Tag: ಡಾ. ರಾಜ್ ಕುಮಾರ್

  • ಹಾರ್ನ್ ಮಾಡ್ತೀರಾ? ಇದನ್ನು ಓದಲೇಬೇಕು ನೀವು : ಜನಜಾಗೃತಿಗಾಗಿ ಸ್ಟಾರ್ ಗಳ ವಿನೂತನ ಬಳಕೆ

    ಹಾರ್ನ್ ಮಾಡ್ತೀರಾ? ಇದನ್ನು ಓದಲೇಬೇಕು ನೀವು : ಜನಜಾಗೃತಿಗಾಗಿ ಸ್ಟಾರ್ ಗಳ ವಿನೂತನ ಬಳಕೆ

    ರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಶಬ್ದ ಮಾಡುವವರ ವಿರುದ್ಧ ವಿನೂತನ ರೀತಿಯಲ್ಲಿ ತಿಳುವಳಿಕೆ ನೀಡಲು ಮುಂದಾಗಿದೆ. ಕನ್ನಡದ ಹೆಸರಾಂತ ನಟರ ಚಿತ್ರಗಳ ಡೈಲಾಗ್ ಇಟ್ಟುಕೊಂಡು ಪೋಸ್ಟರ್ ತಯಾರಿಸಿದ್ದು, ಡಾ.ರಾಜ್ ಕುಮಾರ್, ಉಪೇಂದ್ರ, ಯಶ್, ಪುನೀತ್ ರಾಜ್ ಕುಮಾರ್ ಹೀಗೆ ಹಲವು ಕಲಾವಿದರ ಪಾಪ್ಯುಲರ್ ಡೈಲಾಗ್ ಬಳಸಿಕೊಂಡು ಶಬ್ದ ಮಾಡಬೇಡಿ ಎಂದು ಹೇಳುವುದಕ್ಕೆ ಹೊರಟಿದೆ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ಡಾ.ರಾಜ್ ಕುಮಾರ್ ನಟನೆಯ ಚಿತ್ರಗಳ ಡೈಲಾಗ್ ಗಳಾದ “ಇದೇ ನನ್ನ ಗುರಿ ಇದೇ ನನ್ನ ಮಂತ್ರ, ಇದೇ ನನ್ನ ಪ್ರತಿಜ್ಞೆ ನಾನ್ ಹಾರ್ನ್ ಮಾಡೋದಿಲ್ಲ’, ‘ಮೀನಾಕ್ಷಿ ಮೀನಾಕ್ಷಿ ಎಂಥ ಒಳ್ಳೆಯ ಮಗ್ಳಿಗೆ ಜನ್ಮ ಕೊಟ್ಟೆ ಸೌಂಡೇ ಮಾಡೋದಿಲ್ಲ.. ಆಹಾ’, ‘ ಆ ನಿನ್ನ ಸಂಪತ್ತಿಗೆ ನನ್ನ ಸವಾಲ್. ಹಾರ್ನ್ ಮಾಡಬೇಡ ಬಡವ ರಾಸ್ಕಲ್’, ‘ ಭೋರ್ಗರೆದು ನುಗ್ಗುವ ಟ್ರಾಫಿಕ್ ಪ್ರವಾಹವನ್ನು ಪ್ರತಿರೋಧಿಸಬಲ್ಲೆ. ಈ ಶಬ್ದವನ್ನು ಮಾತ್ರ ನಾ ಸಹಿಸಲಾರೆ. ಹಾರ್ನ್ ಮಾಡಬೇಡ ಗಾಂಢೀವಿ’ ಹೀಗೆ ಸಂಭಾಷಣೆಯನ್ನು ಬಳಸಿಕೊಂಡು ಪೋಸ್ಟರ್ ಮಾಡಲಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ಯಶ್ ಅವರ ಕೆಜಿಎಫ್ 2 ಸಿನಿಮಾದ ಸಂಭಾಷಣೆ ಇಟ್ಟುಕೊಂಡು. “ಆಳೋಕೆ ಬಂದರೆ ಸುಲ್ತಾನ್ ಇವನೆ, ಅಡ್ಡಡ್ಡ ಬಂದ್ರೆ ಸೈತಾನ್ ಇವನೆ ‘ಐ ಡೋಂಟ್ ಲೈಕ್ ಇಟ್ ಹಾಂಕಿಂಗ್’ ಎಂಬ ಪೋಸ್ಟರ್ ಮಾಡಿದ್ದು, ಈ ಪೋಸ್ಟರ್ ಕಂಡು ಅಭಿಮಾನಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಬೇರೆ ಬೇರೆ ಡೈಲಾಗ್ ಹೊಡೆದಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ಐ ಡೋಂಟ್ ಲೈಕ್ ಇಟ್ ಅಂದಾಕ್ಷಣ ಥಟ್ಟನೆ ನೆನಪಾಗುವ ಕಲಾವಿದ ಉಪೇಂದ್ರ. ಉಪೇಂದ್ರ ಸಿನಿಮಾದ ಈ ಪಾಪ್ಯುಲರ್ ಡೈಲಾಗ್ ಅನ್ನು ಆಯ್ಕೆ ಮಾಡಿಕೊಂಡಿರುವ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು “ಹಾರ್ನ್ ಮಾಡಬೇಡ ಕಾಂತ.. ಈ ಡೋಂಟ್ ಲೈಕ್ ಇಟ್ “ ಎಂಬ ಪೋಸ್ಟರ್ ರಿಲೀಸ್ ಮಾಡಿದೆ.

    ಅಲ್ಲದೇ, ಪುನೀತ್ ರಾಜ್ ಕುಮಾರ್ ಅವರ ಪೋಸ್ಟರ್ ಕೂಡ ಶಬ್ದ ಮಾಡಬೇಡಿ ಎಂದು ಹೇಳುತ್ತಿದ್ದು, “ಡೋಂಟ್ ಬಿ ಎ ಹಾಂಕಿಂಗ್ ಸ್ಟಾರ್, ಬಿ ಎ ಪವರ್ ಸ್ಟಾರ್’ ಎಂಬ ಕ್ಯಾಚಿ ಕೋಟ್ ಅನ್ನು ಈ ಪೋಸ್ಟರ್ ಗಾಗಿ ಬಳಸಲಾಗಿದೆ. ಈ ಪೋಸ್ಟರ್ ಗೆ ಅಪ್ಪು ಫ್ಯಾನ್ಸ್ ಫಿದಾ ಆಗಿದ್ದಾರೆ.

  • ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

    ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

    ಡಾ.ರಾಜ್ ಕುಮಾರ್ ನಟನೆಯ ‘ದೂರದ ಬೆಟ್ಟ’ ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಡಾ.ರಾಜ್ ಮತ್ತು ಭಾರತಿ ಅವರನ್ನು ಈ ಸಿನಿಮಾದಲ್ಲಿ ನೋಡುವುದೇ ಚಂದ. ಸಿದ್ಧಲಿಂಗಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ 1973ರಲ್ಲಿ ಬಿಡುಗಡೆ ಆಯಿತು. ಹತ್ತು ಹಲವು ಕಾರಣಗಳಿಂದಾಗಿ ಈ ಸಿನಿಮಾ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾಗಿದೆ. ಇದನ್ನೂ ಓದಿ : ಹಸೆಮಣೆ ಏರಿದ ಆಲಿಯಾ-ರಣಬೀರ್‌ಗೆ ಜೋಡಿ ಕುದುರೆ ಉಡುಗೊರೆ

    ಈ ಸಿನಿಮಾದ ವಿಶೇಷ ಅಂದರೆ ಬಾಲಿವುಡ್ ನ ಖ್ಯಾತ ಗಾಯಕಿ ಆಶ್ಲಾ ಬೋಂಸ್ಲೆ ‘ಸವಾಲು ಹಾಕಿ ಸೋಲಿಸಿ ಎಲ್ಲರ’ ಗೀತೆಯನ್ನು ಈ ಚಿತ್ರದಲ್ಲಿ ಹಾಡಿದ್ದಾರೆ.  ಇಂತಹ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರು ಹನುಮನ ಪಾತ್ರದಲ್ಲಿ ನಟಿಸಿದ್ದರು. ಆದರೆ, ಆ ಪಾತ್ರವು ಸಿನಿಮಾ ತೆರೆಗೆ ಬಂದಾಗ ಇರಲೇ ಇಲ್ಲ. ಈ ಕುರಿತು ಕನ್ನಡದ ಖ್ಯಾತ ಸ್ಥಿರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ್ ನಾರಾಯಣ್ ಟಿಪ್ಪಣಿ ಬರೆದಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 ಬಾಲಿವುಡ್ ಮೇಲೆ ಹಾಕಿದ ಅಣುಬಾಂಬ್ : ರಾಮ್ ಗೋಪಾಲ್ ವರ್ಮಾ

    ಹನುಮನ ವೇಷದ ಛಾಯಾಚಿತ್ರಗಳನ್ನು ನೋಡಿ, ಅರೇ… ರಾಜಕುಮಾರ್ ರವರು ಯಾವ ಚಿತ್ರದಲ್ಲಿ ಹನುಮನ ಪಾತ್ರ ಮಾಡಿದ್ದಾರೆ ನೋಡೆ ಇಲ್ಲವಲ್ಲ ಎನ್ನುಸುವುದೆ? ಹೌದು ನೀವು ಯಾರೂ ನೋಡಿರಲು ಸಾಧ್ಯವಿಲ್ಲ. ಇದು “ದೂರದ ಬೆಟ್ಟ” ಚಿತ್ರಕ್ಕಾಗಿ ಚಿತ್ರೀಕರಣಗೊಂಡ ದೃಶ್ಯಗಳು. ಅದರೆ ಚಿತ್ರದಲ್ಲಿ ಈ ದೃಶ್ಯಗಳು ಇಲ್ಲ. ಇದನ್ನೂ ಓದಿ : ಕೆಜಿಎಫ್ 2 ಡಿಜಾಸ್ಟರ್ ಸಿನಿಮಾ ಎಂದು ‘ಥೂ… ಥೂ..’ ಉಗಿಸಿಕೊಂಡ ಬಾಲಿವುಡ್ ನಟ

    ನಂತರದ ದಿನಗಳಲ್ಲಿ ನಾನು ಒಮ್ಮೆ ರಾಜಕುಮಾರ್ ರವರ ಸಹೋದರ ವರದರಾಜ್ ರವರ ಬಳಿ ಈ ದೃಶ್ಯಗಳನ್ನು ಏಕೆ ಉಪಯೋಗ ಮಾಡಿಲ್ಲ? ಎಂದು ಕೇಳಿದೆ ವರದರಾಜ್ ರವರು ರಾಜಕುಮಾರ್ ರವರು ನಟಿಸುತ್ತಿದ್ದ ಬಹುತೇಕ ಚಿತ್ರಗಳಿಗೆ ಕತೆ, ಹಾಗು ಚಿತ್ರ ಕಥೆಗಳ ಸಲಹೆಗಾರರು ಆಗಿರುತ್ತಿದ್ದರು.  ದೂರದ ಬೆಟ್ಟ ಚಿತ್ರದಲ್ಲಿ ಹಳ್ಳಿಯ ಯುವಕರು ಲಂಕಾ ದಹನ ನಾಟಕ ಮಾಡುತ್ತಾರೆ ಆ ಸಂದರ್ಭದಲ್ಲಿ ಆಗುವ ಅಬಾಸ ಗಳನ್ನು ಹಾಸ್ಯ ಸನ್ನಿವೇಶ ರೂಪದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಚಿತ್ರ ಪೂರ್ಣಗೊಂಡು ಮೊದಲ ಪ್ರತಿ ನೋಡಿದಾಗ ರಾಜಕುಮಾರ್, ವರದರಾಜ್ ಹಾಗು ನಿರ್ದೇಶಕ ಸಿದ್ದಲಿಂಗಯ್ಯ  ರವರಿಗೆ ಈ ಈ ದೃಶ್ಯಗಳು ಬೇಡ ನಾವು ಬೆಳೆದು ಬಂದಿರುವುದೆ ನಾಟಕದಿಂದ ಹಳ್ಳಿಯ ಯುವಕರ ನಾಟಕ ಪ್ರೇಮವನ್ನು ಪ್ರೋತ್ಸಾಹ ಮಾಡಬೇಕೆ ಹೊರತು ಹಾಸ್ಯಾಸ್ಪದ ಮಾಡುವುದು ಬೇಡ ಎಂದು   ಆ ದೃಶ್ಯಗಳನ್ನು ಕೈ ಬಿಡಲಾಯಿತು ಎಂದು ಹೇಳಿದರು. ಇದನ್ನೂ ಓದಿ : ಕನ್ನಡದಲ್ಲೇ ಕೆಜಿಎಫ್ ನೋಡಿ ಫಿದಾ ಆದ ತಲೈವಾ

    ದೂರದ ಬೆಟ್ಟ ಚಿತ್ರದ ಸ್ಥಿರಚಿತ್ರ ಛಾಯಾಗ್ರಾಹಕ ನಾಗಿದ್ದ ನನ್ನಲಿ ಈ ಛಾಯಾಚಿತ್ರಗಳ ಜೊತೆಗೆ ಮತ್ತಷ್ಟು ಛಾಯಾಚಿತ್ರಗಳು ಇವೆ.

    ಮಾಹಿತಿ ಮತ್ತು ಚಿತ್ರ : ಪ್ರಗತಿ ಅಶ್ವತ್ಥ್ ನಾರಾಯಣ್ ಅವರ ಫೇಸ್ ಬುಕ್ ವಾಲ್ ನಿಂದ

  • ದಕ್ಷಿಣದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ : ಡಾ.ರಾಜ್ ನಟನೆಯ ‘ಮಹಿಷಾಸುರ ಮರ್ಧಿನಿ’

    ದಕ್ಷಿಣದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ : ಡಾ.ರಾಜ್ ನಟನೆಯ ‘ಮಹಿಷಾಸುರ ಮರ್ಧಿನಿ’

    ದ್ಯ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಸುದ್ದಿ. ಬಾಹುಬಲಿ, ಕಜಿಎಫ್ ಸಿನಿಮಾಗಳು ಬರುವ ಮುಂಚೆ ಇಂಥದ್ದೊಂದು ಶಬ್ದವನ್ನು ಕೇಳಿದ್ದು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನಬಹುದು. ಬಾಹುಬಲಿ ಸಿನಿಮಾ ರಿಲೀಸ್ ಆದಾಗಲೂ ಈ ಶಬ್ದಕ್ಕೆ ಅಷ್ಟೊಂದು ತೂಕವಿರಲಿಲ್ಲ. ಆದರೆ, ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುತ್ತಿದ್ದಂತೆಯೇ ‘ಪ್ಯಾನ್ ಇಂಡಿಯಾ’ ಶಬ್ದಕ್ಕೆ ತೂಕ ಹೆಚ್ಚಾಯಿತು. ಈಗಂತೂ ತಲೆ ಚಿಟ್ಟು ಅನ್ನುವಷ್ಟರ ಮಟ್ಟಿಗೆ ಪ್ಯಾನ್ ಇಂಡಿಯಾ ಸಿನಿಮಾಗಳು ರಾರಾಜಿಸುತ್ತಿವೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್

    ಏನಿದು ಪ್ಯಾನ್ ಇಂಡಿಯಾ?

    ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿವೆ, ಆಯಾ ಭಾಷೆಯ ನೋಡುಗರಿಗೆ ಒಂದೇ ಸಲ ಸಿನಿಮಾ ತೋರಿಸುವ ಸಿದ್ಧಾಂತವೇ ‘ಪ್ಯಾನ್ ಇಂಡಿಯಾ’. ಸಾಮಾನ್ಯವಾಗಿ ಎಲ್ಲ ಭಾಷೆಯ ನೋಡುಗರನ್ನು ಗಮನದಲ್ಲಿಟ್ಟುಕೊಂಡು ಇಂಥದ್ದೊಂದು ಸಿನಿಮಾ ಮಾಡುತ್ತಾರೆ. ಕಥೆಯ ಆಯ್ಕೆಯಿಂದ ಹಿಡಿದು ಅದರ ಗುಣಮಟ್ಟದವರೆಗೂ ಅದ್ಧೂರಿತನವನ್ನು ಕಾಪಾಡಿಕೊಂಡು ಬರಲಾಗುತ್ತದೆ. ಅಥವಾ ಆಯಾ ನೋಡುಗನ ಅಭಿರುಚಿಯನ್ನು ಮನದಲ್ಲಿಟ್ಟು ಸಿನಿಮಾ ಕಟ್ಟಲಾಗುತ್ತಿದೆ.

    ಆರು ದಶಕಗಳ ಹಿಂದೆಯೇ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ

    ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಈಗೀಗ ಪಾಪ್ಯುಲರ್ ಆದರೂ, ಅರವತ್ತೆರಡು ವರ್ಷಗಳ ಹಿಂದೆಯೇ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಂದಿದೆ. ಅದೂ ಈವರೆಗೂ ಕನ್ನಡದಲ್ಲಿ ಬಾರದೇ ಇರುವಷ್ಟು ಭಾಷೆಗಳಲ್ಲಿ ತೆರೆ ಕಂಡಿದೆ. ಬರೀ ತೆರೆ ಕಾಣುವುದು ಮಾತ್ರವಲ್ಲ ಬಾಕ್ಸ್ ಆಫೀಸ್ ಕಲೆಕ್ಷನ್ ವಿಷಯದಲ್ಲೂ ಅದು ದಾಖಲೆ ಬರೆದಿದೆ. ಆ ಸಿನಿಮಾ ಬೇರೆ ಯಾವುದೂ ಅಲ್ಲ, ಡಾ.ರಾಜ್ ಕುಮಾರ್ ನಟನೆಯ ‘ಮಹಿಷಾಸುರ ಮರ್ಧಿನಿ’. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

    ಅದು 1959ರ ಬ್ಲ್ಯಾಕ್ ಅಂಡ್ ವೈಟ್ ಯುಗದ ಸಿನಿಮಾ. ಈ ವೇಳೆಯಲ್ಲಿ ಸಿನಿಮಾ ನಿರ್ಮಾಣಗಳ ಸಂಖ್ಯೆಯೂ ತೀರಾ ಕಡಿಮೆ. 1959ರಲ್ಲಿ ತೆರೆಕಂಡ ಸಿನಿಮಾಗಳ ಸಂಖ್ಯೆ ಕೇವಲ ಆರೇ ಆರು. ಆ ಆರು ಸಿನಿಮಾಗಳಲ್ಲಿ ಮಹಿಷಾಸುರ ಮರ್ಧಿನಿ ಕೂಡ ಒಂದು. ಇದು ಪೌರಾಣಿಕ ಚಿತ್ರವಾಗಿದ್ದು, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಒಟ್ಟು ಎಂಟು ಭಾಷೆಗಳಿಗೆ ಈ ಸಿನಿಮಾ ಡಬ್ ಆಗಿ ಬಿಡುಗಡೆ ಆಗಿತ್ತು. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ಡಾ.ರಾಜ್ ಕುಮಾರ್ ಅವರ ಜತೆ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ತಾಯಿ ಶ್ರೀಮತಿ ಸಂಧ್ಯಾ ಅವರು ಕೂಡ ನಟಿಸಿದ್ದಾರೆ. ಮಹಿಷಾಸುರನ ಪಾತ್ರವನ್ನು ಡಾ.ರಾಜ್ ನಿರ್ವಹಿಸಿದ್ದರೆ, ಚಾಮುಂಡೇಶ್ವರಿಯಾಗಿ ಸಂಧ್ಯಾ ಕಾಣಿಸಿಕೊಂಡಿದ್ದರು. ಉದಯಕುಮಾರ್, ಸಾಹುಕಾರ ಜಾನಿ, ನರಸಿಂಹರಾಜು ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದ ತಾರಾ ಬಳಗದಲ್ಲಿದ್ದರು. ಇದನ್ನೂ ಓದಿ: ಯಶ್ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋ ಡಿಮ್ಯಾಂಡ್: ರಾಕಿಭಾಯ್ ನಿರಂತರ ಪ್ರದರ್ಶನ

    ಈ ಸಿನಿಮಾ ಹಲವು ಪ್ರಥಮಗಳಿಗೆ ಕಾರಣವೂ ಆಯಿತು. ಈ ಸಿನಿಮಾದ ಮೂಲಕ ಡಾ.ರಾಜ್ ಕುಮಾರ್ ಅವರು ಗಾಯಕರಾಗಿ ಸಿನಿಮಾ ರಂಗಕ್ಕೆ ಪರಿಚಯವಾದರು. ಆ ಕಾಲದಲ್ಲೇ ಈ ಸಿನಿಮಾ ಬೆಂಗಳೂರಿನಲ್ಲಿ ನೂರು ದಿನಗಳ ಪ್ರದರ್ಶನ ಕಂಡಿತು. ಮದರಾಸಿನ ವಿಕ್ರಂ ಸ್ಟುಡಿಯೋದಲ್ಲಿ ಚಿತ್ರೀಖರಣಗೊಂಡ ಮೊಟ್ಟ ಮೊದಲ ಸಿನಿಮಾ ಕೂಡ ಇದಾಗಿದೆ. ನಿರ್ಮಾಪಕರಾದ ಬಿ.ಎಸ್.ರಂಗಾ ಅವರು ನಿರ್ಮಾಣ ಮಾಡುವುದರ ಜತೆಗೆ ಸಿನಿಮಾಟೋಗ್ರಾಫರ್ ಆಗಿಯೂ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.

  • ಅಣ್ಣಾವ್ರ 16ನೇ ಪುಣ್ಯಸ್ಮರಣೆ: ಡಾ.ರಾಜ್ ಸ್ಮಾರಕಕ್ಕೆ ಹರಿದು ಬಂತು ಜನಸಾಗರ

    ಅಣ್ಣಾವ್ರ 16ನೇ ಪುಣ್ಯಸ್ಮರಣೆ: ಡಾ.ರಾಜ್ ಸ್ಮಾರಕಕ್ಕೆ ಹರಿದು ಬಂತು ಜನಸಾಗರ

    ರನಟ ಡಾ.ರಾಜ್ ಕುಮಾರ್ ಅವರು ಇನ್ನಿಲ್ಲವಾಗಿ ಇಂದಿಗೆ 16 ವರ್ಷ. ಇಂದು ಡಾ.ರಾಜ್ ಕುಟುಂಬ ಮತ್ತು ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸ್ಮಾರಕಕ್ಕೆ ಪೂಜೆ ಸಲ್ಲಿಸುವ ಮೂಲಕ ನೆಚ್ಚಿನ ಕಲಾವಿದನಿಗೆ ನಮನ ಸಲ್ಲಿಸಿದರು. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ಪ್ರತಿ ವರ್ಷದಂತೆ ಈ ವರ್ಷವೂ ಡಾ.ರಾಜ್ ಅವರ ಪುಣ್ಯಸ್ಮರಣೆಯೆಂದು ಅಭಿಮಾನಿಗಳು ನೇತ್ರದಾನ, ಅಂಗಾಂಗ ದಾನ, ಅನ್ನದಾನ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದರು. ರಾಜ್ಯದ ನಾನಾ ಭಾಗಗಳಿಂದ ಬಂದ ಸಾವಿರಾರು ಅಭಿಮಾನಿಗಳು ಇಂದು ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದರು. ಅಲ್ಲದೇ, ಪಕ್ಕದಲ್ಲಿಯೇ ಇರುವ ಪಾರ್ವತಮ್ಮ ಮತ್ತು ಪುನೀತ್ ರಾಜ್ ಕುಮಾರ್ ಅವರ ಸಮಾಧಿಗಳಿಗೂ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ನಟ ಶಿವರಾಜ್ ಕುಮಾರ್ ಮತ್ತು ಕುಟುಂಬ, ರಾಘವೇಂದ್ರ ರಾಜ್ ಕುಮಾರ್ ಮತ್ತು ಕುಟುಂಬ, ಅಶ್ವಿನಿ ಪುನೀತ್ ರಾಜ್ ಕುಮಾರ್, ಯುವರಾಜ್ ಕುಮಾರ್, ಡಾ.ರಾಜ್ ಹೆಣ್ಣು ಮಕ್ಕಳಾದ ಪೂರ್ಣಿಮಾ ಮತ್ತು ಕುಟುಂಬ ಸೇರಿದಂತೆ ಡಾ.ರಾಜ್ ಕುಟುಂಬದ ಎಲ್ಲ ಸದಸ್ಯರು ಬೆಳಗ್ಗೆ ಕಂಠೀರವ ಸ್ಟುಡಿಯೋ ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಓದಿ:ʼ2 ಸ್ಟೇಟ್ಸ್’ ಖ್ಯಾತಿಯ ಶಿವಕುಮಾರ್ ಸುಬ್ರಮಣಿಯಂ ನಿಧನ

    ಅಣ್ಣಾವ್ರ ಪುಣ್ಯಸ್ಮರಣೆ ದಿನದಂದು ಸ್ಯಾಂಡಲ್ ವುಡ್ ನ ಬಹುತೇಕ ತಾರೆಯರು ಡಾ.ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಡಾ.ರಾಜ್ ಕುಮಾರ್ ಅವರು ನಾಡಿಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಿದ್ದಾರೆ. ಅಣ್ಣಾವ್ರ ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. 16 ವರ್ಷವಲ್ಲ, 160 ವರ್ಷವಾದರೂ ಅಣ್ಣಾವ್ರ ಅಜರಾಮರ ಎಂದು ಸ್ಮರಿಸಿದ್ದಾರೆ.

  • ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್

    ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್

    ಬ್ಲಿಕ್ ಟಿವಿ ನಡೆಸಿದ ಎಕ್ಸ್‌ಕ್ಲೂಸೀವ್‌ ಸಂದರ್ಶನದಲ್ಲಿ ನಟ ಯಶ್, ವರನಟ ಡಾ.ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡರು. ಇದು ಅಣ್ಣಾವ್ರ ನಾಡು. ಈ ನಾಡಿನಲ್ಲಿ ನಾವು ಹುಟ್ಟಿದ್ದೇ ಪುಣ್ಯ ಎಂದರು. ಈ ಮಾತನ್ನು ಅವರು ಆಡುವುದಕ್ಕೂ ಕಾರಣವಿದೆ. ಯಶ್ ಈಗ ಎಲ್ಲೇ ಹೋದರೂ, ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳಿಗೆ ಹೋದಾಗಲೂ ಅಭಿಮಾನಿಗಳು ಅಷ್ಟೇ ಪ್ರೀತಿ ತೋರಿಸುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳ ಪ್ರೀತಿಯ ಕುರಿತು ಮಾತನಾಡುವಾಗ ಯಶ್, ಅಣ್ಣಾವ್ರನ್ನು ನೆನಪಿಸಿಕೊಂಡರು. ಇದನ್ನು ಓದಿ:`ಕೆಜಿಎಫ್ 2′ ನಟಿ ಅರ್ಚನಾ ನಟನೆಯ `ಮ್ಯೂಟ್’ ಟ್ರೇಲರ್ ಮೆಚ್ಚಿದ ರವೀನಾ ಟಂಡನ್

    ‘ಅಣ್ಣಾವ್ರು ತಮ್ಮ ಅಭಿಮಾನಿಗಳನ್ನು ದೇವರು ಎಂದು ಕರೆಯುತ್ತಿದ್ದರು. ಅವರು ಯಾಕೆ ಹಾಗೆ ಕರೆಯುತ್ತಿದ್ದರು ಎಂದು ಈಗೀಗ ನನಗೆ ಅರ್ಥವಾಗುತ್ತಿದೆ. ನನ್ನ ನಟನೆಯ ಕೆಜಿಎಫ್ ಸಿನಿಮಾ ಬಂದು ಮೂರು ವರ್ಷಗಳಾಯಿತು. ಅಷ್ಟೂ ದಿನಗಳ ಕಾಲ ನಾನು ಅಭಿಮಾನಿಗಳ ಜತೆ ಇದ್ದದ್ದು ಕಡಿಮೆ. ನನ್ನ ಯಾವ ಸಿನಿಮಾಗಳು ಬಂದಿಲ್ಲ. ಆದರೂ, ಅವರು ಅಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ ಅಂದರೆ, ಅದಕ್ಕೆ ಕಾರಣ ಅವರ ನನ್ನ ಮೇಲಿಟ್ಟ ನಂಬಿಕೆ. ಅದಕ್ಕಾಗಿಯೇ ಅಣ್ಣಾವ್ರು ಅವರನ್ನು ಅಭಿಮಾನಿ ದೇವರು ಅಂತ ಕರೆದದ್ದು’ ಎಂದು ನೆನಪಿಸಿಕೊಂಡರು ಯಶ್. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ಪಬ್ಲಿಕ್ ಟಿವಿ ಡಿಜಿಟಲ್ ಅಣ್ಣಾವ್ರ ಹುಟ್ಟು ಹಬ್ಬಕ್ಕಾಗಿಯೇ ‘ಡಾ.ರಾಜ್ ಉತ್ಸವ’ ಹೆಸರಿನಲ್ಲಿ ಸ್ಪೆಷಲ್ ಸ್ಟೋರಿಗಳನ್ನು ಮಾಡುತ್ತಿದೆ. ನಾಡಿನ ದಿಗ್ಗಜರು ಮತ್ತು ಡಾ.ರಾಜ್ ಕುಮಾರ್ ಅವರ ಜತೆ ಒಡನಾಡಿದ ಧೀಮಂತರು ಡಾ.ರಾಜ್ ಕುಮಾರ್ ಕುರಿತಾಗಿ ಮಾತನಾಡಿದ್ದಾರೆ. ಸಾಕಷ್ಟು ಘಟನೆಗಳನ್ನು ಹಂಚಿಕೊಂಡಿದ್ದಾರೆ. ಏ.10 ರಿಂದ ಶುರುವಾದ ಈ ವಿಶೇಷ ಕಂತುಗಳು ಏ.24ರವರೆಗೂ ಪಬ್ಲಿಕ್ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ನೋಡಲು ಸಿಗುತ್ತವೆ.

  • ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ರನಟ ಡಾ.ರಾಜ್ ಕುಮಾರ್ ಹುಟ್ಟಿದ ಊರಿನಲ್ಲಿ ಕೆಲ ಸಿನಿಮಾಗಳ ಚಿತ್ರೀಕರಣ ನಡೆದಿವೆ. ಆದರೆ, ಇದೇ ಮೊದಲ ಬಾರಿಗೆ ಸಿನಿಮಾದ ಮುಹೂರ್ತವೊಂದು ನಡೆಯುತ್ತಿದೆ. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ : ಸಿನಿಮಾ ರಂಗಕ್ಕೆ ಬಾ ಅನ್ನಲಿಲ್ಲ ಬಂದ, ರಾಜಕಾರಣಕ್ಕೆ ಅವನನ್ನೇ ಕೇಳಬೇಕು : ಪುತ್ರನ ಬಗ್ಗೆ ಸುಮಲತಾ ಮಾತು

    ಈ ಕುರಿತು ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, “ಗಾಜನೂರಿನಲ್ಲಿ ಖಡಕ್ ಹಳ್ಳಿ ಹುಡುಗರು ಚಿತ್ರಕ್ಕೆ ಮೂಹೂರ್ತ ನಡೆಯುತ್ತಿದೆ. ಹಾಗಾಗಿ ಇಲ್ಲಿವೆ ಬಂದಿದ್ದೇವೆ. ಗಾಜನೂರಿನಲ್ಲಿ ಸಂಪತ್ತಿಗೆ ಸವಾಲ್, ಶ್ರೀನಿವಾಸ ಕಲ್ಯಾಣ ಚಿತ್ರಗಳ ಚಿತ್ರೀಕರಣ ಮಾತ್ರ ಆಗಿದೆ. ಆದ್ರೆ ಯಾವುದೇ ಚಿತ್ರದ ಮೂಹೂರ್ತ ಆಗಿಲ್ಲ ಹೀಗಾಗಿ ಪ್ರಥಮಬಾರಿಗೆ ಗಾಜನೂರಿನಲ್ಲೇ ಮೂಹೂರ್ತ ನಮ್ಮ ಸೋದರತ್ತೆ ನಾಗಮ್ಮ ಕೈಲಿ ಪೂಜೆ ಮಾಡಿಸುತ್ತೇವೆ” ಎಂದರು. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಡಾ.ರಾಜ್ ಹುಟ್ಟಿದ ಮನೆ, ಓದಿದ ಶಾಲೆ, ಮಂಟೇಸ್ವಾಮಿ ದೇವಾಲಯದಲ್ಲಿ ಚಿತ್ರೀಕರಣ ನಡೆಯಲಿದೆ. ಅಲ್ಲದೇ, ಕನ್ನಡಕ್ಕೆ ಮೊದಲ ಗೌರವ ಎಂಬ ಹಾಡಿನ ಚಿತ್ರೀಕರಣ ಕೂಡ ಇಲ್ಲೇ ನಡೆಯಲಿದೆಯಂತೆ. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’

    “ನಾಗತ್ತೆ ಅವರು ನಮಗೆ ಹಾಲು ಕುಡಿಸಿ ಬೆಳೆಸಿದ್ದಾರೆ. ನಮ್ಮ ತಂದೆ ಚಿತ್ರೀಕರಣಕ್ಕೆ ಹೋದಾಗ ತಾಯಿಯೂ ಸಹ ಹೋಗುತ್ತಿದ್ರು. ಆಗ ನಾಗತ್ತೆ ನಮ್ಮನ್ನು ಸಾಕಿ ಸಲುಹಿದ್ರು. ಅವರಿಗೆ ಹುಷಾರಿಲ್ಲ ಅವರ ಆರೋಗ್ಯ ವಿಚಾರಿಸಲು ಹಾಗೂ ಚಿತ್ರೀಕರಣಕ್ಕೆ ಪೂಜೆ ಮಾಡಿಸಲು ನಾವೇ ಇಲ್ಲಿಗೆ ಬಂದಿದ್ದೇವೆ” ಎಂದು ನಾಗತ್ತೆಯ ಕುರಿತಾಗಿಯೂ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿದರು. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ಡಾ.ರಾಜ್ ಹುಟ್ಟಿದ ಗಾಜನೂರಿಗೆ ಒಂದು ಮಹತ್ವ ಇದೆ. ಇಲ್ಲಿ ಚಿತ್ರದ ಮೂಹೂರ್ತ ನಡೆಸಿದ್ರೆ ನಮ್ಮ ಪೂರ್ವಿಕರೆಲ್ಲಾ ಬಂದು ಆಶಿರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎನ್ನುವುದು ಅವರ ಮಾತು.

  • ತಂದೆ ಹಾದಿ ಹಿಡಿದ ಮಗ- ನೇತ್ರದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ಅಪ್ಪು

    ತಂದೆ ಹಾದಿ ಹಿಡಿದ ಮಗ- ನೇತ್ರದಾನ ಮಾಡಿ ಸಾವಲ್ಲೂ ಸಾರ್ಥಕತೆ ಮೆರೆದ ಅಪ್ಪು

    ಬೆಂಗಳೂರು: ಹೃದಯಾಘಾತದಿಂದ ಇಂದು ನಿಧನರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ತಮ್ಮ ಕಣ್ಣುಗಳನ್ನು ದಾನ ಮಾಡಲಾಗಿದೆ.

    ಕನ್ನಡದ ಮೇರು ನಟರಾಗಿದ್ದ ಡಾ. ರಾಜ್ ಕುಮಾರ್ ಕೂಡ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದರು. ಇದೀಗ ಪುನೀತ್ ಅವರು ಕೂಡ ಅದೇ ದಾರಿ ಹಿಡಿದಿದ್ದು, ಅಪ್ಪನಂತೆ ಮಗನೂ ನೇತ್ರದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ನೇತ್ರದಾನದ ಕುರಿತು ಪುನೀತ್ ಅವರು ಹಲವು ಸಂದರ್ಭಗಳಲ್ಲಿ ಜಾಗೃತಿಯನ್ನು ಕೂಡ ಮೂಡಿಸಿದ್ದರು. ಇದೀಗ ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬ ನಿರ್ಧರಿಸಿದೆ.

    ನಿನ್ನೆ ರಾತ್ರಿಯೇ ಅಪ್ಪುಗೆ ಲಘು ಹೃದಯಾಘಾತವಾಗಿತ್ತು ಎಂದು ಹೇಳಲಾಗುತ್ತಿದೆ. ಎಂದಿನಂತೆ ಇಂದು ಬೆಳಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಸಂದರ್ಭದಲ್ಲಿ ದೊಡ್ಮನೆ ಹುಡುಗ ಏಕಾಏಕಿ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಸಿಜಿ ಮಾಡಿಸಿ ನಂತರ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಧ್ಯಾಹ್ನ ನಟ ಇಹಲೋಕ ತ್ಯಜಿಸಿದ್ದು, ಕುಟುಂಬ, ಅಭಿಮಾನಿಗಳು ಸೇರಿದಂತೆ ಇಡೀ ಚಿತ್ರರಂಗವೇ ಕಣ್ಣೀರಾಗಿದೆ.

    ಅಪ್ಪು ಅವರು ಪತ್ನಿ ಅಶ್ವಿನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು, ನಟರು, ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

  • ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

    ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ

    ಮೈಸೂರು: ಇಂದು ಬೆಳಗ್ಗೆ ನಿರ್ಮಾಪಕ ಉಮಾಪತಿ ಅವರು ದೊಡ್ಮನೆ ಆಸ್ತಿ ವಿಚಾರವಾಗಿ ತಮ್ಮ ಮಧ್ಯೆ ಇರುವ ಮುನಿಸು ಹೊರ ಹಾಕಿದ ಬೆನ್ನಲ್ಲೇ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಯಾವುದೇ ಕಾರಣಕ್ಕೂ ದೊಡ್ಮನೆ ಹಾಗೂ ನಮಗೂ ಹೋಲಿಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

    ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮರ್ಡರ್ ಮಾಡಿದ್ದೀನಾ ಎಂದು ಪ್ರಶ್ನಿಸಿದರು. ನಾನು ಯಾರ ಪರ ವಿರೋಧ ಮಾತನಾಡಿಲ್ಲ. ನಾನು ಕಷ್ಟಪಟ್ಟು ಮಾಡಿರುವ ಆಸ್ತಿ ಇದು. ಇದರ ಬಗ್ಗೆ ಯಾರದರೂ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ. ಇಂದ್ರಜಿತ್ ಅವರು ಮೊದಲು ಆರೋಪಗಳನ್ನು ಸಾಬೀತುಪಡಿಸಲಿ ಮತ್ತೆ ಮಾತನಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

    ಇಂಡಸ್ಟ್ರೀ ಯಾರ ಅಪ್ಪನ ಸೊತ್ತು ಅಲ್ಲ. ಕಲೆಗೆ ಬೆಲೆ ಇದ್ದರಷ್ಟೇ ಇಲ್ಲಿ ಇರಬಹುದು ಅಷ್ಟೆ. ತಪ್ಪು ನಾನು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಇಲ್ಲದಿದ್ದರೆ ನಾನ್ಯಾಕೆ ಕೇಳಬೇಕು ಎಂದು ಹೇಳಿದರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

    ಯಾವುದೇ ಕರಣಕ್ಕೂ ನಮಗೂ ದೊಡ್ಮನೆಗೂ ಹೋಲಿಕೆ ಮಾಡಬೇಡಿ. ಅವರ ವಿಚಾರವಾಗಿ ನನ್ನ ಹೆಸರನ್ನು ತೆಗೆಯಬೇಡಿ. ಈ ವಿಷಯ ದೊಡ್ಮನೆ ಕಡೆ ಹೋಗಿದ್ದಕ್ಕೆ ನಾನು ಮಾತನಾಡಿದ್ದು. ಇನ್ನೂ ಈ ವಿಷಯ ಬೇರೆ ಕಡೆ ಹೋಗುವ ಮುಂಚೆ ನಾನು ಮಾತನಾಡಲು ಬಂದಿದ್ದೇನೆ. 2006ರಲ್ಲಿ ನನ್ನ ಇಮೇಜ್ ಕೆಟ್ಟು ಹೋಗಿತ್ತು. ನಾವು ಸರಿಯಾಗಿದ್ದರೆ ಯಾರು ಕೂಡ ಯಾರ ಇಮೇಜ್ ಕೂಡ ಕೆಡಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್

    ಮೊದಲು 25 ಕೋಟಿ ಪ್ರಾಪರ್ಟಿ ವಿಷಯ ಮುಗಿಯಲಿ. ಇನ್ನು ಹೋಟೆಲಿನಲ್ಲಿ ನಾನು ಯಾರಿಗೆ ಹೊಡೆದೆ ಎಂಬ ಆರೋಪ ಇದೆ, ಮೊದಲು ಅವನು ಬಂದು ಮೇಡಿಕಲ್ ಸರ್ಟಿಫಿಕೆಟ್ ತೋರಿಸಲಿ. ಆರ್ಡರ್ ಕೊಟ್ಟಿದ್ದು ಲೇಟ್ ಆಗಿತ್ತು, ಅದಕ್ಕೆ ಸಣ್ಣ ವಿಚಾರವಾಗಿ ಗಲಾಟೆ ನಡೆದಿದೆ. ಆದರೆ ಅವರು ಆರೋಪ ಮಾಡಿರುವಂತೆ ಏನೋ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್

    150 ಸಂಪಾದನೆ ಮಾಡಿ ಇಲ್ಲಿವರೆಗು ಬಂದಿದ್ದೇನೆ ನನ್ನ ಆಸ್ತಿಯನ್ನು ನೋಡಿಕೊಳ್ಳುವುದು ನನಗೆ ಮುಖ್ಯ. ನಾನು ನನ್ನ ಅಭಿಮಾನಿಗಳಿಗೆ ಗೊತ್ತಾಗಬೇಕೆಂದು ಇಷ್ಟು ಮಾತನಾಡಿದ್ದೇನೆ. ಕಲಾವಿದರು ಒಬ್ಬರು ಕೂಡ ನಮ್ಮ ವಿಚಾರವಾಗಿ ಮಾತನಾಡಿಲ್ಲ ಅವರು ಮಾತನಾಡಲ್ಲ ಎಂದು ದರ್ಶನ್ ಕಿಡಿಕಾರಿದರು.

  • ಅಣ್ಣಾವ್ರ ಯೋಗ ಗುರು ಹೊನ್ನಪ್ಪ ಫಕೀರಪ್ಪ ನಾಯ್ಕರ್ ಇನ್ನಿಲ್ಲ

    ಅಣ್ಣಾವ್ರ ಯೋಗ ಗುರು ಹೊನ್ನಪ್ಪ ಫಕೀರಪ್ಪ ನಾಯ್ಕರ್ ಇನ್ನಿಲ್ಲ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಗೆ ಸಾಮಾನ್ಯ ಜನರೂ ಸೇರಿದಂತೆ ಹಲವಾರು ಮಂದಿ ಸೆಲೆಬ್ರಿಟಿಗಳು ಕೂಡ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಡಾ. ರಾಜ್ ಕುಮಾರ್ ಅವರ ಯೋಗ ಗುರು ಕೂಡ ಕೋವಿಡ್ 19 ನಿಂದ ಮೃತಪಟ್ಟಿದ್ದಾರೆ.

    ಹೊನ್ನಪ್ಪ ಫಕೀರಪ್ಪ ನಾಯ್ಕರ್(90) ಅವರಿಗೆ ಕೆಲವು ದಿನಗಳ ಹಿಂದೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಸಂಬಂಧ ಅವರಿಗೆ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಕನಕಪುರದ ಬಳಿ ನಾಗದೇವನಹಳ್ಳಿಯಲ್ಲಿ ಹೊನ್ನಪ್ಪ ನಾಯ್ಕರ್ ಅವರ ಅಂತಿಮ ಸಂಸ್ಕಾರ ನೆರವೇರಿದೆ.

    ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಹೊನ್ನಪ್ಪ ನಾಯ್ಕರ್ ನಂತರ ಯೋಗದತ್ತ ಮುಖ ಮಾಡಿದರು. ಡಾ. ರಾಜಕುಮಾರ್ ಅವರ ಕುಟುಂಬ ಸೇರಿದಂತೆ ಹಲವು ಗಣ್ಯರಿಗೆ ಯೋಗ ಹೇಳಿಕೊಡುತ್ತಿದ್ದರು.

    ಈ ಹಿಂದೆ ಶಂಖನಾದ ಅರವಿಂದ್, ರೇಣುಕಾ ಶರ್ಮಾ, ರಾಮು, ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾರಾಂ, ಕನ್ನಡ ಸಿನಿಮಾದ ನಿರ್ಮಾಪಕ ಹಾಗೂ ವಿತರಕ ದೀಪಕ್ ಸಾಮಿದೊರೈ ಸೇರಿದಂತೆ ಹಲವರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

  • ನಮ್ಮ ಜವಾಬ್ದಾರಿಯನ್ನ ನಾವೇ ನಿಭಾಯಿಸಿದ್ರೆ ಲಾಕ್‍ಡೌನ್ ಪ್ರಶ್ನೆ ಬರಲ್ಲ: ಶಿವಣ್ಣ

    ನಮ್ಮ ಜವಾಬ್ದಾರಿಯನ್ನ ನಾವೇ ನಿಭಾಯಿಸಿದ್ರೆ ಲಾಕ್‍ಡೌನ್ ಪ್ರಶ್ನೆ ಬರಲ್ಲ: ಶಿವಣ್ಣ

    – ಅಪ್ಪಾಜಿ ಅಗಲಿ 15 ವರ್ಷ ಆಯ್ತು

    ಬೆಂಗಳೂರು: ಒಂದು ವರ್ಷ ಕಷ್ಟಪಟ್ಟಿದ್ದೇವೆ. ಮತ್ತೆ ಕಷ್ಟ ಪಡೋದು ಬೇಡ. ಲಾಕ್‍ಡೌನ್ ಅನ್ನೋದು ಬರೋದು ಬೇಡ. ಆ ರೀತಿ ಎಚ್ಚರವನ್ನ ನಾವು ವಹಿಸೋಣ. ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸಿದ್ರೆ ಲಾಕ್‍ಡೌನ್ ಪ್ರಶ್ನೆ ಬರಲ್ಲ. ಎಷ್ಟು ವರ್ಷ ಅಂತ ಇದನ್ನ ತಳ್ಳಿಕೊಂಡು ಹೋಗೋಕೆ ಆಗುತ್ತೆ. ಆ ತರದ ಪರಿಸ್ಥಿತಿ ಬರೋದು ಬೇಡ ಎಂದು ಸ್ಯಾಂಡಲ್‍ವುಡ್ ನಟ ಡಾ. ಶಿವರಾಜ್ ಕುಮಾರ್ ಹೇಳಿದ್ದಾರೆ.

    ಇಂದು ವರನಟ ಡಾ. ರಾಜ್ ಕುಮಾರ್ ಅವರ 15ನೇ ವರ್ಷದ ಪುಣ್ಯ ಸ್ಮರಣೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ರಾಜ್ ಸಮಾಧಿ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಶಿವಣ್ಣ, ಅಪ್ಪಾಜಿ ಅಗಲಿ 15 ವರ್ಷ ಆಯ್ತು. ಕಳೆದ ವರ್ಷವೂ ಕೊರೊನಾ ಇತ್ತು. ಈ ವರ್ಷವೂ ಅದೇ ತರ ಆಗಿದೆ. ಹೀಗಾಗಿ ಆಢಂಬರ ಬೇಡ. ಸರಳವಾಗಿ ಪೂಜೆ ಮಾಡಬೇಕು ಅಂತ ನಿರ್ಧಾರ ಆಗಿತ್ತು. ಅಭಿಮಾನಿಗಳು ಹುಷಾರಾಗಿರಬೇಕು ಎಂದು ಹೇಳಿದರು.

    ಎಲ್ಲರಿಗೂ ಕುಟುಂಬ ಇದೆ. ಮಾಸ್ಕ್ ಹಾಕಿಕೊಂಡು ಓಡಾಡೋದನ್ನ ಮರೆಯಬೇಡಿ. ಮೈ ಮರೆತು ಮತ್ತೆ ಸಂಕಂಷ್ಟ ದಿನಗಳನ್ನ ಎದುರಿಸೋದು ಬೇಡ. 1 ವರ್ಷ ಎಲ್ಲರೂ ಕಷ್ಟ ಪಟ್ಟಿದ್ದೀವಿ. ಕೊರೊನಾ ಜೊತೆಯೇ ಬದುಕಬೇಕು. ಮೊಂಡು ಧೈರ್ಯ ಮಾಡಬಾರದು. ಕೇರ್‍ಫುಲ್ ಆಗಿರಿ. ಮಾಸ್ಕ್ ಧರಿಸಿ, ಲಾಕ್‍ಡೌನ್ ಕಡೆ ಗಮನ ಕೊಡುವುದೇ ಬೇಡ. ಲಾಕ್‍ಡೌನ್ ನಮ್ಮ ಕೈಯಲ್ಲಿದೆ. ನಮ್ಮೆಲ್ಲರ ಜವಾಬ್ದಾರಿ ಕೂಡ ಹೌದು ಎಂದು ಹ್ಯಾಟ್ರಿಕ್ ಹೀರೋ ಹೇಳಿದರು.

    ಯುಗಾದಿಯ ಮೊದಲು ಅಪ್ಪಾಜಿ ಪೂಜೆ ಮಾಡೋ ದಿನ ಬಂದಿದೆ. ಯುಗಾದಿ ಹಬ್ಬವನ್ನ ನಾವು ಸಡಗರದಿಂದಲೇ ಆಚರಿಸುತ್ತೇವೆ. ಇಡೀ ಕುಟಂಬ ಈ ಹಬ್ಬದ ದಿನ ಸೇರುತ್ತೇವೆ ಎಂದು ತಿಳಿಸಿದರು. ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳುತ್ತಿರೋ ಶಿವಪ್ಪ ಸಿನಿಮಾದ ಟೈಟಲ್ ಬದಲಾಗಿದೆ. ಈ ಸಿನಿಮಾಗೆ ಹೊಸ ಟೈಟಲ್ ಅನೌನ್ಸ್ ಮಾಡುತ್ತೇವೆ ಎಂದು ಇದೇ ವೇಳೆ ಶಿವಣ್ಣ ತಿಳಿಸಿದರು.

    ಸಮಾಧಿ ಪೂಜೆಯ ವೇಳೆ ಅಭಿಮಾನಿಯೊಬ್ಬರು ಅಪ್ಪಾಜಿಗೆ ಇಷ್ಟವಾದ ರಾಗಿ ರೊಟ್ಟಿ ಇಟ್ಟು ಪೂಜೆ ಮಾಡಿದರು.