Tag: ಡಾ. ರಾಜ್ ಕುಮಾರ್

  • ಡಾ.ರಾಜ್‌ಕುಮಾರ್‌ಗೆ ಭಾರತ ರತ್ನಕ್ಕೆ ಶಿಫಾರಸು ಮಾಡುವಂತೆ ಸಿಎಂಗೆ ಮನವಿ

    ಡಾ.ರಾಜ್‌ಕುಮಾರ್‌ಗೆ ಭಾರತ ರತ್ನಕ್ಕೆ ಶಿಫಾರಸು ಮಾಡುವಂತೆ ಸಿಎಂಗೆ ಮನವಿ

    ಬೆಂಗಳೂರು: ನಟ ಸಾರ್ವಭೌಮ, ರಸಿಕರ ರಾಜ, ಕರ್ನಾಟಕ ರತ್ನ ಡಾ. ರಾಜ್‌ಕುಮಾರ್‌ಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.

    ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಮತ್ತು ಅಖಿಲ ಕರ್ನಾಟಕ ರಾಜರತ್ನ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದವರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು. ಇದೇ ವೇಳೆ ಚಾಮರಾಜನಗರ ತಾಲೂಕಿಗೆ ಡಾ. ರಾಜ್ ಕುಮಾರ್ ತಾಲೂಕು ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಬೆಂಗಳೂರಿನ ಮಾಗಡಿ ರಸ್ತೆಯ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಕುಮಾರ್ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

    ಅಷ್ಟೇ ಅಲ್ಲದೆ ಚಲನಚಿತ್ರ ರಂಗದಲ್ಲಿ 34 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಇದೇ ಸಂದರ್ಭದಲ್ಲಿ ಅಭಿಮಾನಿಗಳ ಸಂಘ ಸಿಎಂಗೆ ಮನವಿ ಸಲ್ಲಿಸಲಾಗಿದೆ.

  • 64 ಅಡಿ ಉದ್ದದ ಕನ್ನಡ ಬಾವುಟ, ಬೆಟ್ಟದ ತುತ್ತತುದಿಯಲ್ಲಿ ಕನ್ನಡ ಡಿಂಡಿಮ

    64 ಅಡಿ ಉದ್ದದ ಕನ್ನಡ ಬಾವುಟ, ಬೆಟ್ಟದ ತುತ್ತತುದಿಯಲ್ಲಿ ಕನ್ನಡ ಡಿಂಡಿಮ

    ಬೆಂಗಳೂರು: ಇತಿಹಾಸ ಪ್ರಸಿದ್ಧ ಮಾಗಡಿ ಕೆಂಪೇಗೌಡರು ಆಳಿದ ಭೈರವದುರ್ಗಾ ಬೆಟ್ಟದ ಮೇಲೆ ಯುವಕರ ತಂಡವೊಂದು 64 ಅಡಿ ಉದ್ದದ ಬೃಹತ್ ಬಾವುಟ ಹಾರಿಸಿ, ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕುದೂರು ಹೋಬಳಿಯ ಭೈರವೇಶ್ವರ ನಗರದ ಯುವಕರು, ಪ್ರತಿವರ್ಷವು ಬೃಹತ್ ಬಾವುಟವನ್ನು ಹಿಡಿದು ಕಿಲೋಮೀಟರ್ ದೂರ ಎತ್ತರದ ಬೆಟ್ಟದಲ್ಲಿ ಸಾಗಿ ಯಶಸ್ವಿಯಾಗಿ ಕನ್ನಡ ಬಾವುಟವನ್ನು ಹಾರಾಟ ಮಾಡುತ್ತಿದ್ದಾರೆ.

    ವರನಟ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಯುವಕರು ಕನ್ನಡಾಂಬೆಯ ಘೋಷಣೆಗಳನ್ನು ಕೂಗಿ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ಇನ್ನೂ ನಾಡಪ್ರಭು ರಾಜಧಾನಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ತಮ್ಮ ಸೇನೆಯಲ್ಲಿದ್ದ ಕುದುರೆಗಳನ್ನು ಇದೇ ಬೆಟ್ಟದಲ್ಲಿ ಪೋಷಣೆ ಮಾಡುತ್ತಿದ್ದರು ಎಂಬ ಪುರಾವೆಗಳಿರುವ ಪ್ರಸಿದ್ಧ ತಾಣವಾಗಿದೆ.

    ಸಾವನದುರ್ಗಾ, ಹುಲಿಯೂರು ದುರ್ಗಾ, ದೇವರಾಯನದುರ್ಗಾ ಸೇರಿದಂತೆ ಪ್ರಮುಖ ಏಳು ದುರ್ಗಾಗಳಲ್ಲಿ ಈ ಕುದೂರಿನ ಭೈರವದುರ್ಗಾ ಬೆಟ್ಟ ಕೂಡ ಒಂದಾಗಿದೆ. ಹೀಗಾಗಿ ಯುವಕರ ತಂಡ ಕನ್ನಡಾಂಬೆಯ 64ನೇ ಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಯಶಸ್ವಿಯಾಗಿದ್ದಾರೆ.

  • ಜಗಪತಿ ಬಾಬುರಿಂದ ಡಾ. ರಾಜ್, ಅಂಬಿ ಸಮಾಧಿಗೆ ಪೂಜೆ

    ಜಗಪತಿ ಬಾಬುರಿಂದ ಡಾ. ರಾಜ್, ಅಂಬಿ ಸಮಾಧಿಗೆ ಪೂಜೆ

    ಬೆಂಗಳೂರು: ಟಾಲಿವುಡ್ ನಟ ಜಗಪತಿ ಬಾಬು ಅವರು ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟಿದ್ದಾರೆ.

    ಈ ವೇಳೆ ಜಗಪತಿ ಬಾಬು ಅವರು ಡಾ. ರಾಜ್ ಕುಮಾರ್, ಅಂಬರೀಶ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಶೂಟಿಂಗ್‍ಗೆ ಬೆಂಗಳೂರಿಗೆ ಆಗಮಿಸಿರೋ ಜಗಪತಿ ಬಾಬು, ಮೊದಲ ಬಾರಿಗೆ ಕಂಠೀರವ ಸ್ಟುಡಿಯೋಗೆ ತೆರಳಿದ್ದಾರೆ.

    ರಾಬರ್ಟ್ ಸಿನಿಮಾದ ನಿರ್ಮಾಪಕ ಉಮಾಪತಿ ಟಾಲಿವುಡ್‍ನ ಕಲಾವಿದನಿಗೆ ಜೊತೆಯಾಗಿದ್ದಾರೆ. ನಾಲ್ಕು ದಿನ ಕಂಠೀರವದಲ್ಲಿ ನಡೆಯುವ ಶೂಟಿಂಗ್‍ನಲ್ಲಿ ಜಗಪತಿ ಬಾಬು ಭಾಗಿಯಾಗಲಿದ್ದಾರೆ.

  • ಸರ್ಕಾರದಿಂದಲೇ ಡಾ. ರಾಜ್‍ಕುಮಾರ್ ಹುಟ್ಟುಹಬ್ಬ ಆಚರಣೆ- ಸಿಎಂ

    ಸರ್ಕಾರದಿಂದಲೇ ಡಾ. ರಾಜ್‍ಕುಮಾರ್ ಹುಟ್ಟುಹಬ್ಬ ಆಚರಣೆ- ಸಿಎಂ

    ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬ ಬುಧವಾರವಾಗಿದ್ದು, ಸರ್ಕಾರದಿಂದಲೇ ಬರ್ತ್ ಡೇ ಆಚರಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಎಚ್‍ಡಿಕೆ, ಒಂದು ದಿನ ಮುಂಚಿತವಾಗಿಯೇ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ ಆಚರಣೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಕೇಳಿಕೊಂಡಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    ಡಾ. ರಾಜ್ ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದಲ್ಲಿಯೂ ಅವರ ಔದಾರ್ಯ, ಅಂತಃಕರಣ, ಜೀವನ ಮೌಲ್ಯಗಳು ಅನುಕರಣೀಯವಾಗಿದೆ. ನಾಳೆ ಅವರ ಹುಟ್ಟುಹಬ್ಬ. ಹೀಗಾಗಿ ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ರಾಜಣ್ಣ ಅವರ ಹುಟ್ಟು ಹಬ್ಬ ಆಚರಿಸುತ್ತಿದೆ. ಎಲ್ಲರೂ ಭಾಗವಹಿಸಿ. ಡಾ ರಾಜ್ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

    ಏ. 24ರಂದು ಜನಿಸಿದ ಡಾ. ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ ಹಾಗೂ ಗಾಯಕ. ಸುಮಾರು ಐದು ದಶಕಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರಾಗಿದ್ದಾರೆ. ಮಂಡಿನೋವು ಹಾಗು ಎದೆನೋವಿನಿಂದ ಬಳಲಿದ್ದ ಡಾ. ರಾಜ್ ಅವರು 2004 ರ ಏ.12ರ ಬುಧವಾರದಂದು ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. ಬಳಿಕ ಡಾ. ರಾಜ್ ಅವರ ಸ್ವ-ಇಚ್ಛೆಯಂತೆ, ಮರಣೋತ್ತರವಾಗಿ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿತ್ತು.

  • ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು – ರಾಹುಲ್ ಗಾಂಧಿ

    ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು – ರಾಹುಲ್ ಗಾಂಧಿ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆಯೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹೇಳಿದ್ದಾರೆ.

    ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ಅವರು, ಕಂಠೀರವ ಸ್ಟೂಡಿಯೋಗೆ ಹೋಗಿ ಕರ್ನಾಟಕದ ರತ್ನ ಡಾ. ರಾಜ್‍ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಿ ಬಂದಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಐಸ್ ಕ್ರೀಂ ಗೆ ರಾಹುಲ್ ಗಾಂಧಿ ಫಿದಾ!

    ರಾಜ್ ಕುಮಾರ್ ಅವರ ಸಮಾಧಿಗೆ ಹೋಗಿ ಪುಷ್ಪಾರ್ಚನೆ ಸಲ್ಲಿಸಿದ್ದು, ಆ ಫೋಟೋವನ್ನು ಹಾಕಿ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂದು ಬರೆದ ಟ್ವೀಟ್ ಮಾಡಿದ್ದಾರೆ. ಜೊತೆಗೆ `ಕರ್ನಾಟಕದ ರತ್ನ ಡಾ. ರಾಜ್‍ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಮರ್ಪಿಸಿ ನನ್ನ ಗೌರವ ನಮನವನ್ನು ಸಲ್ಲಿಸಿದೆನು. ಅವರ ಜೀವನದ ಆದರ್ಶಗಳು ಪ್ರತಿಯೊಬ್ಬರಿಗೂ ಸದಾ ಸ್ಪೂರ್ತಿದಾಯಕ’ ಎಂದು ಬರೆದುಕೊಂಡಿದ್ದಾರೆ.

    ರಾಹುಲ್ ಗಾಂಧಿ ಅವರು ಶಿವಾನಂದ ಸರ್ಕಲ್ ನಲ್ಲಿರುವ ರಿಚಿ ರಿಚ್ ಗೆ ಭೇಟಿ ನೀಡಿ, ಅಲ್ಲಿ ಐಸ್ ಕ್ರೀಂ ಸವಿದಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ.

  • ಇಂದು ನಟ  ಸಾರ್ವಭೌಮ ರಾಜ್‍ಕುಮಾರ್ ಜಯಂತಿ – ರಾಜ್ ಪುತ್ಥಳಿ ಬಳಿ ಅಭಿಮಾನಿಯ ಮದುವೆ

    ಇಂದು ನಟ ಸಾರ್ವಭೌಮ ರಾಜ್‍ಕುಮಾರ್ ಜಯಂತಿ – ರಾಜ್ ಪುತ್ಥಳಿ ಬಳಿ ಅಭಿಮಾನಿಯ ಮದುವೆ

    -ಪಬ್ಲಿಕ್ ಮ್ಯೂಸಿಕ್‍ನಲ್ಲಿ ದಿನವಿಡೀ ರಾಜ್ ಹಬ್ಬ

    ಬೆಂಗಳೂರು: ಇಂದು ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಮತ್ತು ವರನಟ ಡಾ. ರಾಜ್‍ಕುಮಾರ್ ಅವರ 89ನೇ ಜಯಂತಿ.

    ಡಾ. ರಾಜ್ ಕುಮಾರ್ ಅವರು ಗಾಜನೂರಲ್ಲಿ 1929ರ ಏಪ್ರಿಲ್ 24ರಂದು ಜನಿಸಿದ್ದರು. ರಾಜಣ್ಣ, ಬೇಡರ ಕಣ್ಣಪ್ಪನಾಗಿ, ಗಂಧದ ಗುಡಿಯಲ್ಲಿ ಅವತರಿಸಿ ಶಬ್ಧವೇದಿವರೆಗೂ 206 ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ಅಪರೂಪದ ಪಾತ್ರಗಳಲ್ಲಿ ಮಾಡಿ ಕನ್ನಡ ನಾಡಿನ ಮನೆ-ಮನಗಳನ್ನು ಗೆದಿದ್ದಾರೆ.

    ಪ್ರತಿ ಬಾರಿಯಂತೆ ರಾಜ್ ಸ್ಮಾರಕಕ್ಕೆ ಅಭಿಮಾನಿಗಳು ಹರಿದು ಬರುತ್ತಿದ್ದಾರೆ. ಕಟ್ಟಾ ಅಭಿಮಾನಿ ರುಧ್ರ ಎಂಬವರು ಕುರುಬರಹಳ್ಳಿಯ ರಾಜ್ ಪುತ್ಥಳಿ ಮುಂಭಾಗದಲ್ಲಿ ಮದುವೆಯಾಗಲಿದ್ದಾರೆ. ರುಧ್ರ ಮತ್ತು ಶಿಲ್ಪಾರೊಂದಿಗೆ ಇಂದು 11.30ರ ಶುಭ ಮೂಹುರ್ತದಲ್ಲಿ ಸಾಂಸರಿಕ ಜೀವನಕ್ಕೆ ಕಾಲಿರಿಸಲಿದ್ದಾರೆ .

    ಡಾ. ರಾಜ್‍ಕುಮಾರ್ ಅವರ 89ನೇ ಜಯಂತಿ ಪ್ರಯುಕ್ತ ಇಂದು ಅವರ ಕುಟುಂಬದವರು ಕಂಠೀರವ ಸ್ಟುಡಿಯೋಗೆ ಹೋಗಿ ಅವರ ಸಮಾಧಿಗೆ ಪೂಜೆ ಸಲ್ಲಿಸದ್ದಾರೆ. ಡಾ.ರಾಜ್ ಕುಮಾರ್ ಜಯಂತಿ ಅಂಗವಾಗಿ ಶಿವರಾಜ್ ಕುಮಾರ್ ಅಭಿನಯದ ‘ರುಸ್ತುಂ’ ಚಿತ್ರ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಾಹಸ ನಿರ್ದೆಶಕ ರವಿವರ್ಮ ನಿರ್ದೆಶಿಸಿದ್ದು, ಚಿತ್ರದಲ್ಲಿ ಶಿವಣ್ಣ ಮತ್ತೆ ಖಾಕಿ ಧರಿಸಲಿದ್ದು, ಮೀಸೆ ಬಿಟ್ಟ ರೂಪದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಶಿವಣ್ಣಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಅಭಿನಯಿಸುತ್ತಿದ್ದಾರೆ.

    ಇನ್ನು ರಾಜ್ ಹುಟ್ಟು ಹಬ್ಬದ ಪ್ರಯುಕ್ತ ಮಂಡ್ಯ, ಹಾಸನ, ಬೆಂಗಳೂರು ಮತ್ತು ಮೈಸೂರ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಟಗರು ಸಿನಿಮಾ ಟಿಕೆಟ್ ಮೇಲೆ 50% ರಿಯಾಯಿತಿ ನೀಡಲಾಗಿದೆ. ಡಾ. ರಾಜ್‍ಕುಮಾರ್ ಅವರ 89ನೇ ಜಯಂತಿ ಪ್ರಯುಕ್ತ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿ ಡಾ. ರಾಜ್ ಅವರನ್ನು ಸ್ಮರಿಸಿದ್ದಾರೆ.

    ಪಬ್ಲಿಕ್ ಟಿವಿ ಸಹ ಚಾನೆಲ್ ಪಬ್ಲಿಕ್ ಮ್ಯೂಸಿಕ್ ಇವತ್ತು ಇಡೀ ದಿನ ರಾಜ್‍ಕುಮಾರ್ ಮಯವಾಗಿರುತ್ತೆ.

  • ಪಠ್ಯ ಪುಸ್ತಕದಲ್ಲಿ ಇನ್ಮುಂದೆ ‘ರಾಜ್’ ಕಂಪು

    ಪಠ್ಯ ಪುಸ್ತಕದಲ್ಲಿ ಇನ್ಮುಂದೆ ‘ರಾಜ್’ ಕಂಪು

    ಬೆಂಗಳೂರು: ರಾಜ್ಯ ಪಠ್ಯ ಪುಸ್ತಕದಲ್ಲಿ ಇನ್ಮುಂದೆ ಡಾ. ರಾಜ್ ಕುಮಾರ್ ಕುರಿತಾದ ಪಠ್ಯ ಇರಲಿದೆ. ಈ ವರ್ಷದಿಂದಲೇ ಶಾಲೆಯ ಮಕ್ಕಳು ರಾಜ್‍ಕುಮಾರ್ ಜೀವನ ಚರಿತ್ರೆಯನ್ನ ಓದಲಿದ್ದಾರೆ.

    6ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ಡಾ. ರಾಜ್ ಕುಮಾರ್ ಜೀವನ ಚರಿತ್ರೆಯ ಪಠ್ಯ ಅಳವಡಿಕೆ ಮಾಡಲಾಗುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವೇಳೆಯೆ ರಾಜ್ ಕುಮಾರ್ ಕುರಿತಾದ ಪಠ್ಯ ಅಳವಡಿಸಲಾಗುತ್ತಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಕಮಿಟಿಯಿಂದ ಈಗಾಗಲೇ ರಾಜ್ ಜೀವನದ ಪಠ್ಯ ಸೇರ್ಪಡೆಯಾಗಿದೆ.

    ರಾಜ್ ಕುಮಾರ್ ಹುಟ್ಟು, ಬಾಲ್ಯ, ರಂಗಭೂಮಿ, ಸಿನಿಮಾ ಕ್ಷೇತ್ರದ ಸಂಪೂರ್ಣ ಸಾಧನೆಯ ಮಾಹಿತಿಯುಳ್ಳ ಪಠ್ಯ ಇರಲಿದೆ. 6 ಪುಟಗಳ ರಾಜ್ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಪತ್ರಕರ್ತ ದೊಡ್ಡ ಹುಲ್ಲೂರು ರುಕ್ಕೋಜಿ ಅವರು ಬರೆದಿರುವ ಪುಸ್ತಕದ ವಿಚಾರಗಳನ್ನ ಆಯ್ಕೆ ಮಾಡಿ ಪಠ್ಯ ರಚನೆ ಮಾಡಲಾಗಿದ್ದು, ಈ ವರ್ಷದಿಂದಲೇ ರಾಜ್ ಪಠ್ಯವನ್ನ ಮಕ್ಕಳು ಅಧ್ಯಯನ ಮಾಡಲಿದ್ದಾರೆ.

            

  • ಆಸ್ಪತ್ರೆಯಿಂದ ಪಾರ್ವತಮ್ಮ ರಾಜ್‍ಕುಮಾರ್ ಡಿಸ್ಜಾರ್ಚ್

    ಆಸ್ಪತ್ರೆಯಿಂದ ಪಾರ್ವತಮ್ಮ ರಾಜ್‍ಕುಮಾರ್ ಡಿಸ್ಜಾರ್ಚ್

    ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.

    ಪಾರ್ವತಮ್ಮ ಅವರಿಗೆ ಶುಗರ್ ಲೆವೆಲ್ ಕಡಿಮೆ ಆಗಿತ್ತು. ಮಾತ್ರವಲ್ಲದೇ ಅವರಿಗೆ ಯೂರಿನ್ ಇನ್ಫೆಕ್ಷನ್ ಕೂಡ ಆಗಿತ್ತು. ಈಗ ಅವರ ಆರೋಗ್ಯ ಸುಧಾರಿಸಿದೆ. ಎಲ್ಲಾ ರೀತಿಯ ಟೆಸ್ಟ್ ಗಳನ್ನೂ ಮಾಡಲಾಗಿದೆ. ಮುಂದಿನ ವಾರ ಮತ್ತೆ ಜನರಲ್ ಚೆಕಪ್‍ಗೆ ಬರಲು ತಿಳಿಸಿದ್ದೇವೆ. ಸದ್ಯ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ ಅಂತಾ ವೈದ್ಯರಾದ ಡಾ. ಸಂಜಯ್ ಕುಲಕರ್ಣಿ ಹೇಳಿದ್ದಾರೆ.

    ಸಕ್ಕರೆ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಮಂಗಳವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ತಲೆ ಸುತ್ತು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನ ಪುತ್ರ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮೊಮ್ಮಗ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

    ಡಿಸ್ಚಾರ್ಜ್ ಸಂದರ್ಭದಲ್ಲಿ ಮಂಗಳಾ ರಾಘವೇಂದ್ರ ಮತ್ತು ಕುಟುಂಬದವರು ಜೊತೆಯಿದ್ದರು.

    ಇದನ್ನೂ ಓದಿಪಾರ್ವತಮ್ಮ ರಾಜ್‍ಕುಮಾರ್ ಆಸ್ಪತ್ರೆಗೆ ದಾಖಲು

    ಇದನ್ನೂ ಓದಿ: ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯದಲ್ಲಿ ಚೇತರಿಕೆ- ಜನರಲ್ ವಾರ್ಡ್‍ಗೆ ಶಿಫ್ಟ್