Tag: ಡಿಂಪಲ್ ಕ್ವೀನ್

  • ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ – `ಈ ಸಲ ಕಪ್‌ ನಮ್ದೇʼ ಎಂದ ಡಿಂಪಲ್ ಕ್ವೀನ್

    ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ – `ಈ ಸಲ ಕಪ್‌ ನಮ್ದೇʼ ಎಂದ ಡಿಂಪಲ್ ಕ್ವೀನ್

    ಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್‌ಗೆ ತಲುಪಿದ್ದು, ಟ್ರೋಫಿ ಗೆಲ್ಲಲು ಒಂದೇ ಹೆಜ್ಜೆ ಬಾಕಿ ಇದೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಈ ಬಾರಿ ಕಪ್ ನಮ್ಮದೇ ಎಂದಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಸದ್ಯ ಐಪಿಎಲ್ 18ನೇ ಆವೃತ್ತಿ ನಡೆಯುತ್ತಿದೆ. ಅಲ್ಲದೇ ವಿರಾಟ್ ಕೊಹ್ಲಿ (Virat Kohli) ಅವರ ಜರ್ಸಿ ನಂಬರ್ ಕೂಡಾ 18 ಆಗಿದೆ. ಹದಿನೆಂಟರ ಜೊತೆ ನಮಗೆಲ್ಲಾ ವಿಶೇಷ ನಂಟಿದೆ. ಹೀಗಾಗಿ ಈ ಬಾರಿ ಕಪ್ ನಮ್ದೇ ಆಗುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಅಂಬಿ’ ಕನ್ವರ್ ಲಾಲ್ ಲುಕ್‌ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್

    ಕಮಲ್ ಹಾಸನ್ (Kamal Haasan) ವಿಚಾರವಾಗಿ ಪ್ರತಿಕ್ರಿಯಿಸಿ, ಕಮಲ್ ಹಾಸನ್ ಖಂಡಿತ ಕ್ಷಮೆ ಕೇಳಬೇಕು. ನಾನು ಏನು ಹೇಳಬೇಕು ಎಂದುಕೊಂಡಿದ್ದೆ ಅದನ್ನು ಹೇಳಿದ್ದೇನೆ. ನನ್ನ ಪ್ರೀತಿ ನನ್ನ ಭಾಷೆಯಾಗಿದೆ. ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ. ಆದರೆ ನನ್ನ ಮೊದಲ ಗೌರವ ಕನ್ನಡ ಭಾಷೆಗೆ. ಇಲ್ಲಿ ಯಾರಿಂದ ಯಾರೂ ಬಂದಿಲ್ಲ. ಯಾರಿಂದ ಯಾರೂ ಎಂದು ದೇವರಿಗೆ ಗೊತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲ್ಲ: ಕೊನೆಗೂ ಮೌನ ಮುರಿದ ಶಿವಣ್ಣ

    ಇಂದು ಹಿಸ್ಟರಿ ತೆಗೆದು ಏನು ಸಾಬೀತು ಮಾಡಬೇಕೋ ಮಾಡುತ್ತಿದ್ದೇವೆ. ನಾನು ಹಾಕಿರೋ ವೀಡಿಯೋ ನನಗೂ ಅನ್ವಯವಾಗುತ್ತದೆ. ಯಾರೂ ತಮ್ಮ ಮಾತೃಭಾಷೆಯನ್ನು ಮರೆಯಬಾರದು. ನಮ್ಮ ಭಾಷೆ ಅವರಿಗೆ ಹೇಳಿಕೊಡೋಣ, ಅವರ ಭಾಷೆ ಕಲಿಯೋಣ. ಚಿತ್ರ ಬ್ಯಾನ್ ಬಗ್ಗೆ ದೊಡ್ಡವರು, ವಾಣಿಜ್ಯ ಮಂಡಳಿಯವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: 100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಸಾಗಿಸಬಲ್ಲ `ಬಾಹುಬಲಿ’ ಡ್ರೋನ್ ಸಿದ್ಧಪಡಿಸಿದ ಚೀನಾ!

    ಕಮಲ್ ಹಾಸನ್ ಅವರ ಮಾತಿನಿಂದ ನಮಗೆ ನೋವಾಗಿದೆ. ಅವರು ಖಂಡಿತ ಕ್ಷಮೆ ಕೇಳಬೇಕು. ಸಿನಿಮಾ ಕ್ಷೇತ್ರಕ್ಕೆ ಅವರ ಕೊಡುಗೆ ದೊಡ್ಡದಿದೆ. ನಮ್ಮ ಭಾಷೆ ಬಗ್ಗೆ ಮಾತನಾಡಿದ್ರೆ, ನಾವು ಯಾಕೆ ಸುಮ್ಮನಿರಬೇಕು? ಕಮಲ್ ಹಾಸನ್ ಕಲೆ ಬಗ್ಗೆ, ಅವರು ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಬಗ್ಗೆ ಮಾತನಾಡಲು ನಾನು ಚಿಕ್ಕವಳು. ಆದರೆ ಭಾಷೆ ವಿಚಾರ ಬಂದಾಗ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ಐ ಲವ್ ಯೂ ಅಂದ ರಚಿತಾ ರಾಮ್ ಸಖತ್ ಹಾಟ್!

    ಐ ಲವ್ ಯೂ ಅಂದ ರಚಿತಾ ರಾಮ್ ಸಖತ್ ಹಾಟ್!

    ಬೆಂಗಳೂರು: ಆರಂಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಿದ್ದವರು ರಚಿತಾ ರಾಮ್. ಸ್ಟಾರ್ ನಟರ ಜೊತೆ ನಟಿಸಿದರೂ ಕೂಡಾ ಪಕ್ಕಾ ಹಾಟ್ ಪಾತ್ರಗಳಲ್ಲಿ ಅವರು ಈವರೆಗೂ ಕಾಣಿಸಿರಲಿಲ್ಲ. ಆದರೆ ರಚಿತಾರನ್ನು ಅಂಥಾದ್ದೊಂದು ಲುಕ್ಕಿನಲ್ಲಿ ಅನಾವರಣಗೊಳಿಸಲು ನಿರ್ದೇಶಕ ಆರ್.ಚಂದ್ರು ಮುಂದಾಗಿದ್ದಾರಾ ಅಂತೊಂದು ಅನುಮಾನ ಎಲ್ಲರಲ್ಲಿಯೂ ಇದೆ!

    ಇದಕ್ಕೆ ಕಾರಣವಾಗಿರೋದು ಉಪ್ಪಿ ನಾಯಕರಾಗಿ ನಟಿಸುತ್ತಿರೋ ಐ ಲವ್ ಯೂ ಚಿತ್ರ. ಆರ್ ಚಂದ್ರು ನಿರ್ದೇಶನದ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು. ಇದರಲ್ಲಿ ಉಪೇಂದ್ರ ಅವರೇ ಸಿಂಗಲ್ ಪೀಸ್‍ನಲ್ಲಿ ಕಂಗೊಳಿಸಿದ್ದಾರೆ. ನಾಯಕ ನಟ ಉಪ್ಪಿಯೇ ಈ ಪಾಟಿ ಹಾಟ್ ಆಗಿ ಕಾಣಿಸಿಕೊಂಡಿರೋವಾಗ ನಾಯಕಿ ರಚಿತಾ ರಾಮ್ ಇನ್ನೆಷ್ಟು ಮಾದಕವಾಗಿ ಕಾಣಿಸಿಕೊಳ್ಳಬಹುದು ಅಂತ ಅಭಿಮಾನಿಗಳೆಲ್ಲ ಕುತೂಹಲಗೊಂಡಿದ್ದರು.

    ನಿರ್ದೇಶಕ ಚಂದ್ರು ಅವರೇ ಕೊಟ್ಟೊಂದು ಸುಳಿವಿನ ಪ್ರಕಾರವಾಗಿ ಹೇಳೋದಾದರೆ ಈ ಚಿತ್ರದಲ್ಲಿ ರಚಿತಾ ಹಿಂದೆಂದೂ ಕಂಡಿರದಂಥಾ ಹಾಟ್ ಲುಕ್ಕಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದೀಗ ರಚಿತಾ ಕುಣಿಯಲಿರೋ ಒಂದು ಹಾಡನ್ನು ಚಿತ್ರೀಕರಿಸಿಕೊಳ್ಳಲು ಚಂದ್ರು ತಯಾರಿ ನಡೆಸಿದ್ದಾರೆ. ಕಿರಣ್ ಸಂಗೀತ ನಿರ್ದೇಶನ ಮಾಡಿರೋ ಈ ಹಾಡಿನಲ್ಲಿ ಡಿಂಪಲ್ ಕ್ವೀನ್ ಅಭಿಮಾನಿಗಳನ್ನೆಲ್ಲ ಹುಚ್ಚೆಬ್ಬಿಸುವಂತೆ ಕಾಣಿಸಲಿದ್ದಾರೆಂದು ನಿರ್ದೇಶಕರು ಸುಳಿವು ಕೊಟ್ಟಿದ್ದಾರೆ! ಇದನ್ನೂ ಓದಿ:  ಸಿಂಗಲ್ ಪೀಸಲ್ಲಿ ಐ ಲವ್ ಯೂ ಅಂದ್ರು ಉಪ್ಪಿ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv