Tag: ಡಾ. ರಾಜ್ ಕುಮಾರ್

  • ಅಣ್ಣಾವ್ರ 18ನೇ ಪುಣ್ಯ ಸ್ಮರಣೆ: ಕುಟುಂಬದಿಂದ ಪೂಜೆ

    ಅಣ್ಣಾವ್ರ 18ನೇ ಪುಣ್ಯ ಸ್ಮರಣೆ: ಕುಟುಂಬದಿಂದ ಪೂಜೆ

    ರನಟ ಡಾ.ರಾಜ್ ಕುಮಾರ್ (Dr. Raj Kumar) ಅವರ 18ನೇ ಪುಣ್ಯ ಸ್ಮರಣೆಯನ್ನು (Punyasmarane) ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ (Kantheerava Studio) ಅವರ ಸಮಾಧಿಯಲ್ಲಿ ಆಚರಿಸಲಾಯಿತು. ಅಣ್ಣಾವ್ರ ಮಕ್ಕಳಾದ ರಾಘವೇಂದ್ರ ರಾಜಕುಮಾರ್, ಪೂರ್ಣಿಮಾ, ಲಕ್ಷ್ಮಿ ಸೇರಿದಂತೆ ಕುಟುಂಬದ ಸದಸ್ಯರು ಆಗಮಿಸಿ ಪೂಜೆ ಸಲ್ಲಿಸಿದರು.

    ಪ್ರತಿ ವರ್ಷದಂತೆ ಈ ವರ್ಷವೂ ಡಾ.ರಾಜ್ ಕುಮಾರ್ ಅಭಿಮಾನಿಗಳು ಸಮಾಧಿ ಬಳಿ ರಕ್ತದಾನ ಶಿಬಿರ, ಅನ್ನ ಸಂತರ್ಪಣೆ, ಕಣ್ಣುದಾನ ಸೇರಿದಂತೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದರು. ಅಣ್ಣಾವ್ರ ಸಮಾಧಿ ದರ್ಶನಕ್ಕಾಗಿ ಸಾಲುಗಟ್ಟಿ ಅಭಿಮಾನಿಗಳು ನಿಂತು ಪೂಜೆ ಸಲ್ಲಿಸಿದ್ದಾರೆ.

     

    ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಸಮಾಧಿ ಹತ್ತಿರ ಬಂದಾಗಷ್ಟೇ ಅಪ್ಪಾಜಿ ನಮ್ಮೊಂದಿಗೆ ಇಲ್ಲ ಅಂತ ಅನಿಸತ್ತೆ. ಅದರಾಚೆ ಅವರು ನಮ್ಮೊಂದಿಗೆ ಸದಾ ಇದ್ದಾರೆ, ಇರುತ್ತಾರೆ ಎಂದರು. ಅಭಿಮಾನಿಗಳ ಜೊತೆ ಒಂದಷ್ಟು ಹೊತ್ತು ರಾಘಣ್ಣ ಇದ್ದರು.

  • ನ್ಯಾಯಕ್ಕಾಗಿ ಇಂದು ಫಿಲ್ಮ್ ಚೇಂಬರ್ ಮುಂದೆ ನಿರ್ಮಾಪಕ ಎನ್.ಕುಮಾರ್ ಪ್ರತಿಭಟನೆ

    ನ್ಯಾಯಕ್ಕಾಗಿ ಇಂದು ಫಿಲ್ಮ್ ಚೇಂಬರ್ ಮುಂದೆ ನಿರ್ಮಾಪಕ ಎನ್.ಕುಮಾರ್ ಪ್ರತಿಭಟನೆ

    ಕಿಚ್ಚ ಸುದೀಪ್ ತಮ್ಮ ವಿರುದ್ಧ ಕೋರ್ಟಿನಲ್ಲಿ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸುತ್ತಿದ್ದಂತೆಯೇ ನಿರ್ಮಾಪಕ ಎನ್.ಕುಮಾರ್ ನ್ಯಾಯಕ್ಕಾಗಿ ಫಿಲ್ಮ್ ಚೇಂಬರ್ (Film Chamber) ಮುಂದೆ ಪ್ರತಿಭಟನೆ (Protest) ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದಿರುವ ಡಾ.ರಾಜ್ ಕುಮಾರ್ (Dr. Raj Kumar) ಪ್ರತಿಮೆಯ ಬಳಿ ಅವರು ಪ್ರತಿಭಟನೆಗೆ ಕೂರಲಿದ್ದಾರೆ. ತಮಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕು ಎನ್ನುವುದು ಅವರು ಆಗ್ರಹವಾಗಿರಲಿದೆಯಂತೆ.

    ನಿರ್ಮಾಪಕ ಎನ್.ಕುಮಾರ್ (N. Kumar) ವಿರುದ್ದ ಕಾನೂನು ಸಮರಕ್ಕೆ ಮೊನ್ನೆ ಸುದೀಪ್ (Kiccha Sudeep) ಅಧಿಕೃತವಾಗಿ ಇಳಿದಿದ್ದಾರೆ. ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿದ್ದ ಅವರು, ನಿರ್ಮಾಪಕ ಎನ್.ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ (Defamation) ಪ್ರಕರಣ ದಾಖಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುದೀಪ್, ‘ನಾನು ಯಾರಿಗೆ ಉತ್ತರ ಕೊಡಬೇಕಿದೆಯೋ, ಅದನ್ನು ಕೋರ್ಟಿನಲ್ಲಿ (Court) ಕೊಡುವೆ’ ಎಂದಿದ್ದರು. ಇದನ್ನೂ ಓದಿ:ಜೈಲೂಟ ಫಿಕ್ಸ್ ಆದ್ರೂ ತಾನು ತಪ್ಪೇ ಮಾಡಿಲ್ಲ ಅಂತಿರೋ ವಂಚಕಿ ನಿಶಾ ನರಸಪ್ಪ!

    ಈ ಕುರಿತು ನಿರ್ಮಾಪಕ ಎನ್.ಕುಮಾರ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ‘ಅವರು ಈ ಹಿಂದೆ ನನಗೆ ಕಳುಹಿಸಿದ್ದ ನೋಟಿಸ್ ಜುಲೈ 13ಕ್ಕೆ ಸಿಕ್ಕಿದೆ. ಅದು ಇಂಗ್ಲಿಷಿನಲ್ಲಿತ್ತು. ನನಗೆ ಇಂಗ್ಲಿಷ್ ಬರುವುದಿಲ್ಲ. ಹಾಗಾಗಿ ಇಂದು ವಕೀಲರನ್ನು ಭೇಟಿ ಮಾಡಲು ಸಮಯ ನಿಗದಿ ಮಾಡಿದ್ದೆ. ಅಷ್ಟರಲ್ಲೇ ಅವರು ಕೋರ್ಟಿಗೆ ಹೋಗಿದ್ದಾರೆ. ನನ್ನ ಮೇಲೆ ಏನೆಲ್ಲ ಆರೋಪ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಕಾನೂನು ಸಲಹೆ ಪಡೆದುಕೊಂಡು ನಾನು ಪ್ರತಿಕ್ರಿಯೆ ಮಾಡುತ್ತೇನೆ’ ಎಂದಿದ್ದಾರೆ.

    ನಾನು ತುಂಬಾ ತಾಳ್ಮೆ ಇರುವಂತಹ ನಿರ್ಮಾಪಕ. ನನಗೆ ಆದ ನೋವನ್ನು ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದೇನೆ. ನಾನು ನಿರ್ಮಾಪಕನಾಗಿ ಮೂವತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ವಿತರಕನಾಗಿ ನೂರಾರು ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಸರಿ ತಪ್ಪುಗಳು ನನಗೂ ಅರ್ಥವಾಗುತ್ತವೆ. ನಾನು ಮತ್ತು ಸುದೀಪ್ ಇಬ್ಬರ ಮಧ್ಯ ನಡೆದ ಮಾತುಕತೆಗೆ ಅವರು ಬದ್ಧರಾಗಲಿ ಎಂದಷ್ಟೇ ಹೇಳುತ್ತೇನೆ’ ಎಂದಿದ್ದಾರೆ ಕುಮಾರ್.

     

    ನಮಗೆ ಏನೇ ತೊಂದರೆಯಾದರೂ ನಾವು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೊರೆ ಹೋಗುತ್ತೇವೆ. ನಾನು ಅಲ್ಲಿಗೇ ಹೋಗಿದ್ದು. ವಾಣಿಜ್ಯ ಮಂಡಳಿಯಲ್ಲಿ ಕೂತು ಮಾತನಾಡೋಣ ಬನ್ನಿ ಎಂದು ಕರೆದರೂ ಅವರು ಬರಲಿಲ್ಲ. ಕೋರ್ಟಿಗೆ ಹೋಗಿದ್ದಾರೆ. ನಾನು ಈ ಕುರಿತು ನನ್ನ ವಕೀಲರನ್ನು ಸಂಪರ್ಕಿಸುತ್ತೇನೆ ಎನ್ನುವುದು ಕುಮಾರ್ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Karnataka Budget 2023: ಡಾ.ರಾಜ್ ಸ್ಮಾರಕದ ಬಳಿ ಸಿನಿ ವಸ್ತು ಸಂಗ್ರಹಾಲಯ

    Karnataka Budget 2023: ಡಾ.ರಾಜ್ ಸ್ಮಾರಕದ ಬಳಿ ಸಿನಿ ವಸ್ತು ಸಂಗ್ರಹಾಲಯ

    ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ (Karnataka Budget 2023) ಮಂಡನೆ ಮಾಡಿದ್ದು, ಹಲವು ವರ್ಷಗಳ ಒಂದು ಬೇಡಿಕೆಯನ್ನು ಈಡೇರಿಸಿದ್ದಾರೆ. ಚಿತ್ರಂಗದ ಇತಿಹಾಸವನ್ನು ಸಾರುವಂತಹ ವಸ್ತು ಸಂಗ್ರಹಾಲಯ (Museum) ಬೇಕು ಎನ್ನುವುದು ಸಿನಿ ಇತಿಹಾಸಕಾರರ ಆಗ್ರಹವಾಗಿತ್ತು. ಅದನ್ನು ಈ ಬಾರಿಯ ಬಜೆಟ್ ನಲ್ಲಿ ಈಡೇರಿಸಿದ್ದಾರೆ.

    ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲಿರುವ ಡಾ.ರಾಜ್ ಕುಮಾರ್ ಸ್ಮಾರಕದ (Dr. Raj Kumar) ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯವನ್ನು ನಿರ್ಮಿಸುವುದಾಗಿ ಈ ಬಾರಿಯ ಬಜೆಟ್ ನಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಮೂಲಕ ಚಿತ್ರರಂಗದ ಬೆಳವಣಿಗೆ ಇತಿಹಾಸ ಪರಿಚಯಿಸಲು ಮುಂದಾಗಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್ ಭೇಟಿಗಾಗಿ ಮಲೇಷ್ಯಾಗೆ ಹೊರಟು ನಿಂತ ರಾಕಿಭಾಯ್ ಯಶ್

     

    ಡಾ.ರಾಜ್ ಕುಮಾರ್ ಸ್ಮಾರಕದ ಬಳಿ ವಸ್ತು ಸಂಗ್ರಹಾಲಯದ ಜೊತೆಗೆ ಸುಸಜ್ಜಿತದ ಥಿಯೇಟರ್ ನಿರ್ಮಾಣವಾಗಬೇಕು ಎನ್ನುವುದು ಹಲವರ ಕೋರಿಕೆಯಾಗಿತ್ತು. ಜೊತೆಗೆ ಡಾ.ರಾಜ್ ಕುಮಾರ್ ಅವರ ಕುರಿತಾಗಿಯೇ ವಸ್ತು ಸಂಗ್ರಹಾಲಯ ಇರಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಸಮಗ್ರ ಚಿತ್ರರಂಗವನ್ನು ಒಳಗೊಳ್ಳುವಂತಹ ಸಂಗ್ರಹಾಲಯಕ್ಕೆ ಸಿದ್ದರಾಮಯ್ಯ ಸರಕಾರ ಅಸ್ತು ಎಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಗಲಿದ ಡಾ.ಭುಜಂಗ ಶೆಟ್ಟಿ ಅವರಿಗೆ ಸ್ಯಾಂಡಲ್ ವುಡ್ ಕಂಬನಿ

    ಅಗಲಿದ ಡಾ.ಭುಜಂಗ ಶೆಟ್ಟಿ ಅವರಿಗೆ ಸ್ಯಾಂಡಲ್ ವುಡ್ ಕಂಬನಿ

    ಖ್ಯಾತ ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಅವರಿಗೂ ಸ್ಯಾಂಡಲ್ ವುಡ್ ಗೂ ಭಾವನಾತ್ಮಕ ಸಂಬಂಧವಿದೆ. ಡಾ.ರಾಜ್ ಕುಮಾರ್ ಅವರನ್ನು ಕಣ್ಣುದಾನಕ್ಕೆ ಪ್ರೇರೇಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡಾ.ರಾಜ್ ಐ ಬ್ಯಾಂಕ್ ಮೂಲಕ ಲಕ್ಷಾಂತರ ಜನರಿಗೆ ಬೆಳಕಾದವರು ಭುಜಂಗ ಶೆಟ್ಟರು. ಹಾಗಾಗಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಶೆಟ್ಟಿರು ಅಂದರೆ ಎಲ್ಲಿಲ್ಲದ ಅಭಿಮಾನ ಹಾಗೂ ವಿಶೇಷ ಪ್ರೀತಿ.

    ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭುಜಂಗ ಶೆಟ್ಟರ ಪ್ರೇರಣೆಯಿಂದ ಕಣ್ಣುದಾನ ಮಾಡಿದ್ದಲ್ಲದೇ, ಅನೇಕರು ಇವರದ್ದೇ ಆಸ್ಪತ್ರೆಗಳಲ್ಲಿ ನೇತ್ರ ಚಿಕಿತ್ಸೆಗೂ ಒಳಗಾಗಿದ್ದಾರೆ. ಹಾಗಾಗಿ ಅವರ ನಿಧನದ ಸಂದರ್ಭದಲ್ಲಿ ಅನೇಕರು ಕಂಬನಿ ಮಿಡಿದಿದ್ದಾರೆ. ಅಗಲಿದ ನೇತ್ರ ತಜ್ಞನಿಗೆ ಸಂತಾಪಗಳನ್ನು ಸೂಚಿಸಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಭುಜಂಗ ಶೆಟ್ಟರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿರುವ ಜಗ್ಗೇಶ್, ‘ಇಂದಿನ ದೇವಯ್ಯ ಪಾರ್ಕ್ ಮೆಟ್ರೋ ಅಡಿಯಲ್ಲಿ 1980ರಲ್ಲಿ ಇವರ ಕಣ್ಣಿನ ಕ್ಲಿನಿಕ್ ಇತ್ತು. ಅಮ್ಮನ ಕಣ್ಣಿನ ಪರೀಕ್ಷೆಗಾಗಿ ಇವರ ಬಳಿ ಹೋಗಿದ್ದ ನೆನಪು. ನಂತರ ಅವರ ಬೆಳವಣಿಗೆ. ಅವರ ಆಸ್ಪತ್ರೆಯಲ್ಲಿ ನಡೆದ ನನ್ನ ಅನೇಕ ಚಿತ್ರದ ಚಿತ್ರೀಕರಣ. ರಾಜಣ್ಣ ಕಣ್ಣಿನ ದಾನಕ್ಕೆ ಇವರೇ ಪ್ರೇರಣೆ’ ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಂಗನಾ ಸಿನಿಮಾ ನೋಡಿ ಕಣ್ಣೀರಿಟ್ಟ ರಾಜಮೌಳಿ ತಂದೆ

    ಡಾ.ಭುಜಂಗ ಶೆಟ್ಟಿ ನಾರಾಯಣ ನೇತ್ರಾಯಲ ಶುರು ಮಾಡಿದ್ದು 1993ರಲ್ಲಿ. ಬೆಂಗಳೂರಿನ ರಾಜಾಜಿನಗರದಲ್ಲಿ ಶುರುವಾದ ನೇತ್ರಾಲಯದಲ್ಲಿ ಡಾ.ರಾಜ್ ಕುಮಾರ್ ಅವರು 1994ರಲ್ಲಿ ತಮ್ಮ ತಂಗಿಯ ಕಣ್ಣಿನ ಆಪರೇಷನ್ ಮಾಡಿಸಲು ಅಲ್ಲಿಗೆ ಹೋಗಿದ್ದರು. ಭುಜಂಗ ಶೆಟ್ಟರು ಆಡಿದ ಕಣ್ಣಿನ ದಾನದ ಮಾತು ರಾಜ್ ಕುಮಾರ್ ಅವರನ್ನು ಪ್ರೇರೇಪಿಸಿತು. ನಂತರ ರಾಜ್ ಕುಮಾರ್ ಕೂಡ ಕಣ್ಣುದಾನಕ್ಕೆ ಮುಂದಾದರು. ಮತ್ತು ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರ ಆರಂಭವಾಯಿತು.

  • ಅಣ್ಣಾವ್ರ ಹುಟ್ಟು ಹಬ್ಬದಂದು ರಿಲೀಸ್ ಆಯಿತು ‘ಪರಿಮಳ ಡಿಸೋಜಾ’ ಸಾಂಗ್

    ಅಣ್ಣಾವ್ರ ಹುಟ್ಟು ಹಬ್ಬದಂದು ರಿಲೀಸ್ ಆಯಿತು ‘ಪರಿಮಳ ಡಿಸೋಜಾ’ ಸಾಂಗ್

    ಡಾ.ರಾಜ್ ಕುಮಾರ್ (Dr. Raj Kumar) ಜನುಮದಿನಕ್ಕಾಗಿ ನಿನ್ನೆ ಸೋಮವಾರದಂದು  ವಿಲೇಜ್ ರೋಡ್ ಫಿಲಂಸ್ ಅವರು ನಿರ್ಮಿಸಿರುವ ‘ಪರಿಮಳ ಡಿಸೋಜಾ’ (Parimala D’Souza) ಕನ್ನಡ ಚಲನಚಿತ್ರದ ‘ಇದು ನನ್ನ ನಿನ್ನ ಒಲವಿನ ಗೀತೆ’ಯ ಲಿರಿಕಲ್ ವಿಡಿಯೋ ಸಾಂಗ್ (Song) ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್‌ ಬಿಡುಗಡೆ (Release) ಮಾಡಿದ್ದಾರೆ.

    ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಶ್ರುತಿ ಅವರ ಯುಗಳ ಸ್ವರದಲ್ಲಿ ಈ ಗೀತೆ ಮೂಡಿ ಬಂದಿದ್ದು, ಕ್ರಿಸ್ಟೋಫರ್ ಜೇಸನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿನೋದ್ ಶೇಷಾದ್ರಿ ಅವರ ಸಾಹಿತ್ಯದಲ್ಲಿ ಈ ಗೀತೆ ಮೂಡಿ ಬಂದಿದೆ. ಇದನ್ನೂ ಓದಿ:ನಟಿ ಅನುಷ್ಕಾ ಶೆಟ್ಟಿಗೆ ನಿನ್ನೆ ಎಲೋನ್ ಮಸ್ಕ್ ಕೊಟ್ಟ ಗಿಫ್ಟ್ ಏನು?

    ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಮತ್ತು ಜಯಂತ್ ಕಾಯ್ಕಿಣಿ ಗೀತೆಗಳನ್ನು ಬರೆದಿದ್ದಾರೆ. ಕೆ.ಕಲ್ಯಾಣ್ ಬರೆದಿರುವ ಸಾಹಿತ್ಯಕ್ಕೆ ಖ್ಯಾತ ನಿರ್ದೇಶಕ  ಜೋಗಿ ಪ್ರೇಮ್ ಹಾಡಿರುವುದು ವಿಶೇಷ.

    ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯಕ್ಕೆ ಖ್ಯಾತ ಗಾಯಕಿ ಅನುರಾಧ ಭಟ್ ಹಾಡಿದ್ದಾರೆ. ಈ ಎರಡು ಹಾಡುಗಳು ಪುನೀತ್ ರಾಜ್ ಕುಮಾರ್ ಅವರ ಹುಟುಹಬ್ಬದಂದು ರಿಲೀಸ್ ಆಗಿವೆ. ‘ಇದು ನನ್ನ ನಿನ್ನ ಒಲವಿನ ಗೀತೆ’ ಲಿರಿಕಲ್ ವಿಡಿಯೋ ಸಾಂಗ್ ನಿನ್ನೆ ಡಾ.ರಾಜ್ ಕುಮಾರ್ ಅವರ  ಹುಟ್ಟು ಹಬ್ಬದಂದು ಬಿಡುಗಡೆಗೊಂಡಿದೆ.

  • ಜಪಾನ್ ಅಭಿಮಾನಿಗಳಿಂದ ಡಾ.ರಾಜ್ ಹುಟ್ಟು ಹಬ್ಬ ಆಚರಣೆ

    ಜಪಾನ್ ಅಭಿಮಾನಿಗಳಿಂದ ಡಾ.ರಾಜ್ ಹುಟ್ಟು ಹಬ್ಬ ಆಚರಣೆ

    ಇಂದು ಡಾ.ರಾಜ್ ಕುಮಾರ್ (Dr. Rajkumar) ಅವರ 94ನೇ ಜನ್ಮದಿನ. ಕೇವಲ ದೇಶಾದ್ಯಂತ ಮಾತ್ರವಲ್ಲ, ವಿದೇಶಗಳಲ್ಲೂ ಅವರ ಅಭಿಮಾನಿಗಳು ಹುಟ್ಟುಹಬ್ಬವನ್ನು (Birthday) ಆಚರಿಸುತ್ತಿದ್ದಾರೆ. ಜಪಾನ್ ನಲ್ಲಿ ಅಣ್ಣಾವ್ರ ಅಭಿಮಾನಿಗಳು ರಾಜ್ ಕುಮಾರ್ ಫೋಟೋ ಮುಂದೆ ಕೇಕ್ ಕಟ್ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಿದ್ದಾರೆ. ಕನ್ನಡಿಗರ ಜೊತೆ ಸೇರಿಕೊಂಡ ಜಪಾನಿಯರು (Japan) ಸಂಭ್ರಮದಿಂದ ಡಾ.ರಾಜ್ ಅವರನ್ನು ಸ್ಮರಿಸಿದ್ದಾರೆ.

    ನಾಡಿನಾದ್ಯಂತ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಡಾ.ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ನೆಚ್ಚಿನ ನಟನ ಹೆಸರಿನಲ್ಲಿ ರಕ್ತದಾನ, ಅನ್ನದಾನ ಹಾಗೂ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಆಚರಿಸುತ್ತಿದ್ದಾರೆ. ನಿನ್ನೆಯಷ್ಟೇ ಅಣ್ಣಾವ್ರ ಮೊಮ್ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದ ಅಭಿಮಾನಿಗಳು ಇಂದು ಮೇರುನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ನಟಿ ವಿದಿಶಾ ಶ್ರೀವಾಸ್ತವ

    ಕೆಲ ಅಭಿಮಾನಿಗಳು ಇದ್ದೂರಿನಲ್ಲೇ ಹುಟ್ಟು ಹಬ್ಬ ಆಚರಿಸುತ್ತಿದ್ದರೆ, ಇನ್ನೂ ಹಲವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ (Kantheerava Studio) ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಸ್ಮಾರಕಕ್ಕೆ ಅಭಿಮಾನಿಗಳು ದಂಡು ಹರಿದು ಬಂದಿದೆ. ಸ್ಮಾರಕದ ಮುಂದೆಯೇ ಅನ್ನಸಂತರ್ಪಣೆ, ಕೇಕ್ ಕತ್ತರಿಸುವುದು ಹಾಗೂ ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ.

    ಡಾ.ರಾಜ್ ಕುಟುಂಬದ ಸದಸ್ಯರು ಕೂಡ ಆಗಮಿಸಿ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪಕ್ಕದಲ್ಲೇ ಇರುವ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸಮಾಧಿಗಳಿಗೂ ಪೂಜೆ ಸಲ್ಲಿಸಿದ್ದಾರೆ. ಅಣ್ಣಾವ್ರ ಅಭಿಮಾನಿಗಳ ಜೊತೆ ಕುಟುಂಬದ ಸದಸ್ಯರು ಕೆಲಹೊತ್ತು ಇದ್ದರು.

  • ಲೇಖಕ ಗುರುರಾಜ ಕೊಡ್ಕಣಿ ಕಂಡಂತೆ ವರನಟ ಡಾ.ರಾಜ್ ಕುಮಾರ್

    ಲೇಖಕ ಗುರುರಾಜ ಕೊಡ್ಕಣಿ ಕಂಡಂತೆ ವರನಟ ಡಾ.ರಾಜ್ ಕುಮಾರ್

    ನ್ನಡದ ಯುವ ಸಾಹಿತಿಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಲೇಖಕ ಗುರುರಾಜ ಕೊಡ್ಕಣಿ (Gururaj Kodkani) ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಸಾಹಿತ್ಯ ಕೃತಿಗಳನ್ನಷ್ಟೇ ಅಲ್ಲ ಬಾಲಿವುಡ್, ಕನ್ನಡ ಸಿನಿಮಾಗಳು ಸೇರಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ. ಈ ಬಾರಿ ಡಾ.ರಾಜ್ ಕುಮಾರ್ (Dr. Raj Kumar) ವ್ಯಕ್ತಿ ಹಾಗೂ ವ್ಯಕ್ತಿತ್ವ ಮತ್ತು ಸಿನಿಮಾ ನಟನೆಯ ಕುರಿತು ಅಣ್ಣಾವ್ರ ಹುಟ್ಟು ಹಬ್ಬದ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಸುಮ್ಮನೇ ಯು ಟ್ಯೂಬ್‌ನಲ್ಲಿ ‘ಭಕ್ತ ಕುಂಬಾರ’ (Bhaktakumbara) ಸಿನಿಮಾ ನೋಡುತ್ತಿದ್ದೆ.ಅದರಲ್ಲಿ ನಾಮದೇವ ತನಗಿಂತ ಮಹಾನ್ ಪಾಂಡುರಂಗನ ಭಕ್ತನನ್ನು ಹುಡುಕುತ್ತ ಊರೂರು ಸುತ್ತುವ ದೃಶ್ಯ. ಅವರು ತಮ್ಮೂರಿಗೆ ಬಂದಿರುವ ಸುದ್ದಿ ತಿಳಿದು ಕಥಾನಾಯಕ ಓಡೋಡಿ ಬರುತ್ತಾನೆ. ನಾಮದೇವ ಮತ್ತು ಸಂಗಡಿಗರನ್ನು ಕಂಡವನೇ ಭುಜದ ಮೇಲಿನ ವಸ್ತ್ರವನ್ನು ಸೊಂಟಕ್ಕೆ ಸುತ್ತಿ ಉದ್ದಂಡ ನಮಸ್ಕಾರ ಮಾಡುತ್ತಾನೆ. ಎದ್ದು ನಿಂತವನು ಮುದುಡಿ ನಿಲ್ಲುತ್ತಾನೆ  ಮುಖದಲ್ಲಿ ದೈನೇಸಿ ಭಾವ, ಆರ್ದ್ರ ಭಾವ, ಭಕ್ತಿ ಭಾವಗಳ ಸಮ್ಮೇಳನ. ಆತನ ವಿನಯತೆಗೆ ಹಿರಿಯೊಬ್ಬರು ಹೆಸರು ಕೇಳುತ್ತಾರೆ. ಹೆಸರು ಹೇಳುವ ಹೊತ್ತಿಗಾಗಲೇ ಭಾವುಕನಾಗುವ ಆತನ ಕಣ್ಗಳಲ್ಲಿ ಭಾಷ್ಪ. ಆ ಸಿನಿಮಾದಲ್ಲಿ ಅದೊಂದು ದೃಶ್ಯವನ್ನು ರಿವೈಂಡ್ ಮಾಡಿ ಎಷ್ಟು ಸಲ ನೋಡಿದ್ದೇನೊ ನೆನಪಿಲ್ಲ.

    ಅದೊಂದು ಸಿನಿಮಾ ಎಂದಲ್ಲ. ಆದರೆ ರಾಜಕುಮಾರ್ ಅಭಿನಯದ ಅದೆಷ್ಟೋ ಸಿನಿಮಾಗಳು ಪರಿಪೂರ್ಣ ನಟನೆಯ ಉದಾಹರಣೆಗಳು ಎನ್ನುವುದಂತೂ ಸತ್ಯ. ಬಾಲ್ಯದಲ್ಲಿ ಭಯಂಕರ ವಿಷ್ಣುವರ್ಧನ ಅಭಿಮಾನಿಯಾಗಿದ್ದ ನನಗೆ ವೈಯಕ್ತಿಕವಾಗಿ ರಾಜಕುಮಾರ್ ಸಿನಿಮಾಗಳ ಮಹತ್ವ ಅರಿವಾಗಿದ್ದು ಕನ್ನಡ ಸಿನಿರಂಗ ಭಯಂಕರ ಬೆಳೆಯುತ್ತಿದೆ ಎನ್ನುವ ಭ್ರಮೆಯಲ್ಲಿ ನಡೆಯುವ ಕಾಲಕ್ಕೆ. ಎಲ್ಲ ಸೌಲಭ್ಯಗಳಿದ್ದುಕೊಂಡೂ ‘ನಾನು  ಕೈ ಎತ್ತಿದರೆ ಪ್ರಳಯ ಆಗುತ್ತೆ, ಕಾಲೆತ್ತಿದರೆ ಸುನಾಮಿ ಬರುತ್ತೆ’ ಎನ್ನುವ ಮಹಾನಾಯಕರ ಸಿನಿಮಾಗಳ ಕಾಲಕ್ಕೂ ತುಂಬ ಮುಂಚಿನ ಕಾಲದವರು ನಟಸಾರ್ವಭೌಮ. ಆ ಕಾಲಕ್ಕೆ ತಮಗಿದ್ದ ಸೀಮಿತ ಸೌಲಭ್ಯಗಳಲ್ಲಿಯೇ ಅದ್ಭುತ ಸೃಷ್ಟಿಗಳನ್ನು ನಮ್ಮೆದುರಿಗಿಟ್ಟವರು ರಾಜ್. ಇದನ್ನೂ ಓದಿ:‘ಪುಷ್ಪ’ ಟೀಮ್‌ಗೆ ED ಶಾಕ್ ಕೊಟ್ಟ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ನಿರ್ಮಾಪಕ

    ತೀರ ಕಮರ್ಷಿಯಲ್ ಎನ್ನಿಸುವ ಸಿನಿಮಾಗಳಲ್ಲಿಯೂ ಅದೆಷ್ಟೋ ಚಂದದ ಫಿಲಾಸಫಿಯನ್ನ , ಸಣ್ಣಸಣ್ಣ ಸಂದೇಶವನ್ನು ಕೊಟ್ಟವರು ರಾಜಣ್ಣ. ಕೆಲವು ಸಿನಿಮಾಗಳ ಸನ್ನಿವೇಶಗಳನ್ನು ನೋಡುವಾಗ ನನಗೆ ಕೇವಲ ರಾಜ್ ಮಾತ್ರವಲ್ಲದೇ ಸಾಮಾಜಿಕ ಅವ್ಯವಸ್ಥೆಗಳ ಕುರಿತು, ಸಮುದಾಯದ ಮನಸ್ಥಿತಿಯ ಕುರಿತು ಆವತ್ತಿನ ಸಿನಿರಂಗಕ್ಕಿದ್ದ ಸ್ಪಷ್ಟತೆಯ ಬಗೆಗೂ ಒಂದು ಮೆಚ್ಚುಗೆ ಹುಟ್ಟಿಕೊಳ್ಳುತ್ತದೆ. ಸುಮ್ಮನೇ ‘ಮೇಯರ್ ಮುತ್ತಣ್ಣ’ ಸಿನಿಮಾದ ದೃಶ್ಯಗಳನ್ನು ನೆನಪಿಸಿಕೊಳ್ಳಿ. ‘ಬಡತನದ ಗುಡಿಸಲುಗಳ ಮುಂದೆ ಕಸದ ತಿಪ್ಪೆಗಳು’ ಎನ್ನುತ್ತ ಸಿರಿವಂತರನ್ನು ದೂಷಿಸುವ ದ್ವಾರಕೀಶರನ್ನು ಕಂಡು ನಕ್ಕುಬಿಡುವ ಮುತ್ತಣ್ಣನನ್ನ ಕಲ್ಪಿಸಿಸಿಕೊಳ್ಳಿ. ‘ದೇವರು ಬಡತನ ಕೊಟ್ಟಿದಾನೆ ನಿಜ, ಆದರೆ ಕೊಳಕಾಗಿರಿ ಅಂತ ಹೇಳಿದಾನಾ..? ಇಷ್ಟು ಸಣ್ಣ ಗುಡಿಸಲನ್ನೇ ಸ್ವಚ್ಛವಾಗಿಟ್ಟುಕೊಳ್ಳೊಕೆ ಬರದವರು, ಅಷ್ಟು ದೊಡ್ಡ ಬಂಗಲೆಯನ್ನ ಸ್ವಚ್ಛವಾಗಿಟ್ಟುಕೊಳ್ಳೊಕೆ ಬರುತ್ತಾ’ ಎನ್ನುತ್ತ ನಿಮ್ಮ ಯೋಗ್ಯತೆಯೇ ಇಷ್ಟು ಕಣ್ರಯ್ಯಾ  ಎನ್ನುವ ಧಾಟಿಯಲ್ಲಿ ವ್ಯಂಗ್ಯವಾಡುವ ರಾಜಕುಮಾರರ ಧಾಟಿಗೆ ಎಷ್ಟೋ ಸಲ ನನಗೆ ಅಚ್ಚರಿಯಾಗಿದ್ದಿದೆ.

    ಬಡತನ ಶಾಪ, ಬಡವರು ಮಾಡಿದ್ದೆಲ್ಲವೂ ಸರಿಯೇ ಎಂಬ ಧೋರಣೆಯೇ ನಡುವೆ, ‘ಇಲ್ಲ, ತಪ್ಪು ನಿಮ್ಮಲ್ಲಿಯೂ ಇದೆ’ ಎಂದು ತೋರಿಸಿದ್ದು ಇದೇ ರಾಜಕುಮಾರ್ ಅಲ್ಲವಾ..? ಭಕ್ತ ಕುಂಬಾರ ಸಿನಿಮಾದಲ್ಲಿ ನಾಯಿಯೊಂದು ಅವರ ಬುತ್ತಿ ಕಸಿದು ಓಡುವಾಗ ಅದನ್ನು ನಿಲ್ಲಿಸಿ ಅದರೆದರು ಬುತ್ತಿ ಬಿಚ್ಚಿಟ್ಟು ನೀರು ತಂದುಕೊಟ್ಟು ,’ಇದರ ತೃಪ್ತಿ , ಪಾಂಡುರಂಗನ ತೃಪ್ತಿ’ ಎಂದಾಗ ಅದೆಷ್ಟು ಅಭಿಮಾನಿಗಳಲ್ಲೊಂದು ಪ್ರಾಣಿ ಪ್ರೀತಿ ಹುಟ್ಟಿಸಿರಲಿಕ್ಕೆ ಸಾಕು ರಾಜ್..? ಕೇವಲ ನಟನೆಯಿಂದ ಮಾತ್ರವಲ್ಲ. ಬಹುಶಃ ಇಂತಹಹತ್ತಾರು ಕಾರಣಗಳಿಗೂ ರಾಜಕುಮಾರ್ ಕನ್ನಡ ಸಿನಿರಂಗ ಕಂಡ ಅದ್ಭುತ ಕಲಾವಿದನೇ.

  • ಅಣ್ಣಾವ್ರ 94ನೇ ಜನ್ಮದಿನ: ಸ್ಮಾರಕಕ್ಕೆ ಹರಿದುಬಂದ ಅಭಿಮಾನಿ ಸಾಗರ

    ಅಣ್ಣಾವ್ರ 94ನೇ ಜನ್ಮದಿನ: ಸ್ಮಾರಕಕ್ಕೆ ಹರಿದುಬಂದ ಅಭಿಮಾನಿ ಸಾಗರ

    ರನಟ ಡಾ.ರಾಜ್ ಕುಮಾರ್ (Dr. Rajkumar) ಅವರ 94ನೇ ಜನ್ಮದಿನವನ್ನು (Birthday) ನಾಡಿನಾದ್ಯಂತ ಅಭಿಮಾನಿಗಳು (Fans) ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ನೆಚ್ಚಿನ ನಟನ ಹೆಸರಿನಲ್ಲಿ ರಕ್ತದಾನ, ಅನ್ನದಾನ ಹಾಗೂ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ಆಚರಿಸುತ್ತಿದ್ದಾರೆ. ನಿನ್ನೆಯಷ್ಟೇ ಅಣ್ಣಾವ್ರ ಮೊಮ್ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದ ಅಭಿಮಾನಿಗಳು ಇಂದು ಮೇರುನಟನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

    ಕೆಲ ಅಭಿಮಾನಿಗಳು ಇದ್ದೂರಿನಲ್ಲೇ ಹುಟ್ಟು ಹಬ್ಬ ಆಚರಿಸುತ್ತಿದ್ದರೆ, ಇನ್ನೂ ಹಲವರು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ (Kantheerava Studio) ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದಲೇ ಸ್ಮಾರಕಕ್ಕೆ ಅಭಿಮಾನಿಗಳು ದಂಡು ಹರಿದು ಬಂದಿದೆ. ಸ್ಮಾರಕದ ಮುಂದೆಯೇ ಅನ್ನಸಂತರ್ಪಣೆ, ಕೇಕ್ ಕತ್ತರಿಸುವುದು ಹಾಗೂ ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ:ಹನಿಮೂನ್‌ಗೆ ವಿದೇಶಕ್ಕೆ ಹಾರಿದ ಸಿಂಹಪ್ರಿಯಾ ಜೋಡಿ

    ಡಾ.ರಾಜ್ ಕುಟುಂಬದ ಸದಸ್ಯರು ಕೂಡ ಆಗಮಿಸಿ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಪಕ್ಕದಲ್ಲೇ ಇರುವ ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಸಮಾಧಿಗಳಿಗೂ ಪೂಜೆ ಸಲ್ಲಿಸಲಿದ್ದಾರೆ. ಅಣ್ಣಾವ್ರ ಅಭಿಮಾನಿಗಳ ಜೊತೆ ಕುಟುಂಬದ ಸದಸ್ಯರು ಕೆಲವೊತ್ತು ಇರಲಿದ್ದಾರೆ.

  • ವೈರಲ್ ಆಯ್ತು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಫೋಟೋ

    ವೈರಲ್ ಆಯ್ತು ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಫೋಟೋ

    ಪುನೀತ್ ರಾಜ್ ಕುಮಾರ್ ನಿಧನದ ನಂತರ ಆ ಕುಟುಂಬ ಮತ್ತು ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವುದು ಪುನೀತ್ ಪತ್ನಿ ಅಶ್ವಿನಿ ಅವರು. ಅಪ್ಪು ಬದುಕಿದ್ದಾಗಲೇ ಪಿ.ಆರ್.ಕೆ ಪ್ರೊಡಕ್ಷನ್ ಹೌಸ್ ಮತ್ತು ಆಡಿಯೋ ಕಂಪೆನಿಗಳ ವ್ಯವಹಾರವನ್ನು ಅಶ್ವಿನಿ ಅವರೇ ನೋಡಿಕೊಳ್ಳುತ್ತಿದ್ದರು. ಇದೀಗ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಪುನೀತ್ ಅವರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿನವೂ ಹೊಸ ಹೊಸ ನಿರ್ದೇಶಕರನ್ನು ಭೇಟಿ ಮಾಡುತ್ತಲೇ ಇರುತ್ತಾರಂತೆ ಅಶ್ವಿನಿ.

    ಹೊಸ ಸಿನಿಮಾಗಳ ತಯಾರಿ, ಸಿನಿಮಾ ಸಂಬಂಧಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಅಶ್ವಿನಿ ಅವರು ಬೆಂಗಳೂರಿನ ಗಾಂಧಿನಗರದಲ್ಲಿರುವ ತಮ್ಮ ಆಫೀಸಿಗೆ ನಿತ್ಯವೂ ಬರುತ್ತಾರೆ. ಆ ಆಫೀಸಿನಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರ ಫೋಟೋವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿದ್ದಾರೆ. ಹೀಗಾಗಿ ಡಾ.ರಾಜ್ ಕುಟುಂಬದ ಅಭಿಮಾನಿಗಳು ‘ಸೊಸೆ ಆಫ್ ಪಾರ್ವತಮ್ಮ’ ಟ್ಯಾಗ್ ಲೈನ್ ನಲ್ಲಿ ಆ ಫೋಟೋವನ್ನು ವೈರಲ್ ಮಾಡಿದ್ದಾರೆ. ಇದನ್ನೂ ಓದಿ : ಚಾಮುಂಡಿ ದರ್ಶನ ಮುಗಿಸಿ ಮೈಸೂರಿನಲ್ಲಿ ಉಪಾಧ್ಯಕ್ಷನನ್ನು ಭೇಟಿಯಾದ ಶಿವರಾಜ್ ಕುಮಾರ್

    ಡಾ.ರಾಜ್ ಕುಮಾರ್ ಅವರ ಶಕ್ತಿಯಾಗಿ ನಿಂತುಕೊಂಡು ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ಸಾಕಷ್ಟು ಸಿನಿಮಾಗಳನ್ನು ಮಾಡಿದರು ಪಾರ್ವತಮ್ಮ ರಾಜ್ ಕುಮಾರ್. ಕನ್ನಡ ಸಿನಿಮಾಗಳಿಗೆ ಒಂದು ಘನತೆ ತಂದುಕೊಟ್ಟರು. ಪುನೀತ್ ರಾಜ್ ಕುಮಾರ್ ಅವರಿಗೂ ಅಶ್ವಿನಿ ಅವರು ಶಕ್ತಿಯಾಗಿಯೇ ನಿಂತುಕೊಂಡು ಪಿ.ಆರ್.ಕೆ ಪ್ರೊಡಕ್ಷನ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸಬರನ್ನು ಪರಿಚಯಿಸಿದರು. ಹೀಗಾಗಿ ಪಾರ್ವತಮ್ಮನವರನ್ನು ಅಶ್ವಿನಿ ಅವರಲ್ಲಿ ಕಾಣುತ್ತಿದ್ದಾರೆ ಅಭಿಮಾನಿಗಳು.

    Live Tv

  • ಫಿಲ್ಮ್ ಚೇಂಬರ್ ನಲ್ಲಿ ಅಕ್ರಮ : ಬಾಂಬ್ ಸಿಡಿಸಿದ ರಾಜೇಂದ್ರ ಸಿಂಗ್ ಬಾಬು

    ಫಿಲ್ಮ್ ಚೇಂಬರ್ ನಲ್ಲಿ ಅಕ್ರಮ : ಬಾಂಬ್ ಸಿಡಿಸಿದ ರಾಜೇಂದ್ರ ಸಿಂಗ್ ಬಾಬು

    ನಾಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಈ ಬಾಂಬ್ ಸದ್ಯ ಸಿನಿಮಾ ರಂಗದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಅಲ್ಲದೇ, ವಾಣಿಜ್ಯ ಮಂಡಳಿಯಲ್ಲೂ ಹೀಗೂ ಆಗಿದೆಯಾ ಎನ್ನುವ ಪ್ರಶ್ನೆ ಎದ್ದಿದೆ. ಇದನ್ನೂ ಓದಿ : ಹಾಲಿವುಡ್ ಖ್ಯಾತ ನಟ ರೇ ಲಿಯೊಟ್ಟಾ ಮಲಗಿದ್ದಾಗಲೇ ನಿಧನ

    ಐದಾರು ತಿಂಗಳು ಹಿಂದೆಯಷ್ಟೇ ರಾಜೇಂದ್ರ ಸಿಂಗ್ ಬಾಬು ಮತ್ತು ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕರು ಮತ್ತು ನಿರ್ದೇಶಕರು ಫಿಲ್ಮ್ ಚೇಂಬರ್ ಗೆ ಹೋಗಿದ್ದರಂತೆ. ಅಷ್ಟೂ ಜನರು ಫಿಲ್ಮ್ ಚೇಂಬರ್ ನಲ್ಲಿ ಆದ ಅಕ್ರಮದ ಕುರಿತು ದೂರು ನೀಡಿದರಂತೆ. ಆದರೆ, ಹಾಲಿ ಇರುವ ಕಮೀಟಿಯಿಂದ ಯಾವುದೇ ಉತ್ತರ ಬಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ  : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್

    ಮಾಧ್ಯಮಗಳ ಜೊತೆ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು ಅವರು, ‘ನಾವೆಲ್ಲ ವಾಣಿಜ್ಯ ಮಂಡಳಿಗೆ ಹೋಗಿ ಕಾಫಿ ಮಿಷನ್ ಗಾಗಿ 26 ಸಾವಿರ ಖರ್ಚು ಮಾಡಿದ್ದೀರಿ. ಬಾತ್ ರೂಮ್ ಕಟ್ಟಲು 26 ಲಕ್ಷ, ಇನ್ನಾವುದೋ ಕಾರಣಕ್ಕಾಗಿ 40 ಲಕ್ಷ ಖರ್ಚು ಮಾಡಲಾಗಿದೆ. ಅಲ್ಲದೇ, ನಾನಾ ರೀತಿಯಲ್ಲಿ ಹಣ ದುರ್ಬಳಕೆ ಆಗಿದೆ. ಇದಕ್ಕೆ ಉತ್ತರ ಕೊಡಿ ಎಂದು ಕೇಳಿದೆವು. ಯಾರಿಂದಲೂ ಉತ್ತರ ಬರಲಿಲ್ಲ’ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ

    ಇದೇ ಸಂದರ್ಭದಲ್ಲಿ ಏಳು ವಾರ ಬಿಟ್ಟು ಬೇರೆ ಭಾಷೆಯ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗಲಿ ಅಂತ ಡಾ.ರಾಜ್ ಕುಮಾರ್ ಅವರ ನೇತೃತ್ವದಲ್ಲಿ ಹೋರಾಟ ಮಾಡಿದೆವು. ವಿಧಾನ ಸಭೆಯ ಮುತ್ತಿಗೆ ಹಾಕಿದೆವು. ಇದೇ ಫಿಲ್ಮ್ ಚೇಂಬರ್ ನವರು ಆಗ ನಮ್ಮ ಹೋರಾಟದ ವಿರುದ್ಧ ಕೋರ್ಟಿಗೆ ಹೋಗಲು ಸಿದ್ಧರಾಗಿದ್ದರು. ಫಿಲ್ಮ್ ಚೇಂಬರ್ ಕನ್ನಡ ಪರವಾಗಿ ಕೆಲಸ ಮಾಡಬೇಕು ಎಂದು ಚುನಾವಣಾ ಸಂದರ್ಭದಲ್ಲಿ ಹಲವು ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.