ್ಟಿದ ಘಟನೆ ನಡೆದಿದೆ.
ಕಳೆದ ಶುಕ್ರವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಚೆನ್ನೈನ ಇಸ್ಟ್ ಕೋಸ್ಟ್ ರಸ್ತೆಯಲ್ಲಿರುವ ಮುಟ್ಟುಕಾಡು ಸೇತುವೆ ಬಳಿ ಯುವತಿಯರಿದ್ದ ಕಾರನ್ನು ಡಿಎಂಕೆ ಧ್ವಜ ಹೊಂದಿದ್ದ ಕಾರಿನಲ್ಲಿದ್ದ ಯುವಕರು ಹಿಂಬಾಲಿಸಿದ್ದಾರೆ.
ಯುವತಿಯರಿದ್ದ ಕಾರಿನ ಮುಂದೆ ಕಾರನ್ನು ನಿಲ್ಲಿಸಿದ್ದಾರೆ. ನಂತರ ಕಾರಿನಿಂದ ಯುವಕನೊಬ್ಬ ಇಳಿದು ಯುವತಿಯರ ಕಾರಿನ ಗ್ಲಾಸನ್ನು ಬಡಿದಿದ್ದಾನೆ. ಈ ವೇಳೆ ಆತಂಕಕ್ಕೆ ಒಳಗಾದ ಯುವತಿಯರು ಜೋರಾಗಿ ಕಿರುಚಾಡಿದ್ದಾರೆ.
தி.மு.க கொடி கட்டிய காரில் ஒரு கயவர் கூட்டம் பெண்களை துரத்துகிறது நடு ரோட்டில்.
இரும்புக்கரத்தை விற்று பேரிச்சம் பழத்துக்கு போட்டு ஆட்சி நடத்தும் முதல்வரே @mkstalin இதுதான் உங்கள் ஆட்சியில் சட்டம் ஒழுங்கு காக்கப்படும் லட்சணமா?
ಹೇಗೋ ಯುವಕರಿಂದ ಪಾರಾದ ಯುವತಿಯರ ಪೈಕಿ ಒಬ್ಬಾಕೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎರಡು ಕಾರಿನಲ್ಲಿ ಬಂದ ಸುಮಾರು 7 ರಿಂದ 8 ವ್ಯಕ್ತಿಗಳನ್ನು ನಮ್ಮನ್ನು ತಡೆದರು. ಅವರು ನಾವು ಮನೆಯವರೆಗೂ ಹಿಂಬಾಲಿಸಿಕೊಂಡು ಬಂದಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಮನೆಯವರೆಗೂ ತಮ್ಮ ಕಾರನ್ನು ಬೆನ್ನಟ್ಟಿ, ತಮ್ಮನ್ನು ಎದುರಿಸಿ, ತಾವು ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಮಹಿಳೆ ಹೇಳಿಕೊಂಡಿದ್ದಾಳೆ, ಆದರೆ ಅವರು ಅದನ್ನು ನಿರಾಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಾರಿನ ಒಳಗಡೆಯೇ ಸೆರೆಯಾದ ಈ ವಿಡಿಯೋ ಈಗ ವೈರಲ್ ಆಗಿದ್ದು, ಸ್ಟಾಲಿನ್ ಸರ್ಕಾರದ ವಿರುದ್ಧ ಎಐಎಡಿಎಂಕೆ ಮತ್ತು ಬಿಜೆಪಿ ಮುಗಿ ಬಿದ್ದಿದೆ.
ರಾಜಕಾರಣಿಗಳನ್ನು ಆಗಾಗ್ಗೆ ಟೀಕಿಸಿ ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತಾರೆ ಸೂಪರ್ ಸ್ಟಾರ್ ರಜನಿಕಾಂತ್ (Rajinikanth). ಈ ಬಾರಿ ಡಿಎಂಕೆ ಮುಖಂಡ ದೊರೆಐ ಮುರುಗನ್ (Dorai Murugan) ಅವರ ಬಗ್ಗೆ ಮಾತನಾಡಿ, ವಿವಾದವನ್ನು (Controversy) ಮೈಮೇಲೆ ಎಳೆದುಕೊಂಡಿದ್ದಾರೆ. ಜೊತೆಗೆ ದೊರೆ ಜೊತೆಗಿನ ಸ್ನೇಹದ ಬಗ್ಗೆಯೂ ಮಾತಾಡಿ ತಿಪ್ಪೆ ಸಾರಿಸುವಂಥ ಕೆಲಸ ಮಾಡಿದ್ದಾರೆ.
ಪುಸ್ತಕ ಬಿಡುಗಡೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಜನಿಕಾಂತ್, ಅದೇ ವೇದಿಕೆಯ ಮೇಲಿದ್ದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಹೊಗಳಿದ್ದರು. ತಂದೆ ಕರುಣಾನಿಧಿ ನಿಧನದ ನಂತರ ಪಕ್ಷವನ್ನು ಅದ್ಭುತವಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ತಮಿಳುನಾಡಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕೆಲವರನ್ನು ನಿಭಾಯಿಸೋದರಲ್ಲಿ ಹೈರಾಣಾಗಿದ್ದಾರೆ ಎಂದು ಮಾತನಾಡುತ್ತಾ ದೊರೈ ಮುರುಗನ್ ಅವರನ್ನ ಎಳೆತಂದಿದ್ದಾರೆ ರಜನಿ.
ಕರುಣಾನಿಧಿ ಅವರ ಕಣ್ಣಲ್ಲೇ ಬೆರಳಾಡಿಸಿದೋರು ದೊರೈ ಮುರುಗನ್. ಇಂಥವರು ಡಿಎಂಕೆ ಪಕ್ಷದಲ್ಲಿದ್ದಾರೆ. ಹಿರಿಯರಾಗಿದ್ದಾರೆ. ಅವರನ್ನು ನಿಭಾಯಿಸೋದು ಕಷ್ಟ. ಹಿರಿಯರ ಕಾರಣದಿಂದಾಗಿ ಹೊಸಬರು ರಾಜಕಾರಣಕ್ಕೆ ಬರೋಕೆ ಆಗುತ್ತಿಲ್ಲ ಎಂದು ದೊರೈಯನ್ನು ಟೀಕಿಸಿದ್ದಾರೆ. ರಜನಿಯ ಈ ಮಾತಿಗೆ ದೊರೈ ಮುರುಗನ್ ಕೂಡ ಎದುರೇಟು ಕೊಟ್ಟಿದ್ದಾರೆ.
ರಜನಿಕಾಂತ್ ಗೆ ಹಲ್ಲು ಉದುರಿವೆ. ತಲೆ ಬೆಳ್ಳಗಾಗಿದೆ. ವಯಸ್ಸೂ ಆಗಿದೆ. ಆದರೂ, ಇನ್ನೂ ನಟಿಸ್ತಾ ಇದ್ದಾರೆ. ಇವರು ನಟಿಸೋದನ್ನ ನಿಲ್ಲಿಸಿದರೆ ಹೊಸಬರಿಗೆ ಅವಕಾಶ ಸಿಗಲಿದೆ. ಇವರಿಂದಾಗಿ ಹೊಸ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ ಎಂದಿದ್ದಾರೆ. ದೊರೈ ಮಾತಿಗೆ ರಜನಿ ಪ್ರತ್ಯುತ್ತರ ನೀಡಿ ದೊರೈ ನನ್ನ ಬಹುಕಾಲದ ಸ್ನೇಹಿತರು. ಅವರು ಏನೇ ಅಂದರೂ, ನನಗೆ ಬೇಸರವಾಗಲ್ಲ ಅಂದಿದ್ದಾರೆ.
ಚೆನ್ನೈ: ತಮಿಳುನಾಡು ಬಿಜೆಪಿ (Tamil Nadu BJP) ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸೋತಿದ್ದಕ್ಕೆ ಡಿಎಂಕೆ (DMK) ಕಾರ್ಯಕರ್ತರು ಮೇಕೆಯನ್ನು ನಡು ರಸ್ತೆಯಲ್ಲಿ ಕೊಂದು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜೆಪಿ ನಾಯಕ ಅಮರ್ ಪ್ರಸಾದ್ ರೆಡ್ಡಿ ಅವರು ಈ ವಿಡಿಯೋವನ್ನು ಅಪ್ಲೋಡ್ ಮಾಡಿ ಮುಖ್ಯಮಂತ್ರಿ ಸ್ಟಾಲಿನ್ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಅನಾಗರಿಕ ವರ್ತನೆ ಸ್ವೀಕಾರಾರ್ಹವಲ್ಲ. ದಯವಿಟ್ಟು ನಿಮ್ಮ ಕಾರ್ಯಕರ್ತರಿಗೆ ಮೂಲಭೂತ ಸಭ್ಯತೆಯನ್ನು ಪ್ರದರ್ಶಿಸಿಲು ಹೇಳಿ. ತಮಿಳುನಾಡು ಪೊಲೀಸರು ವೀಕ್ಷಕರಾಗುವ ಬದಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಹೊರಟ ಚಾರಣಿಗರಿಗೆ ನಿಜಕ್ಕೂ ಆಗಿದ್ದೇನು?
ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಣ್ಣಾಮಲೈ 1,18,068 ಮತಗಳ ಅಂತರದಿಂದ ಸೋತಿದ್ದರು. ಡಿಎಂಕೆ ಗಣಪತಿ ರಾಜ್‌ಕುಮಾರ್ ಅವರು 5,68,200 ಮತಗಳನ್ನು ಪಡೆದರೆ ಅಣ್ಣಾಮಲೈ 4,50,132 ಮತಗಳನ್ನು ಗಳಿಸಿದ್ದಾರೆ. ಎಐಡಿಎಂಕೆಯ ಸಿಂಗಯ್ ಜಿ ರಾಮಚಂದ್ರನ್ ಅವರು 2,36,490 ಮತಗಳು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.
– ಆರ್‌ಟಿಐ ಅಡಿ ಪ್ರಶ್ನೆ ಕೇಳಿದ ಅಣ್ಣಾಮಲೈ – ದ್ವೀಪದ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ – ಉತ್ತರದಲ್ಲಿ ನೆಹರೂ ನೀಡಿದ ಟಿಪ್ಪಣಿ ಉಲ್ಲೇಖ – ಕಚ್ಚತೀವು ಪ್ರದೇಶ ತನ್ನದೆಂದು ಸಾಬೀತು ಪಡಿಸಲು ಭಾರತ ವಿಫಲ
ನವದೆಹಲಿ: ಲೋಕಸಭಾ ಚುನಾವಣೆಯ (Lok Sabha Election) ಸಮಯದಲ್ಲಿ ಕಚ್ಚತೀವು (Katchatheevu) ದ್ವೀಪ ಪ್ರದೇಶದ ಬಗ್ಗೆ ಆರ್‌ಟಿಐ ಅಡಿ ಪಡೆದ ಮಾಹಿತಿ ತಮಿಳುನಾಡಿನಲ್ಲಿ (Tamil Nadu) ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ.
ಕಚ್ಚತೀವು ಪ್ರದೇಶವನ್ನು ಕಾಂಗ್ರೆಸ್ ಸರ್ಕಾರ (Congress Government) ಶ್ರೀಲಂಕಾ ಬಿಟ್ಟುಕೊಟ್ಟಿದೆ. ಸ್ವಾರ್ಥಕ್ಕಾಗಿ ಕಾಂಗ್ರೆಸ್ ಮತ್ತು ಡಿಎಂಕೆ (DMK) ತಮಿಳುನಾಡಿಗೆಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಈಗ ಕಿಡಿಕಾರಿದೆ.
ಈಗ ಯಾಕೆ ಸುದ್ದಿ?
ಡಿಎಂಕೆ ಮತ್ತು ಕಾಂಗ್ರೆಸ್ ವಿರುದ್ಧ ಯುದ್ಧ ಸಾರಿರುವ ತಮಿಳುನಾಡಿನಲ್ಲಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಕಚ್ಚತೀವು ಪ್ರದೇಶದ ಬಗ್ಗೆ ಅಂದಿನ ಕೇಂದ್ರ ಸರ್ಕಾರದ ನಿರ್ಧಾರ ಏನಿತ್ತು? ಶ್ರೀಲಂಕಾಗೆ ಈ ದ್ವೀಪ ಸೇರಿದ್ದು ಹೇಗೆ ಎಂಬುದರ ವಿವರವನ್ನು ಆರ್‌ಟಿಐ ಅಡಿ ಕೇಳಿ ಮಾಹಿತಿ ಪಡೆದಿದ್ದಾರೆ. ಈ ಮಾಹಿತಿಯ ವಿವರವನ್ನು ಮಾಧ್ಯಮವೊಂದು ಪ್ರಕಟಿಸಿದ್ದು ಈಗ ರಾಷ್ಟ್ರಮಟ್ಟದಲ್ಲಿ #Katchatheevu ಟ್ರೆಂಡಿಂಗ್ ಟಾಪಿಕ್ ಆಗಿದೆ.
Congress & DMK colluded in the ceding of Katchatheevu by Sri Lanka.
The Congress, whenever in power, had the least interest in securing our country’s border, territorial integrity & sovereignty. pic.twitter.com/mryS2eGumE
ಆರ್‌ಟಿಐ ಮಾಹಿತಿಯಲ್ಲಿ ಏನಿದೆ?
ಕಚ್ಚತೀವು ಪ್ರದೇಶ ಯಾರಿಗೆ ಸೇರಬೇಕು ಎನ್ನುವುದರ ಬಗ್ಗೆ ಸ್ವಾತಂತ್ರ್ಯ ಸಿಗುವಾಗ ಬ್ರಿಟಿಷರು ನಿರ್ಧಾರ ಮಾಡಿರಲಿಲ್ಲ. ಭಾರತ ತೀರದಿಂದ 20 ಕಿ.ಮೀ ದೂರದಲ್ಲಿರುವ ಕಚ್ಚತೀವು ಪ್ರದೇಶದಲ್ಲಿ ಭಾರತದ ನೌಕಾ ಸೇನೆ ಮಿಲಿಟರಿ ವ್ಯಾಯಾಮ ನಡೆಸಬಾರದು ಎಂದು ಶ್ರೀಲಂಕಾ ಹೇಳಿದಾಗ ಮೊದಲ ಬಾರಿಗೆ ಈ ವಿಚಾರ ಮುನ್ನೆಲೆಗೆ ಬಂತು. 1955 ರಲ್ಲಿ ಸಿಲೋನ್ ಏರ್‌ಫೋರ್ಸ್ ಈ ದ್ವೀಪದಲ್ಲಿ ವ್ಯಾಯಾಮ ನಡೆಸಿತು.
1961 =ರ ಮೇ 10 ರಂದು ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಈ ವಿಚಾರ ದೊಡ್ಡ ಸಮಸ್ಯೆಯೇ ಅಲ್ಲ ಎಂದು ಹೇಳಿ ತಳ್ಳಿಹಾಕಿದರು. ದ್ವೀಪದ ಮೇಲಿನ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ ಎಂದು ಟಿಪ್ಪಣಿ ಬರೆದರು.
ನಾನು ಈ ಪುಟ್ಟ ದ್ವೀಪಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಮತ್ತು ಅದರ ಮೇಲಿನ ನಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಇದು ಅನಿರ್ದಿಷ್ಟವಾಗಿ ಬಾಕಿ ಉಳಿದಿರುವುದು ಮತ್ತು ಸಂಸತ್ತಿನಲ್ಲಿ ಮತ್ತೆ ಚರ್ಚಿಸುವುದು ನನಗೆ ಇಷ್ಟವಿಲ್ಲ ಎಂದು ನೆಹರು ಟಿಪ್ಪಣಿಯಲ್ಲಿ ಉಲ್ಲೇಖಿಸಿದರು.
This is the first part of the chronology of the betrayal of Congress & DMK.
Both these parties chose to align with Sri Lankan interests, handed over Katchatheevu on a silver platter & put to risk the lives & livelihood of our Tamil Fishermen.
ನೆಹರು ಅವರ ಟಿಪ್ಪಣಿಯೂ ಆಗಿನ ಕಾಮನ್‌ವೆಲ್ತ್ ಕಾರ್ಯದರ್ಶಿ ವೈ ಡಿ ಗುಂಡೆವಿಯಾ ಅವರು ಸಿದ್ಧಪಡಿಸಿದ ಟಿಪ್ಪಣಿಯ ಭಾಗವಾಗಿತ್ತು ಮತ್ತು ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ 1968 ರಲ್ಲಿ ಸಂಸತ್ತಿನ ಅನೌಪಚಾರಿಕ ಸಲಹಾ ಸಮಿತಿಯೊಂದಿಗೆ ಹಿನ್ನೆಲೆಯಾಗಿ ಹಂಚಿಕೊಂಡಿದೆ.
ಈ ಪ್ರಕರಣದಲ್ಲಿ ಭಾರತದ ಪರ ಸಾಕ್ಷಗಳು ಗಟ್ಟಿ ಇತ್ತು. ಯಾಕೆಂದರೆ 1875 ರಿಂದ 1948 ರವರೆಗೆ ಈ ಜಾಗದಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿರಲಿಲ್ಲ. ಕಚ್ಚತೀವು ಮತ್ತು ಅದರ ಮೀನುಗಾರಿಕೆಯನ್ನು ನಿರ್ವಹಿಸುವ ಜಮೀನ್ದಾರಿ ಹಕ್ಕುಗಳನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ರಾಮನಾಡಿನ ರಾಜನಿಗೆ ನೀಡಿತ್ತು. ಇದು 1875 ರಿಂದ 1948 ರವರೆಗೆ ಮುಂದುವರೆದಿತ್ತು. ಜಮೀನ್ದಾರಿ ಹಕ್ಕುಗಳನ್ನು ರದ್ದುಪಡಿಸಿದ ನಂತರ ಮದ್ರಾಸ್ ರಾಜ್ಯಕ್ಕೆ ನೀಡಲಾಯಿತು. ಆದಾಗ್ಯೂ ರಾಮನಾಡಿನ ರಾಜನು ಶ್ರೀಲಂಕಾಕ್ಕೆ ತೆರಿಗೆಯನ್ನು ಪಾವತಿಸದೇ ಸ್ವತಂತ್ರವಾಗಿ ತನ್ನ ಜಮೀನ್ದಾರಿ ಹಕ್ಕುಗಳನ್ನು ಚಲಾಯಿಸುತ್ತಿದ್ದ.
ದ್ವೀಪವನ್ನು ಹಸ್ತಾಂತರಿಸುವ ಸಂಬಂಧ ಇಂದಿರಾ ಗಾಂಧಿ ಮತ್ತು ಅವರ ಸಿಲೋನೀಸ್ ಸಹವರ್ತಿ ಡ್ಯೂಡ್ಲಿ ಸೇನಾನಾಯಕ್ ಅವರು ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ 1968ರಲ್ಲಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪ್ರತಿಭಟಿಸಿ ಇಂದಿರಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಈ ವೇಳೆ ಸರ್ಕಾರ ಭಾರತ ಸರ್ಕಾರವು ಸಹಿ ಹಾಕಿರುವುದನ್ನು ನಿರಾಕರಿಸಿತು. ವಿವಾದಿತ ಸ್ಥಳವಾಗಿರುವ ಕಾರಣ ಉತ್ತಮ ದ್ವಿಪಕ್ಷೀಯ ಬಾಂಧವ್ಯದ ಅಗತ್ಯದೊಂದಿಗೆ ಭಾರತದ ಹಕ್ಕು ಸಮತೋಲಿತವಾಗಿರಬೇಕು ಎಂದು ಹೇಳಿತು. ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು
1973ರಲ್ಲಿ ಕೊಲಂಬೋದಲ್ಲಿ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ನಡೆಯಿತು. ಈ ಮಾತುಕತೆ ನಡೆದ ಒಂದು ವರ್ಷದ ನಂತರ ಭಾರತದ ಹಕ್ಕು ಹಿಂಪಡೆಯುವ ನಿರ್ಧಾರವನ್ನು ಜೂನ್ 1974 ರಲ್ಲಿ ವಿದೇಶಾಂಗ ಕಾರ್ಯದರ್ಶಿ ಕೇವಲ್ ಸಿಂಗ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರಿಗೆ ತಿಳಿಸಿದರು. ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ
ಸಭೆಯಲ್ಲಿ ರಾಮನಾಡಿನ ರಾಜನ ಜಮೀನ್ದಾರಿ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿ ಕಚ್ಚತೀವು ಪ್ರದೇಶ ನಮಗೆ ಸೇರಿದ್ದು ಎಂದು ಭಾರತ ಹೇಳಿತ್ತು. ಈ ಸಭೆಯಲ್ಲಿ ಸರಿಯಾದ ಸಾಕ್ಷ್ಯಗಳನ್ನು ತೋರಿಸಲು ವಿಫಲವಾಗಿದ್ದರೂ ದಾಖಲೆ ಆಧಾರದ ಮೇಲೆ ಶ್ರೀಲಂಕಾ ಬಹಳ ನಿರ್ಧಾರಿತ ಸ್ಥಾನವನ್ನು ತೆಗೆದುಕೊಂಡಿತು. ಜಾಫ್ನಾಪಟ್ಟಣದ ಭಾಗವಾಗಿ ಈ ಜಾಗ ತಮ್ಮದು ಎಂದು ಸಾಬೀತುಪಡಿಸಲು ಶ್ರೀಲಂಕಾ ಡಚ್, ಬ್ರಿಟಿಷರ ನಕ್ಷೆಯನ್ನು ತೋರಿಸಿತು. ಈ ಕಚ್ಚತೀವು ಮದ್ರಾಸ್ ರಾಜ್ಯದ ದ್ವೀಪವಾಗಿತ್ತು, ರಾಮನಾಡಿನ ರಾಜನಿಗೆ ಈ ಜಾಗ ಸೇರಿತ್ತು ಎಂದು ಸಾಬೀತುಪಡಿಸಲು ಗಟ್ಟಿ ಸಾಕ್ಷ್ಯಗಳು ಇದ್ದರೂ ಅದನ್ನು ಸಾಬೀತು ಪಡಿಸುವಲ್ಲಿ ಭಾರತ ವಿಫಲವಾಯಿತು.
ಈ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತ ತೆಗೆದುಕೊಂಡು ಹೋಗಲು ಹಿಂಜರಿಯಿತು. ಸಣ್ಣ ದೇಶಗಳ ಪರ ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಮಾಡಿತು ಎಂದು ಉಲ್ಲೇಖವಾಗಿರುವ ಅಂಶ ಆರ್‌ಟಿಐ ಮಾಹಿತಿಯಲ್ಲಿದೆ.
Slow claps for Congress! They willingly gave up #Katchatheevu and had no regrets about it either. Sometimes an MP of the Congress speaks about dividing the nation and sometimes they denigrate Indian culture and traditions. This shows that they are against the unity and integrity…
ಕಚ್ಚಾತೀವು ಎಲ್ಲಿದೆ?
ಕಚ್ಚತೀವು ತಮಿಳುನಾಡಿನ ರಾಮನಾಥಪುರಂನ ಈಶಾನ್ಯಕ್ಕೆ ಸುಮಾರು 15 ಮೈಲಿಗಳು (24 ಕಿಲೋಮೀಟರ್) ಮತ್ತು ಶ್ರೀಲಂಕಾದ ಡೆಲ್ಫ್ಟ್ ದ್ವೀಪಗಳ ನೈಋತ್ಯಕ್ಕೆ ಸರಿಸುಮಾರು 14 ಮೈಲಿ (22 ಕಿಲೋಮೀಟರ್) ದೂರದಲ್ಲಿದೆ.
ಈಗ ಯಾಕೆ ಚರ್ಚೆ:
ಭಾರತದ ಸಮುದ್ರ ಗಡಿಯಲ್ಲಿ ಈ ಜಾಗ ಇರುವ ಕಾರಣ ತಮಿಳುನಾಡಿನ ಮೀನುಗಾರರು ಕಚ್ಚತೀವು ಪ್ರದೇಶದ ಸಮೀಪದಲ್ಲಿ ಮೀನುಗಾರಿಕೆ ಮಾಡುತ್ತಿರುತ್ತಾರೆ. ಈ ವೇಳೆ ನಮ್ಮ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶ ಮಾಡಲಾಗಿದೆ ಎಂದು ಆರೋಪಿಸಿ ಲಂಕಾದ ನೌಕಾಸೇನೆ ಮೀನುಗಾರರನ್ನು ಬಂಧಿಸುತ್ತದೆ. 2020 ಮತ್ತು 2022 ರ ನಡುವೆ 501 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಬಂಧಿಸಿದೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ಸಂಸತ್ತಿಗೆ ಉತ್ತರ ನೀಡಿತ್ತು.
– ಕರ್ನಾಟಕದಲ್ಲಿ ಮೇಕೆದಾಟು ಯೋಜನೆಗೆ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್
ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ (Lok Sabha Election) INDIA ಒಕ್ಕೂಟ ಗೆದ್ದರೆ ಮೇಕೆದಾಟು ಯೋಜನೆಗೆ (Mekedatu Project) ತಡೆ ಒಡ್ಡುವುದಾಗಿ ಡಿಎಂಕೆ ಘೋಷಣೆ ಮಾಡಿದೆ.
ಲೋಕಸಭಾ ಚುನಾವಣೆಗೆ ತಮಿಳುನಾಡಿನಲ್ಲಿ (Tamil Nadu) ಆಡಳಿತ ನಡೆಸುತ್ತಿರುವ ಸ್ಟಾಲಿನ್ (CM Stalin) ನೇತೃತ್ವದ ಡಿಎಂಕೆ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಕಾವೇರಿ ನದಿಗೆ (Cauvery Water) ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆ ಯೋಜನೆ ನಿರ್ಮಾಣಕ್ಕೆ ತಡೆ ಒಡ್ಡುವುದಾಗಿ ಹೇಳಿದೆ.
INDIA ಒಕ್ಕೂಟದಲ್ಲಿ ಕಾಂಗ್ರೆಸ್ (Congress) ಪ್ರಧಾನ ಪಕ್ಷವಾಗಿದ್ದು ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ಸರ್ಕಾರವೇ ಅಧಿಕಾರ ನಡೆಸುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೊದಲು ಡಿಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಸಹ ನಡೆಸಿತ್ತು. ಈಗ ಮೈತ್ರಿ ಭಾಗವಾಗಿರುವ ಡಿಎಂಕೆ ಈ ವಿಚಾರವನ್ನೇ ಪ್ರಣಾಳಿಕೆಯಲ್ಲಿ ಸೇರಿಸಿದ್ದು ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಸದ್ಗುರು ಜಗ್ಗಿ ವಾಸುದೇವ್‌ಗೆ ಮೆದುಳಿನ ಶಸ್ತ್ರಚಿಕಿತ್ಸೆ!
ಪ್ರಣಾಳಿಕೆಯಲ್ಲಿ ಏನಿದೆ?
ರಾಜ್ಯಗಳಿಗೆ ಫೆಡರಲ್ ಹಕ್ಕುಗಳನ್ನು ಒದಗಿಸಲು ಭಾರತೀಯ ಸಂವಿಧಾನವನ್ನು ಬದಲಾವಣೆ, ಚೆನ್ನೈನಲ್ಲಿರುವ ಸುಪ್ರೀಂ ಕೋರ್ಟ್ ಪೀಠ ಸ್ಥಾಪನೆ, ಪುದುಚೇರಿಗೆ ರಾಜ್ಯ ಸ್ಥಾನಮಾನ, ರಾಷ್ಟ್ರೀಯ ಶಿಕ್ಷಣ ನೀತಿ (NEP) ಹಿಂಪಡೆಯಲಾಗುವುದು, ಮಹಿಳೆಯರಿಗೆ 33% ಮೀಸಲಾತಿ ಜಾರಿ, ಸರ್ಕಾರಿ ಶಾಲೆಗಳಿಗೆ ಬೆಳಗಿನ ಉಪಾಹಾರ ಯೋಜನೆ, NEET ನಿಷೇಧ, ಭಾರತದಾದ್ಯಂತ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ನೀಡಲಾಗುತ್ತದೆ.
ಹೆದ್ದಾರಿಗಳಲ್ಲಿರುವ ಟೋಲ್ ಗೇಟ್ ರದ್ದು, ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ತೆಗೆದುಹಾಕಲಾಗುತ್ತದೆ. ರಾಜ್ಯಪಾಲರಿಗೆ ಅಧಿಕಾರ ನೀಡುವ 361ನೇ ವಿಧಿಯನ್ನು ರದ್ದು, ರಾಜ್ಯಪಾಲರನ್ನು ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡುವುದು.
ನವದೆಹಲಿ: ಬಿಜೆಪಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ (Chief Election Commission) ಡಿಎಂಕೆ (DMK) ದೂರು ನೀಡಿದೆ.
ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣದ ಹಿಂದೆ ತಮಿಳುನಾಡಿನ (Tamil Nadu) ಜನರಿದ್ದಾರೆ. ತಮಿಳುನಾಡು ಕರ್ನಾಟಕದ ಜನರ ಮಧ್ಯೆ ಕೋಮು ದ್ವೇಷದ ಭಾಷಣ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ರಾಷ್ಟ್ರೀಯ ತನಿಖಾ ದಳ (NIA) ಯಾರನ್ನೂ ಬಂಧನ ಮಾಡಿಲ್ಲ. ಹೀಗಾಗಿ ಪ್ರಜಾಪತ್ರಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರು ನೀಡಿದೆ. ಇದನ್ನೂ ಓದಿ: ನಾನು ಸ್ಪರ್ಧಿಸೋದು ಖಚಿತ, ವಿಜಯೇಂದ್ರ ರಾಜೀನಾಮೆ ಕೊಡೋದು ನಿಶ್ಚಿತ: ಈಶ್ವರಪ್ಪ ಭವಿಷ್ಯ
ತಮಿಳುನಾಡಿನಲ್ಲಿ ಟ್ರೈನಿಂಗ್ ಪಡೆದು, ಬಾಂಬ್ ಇಡಲು ಬೆಂಗಳೂರಿಗೆ (Bengaluru) ರಾಮೇಶ್ವರಂ ಕೆಫೆಗೆ ಶಂಕಿತ ಬಂದಿದ್ದಾನೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಎನ್‌ಐಎ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ ಎನ್‌ಐಎ ಇಲ್ಲಿಯವರೆಗೆ ಯಾರನ್ನೂ ಬಂಧಿಸಿದಲ್ಲ ಎಂದು ಡಿಎಂಕೆ ದೂರಿನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಕಾಂಗ್ರೆಸ್ 2ನೇ ಪಟ್ಟಿ ಇಂದು ಬಿಡುಗಡೆ – ಸಂಭಾವ್ಯ ಅಭ್ಯರ್ಥಿಗಳು ಯಾರು?
linked to the Rameshwaram Cafe blast. To anyone from Tamilnadu effected, From the depths of my heart, I ask your forgiveness. Furthermore, I retract my previous comments. 🙏
ಶೋಭಾ ಕರಂದ್ಲಾಜೆ ಹೇಳಿದ್ದೇನು?
ಮಂಗಳವಾರ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬೆಂಗಳೂರಿನ ನಗರ್ತಪೇಟೆಯಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು, ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದುಕೊಂಡು ಬಾಂಬ್ ಇಡುತ್ತಾರೆ ಎಂದು ಹೇಳಿಕೆ ನೀಡಿದ್ದರು.
ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಎಕ್ಸ್‌ನಲ್ಲಿ ಕರಂದ್ಲಾಜೆ ಕ್ಷಮೆ ಕೇಳಿದ್ದರು. ನನ್ನ ತಮಿಳು ಸಹೋದರ ಸಹೋದರಿಯರಿಗೆ ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ತಿಳಿಸಿದ್ದರು.
ಲೋಕಸಭೆ ಚುನಾವಣೆಗೆ (Elections) ಎಲ್ಲ ಪಕ್ಷಗಳು ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿವೆ. ಅದರಲ್ಲೂ ದಕ್ಷಿಣದಲ್ಲಿ ಹೆಚ್ಚೆಚ್ಚು ಮತಗಳನ್ನು ಪಡೆಯಲು ಬಿಜೆಪಿ ಸೇರಿದಂತೆ ರಾಷ್ಟ್ರೀಯ ಪಕ್ಷಗಳು ತಮ್ಮದೇ ಆದಂತಹ ತಂತ್ರಗಳನ್ನು ಹೆಣೆಯುತ್ತಿವೆ. ಆದರೆ, ಪ್ರಾದೇಶಿಕ ಪಕ್ಷಗಳು ಉಳಿಯುವ ನಿಟ್ಟಿನಲ್ಲಿ ತಾವು ಡಿಎಂಕೆ ಜೊತೆ ಕೈ ಜೋಡಿಸುವುದಾಗಿ ನಟ ಕಮಲ್ ಹಾಸನ್ (Kamal Haasan) ತಿಳಿಸಿದ್ದಾರೆ.
ಮುಂಬರುವ ಲೋಕಸಭೆ (Lok Sabha) ಚುನಾವಣೆಯಲ್ಲಿ ಕಮಲ್ ಹಾಸನ್ ಮತ್ತು ಕಮಲ್ ಪಕ್ಷ ಮಕ್ಕಳ್ ನಿಧಿ ಮೈಯಂ (ಎಂಎನ್‍ಎಂ) ಸ್ಪರ್ಧೆ ಮಾಡದೇ ಇದ್ದರೂ, ದ್ರಾವಿಡ ಮುನ್ನೇತ್ರ ಕಳಗ ಪಕ್ಷ (ಡಿಎಂಕೆ)ಕ್ಕೆ ತಮ್ಮ ಬೆಂಬಲ ನೀಡುವುದಾಗಿ ಕಮಲ್ ಹಾಸನ್ ತಿಳಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಉಳಿಯುವ ನಿಟ್ಟಿನಲ್ಲಿ ಈ ನಿರ್ಧಾರ ಎಂದೂ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಮಲ್, ನಾನು ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ. ಜೊತೆಗೆ ನನ್ನ ಪಕ್ಷವು ಕೂಡ ಚುನಾವಣೆಯನ್ನು ಎದುರಿಸುವುದಿಲ್ಲ. ಆದರೆ, ಮೈತ್ರಿಗೆ ಸಹಾಯ ನೀಡುವುದರ ಮೂಲಕ ಡಿಎಂಕೆ ಪಕ್ಷವನ್ನು ಗೆಲ್ಲಿಸುವುದರತ್ತ ಹೆಜ್ಜೆ ಹಾಕುತ್ತೇವೆ ಎಂದಿದ್ದಾರೆ.
ನವದೆಹಲಿ: ಭಾರತ (India) ದೇಶವಲ್ಲ. ನಾವು ಜೈ ಶ್ರೀರಾಮ್ (Jai Shree Ram) ಘೋಷಣೆಯನ್ನು ಒಪ್ಪಲ್ಲ ಎಂದು ಹಿಂದೂ ಧರ್ಮ ಮತ್ತು ಸನಾತನದ (Sanatan) ಬಗ್ಗೆ ಹೇಳಿಕೆ ನೀಡಿ ಡಿಎಂಕೆ (DMK) ಸಂಸದ ಎ.ರಾಜ (A.Raja) ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಧುರೈನಲ್ಲಿ ಹಿಂದೂ ಧರ್ಮ ಮತ್ತು ಸನಾತನ ಧರ್ಮದ ಬಗ್ಗೆ ಮಾತನಾಡಿದ ಅವರು, ನಾವು ಶ್ರೀರಾಮನ ಶತ್ರುಗಳು. ನಾವು ರಾಮಾಯಣದಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳದವರು. ಜೈ ಶ್ರೀರಾಮ್ ಎನ್ನುತ್ತಾರೆ, ‘ಛೀ’ ಎಂದು ಕಟುವಾಗಿ ಟೀಕಿಸಿದರು. ಅಲ್ಲದೇ ನಾವು ಭಾರತ್ ಮಾತಾ ಕೀ ಜೈ ಘೋಷಣೆಯನ್ನು ಒಪ್ಪಲ್ಲ. ನಮಗೆ ರಾಮಾಯಣದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 24, ಕಾಂಗ್ರೆಸ್ ಗೆಲ್ಲಲಿದೆ 4 ಸ್ಥಾನ
The hate speeches from DMK’s stable continue unabated. After Udhayanidhi Stalin’s call to annihilate Sanatan Dharma, it is now A Raja who calls for balkanisation of India, derides Bhagwan Ram, makes disparaging comments on Manipuris and questions the idea of India, as a nation.… pic.twitter.com/jgC1iOA5Ue
— Amit Malviya (मोदी का परिवार) (@amitmalviya) March 5, 2024
ದೇಶವೆಂದರೆ ಒಂದೇ ಭಾಷೆ ಮತ್ತು ಸಂಸ್ಕೃತಿಯನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ಹಲವಾರು ಸಂಪ್ರದಾಯ ಮತ್ತು ಸಂಸ್ಕೃತಿಗಳಿವೆ. ಹಾಗಾಗಿ ಭಾರತ ದೇಶವಲ್ಲ. ಭಾರತ ಒಂದು ಉಪಖಂಡ. ತಮಿಳುನಾಡೇ ಒಂದು ದೇಶ, ಕೇರಳವೇ ಒಂದು ದೇಶ. ಒರಿಯಾವೇ ಒಂದು ದೇಶ, ಒಂದು ನಾಡು. ಈ ಎಲ್ಲಾ ದೇಶಗಳು ಸೇರಿ ಭಾರತವಾಗಿದೆ. ಹೀಗಾಗಿ ಭಾರತ ಒಂದು ಉಪಖಂಡ ಎಂದರು. ಅವರ ಈ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುಪಿ ಪೊಲೀಸ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ – ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಮಿಶ್ರಾ ವಜಾ
ಈ ಹಿಂದೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಗೆ ಹೋಲಿಸಿ ಲೇವಡಿ ಮಾಡಿದ್ದರು. ಅವರ ಈ ವಿವಾದಾತ್ಮಕ ಹೇಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: 140 ಕೋಟಿ ಜನರೇ ನನ್ನ ಕುಟುಂಬ: ಲಾಲೂಗೆ ಮೋದಿ ತಿರುಗೇಟು
ಚೆನ್ನೈ: ತಮಿಳುನಾಡಿನಲ್ಲಿರುವ ಆಡಳಿತರೂಢ ಡಿಎಂಕೆ ಇಸ್ರೋ (ISRO) ರಾಕೆಟ್‌ನಲ್ಲಿ ಚೀನಾ ಧ್ವಜವನ್ನು (China Flag) ಮುದ್ರಿಸಿ ದೊಡ್ಡ ಯಡವಟ್ಟು ಮಾಡಿಕೊಂಡಿದೆ.
ಇಂದು ತಮಿಳುನಾಡಿನ (Tamil Nadu) ತೂತುಕುಡಿ ಜಿಲ್ಲೆಯ ಕುಲಶೇಖರಪಟ್ಟಣಂನಲ್ಲಿ ಇಸ್ರೋದ ಎರಡನೇ ಉಡಾವಣಾ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶಂಕುಸ್ಥಾಪನೆ ನೆರವೇರಿಸಿದರು.
#WATCH | Tamil Nadu: In Tirunelveli, PM Modi says "DMK is such a party which doesn't do any work but goes ahead to take false credit. Who doesn't know that these people put their stickers on our schemes? Now they have crossed the limit, they have pasted stickers of China to take… pic.twitter.com/5Z9f2INeoO
ಈ ಕಾರ್ಯಕ್ರಮ ಸಂಬಂಧ ತಮಿಳುನಾಡು ಮಂತ್ರಿ ಅನಿತಾ ರಾಧಾಕೃಷ್ಣ ಮುದ್ರಣ ಮಾಧ್ಯಮಗಳಿಗೆ ಜಾಹೀರಾತು (Advertisement) ನೀಡಿದ್ದರು. ಈ ಜಾಹೀರಾತಿನಲ್ಲಿ ಮೋದಿ, ಸಿಎಂ ಸ್ಟಾಲಿನ್, ಕನಿಮೋಳಿ ಮತ್ತು ಉದಯನಿಧಿ ಮಾರನ್ ಫೋಟೋದ ಜೊತೆ ರಾಕೆಟ್ ಫೋಟೋವನ್ನು ಮುದ್ರಿಸಲಾಗಿತ್ತು. ಅಷ್ಟೇ ಅಲ್ಲದೇ ಇಸ್ರೋ ರಾಕೆಟ್‌ನ ತುದಿಯಲ್ಲಿ ಚೀನಾದ ಧ್ವಜವನ್ನು ಮುದ್ರಿಸಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮ್ಯಾಟ್ರಿಮೋನಿ ವರನನ್ನು ಅರಸಿ ಬಂದ ಪೋಷಕರಿಗೆ ಪಂಗನಾಮ – 250ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದ ಆರೋಪಿ ಅಂದರ್
This advertisement by DMK Minister Thiru Anita Radhakrishnan to leading Tamil dailies today is a manifestation of DMK’s commitment to China & their total disregard for our country’s sovereignty.
DMK, a party flighing high on corruption, has been desperate to paste stickers ever… pic.twitter.com/g6CeTzd9TZ
ತಿರುನಲ್ವೇಲಿಯಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ (India) ಪ್ರಗತಿಯನ್ನು ಒಪ್ಪಿಕೊಳ್ಳಲು ಡಿಎಂಕೆಗೆ (DMK) ಆಗುತ್ತಿಲ್ಲ. ಜನರು ಪಾವತಿಸುವ ತೆರಿಗೆಯಿಂದ ಅವರು ಜಾಹೀರಾತುಗಳನ್ನು ನೀಡುತ್ತಾರೆ. ಆದರೆ ಅದರಲ್ಲಿ ಭಾರತದ ಬಾಹ್ಯಾಕಾಶದ ಚಿತ್ರವನ್ನು ಸೇರಿಸುವುದಿಲ್ಲ. ಭಾರತದ ಬಾಹ್ಯಾಕಾಶ ಯಶಸ್ಸನ್ನು ಪ್ರಪಂಚದ ಮುಂದೆ ತೋರಿಸಲು ಅವರು ಬಯಸುವುದಿಲ್ಲ. ಜಾಹೀರಾತಿನಲ್ಲಿ ಚೀನಾ ಧ್ವಜವನ್ನು ಹಾಕುವ ಮೂಲಕ ನಮ್ಮ ವಿಜ್ಞಾನಿಗಳನ್ನು, ನಮ್ಮ ಬಾಹ್ಯಾಕಾಶ ಕ್ಷೇತ್ರವನ್ನು ಮತ್ತು ಜನರ ತೆರಿಗೆ ಹಣವನ್ನು ಅವಮಾನಿಸಲಾಗಿದೆ. ಈ ಕೆಲಸಕ್ಕೆ ಡಿಎಂಕೆಗೆ ಶಿಕ್ಷೆ ನೀಡುವ ಸಮಯ ಈಗ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
#WATCH | On a newspaper advertisement in Tamil Nadu having an image of a rocket with a Chinese flag, DMK MP Kanimozhi says, "I don't know from where the person who did the artwork, found this picture from. I don't think India has declared China as an enemy country. I have seen… pic.twitter.com/0o8tbBwR7z
ಚೀನಾದ ಧ್ವಜ ಇರುವ ಜಾಹೀರಾತಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಸಂಸದೆ ಕನಿಮೋಳಿ, ವಿನ್ಯಾಸ ಮಾಡಿದ ವ್ಯಕ್ತಿಗೆ ಈ ಚಿತ್ರ ಎಲ್ಲಿಂದ ಸಿಕ್ಕಿದೆ ಅಂತ ಗೊತ್ತಿಲ್ಲ. ಭಾರತ ಇಲ್ಲಿಯವರೆಗೆ ಚೀನಾ ತನ್ನ ಶತ್ರು ದೇಶ ಎಂದೂ ಎಲ್ಲೂ ಘೋಷಣೆ ಮಾಡಿಲ್ಲ. ಪ್ರಧಾನಿಯವರು ಚೀನಾದ ಪ್ರಧಾನಿಯನ್ನು ಆಹ್ವಾನಿಸಿ ಮಹಾಬಲಿಪುರಂಗೆ ಹೋಗಿರುವುದನ್ನು ನಾನು ನೋಡಿದ್ದೇನೆ. ಸತ್ಯವನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ ಎಂಬ ಕಾರಣಕ್ಕೆ ಸಮಸ್ಯೆಯನ್ನು ಬೇರೆಡೆಗೆ ತಿರುಗಿಸಲು ಕಾರಣಗಳನ್ನು ಹುಡುಕುತ್ತಿದ್ದೀರಿ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ಚೆನ್ನೈ: ಈ ದೇಶದಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರಬಾರದು ಎಂಬುದೋಂದೇ ನಮ್ಮ ಗುರಿಯಾಗಿರಬೇಕು. ಅದಕ್ಕಾಗಿ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ (MK Stalin) ಕರೆ ನೀಡಿದ್ದಾರೆ.
ತಿರುಚಿನಾಪಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟಾಲಿನ್, ಈ ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಬಿಡಬಾರದು ಎಂಬ ಒಂದೇ ಗುರಿಯನ್ನು ಎಲ್ಲರೂ ಹೊಂದಿರಬೇಕು. ಬಿಜೆಪಿ ವಿರುದ್ಧದ ಮತಗಳು ಯಾವುದೇ ಕಾರಣಕ್ಕೂ ವಿಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ.
INDIA ಒಕ್ಕೂಟದಲ್ಲಿ ( INDIA Block) ಅಸಮಾಧಾನ: ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಆಮ್ ಆದ್ಮಿ ಪಕ್ಷವು ಹರಿಯಾಣದ ಎಲ್ಲಾ 90 ವಿಧಾನಸಭಾ ಸ್ಥಾನಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಪಕ್ಷದ ರಾಷ್ಟ್ರೀಯ ನಾಯಕರಿಗೆ ನಮ್ಮ ನಿಲುವನ್ನು ತಿಳಿಸಿದ್ದೇವೆ. ನಾವು ಪ್ರಬಲರಾಗಿರುವುದರಿಂದ ಚುನಾವಣೆಯಲ್ಲಿ ಮೈತ್ರಿ ಮತ್ತು ಸ್ವತಂತ್ರವಾಗಿಯೂ ಸ್ಪರ್ಧಿಸಬಹುದು. ಅಂತಿಮ ನಿರ್ಧಾರವನ್ನು ಪಕ್ಷದ ನಾಯಕರು ತೆಗೆದುಕೊಳ್ಳುತ್ತಾರೆ ಎಂದು ಎಎಪಿ ನಾಯಕ ಸುಶೀಲ್ ಗುಪ್ತಾ ಹೇಳಿದ್ದಾರೆ. ಇದರಿಂದ ಐಎನ್‌ಡಿಐಎ ಒಕ್ಕೂಟದಲ್ಲಿ ಅಸಮಾಧಾನ ತಲೆದೋರಿದೆ.
ಈ ಬೆನ್ನಲ್ಲೇ ಬಿಹಾರದ ಮುಖ್ಯಮಂತ್ರಿ ಮಹಾಘಟಬಂಧನ್ (ಮಹಾಮೈತ್ರಿಕೂಟ) ಜೊತೆಗಿನ ಸಂಬಂಧ ಕಡಿದುಕೊಂಡು ಮತ್ತೆ ಬಿಜೆಪಿ ಜೊತೆಗೆ ಸರ್ಕಾರ ರಚಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳೂ ಇವೆ ಎಂದು ಜೆಡಿಯು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜೈಲಿನಲ್ಲಿ ಶ್ರೀರಾಮೋತ್ಸವ ಆಚರಿಸಿದ್ದಕ್ಕೆ ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ!
ಈ ಎಲ್ಲದರ ನಡುವೆ ರಾಷ್ಟ್ರವ್ಯಾಪಿ ಅನ್ಯಾಯದ ವಿರುದ್ಧ ಹೋರಾಡುವಲ್ಲಿ ಇಂಡಿಯಾ ಒಕ್ಕೂಟದ ಬಣಗಳ ಏಕತೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.