Tag: ಡಾ.ಶಿವಮೂರ್ತಿ ಮುರುಘಾ ಶರಣರು

  • ಇಷ್ಟಲಿಂಗ ಪೂಜೆ ಹೇಳಿಕೊಡಲು ದೆಹಲಿಗೆ ಬನ್ನಿ ಅಂದ ರಾಹುಲ್

    ಇಷ್ಟಲಿಂಗ ಪೂಜೆ ಹೇಳಿಕೊಡಲು ದೆಹಲಿಗೆ ಬನ್ನಿ ಅಂದ ರಾಹುಲ್

    ಚಿತ್ರದುರ್ಗ: ಇಷ್ಟಲಿಂಗ ಪೂಜೆ ಬಗ್ಗೆ ಹೇಳಿಕೊಡಲು ದೆಹಲಿಗೆ ಬರಲು ಹೇಳಿದ್ದಾರೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

    ರಾಹುಲ್ ಗಾಂಧಿ ಅವರಿಗೆ ಲಿಂಗ ಧಾರಣೆ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಭೇಟಿ, ಇದೊಂದು ಸೌಜನ್ಯದ ಭೇಟಿಯಾಗಿದೆ. ನಮ್ಮೊಂದಿಗೆ ಸಂವಾದ ವೇಳೆ ರಾಹುಲ್ ಕೆಲ ಪ್ರಶ್ನೆ ಕೇಳಿದರು. ನೀವು ಯಾವ ಸಿದ್ಧಾಂತ ಪ್ರಚಾರ ಮಾಡುತ್ತೀರಿ ಎಂದು ಕೇಳಿದರು. ನಾವು ಬಸವ ತತ್ವ ಪ್ರಚಾರ ಮಾಡುತ್ತೇವೆ ಎಂದೆವು. ಬಸವಣ್ಣ ಅವರು ಜಗತ್ತಿಗೆ ಏನು ಬೋಧನೆ ಮಾಡಿದ್ದಾರೆಂದು ಕೇಳಿದರು. ಕಾಯಕ, ದಾಸೋಹ, ಸಾಮಾಜಿಕ ಸಮಾನತೆ ಎಂದೆವು. ಯಾವ ರೀತಿಯ ಪೂಜೆ, ಪ್ರಾರ್ಥನೆ ಮಾಡುತ್ತೀರಾ ಎಂದು ಕೇಳಿದರು. ಇಷ್ಟಲಿಂಗ ಪೂಜೆ ಬಗ್ಗೆ ನಾವು ಹೇಳಿದೆವು. ಆಗ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆ ತೋರಿಸಲು ಮನವಿ ಮಾಡಿದರು. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಭೂತಿ ಹಚ್ಚಿ ಮುರುಘಾಶ್ರೀಗಳಿಂದ ಲಿಂಗಧಾರಣೆ

     

    ನಾವು ಇಪ್ಪತ್ತು ನಿಮಿಷಕಾಲ ಇಷ್ಟ ಲಿಂಗದ ಪ್ರಾತ್ಯಕ್ಷಿಕೆ ಮಾಡಿದೆವು. ಬಳಿಕ ಇಷ್ಟ ಲಿಂಗ ಧರಿಸುವಿರಾ ಎಂದು ನಾವು ಕೇಳಿದೆವು. ಆಗ ಸಂತೋಷದಿಂದ ರಾಹುಲ್ ಗಾಂಧಿ ಇಷ್ಟಲಿಂಗ ಧಾರಣೆ ಮಾಡಿಕೊಂಡರು. ರಾಹುಲ್‍ಗೆ ಇಷ್ಟಲಿಂಗ ಧಾರಣೆ, ಧಿಕ್ಷೆ ನೀಡಿ ಹಣೆಗೆ ವಿಭೂತಿ ಹಚ್ಚಿದೆವು. ಈಗ ನೀವು ಬಸವ ಭಕ್ತರಾದಿರಿ ಎಂದು ಹೇಳಿದಾಗ ಖುಷಿ ಪಟ್ಟರು. ಇದೊಂದು ನೆನಪಿನಲ್ಲಿ ಉಳಿಯುವಂಥ ಸಂದರ್ಭವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಇಷ್ಟಲಿಂಗ ಪೂಜೆ ಬಗ್ಗೆ ಹೇಳಿಕೊಡಲು ದೆಹಲಿಗೆ ಬರಲು ಹೇಳಿದ್ದಾರೆ. ಯಾರಾದರೂ ಸ್ವಾಮಿಗಳನ್ನು ಕಳಿಸುತ್ತೇವೆ ಅಥವಾ ನಮ್ಮಿಂದಾದರೆ ನಾವೇ ಹೋಗುತ್ತೇವೆ. ಈ ಬಗ್ಗೆ ಚರ್ಚೆ ಮಾಡಿ, ಪ್ರಾತ್ಯಕ್ಷಿಕೆ ನೋಡಿದ ಬಳಿಕ ಲಿಂಗಧಾರಣೆ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮೋತ್ಸವ ಹೌಸ್ ಫುಲ್- ಸಿದ್ದರಾಮಯ್ಯ ಬಗ್ಗೆ ಹಾಡಿಗೆ ಕಂಬಳಿ ಬೀಸಿ ಡ್ಯಾನ್ಸ್ ಮಾಡಿದ ಅಭಿಮಾನಿಗಳು

    ಕೋಟೆನಾಡು ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲಿಂಗಧಾರಣೆ ಮಾಡಿ, ವಿಭೂತಿ ಹಚ್ಚಿದ ಮುರುಘಾಶ್ರೀಗಳು ತತ್ವದ ಉಪದೇಶ ಮಾಡಿದರು. ಈ ವೇಳೆ ರಾಹುಲ್ ಗಾಂಧಿ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲಾ, ವೇಣುಗೋಪಾಲ, ಕೆಪಿಪಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸಾಥ್ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಚಿತ್ರದುರ್ಗ ಜಿಲ್ಲೆ ಸ್ಮಾರ್ಟ್ ಸಿಟಿನೂ ಅಲ್ಲ, ಯಾವ ಯೋಜನೆಗಳೂ ನಮಗಿಲ್ಲ- ಸಿಎಂ ಎದುರೇ ಶ್ರೀ ಅಸಮಾಧಾನ

    ಚಿತ್ರದುರ್ಗ ಜಿಲ್ಲೆ ಸ್ಮಾರ್ಟ್ ಸಿಟಿನೂ ಅಲ್ಲ, ಯಾವ ಯೋಜನೆಗಳೂ ನಮಗಿಲ್ಲ- ಸಿಎಂ ಎದುರೇ ಶ್ರೀ ಅಸಮಾಧಾನ

    ಚಿತ್ರದುರ್ಗ: ಜಿಲ್ಲೆಗೊಂದು ಕಾರಿಡಾರ್ ಇಲ್ಲ ಅಥವಾ ಸ್ಮಾರ್ಟ್ ಸಿಟಿನೂ ಇಲ್ಲವೆಂದು ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಎದುರೇ ಡಾ.ಶಿವಮೂರ್ತಿ ಮುರುಘಾ ಶರಣರು ಅಸಮಾಧಾನ ಹೊರಹಾಕಿದರು.

    ಮುರುಘಾಮಠದಲ್ಲಿ ನಡೆದ ಮುರುಘಾ ಶರಣರ ಮೂರನೇ ದಶಮಾನೋತ್ಸವ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜಿಲ್ಲೆಯ ಅಭಿವೃದ್ಧಿ ಕಡೆಗಣನೆ ಬಗ್ಗೆ ಪ್ರಸ್ತಾಪಿಸಿದರು. ಚಿತ್ರದುರ್ಗ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆ ನೀಡದಿರುವುದು ನೋವಿನ ಸಂಗತಿಯಾಗಿದೆ. ಈ ಜಿಲ್ಲೆಯ ಅಭಿವೃದ್ಧಿಗೆ ಬಂದ ಹಣ ಸಹ ವಾಪಸ್ ಹೋಗಿದೆ. ಕೇವಲ 2.5 ರಷ್ಟು ಮಾತ್ರ ಬಳಕೆ ಮಾಡಿಕೊಂಡಿದ್ದಾರೆ. ಆದರೆ ಈ ಜಿಲ್ಲೆಯ ಜನ ಐದು ಬಿಜೆಪಿ ಶಾಸಕರನ್ನು ಗೆಲ್ಲಿಸಿದ್ದಾರೆ. ಆದರೂ ಅಭಿವೃದ್ಧಿ ಮಾತ್ರ ಕನಸಾಗಿದೆ. ಚಿತ್ರದುರ್ಗ ಜಿಲ್ಲೆ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಶ್ ನೇತೃತ್ವದ ತಂಡದಿಂದ ಪುರಾತನ ಕಲ್ಯಾಣಿ ಪುನರುಜ್ಜೀವನಕ್ಕೆ ಚಾಲನೆ

    ಪ್ರವಾಸಿತಾಣಗಳಾದ ಏಳುಸುತ್ತಿನ ಕೋಟೆ, ಮುರುಘಾಮಠ ಬಿಟ್ಟರೆ ಮತ್ತೇನೂ ಇಲ್ಲವೆಂಬ ಕೂಗು ಜನರದ್ದಾಗಿದ್ದು, ಬಯಲುಸೀಮೆಯ ಬಗ್ಗೆ ಗಮನಹರಿಸಿ ಅಭಿವೃದ್ಧಿ ಮಾಡಲು ಈ ಜಿಲ್ಲೆಯ ಶಾಸಕರು ಮುತುವರ್ಜಿ ವಹಿಸಬೇಕಿದೆ. ಸಚಿವ ಶ್ರೀರಾಮುಲು ಮಠದ ಭಕ್ತರಾಗಿದ್ದೂ, ಚಿತ್ರದುರ್ಗದ ಅಭಿವೃದ್ಧಿ ವಿಚಾರವಾಗಿ ಸಿಎಂ ಜೊತೆ ಚರ್ಚಿಸಬೇಕು ಎಂದು ಹೇಳಿದರು.

    ಅದಕ್ಕೆಲ್ಲಾ ಇಚ್ಛಾಶಕ್ತಿ ಇರಬೇಕಿದೆ. ಆದರೂ ನಮ್ಮ ಪಾಲಿಗೆ ಬಸವರಾಜ ಬೊಮ್ಮಾಯಿ ಅದೃಷ್ಟದ ಸಿಎಂ ಎನಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅನುಭಾವಿ ಸಿಎಂ ಆಗಿದ್ದಾರೆ. ಹೀಗಾಗಿ ಕೋಟೆನಾಡಿಗೆ ಅಭಿವೃದ್ಧಿ ಪೂರಕವಾಗಿ ಸರ್ಕಾರ ಸ್ಪಂದಿಸಬೇಕೆಂದು ಮನವಿ ಮಾಡಿದರು. ಆಗ ಮುರುಘಾಶ್ರೀ ಮಾತಿಗೆ ಬೆಂಬಲಿಸಿ ಜನರು ಕೂಗಿ ಕೇಕೆ ಹಾಕಿದರು. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಮೌನ ವಹಿಸಿದ್ದು, ಹಾಲಿ ಸಿಎಂ ಬೊಮ್ಮಾಯಿ ಬರದನಾಡಿಗೆ ನೀರಿನೊಂದಿಗೆ, ಇಂಡಸ್ಟ್ರಿಯಲ್ ಟೌನ್ ಶಿಪ್ ನೀಡುವುದಾಗಿ ಘೋಷಿಸಿದರು. ಡಿಸಿಗೆ ಸ್ಥಳ ನಿಗದಿ ಮಾಡುವಂತೆ ಸೂಚಿಸಿದರು. ಇದನ್ನೂ ಓದಿ: ಟಿಜಿ ಕಾರ್ಡ್ ವಿತರಣೆ – ಕರ್ನಾಟಕ ರಾಜ್ಯದಲ್ಲೇ ಬೀದರ್ ನಂಬರ್ 1 ಜಿಲ್ಲೆ

  • ರಕ್ತದಾನ ಮಾಡೋ ಮೂಲಕ ಜಾಗೃತಿ ಮೂಡಿಸಿದ ಶ್ರೀಗಳು

    ರಕ್ತದಾನ ಮಾಡೋ ಮೂಲಕ ಜಾಗೃತಿ ಮೂಡಿಸಿದ ಶ್ರೀಗಳು

    ಹಾವೇರಿ: ನಾವು ಔಷಧಿಗಳನ್ನು ಉತ್ಪಾದನೆ ಮಾಡಬಹುದೇ ವಿನಃ ರಕ್ತವನ್ನು ಉತ್ಪಾದನೆ ಮಾಡಲು ಸಾಧ್ಯವಿಲ್ಲ, ಅದು ದಾನ ಮಾಡುವುದರಿಂದ ಮಾತ್ರ ಲಭಿಸುತ್ತದೆ ಎಂದು ರಕ್ತದಾನ ಮಾಡಿ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಜಾಗೃತಿ ಮೂಡಿಸಿದ್ದಾರೆ.

    ಹೊಸಮಠದ ಬಸವ ಕೇಂದ್ರದಲ್ಲಿ ಜರುಗುತ್ತಿರುವ ಲಿಂಗೈಕ್ಯ ಜಗದ್ಗುರು ಶ್ರೀ ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳು ಹಾಗೂ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳ ಸ್ಮರಣೋತ್ಸವ ನಿಮಿತ್ಯ ಶರಣ ಸಂಸ್ಕೃತಿ ಉತ್ಸವ-2019ರ ಪ್ರಯಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಸವಕೇಂದ್ರದಲ್ಲಿ ಜಯಪ್ರಿಯಾ ಆಸ್ಪತ್ರೆ ಹುಬ್ಬಳ್ಳಿ, ವೀರಾಪುರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾವೇರಿ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ರಕ್ತದಾನ ಶಿಬಿರಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು.

    ಮಹಿಳೆಯರಿಗೆ ಹೆರಿಗೆಯ ಸಂದರ್ಭದಲ್ಲಿ ರಕ್ತವು ಅವಶ್ಯಕತೆಯಿದ್ದಾಗ ಸುಲಭವಾಗಿ ದೊರಕಿದರೆ ತಾಯಿ ಮತ್ತು ಮಗು ಆರೋಗ್ಯವಾಗಿರಲು ಸಾಧ್ಯ. ರಕ್ತವು ಸಕಾಲಕ್ಕೆ ದೊರೆಯದೆ ಇದ್ದಲ್ಲಿ ಸಾವು ಉಂಟಾಗುವ ಸಂಭವವಿರುತ್ತದೆ. ಹೀಗಾಗಿ ನಾವೆಲ್ಲಾ ಆರೋಗ್ಯವಾಗಿರಲು ಹಾಗೂ ಸಮಾಜವನ್ನು ಆರೋಗ್ಯವಾಗಿಡಲು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವಂತೆ ಕರೆ ನೀಡಿದರು.

    ಸಾತ್ವಿಕ ಆಹಾರವನ್ನು ಸೇವಿಸದೆ ಇರುವುದರಿಂದ ಯುವ ಜನತೆ ದೃಷ್ಟಿ ದೋಷದಿಂದ ಬಳಲುತ್ತಿದ್ದಾರೆ. ಅತಿಯಾದ ಮೊಬೈಲ್ ಮತ್ತು ದೂರದರ್ಶನ ವಿಕ್ಷಣೆಯಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ವಿವಿಧ ರೀತಿಯ ದೃಷ್ಟಿದೋಷಗಳಿಗೆ ಒಳಗಾಗುತ್ತಿದ್ದೇವೆ. ಹೀಗಾಗಿ ಅವಶ್ಯಕತೆಗೆ ತಕ್ಕಷ್ಟು ಮಾತ್ರ ಮೊಬೈಲ್ ಮತ್ತು ದೂರದರ್ಶನದ ಬಳಕೆ ಮಾಡಬೇಕೆಂದರು.

    ಆಯೋಜಕ ಡಾ. ಬಸವರಾಜ ವೀರಾಪುರ ಮಾತನಾಡಿ, ಮಠ ಮಾನ್ಯಗಳು ಹಾಗೂ ಸಂಘ ಸಂಸ್ಥೆಗಳು ಆಯೋಜಿಸುವ ಉಚಿತ ತಪಾಸಣಾ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಅದರ ಪ್ರಯೋಜನವನ್ನು ಪಡೆಯಬೇಕೆಂದರು. ಶಿಬಿರದಲ್ಲಿ ಹುಬ್ಬಳ್ಳಿಯ ಜಯಪ್ರೀಯಾ ಆಸ್ಪತ್ರೆಯ ವೈದ್ಯ ಡಾ. ವೆಂಕಟರಾಮ್, ನಗರದ ವೈದ್ಯರಾದ ಡಾ. ಮೃತ್ಯುಂಜಯ ತುರಕಾಣಿ ತಪಾಸಣೆಯನ್ನು ನೆರವೇರಿಸಿದರು.

    ರಕ್ತದಾನ ಶಿಬಿರದಲ್ಲಿ 100ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು. ನೂರಕ್ಕೂ ಅಧಿಕ ಜನರು ಉಚಿತ ನೇತ್ರ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡವರಲ್ಲಿ 32 ಜನರಿಗೆ ಉಚಿತ ಶಸ್ತ್ರಚಿಕಿತ್ಸೆಗೆ ಹುಬ್ಬಳ್ಳಿಯ ಜಯಪ್ರೀಯಾ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

    ಈ ಸಂದರ್ಭದಲ್ಲಿ ಹೊಸಮಠದ ಬಸವ ಶಾಂತಲಿಂಗ ಶ್ರೀಗಳು, ಶರಣ ಸಂಸ್ಕೃತಿ ಉತ್ಸವ ಸಮಿತಿ ಉಪಾಧ್ಯಕ್ಷ ಶ್ರೀಧರ ದೊಡ್ಡಮನಿ, ದಯಾನಂದ ಯಡ್ರಾಮಿ, ಡಾ. ಮೃಂತ್ಯುಂಜಯ ತುರಕಾಣಿ ರುದ್ರೇಶ ಚೆನ್ನಣ್ಣನವರ, ಎನ್.ಬಿ. ಕಾಳೆ, ಶಿವಬಸಪ್ಪ ಮುದ್ದಿ, ಮಲ್ಲಿಕಾರ್ಜುನ ಹಿಂಚಿಗೇರಿ, ಚಂದ್ರಶೇಖರ ಶಿಶುನಳ್ಳಿ, ಮುರುಗೆಪ್ಪ ಕಡೆಕೊಪ್ಪ ಸೇರಿದಂತೆ ಇತರರು ಹಾಜರಿದ್ದರು.

  • ಜ್ಯೋತಿಷಿಗಳಿಂದ ಭಯದ ಬೀಜ ಬಿತ್ತನೆ: ಡಾ.ಶಿವಮೂರ್ತಿ ಶ್ರೀ

    ಜ್ಯೋತಿಷಿಗಳಿಂದ ಭಯದ ಬೀಜ ಬಿತ್ತನೆ: ಡಾ.ಶಿವಮೂರ್ತಿ ಶ್ರೀ

    ಚಿತ್ರದುರ್ಗ: ಇಂದಿನ ಚಂದ್ರ ಗ್ರಹಣ ಬ್ಲಡ್ ಮೂನ್ (ರಕ್ತ ಚಂದ್ರ) ಅಲ್ಲ, ವಂಡರ್ ಮೂನ್ (ಅದ್ಭುತ ಚಂದ್ರ), ಸೂಪರ್ ಮೂನ್. ಆದರೆ ಇದರ ಬಗ್ಗೆ ಜ್ಯೋತಿಷಿಗಳು ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಚಂದ್ರಗ್ರಹಣದಲ್ಲಿ ಮಂಗಳವೋ, ಅಮಂಗಳವೋ ಎನ್ನುವ ಪ್ರಶ್ನೆಯೇ ಇಲ್ಲ. ಎಲ್ಲವೂ ಮಂಗಳವೇ. ಇಂದಿಗೂ ಕೆಲವರು ಪಂಚಾಂಗದ ದಾಸರಾಗಿದ್ದಾರೆ. ಹೀಗಾಗಿ ಜ್ಯೋತಿಷಿಗಳು ಭಯದ ಬೀಜ ಬಿತ್ತಿ, ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಚಂದ್ರ ಗ್ರಹಣ ಜಗತ್ತಿನ ಅದ್ಭುತ, ಅದನ್ನು ತಪ್ಪು ಕಲ್ಪನೆಗಳಿಂದ ಬಿಂಬಿಸಲಾಗುತ್ತಿದೆ. ಬ್ರಿಟಿಷರು ಬಂದು ದೇಶ ಆಳಿದರು. ಅವರ ಆಚರಣೆಗಳನ್ನು ಅಳವಡಿಕೊಂಡಿದ್ದೇವೆಯೇ ಹೊರತು ಮೂಢನಂಬಿಕೆಗಳನ್ನು ಕೈ ಬಿಡುವ ಪ್ರಯತ್ನ ಮಾಡಲಿಲ್ಲ ಎಂದು ನುಡಿದರು.

    ಚಿತ್ರದುರ್ಗದ ಮುರುಘಾ ಮಠದ ಅಲ್ಲಮಪ್ರಭು ಸಂಶೋಧನ ಕೇಂದ್ರ ಸಭಾಂಗಣದಲ್ಲಿ ಚಂದ್ರ ಗ್ರಹಣದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೂರಾರು ಮಕ್ಕಳು ಹಾಗೂ ಯುವಕರು ವಿಭೂತಿ, ರುದ್ರಾಕ್ಷಿ ಧರಿಸುವ ಮೂಲಕ ಲಿಂಗದೀಕ್ಷೆ ಪಡೆದರು. ಜೊತೆಗೆ ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಮರಡಿ ರಂಗಪ್ಪ ನಾಯಕ ಮತ್ತು ವಸಂತಕುಮಾರಿ ನವ ಜೋಡಿ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.