Tag: ಡಾ.ರಾಜ್‍ಕುಮಾರ್

  • ದೊಡ್ಮನೆ ಕುಡಿ ಯುವರಾಜ್‌ಕುಮಾರ್ ಲಾಂಚ್‌ಗೆ ಕೌಂಟ್‌ಡೌನ್: ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

    ದೊಡ್ಮನೆ ಕುಡಿ ಯುವರಾಜ್‌ಕುಮಾರ್ ಲಾಂಚ್‌ಗೆ ಕೌಂಟ್‌ಡೌನ್: ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

    ಣ್ಣಾವ್ರ ಕುಟುಂಬದ ಕುಡಿ ಯುವರಾಜ್‌ಕುಮಾರ್(Yuva Rajkumar) ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದೆ. ಅದ್ಯಾವಾಗ ಜ್ಯೂ.ಪವರ್ ಸ್ಟಾರ್ ಎಂಟ್ರಿಯಾಗುತ್ತೋ ಅಂತಾ ಕಾತುರದಿಂದ ಫ್ಯಾನ್ಸ್ ಕಾಯ್ತಿದ್ದಾರೆ. ಇತ್ತೀಚೆಗಷ್ಟೇ ಯುವ ಚಿತ್ರದ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್(Santhosh Anandram) ಅತೀ ಶೀಘ್ರದಲ್ಲಿ ಬರುವುದಾಗಿ ಅಪ್‌ಡೇಟ್ ನೀಡಿದ್ದರು. ಈ ಬೆನ್ನಲ್ಲೇ ಮತ್ತಷ್ಟು ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ.

    ಯುವರಾಜ್ ಅಪ್ಪುನಂತೆ ಪವರ್‌ಸ್ಟಾರ್‌ನಂತೆ ಮಿಂಚುತ್ತಾರೆ ಎಂಬ ಗಟ್ಟಿ ನಂಬಿಕೆಯಲ್ಲಿ ಅಪ್ಪು ಫ್ಯಾನ್ಸ್ ಇದ್ದಾರೆ. ಆ ನಂಬಿಕೆಗೆ ಎಲ್ಲೂ ಲೋಪವಾಗಬಾರದು ಎಂದು ಯುವರಾಜ್‌ಕುಮಾರ್ ಕೂಡ ತೆರೆಮರೆಯಲ್ಲಿ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡ್ತಿದ್ದಾರೆ.

    Yuvaraj Kumar

    ಯುವರಾಜ್‌ಕುಮಾರ್ ಅವರ ಚೊಚ್ಚಲ ಸಿನಿಮಾ ಸಂತೋಷ್ ಆನಂದ್‌ರಾಮ್ ಅವರ ಜೊತೆಯೇ ಬರಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಅದರಂತೆ ಹೊಂಬಾಳೆ ಸಂಸ್ಥೆಯಡಿ ಯುವ ಮತ್ತು ಸಂತೋಷ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಲೇಟ್ ಆದರೂ ಯುವ ಗ್ರ್ಯಾಂಡ್‌ ಎಂಟ್ರಿ ಕೊಡಲಿದ್ದಾರೆ.‌ ಇದನ್ನೂ ಓದಿ:ಪತಿ ರಘು ಮುಖರ್ಜಿ ಮಾತಿಗೆ ಕಣ್ಣೀರಿಟ್ಟ ಅನುಪ್ರಭಾಕರ್

    ಪುನೀತ್ ಅವರ ಭರವಸೆಯ ಪ್ರತಿರೂಪ ಯುವರಾಜ್‌, ಈಗ ಅವರ ಸಿನಿಮಾಗಾಗಿ ಕೌಂಟ್‌ಡೌನ್ ಶುರುವಾಗಿದೆ. ಯುವನ ಚಿತ್ರ ಅನೌನ್ಸ್ ಆಗಿ ತಡವಾಗುತ್ತಿರುವ ಕಾರಣ ಏನು ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಡಿಸೆಂಬರ್‌ನಲ್ಲಿ ಚಿತ್ರದ ಮುಹೂರ್ತ ಫಿಕ್ಸ್ ಆಗಿದೆ. ದೊಡ್ಮನೆಗೆ ಸರಿಹೊಂದುವ ಟೈಟಲ್ ಸಮೇತ ಚಿತ್ರದ ಬಗ್ಗೆ ಅನೌನ್ಸ್‌ ಮಾಡಲಿದ್ದಾರೆ. ಜನವರಿಯಲ್ಲೇ ಚಿತ್ರೀಕರಣ ಆರಂಭವಾಗುತ್ತದೆ. ಮುಂದಿನ ವರ್ಷ 2023ರಲ್ಲಿ ಯುವನ ಚೊಚ್ಚಲ ಸಿನಿಮಾ ತೆರೆಗೆ ಅಬ್ಬರಿಸಲಿದೆ. ಪವರ್‌ಫುಲ್ ಕಥೆ, ಖಡಕ್ ಟೈಟಲ್ ಜೊತೆ ಯುವ ಬರಲಿದ್ದಾರೆ. ಕೆಲವೇ ದಿನಗಳಲ್ಲಿ ರಾಜವಂಶದ ಕುಡಿ ಯುವ ಸಿನಿಮಾ ಸುದ್ದಿಯ ಕುರಿತು ಮಾಹಿತಿ ನೀಡಲಿದೆ. ಯುವನ ರಾಜ್ಯಭಾರಕ್ಕೆ ಕೌಂಟ್‌ಡೌನ್ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಣ್ಣಾವ್ರ ಕುಟುಂಬದ ಜೊತೆಗಿನ ನೆನಪು ಹಂಚಿಕೊಂಡ ಕಮಲ್ ಹಾಸನ್

    ಅಣ್ಣಾವ್ರ ಕುಟುಂಬದ ಜೊತೆಗಿನ ನೆನಪು ಹಂಚಿಕೊಂಡ ಕಮಲ್ ಹಾಸನ್

    ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ ಜೂನ್ 3ಕ್ಕೆ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಈ ವೇಳೆ ಕಮಲ್ ಹಾಸನ್ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ವೇಳೆ ಡಾ.ರಾಜ್‌ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

    `ವಿಕ್ರಮ್’ ಚಿತ್ರದ ಪೋಸ್ಟರ್ ಲುಕ್, ಟ್ರೇಲರ್‌ನಿಂದ ಸಿಕ್ಕಾಪಟ್ಟೆ ಮೋಡಿ ಮಾಡುತ್ತಿದೆ. ಇನ್ನೇನು ತೆರೆಗೆ ಅಪ್ಪಳಿಸಲು ಒಂದೇ ದಿನ ಬಾಕಿಯಿದೆ. ಈ ಸಂದರ್ಭದಲ್ಲಿ ನಟ ಕಮಲ್ ಹಾಸನ್ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಕಮಲ್ ಹಾಸನ್‌ಗೆ ಕನ್ನಡ ಚಿತ್ರರಂಗದ ಜತೆ ಮತ್ತು ಇಲ್ಲಿನ ಸ್ಟರ‍್ಸ್ಗಳ ಜೊತೆ ಉತ್ತಮ ಬಾಂದವ್ಯವಿದೆ. ಹಾಗೇಯೇ ಡಾ.ರಾಜ್‌ಕುಮಾರ್ ಜೊತೆ ಒಳ್ಳೆಯ ಸ್ನೇಹ ಸಂಬಂಧ ಹೊಂದಿರುವ ನಟ ಈಗ ಅಣ್ಣಾವ್ರ ಜತೆಗಿನ ಹಳೆಯ ನೆನಪನ್ನು ತೆರೆದಿಟ್ಟಿದ್ದಾರೆ. ಇದನ್ನೂ ಓದಿ: ಹಿಂದಿ ಕಿರುತೆರೆಗೆ ಜಯರಾಂ ಕಾರ್ತಿಕ್ ಕಂಬ್ಯಾಕ್

    ಕಾಲಿವುಡ್ ಸ್ಟಾರ್ ಆಗಿರುವ ಕಮಲ್ ಹಾಸನ್ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಣ್ಣಾವ್ರು ನಾನು 21ನೇ ವಯಸ್ಸಿನಲ್ಲಿದ್ದಾಗ ನನ್ನ ನಟನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. `ಪುಷ್ಪಕವಿಮಾನ’ ಚಿತ್ರದ ಮೊದಲ ದಿನದ ಶೂಟಿಂಗ್‌ಗೆ ಡಾ.ರಾಜ್‌ಕುಮಾರ್ ಅವರು ಬಂದು ಬೆನ್ನು ತಟ್ಟಿದ್ದರು ಎಂದು ಹಳೆಯ ನೆನಪನ್ನ ಕಮಲ್ ಹಾಸನ್ ಮೆಲುಕು ಹಾಕಿದ್ದಾರೆ.

    ನನಗೆ ಕರ್ನಾಟಕ ಸಾಕಷ್ಟು ಗುರುಗಳನ್ನು ಕೊಟ್ಟಿದೆ. ಬೇರೆ ಅವರನ್ನು ನಾವು ಹೇಗೆ ಗೌರವಿಸಬೇಕು ಅಂತಾ ಕಲಿತಿದ್ದೆ ಡಾ.ರಾಜ್‌ಕುಮಾರ್ ಅವರಿಂದ, ಅವರ ಈ ಗುಣವನ್ನು ಅವರ ಮಕ್ಕಳಿಗೂ ಕಲಿಸಿದ್ದಾರೆ. ನಾನು ಪುನೀತ್ ಮತ್ತು ಅಣ್ಣಾವ್ರು ಇಬ್ಬರನ್ನು ಮಿಸ್ ಮಾಡಿಕೊಳ್ಳುತ್ತೇನೆ ಈ ವೇಳೆ ವಿಕ್ರಮ್ ಚಿತ್ರದ ನಟ ಕಮಲ್ ಹಾಸನ್ ಮಾತನಾಡಿದ್ದಾರೆ.

  • ಹುಟ್ಟುಹಬ್ಬದಂದು ಅಣ್ಣಾವ್ರ ನೆನೆದ RCB

    ಹುಟ್ಟುಹಬ್ಬದಂದು ಅಣ್ಣಾವ್ರ ನೆನೆದ RCB

    ಬೆಂಗಳೂರು: ಏಪ್ರಿಲ್ 24ರ ದಿನ ಕನ್ನಡಿಗರ ಪಾಲಿನ ಹೆಮ್ಮೆಯ ದಿನ. ಏಕೆಂದರೆ ಇಂದು ಕನ್ನಡ ಚಿತ್ರರಂಗದ ದಿಗ್ಗಜ ಡಾ.ರಾಜ್‌ಕುಮಾರ್ ಅವರ ಜನ್ಮದಿನ.

    ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರ ಪುತ್ರ ಮುತ್ತುರಾಜ್ ಆಗಿ ಚಿತ್ರರಂಗ ಪ್ರವೇಶಿಸಿದರು. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಹಲವು ದಾಖಲೆಗಳನ್ನೇ ನಿರ್ಮಿಸಿದವರು ರಾಜ್‌ಕುಮಾರ್. ಕನ್ನಡ ನಾಡು, ನುಡಿಯ ಬಗ್ಗೆ ಅವರಿಗಿದ್ದ ಪ್ರೀತಿ ಮತ್ತು ಕಾಳಜಿಯಿಂದಾಗಿ ಅವರು ಕನ್ನಡಿಗರ ಮನೆ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್‌ ನೆನೆದು ತಂಗಿ ಕಣ್ಣೀರು

    ಹೀಗೆ ಅಭಿಮಾನಿಗಳ ಹಾಗೂ ಕನ್ನಡ ಪ್ರೇಮಿಗಳ ಆರಾಧ್ಯ ದೈವವಾಗಿ ಸ್ಥಾನ ಪಡೆದುಕೊಂಡಿರುವ ಡಾ.ರಾಜ್‌ಕುಮಾರ್ ಅವರ ಜನ್ಮದಿನವಾದ ಇಂದು ಹಲವಾರು ರಾಜಕೀಯ ಗಣ್ಯರು, ಚಲನಚಿತ್ರ ನಟ-ನಟಿಯರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತಿದ್ದಾರೆ. #ಡಾ.ರಾಜ್‌ಕುಮಾರ್ ಹ್ಯಾಶ್‌ಟ್ಯಾಗ್‌ನೊಂದಿಗೆ ಟಾಪ್‌ಟ್ರೆಂಡಿಗ್‌ನಲ್ಲಿ ರಾಜ್ ಕಂಗೊಳಿಸುತ್ತಿದ್ದಾರೆ.

    ಈ ಸಾಲಿಗೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಹ ಸೇರಿಕೊಂಡಿದ್ದು, ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಯಲ್ಲಿ ಡಾ.ರಾಜ್‌ಕುಮಾರ್ ಜನ್ಮದಿನದ ವಿಶೇಷ ಪೋಸ್ಟ್ ಹಂಚಿಕೊಳ್ಳುವ ಮೂಲಕ ಶುಭ ಕೋರಿ, ಕನ್ನಡಿಗರ ಹೃದಯ ಗೆದ್ದಿದ್ದಾರೆ. ಇದನ್ನೂ ಓದಿ: ಉಪ್ಪಿ-ಆರ್‌ಜಿವಿ ಕಾಂಬಿನೇಷನ್ ಹೊಸ ಚಿತ್ರ: `ಐ ಆ್ಯಮ್ ಆರ್’ ಫಸ್ಟ್ ಲುಕ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ಡಾ.ರಾಜ್‌ಕುಮಾರ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ `ನಾವಾಡುವ ನುಡಿಯೇ ಕನ್ನಡ ನುಡಿ’, ನಟ ಸಾರ್ವಭೌಮ, ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ.ರಾಜ್‌ಕುಮಾರ್ ಅವರ 93ನೇ ಜನ್ಮಮಹೋತ್ಸವದ ನೆನಪಿನಲ್ಲಿ’ ಎಂದು ಬರೆದುಕೊಂಡಿದ್ದು, ಅಣ್ಣಾವ್ರ ದಿನವನ್ನು ಆರ್‌ಸಿಬಿ ಸ್ಮರಿಸಿದೆ.

    ಅಲ್ಲದೆ ಇದೇ ದಿನದಂದು ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬವೂ ಇದ್ದು, ತೆಂಡೂಲ್ಕರ್ ಅವರಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳ ಮೂಲಕ ಶುಭಾಶಯ ಕೋರಿದೆ.

  • ಕರ್ಮಭೂಮಿಯಿಂದ ಪುಣ್ಯ ಭೂಮಿವರೆಗೂ ಅಮರ ಜ್ಯೋತಿ ಯಾತ್ರೆ: ಡಾ.ರಾಜ್ ಸಹೋದರಿ ನಾಗಮ್ಮರಿಂದ ಚಾಲನೆ

    ಕರ್ಮಭೂಮಿಯಿಂದ ಪುಣ್ಯ ಭೂಮಿವರೆಗೂ ಅಮರ ಜ್ಯೋತಿ ಯಾತ್ರೆ: ಡಾ.ರಾಜ್ ಸಹೋದರಿ ನಾಗಮ್ಮರಿಂದ ಚಾಲನೆ

    ಚಾಮರಾಜನಗರ: ಏಪ್ರಿಲ್ 24 ರಂದು ದಿವಂಗತ ಮೇರುನಟ ಡಾ.ರಾಜ್‍ಕುಮಾರ್ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಅವರ ಜನ್ಮಸ್ಥಳದಿಂದ ಸಮಾಧಿಯವರೆಗೆ ಅಮರ ಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಡಾ.ರಾಜ್ ಹಾಗೂ ಡಾ.ಪುನೀತ್ ರಾಜ್‍ಕುಮಾರ್ ಅವರ ಅಮರಜ್ಯೋತಿ ಯಾತ್ರೆಯನ್ನು ರಾಜ್ ಹುಟ್ಟೂರು ದೊಡ್ಡಗಾಜನೂರಿನಲ್ಲಿ ಇಂದು(ಗುರುವಾರ) ಚಾಲನೆ ನೀಡಲಾಯಿತು.

    ಗಾಜನೂರಿನಲ್ಲಿರುವ ಡಾ.ರಾಜ್ ಸಹೋದರಿ ನಾಗಮ್ಮರಿಂದ ಜ್ಯೋತಿ ಬೆಳಗಿಸಿ ಹಸ್ತಾಂತರಿಸುವ ಮೂಲಕ ಕರ್ಮಭೂಮಿಯಿಂದ ಪುಣ್ಯಭೂಮಿವರೆಗಿನ ಅಮರಜ್ಯೋತಿ ಯಾತ್ರೆ ಮೆರವಣಿಗೆಗೆ ಚಾಲನೆ ನೀಡಿದರು. ದೊಡ್ಮನೆ ಕುಟುಂಬದ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿರುವ ಈ ಯಾತ್ರೆ ಇಂದು ಗಾಜನೂರಿನಿಂದ ಹೊರಟು ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಮೂಲಕ ತೆರಳಿ ಏಪ್ರಿಲ್ 24 ರಂದು ಬೆಂಗಳೂರಿಗೆ ತೆರಳಿ ರಾಜ್ ಹಾಗೂ ಪುನೀತ್‍ ರಾಜ್‍ಕುಮಾರ್ ಸಮಾಧಿ ತಲುಪಲಿದೆ. ಇದನ್ನೂ ಓದಿ:  ಧ್ವಂಸಗೊಂಡ ಅಪ್ಪನ ಅಂಗಡಿಯಲ್ಲಿ ಕಾಯಿನ್ ಸಂಗ್ರಸುತ್ತಿದ್ದ ಬಾಲಕ – ಫೋಟೋ ವೈರಲ್ 

    ಡಾ.ರಾಜ್ ಹಾಗೂ ಡಾ.ಪುನೀತ್ ರಾಜ್‍ಕುಮಾರ್ ಎಂದೆಂದಿಗೂ ಅಮರ ಎಂದು ಸಾರಲು ಹಾಗೂ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಆಶಿಸಿ ಈ ಅಮರ ಜ್ಯೋತಿ ಯಾತ್ರೆ ನಡೆಸಲಾಗುತ್ತಿದೆ ಎಂದು ದೊಡ್ಮನೆ ಕುಟುಂಬದ ಅಭಿಮಾನಿಗಳ ಬಳಗದ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.