Tag: ಡಾ.ಯತೀಂದ್ರ

  • ಆ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ: ಸಿದ್ದರಾಮಯ್ಯ ಸ್ಪಷ್ಟನೆ

    ಆ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ: ಸಿದ್ದರಾಮಯ್ಯ ಸ್ಪಷ್ಟನೆ

    ಮೈಸೂರು: ಡಾ. ಯತೀಂದ್ರ ವೈರಲ್ ವೀಡಿಯೋದಲ್ಲೂ ಉಲ್ಲೇಖವಾಗಿದ್ದ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಡಾ.ಯತೀಂದ್ರ ಸಿದ್ದರಾಮಯ್ಯ ವೀಡಿಯೋ ಕುರಿತು ಪ್ರತಿಕ್ರಿಯಿಸಿದರು. ಆ ವಿವೇಕಾನಂದ (Vivekananda) ಬೇರೆ ಈ ವಿವೇಕಾನಂದ ಬೇರೆ. ಅವರು ಬಿಐಓ, ಇವರು ಇನ್ಸ್ ಪೆಕ್ಟರ್. ಬಿಇಓ ನಮ್ಮ ಕ್ಷೇತ್ರವರು ಈಗ ವರ್ಗಾವಣೆ ಆಗಿರುವುದು ಚಾಮರಾಜ ಕ್ಷೇತ್ರ ವ್ಯಾಪ್ತಿ. ಯಾರು ವರ್ಗಾವಣೆ ಮಾಡಿಸಿಕೊಂಡರು ಅನ್ನುವುದನ್ನು ಸ್ಥಳೀಯ ಶಾಸಕರನ್ನು ಕೇಳಿ ಎಂದು ವಿವೇಕಾನಂದ ಹೆಸರಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

    ಈ ಹಿಂದೆ ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಂಡಿದ್ದ ವಿವೇಕಾನಂದ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ರಾಜ್ಯಾದ್ಯಂತ ಸದ್ದು ಮಾಡಿದ್ದ ಯತೀಂದ್ರ (Yathindra Siddaramaiah) ವಿಡಿಯೋದಲ್ಲಿ ವಿವೇಕಾನಂದ ಹೆಸರು ಪ್ರಸ್ತಾಪವಾಗಿತ್ತು. ವಿವೇಕಾನಂದನಾ? ಎಲ್ಲಿಗೆ? ಎಂದು ಯತೀಂದ್ರ ಪ್ರಶ್ನೆ ಮಾಡಿದ್ದರು.

    ನಾನು ಕೊಟ್ಟಿದ್ದ 4-5 ಮಾತ್ರ ಮಾಡಿ ಎಂದು ಯತೀಂದ್ರ ಹೇಳಿದ್ದರು. ಈಗ ಮೈಸೂರಲ್ಲಿ ನಾಲ್ವರು ಇನ್ಸ್ ಪೆಕ್ಟರ್ ಗಳ ವರ್ಗಾವಣೆ ನಡೆದಿದ್ದು ಈ ನಾಲ್ವರಲ್ಲಿ ಒಬ್ಬರ ಹೆಸರು ವಿವೇಕಾನಂದ ಆಗಿದ್ದರಿಂದ ಇವರೇನಾ ಅವರು ಎಂಬ ಪ್ರಶ್ನೆ ಎದ್ದಿತ್ತು. ಇದನ್ನೂ ಓದಿ: ಮೈಸೂರಿಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ ವಿವೇಕಾನಂದ ವರ್ಗಾವಣೆ – ಯತೀಂದ್ರ ಪ್ರಸ್ತಾಪಿಸಿದ್ದ ವಿವೇಕಾನಂದ ಇವರೇನಾ?

  • ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ಕರೆದೊಯ್ದ ಪುತ್ರ ಯತೀಂದ್ರ

    ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ಕರೆದೊಯ್ದ ಪುತ್ರ ಯತೀಂದ್ರ

    ಬೆಂಗಳೂರು: ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಆರೋಗ್ಯ ತಪಾಸಣೆಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದು, ಪುತ್ರ ಯತೀಂದ್ರ ಅವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಸಿದ್ದರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ವೈದ್ಯರ ಸಲಹೆ ಮೇರೆಗೆ ತಪಾಸಣೆಗೆ ಒಳಗಾಗುತ್ತಿದ್ದು, ಪುತ್ರ ಡಾ.ಯಂತೀಂದ್ರ ಸಿದ್ದರಾಮಯ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ತಪಾಸಣೆ ನಂತರ ಅಡ್ಮಿಟ್ ಆಗಲು ಹೇಳಿದರೆ 2 ದಿನಗಳ ಕಾಲ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಕೋವಿಡ್ ಕೇಂದ್ರದಲ್ಲಿ ಯೋಗ ಟೀಚರ್ ಆದ ರೇಣುಕಾಚಾರ್ಯ

    ಮಣಿಪಾಲ್ ಆಸ್ಪತ್ರೆಯಲ್ಲಿ ವೈದ್ಯರು ಸಿಟಿ ಸ್ಕ್ಯಾನ್ ಮಾಡಲಿದ್ದು, ತಪಾಸಣೆ ನಂತರ ಆಸ್ಪತ್ರೆಗೆ ಅಡ್ಮಿಟ್ ಆಗಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲಿದ್ದಾರೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಆರೋಗ್ಯ ತಪಾಸಣೆಗಾಗಿ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರಿಗೆ ಕೊರೊನಾ ಸೋಂಕು ತಗುಲಿತ್ತು, ಬಳಿಕ ಗುಣಮುಖರಾಗಿದ್ದರು.

  • ಸಿದ್ದರಾಮಯ್ಯ ಪುತ್ರ ಸಂಚರಿಸ್ತಿದ್ದ ಕಾರು ಡಿಕ್ಕಿ- ಬೈಕ್ ಸವಾರನಿಗೆ ಗಾಯ

    ಸಿದ್ದರಾಮಯ್ಯ ಪುತ್ರ ಸಂಚರಿಸ್ತಿದ್ದ ಕಾರು ಡಿಕ್ಕಿ- ಬೈಕ್ ಸವಾರನಿಗೆ ಗಾಯ

    ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಟಕುರ್ಕಿ ಗ್ರಾಮದಲ್ಲಿ ನಡೆದಿದೆ.

    ಪ್ರವಾಹದಿಂದ ತತ್ತರಿಸಿದ್ದ ಬಾದಾಮಿಯ ಜನತೆಯ ಅಹವಾಲು ಸ್ವೀಕರಿಸಲು ಯತೀಂದ್ರ ಅವರು ಬೆಂಬಲಿಗ ಜೋಗಿನ್ ಅವರ ಕಾರಿನಲ್ಲಿ ಬಂದಿದ್ದರು. ಈ ವೇಳೆ ಕಾರು, ಈರಣ್ಣ ಪಟ್ಟಣಶೆಟ್ಟಿ ಅನ್ನೋರ ಬೈಕ್ ಗೆ ಡಿಕ್ಕಿ ಹೊಡೆದಿದೆ.

    ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ರಸ್ತೆ ಪಕ್ಕದ ಹೊಲಕ್ಕೆ ಹೋಗಿ ಬಿದ್ದಿದ್ದಾರೆ. ಘಟನೆಯಲ್ಲಿ ಬೈಕ್ ಸವಾರ ಈರಣ್ಣ ಪಟ್ಟಣಶೆಟ್ಟಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ. ಗಾಯಾಳುವನ್ನು ಕೂಡಲೇ ಬಾಗಲಕೊಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಘಟನೆ ಬಳಿಕ ಅಧಿಕಾರಿಗಳಿಗೆ ಗಾಯಾಳು ಬೈಕ್ ಸವಾರನ ಚಿಕಿತ್ಸೆ ಬಗ್ಗೆ ಗಮನ ಹರಿಸುವಂತೆ ಶಾಸಕ ಡಾ.ಯತೀಂದ್ರ ಅವರು ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ.

  • ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಾರಿಗೆ ಕೈ ಕಾರ್ಯಕರ್ತರಿಂದ ಮುತ್ತಿಗೆ

    ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಾರಿಗೆ ಕೈ ಕಾರ್ಯಕರ್ತರಿಂದ ಮುತ್ತಿಗೆ

    ಮೈಸೂರು: ಕಾಂಗ್ರೆಸ್ ಸೇರ್ಪಡೆ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾರಿಗೆ ಮುತ್ತಿಗೆ ಹಾಕಿದ್ದಾರೆ.

    ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕಿರಸಗೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಟಿ.ನರಸೀಪುರ ತಾಲೂಕಿನ ಹುಣಸೂರು ಗ್ರಾಮದ ಕಾಂಗ್ರ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಕಿರಸಗೂರು ಹಾಗೂ ಹುಣಸೂರು ಎರಡೂ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜಿಸಿದ್ದರು.

    ಈ ವೇಳೆ ಡಾ. ಯತೀಂದ್ರ ಕಿರಸಗೂರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಹುಣಸೂರಿಗೆ ಆಗಮಿಸದೆ ತೆರಳುತ್ತಿದ್ದರು. ಇದರಿಂದ ಅಸಮಾಧಾನ ವ್ಯಕ್ತಪಡಿಸಿ ಹುಣಸೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಯತೀಂದ್ರ ಕಾರನ್ನು ಅಡ್ಡ ಹಾಕಿದರು. ಆದರೂ ಕಾರ್ಯಕರ್ತರ ಮನವಿಗೆ ಸ್ಪಂದಿಸದೆ ಕಾರಿನಿಂದ ಇಳಿಯದೆ ಡಾ.ಯತೀಂದ್ರ ತೆರಳಿದರು.

    ಇದರಿಂದ ಕೋಪಗೊಂಡ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಚಾರದ ವೇಳೆ ಮಗನನ್ನು ನೆನೆದು ಭಾವುಕರಾದ ಸಿಎಂ

    ಪ್ರಚಾರದ ವೇಳೆ ಮಗನನ್ನು ನೆನೆದು ಭಾವುಕರಾದ ಸಿಎಂ

    ಮೈಸೂರು: ವರುಣಾದಲ್ಲಿ ತಮ್ಮ ಮಗ ಡಾ. ಯತೀಂದ್ರ ಪರ ಪ್ರಚಾರ ಮಾಡ್ತಿರೋ ಸಿಎಂ ಸಿದ್ದರಾಮಯ್ಯ ಇಂದು ಭಾವುಕರಾದ್ರು.

    ನನ್ನ ಮಗ ರಾಕೇಶ್ ನೆನೆಪಾಗ್ತಿದ್ದಾನೆ. ಅವನಿದ್ದಿದ್ರೆ ಪ್ರಚಾರಕ್ಕೆ ಬರ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರವನ್ನು ಅವನೇ ನೋಡಿಕೊಳ್ಳುತ್ತಿದ್ದ. ಆದ್ರೆ ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಅವನು ಕಾಯಿಲೆ ಇತ್ತು, ಸತ್ತು ಹೋದ ಅಂತ ಮಗನನ್ನು ನೆನೆಪಿಸಿಕೊಂಡು ಕಣ್ಣೀರು ಹಾಕಿದ್ರು.

    ನಾನು ವರುಣಾದಲ್ಲಿ 30 ಸಾವಿರ ವೋಟುಗಳ ಅಂತರದಿಂದ ಗೆದ್ದಿದ್ದೇನೆ. ಅದಕ್ಕಿಂತ ಹೆಚ್ಚು ಮತಗಳಿಂದ ಯತೀಂದ್ರ ಗೆಲ್ತಾನೆ ಅಂತ ಮುಖ್ಯಮಂತ್ರಿ ಭಾವುಕ ಭಾಷಣ ಮಾಡಿದ್ರು.

    ಮಣ್ಣಿನ ಮಗನಿಗೆ ಮತ ಹಾಕ್ತಿರೋ? ಅವನ್ಯಾರಿಗೋ ಮತ ಹಾಕ್ತೀರಾ? ಅವನಿಗೂ ಕ್ಷೇತ್ರಕ್ಕೂ ಸಂಬಂಧ ಏನು? ಅವರ ಮಗ, ಇವರ ಮಗ ಅಂದವ್ರಿಗೆ ಮತ ಹಾಕ್ತೀರಾ? ವರುಣಾ ಮತ್ತು ಚಾಮುಂಡೇಶ್ವರಿ ನನ್ನ ಕಣ್ಣು ಅಂತ ಸಿದ್ದರಾಮಯ್ಯ ಯಡಿಯೂರಪ್ಪರ ಕಿರಿಯ ಮಗ ವಿಜಯೇಂದ್ರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ರು.

  • ಕಾಂಗ್ರೆಸ್‍ನಲ್ಲಿ ಇರಬೇಕೋ ಬಿಜೆಪಿ ಸೇರಬೇಕೋ ದ್ವಂದ್ವದಲ್ಲಿ ನಾನು ಇದ್ದೇನೆ: ಎಲ್ ರೇವಣಸಿದ್ದಯ್ಯ

    ಕಾಂಗ್ರೆಸ್‍ನಲ್ಲಿ ಇರಬೇಕೋ ಬಿಜೆಪಿ ಸೇರಬೇಕೋ ದ್ವಂದ್ವದಲ್ಲಿ ನಾನು ಇದ್ದೇನೆ: ಎಲ್ ರೇವಣಸಿದ್ದಯ್ಯ

    ಮೈಸೂರು: ಮಾಜಿ ಪೋಲಿಸ್ ಅಧಿಕಾರಿ ಲಿಂಗಾಯತ ಮುಖಂಡ ಎಲ್ ರೇವಣಸಿದ್ದಯ್ಯ ಅವರು ಬಹಿರಂಗವಾಗಿ ಕಾಂಗ್ರೆಸ್ ಮತ್ತು ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿಎಂಗಾಗಿ ನನ್ನ ಸಮುದಾಯದ ವಿರೋಧ ಕಟ್ಟಿಕೊಂಡು ಪ್ರಚಾರ ಮಾಡಿದೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದೆ. ಸಿದ್ದರಾಮಯ್ಯ ಗೆದ್ದ ನಂತರ ನನಗೆ ಸೂಕ್ತ ಪ್ರೋತ್ಸಾಹ ಸಿಗಲಿಲ್ಲ. ಇದು ನನಗೆ ಬೇಸರ ಮೂಡಿಸಿದೆ ಎಂದರು.

    ನನಗೆ ಕಾಂಗ್ರೆಸ್ ನಲ್ಲಿ ಬೇಸರವಾಗಿದೆ. ಆದರೆ ಯಾವ ಕಾರಣಕ್ಕೆ ಬೇಸರ ಎಂದು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಕಾಂಗ್ರೆಸ್‍ನಲ್ಲಿ ಇರಬೇಕೋ ಬಿಜೆಪಿ ಸೇರಬೇಕೋ ಎಂಬ ದ್ವಂದ್ವ ದಲ್ಲಿ ನಾನಿರುವುದು ಸತ್ಯ ಎಂದು ಸ್ಪಷ್ಟಪಡಿಸಿದರು.

    ಸಿಎಂ ಜೊತೆ ಮಾತನಾಡುತ್ತೇನೆ. ನನಗಾಗಿರುವ ನೋವುಗಳನ್ನು ಅವರ ಮುಂದೆ ಹೇಳುತ್ತೇನೆ. ತದನಂತರದಲ್ಲಿ ಮುಂದಿನ ರಾಜಕೀಯ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ. ಭಾವನಾತ್ಮಕವಾದ ನೋವುಗಳು ನನಗೆ ಆಗಿವೆ ಎಂದರು.

    ಡಾ. ಯತೀಂದ್ರ ಅವರು ಪ್ರತಿಕ್ರಿಯಿಸಿ, ರೇವಣ್ಣಸಿದ್ದಯ್ಯ ಅವರಿಗೆ ಅಸಮಾಧಾನವಾಗಿರುವುದು ಸತ್ಯ. ಹಾಗಾಗಿ ಇಂದು ಮಾತುಕತೆಗೆ ಬಂದಿದ್ದೇನೆ. ತಂದೆಯ ಸೂಚನೆ ಮೇರೆಗೆ ಮಾತುಕತೆಗೆ ಬಂದಿದ್ದೇನೆ. ನಮ್ಮ ತಂದೆ ರೇವಣ್ಣಸಿದ್ದಯ್ಯ ಜೊತೆ ಮಾತನಾಡಿದ ತಕ್ಷಣ ಸಮಸ್ಯೆ ಬಗೆಹರಿಯುತ್ತದೆ. ರೇವಣ್ಣಸಿದ್ದಯ್ಯ ಅವರು ಕಾಂಗ್ರೆಸ್ ಬಿಡುವುದಿಲ್ಲ. ನನ್ನ ಪರವಾಗಿ ಪ್ರಚಾರ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಭಾನುವಾರ ಬಿಎಸ್‍ವೈ ಪುತ್ರ ಬಿವೈ ವಿಜಯೇಂದ್ರ ಅವರು ರೇವಣಸಿದ್ದಯ್ಯ ಅವರನ್ನು ಭೇಟಿ ಮಾಡಿದ್ದರು. ಈ ಭೇಟಿ ಬಳಿಕ ರೇವಣಸಿದ್ದಯ್ಯ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರತೊಡಗಿದೆ.

  • ನನ್ನ ಕ್ಷೇತ್ರದಲ್ಲಿ ಸಿಎಂ ಮಗ ಬಂದು ಕಾಮಗಾರಿಗೆ ಚಾಲನೆ ನೀಡ್ತಾರೆ- ಜಿಟಿಡಿ ಆಕ್ರೋಶ

    ನನ್ನ ಕ್ಷೇತ್ರದಲ್ಲಿ ಸಿಎಂ ಮಗ ಬಂದು ಕಾಮಗಾರಿಗೆ ಚಾಲನೆ ನೀಡ್ತಾರೆ- ಜಿಟಿಡಿ ಆಕ್ರೋಶ

    ಬೆಂಗಳೂರು: ಮುಖ್ಯಮಂತ್ರಿ ಪುತ್ರ ಡಾ ಯತೀಂದ್ರ ವಿರುದ್ಧ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    ನನ್ನ ಕ್ಷೇತ್ರದಲ್ಲಿ ಕಾರ್ಯಕ್ರಮಗಳಿಗೆ ಭಾಗವಹಿಸಲು ಅವಕಾಶ ನೀಡ್ತಿಲ್ಲ. ಮುಖ್ಯಮಂತ್ರಿಗಳ ಮಗ ಬಂದು ಕಾಮಗಾರಿಗೆ ಚಾಲನೆ ನೀಡ್ತಾರೆ. ಮುಖ್ಯಮಂತ್ರಿ ಇಲ್ಲೇ ಸ್ಪರ್ಧೆ ಮಾಡ್ತಾರೆ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಅವರ ಆಪ್ತ ಮರೀಗೌಡ ಧಮ್ಕಿ ಹಾಕ್ತಾರೆ. ಪೊಲೀಸರನ್ನು ಬಿಟ್ಟು ಕೇಸ್ ಹಾಕ್ತಾರೆ ಅಂತ ವಿಧಾನಸಭೆಯಲ್ಲಿ ಜಿಟಿ ದೇವೇಗೌಡ ವಾಗ್ದಾಳಿ ನಡೆಸಿದ್ರು.

    ಇತ್ತ ನನ್ನ ಮಗ ಕಾರ್ಯಕ್ರಮಕ್ಕೆ ಹೋಗಿದ್ದಾನೋ ಇಲ್ವೋ ಅಂತ ನನಗೆ ಗೊತ್ತಿಲ್ಲ ಅಂತ ಸಿಎಂ ಹೇಳಿದ್ರೂ ನಂತರ ಹೋಗಿದ್ದಾನೆ ಅಂದ್ರು. ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಜಿಟಿಡಿ ಹಕ್ಕುಚ್ಯುತಿ ಮಂಡನೆಗೆ ಮುಂದಾದ್ರು. ಆಗ ಸದನದಲ್ಲಿ ಆಡಳಿತ-ವಿಪಕ್ಷ ಸದಸ್ಯರ ನಡುವೆ ಗಲಾಟೆ ನಡೆಯಿತು.

    (more…)

  • ನ.3 ರಂದು ಕರ್ನಾಟಕದ ಖಾಸಗಿ ಆಸ್ಪತ್ರೆ ವೈದ್ಯರಿಂದ ಮುಷ್ಕರ

    ನ.3 ರಂದು ಕರ್ನಾಟಕದ ಖಾಸಗಿ ಆಸ್ಪತ್ರೆ ವೈದ್ಯರಿಂದ ಮುಷ್ಕರ

    ಬೆಂಗಳೂರು: ದುಬಾರಿ ಶುಲ್ಕ ವಿಧಿಸುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು `ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ-2017′ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ನವೆಂಬರ್ 3 ರಂದು ಮುಷ್ಕರ ನಡೆಸಲಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವೈದ್ಯ ಸಂಘದ ಅಧ್ಯಕ್ಷ ಡಾ. ರವೀಂದ್ರ, ಇದೇ ವಿಚಾರವಾಗಿ ಜೂನ್ 16 ರಂದೇ ಪ್ರತಿಭಟನೆ ನಡೆಸಿದ್ದೇವೆ. ಅಂದು ಸಿಎಂ ಸೇರಿದಂತೆ ಆರೋಗ್ಯ ಸಚಿವರನ್ನೂ ಸಹ ಭೇಟಿ ಮಾಡಿದ್ದು, ಆದರೆ ಅವರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ನವೆಂಬರ್ 3 ರಂದು ನಾವು ಮುಷ್ಕರ ನಡೆಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

    ಸರ್ಕಾರ ಈಗ ಹೊಸದಾಗಿ ಕುಂದು ಕೊರತೆ ಪರಿಹಾರ ಸಮಿತಿ ಜಾರಿ ತರಲು ನಿರ್ಧಾರ ಮಾಡಿದ್ದಾರೆ. ಆದರೆ ಇದರಲ್ಲಿ ಯಾವ ವೈದ್ಯರ ವಿರುದ್ಧ ದೂರು ಹೂಡಿದ್ದಾರೋ, ಆ ವೈದ್ಯರು ಲಾಯರ್ ನೇಮಕ ಮಾಡುವ ಹಾಗಿಲ್ಲ. ಅಂದರೆ ಕಸಬ್ ನಂತಹ ದೇಶ ದ್ರೋಹಿಗೆ ಲಾಯರ್ ಇಟ್ಟುಕೊಳ್ಳಲು ಅವಕಾಶ ಇರುವ ನಮ್ಮ ದೇಶದಲ್ಲಿ, ವೈದ್ಯರಿಗೆ ಯಾಕೆ ಅವಕಾಶವಿಲ್ಲ ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

    ವೈದ್ಯರಿಗೆ ದಂಡ ಹಾಗೂ ಜೈಲಿಗಟ್ಟುವ ನೀವು ವೈದ್ಯರಿಗೆ ಯಾವ ರೀತಿ ಗೌರವ ನೀಡುತ್ತೀರಾ? ನವೆಂಬರ್ 3 ರಂದು ಸಾಂಕೇತಿಕವಾಗಿ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ. ಸರ್ಕಾರ ಆಗಲೂ ಮಾತುಕತೆಗೆ ಮುಂದಾಗದಿದ್ದರೆ. ನವೆಂಬರ್ 9 ಮತ್ತು 10 ರಂದು ವೈದ್ಯ ವೃತ್ತಿಯನ್ನು ತ್ಯಜಿಸುತ್ತೇವೆ. ಕರ್ನಾಟಕದಲ್ಲಿ 40 ರಿಂದ 50 ಸಾವಿರ ಖಾಸಗಿ ಆಸ್ಪತ್ರೆಗಳಿವೆ. ಆದರೆ ಸರ್ಕಾರಿ ಆಸ್ಪತ್ರೆಯನ್ನೇ ಸರಿಯಾಗಿ ವ್ಯವಸ್ಥಿತವಾಗಿ ಕಾಪಾಡಿಕೊಳ್ಳದ ಸರ್ಕಾರ, ಖಾಸಗಿ ಆಸ್ಪತ್ರೆಯತ್ತ ಬೊಟ್ಟುಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಸಿಎಂ ಸಿದ್ದರಾಮಯ್ಯನವರ ಮಗ ಡಾ. ಯತೀಂದ್ರ ಅವರೂ ವೈದ್ಯರೇ, ನಾನು ಅವರ ಜೊತೆಯಲ್ಲಯೂ ಮಾತನಾಡಿದ್ದೇನೆ. ಆಯಾಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತೇವೆ. ಯಾವುದೇ ಶಸ್ತ್ರ ಚಿಕಿತ್ಸೆ ನಡೆಸುವುದಿಲ್ಲ. ಸರ್ಕಾರಿ ಆಸ್ಪತ್ರೆ ಸರಿ ಇದ್ದಿದ್ದರೆಜನರು ಏಕೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ನಮ್ಮ ಪ್ರತಿಭಟನೆ ವಿಚಾರವನ್ನು ಯತೀಂದ್ರ ಅವರು ತಂದೆಯ ಜೊತೆಗೆ ಮಾತಾನಾಡೋದಾಗಿ ಹೇಳಿದ್ದಾರೆಂದು ರವೀಂದ್ರ ಅವರು ತಿಳಿಸಿದ್ದಾರೆ.

    ಮಗ ಯತೀಂದ್ರ ಮಾತಿಗೆ ಮಣಿದ ಸಿಎಂ ಸಿದ್ದರಾಮಯ್ಯ ಈಗ ಮಾತುಕತೆಗೆ ಮುಂದಾಗಿದ್ದು, ನವೆಂಬರ್ 2 ರಂದು 10 ಗಂಟೆಯ ವೇಳೆಗೆ ವೈದ್ಯರ ಜೊತೆ ಮಾತುಕತೆಗೆ ಅವಕಾಶ ನೀಡಿದ್ದಾರೆ.