Tag: ಡಾ.ರಾಜಕುಮಾರ್

  • ಸಂಬಂಧಗಳು ಇಂದು ಗಟ್ಟಿಯಾಗಿ ಉಳಿದಿದೆ ಅಂದ್ರೆ ಅಪ್ಪಾಜಿ ಸಿನಿಮಾಗಳೇ ಕಾರಣ: ಶಿವಣ್ಣ

    ಸಂಬಂಧಗಳು ಇಂದು ಗಟ್ಟಿಯಾಗಿ ಉಳಿದಿದೆ ಅಂದ್ರೆ ಅಪ್ಪಾಜಿ ಸಿನಿಮಾಗಳೇ ಕಾರಣ: ಶಿವಣ್ಣ

    ಡಾ.ರಾಜ್‌ಕುಮಾರ್ 19ನೇ ಪುಣ್ಯಸ್ಮರಣೆ ಹಿನ್ನೆಲೆ ಇಂದು (ಏ.12) ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಸ್ಮಾರಕಕ್ಕೆ ಅಭಿಮಾನಿಗಳು, ಕುಟುಂಬಸ್ಥರು ಭೇಟಿ ನೀಡಿದ್ದಾರೆ. ರಾಘಣ್ಣ, ಶಿವಣ್ಣ, ಅಶ್ವಿನಿ ಪುನೀತ್‌ರಾಜ್‌ಕುಮಾರ್ ಆಗಮಿಸಿ ಅಪ್ಪಾಜಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಅಣ್ಣಾವ್ರರನ್ನು ನೆನೆದು ಶಿವಣ್ಣ (Shivarajkumar) ಭಾವುಕರಾಗಿದ್ದಾರೆ. ಇದನ್ನೂ ಓದಿ:ಇಸ್ರೇಲ್‌ನಿಂದ ರಕ್ಷಿಸಿದ್ದಕ್ಕೆ ಪಿಎಂಗೆ ಥ್ಯಾಂಕ್ಯೂ ಎಂದ ನಟಿ ನುಶ್ರತ್ ಭರೂಚಾ

    ಅಣ್ಣಾವ್ರ (Rajkumar) ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಶಿವಣ್ಣ ಮಾತನಾಡಿ, ಒಂದು ಬಾರಿ ಹಚ್ಚೆ ಹಾಕಿಸಿಕೊಂಡ್ರೆ ಹೇಗೆ ಹೋಗೋದಿಲ್ಲೋ ಹಾಗೇ ಅಭಿಮಾನಿಗಳಿಗೆ ಅವರ ಮೇಲಿನ ಅಭಿಮಾನ ಹೋಗಲ್ಲ. ಅಪ್ಪಾಜಿ ಮಾಡಿರೋ ಕಲಾ ಸೇವೆಯಿಂದ ಇವತ್ತಿಗೂ ಅಭಿಮಾನ ಹಾಗೆ ಉಳಿಸಿಕೊಂಡಿದೆ. ಇದನ್ನೂ ಓದಿ:RCB ಅಂದ್ರೆ ಜೀವ, ನಮ್ಮ ಪ್ರಾಣ: ಶಿವಣ್ಣ ಗುಣಗಾನ

    ರಾಜಕೀಯವಾಗಿ ಯೋಚಿಸದೇ ಗೋಕಾಕ್ ಚಳುವಳಿಯಲ್ಲಿ ಅಪ್ಪಾಜಿ ಭಾಗವಹಿಸಿದ್ದರು. ಸದಾ ನೆಲ, ಜಲ, ಭಾಷೆ ಅಂತಾ ಬಂದಾಗ ಅವರು ಮುಂದೆ ಇರೋರು. ಅದಕ್ಕೂ ದೇವರ ಕೃಪೆ ಬೇಕು. ಇಂತಹ ತಂದೆಗೆ ನಾವು ಮಕ್ಕಳಾಗಿರೋದು ಹೆಮ್ಮೆ ಅನಿಸುತ್ತದೆ. ಈ ಚಿಕ್ಕ ಮಕ್ಕಳನ್ನ ಕೇಳಿದ್ರು ರಾಜ್‌ಕುಮಾರ್ ಯಾರು ಅಂತಾ ಹೇಳುತ್ತಾರೆ. ಅಪ್ಪಾಜಿ ಪಾಠದ ಹಾಗೆ ಅಭಿಮಾನ ಜಾಸ್ತಿ ಆಗುತ್ತೆ ಹೊರತು ಎಂದಿಗೂ ಕಮ್ಮಿಯಾಗಲ್ಲ. ಇಂದು ಸಂಬಂಧಗಳು ಗಟ್ಟಿಯಾಗಿ ಉಳಿದಿದೆ ಅಂದರೆ ಅಪ್ಪಾಜಿ ಸಿನಿಮಾಗಳೇ ಕಾರಣ ಎಂದಿದ್ದಾರೆ.

    ಈ ವೇಳೆ, ಆರೋಗ್ಯ ಈಗ ಚೆನ್ನಾಗಿದೆ. ಡ್ಯಾನ್ಸ್ ಶುರು ಮಾಡಿದ್ದೀನಿ. ಐದಾರು ತಿಂಗಳು ವಿಶ್ರಾಂತಿ ಪಡೆದಿದ್ದೇನೆ. ಆದರೆ ನಾನು ಬೇಗನೇ ರಿಕವರಿ ಆಗಿದ್ದೇನೆ. ರಾಮ್ ಚರಣ್ ನಟನೆಯ ಸಿನಿಮಾದ ಶೂಟಿಂಗ್‌ನಲ್ಲಿ ಎರಡು ದಿನ ಭಾಗವಹಿಸಿ ಬಂದಿದ್ದೇನೆ. ನನ್ನ 131ನೇ ಸಿನಿಮಾ ಪವನ್ ಒಡೆಯರ್ ಜೊತೆ ಶುರು ಮಾಡಬೇಕು ಎಂದು ಆರೋಗ್ಯ ಹಾಗೂ ಸಿನಿಮಾ ಬಗ್ಗೆ ಶಿವಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.

  • ಡಾ.ರಾಜ್ ಹಾದಿಯಲ್ಲಿ ನಿರ್ದೇಶಕ ಭಗವಾನ್ : ನಾಲ್ಕು ಜನಕ್ಕೆ ನೇತ್ರದಾನ

    ಡಾ.ರಾಜ್ ಹಾದಿಯಲ್ಲಿ ನಿರ್ದೇಶಕ ಭಗವಾನ್ : ನಾಲ್ಕು ಜನಕ್ಕೆ ನೇತ್ರದಾನ

    ರನಟ ಡಾ.ರಾಜ್ ಕುಮಾರ್ (Dr. Rajkumar) ಕುಟುಂಬದೊಂದಿಗೆ ಆತ್ಮೀಯ ಬಾಂಧವ್ಯ ಇಟ್ಟುಕೊಂಡಿದ್ದರು ನಿರ್ದೇಶಕ ಎಸ್.ಕೆ.ಭಗವಾನ್ (Bhagavan). ಅಣ್ಣಾವ್ರು ಎಲ್ಲಿರುತ್ತಿದ್ದರೋ ಅಲ್ಲಿ ಭಗವಾನ್ ಇರಲೇಬೇಕಿತ್ತು. ಅಷ್ಟರ ಮಟ್ಟಿಗೆ ಡಾ.ರಾಜ್ ಕುಮಾರ್ ಜೊತೆ ಭಗವಾನ್ ಹೊಂದಿಕೊಂಡಿದ್ದರು. ಇದೀಗ ಭಗವಾನ್ ಅವರು ಅಣ್ಣಾವ್ರ ಹಾದಿಯನ್ನೇ ತುಳಿದಿದ್ದಾರೆ. ಡಾ.ರಾಜ್ ಕುಮಾರ್, ಪುನೀತ್ ರಾಜಕುಮಾರ್ (Puneeth Rajkumar) ರೀತಿಯಲ್ಲೇ ಭಗವಾನ್ ಕೂಡ ನೇತ್ರದಾನ (eye donation) ಮಾಡಿದ್ದಾರೆ.

    ರಾಜಕುಮಾರ್ ಅವರು ನೇತ್ರದಾನಕ್ಕೆ ನೋಂದಣಿ ಮಾಡಿಸಿದ ಸಂದರ್ಭದಲ್ಲೇ ಭಗವಾನ್ ಕೂಡ ತಮ್ಮ ಹೆಸರನ್ನು ನೋಂದಾಯಿಸಿದ್ದರಂತೆ. ಹಾಗಾಗಿ ಇಂದು ಅವರ ಮರಣಾನಂತರ ಕಣ್ಣಿನ ಕಾರ್ನಿಯಾವನ್ನು ತೆಗೆಯಲಾಗಿದೆ. ನಾರಾಯಣ ನೇತ್ರಾಲಯದ ಐ ಬ್ಯಾಂಕ್ ಮ್ಯಾನೇಜರ್ ವೀರೇಶ್ ಕಣ್ಣು ತೆಗೆದ ನಂತರ ಮಾತನಾಡಿ, ‘ಭಗವಾನ್ ಅವರ ಕಾರ್ನಿಯಾ ಆರೋಗ್ಯವಾಗಿದೆ. ಕಣ್ಣಿಗೆ ಯಾವುದೇ ಸಮಸ್ಯೆ ಇರಲಿಲ್ಲವಾದ್ದರಿಂದ ನಾಲ್ಕೈದು ಜನರಿಗೆ ದೃಷ್ಟಿ ಸಿಗಬಹುದು’ ಎಂದಿದ್ದಾರೆ. ಇದನ್ನೂ ಓದಿ:ನಟ ನಂದಮೂರಿ ತಾರಕ ರತ್ನ ಇನ್ನಿಲ್ಲ

    1966ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದ ಭಗವಾನ್, ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರ ನಿರ್ದೇಶಕರಾದವರು. 1993ರಲ್ಲಿ ದೊರೈರಾಜ್ ನಿಧನದ ನಂತರ ಒಂಟಿಯಾದರು ಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ  ನಿರ್ದೇಶನ ಮಾಡಿದೆ.

    ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಅಷ್ಟೂ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k