Tag: ಡಾ. ದೇವಿ ಶೆಟ್ಟಿ

  • ಹೃದಯಾಘಾತಕ್ಕೆ ತಾನೇ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಯ ICU ಬೆಡ್ ಉದ್ಘಾಟಿಸಿದ ಗಂಗೂಲಿ

    ಹೃದಯಾಘಾತಕ್ಕೆ ತಾನೇ ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಯ ICU ಬೆಡ್ ಉದ್ಘಾಟಿಸಿದ ಗಂಗೂಲಿ

    ಬೆಂಗಳೂರು: ನಗರದ ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಬಳಿ ಇರುವ ನಾರಾಯಣ ಹೆಲ್ತ್ ಸಿಟಿಗೆ ಮಾಜಿ ಕ್ಯಾಪ್ಟನ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭೇಟಿ ನೀಡಿದ್ದಾರೆ.

    ಭೇಟಿಯ ಬಳಿಕ ಹೃದಯಾಲಯದ 100 ಐಸಿಯು ಬೆಡ್ ಉದ್ಘಾಟನೆ ಮಾಡಿದ್ದಾರೆ. 100 ಬೆಡ್ ಸಾಮಥ್ರ್ಯದ ಕೋವಿಡ್ ಆಸ್ಪತ್ರೆ ಇದಾಗಿದ್ದು, ಡಾ. ದೇವಿ ಶೆಟ್ಟಿ ಮಾಲೀಕತ್ವದ ನಾರಾಯಣ ಹೆಲ್ತ್ ಸಿಟಿ ಇದಾಗಿದೆ. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

    ಈಚೆಗೆ ಗಂಗೂಲಿಯವರಿಗೆ ಹೃದಯಾಘಾತವಾಗಿತ್ತು. ಕೆಲ ದಿನಗಳ ಕಾಲ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಡಿಸ್ಚಾರ್ಜ್ ಆಗಿದ್ದರು. ಆಗಾಗ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಾರಾಯಣ ಹೃದಯಾಲಯ ಆಸ್ಪತ್ರೆಯ ನಾಲ್ಕನೆ ಮಹಡಿಯಲ್ಲಿ ಸೌರವ್ ಗಂಗೂಲಿ ಅವರಿಗೆ ತಪಾಸಣೆ ಮಾಡಲಾಗಿತ್ತು. ಇದನ್ನೂ ಓದಿ: RCB ತಂಡದಲ್ಲಿ ಇಬ್ಬರು ಕನ್ನಡಿಗರು – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

    ಕಾರ್ಡಿಯಾಕ್ ಸ್ಪೆಷಲಿಸ್ಟ್ ಡಾ. ದೇವಿ ಶೆಟ್ಟಿ ನೇತೃತ್ವದಲ್ಲಿ ದಾದಾ ಅವರಿಗೆ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಕಳೆದ ಬಾರಿ ಅವರಿಗೆ ಹೃದಯಾಘಾತವಾದಾಗ ಡಾ. ದೇವಿ ಅವರನ್ನು ಸಂಪರ್ಕಿಸುವಂತೆ ಅವರ ಸ್ನೇಹಿತರೊಬ್ಬರು ಗಂಗೂಲಿ ಅವರಿಗೆ ಹೇಳಿದ್ದರಂತೆ.

  • ಲಸಿಕೆ ಪಡೆದು ಅಪನಂಬಿಕೆ ಹೋಗಲಾಡಿಸಿದ ಡಾ. ದೇವಿಶೆಟ್ಟಿ

    ಲಸಿಕೆ ಪಡೆದು ಅಪನಂಬಿಕೆ ಹೋಗಲಾಡಿಸಿದ ಡಾ. ದೇವಿಶೆಟ್ಟಿ

    ಆನೇಕಲ್: ಈಗಾಗಲೇ ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗಿದೆ. ಇದೇ ತಿಂಗಳು 16ರಿಂದ ಲಸಿಕೆ ಹಾಕುವ ಕೆಲಸದಲ್ಲಿ ಎಲ್ಲಾ ವೈದ್ಯಕೀಯ ಸಿಬ್ಬಂದಿ ನಿರತರಾಗಿ ಇದುವರೆಗೆ ಲಕ್ಷಾಂತರ ಜನರಿಗೆ ಲಸಿಕೆ ಹಾಕಿದ್ದಾರೆ.

    ಅದೇ ರೀತಿ ಮೂರನೆ ದಿನವಾದ ಇಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನಾರಾಯಣ ಹೃದಯಾಲಯದಲ್ಲಿ ಮೊದಲ ಲಸಿಕೆಯನ್ನು ಹಾಕಲಾಯಿತು. ನಾರಾಯಣ ಹೃದಯಾಲಯದ ಮುಖ್ಯಸ್ಥ ದೇವಿಶೆಟ್ಟಿ ತಾವೇ ಸ್ವತಃ ಹಾಕಿಸಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಲಸಿಕೆಯ ಮೇಲೆ ಇರುವ ಅಪನಂಬಿಕೆಯನ್ನು ಹೋಗಲಾಡಿಸಲು ಮುಂದಾಗಿದ್ದಾರೆ. ಇಂದು ಮುಂಜಾನೆ ಸುಮಾರು 9:00 ಸರಿಯಾಗಿ ನೋಡಲ್ ಆಫೀಸರ್ ಹಾಗೂ ತಾಲೂಕು ವೈದ್ಯಾಧಿಕಾರಿ ಅವರ ಸಮಕ್ಷದಲ್ಲಿ ಕೋವಿಡ್ ಲಸಿಕೆಯನ್ನು ಮೊದಲನೆಯದಾಗಿ ದೇವಿ ಶೆಟ್ಟಿಯವರು ತೆಗೆದುಕೊಂಡಿದ್ದಾರೆ.

    ಈ ಮೂಲಕ ಜನಸಾಮಾನ್ಯರಿಗೆ ಕೊವಿಡ್ ಲಸಿಕೆಯ ಮೇಲೆ ಭರವಸೆ ಮೂಡುವಂತೆ ಮಾಡಿದ್ದಾರೆ. ಜೊತೆಗೆ ಇಂದಿನಿಂದ ನಾರಾಯಣ ಹೃದಯಾಲಯದಲ್ಲಿ ಕೋವಿಡ್ ಲಸಿಕೆ ಹಾಕುತ್ತಿದ್ದು ದೇವಿ ಶೆಟ್ಟಿಯವರಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟನೆ ಮಾಡಲಾಯಿತು. ಜೊತೆಗೆ ಇಂದು ಒಟ್ಟು ಮುನ್ನೂರು ಮಂದಿಗೆ ಲಸಿಕೆ ಹಾಕಲಿದ್ದು ಇಂದಿನಿಂದ ಪ್ರತಿದಿನ ಕೊವಿಡ್ ಲಸಿಕೆ ಲಭ್ಯವಿರುತ್ತದೆ. ಹಾಗಾಗಿ ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

    ಇದೇ ಸಮಯದಲ್ಲಿ ಮಾತನಾಡಿದ ದೇವಿಶೆಟ್ಟಿ, ಪ್ರತಿಯೊಬ್ಬ ಭಾರತೀಯ ಲಸಿಕೆ ನಂತರ ವಿಕ್ಟರಿ ಸೈನ್ ತೋರಿಸಬೇಕು. ಭಾರತಕ್ಕೆ ಇದೊಂದು ಸುವರ್ಣಾವಕಾಶ. ಬೇರೆ ದೇಶದಲ್ಲಿ ಕೋವಿಡ್ ಇನ್ನೂ ಅಂತ್ಯ ಕಂಡಿಲ್ಲ ಆದರೆ ನಮ್ಮ ದೇಶದಲ್ಲಿ ಈಗಾಗಲೇ ಲಸಿಕೆಯ ಲಭ್ಯವಿದೆ. ಅತಿ ಹೆಚ್ಚು ವೈದ್ಯಕೀಯ ಸಿಬ್ಬಂದಿ ಇರುವ ದೇಶ ನಮ್ಮದು ಹಾಗಾಗಿ ಈ ಒಂದು ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬಹುದು. ಅತೀ ಬೇಗ ಕೊರೊನಾದಿಂದ ಮುಕ್ತಿ ಹೊಂದಬಹುದು ಎಂಬ ಭರವಸೆ ನನಗಿದೆ ಎಂದು ತಿಳಿಸಿದ್ದಾರೆ. ವೈದ್ಯಾಧಿಕಾರಿ ಮಾತನಾಡಿ ಜೊತೆಗೆ ಸ್ಥಳೀಯ ವೈದ್ಯಾಧಿಕಾರಿ ಮಾತನಾಡಿ ಇಂದು ಮೂರನೆ ದಿನ 16ನೇ ತಾರೀಕು ಒಟ್ಟು 238 ಮಂದಿ ಲಸಿಕೆ ಪಡೆದಿದ್ದಾರೆ.

    ಅದೇ ರೀತಿ ಇಂದು 28 ಸೆಶನ್ಸ್ ಗಳಲ್ಲಿ 2,456 ಮಂದಿ ಇಂದು ಲಸಿಕೆ ಪಡೆಯುತ್ತಾರೆ. ಇಂದು ದೇವಿಶೆಟ್ಟಿ ಸಹ ಪಡೆದಿದ್ದು ಇದರಿಂದ ಜನರಲ್ಲಿ ಇನ್ನಷ್ಟು ನಂಬಿಕೆ ಬರುತ್ತದೆ. ಹಾಗೂ ಈ ಕೆಲಸ ಯಶಸ್ವಿಯಾಗುತ್ತದೆ ಎಂದು ತಿಳಿಸಿದ್ದಾರೆ.