Tag: ಡಾ. ಪುನೀತ್ ರಾಜ್ ಕುಮಾರ್
-

ದಿ. ಪುನೀತ್‍ಗೆ ಕರ್ನಾಟಕ ರತ್ನ ಪ್ರಶಸ್ತಿ- ಮನೆ ಮನೆಗೆ ಕನ್ನಡ ಧ್ವಜ ಫ್ರೀ
ಚಿಕ್ಕೋಡಿ (ಬೆಳಗಾವಿ): ಕರ್ನಾಟಕ ರಾಜ್ಯೋತ್ಸವ ಹಾಗೂ ದಿವಂಗತ ಡಾ. ಪುನೀತ್ ರಾಜಕುಮಾರ್ (Dr. Puneeth Raj Kumar) ಅವರಿಗೆ ಕರ್ನಾಟಕ ರತ್ನ (Karnataka Ratna) ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ನೌಕರರೆಲ್ಲ ಸೇರಿ ಪ್ರತಿ ಮನೆಗೆ ಕನ್ನಡ ಧ್ವಜ ನೀಡಿ ಅಪ್ಪುಗೆ ಗೌರವ ಸಲ್ಲಿಸಿದ್ದಾರೆ.

ಗ್ರಾಮದ ಪ್ರತಿ ಮನೆಗಳಿಗೂ ಕನ್ನಡ ಧ್ವಜ (Kannada Flag) ನೀಡಿ ಧ್ವಜಾರೋಹಣ ಮಾಡುವ ಕಾರ್ಯವನ್ನ ನೇರಲಿ ಗ್ರಾಮ ಪಂಚಾಯತಿ ವತಿಯಿಂದ ಮಾಡಲಾಗಿದೆ. ರಾಜ್ಯೋತ್ಸವ ದಿನದಂದು ನೇರಲಿ ಗ್ರಾಮದ ಪ್ರತಿ ಮನೆ ಮನೆಗಳಲ್ಲೂ ಕನ್ನಡ ಬಾವುಟ ರಾರಾಜಿಸುತ್ತಿತ್ತು. ಇದನ್ನೂ ಓದಿ: ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

ಪವರ್ ಸ್ಟಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ದೊರಕಿದ್ದು, ಇಡೀ ಗ್ರಾಮಕ್ಕೆ ಅಲ್ಲದೇ ರಾಜ್ಯಕ್ಕೆ ಸಂತಸ ತಂದಿದೆ ಎಂದು ಗ್ರಾಮ ಪಂಚಾಯತಿ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true] -

ಇವತ್ತು ನಾನು ನಿರ್ದೇಶಕನಾಗಿರಲು ಅಪ್ಪುನೇ ಕಾರಣ: ಜೇಮ್ಸ್ ಡೈರೆಕ್ಟರ್
ಬೆಂಗಳೂರು: ಇವತ್ತು ನಾನು ನಿರ್ದೇಶಕನಾಗಿರಲು ಅವರೇ ಕಾರಣ. ಒಂದು ವರ್ಷ ಹೇಗೆ ಕಳೆದಿದೆ ಅನ್ನೋದೆ ಗೊತ್ತಾಗುತ್ತಿಲ್ಲ ಎಂದು ಜೇಮ್ಸ್ ನಿರ್ದೇಶಕ (James Director) ಮಹೇಶ್ ಬಾಬು (Mahesh Babu) ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪುನೀತ್ (Puneeth Raj Kumar) ಸರ್ ಇಲ್ಲ ಅನ್ನೋದನ್ನ ಇನ್ನೂ ನಂಬೋಕೆ ಆಗುತ್ತಿಲ್ಲ. ನಾನು ಕೂಡ ಸಾಕಷ್ಟು ಚಿತ್ರಗಳಲ್ಲಿ ಅವರ ಜೊತೆ ಕೆಲಸ ಮಾಡಿದೆ. ಇವತ್ತು ನಾನು ನಿರ್ದೇಶಕನಾಗಿರಲು ಅವರೇ ಕಾರಣ. ಒಂದು ವರ್ಷ ಹೇಗೆ ಕಳೆದಿದೆ ಅನ್ನೋದೆ ಗೊತ್ತಾಗುತ್ತಿಲ್ಲ. ಅವರು ಇದ್ದಗಲೂ ಸಾಕಷ್ಟು ಜನರಿಗೆ ಮಾದರಿಯಾಗಿದ್ರು, ಅಗಲಿದ ಬಳಿಕವು ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಗಂಧದಗುಡಿ ಮೂಲಕವು ಸಾಕಷ್ಟು ಜನರಿಗೆ ಪ್ರೇರೇಪಿತರಾಗಿದ್ದಾರೆ ಎಂದರು.

ಇದೇ ವೇಳೆ ನಿರ್ದೇಶಕ ಚೇತನ್ (Director Chetan) ಮಾತನಾಡಿ, ಕೊನೆಯ ಚಿತ್ರ ನಿರ್ದೇಶನ ಸಂದರ್ಭದಲ್ಲಿ ಅಪ್ಪು ಸರ್ ಕೊನೆಯ ದಿನಗಳಲ್ಲಿ ನಾನು ಜೊತೆಗಿದ್ದೆ. ಅಗಲಿಕೆಗೂ ಮೂರು ದಿನ ಮುನ್ನ ಅವರ ಮನೆಯಲ್ಲೇ ಫೋಟೋಶೂಟ್ ಮಾಡಿದ್ದೆವು. ಒಂದು ವರ್ಷ ಆಗಿದ್ದೆ ಗೊತ್ತಾಗಲಿಲ್ಲ. ಅಪ್ಪು ಸರ್ ಎಲ್ಲೂ ಹೋಗಿಲ್ಲ. ನಮ್ಮ ಮನದಲ್ಲೇ ಇದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯಾರ ಹೊಟ್ಟೆಯಲ್ಲಾದ್ರೂ ಮತ್ತೊಮ್ಮೆ ಹುಟ್ಟಿ ಬಾರಪ್ಪ- ವೃದ್ಧೆ ಕಣ್ಣೀರು

ಅಪ್ಪು ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅಪ್ಪು ಸಮಾಧಿಯತ್ತ ಅಭಿಮಾನಿಗಳ ದಂಡೇ ಹರಿದುಬರುತ್ತಿದೆ. ಕಳೆದ ವರ್ಷ ಅಕ್ಟೋಬರ್ 29ರಂದು ಹೃದಯ ಸ್ತಂಭನಕ್ಕೆ ಒಳಗಾಗಿ ಅಪ್ಪು ಅವರು ನಗರದ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
Live Tv
[brid partner=56869869 player=32851 video=960834 autoplay=true] -

ಪುನೀತ್ ಅಭಿಮಾನಿಗಳಿಗೆ ಗುಡ್‍ನ್ಯೂಸ್- ಅಪ್ಪು ಜನ್ಮದಿನ ಇನ್ಮೇಲೆ ಸ್ಫೂರ್ತಿ ದಿನ
ಬೆಂಗಳೂರು: ನಟ ದಿ. ಡಾ.ಪುನೀತ್ ರಾಜ್‍ಕುಮಾರ್ (Dr. Puneeth RajKumar) ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್‍ನ್ಯೂಸ್ ಕೊಟ್ಟಿದೆ.

ಹೌದು. ಪುನೀತ್ ರಾಜ್‍ಕುಮಾರ್ ಜನ್ಮದಿನವನ್ನು ಸ್ಫೂರ್ತಿ ದಿನ (Inspiration Day) ಎಂದು ಆಚರಣೆ ಮಾಡೋದಾಗಿ ಘೋಷಿಸಿದೆ. ಮಾರ್ಚ್ 17ರಂದು ಅಂದರೆ ದಿವಂಗತ ಪುನೀತ್ ರಾಜ್‍ಕುಮಾರ್ ಹುಟ್ಟಿದ ದಿನ (Birthday) ದಂದು ರಾಜ್ಯ ಸರ್ಕಾರ ವತಿಯಿಂದಲೇ ಸ್ಫೂರ್ತಿ ದಿನವನ್ನು ಆಚರಣೆ ಮಾಡಲಾಗುತ್ತದೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಸುನಿಲ್ ಕುಮಾರ್ (Sunil Kumar), ಸ್ಫೂರ್ತಿ ದಿನ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಸಿಎಂಗೆ ಧನ್ಯವಾದಗಳು. ಲಕ್ಷಾಂತರ ಯುವಕರಿಗೆ, ಅಭಿಮಾನಿಗಳಿಗೆ ಇದು ಸ್ಫೂರ್ತಿಯಾಗಲಿದೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ವಿವಿಯಿಂದ ಪುನೀತ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ @BSBommai ಅವರಿಗೆ ಧನ್ಯವಾದಗಳು.
ಅಪ್ಪು ಜನ್ಮದಿನ, ಮಾರ್ಚ್ 17 ಇನ್ನು ಮುಂದೆ ಸ್ಪೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ.— Sunil Kumar Karkala (@karkalasunil) September 15, 2022
ಟ್ವಿಟ್‍ನಲ್ಲೇನಿದೆ..?: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಧನ್ಯವಾದಗಳು. ಅಪ್ಪು ಜನ್ಮದಿನ, ಮಾರ್ಚ್ 17 ಇನ್ನು ಮುಂದೆ ಸ್ಪೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ ಎಂದು ಬರೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true] -

ಅಣ್ಣಾವ್ರ ಕುಟುಂಬದ ಜೊತೆಗಿನ ನೆನಪು ಹಂಚಿಕೊಂಡ ಕಮಲ್ ಹಾಸನ್
ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ ಜೂನ್ 3ಕ್ಕೆ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಈ ವೇಳೆ ಕಮಲ್ ಹಾಸನ್ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ವೇಳೆ ಡಾ.ರಾಜ್‌ಕುಮಾರ್ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

`ವಿಕ್ರಮ್’ ಚಿತ್ರದ ಪೋಸ್ಟರ್ ಲುಕ್, ಟ್ರೇಲರ್‌ನಿಂದ ಸಿಕ್ಕಾಪಟ್ಟೆ ಮೋಡಿ ಮಾಡುತ್ತಿದೆ. ಇನ್ನೇನು ತೆರೆಗೆ ಅಪ್ಪಳಿಸಲು ಒಂದೇ ದಿನ ಬಾಕಿಯಿದೆ. ಈ ಸಂದರ್ಭದಲ್ಲಿ ನಟ ಕಮಲ್ ಹಾಸನ್ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಕಮಲ್ ಹಾಸನ್‌ಗೆ ಕನ್ನಡ ಚಿತ್ರರಂಗದ ಜತೆ ಮತ್ತು ಇಲ್ಲಿನ ಸ್ಟರ‍್ಸ್ಗಳ ಜೊತೆ ಉತ್ತಮ ಬಾಂದವ್ಯವಿದೆ. ಹಾಗೇಯೇ ಡಾ.ರಾಜ್‌ಕುಮಾರ್ ಜೊತೆ ಒಳ್ಳೆಯ ಸ್ನೇಹ ಸಂಬಂಧ ಹೊಂದಿರುವ ನಟ ಈಗ ಅಣ್ಣಾವ್ರ ಜತೆಗಿನ ಹಳೆಯ ನೆನಪನ್ನು ತೆರೆದಿಟ್ಟಿದ್ದಾರೆ. ಇದನ್ನೂ ಓದಿ: ಹಿಂದಿ ಕಿರುತೆರೆಗೆ ಜಯರಾಂ ಕಾರ್ತಿಕ್ ಕಂಬ್ಯಾಕ್

ಕಾಲಿವುಡ್ ಸ್ಟಾರ್ ಆಗಿರುವ ಕಮಲ್ ಹಾಸನ್ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅಣ್ಣಾವ್ರು ನಾನು 21ನೇ ವಯಸ್ಸಿನಲ್ಲಿದ್ದಾಗ ನನ್ನ ನಟನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. `ಪುಷ್ಪಕವಿಮಾನ’ ಚಿತ್ರದ ಮೊದಲ ದಿನದ ಶೂಟಿಂಗ್‌ಗೆ ಡಾ.ರಾಜ್‌ಕುಮಾರ್ ಅವರು ಬಂದು ಬೆನ್ನು ತಟ್ಟಿದ್ದರು ಎಂದು ಹಳೆಯ ನೆನಪನ್ನ ಕಮಲ್ ಹಾಸನ್ ಮೆಲುಕು ಹಾಕಿದ್ದಾರೆ.

ನನಗೆ ಕರ್ನಾಟಕ ಸಾಕಷ್ಟು ಗುರುಗಳನ್ನು ಕೊಟ್ಟಿದೆ. ಬೇರೆ ಅವರನ್ನು ನಾವು ಹೇಗೆ ಗೌರವಿಸಬೇಕು ಅಂತಾ ಕಲಿತಿದ್ದೆ ಡಾ.ರಾಜ್‌ಕುಮಾರ್ ಅವರಿಂದ, ಅವರ ಈ ಗುಣವನ್ನು ಅವರ ಮಕ್ಕಳಿಗೂ ಕಲಿಸಿದ್ದಾರೆ. ನಾನು ಪುನೀತ್ ಮತ್ತು ಅಣ್ಣಾವ್ರು ಇಬ್ಬರನ್ನು ಮಿಸ್ ಮಾಡಿಕೊಳ್ಳುತ್ತೇನೆ ಈ ವೇಳೆ ವಿಕ್ರಮ್ ಚಿತ್ರದ ನಟ ಕಮಲ್ ಹಾಸನ್ ಮಾತನಾಡಿದ್ದಾರೆ.
-

ರಾಜಕುಮಾರನ ಜೇಮ್ಸ್ ಜಾತ್ರೆ – ಸಿನಿಮಾದಲ್ಲಿ ಸಾವು ಗೆದ್ದ ಅಪ್ಪು ಬದುಕಲ್ಲಿ ಗೆಲ್ಲಬಾರದಿತ್ತೇ..!
* ಪವಿತ್ರ ಕಡ್ತಲ, ಮೆಟ್ರೋ ಬ್ಯೂರೋ ಚೀಫ್, ಪಬ್ಲಿಕ್ ಟಿವಿ
ಶಿಳ್ಳೆ , ಚಪ್ಪಾಳೆ, ಹರ್ಷೋದ್ಘಾರ, ಪಟಾಕಿಯ ಸದ್ದು, ಹಾಲಿನ ಅಭಿಷೇಕ ಇಡೀ ಬೆಂಗಳೂರಿನಲ್ಲಿ ಇಂದು ಪುನೀತೋತ್ಸವ. ಆದ್ರೇ ಇವೆಲ್ಲವನ್ನೂ ಮೀರಿ ಪ್ರತಿಯೊಬ್ಬರ ಮನದಲ್ಲಿ ದುಃಖದ ಕಾರ್ಮೋಡವಿತ್ತು. ಜೇಮ್ಸ್ ಸಿನಿಮಾದಲ್ಲಿ ಅಪ್ಪು ಖಡಕ್ ಲುಕ್, ಫಿಟ್ ಆಂಡ್ ಫೈನ್ ಆಗಿ ರಾಯಲ್ ಆಗಿ ಕಾಣ್ತಿರುವ ಅಪ್ಪು ನಿಜವಾಗಲೂ ಇನ್ನಿಲ್ವಾ… ಸಿನಿಮಾದಲ್ಲಿ ಅಬ್ಬರಿಸ್ತಾ ಇರುವ ಈ ರಾಜ ನಮ್ಮನ್ನು ಹೀಗೆ ಬಿಟ್ಟು ಹೋಗೇಬಿಟ್ರಾ ಎನ್ನುವ ನೋವಿನ ಭಾವ ಪ್ರತಿ ಕ್ಷಣದಲ್ಲಿ ಮತ್ತೆ ಮತ್ತೆ ಕಾಡಿ ಎದೆ ಭಾರವೆನಿಸುವ ಕ್ಷಣವದು.

ಅಪ್ಪುವಿನ ಫುಲ್ ಪ್ರೇಮ್ ಥಿಯೇಟರ್ ಪರದೆಯಲ್ಲಿ ಬಂದಾಗೆಲ್ಲ ದುಃಖ ತಡೆಯಲಾರದೇ ಅದೆಷ್ಟೋ ಜನ ಸ್ಕ್ರೀನ್ ತಬ್ಬಿ ಹಿಡಿದು ಅಪ್ಪು ಅಪ್ಪು ಅಂತಾ ಮೌನವಾಗಿ ಕಣ್ಣೀರಾದ್ರು. ಹೀಗೆ ನಡುನೀರಿನಲ್ಲಿ ತಾನು ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಹೋಗುತ್ತೇನೆ, ಇವರೆಲ್ಲ ನನ್ನ ಸಾವನ್ನು ಅರಗಿಸಿಕೊಳ್ಳಲಾರರು ಅಂತಾ ಅಪ್ಪುವಿಗೆ ಮೊದಲೇ ಗೊತ್ತಿದ್ದು, ಆ ನೋವಿಗೆ ಮುಲಾಮು ಹಚ್ಚೋಕೆ ಜೇಮ್ಸ್ ಸಿನಿಮಾ ಮಾಡಿದ್ರಾ ಅನ್ನೋವಷ್ಟು ಕಾಡಿಬಿಡುತ್ತೆ ಸಿನಿಮಾ. ಇದನ್ನೂ ಓದಿ: ಗುರುವಾರಕ್ಕೂ ಪುನೀತ್ ಸಿನಿಮಾ ರಿಲೀಸಿಗೂ ಏನದು ನಂಟು?

ಜೇಮ್ಸ್ ಇಡೀ ಸಿನಿಮಾದ ಕಥೆ, ಸಂದೇಶ, ಡ್ಯಾನ್ಸು ಸಾಂಗ್ಸ್.. ಊಹೂ ಅದ್ಯಾವುದೂ ಅಭಿಮಾನಿಗಳ ಪಾಲಿಗೆ ಮುಖ್ಯವಾಗಲೇ ಇಲ್ಲ. ಕೇವಲ ಅಪ್ಪು ಜಪ. ಅಪ್ಪುವನ್ನು ಕಣ್ಣುತುಂಬಿಸಿಕೊಳ್ಳುವ ತವಕ. ಮತ್ತೆ ಎಂದೂ ತೆರೆಯ ಮೇಲೆ ಈ ‘ರಾಜಕುಮಾರ’ನ ನೋಡಲಾರೆವು ಎನ್ನುವ ಕಹಿ ಸತ್ಯ ಪದೇ ಪದೇ ಕಣ್ಣೀರಾಗಿಸುವ ಸಂದರ್ಭದಲ್ಲಿಯೂ ಜೇಮ್ಸ್ ಕೋಟಿ ಕಂಗಳ ಕಣ್ಣೀರು ಒರೆಸುವ ಪುಟ್ಟ ಕರ್ಚೀಫಿನಂತೆ, ಥೇಟು ಅಪ್ಪುವಿನ ನಿಷ್ಕಲ್ಮಷ ನಗೆಯಂತೆ ಕಾಣಿಸಿದೆ.

ಅಪ್ಪು ಕೊನೆಯ ಸಿನಿಮಾ ಹೇಗಿದೆ..!?: ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ನಲ್ಲಿ ಅಪ್ಪುವಿನದ್ದು ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಹಾಗೂ ಸೈನಿಕನಾಗಿ ಡಬಲ್ ಶೇಡ್ ಇರುವ ಪಾತ್ರ. ಇಡೀ ಸಮಾಜವನ್ನು ಡ್ರಗ್ಸ್ ಮಾಫಿಯವನ್ನು ಕಿತ್ತೊಗೆಯಲು ನಾಯಕನ ಶ್ರಮ ಸಿನಿಮಾದ ಹೈಲೈಟ್ಸ್. ಇದನ್ನೂ ಓದಿ: ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

ಸೈನಿಕ ಹಾಗೂ ಏಜೆನ್ಸಿ ಸೆಕ್ಯೂರಿಟಿ ಆಗಿ ಡಬಲ್ ಶೇಡ್‍ನಲ್ಲಿ ಪಾತ್ರ ನಿರ್ವಹಿಸಿದ ಪುನೀತ್‍ಗೆ ಗೆ ಪ್ರಿಯಾ ಆನಂದ್ ಜೋಡಿಯಾಗಿದ್ದಾರೆ. ಆರಂಭದಲ್ಲಿಯೇ ಕಾರ್ ಚೇಸಿಂಗ್ ನಲ್ಲಿ ಪವರ್ ಸ್ಟಾರ್ ಮಾಸ್ ಎಂಟ್ರಿ ಅಭಿಮಾನಿಗಳ ಮೈಯಲ್ಲಿ ಮಿಂಚು ಹರಿಸುತ್ತೆ. ಇನ್ನು ಅಪ್ಪು ಫೈಟಿಂಗ್, ಯಾರೂ ಬೀಟ್ ಮಾಡಲು ಆಗದ ಸಕತ್ ಡ್ಯಾನ್ಸ್, ಜೇಮ್ಸ್ ಸಿನಿಮಾದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಅಪ್ಪುವಿನ ಧ್ವನಿಯನ್ನು ಕೊಂಚ ಮಿಸ್ ಮಾಡಿಕೊಳ್ಳುವ ಅಭಿಮಾನಿಗಳಿಗೆ ಶಿವಣ್ಣನ ಧ್ವನಿ ಕೊಂಚ ಸಮಾಧಾನ ಕೊಡುತ್ತೆ.

ಸಿನಿಮಾದಲ್ಲಿ ಸಾವು ಗೆದ್ದ ಅಪ್ಪು..! ರಿಯಲ್ ಲೈಫ್ ನಲ್ಲಿ ಚಾನ್ಸ್ ಕೊಡದ ವಿಧಿ.!: ರಿಯಲ್ ಲೈಫ್ ನಲ್ಲಿ ಕೊಂಚವೂ ವಿನಾಯಿತಿ ತೋರದಂತೆ ಅಪ್ಪುವನ್ನು ವಿಧಿ ಕಿತ್ತುಕೊಂಡಿತ್ತು. ಆದ್ರೆ ಸಿನಿಮಾದಲ್ಲಿ ಅಪ್ಪು ಇಪ್ಪತ್ತು ದಿನಗಳ ಕಾಲ ಐಸಿಯುನಲ್ಲಿದ್ದು ಸಾವು ಬದುಕಿನ ಮಧ್ಯೆ ಹೋರಾಡಿ ಸಾವು ಗೆಲ್ಲುವ ಸೀನ್ ಅಭಿಮಾನಿಗಳನ್ನು ಕಣ್ಣೀರಗಾಗಿಸಿತು. ನಿಜ ಜೀವನದಲ್ಲೂ ಹೀಗಾಗಬಾರದಾಗಿತ್ತೇ.., ಅಪ್ಪು ಒಂದು ಬಾರಿ ಎದ್ದು ಬರಬಾರದಿತ್ತೇ ಅಂತಾ ಅನಿಸುವಂತಿತ್ತು. ಅಭಿಮಾನಿಗಳ ಕಣ್ಮನ ತಣಿಸುವ ಪುನೀತ್ ಸಂಭ್ರಮ ಜೇಮ್ಸ್ ಜಾತ್ರೆಯನ್ನು ತಡಮಾಡದೇ ಕಣ್ತುಂಬಿಸಿಕೊಳ್ಳಿ. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ
-

ಟಿವಿಯಲ್ಲಿ ಬಂದಾಗ ಜೇಮ್ಸ್ ಚಿತ್ರ ನೋಡ್ತೀನಿ: ಸಿದ್ದರಾಮಯ್ಯ
ಬೆಂಗಳೂರು: ಟಿವಿಯಲ್ಲಿ ಬಂದಾಗ ಜೇಮ್ಸ್ ಚಿತ್ರ ನೋಡ್ತೀನಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಆತ್ಮಕ್ಕೆ ಚಿರ ಶಾಂತಿ ಸಿಗಲಿ. ಎಲ್ಲಾರು ಜೇಮ್ಸ್ ಚಿತ್ರ ನೋಡಿ. ನಾನು ಸಾಮಾನ್ಯವಾಗಿ ಚಲಚಿತ್ರ ನೋಡಲು ಥಿಯೇಟರ್ ಗೆ ಹೋಗಲ್ಲ. ಯಾರಾದರೂ ಒತ್ತಾಯ ಮಾಡಿ ಕರೆದಾಗ ಹೋಗಿದ್ದೇನೆ. ಸ್ವಲ್ಪ ನೋಡಿ ಎದ್ದು ಬಂದಿದ್ದು ಇದೆ. ಜೇಮ್ಸ್ ಚಿತ್ರ ನೋಡ್ತೀನಿ ಟಿವಿಯಲ್ಲಿ ಬಂದಾಗ ಎಂದರು. ಇದನ್ನೂ ಓದಿ: ಮದಗಜ ಚಿತ್ರ ಖ್ಯಾತಿಯ ನಿರ್ದೇಶಕ ಮಹೇಶ್ ಕಂಡಂತೆ ‘ಜೇಮ್ಸ್’ ಸಿನಿಮಾ: ಸೆಲೆಬ್ರಿಟಿ ಫಸ್ಟ್ ರಿವ್ಯೂ

ಜೇಮ್ಸ್ ಸಿನಿಮಾಗೆ ಟ್ಯಾಕ್ಸ್ ವಿನಾಯಿತಿ ಕೊಡಬೇಕು ಎಂದು ಒತ್ತಾಯಿಸುತ್ತೇನೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ಬೊಮ್ಮಾಯಿಗೆ ಅವರ ಮೇಲೆ ಪ್ರೀತಿ ಇದೆ. ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು. ಇದರ ಬಗ್ಗೆ ಒತ್ತಾಯ ಮಾಡಿದ್ದೇನೆ. ಪುನೀತ್ ಜನಪ್ರಿಯ ನಾಯಕ. ರಾಜ್ ಕುಮಾರ್ ಇದ್ದಾಗ ನನ್ನನ್ನು ನಮ್ಮ ಕಾಡಿನವರು ಅಂತ ಹೇಳುತ್ತಿದ್ರು ಎಂದು ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.
-

ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಶೀಘ್ರವೇ ದಿನಾಂಕ ನಿಗದಿ: ಬೊಮ್ಮಾಯಿ
ಬೆಂಗಳೂರು: ಇಂದು ದಿ. ಡಾ. ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಜೊತೆಗೆ ಜೇಮ್ಸ್ ಸಿನಿಮಾ ರಿಲೀಸ್ ಆಗಿದೆ. ಹೀಗಾಗಿ ಇಮದು ಅಪ್ಪು ಅಭಿಮಾನಿಗಳು ಹಬ್ಬವನ್ನೇ ಆಚರಿಸುತ್ತಿದ್ದಾರೆ. ಈ ನಡುವೆ ಶೀಘ್ರವೇ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ದಿನಾಂಕ ನಿಗದಿಪಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಬಗ್ಗೆ ಈಗಾಗಲೇ ತೀರ್ಮಾನ ಆಗಿದೆ. ಪ್ರಶಸ್ತಿ ಪ್ರದಾನ ಮಾಡುವ ಸಂಬಂಧ ಡಾ.ರಾಜ್ ಕುಟುಂಬದ ಜತೆ ಚರ್ಚೆ ನಡೆಸುತ್ತೇನೆ. ಈ ಸಂಬಂಧ ಒಂದು ಸಮಿತಿ ಕೂಡ ರಚಿಸಲಾಗುವುದು. ಪ್ರಶಸ್ತಿ ಪ್ರದಾನ ಮಾಡುವ ದಿನಾಂಕ ನಿಗದಿ ಬಗ್ಗೆಯೂ ಆದಷ್ಟು ಬೇಗ ನಿರ್ಧಾರ ಮಾಡಲಾಗುವುದು ಎಂದರು. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ

ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಯಾವ ರೀತಿ ಮಾಡಬೇಕೆಂಬ ಬಗ್ಗೆ ಕುಟುಂಬದ ಜೊತೆ ಚರ್ಚಿಸಲಾಗುವುದು. ಡಾ.ರಾಜ್ ಹಾಗೂ ಪುನೀತ್ ರಿಗೆ ಗೌರವ ಬರುವ ಹಾಗೆ ಕಾರ್ಯಕ್ರಮ ನಡೆಸಲಾಗುವುದು. ಒಟ್ಟಿನಲ್ಲಿ ಆದಷ್ಟು ಬೇಗ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ ಮಾಡುವುದಾಗಿ ಸಿಎಂ ತಿಳಿಸಿದರು.

ಇತ್ತೀಚೆಗಷ್ಟೇ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಅಪ್ಪುಗೆ ಮರಣೋತ್ತರ ಡಾಕ್ಟರೇಟ್ ನೀಡುವುದಾಗಿ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಹೇಮಂತ್ ಕುಮಾರ್ ಘೋಷಿಸಿದ್ದಾರೆ. ಮಾರ್ಚ್ 22ರಂದು ನಡೆಯಲಿರುವ ಮೈಸೂರು ವಿವಿ ಯ 102ನೇ ಘಟಿಕೋತ್ಸವದಲ್ಲಿ ಕನ್ನಡದ ಯುವರತ್ನನಿಗೆ ಗೌರವ ಡಾಕ್ಟರೇಟ್ ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್
-

ಅಪ್ಪುಗೆ ಯಾವುದೇ ರೀತಿಯ Attitude ಇರಲಿಲ್ಲ: ಹಿರಿಯ ನಟ ಸುಮನ್
ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಯಾವುದೇ ರೀತಿಯ ಆಟಿಟ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಎಂದು ತೆಲುಗು ಹಿರಿಯ ನಟ ಸುಮನ್ ಹೇಳಿದರು.
ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ಸಮಾಧಿಗೆ ಬೇಟಿ ಕೊಟ್ಟ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಪ್ಪು ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಲಾಸ್ ಆಗಿದೆ. ಇಂದು ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ. ಅವರ ಸಮಾಜಸೇವೆ ಅವರ ಚಿಂತನೆ ತುಂಬಾ ಮೆಚುರ್ಡ್ ಆಗಿದೆ. ನಟನೆ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಭಾವುಕರಾದರು. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಚಿಕ್ಕ ವಯಸ್ಸಿನಲ್ಲೆ ತುಂಬಾ ಮೆಚುರ್ಡ್ ಥಿಂಕಿಂಗ್ ಅವರಲ್ಲಿತ್ತು. ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಿರೋದು ನೋವು ತಂದಿದೆ. ಅಪ್ಪುಗೆ ಯಾವುದೇ ರೀತಿಯ ಆಟ್ಯಿಡ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಆಗಿದೆ ಎಂದು ಹೇಳುತ್ತಾ ಇಂದು ಜೇಮ್ಸ್ ರಿಲೀಸ್ ಆಗಿದೆ ಶುಭ ಹಾರೈಸುತ್ತೇವೆ ಅಂದ್ರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

ಇಂದು ಪುನೀತ್‍ಗೆ 47 ವರ್ಷದ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಕೂಡ ರಿಲೀಸ್ ಆಗಿದೆ. ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಆದರೆ ಈ ನಡುವೆ ಅಪ್ಪು ಇಲ್ಲ ಅನ್ನೋ ನೋವು ಕೂಡ ಅಭಿಮಾನಿಗಳಲ್ಲಿದೆ. ರಾಜ್ಯದ ಥಿಯೇಟರ್ ಗಳ್ಲಿ ಜೇಮ್ಸ್ ಜಾತ್ರೆ ಈಗಾಗಲೇ ಆರಂಭವಾಗಿದ್ದು, ಅಪ್ಪು ಚಿತ್ರ ನೋಡಿ ಕರುನಾಡು ಕಣ್ಣಿರಾಗಿದೆ. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

