Tag: ಡಿಂಗ್ರಿ ನಾಗರಾಜ್

  • ರಾಜ್ಯೋತ್ಸವ ಪ್ರಶಸ್ತಿ: ಸಿನಿಮಾ ಕ್ಷೇತ್ರದಿಂದ ಯಾರಿಗೆಲ್ಲ ಅವಾರ್ಡ್

    ರಾಜ್ಯೋತ್ಸವ ಪ್ರಶಸ್ತಿ: ಸಿನಿಮಾ ಕ್ಷೇತ್ರದಿಂದ ಯಾರಿಗೆಲ್ಲ ಅವಾರ್ಡ್

    ರ್ನಾಟಕ ಸರಕಾರವು ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 (Rajyotsava 2023) ಪ್ರಕಟಿಸಿದ್ದು, ನಾನಾ ಕ್ಷೇತ್ರದ ಗಣ್ಯರಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಿನಿಮಾ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಹಿರಿಯ ನಟರಾದ ಡಿಂಗ್ರಿ ನಾಗರಾಜ್ (Dingri Nagaraj) ಮತ್ತು ಬ್ಯಾಂಕ್ ಜನಾರ್ದನ್ (Bank Janardhan) ಅವರಿಗೆ ಈ ಬಾರಿಯ ಪ್ರಶಸ್ತಿ ಸಂದಿದೆ. ಇದನ್ನೂ ಓದಿ:Bigg Boss Kannada: ವರ್ತೂರ್ ಸಂತೋಷ್‌ಗೆ ಗೆಟೌಟ್‌ ಸ್ವಾಗತ


    ಡಿಂಗ್ರಿ ನಾಗರಾಜ್ ಮತ್ತು ಬ್ಯಾಂಕ್ ಜನಾರ್ದನ್ ಅವರಿಗೆ ಸಿನಿಮಾ ಕ್ಷೇತ್ರದ ವಿಭಾಗದಲ್ಲಿ ಪ್ರಶಸ್ತಿ ಘೋಷಣೆ ಆಗಿದ್ದರೆ, ಸಂಕೀರ್ಣ ವಿಭಾಗದಲ್ಲಿ ಮಿಮಿಕ್ರಿ ದಯಾನಂದ್ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಮೂವರು ಹಲವು ದಶಕಗಳ ಕಾಲ ಮನರಂಜನಾ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.

    ಪ್ರಶಸ್ತಿ ಪಟ್ಟಿ:

    ಸಂಗೀತ/ನೃತ್ಯ ಕ್ಷೇತ್ರ: ಡಾ. ನಯನ ಎಸ್ ಮೋರೆ, ಶ್ರೀಮತಿ ನೀಲಾ ಎಂ ಕೊಡ್ಲಿ, ಶ್ರೀ ಶಬ್ಬೀರ್ ಅಹಮದ್, ಡಾ. ಎಸ್ ಬಾಳೇಶ ಭಜ್ರಂತಿ ಅವರಿಗೆ ಪ್ರಶಸ್ತಿ ಲಭಿಸಿದೆ.

    ರಂಗಭೂಮಿ ಕ್ಷೇತ್ರ: ಎಜಿ ಚಿದಂಬರ ರಾವ್ ಜಂಬೆ, ಪಿ ಗಂಗಾಧರ ಸ್ವಾಮಿ, ಹೆಚ್‌ಬಿ ಸರೋಜಮ್ಮ, ತಯ್ಯಬಖಾನ್ ಎಂ ಇನಾಮದಾರ, ವಿಶ್ವನಾಥ್ ವಂಶಾಕೃತ ಮಠ, ಪಿ ತಿಪ್ಪೇಸ್ವಾಮಿ.

    ಶಿಲ್ಪಕಲೆ/ ಚಿತ್ರಕಲೆ/ ಕರಕುಶಲ ಕ್ಷೇತ್ರ: ಟಿ ಶಿವಶಂಕರ್, ಕಾಳಪ್ಪ ವಿಶ್ವಕರ್ಮ, ಮಾರ್ಥಾ ಜಾಕಿಮೋವಿಚ್ ಮತ್ತು ಪಿ ಗೌರಯ್ಯ.

    ಯಕ್ಷಗಾನ/ಬಯಲಾಟ ಕ್ಷೇತ್ರ: ಅರ್ಗೋಡು ಮೋಹನದಾಸ್ ಶೆಣೈ, ಕೆ ಲೀಲಾವತಿ ಬೈಪಾಡಿತ್ತಾಯ, ಕೇಶಪ್ಪ ಶಿಳ್ಳಿಕ್ಯಾತರ, ದಳವಾಯಿ ಸಿದ್ದಪ್ಪ (ಹಂದಿಜೋಗಿ).

    ಜಾನಪದ ಕ್ಷೇತ್ರ: ಹುಸೇನಬಿ ಬುಡೆನ್ ಸಾಬ್ ಸಿದ್ದಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಹೆಚ್‌ಕೆ ಕಾರಮಂಚಪ್ಪ, ಶಂಭು ಬಳಿಗಾರ, ವಿಭೂತಿ ಗುಂಡಪ್ಪ, ಚೌಡಮ್ಮ.

    ಸಮಾಜಸೇವೆ ಕ್ಷೇತ್ರ: ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ರೂಪಾ ನಾಯಕ್, ನಿಜಗುಣಾನಂದ ಮಹಾಸ್ವಾಮಿಗಳು, ನಾಗರಾಜು ಜಿ.

    ಆಡಳಿತ ಕ್ಷೇತ್ರ: ಜಿವಿ ಬಲರಾಮ್

    ವೈದ್ಯಕೀಯ ಕ್ಷೇತ್ರ: ಡಾ. ಸಿ ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ.

    ಸಾಹಿತ್ಯ ಕ್ಷೇತ್ರ: ಪ್ರೊ. ಸಿ ನಾಗಣ್ಣ, ಸುಬ್ಬು ಹೊಲೆಯಾರ್ (ಹೆಚ್‌ಕೆ ಸುಬ್ಬಯ್ಯ), ಸತೀಶ್ ಕುಲಕರ್ಣಿ, ಲಕ್ಷಿö್ಮÃಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ ಷರೀಫಾ.

    ಶಿಕ್ಷಣ ಕ್ಷೇತ್ರ: ರಾಮಪ್ಪ (ರಾಮಣ್ಣ) ಹವಳೆ, ಕೆ ಚಂದ್ರಶೇಖರ್, ಕೆಟಿ ಚಂದು.

    ಕ್ರೀಡಾ ಕ್ಷೇತ್ರ: ದಿವ್ಯ ಟಿಎಸ್, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ.

    ನ್ಯಾಯಾಂಗ ಕ್ಷೇತ್ರ: ವಿ ಗೋಪಾಲಗೌಡ.

    ಕೃಷಿ-ಪರಿಸರ ಕ್ಷೇತ್ರ:
    ಸೋಮನಾಥರೆಡ್ಡಿ ಪೂರ್ಮಾ, ದ್ಯಾವನಗೌಡ ಟಿ. ಪಾಟೀಲ, ಶಿವರೆಡ್ಡಿ ಹನುಮರೆಡ್ಡಿ ವಾಸನ.

    ಸಂಕೀರ್ಣ ಕ್ಷೇತ್ರ: ಎಎಂ ಮದರಿ, ಹಾಜಿ ಅಬ್ದುಲ್ಲಾ ಪರ್ಕಳ, ಮಿಮಿಕ್ರಿ ದಯಾನಂದ್, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕೊಡನ ಪೂವಯ್ಯ ಕಾರ್ಯಪ್ಪ.

    ಮಾಧ್ಯಮ ಕ್ಷೇತ್ರ: ದಿನೇಶ ಅಮೀನ್‌ಮಟ್ಟು, ಜವರಪ್ಪ, ಮಾಯಾ ಶರ್ಮ, ರಫೀ ಭಂಡಾರ.

    ವಿಜ್ಞಾನ/ ತಂತ್ರಜ್ಞಾನ ಕ್ಷೇತ್ರ:
    ಎಸ್. ಸೋಮನಾಥ್ ಶ್ರೀಧರ್ ಪನಿಕರ್, ಪ್ರೊ. ಗೋಪಾಲನ್ ಜಗದೀಶ್

    ಹೊರನಾಡು/ ಹೊರದೇಶ ಕ್ಷೇತ್ರ: ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ.

    ಸ್ವಾತಂತ್ರ್ಯ ಹೋರಾಟಗಾರ ಕ್ಷೇತ್ರ: ಪುಟ್ಟಸ್ವಾಮಿ ಗೌಡ.

    10 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ:
    1. ಕರ್ನಾಟಕ ಸಂಘ
    2. ಬಿಎನ್ ಶ್ರೀರಾಮ ಪುಸ್ತಕ ಪ್ರಕಾಶನ
    3. ಮಿಥಿಕ್ ಸೊಸೈಟಿ
    4. ಕನಾಟಕ ಸಾಹಿತ್ಯ ಸಂಘ
    5. ಮೌಲಾನಾ ಅಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ(ರಿ)
    6. ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ
    7. ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ
    8. ಚಿಣ್ಣರ ಬಿಂಬ
    9. ಮಾರುತಿ ಜನಸೇವಾ ಸಂಘ
    10. ವಿದ್ಯಾದಾನ ಸಮಿತಿ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಶ್ಲೀಲ ವಿಡಿಯೋ ಆರೋಪ: ನಟಿ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಎಂದ ಡಿಂಗ್ರಿ

    ಅಶ್ಲೀಲ ವಿಡಿಯೋ ಆರೋಪ: ನಟಿ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಎಂದ ಡಿಂಗ್ರಿ

    ನ್ನಡ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ನಟಿ ರಾಣಿ ಗುರುತರ ಆರೋಪಗಳನ್ನು ಮಾಡಿದ್ದರು. ಸಂಘದಲ್ಲಿ ಹಣದ ದುರುಪಯೋಗ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್, ಮಹಿಳೆಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎನ್ನುವುದು ರಾಣಿ ಆರೋಪವಾಗಿತ್ತು. ರಾಣಿ ಅವರ ಆರೋಪಕ್ಕೆ ಅಧ್ಯಕ್ಷ ಡಿಂಗ್ರಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ರಾಣಿ ಆರೋಪ ಎಲ್ಲವೂ ನಿರಾಧಾರ ಎಂದು ತಿಳಿಸಿದ್ದಾರೆ.

    ‘ರಾಣಿ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕ್ತಿವಿ. ಪೋಷಕ ಕಲಾವಿದರ ಸಂಘದ ಹಣ ದುರುಪಯೋಗ ಮಾಡಿಲ್ಲ. ಅವರು ಸಂಘದ ಆವರಣದಲ್ಲಿ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ಶುರು ಮಾಡಿದ್ರು. ಹಾಗಾಗಿ ಅವರನ್ನು ಸಂಘದಿಂದ ಉಚ್ಚಾಟನೆ ಮಾಡಿದ್ದೇವೆ. ಈಗ ನಾವು ಕಾರ್ಯಕ್ರಮ ಮಾಡ್ತಿದ್ದಿವಿ. ಅದನ್ನು ವಿರೋಧಿಸೋಕೆ ಈ ರೀತಿ ಆರೋಪ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಕಳಿಸಿರೋದು ಸುಳ್ಳು ಮಾಹಿತಿ. ನಾವೇ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ’ ಎಂದಿದ್ದಾರೆ ಡಿಂಗ್ರಿ ನಾಗರಾಜ್. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    ಕರ್ನಾಟಕ ಪೋಷಕ ಕಲಾವಿದರ ಸಂಘದ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡೆಗೆ ಸಿನಿಮಾ ಹಾಗೂ ಕಿರುತೆರೆ ನಟಿ ರಾಣಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಣಿ, ‘ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಆರೋಪ ಮಾಡಿದ್ದು, ತಮ್ಮದು ಪೋಷಕ ಕಲಾವಿದರ ಸಂಘದ ಮೇಲೆ ಆರೋಪ ಮಾಡುವುದಿಲ್ಲ’  ಎಂದಿದ್ದಾರೆ. ಮಹಿಳೆಯರನ್ನು ಅಗೌರವದಿಂದ ಇವರು ನಡೆಸಿಕೊಳ್ಳುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿ ಇರುವಂತಹ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೋಷಕ ಕಲಾವಿದರ ಸಂಘದ ಕಾರ್ಯದರ್ಶಿ ಅಶ್ಲೀಲ ವಿಡಿಯೋ ಕಳಿಸ್ತಾರೆ : ನಟಿ ರಾಣಿ ಆರೋಪ

    ಪೋಷಕ ಕಲಾವಿದರ ಸಂಘದ ಕಾರ್ಯದರ್ಶಿ ಅಶ್ಲೀಲ ವಿಡಿಯೋ ಕಳಿಸ್ತಾರೆ : ನಟಿ ರಾಣಿ ಆರೋಪ

    ರ್ನಾಟಕ ಪೋಷಕ ಕಲಾವಿದರ ಸಂಘದ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡೆಗೆ ಸಿನಿಮಾ ಹಾಗೂ ಕಿರುತೆರೆ ನಟಿ ರಾಣಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಣಿ, ‘ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಆರೋಪ ಮಾಡಿದ್ದು, ತಮ್ಮದು ಪೋಷಕ ಕಲಾವಿದರ ಸಂಘದ ಮೇಲೆ ಆರೋಪ ಮಾಡುವುದಿಲ್ಲ’  ಎಂದಿದ್ದಾರೆ. ಮಹಿಳೆಯರನ್ನು ಅಗೌರವದಿಂದ ಇವರು ನಡೆಸಿಕೊಳ್ಳುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿ ಇರುವಂತಹ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.

    ‘ನಾನು ಈ ಸಂಘದಲ್ಲಿ 15 ವರ್ಷಗಳಿಂದ ಇದ್ದೇನೆ. ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷೆ ಆಗಿದ್ದೇನೆ. ಸಂಘದ ಚಟುವಟಿಕೆಗಳಲ್ಲಿ ಭಾಗಿ ಆಗಲು ಬಿಡುತ್ತಿಲ್ಲ. ಸಂಘದ ಲೆಕ್ಕಾಚಾರ ಕೇಳಿದರೆ, ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಅವರವರೇ ಸೇರಿಕೊಂಡು ಕೆಲಸ ಮಾಡಿಕೊಳ್ಳುತ್ತಾರೆ. ಪ್ರತಿಭಟಿಸಿದರೆ ಕೊಳಕು ಭಾಷೆ ಬಳಸುತ್ತಾರೆ. ಸುಮ್ಮನೆ ಇರದೇ ಇದ್ದರೆ ರಾಜಿನಾಮೆ ಕೊಟ್ಟು ಹೋಗಿ ಎಂದು ಹೆದರಿಸುತ್ತಾರೆ’ ಎನ್ನುತ್ತಾರೆ ರಾಣಿ.

    ಸಂಘದ ಕಾರ್ಯದರ್ಶಿ ಬಗ್ಗೆಯೇ ಹೆಚ್ಚು ಮಾತನಾಡಿರುವ ರಾಣಿ, ‘ಮಹಿಳೆಯರಿಗೆ ಅಗೌರವ ತೋರೋ ರೀತಿಯಲ್ಲಿ ಅವರು ಮಾತಾಡಿದ್ದಾರೆ. ಕೆಲವೊಮ್ಮೆ ಅಶ್ಲೀಲ ವಿಡಿಯೋ ಕಳಿಸ್ತಿದ್ರು. ಆ ವಿಚಾರವಾಗಿ ಗಲಾಟೆಯೂ ಆಗಿದೆ. ಸಭೆಯಲ್ಲಿ ದೊಡ್ಡ ಚರ್ಚೆಯಾಗಿ ಸಮಾಧಾನ ಮಾಡಿದರು. ಹಣಕಾಸಿನ ದುರುಪಯೋಗದ ಬಗ್ಗೆ ಕೇಳೀದಾಗ ಅವಾಚ್ಯ ಶಬ್ದಗಳಿಂದ  ನಿಂದನೆ ಮಾಡಿದರು. ಉಪಾಧ್ಯಕ್ಷೆ ಸ್ಥಾನದಿಂದ ಏಕಾಏಕಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಹೀಗಾಗಿ ನ್ಯಾಯ ಸಿಗಬೇಕು ಅಂತ ಹೋರಾಟ ಮಾಡ್ತಿದ್ದಿನಿ’ ಎಂದಿದ್ದಾರೆ ರಾಣಿ.

    Live Tv
    [brid partner=56869869 player=32851 video=960834 autoplay=true]

  • ಹುಟ್ಟುಹಬ್ಬಕ್ಕೆ ನೇತ್ರದಾನ ಮಾಡಿದ ಬಿಚ್ಚುಗತ್ತಿ ಹೀರೋ ರಾಜವರ್ಧನ್

    ಹುಟ್ಟುಹಬ್ಬಕ್ಕೆ ನೇತ್ರದಾನ ಮಾಡಿದ ಬಿಚ್ಚುಗತ್ತಿ ಹೀರೋ ರಾಜವರ್ಧನ್

    ನ್ನಡದ ಯುವ ಪ್ರತಿಭಾವಂತ ನಟ ‘ಬಿತ್ತುಗತ್ತಿ’ ಚಿತ್ರಖ್ಯಾತಿಯ ರಾಜವರ್ಧನ್ ತಮ್ಮ ಹುಟ್ಟುಹಬ್ಬವನ್ನು ನೇತ್ರದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿಂದ ಜೇಮ್ಸ್ ಚಿತ್ರಕ್ಕೆ ತೊಂದರೆ ಇಲ್ಲ : ಶಿವರಾಜ್ ಕುಮಾರ್

    ಹುಟ್ಟು ಹಬ್ಬದ ಖುಷಿಯಲ್ಲಿರುವ ರಾಜವರ್ಧನ್ ಯುವಕರಿಗೆ ಮಾದರಿಯಾಗುವಂತೆ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇಂದು ಅವರು ಮಿಂಟೋ ಆಸ್ಪತ್ರೆಯಲ್ಲಿ ನೇತ್ರಾದಾನ ಮಾಡಲು ರಾಜವರ್ಧನ್ ನೋಂದಣಿ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಿಂಟೋ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಜಾತಾ ರಾಥೋಡ್, ಡಾ.ಮಂಜುನಾಥ್ ಉಪಸ್ಥಿತರಿದ್ದರು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

    ಬಿಚ್ಚುಗತ್ತಿ ಸಿನಿಮಾ ಮೂಲಕ ಸ್ಯಾಂಡಲ್ವುಕಡ್ ಗೆ  ಎಂಟ್ರಿ ಕೊಟ್ಟಿದ್ದ ಡಿಂಗ್ರಿ ನಾಗರಾಜ್ ಪುತ್ರ ನಟ ರಾಜವರ್ಧನ್ ಮೊದಲ ಸಿನಿಮಾದಲ್ಲಿ ಭರವಸೆ ನಾಯಕ ಮಿಂಚಿದ್ದಾರೆ. ಸದ್ಯ ಹಿರಣ್ಯ ಸಿನಿಮಾದಲ್ಲಿ ನಟಿಸ್ತಿರುವ ರಾಜವರ್ಧನ್, ಅತ್ತ ಪ್ರಣಯಂ ಸಿನಿಮಾ ಮುಗಿಸಿ ರಿಲೀಸ್ ಗೆ ಎದುರು ನೋಡ್ತಿದ್ದಾರೆ. ಅಂದಹಾಗೇ ಹಿರಣ್ಯ ಚಿತ್ರಕ್ಕೆಪ್ರವೀಣ್ ಅವ್ಯುಕ್ತ್ ನಿರ್ದೇಶನದ ಮಾಡ್ತಿದ್ದು, ವಿಘ್ನೇಶ್ವರ ಮತ್ತು ವಿಜಯ್ ಕುಮಾರ್ ಬಂಡವಾಳ ಹೂಡಿದ್ದಾರೆ. ತೆಲುಗಿನ ಹುಡುಗಿ ರಿಹಾನಾ ನಾಯಕಿಯಾಗಿ ನಟಿಸ್ತಿದ್ದಾರೆ.

  • ಇದು ಡಿಂಗ್ರಿ ನಾಗರಾಜ್ ಪುತ್ರನ ಸಿನಿಮಾ ಯಾನ-ರಾಜವರ್ಧನನಿಗೆ ಬಿಚ್ಚುಗತ್ತಿಯ ರಾಜ ಯೋಗ

    ಇದು ಡಿಂಗ್ರಿ ನಾಗರಾಜ್ ಪುತ್ರನ ಸಿನಿಮಾ ಯಾನ-ರಾಜವರ್ಧನನಿಗೆ ಬಿಚ್ಚುಗತ್ತಿಯ ರಾಜ ಯೋಗ

    ಬೆಂಗಳೂರು: ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಸಿನಿಮಾ ಯಾನದ ಕಥೆಯಿದು. ಸರಿಸುಮಾರು ಮೂರೂವರೆ ವರ್ಷಗಳ ಮುಂಚೆ ರಾಜವರ್ಧನ್ ಫ್ಲೈ ಅನ್ನೋ ಸಿನಿಮಾದ ಮೂಲಕ ನಾಯಕ ನಟನಾಗಿ ಕೆಲಸ ಶುರು ಮಾಡಿದವರು. ಆ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಅದಾಗಲೇ ಬಿಡುಗಡೆಗೆ ತಯಾರಾಗಿರುವ ಐರ ಸಿನಿಮಾದಲ್ಲೂ ರಾಜವರ್ಧನ್ ನಟಿಸಿದ್ದಾರೆ. ನೂರೊಂದು ನೆನಪು ಎನ್ನುವ ಸಿನಿಮಾ ಕಳೆದ ವರ್ಷವಷ್ಟೇ ಬಿಡುಗಡೆಯಾಗಿತ್ತು.

    ಈಗ ಇದ್ದಕ್ಕಿದ್ದಂತೆ ರಾಜವರ್ಧನ್ ಬಗ್ಗೆ ಹೇಳಲೂ ಕಾರಣವಿದೆ. ನಾದಬ್ರಹ್ಮ ಹಂಸಲೇಖಾ ಮತ್ತೆ ಚಿತ್ರವೊಂದನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ. ಇದೇ ತಿಂಗಳ 23ರಂದು ಹಂಸಲೇಖಾ ತಮ್ಮ ಹುಟ್ಟುಹಬ್ಬದ ದಿನ ಆ ಚಿತ್ರವನ್ನು ಅನೌನ್ಸ್ ಮಾಡಲಿದ್ದಾರೆ. ರಾಜಾ ಬಿಚ್ಚುಗತ್ತಿ ಭರಮ್ಮಣ್ಣ ನಾಯಕನ ಜೀವನವನ್ನು ಆಧರಿಸಿ ಹಿರಿಯ ಕಥೆಗಾರ ಬಿ.ಎಲ್.ವೇಣು ಬರೆದ ಕೃತಿಯನ್ನೇ ಸಿನಿಮಾ ರೂಪಕ್ಕೆ ಇಳಿಸಲಾಗುತ್ತಿದೆ. ಈ ಚಿತ್ರದ ಬಿಚ್ಚುಗತ್ತಿ ಭರಮಣ್ಣನಾಗಿ ರಾಜವರ್ಧನ್ ನಟಿಸುತ್ತಿದ್ದಾರೆ. ಇದಲ್ಲದೇ ಶರಣ್ ನಟನೆಯಲ್ಲಿ ಅಲೆಮಾರಿ ಸಂತು ನಿರ್ದೇಶಿಸಿರುವ ವಿಕ್ಟರಿ ಚಿತ್ರದ ವಿಶೇಷ ಪಾತ್ರದಲ್ಲಿ ಕೂಡಾ ರಾಜವರ್ಧನ್ ನಟಿಸುತ್ತಿದ್ದಾರೆ. ಕನ್ನಡದ ಯಾರಾದರೂ ಸ್ಟಾರ್ ನಟರನ್ನು ಈ ಗೆಸ್ಟ್ ಅಪಿಯರೆನ್ಸ್‍ಗೆ ಕರೆಯಬೇಕು ಎಂದು ಯೋಚಿಸೋ ಹೊತ್ತಲ್ಲ ಸ್ವತಃ ಶರಣ್ ಅವರು ರಾಜವರ್ಧನ್ ಅವರನ್ನು ಹಾಕಿಕೊಂಡರೆ ಹೇಗೆ ಅನ್ನೋ ಪ್ಲಾನು ನೀಡಿದ್ದರಂತೆ. ಅದರನ್ವಯ ಈ ಪಾತ್ರಕ್ಕೆ ರಾಜವರ್ಧನ್ ವಿಕ್ಟರಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ನಟ ಡಿಂಗ್ರಿ ನಾಗರಾಜ್ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಪಾತ್ರಗಳ ಮೂಲಕ ಹೆಸರು ಮಾಡಿದವರು. ಸಾಕಷ್ಟು ವರ್ಷ ಚಿತ್ರರಂಗದಲ್ಲಿ ಕೆಲಸ ನಿರ್ವಹಿಸಿಯೂ ಬದುಕು ಕಷ್ಟವೆನಿಸಿದಾಗ ಕಿರುತೆರೆ ಮತ್ತು ರಂಗಭೂಮಿಗೆ ಮರಳಿ ಚೇತರಿಸಿಕೊಂಡವರು. ಜೀವನದಲ್ಲಿ ಸಾಕಷ್ಟು ರೀತಿಯ ನೋವು ನಲಿವುಗಳನ್ನು ಕಂಡಿರುವ ಡಿಂಗ್ರಿ ನಾಗರಾಜ್‍ರಂಥ ನಟನ ಪುತ್ರ ಇಷ್ಟು ದೊಡ್ಡ ಮಟ್ಟದ ಅವಕಾಶಗಳನ್ನು ಪಡೆಯುತ್ತಿರುವುದು ನಿಜಕ್ಕೂ ಕನ್ನಡಿಗರ ಪಾಲಿನ ಹೆಮ್ಮೆ ಎಂದು ಸಿನಿ ಪ್ರೇಮಿಗಳು ಹೇಳಿದ್ದಾರೆ.

    ರಾಜವರ್ಧನ್‍ಗೆ ಕನ್ನಡ ಚಿತ್ರರಂಗದಲ್ಲಿ ರಾಜಯೋಗ ಒಲಿದುಬರಲಿ. ಆ ಮೂಲಕ ಪೋಷಕ ಕಲಾವಿದ ಡಿಂಗ್ರಿ ನಾಗರಾಜ್ ನೆಮ್ಮದಿಯ ಬದಕು ಕಾಣುವಂತಾಗಲಿ.