ಚೆನ್ನೈ: ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಿಂದಿ ಹೇರಿಕೆಯನ್ನು (Hindi Impostion) ನಿಷೇಧಿಸುವ ಮಸೂದೆಯನ್ನು ಮಂಡನೆ ಮಾಡದೇ ಇರಲು ತಮಿಳುನಾಡು (Tamil Nadu) ಸರ್ಕಾರ ನಿರ್ಧರಿಸಿದೆ.
ರಾಜ್ಯದ್ಯಂತ ಹಿಂದಿ ಹೋರ್ಡಿಂಗ್‌ಗಳು, ಬೋರ್ಡ್‌ಗಳು, ಚಲನಚಿತ್ರಗಳು ಮತ್ತು ಹಾಡುಗಳನ್ನು ನಿಷೇಧಿಸುವ ಮಸೂದೆ ಮಂಡಿಸಲು ತಮಿಳುನಾಡು ಸರ್ಕಾರ ಮುಂದಾಗಿತ್ತು.
ಈ ಪ್ರಸ್ತಾವಿತ ಮಸೂದೆ ಸಂವಿಧಾನ ವ್ಯಾಪ್ತಿಯ ಒಳಗಡೆ ಇರಲಿದೆ. ಮಸೂದೆಯ ಬಗ್ಗೆ ಮಂಗಳವಾರ ರಾತ್ರಿ ಕಾನೂನು ತಜ್ಞರೊಂದಿಗೆ ತುರ್ತು ಸಭೆ ನಡೆಸಲಾಗಿತ್ತು ಎಂದು ಸರ್ಕಾರ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದವು.
ತಿರುಪರಾನುಕುಂದ್ರಂ, ಕರೂರ್ ಸಿಬಿಐ ತನಿಖೆ ಮತ್ತು ಆರ್ಮ್‌ಸ್ಟ್ರಾಂಗ್ ವಿಷಯಗಳು ಸೇರಿದಂತೆ ಇತ್ತೀಚಿನ ನ್ಯಾಯಾಲಯದ ಪ್ರಕರಣಗಳಲ್ಲಿ ಆಡಳಿತಾರೂಢ ಡಿಎಂಕೆಗೆ ಹಿನ್ನಡೆಯಾಗಿದೆ. ವಿವಾದಾತ್ಮಕ ಫಾಕ್ಸ್‌ಕಾನ್ ಹೂಡಿಕೆ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಈ ವಿಚಾರವನ್ನು ಮುನ್ನೆಲೆಗೆ ತಂದಿದೆ ಪ್ರತಿಪಕ್ಷಗಳು ದೂರಿವೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಹಿಂದಿ ಹೋರ್ಡಿಂಗ್ಸ್, ಸಿನಿಮಾ, ಹಾಡುಗಳ ನಿಷೇಧ?
ಈ ವರ್ಷದ ಮಾರ್ಚ್‌ನಲ್ಲಿ ಎಂಕೆ ಸ್ಟಾಲಿನ್ ಸರ್ಕಾರವು 2025–26 ರ ರಾಜ್ಯ ಬಜೆಟ್ ಲೋಗೋದಲ್ಲಿ ರಾಷ್ಟ್ರೀಯ ರೂಪಾಯಿ ಚಿಹ್ನೆಅನ್ನು ತಮಿಳು ಅಕ್ಷರ ರೂ.ನೊಂದಿಗೆ ಬದಲಾಯಿಸಿತ್ತು. ಈ ಬದಲಾವಣೆಯನ್ನು ಬಿಜೆಪಿ ನಾಯಕರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದ್ದರು. ಆದರೂ ಡಿಎಂಕೆ ತಮಿಳು ಭಾಷೆಯನ್ನು ಉತ್ತೇಜಿಸಿಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.
ಚೆನ್ನೈ: ಡಿಎಂಕೆಗೆ ಮತ ಹಾಕಿದರೆ ಬಿಜೆಪಿಗೇ ಮತ ಹಾಕಿದಂತೆ. ಹೀಗಾಗಿ, ಬಿಜೆಪಿ ಜೊತೆ ಯಾವ ಕಾರಣಕ್ಕೂ ಕೈಜೋಡಿಸಲ್ಲ ಎಂದು ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ದಳಪತಿ ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಕೊಂಗು ಪ್ರದೇಶದಲ್ಲಿ ಮೊದಲ ಬಾರಿಗೆ ಪ್ರಚಾರ ಆರಂಭಿಸಿದ ಟಿವಿಕೆ ಮುಖ್ಯಸ್ಥ ವಿಜಯ್, 2026 ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ಮತ ಹಾಕುವುದು ಬಿಜೆಪಿಗೆ ಮತ ಹಾಕಿದಂತೆ ಎಂದು ಹೇಳಿದ್ದಾರೆ. ಕೇಸರಿ ಪಕ್ಷದೊಂದಿಗಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಮೈತ್ರಿ ಅವಕಾಶವಾದಿತನದಿಂದ ಕೂಡಿದೆ ಎಂದು ಟೀಕಿಸಿದ್ದಾರೆ.
2021ರ ಚುನಾವಣೆ ವೇಳೆ ಡಿಎಂಕೆ ಹಲವಾರು ಭರವಸೆಗಳನ್ನು ನೀಡಿತ್ತು. ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತಹ ಭರವಸೆಗಳನ್ನು ಕಾರ್ಯಗತಗೊಳಿಸಿದ್ದಾರೆಯೇ? ಇತ್ತ ಅಮ್ಮನ (ಜಯಲಲಿತಾ) ಹೆಸರು ಜಪಿಸುತ್ತಿದ್ದರೂ, ಅವರ ಆದರ್ಶನಗಳನ್ನು ಎಐಎಡಿಎಂಕೆ ಮರೆತಿದೆ. ಬಿಜೆಪಿ ಜೊತೆ ಸೂಕ್ತವಲ್ಲದ ಮೈತ್ರಿ ಮಾಡಿಕೊಂಡಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ತಮಿಳುನಾಡಿನ ಕಲ್ಯಾಣಕ್ಕಾಗಿ ಇಂತಹ ಮೈತ್ರಿ ಏರ್ಪಟ್ಟಿತ್ತು ಎಂದು ಎಐಎಡಿಎಂಕೆ ಹೇಳಿಕೊಂಡಿದೆ. ಆದರೆ, ಟಿವಿಕೆ ಅಂತಹ ಅವಕಾಶವಾದಿ ರಾಜಕೀಯ ನಿಲುವನ್ನು ತೆಗೆದುಕೊಳ್ಳುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಮಿಳುನಾಡಿಗೆ ಏನು ಮಾಡಿದೆ? ಅದು ತಮಿಳುನಾಡಿಗೆ ನೀಟ್ ವ್ಯಾಪ್ತಿಯಿಂದ ವಿನಾಯಿತಿ ನೀಡಿದೆಯೇ? ಟಿವಿಕೆ ಸಾಮಾನ್ಯ ಜನರ ಧ್ವನಿಯಾಗಿದ್ದರೆ, ಡಿಎಂಕೆ ತಮಿಳುನಾಡನ್ನು ಲೂಟಿ ಮಾಡುತ್ತಿದೆ. 2026 ರ ವಿಧಾನಸಭಾ ಚುನಾವಣಾ ಹೋರಾಟ ಟಿವಿಕೆ ಮತ್ತು ಡಿಎಂಕೆ ನಡುವೆ ಎಂದು ಮಾತನಾಡಿದ್ದಾರೆ.
ಪಶ್ಚಿಮ ಕೊಂಗು ಪ್ರದೇಶದ ಭಾಗವಾಗಿರುವ ನಾಮಕ್ಕಲ್, ದಶಕಗಳಿಂದ ಎಐಎಡಿಎಂಕೆಯ ಭದ್ರಕೋಟೆಯಾಗಿತ್ತು. ಕೊಂಗು ಪ್ರದೇಶದಾದ್ಯಂತ ಬಿಜೆಪಿ ಪ್ರಭಾವ ಹೊಂದಿದೆ.
ಚೆನ್ನೈ; ಟಿವಿಕೆ (TVK) ಪಕ್ಷ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ, ಡಿಎಂಕೆ (DMK) ಹಾಗೂ ಬಿಜೆಪಿ (DMK) ಯಾವ ಪಕ್ಷದ ಜೊತೆಗೂ ಕೈಜೋಡಿಸಲ್ಲ ಎಂದು ನಟ, ರಾಜಕಾರಣಿ ತಮಿಳಿಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಮುಖ್ಯಸ್ಥ ವಿಜಯ್ (Vijay) ಘೋಷಣೆ ಮಾಡಿದ್ದಾರೆ.
ಮಧುರೈ (Madhurai) ಜಿಲ್ಲೆಯ ಪರಪತಿಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಎರಡನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಮಾತನಾಡಿದರು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಡಿಎಂಕೆ ಹಾಗೂ ಬಿಜೆಪಿ ನಡುವೆ ಹೋರಾಡಲಿದೆ. ಡಿಎಂಕೆ ನಮಗೆ ರಾಜಕೀಯ ಬದ್ದ ವೈರಿ, ಬಿಜೆಪಿಯ ಜೊತೆಗೂ ಕೈಜೋಡಿಸಲ್ಲ. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ದೆಹಲಿ ಸಿಎಂಗೆ ಕಪಾಳಮೋಕ್ಷ ಕೇಸ್ – ಆರೋಪಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್
ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ತಮಿಳುನಾಡಿನಲ್ಲಿರುವ 234 ಕ್ಷೇತ್ರಗಳಲ್ಲಿಯೂ ಟಿವಿಕೆ ಪಕ್ಷ ಸ್ಪರ್ಧಿಸಲಿದೆ. ನಾನು ಪೂರ್ವ ಮಧುರೈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಡಿಎಂಕೆ ಸರ್ಕಾರವು ಚುನಾವಣೆ ಪೂರ್ವದಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗಿನಿಂದಲೇ ಚುನಾವಣಾ ತಯಾರಿ ಮಾಡಿಕೊಳ್ಳುತ್ತಿರುವ ಟಿವಿಕೆ ಪಕ್ಷ ಮುಂದಿನ ತಿಂಗಳಲ್ಲಿ ಬೃಹತ್ ರಾಜ್ಯ ಸಮ್ಮೇಳನ ಆಯೋಜಿಸಲು ತಯಾರಿ ನಡೆಸುತ್ತಿದೆ. ಪಕ್ಷದ ಸಿದ್ಧಾಂತಗಳನ್ನ ಜನರಿಗೆ, ಮನೆ ಮನೆಗೆ ಹಳ್ಳಿಗೆ ಹಳ್ಳಿಗೆ ತಲುಪಿಸಲು ಸಾರ್ವಜನಿಕ ಸಭೆಗಳನ್ನು ನಡೆಸಲು ಪ್ಲ್ಯಾನ್ ಮಾಡಿದೆ. ಜೊತೆಗೆ ಪಕ್ಷದ ಸದಸ್ಯತ್ವ ಹೆಚ್ಚಿಸಲು ಮತ್ತು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ದೆಹಲಿ ಸರ್ಕಾರದಿಂದ ಯೂಟರ್ನ್ – ಅವಧಿ ಮೀರಿದ ವಾಹನಗಳಿಗೆ ಹೇರಿದ್ದ ಇಂಧನ ನಿಷೇಧ ಆದೇಶ ವಾಪಸ್
ಟಿವಿಕೆ ಇಂದು ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಸಿತು. ಇದರಲ್ಲಿ ಮುಂದಿನ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ವಿಜಯ್ಎಂದು ತೀರ್ಮಾನಿಸಿದೆ. ಮುಂದಿನ ತಿಂಗಳು ದೊಡ್ಡ ಮಟ್ಟದ ರಾಜ್ಯ ಸಮ್ಮೇಳನ ನಡೆಸಿ, ಪಕ್ಷದ ಸಿದ್ಧಾಂತವನ್ನು ಹಳ್ಳಿಗಳಿಗೆ ತಲುಪಿಸಲು ತೀರ್ಮಾನಿಸಲಾಗಿದೆ.
ಮೈತ್ರಿಗೆ ನೋ ಎಂದ ವಿಜಯ್
ಇನ್ನೂ ಸಭೆಯಲ್ಲಿ ಮಾತನಾಡಿದ ನಟ ಮತ್ತು ಟಿವಿಕೆ ನಾಯಕ ವಿಜಯ್, ಬಿಜೆಪಿಯ ಜೊತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ. ಬಹಿರಂಗವಾಗಿ ಮಾತ್ರವಲ್ಲ, ತೆರೆಮರೆಯಲ್ಲೂ ಮೈತ್ರಿ ಮಾಡಿಕೊಳ್ಳೋದೆ ಇಲ್ಲ ಎಂದು ಖಡಕ್ಆಗಿ ಹೇಳಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಇಂಗ್ಲಿಷ್ ಭಾಷೆಯ ಕುರಿತಾದ ಹೇಳಿಕೆ ವೈರಲ್ಆಗಿತ್ತು. ಅದನ್ನು ಉಲ್ಲೇಖಿಸಿ ಮಾತನಾಡಿದ ವಿಜಯ್, ಇದು ದುರುದ್ಧೇಶಪೂರಿತ. ಇದರಿಂದಲೇ ತಿಳಿಯುತ್ತದೆ ಮುಂದೆ ತಮಿಳುನಾಡಿನ ಮೇಲೂ ಎರಡು ಭಾಷಾ ನೀತಿ ಹೇರಿಕೆಯಾಗಲಿದೆ ಹೀಗಾಗಿ, ಮೈತ್ರಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ನುಡಿದಿದ್ದಾರೆ.
ಚೆನ್ನೈ: ಮೈಲಾಡುತುರೈನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಡಿಎಂಕೆ ಸಂಸದ (DMK MP) ಎ ರಾಜಾ (A Raja) ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಪಕ್ಷದ ಕಾರ್ಯಕ್ರಮದಲ್ಲಿ (Public Meeting) ವೇದಿಕೆಯಲ್ಲಿ ನಿಂತು ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಗಾಳಿ ಬೀಸುತ್ತಿತ್ತು. ಈ ವೇಳೆ ಬಲವಾದ ಗಾಳಿಯಿಂದಾಗಿ ವೇದಿಕೆಯ ಬಳಿ ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಬಿದ್ದು ಡಯಾಜ್ ಮೇಲೆ ಬಿದ್ದಿದೆ. ಇದನ್ನೂ ಓದಿ: ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!
VIDEO | Tamil Nadu: DMK MP A Raja (@dmk_raja) had a miraculous escape when a light stand fell due to strong winds when he was addressing a public gathering in Mayiladuthurai last evening.#TamilNaduNews
ಫೋಕಸ್ ದೀಪಗಳು ಬೀಳುವುದನ್ನು ನೋಡಿದ್ದ ರಾಜಾ ಅವರು ತಮ್ಮ ಎಡಗಡೆ ಸರಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಅವರು ಭಾಷಣ ಮಾಡುತ್ತಲೇ ಇರುತ್ತಿದ್ದರೆ ಗಾಯಗೊಳ್ಳುವ ಸಾಧ್ಯತೆ ಇತ್ತು. ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಡಯಾಜ್ ಮೇಲೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ದೊಡ್ಡ ದುರಂತ ತಪ್ಪಿಸಿದ ಭಾರತೀಯ ಸೇನೆ – 5 ಜೀವಂತ ಬಾಂಬ್ ವಶಕ್ಕೆ
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಜನ್ಮದಿನ ಮತ್ತು ರಾಜ್ಯಪಾಲರ ವಿಷಯದಲ್ಲಿ ಪಕ್ಷದ ಕಾನೂನು ವಿಜಯವನ್ನು ಆಚರಿಸಲು ಡಿಎಂಕೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
– ತಮಿಳುನಾಡಿನ ಮೂಲಸೌಕರ್ಯ ಕೇಂದ್ರದ ಪ್ರಮುಖ ಆದ್ಯತೆ
– ರಾಜ್ಯದಾದ್ಯಂತ 77 ರೈಲು ನಿಲ್ದಾಣ ಆಧುನೀಕರಿಸಲು ಒತ್ತು
ಚೆನ್ನೈ: 2014ರ ನಂತರ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ತಮಿಳುನಾಡಿಗೆ (Tamil Nadu) ಮೂರು ಪಟ್ಟು ಹೆಚ್ಚಿನ ಅನುದಾನ ಸಿಕ್ಕಿದೆ. ಆದರೂ ಕೆಲವರು ಸಮರ್ಥನೆಯಿಲ್ಲದೇ ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ ಎಂದು ಡಿಎಂಕೆ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ಕಿಡಿ ಕಾರಿದರು.
#WATCH | Rameswaram, Tamil Nadu: PM Narendra Modi says “Tamil Nadu plays a significant role in the journey toward a developed India, or Viksit Bharat. I believe the country’s overall development will improve as Tamil Nadu’s potential is realized. In the last decade, the central… pic.twitter.com/MqRaeL2wkE
ತಮಿಳುನಾಡಿನ ರಾಮೇಶ್ವರಂನಲ್ಲಿ ʻಪಂಬನ್ʼ ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆಗೊಳಿಸಿದ್ರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯದ ಇತರೇ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ರು. ಈ ವೇಳೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ, ಎಂ.ಕೆ ಸ್ಟಾಲಿನ್ (MK Stalin) ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. 2014ರಿಂದ ತಮಿಳುನಾಡಿಗೆ ಕೇಂದ್ರದ ಅನುದಾನ 3 ಪಟ್ಟು ಹೆಚ್ಚಾಗಿ ಸಿಕ್ಕಿದೆ. ಆದರೂ ಕೆಲವರಿಗೆ ಯಾವಾಗಲೂ ಅಳುವ ಅಭ್ಯಾಸ ಇರುತ್ತದೆ ಎಂದು ಕುಟುಕಿದರು. ಇದನ್ನೂ ಓದಿ: PublicTV Explainer: ‘ಕೆಜಿಎಫ್’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?
#WATCH | Rameswaram, Tamil Nadu: PM Narendra Modi says “The infrastructure of Tamil Nadu is a top priority for the government. In the past decade, the state’s rail budget has increased more than sevenfold. Despite this significant growth, some people continue to complain without… pic.twitter.com/Aefjj8bj6b
ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತದ ಪ್ರಯಾಣದಲ್ಲಿ ತಮಿಳುನಾಡು ನಿರ್ಣಾಯಕ ಸ್ಥಾನವನ್ನು ಹೊಂದಿದೆ. ರಾಜ್ಯವು ಸಂಪೂರ್ಣ ಸಾಮರ್ಥ್ಯವನ್ನು ಸಾಬೀತುಪಡಿಸಿದಂತೆ ದೇಶದ ಒಟ್ಟಾರೆ ಅಭಿವೃದ್ಧಿಯ ಪ್ರಗತಿ ಮತ್ತಷ್ಟು ವೇಗವಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ ತಮಿಳುನಾಡಿಗೆ ಆದ್ಯತೆ ನೀಡುತ್ತದೆ. 2014ಕ್ಕಿಂತ ಹಿಂದಿನ ಅವಧಿಗೆ ಹೋಲಿಸಿದ್ರೆ ತಮಿಳುನಾಡಿಗೆ ಮೂರು ಪಟ್ಟು ಹೆಚ್ಚು ಅನುದಾನ ಎನ್‌ಡಿಎ ಅವಧಿಯಲ್ಲಿ ಹಂಚಿಕೆಯಾಗಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಮೋದಿ – ಈ ಸೇತುವೆ ವಿಶೇಷತೆ ಏನು?
2014ಕ್ಕಿಂತ ಮೊದಲು ತಮಿಳುನಾಡಿಗೆ ವಾರ್ಷಿಕ ಕೇವಲ 900 ಕೋಟಿ ರೂ.ಗಳ ಹಂಚಿಕೆಯಾಗಿತ್ತು, ಆದರೆ ಈ ವರ್ಷ ರಾಜ್ಯದ ರೈಲ್ವೆ ಬಜೆಟ್ 6,000 ಕೋಟಿ ರೂ.ಗಳನ್ನು ಮೀರಿದೆ. ಕೇಂದ್ರ ಸರ್ಕಾರವು ರಾಮೇಶ್ವರಂ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಸೇರಿದಂತೆ ತಮಿಳುನಾಡಿನಾದ್ಯಂತ 77 ರೈಲು ನಿಲ್ದಾಣಗಳನ್ನು ಆಧುನೀಕರಿಸಲು ಆದ್ಯತೆ ನೀಡಿದೆ ಎಂದು ವಿವರಿಸಿದರು. ಇದನ್ನೂ ಓದಿ: ರಾಮನವಮಿ | 50 ಲಕ್ಷ ಭಕ್ತರಿಂದ ಅಯೋಧ್ಯೆ ಶ್ರೀರಾಮನ ದರ್ಶನ ಸಾಧ್ಯತೆ
– ಭಾಷೆಗಳ ನಡುವೆ ಭಾಷಾಂತರಕ್ಕೆ ಶೀಘ್ರದಲ್ಲೇ ಮೊಬೈಲ್ ಆ್ಯಪ್
– ಹಿಂದಿ ಭಾರತೀಯ ಇತರ ಭಾಷೆಗಳ ಸ್ನೇಹಿತ ಎಂದ ಕೇಂದ್ರ ಸಚಿವ
ನವದೆಹಲಿ: ಭಾರತೀಯ ಭಾಷೆಗಳು ಈ ದೇಶದ ಸಂಪತ್ತು. ಹೀಗಾಗಿ ಭಾಷೆಯ ಹೆಸರಿನಲ್ಲಿ ವಿಭಜನೆ ಆಗಬಾರದು. ಹೀಗಾಗಿ ಯಾವುದೇ ಭಾಷೆ ಅಥವಾ ರಾಜ್ಯದ ಜನರ ಮೇಲೆ ಹಿಂದಿ ಹೇರುತ್ತಿಲ್ಲ. ಬದಲಿಗೆ ಭಾಷೆಗಳ ಕುರಿತು ರಾಜಭಾಷಾ ವಿಭಾಗದ (ಅಧಿಕೃತ ಭಾಷಾ ಇಲಾಖೆ – Raajbhasha Vibhaag) ಅಡಿಯಲ್ಲಿ ಹೊಸ ಇಲಾಖೆ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಅಮಿತ್ ಶಾ (Amit Shah) ಅವರು ಹೇಳಿದರು.
ರಾಜ್ಯಸಭೆಯಲ್ಲಿಂದು (Rajya Sabha) ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿವರಿಸಿರುವ ತ್ರಿಭಾಷಾ ಸೂತ್ರದ ಅನುಷ್ಠಾನದ ಕುರಿತು ತೀವ್ರ ಗದ್ದಲದ ನಡುವೆ ಮಾತನಾಡಿದ ಶಾ, ಕೇಂದ್ರ ಸರ್ಕಾರದ ಹಿಂದಿ (Hindi) ಹೇರಿಕೆ ಆರೋಪವನ್ನು ತಳ್ಳಿಹಾಕಿದರು.
ಭಾಷೆಯ (languages) ಹೆಸರಿನಲ್ಲಿ ರಾಷ್ಟ್ರದಲ್ಲಿ ಸಾಕಷ್ಟು ವಿಭಜನೆಗಳು ನಡೆದಿವೆ. ಇನ್ಮುಂದೆ ಅದು ಸಂಭವಿಸಬಾರದು. ಏಕೆಂದರೆ ಪ್ರತಿಯೊಂದು ಭಾಷೆಯೂ ದೇಶದ ಸಂಪತ್ತು. ಹಿಂದಿ ಸಹ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧೆ ಮಾಡುತ್ತಿಲ್ಲ. ಅದು ಇತರ ಭಾಷೆಗಳ ಸ್ನೇಹಿತನಿದ್ದಂತೆ ಎಂದು ಹೇಳಿದರು.
ಭಾರತೀಯ ಭಾಷೆಗಳು ಈ ದೇಶದ ಸಂಪತ್ತು. ಹೀಗಾಗಿ ಯಾವುದೇ ಭಾಷೆ ಅಥವಾ ರಾಜ್ಯದ ಜನರ ಮೇಲೆ ಹಿಂದಿ ಹೇರುತ್ತಿಲ್ಲ. ಬದಲಿಗೆ ಭಾಷೆಗಳ ಕುರಿತು ರಾಜಭಾಷಾ ವಿಭಾಗದ (ಅಧಿಕೃತ ಭಾಷಾ ಇಲಾಖೆ) ಅಡಿಯಲ್ಲಿ ಹೊಸ ಇಲಾಖೆ ಆರಂಭಿಸಲಾಗುವುದು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಎಲ್ಲಾ ಭಾಷೆಗಳನ್ನು ಉತ್ತೇಜಿಸಿ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ಭಾಷೆಗಳ ಇಲಾಖೆಯನ್ನು ತೆರೆಯಲಿದೆ. ಭಾಷೆಗಳ ನಡುವೆ ಭಾಷಾಂತರಕ್ಕೆ ಮೊಬೈಲ್ ಆ್ಯಪ್ ಸಹ ಹೊರತರಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು.
ಕೇಂದ್ರ ಸರ್ಕಾರ ದಕ್ಷಿಣದ ಭಾಷೆಗಳ ವಿರೋಧಿಯಲ್ಲ. ನಾನು ಗುಜರಾತ್‌ನಿಂದ ಬಂದಿದ್ದೇನೆ. ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನಿಂದ ಬಂದಿದ್ದಾರೆ. ಇಲ್ಲಿ ಭಾಷೆ ಮುಖ್ಯವಲ್ಲ, ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳು ಭಾರತೀಯ ಭಾಷೆಯಲ್ಲಿ ಲಭ್ಯವಾಗಬೇಕು ಎಂಬುದಷ್ಟೇ ಕೇಂದ್ರದ ಉದ್ದೇಶ ಎಂದಿದ್ದಾರೆ.
ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳನ್ನು ತಮಿಳಿನಲ್ಲಿ ನೀಡಲು ತಮಿಳುನಾಡು ಸರ್ಕಾರಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಅವರ ಆರ್ಥಿಕತೆಗೆ ಪೆಟ್ಟು ಬೀಳಲಿದೆ. ಇದನ್ನು ನಾವು ಕಳೆದ ಎರಡು ವರ್ಷಗಳಿಂದ ಹೇಳುತ್ತಿದ್ದೇವೆ. ಆದರೆ ದಕ್ಷಿಣದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ತಮಿಳಿನಲ್ಲೇ ನಾವು ವೃತ್ತಿಪರ ಶಿಕ್ಷಣ ನೀಡಲಿದ್ದೇವೆ ಎಂದು ಅಮಿತ್ ಶಾ ಭರವಸೆ ನೀಡಿದರು.
ತಮ್ಮ ಭ್ರಷ್ಟಾಚಾರ ಮರೆ ಮಾಚಲು ಹಾಗೂ ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಭಾಷಾ ವಿವಾದವನ್ನು ಹುಟ್ಟುಹಾಕಿವೆ. ಭಾರತೀಯ ಭಾಷೆಗಳನ್ನು ರಕ್ಷಿಸಲು ನಮ್ಮ ಪಕ್ಷ ಬದ್ಧವಾಗಿದೆ. ಈ ಕುರಿತಂತೆ ಡಿಸೆಂಬರ್ ನಂತರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ, ಸಂಸದರು ಮತ್ತು ಆಯಾ ಭಾಷೆಯ ಜನರೊಂದಿಗೆ ಸಮಾಲೋಚನೆ ನಡೆಸುವೆ. ತಮ್ಮ ಭ್ರಷ್ಟಾಚಾರ ಮರೆಮಾಚಲು ಭಾಷೆಯ ಹಿಂದೆ ನಿಂತು ಆಶ್ರಯ ಪಡೆಯುತ್ತಿರುವವರಿಗೆ ಇದು ನನ್ನ ಖಡಕ್ ಎಚ್ಚರಿಕೆ ಎಂದು ಅಮಿತ್ ಶಾ ಹೇಳಿದರು.
ನವದೆಹಲಿ: ಡೀಲಿಮಿಟೇಷನ್ (Delimitation) ವಿರುದ್ಧ ಪ್ರತಿಭಟನಾ ಸಂದೇಶ ಒಳಗೊಂಡ ಟಿ-ಶರ್ಟ್ಗಳನ್ನು ಧರಿಸಿ ಡಿಎಂಕೆ ಸಂಸದರು ಸದನಕ್ಕೆ ಬಂದ ಹಿನ್ನೆಲೆ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಈ ಕಾರಣದಿಂದಾಗಿ ಸ್ಪೀಕರ್ ಓಂ ಬಿರ್ಲಾ (Om Birla) ಹಲವು ಬಾರಿ ಸದನ ಮೊಟಕುಗೊಳಿಸಿದರು.
ಸದನವು ನಿಯಮಗಳು ಮತ್ತು ಪದ್ಧತಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಸಂಸದರು ಸದನದ ಘನತೆ ಮತ್ತು ಗೌರವವನ್ನು ಕಾಪಾಡಬೇಕು. ಆದರೆ ಕೆಲವು ಸಂಸದರು ನಿಯಮಗಳನ್ನು ಪಾಲಿಸದೆ ಘನತೆಗೆ ಧಕ್ಕೆ ತರುತ್ತಿದ್ದಾರೆ, ಇದು ಸ್ವೀಕಾರಾರ್ಹವಲ್ಲ ಎಂದು ಓಂ ಬಿರ್ಲಾ ಹೇಳಿದರು. ಇದನ್ನೂ ಓದಿ: ವಿದ್ಯುತ್ ದರ ಹೆಚ್ಚಳ – ಬೆಲೆ ಏರಿಕೆಯ ಗ್ಯಾರಂಟಿ ಕೊಟ್ಟ ಕಾಂಗ್ರೆಸ್: ವಿಜಯೇಂದ್ರ
ಪ್ರತಿಭಟನೆಯ ಭಾಗವಾಗಿ, ಡಿಎಂಕೆ ಸಂಸದರು ಕ್ಷೇತ್ರ ಪುನರ್ ವಿಂಗಡನೆ ವಿಷಯವನ್ನು ಲೋಕಸಭೆಯಲ್ಲಿ ಚರ್ಚೆಗೆ ಒತ್ತಾಯಿಸಿದರು. ಆದರೆ, ಜನಗಣತಿ ಇನ್ನೂ ನಡೆದಿಲ್ಲದ ಕಾರಣ ಈ ವಿಷಯ ಸರ್ಕಾರದ ವ್ಯಾಪ್ತಿಯಲ್ಲಿಲ್ಲ ಎಂದು ಸ್ಪೀಕರ್ ತಿರಸ್ಕರಿಸಿದರು. ಈ ಘಟನೆಯಿಂದ ಸದನದಲ್ಲಿ ಗೊಂದಲ ಉಂಟಾಗಿ, ಮೊದಲು ಮಧ್ಯಾಹ್ನ 12 ಗಂಟೆವರೆಗೆ ಮತ್ತು ನಂತರ 2 ಗಂಟೆವರೆಗೆ ಸದನವನ್ನು ಮೊಟಕುಗೊಳಿಸಲಾಯಿತು. ಇದನ್ನೂ ಓದಿ: 8 ವಿದ್ಯಾರ್ಥಿನಿಯರ ಮೇಲೆ ರೇಪ್ ಆರೋಪ – ಬಂಧಿತ ಪ್ರಾಧ್ಯಾಪಕನ ಕಂಪ್ಯೂಟರ್‌ನಲ್ಲಿತ್ತು 65 ಸೆಕ್ಸ್ ವಿಡಿಯೋ
ರಾಜ್ಯಸಭೆಯಲ್ಲಿಯೂ ಇದೇ ರೀತಿಯ ದೃಶ್ಯಗಳು ಕಂಡುಬಂದವು. ಡಿಎಂಕೆ ಸಂಸದರ ಟಿ-ಶರ್ಟ್ ಪ್ರತಿಭಟನೆಗೆ ಆಕ್ಷೇಪ ವ್ಯಕ್ತವಾದ ಕಾರಣ ಮಧ್ಯಾಹ್ನದ ವೇಳೆಗೆ ಮೂರು ಬಾರಿ ಸದನವನ್ನು ಮೊಟಕುಗೊಳಿಸಲಾಯಿತು. ಅಧ್ಯಕ್ಷ ಜಗದೀಪ್ ಧನ್‌ಖರ್ ಅವರು ವಿಷಯವನ್ನು ಪಕ್ಷದ ಮುಖಂಡರೊಂದಿಗೆ ಚರ್ಚಿಸಿದರೂ ಗೊಂದಲ ಮುಂದುವರಿಯಿತು. ಇದನ್ನೂ ಓದಿ: ಐಪಿಎಲ್ 2025: ಮೊದಲ 3 ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್‌ಗೆ ರಿಯಾನ್ ಪರಾಗ್ ಕ್ಯಾಪ್ಟನ್
ಜನಸಂಖ್ಯೆ ಆಧಾರಿತ ಕ್ಷೇತ್ರ ಪುನರ್ ವಿಂಗಡನೆಯಿಂದ ತಮಿಳುನಾಡು ಮತ್ತು ಇತರ ದಕ್ಷಿಣ ರಾಜ್ಯಗಳಿಗೆ ಸಂಸದೀಯ ಸ್ಥಾನಗಳ ಕಡಿತಕ್ಕೆ ಕಾರಣವಾಗಲಿದೆ ಎಂದು ಡಿಎಂಕೆ ವಾದಿಸುತ್ತಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಆರೋಪಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದೆ. ಇದನ್ನೂ ಓದಿ: ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್
ಚೆನ್ನೈ: ನಮ್ಮ ಸರ್ಕಾರ ದ್ವಿಭಾಷಾ ನೀತಿಗೆ (Two Language Policy) ಬದ್ಧವಾಗಿದೆ. ಕೇಂದ್ರದ 2 ಸಾವಿರ ಕೋಟಿ ರೂ. ನಿಧಿಯನ್ನು ಕಳೆದುಕೊಂಡರೂ ನಾವು ನಮ್ಮ ಸಿದ್ಧಾಂತದಲ್ಲಿ ರಾಜಿಯಾಗುವುದಿಲ್ಲ ಎಂದು ತಮಿಳುನಾಡು (Tamil Nadu) ಸರ್ಕಾರ ತನ್ನ ಬಜೆಟ್‌ನಲ್ಲಿ ಹೇಳಿಕೊಂಡಿದೆ.
ಮುಂದಿನ ವರ್ಷ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ದ್ರಾವಿಡ ಮುನ್ನೇತ್ರ ಕಳಗಂ (DMK) ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ (Budget) ಅನ್ನು ಇಂದು ವಿಧಾನಸಭೆಯಲ್ಲಿ ಹಣಕಾಸು ಸಚಿವ ತಂಗಮ್ ತೆನರಸು ಮಂಡಿಸಿದರು. ಇದನ್ನೂ ಓದಿ: ಬಜೆಟ್ ಪ್ರತಿಯಲ್ಲಿ ರೂಪಾಯಿ ಚಿಹ್ನೆ ‘₹’ ಕೈಬಿಟ್ಟ ತಮಿಳುನಾಡು
ಈ ವೇಳೆ ತಮಿಳುನಾಡು ತನ್ನ ಸ್ವಾಭಿಮಾನವನ್ನು ರಕ್ಷಿಸಿಕೊಳ್ಳುವಲ್ಲಿ ದೃಢವಾಗಿ ನಿಲ್ಲುತ್ತದೆ ಮತ್ತು ಕೇಂದ್ರ ಸರ್ಕಾರದ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತಮಿಳುನಾಡು ಆರ್ಥಿಕ ಸಹಾಯಕ್ಕಾಗಿ ತನ್ನ ನಿಲುವನ್ನು ಕೈಬಿಡುವುದಿಲ್ಲ. ತ್ರಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಲು ನಾವು ನಿರಾಕರಿಸಿದ ಕಾರಣ ಸಮಗ್ರ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಯೋಜನೆಯಡಿ ಕೇಂದ್ರವು 2 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ತಡೆಹಿಡಿದರೆ ನಮ್ಮ ಸರ್ಕಾರ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಣವನ್ನು ನೀಡುತ್ತದೆ. ಶಿಕ್ಷಕರ ವೇತನವನ್ನು ತನ್ನ ಸ್ವಂತ ಸಂಪನ್ಮೂಲಗಳ ಬಳಸಿ ಪಾವತಿಸುತ್ತದೆ ಎಂದು ಅವರು ತಿಳಿಸಿದರು.
ತಮಿಳುನಾಡು ಸರ್ಕಾರದ ಬಜೆಟ್ ಮಂಡನೆ ವೇಳೆ ಎಐಎಡಿಎಂಕೆ ಸಭಾತ್ಯಾಗ ಮಾಡಿತು.
– ಸಭಾತ್ಯಾಗ, ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಿದ ಡಿಎಂಕೆ ಸಂಸದರು
ನವದೆಹಲಿ: ಹೊಸ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಸೂತ್ರಕ್ಕೆ ವಿರೋಧ (language war) ವ್ಯಕ್ತಪಡಿಸುತ್ತಿರುವ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ವಿರೋಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಡಿಎಂಕೆ ನಾಯಕರು ತಮಿಳುನಾಡಿನ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ, ಅವರ ಏಕೈಕ ಕಾರ್ಯಸೂಚಿ ಭಾಷಾ ಆಧಾರಿತ ವಿಭಜನೆಗಳನ್ನು ಹುಟ್ಟುಹಾಕುವುದು. ಅವರು ರಾಜಕೀಯ ಕಿಡಿಗೇಡಿತನ ಮಾಡುತ್ತಿದ್ದಾರೆ. ಅವರು ಪ್ರಜಾಪ್ರಭುತ್ವ ವಿರೋಧಿ ಮತ್ತು ಅನಾಗರಿಕರು ಎಂದು ಅವರು ಟೀಕಿಸಿದರು.
ಪ್ರಧಾನ್ ಅವರು ಡಿಎಂಕೆ ಪಕ್ಷದ ವಿರುದ್ಧ ಮಾಡಿದ ಕಟು ಟೀಕೆ ಕೋಲಾಹಲಕ್ಕೆ ಕಾರಣವಾಯಿತು, ಇದು ಡಿಎಂಕೆ ಸಂಸದರ ಪ್ರತಿಭಟನೆಗೆ ಕಾರಣವಾಯಿತು ಮತ್ತು ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಲಾಯಿತು. ರಾಜ್ಯಸಭೆಯಲ್ಲೂ ತ್ರಿಭಾಷಾ ನೀತಿ ಮತ್ತು ಗಡಿ ರಚನಾ ವಿಷಯಗಳ ವಿಷಯವನ್ನು ಎತ್ತಿದ್ದ ನಂತರ ಡಿಎಂಕೆ ಸಭಾತ್ಯಾಗ ಮಾಡಿತು.
ಸಭಾತ್ಯಾಗದ ಬಗ್ಗೆ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಇದು ಬೇಜವಾಬ್ದಾರಿ ವರ್ತನೆ, ಅವರು ನಿಯಮಗಳನ್ನು ಅರ್ಥಮಾಡಿಕೊಳ್ಳಬೇಕು. ಇದು ಸಂಸತ್ತಿನ ಅವಮಾನಿಸುವ ದುಷ್ಟ ಸಂಚು, ನಮ್ಮ ಸರ್ಕಾರ ನಿಯಮಗಳ ಅಡಿಯಲ್ಲಿ ಎಲ್ಲವನ್ನೂ ಚರ್ಚಿಸಲು ಸಿದ್ಧವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ: ಶರಣು ಪ್ರಕಾಶ್ ಪಾಟೀಲ್