Tag: ಡಾ. ಜಿ ಪರಮೇಶ್ವರ್

  • ತುಂಗಭದ್ರಾ ಡ್ಯಾಂಗೆ ಪರಮೇಶ್ವರ್ ಭೇಟಿ – ಕೊಚ್ಚಿ ಹೋಗಿದ್ದ ಕ್ರಸ್ಟ್ ಗೇಟ್ ಸ್ಥಳ ವೀಕ್ಷಣೆ

    ತುಂಗಭದ್ರಾ ಡ್ಯಾಂಗೆ ಪರಮೇಶ್ವರ್ ಭೇಟಿ – ಕೊಚ್ಚಿ ಹೋಗಿದ್ದ ಕ್ರಸ್ಟ್ ಗೇಟ್ ಸ್ಥಳ ವೀಕ್ಷಣೆ

    ಕೊಪ್ಪಳ/ಬಳ್ಳಾರಿ: ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆಯ ಹಾಗೂ ಕೊಪ್ಪಳದ (Koppal) ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯಕ್ಕೆ (Tungabhadra) ಗೃಹ ಸಚಿವ ಡಾ ಜಿ.ಪರಮೇಶ್ವರ್ (G.Parameshwar) ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಇಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಜಲಸಂಪನ್ಮೂಲ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ದಿ.ಕೆ ಹೆಚ್.ಪಾಟೀಲ್ ಅವರ ಮೂರ್ತಿ ಅನಾವರಣಗೊಳಿಸಿದರು. ಬಳಿಕ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು.ಇದನ್ನೂ ಓದಿ: America Strikes | ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಬೆಂಬಲಿಸಿದ್ದ ಪಾಕ್‌ನಿಂದ ಇರಾನ್‌ ಮೇಲಿನ ದಾಳಿ ಖಂಡನೆ

    ಕಳೆದ ವರ್ಷ ಆಗಸ್ಟ್‌ನಲ್ಲಿ ಕೊಚ್ಚಿ ಹೋಗಿದ್ದ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಜಾಗಕ್ಕೆ ತೆರಳಿ ಪರಿಶೀಲಿಸಿದರು. ಅಳವಡಿಸಲಾಗಿರುವ ಸ್ಟಾಪ್ ಲಾಗ್ ಗೇಟ್‌ನ್ನು ವೀಕ್ಷಣೆ ಮಾಡಿದರು. ಬಳಿಕ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈತರಿಗೆ ಬೆಳೆ ಬೆಳೆಯಲು ಯಾವುದೇ ಸಮಸ್ಯೆ ಆಗದಂತೆ ಆದಷ್ಟು ಬೇಗ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಗೃಹ ಸಚಿವರಿಗೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಸಾಥ್ ನೀಡಿದರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನನಗೆ ಗೊತ್ತಿಲ್ಲ. ಇನ್ನೂ ಬಿ.ಆರ್.ಪಾಟೀಲ್ ಲಂಚದ ಆರೋಪ ಆಡಿಯೋ ವಿಚಾರವಾಗಿ ಅವರು ಹೇಳಿರುವುದು ಗಂಭೀರ ಆರೋಪ ಅಲ್ಲ. ಅವರು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಲಿ. ಪೊಲೀಸರಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಹೆಚ್.ಕೆ ಪಾಟೀಲ್ ಗಣಿ ಅಕ್ರಮ ಪತ್ರದ ವಿಚಾರವಾಗಿ ಮಾತನಾಡಿ, ಗಣಿ ಅಕ್ರಮದಲ್ಲಿ 1.5 ಲಕ್ಷ ಕೋಟಿ ರೂ. ದುರುಪಯೋಗವಾಗಿದೆ. ಈ ಕುರಿತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಲೂಟಿ ಮಾಡಿದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಲಹೆ ನೀಡಿದ್ದಾರೆ. ಈಗ ಪತ್ರ ಬರೆದಿದ್ದಾರೆ. ಕ್ರಮ ಕೈಗೊಳ್ಳಲಾಗುವುದು ಎಂದರು.

    ಕರ್ನಾಟಕ ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಹೊರಟಿದ್ದೇವೆ. ಆನೆಗೊಂದಿ ಭಾಗದಲ್ಲಿ ಡ್ರಗ್ಸ್ ತಡೆಯುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಅವಶ್ಯಕತೆಯಿದ್ದರೆ ಅಲ್ಲಿಯೇ ಸ್ಟೇಷನ್ ಮಾಡುತ್ತೇವೆ. ರಾಯರೆಡ್ಡಿಯವರು ಗಂಗಾವತಿ ಕರ್ನಾಟಕ ಹಬ್ ಆಗಿದೆ ಎಂದಿದ್ದಾರೆ. ಅವರ ಸಲಹೆ ಹಾಗೂ ದೂರನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು. ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಹೇಳಿದ್ದೇವೆ. ರಾಜ್ಯ ಸರ್ಕಾರ ಎರಡು ವರ್ಷದಿಂದ ಜನಪರ ಕೆಲಸ ಮಾಡುತ್ತಿದೆ. ಜೊತೆಗೆ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿಲ್ಲ. ಸಬ್ ಇನ್ಸ್ಪೆಕ್ಟರ್ ಹಗರಣದ ನಂತರ ನೇಮಕಾತಿಯಾಗಿಲ್ಲ. ರಾಜ್ಯದಲ್ಲಿ ಸಾವಿರಾರು ಪಿಎಗಳ ಸ್ಥಾನ ಖಾಲಿಯಾಗಿವೆ ಎಂದು ತಿಳಿಸಿದರು.ಇದನ್ನೂ ಓದಿ: ಮಳೆ ಅಬ್ಬರ – ಮುರುಡೇಶ್ವರದಲ್ಲಿ ಕಡಲ ತೀರಕ್ಕೆ ನಿಷೇಧ

     

  • ಸೋಷಿಯಲ್ ಮೀಡಿಯಾ ಮಾನಿಟರ್‌ಗೆ ಪ್ರತಿ ಠಾಣೆಯಲ್ಲಿ ವಿಶೇಷ ವಿಭಾಗ ಸ್ಥಾಪನೆ: ಪರಮೇಶ್ವರ್

    ಸೋಷಿಯಲ್ ಮೀಡಿಯಾ ಮಾನಿಟರ್‌ಗೆ ಪ್ರತಿ ಠಾಣೆಯಲ್ಲಿ ವಿಶೇಷ ವಿಭಾಗ ಸ್ಥಾಪನೆ: ಪರಮೇಶ್ವರ್

    ಬೆಂಗಳೂರು: ಸಾಮಾಜಿಕ ಜಾಲತಾಣಗಳ ದುರುಪಯೋಗ ನಿಲ್ಲಿಸಲು ದೇಶದಲ್ಲಿ ಮೊದಲ ಬಾರಿಗೆ ವಿಶೇಷ ಪೊಲೀಸ್ ವಿಭಾಗವನ್ನೇ ಕರ್ನಾಟಕ ಸರ್ಕಾರ ಮಾಡಿದೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ತಿಳಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ನವೀನ್ ಪ್ರಶ್ನಿಸಿ, ಸಾಮಾಜಿಕ ಜಾಲತಾಣ ನಿಗಾವಹಿಸಲು ಪೊಲೀಸ್ ಇಲಾಖೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಪೊಲೀಸ್ ಇಲಾಖೆಗೆ ಸರ್ಕಾರ ಮತ್ತಷ್ಟು ಶಕ್ತಿಯನ್ನ ಕೊಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿ ಹೆಚ್ಚು ಗಲಭೆಗಳು ಆಗುತ್ತಿವೆ. ಸಾಮಾಜಿಕ ಜಾಲತಾಣ ನಿಯಂತ್ರಣಕ್ಕಾಗಿ ಗೃಹ ಇಲಾಖೆ ವಿಶೇಷ ಬಜೆಟ್ ನೀಡಬೇಕು. ಸಾಮಾಜಿಕ ಜಾಲತಾಣ ಮಾನಿಟರ್ ಮಾಡಲು ಕ್ರಮವಹಿಸಬೇಕು. ಇದಕ್ಕಾಗಿ ವಿಶೇಷ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾಳೆ ರೀ ರಿಲೀಸ್‌ ಆಗ್ತಿದೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಪ್ಪು’ ಸಿನಿಮಾ

    ಪ್ರಶ್ನೆಗೆ ಉತ್ತರಿಸಿದ ಸಚಿವ ಪರಮೇಶ್ವರ್ ಅವರು, ಸೋಷಿಯಲ್ ಮೀಡಿಯಾ ಬಹಳ ಉಪಯೋಗ ಆಗುತ್ತಿದೆ. ಅಷ್ಟೇ ದುರುಪಯೋಗವೂ ಸಹ ಆಗುತ್ತಿದೆ. ಟೆಕ್ನಾಲಜಿ ಇಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ನಾವು ತಲುಪಿದ್ದೇವೆ. ಫೇಸ್‌ಬುಕ್, ಎಕ್ಸ್, ಯೂಟ್ಯೂಬ್‌ಗಳನ್ನು ದುರುಪಯೋಗ ಮಾಡಿಕೊಂಡು ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಆಗುತ್ತಿದೆ. ಇದನ್ನ ನಿಯಂತ್ರಣ ಮಾಡಲು ದೇಶದಲ್ಲೇ ಮೊದಲ ಬಾರಿಗೆ ಒಂದು ವಿಭಾಗ ಪ್ರಾರಂಭ ಮಾಡಿದ್ದೇವೆ. ಎಡಿಜಿಪಿ ಸೈಬರ್ ಕ್ರೈಮ್‌ ವಿಭಾಗ ನೇಮಕ ಮಾಡಲಾಗಿದೆ. ಪ್ರತಿ ಠಾಣೆಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮಾಡಿದ್ದೇವೆ. 247 ಪೊಲೀಸರು ಮಾನಿಟರ್ ಮಾಡುತ್ತಾರೆ. ಇಂತಹ ಕೇಸ್ ಕಂಡುಬಂದ ಕೂಡಲೇ ಸುಮೋಟೋ ಕೇಸ್ ಹಾಕುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ಅರಮನೆ ಕಾಯ್ದೆ ಇಂದಿನಿಂದ ಜಾರಿ

    ಫ್ಯಾಕ್ಟ್ ಚೆಕ್ ಮಾಡುವ ಆ್ಯಪ್ ಮಾಡಿದ್ದೇವೆ. ನಿತ್ಯ ಮಾನಿಟರ್ ಮಾಡುವ ಕೆಲಸ ಮಾಡುತ್ತಿದ್ದೇವೆ. ಸುಳ್ಳು ಸುದ್ದಿ ಬಂದರೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಪೊಲೀಸ್ ಠಾಣೆಯಲ್ಲಿ ಡೆಸ್ಕ್ ಮಾಡಿಕೊಂಡಿದ್ದೇವೆ. ಠಾಣೆಯಲ್ಲಿ ಮೀಡಿಯಾಗಾಗಿ ಒಂದು ಡೆಸ್ಕ್, ಲಾ ಆ್ಯಂಡ್ ಆರ್ಡರ್‌ಗೆ ಒಂದು ಡೆಸ್ಕ್, ವೈಯಕ್ತಿಕ ಡೆಸ್ಕ್, ಸಂಘಟನೆ ಡೆಸ್ಕ್ ಅನ್ನು ಪೊಲೀಸ್ ಠಾಣೆಯಲ್ಲಿ ಮಾಡಿದ್ದೇವೆ ಎಂದು ನುಡಿದರು. ಇದನ್ನೂ ಓದಿ: ಮಲೆ ಮಹದೇಶ್ವರನಿಗೆ ಭರಪೂರ ಆದಾಯ; 20 ದಿನದಲ್ಲಿ 2.85 ಕೋಟಿ ಕಾಣಿಕೆ

    ಡ್ರಗ್ಸ್ ಹಾವಳಿ, ಆರ್ಥಿಕ ಅಪರಾಧ ಜಾಸ್ತಿ ಆಗುತ್ತಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸೈಬರ್ ಕ್ರೈಮ್‌ ಜಾಸ್ತಿ ಆಗಿದ್ದು, ಈ ವರ್ಷ 22,000 ಕೇಸ್ ದಾಖಲಾಗಿದೆ. ಕೊಲೆ, ರೇಪ್, ಫೋಕ್ಸೋ ಕೇಸ್ ಕಡಿಮೆ ಆಗಿದೆ. ಆದರೆ ಸೈಬರ್ ಕ್ರೈಮ್‌ ಕೇಸ್‌ಗಳು ಜಾಸ್ತಿ ಆಗುತ್ತಿದೆ. ಹೀಗಾಗಿ ಸರ್ಕಾರ ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಿದೆ ಎಂದರು.

  • ಲೋಕಸಭೆಯಲ್ಲಿ ನಮ್ಮ ಲೆಕ್ಕಾಚಾರ ಏರುಪೇರಾಗಿದೆ; ಬಿಜೆಪಿ-ಜೆಡಿಎಸ್ ಮೈತ್ರಿ ಸಕ್ಸಸ್ ಆಗಿದೆ: ಪರಂ

    ಲೋಕಸಭೆಯಲ್ಲಿ ನಮ್ಮ ಲೆಕ್ಕಾಚಾರ ಏರುಪೇರಾಗಿದೆ; ಬಿಜೆಪಿ-ಜೆಡಿಎಸ್ ಮೈತ್ರಿ ಸಕ್ಸಸ್ ಆಗಿದೆ: ಪರಂ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Loksabha Elctions 2024) ನಮ್ಮ ನಿರೀಕ್ಷೆಯಷ್ಟು ಸ್ಥಾನ ಗಳಿಸದೇ ಲೆಕ್ಕ ತಪ್ಪಿದ್ದೇವೆ ಎಂದು ಡಾ.ಜಿ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

    ಬೆಂಗಳೂರಿನಲ್ಲಿ‌ ಮಾತಾಡಿದ ಡಾ.ಜಿ.ಪರಮೇಶ್ವರ್ (G Parameshwar), ಬಿಜೆಪಿಗೂ ಬಹುಮತ ಬಂದಿಲ್ಲ. ಮೋದಿಯವರ ಪರವೂ ಜನಮನ್ನಣೆ ಸಿಕ್ಕಿಲ್ಲ. ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬರಲಿಲ್ಲ.‌ ಕನಿಷ್ಟ 20 ಸ್ಥಾನ ಬರುವ‌ ನಿರೀಕ್ಷೆ ಇತ್ತು. ನಮ್ಮ ಲೆಕ್ಕಾಚಾರ ತಪ್ಪಿದೆ, ಆದರೂ ಒಂದರಿಂದ ಒಂಭತ್ತು ಸ್ಥಾನ ಗೆದ್ದಿದ್ದೇವೆ.‌ ಫಲಿತಾಂಶ ಸಮಾಧಾನ ತಂದಿದೆ, ಆದ್ರೆ ಸಂತೋಷ ತಂದಿಲ್ಲ ಅಂದ್ರು.

    ಇಡೀ ಎಕ್ಸಿಟ್ ಪೋಲ್ ಒನ್ ಸೈಡ್ ಆಗಿ ಬಿಂಬಿಸಲಾಗಿತ್ತು. ಎಕ್ಸಿಟ್ ಪೋಲ್ ಫಲಿತಾಂಶ ಬಂದ ನಂತರ ಸುಳ್ಳಾಯ್ತು. ಇಂಡಿಯಾ ಒಕ್ಕೂಟ ಅತೀ ಹೆಚ್ಚು ಸೀಟುಗಳನ್ನು ಗೆದ್ದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷಗಳು ಇನ್ನೂ ಗಟ್ಟಿಯಾಗಿದೆ ಅಂತ ಫಲಿತಾಂಶ ತೋರಿಸಿದೆ. ಇನ್ನು ನಮ್ಮ ವೋಟ್ ಶೇರ್ ಹೆಚ್ಚಾಗಿದೆ. ರಾಜ್ಯದ ಜನ ನಮಗೂ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ. ಗ್ಯಾರಂಟಿಗಳಿಂದ ಜನ ಸಮಾಧಾನ ಆಗಿಲ್ಲ ಅನ್ಸತ್ತೆ. ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಳ್ತೇವೆ. ಹಳೇ ಮೈಸೂರು ಭಾಗದಲ್ಲಿ ನಮ್ಮ ನಿರೀಕ್ಷೆ ಏರುಪೇರಾಗಿದೆ. ಸ್ವಲ್ಪ ಪ್ರಯತ್ನ ಮಾಡಿದ್ರೆ ಇನ್ನೂ ನಾಲ್ಕು ಸ್ಥಾನ ಬರಬಹುದಿತ್ತು. ನಮ್ಮ ಲೆಕ್ಕಾಚಾರವೂ ತುಮಕೂರಲ್ಲಿ ಕೈಹಿಡಿಯಲಿಲ್ಲ. ಮುದ್ದಹನುಮೇಗೌಡ ಗೆಲ್ತಾರೆ ಅನ್ಕೊಂಡಿದ್ದೆವು. ಆದ್ರೆ ಗೆಲ್ಲಲಿಲ್ಲ, ಲೆಕ್ಕಾಚಾರ ಏರುಪೇರಾಗಿದೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.‌

    2019 ರ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಕ್ಸಸ್ ಆಗಿರಲಿಲ್ಲ. ಈಗ ಬಿಜೆಪಿ ಜೆಡಿಎಸ್ ಮೈತ್ರಿ ಅವರಿಗೆ ಕೈಹಿಡಿದಿದೆ. ಇವತ್ತಿಗೂ ಕೇಂದ್ರದಲ್ಲಿ ಇಂಡಿಯಾ ಕೂಟ ಸರ್ಕಾರ ಮಾಡುವ ಅವಕಾಶ ಇದೆ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಮನಸು ಮಾಡಿ ಇಂಡಿಯಾ ಕೂಟಕ್ಕೆ ಬೆಂಬಲಿಸಿದರೆ ಸಾಧ್ಯವಿದೆ ಎಂದು ಹೇಳಿದರು.

    ಸಿಬಿಐ ಪತ್ರ ಬರೆದರೆ ವಾಲ್ಮಿಕಿ ಅಕ್ರಮ ಪ್ರಕರಣ ವಹಿಸ್ತೇವೆ: ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಎಂಟ್ರಿ ಆಗಿರುವ ಬಗ್ಗೆ ಮಾತಾಡಿದ ಪರಮೇಶ್ವರ್, ಸಿಬಿಐನವರಿಗೆ ಯೂನಿಯನ್ ಬ್ಯಾಂಕಿನವರು ಪತ್ರ ಬರೆದಿದ್ರು. ಮೂರು ಕೋಟಿಗೂ ಹೆಚ್ಚು ಅಕ್ರಮ ಆಗಿದ್ರೆ ಸಿಬಿಐ ಸೂಮೋಟೋ ದೂರು ದಾಖಲು ಮಾಡಬಹುದು. ಬ್ಯಾಂಕ್ ನವರು ಪತ್ರ ಬರೆದಿದ್ದರು. ಈಗ ಸಿಬಿಐನವರು ತನಿಖೆ ಮಾಡ್ತಾರೆ.

    ನಾವು ಸಿಬಿಐನವ್ರಿಗೆ ತನಿಖೆ ವಹಿಸಬೇಕಾಗುತ್ತದೆ. ಅದಕ್ಕೂ ಮೊದಲು ಸಿಬಿಐ ನವ್ರು ನಮಗೆ ಪತ್ರ ಬರೆಯಬೇಕು. ಸರ್ಕಾರ ಕೇಸ್ ಸಿಬಿಐಗೆ ವಹಿಸಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ತಗೋಬೇಕಾಗುತ್ತೆ. ಈಗ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ನಡೆಸಲು ಆಗಲ್ಲ. ಮೊದಲು ಸಿಬಿಐನವರು ಪತ್ರ ಬರೆಯಲಿ, ಆಮೇಲೆ ನೋಡ್ತೇವೆ. ಪ್ರಕರಣ ಸಿಬಿಐಗೆ ವಹಿಸುವ ಬಗ್ಗೆ ಕ್ಯಾಬಿನೆಟ್ ನಲ್ಲಿ ತೀರ್ಮಾನ. ಸಿಬಿಐನವರು ಅಗತ್ಯ ಬಿದ್ದರೆ ಸಚಿವ ನಾಗೇಂದ್ರರಿಗೂ ವಿಚಾರಣೆಗೆ ನೊಟೀಸ್ ಕೊಡಬಹುದು. ಸಿಬಿಐ ನಿಯಮದಂತೆ ತನಿಖೆ ನಡೆಯಬಹುದು ಅಂತ ಪರಮೇಶ್ವರ್ ತಿಳಿಸಿದರು.

  • ಪ್ರಜ್ವಲ್ ಎಲ್ಲಿದ್ದಾರೆ ಅಂತ ಗೊತ್ತೇ ಇಲ್ಲ: ಪರಮೇಶ್ವರ್

    ಪ್ರಜ್ವಲ್ ಎಲ್ಲಿದ್ದಾರೆ ಅಂತ ಗೊತ್ತೇ ಇಲ್ಲ: ಪರಮೇಶ್ವರ್

    – ಕಾರ್ತಿಕ್ ಗೌಡ ಬೆಂಗಳೂರಿನಲ್ಲೆ ಇದ್ದಾನೆ

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಪ್ರಕರಣ ದಿನೇದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಏಪ್ರಿಲ್ 29 ರಂದು ಪ್ರಜ್ವಲ್ ರೇವಣ್ಣ (Prajwal Revanna) ವಿದೇಶಕ್ಕೆ ಹಾರಿದ್ದಾರೆ. ಆದ್ರೆ ಇದುವರೆಗೂ ಸಹ ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಪ್ರಜ್ವಲ್‍ಗಾಗಿ ಎಸ್‍ಐಟಿ (SIT) ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

    ಇಂದು ರಾಜ್ಯದ ಗೃಹ ಸಚಿವ ಡಾ. ಜಿ ಪರಮೇಶ್ವರ್ (Dr. G Parameshwar) ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಪ್ರಜ್ವಲ್ ರೇವಣ್ಣ ಅವರು ಪ್ರಮುಖ ಆರೋಪಿ, ಅವರು ದೇಶ ಬಿಟ್ಟು ಹೋಗಿದ್ದಾರೆ. ಹಾಸನ ಜಿಲ್ಲೆಯ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎಸ್‍ಐಟಿ ಗಂಭಿರವಾಗಿ ಪರಿಗಣಿಸಿದೆ. ಅವರನ್ನ ವಾಪಸ್ ಕರೆತರಲು ಸಿಬಿಐಗೆ ಬ್ಲೂ ಕಾರ್ನರ್ ನೋಟಿಸ್ ನೀಡಬೇಕೆಂದು ಎಸ್‍ಐಟಿಯವರು ಮನವಿ ಮಾಡಿದ್ರು. ಅಂತೆಯೇ ಸಿಬಿಐ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. 197 ದೇಶಗಳಲ್ಲಿ ಇಂಟರ್  ಪೋಲ್ ನಿಂದ ಬ್ಲೂ ಕಾರ್ನರ್ ನೋಟಿಸ್ ಹೋಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ- ಡಿಕೆಶಿಗೆ ದೇವರಾಜೇಗೌಡ ಓಪನ್‌ ಚಾಲೆಂಜ್

    ಕಾರ್ತಿಕ್ ಗೌಡ ಇಲ್ಲಿಯೇ ಇದ್ದಾರೆ. ಅವರು ಹೇಳಿಕೆ ಕೊಟ್ಟಿದ್ದಾರೆ. ಅವರ ಬಂಧನದ ಬಗ್ಗೆ ಎಸ್ ಐಟಿ ತೀರ್ಮಾನ ಮಾಡುತ್ತೆ. ಇನ್ನು ಪ್ರಜ್ವಲ್ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಜರ್ಮನಿಗೆ ಹೋಗಿರೋದಷ್ಟೇ ಗೊತ್ತು. ದುಬೈಗೆ ಹೋಗಿದ್ದಾರೆ ಅದೆಲ್ಲ ಗೊತ್ತಿಲ್ಲ, ಇನ್ನೂ ನಿಖರವಾಗಿ ಎಲ್ಲಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ರು.

  • ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಪಾರ್ಟಿ- ಗೃಹಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದ್ರಾ ಸಿಎಂ?

    ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಪಾರ್ಟಿ- ಗೃಹಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದ್ರಾ ಸಿಎಂ?

    ಬೆಂಗಳೂರು: ಗೃಹ ಸಚಿವ ಪರಮೇಶ್ವರ್ (Dr. G Parameshwar) ಅವರ ಸದಾಶಿವನಗರ ನಿವಾಸದಲ್ಲಿ ಭೋಜನ ಕೂಟ (Dnner Party) ಏರ್ಪಡಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.

    ಈ ಭೇಟಿಯಲ್ಲಿ ನಿಗಮ ಮಂಡಳಿ ನೇಮಕದ ಬಗ್ಗೆ ನೂತನ ಕಾರ್ಯಾಧ್ಯಕ್ಷರ ನೇಮಕದ ಬಗ್ಗೆ ಉಭಯ ನಾಯಕರ ಮಧ್ಯೆ ಸಾಕಷ್ಟು ಚರ್ಚೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಸಿಎಂ ಅವರು ಪರಮೇಶ್ವರ್ ರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದ್ರಾ ಎಂಬ ಪ್ರಶ್ನೆ ಎದ್ದಿದೆ.

    8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ, ಉಪಮುಖ್ಯಮಂತ್ರಿ ಆಗಿದ್ದ ಪರಮೇಶ್ವರ್ ಅವರನ್ನು ಈ ಹಿಂದೆ 2013 ರಲ್ಲಿ ಕೊರಟಗೆರೆಯಲ್ಲಿ ಸೋಲಿಸಿದ ಅಪವಾದವನ್ನು ಸಿದ್ದರಾಮಯ್ಯ (Siddaramaiah) ಹೊತ್ತಿದ್ದರು. ಹೀಗಾಗಿ ಸದ್ಯ ಈ ಮೂಲಕ ಪರಮೇಶ್ವರ್ ಅವರನ್ನ ವಿಶ್ವಾಸಕ್ಕೆ ತಗೆದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಚರ್ಚೆ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಒಟ್ಟಿನಲ್ಲಿ ಪರಮೇಶ್ವರ್ ಸಿದ್ದರಾಮಯ್ಯ ಸ್ನೇಹ ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ನ ಸಾಕಷ್ಟು ಆಂತರಿಕ ಬೆಳವಣಿಗೆಗಳಿಗೆ ಕಾರಣವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.

    ಭೇಟಿ ಬಳಿಕ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಸಿಎಂ ಅವರು ನಮ್ಮ ಮನೆಗೆ ಬಂದಿದ್ರು. ನಾನು ಸತೀಶ್, ಮಹಾದೇವಪ್ಪನವರು ಊಟಕ್ಕೆ ಸೇರಿದ್ವಿ. ಊಟ ಮಾಡಿದ್ವಿ ಅಷ್ಟೇ ಬೇರೆ ಏನೂ ಚರ್ಚೆಯಾಗಿಲ್ಲ. ನಿಗಮ ಮಂಡಳಿಯ ಬಗ್ಗೆ ಇಲ್ಲಿ ಚರ್ಚೆ ಮಾಡೋಕಾಗುತ್ತಾ..?. ರಾಜಕೀಯವಾಗಿ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: Hombale Films: ನ.4ರಂದು ರಿಲೀಸ್ ಆಗಲಿದೆ ಹುಲಿ ಸಂರಕ್ಷಣೆಯ ಸಾಕ್ಷ್ಯ ಚಿತ್ರ

    ಇತ್ತ ಸಚಿವ ಸತೀಶ್ ಜಾರಕಿಹೊಳಿ (Sathish Jarakiholi) ಪ್ರತಿಕ್ರಿಯಿಸಿ, ನಾನು ಸಿಎಂ ಎಲ್ಲಾ ಊಟಕ್ಕೆ ಬಂದಿದ್ವಿ. ನಾವು ಸೇರಿದ ಮೇಲೆ ರಾಜಕೀಯ ಅಲ್ಲದೇ ಬೇರೆ ಏನು ಮಾತಾಡೋದು..?. ಸಣ್ಣಪುಟ್ಟ ರಾಜಕೀಯ ಚರ್ಚೆಯಾಗಿದೆ. ರಾಜಕೀಯ, ರಾಜಕಾರಣ ಎಂದ ಮೇಲೆ ಸಣ್ಣ ಪುಟ್ಟ ಅಸಮಾಧಾನ ಇದ್ದೇ ಇರುತ್ತದೆ. ಮಾತುಕತೆಗಳು ಅಗಾಗ ಅಗ್ತಿರ್ತಾವೆ ಅದು ಬಿಟ್ಟು ಬೇರೆ ಏನೂ ಇಲ್ಲ. ನಿಗಮ ಮಂಡಳಿಯ ನೇಮಕದ ಬಗ್ಗೆ ಚರ್ಚೆಯಾಗಿಲ್ಲ ಅಂದ್ರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಚ್‍ಎಎಲ್‍ನಲ್ಲಿ ಉದ್ಯೋಗವಕಾಶಕ್ಕೆ ಮನವಿ: ಪರಮೇಶ್ವರ್

    ಎಚ್‍ಎಎಲ್‍ನಲ್ಲಿ ಉದ್ಯೋಗವಕಾಶಕ್ಕೆ ಮನವಿ: ಪರಮೇಶ್ವರ್

    ತುಮಕೂರು: ಜಿಲ್ಲೆಯ ಗುಬ್ಬಿ ಸಮೀಪ ನಿರ್ಮಾಣವಾಗಿರುವ ಎಚ್‍ಎಎಲ್ (HAL) ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಸಂಸ್ಥೆ ಮುಖ್ಯಸ್ಥರನ್ನು ಕೇಳಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ (G Parameshwar) ತಿಳಿಸಿದರು.

    ಸ್ವಾತಂತ್ರ್ಯ ದಿನಾಚರಣೆ (Independence Day) ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅರ್ಹತೆ ಆಧಾರದ ಮೇಲೆ ಸ್ಥಳೀಯರಿಗೆ ಉದ್ಯೋಗ ಕೊಡಬೇಕು. ಜಮೀನು ಕೊಟ್ಟವರಿಗೆ ಕಡ್ಡಾಯವಾಗಿ ಉದ್ಯೋಗ (Job) ನೀಡಬೇಕು. ಕೊನೆಗೆ ಕಸ ಗುಡಿಸುವ ಕೆಲಸವನ್ನಾದರೂ ಕೊಡುವಂತೆ ಹೇಳಿದ್ದೇವೆ ಎಂದರು.

    ಜಿಲ್ಲೆಯಲ್ಲಿ ಹೊಸದಾಗಿ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ರಾಜ್ಯ ಸರ್ಕಾರದ ಹಂತದಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸದ್ಯಕ್ಕೆ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾಪ ಇಲ್ಲ. ಆದರೆ ಮುಂದಿನ ದಿನಗಳಲ್ಲಿ ಕಾರ್ಗೊ ವಿಮಾನ ನಿಲ್ದಾಣ ನಿರ್ಮಾಣವಾಗಬಹುದು ಎಂದು ಸುಳಿವು ನೀಡಿದರು. ಇದನ್ನೂ ಓದಿ: ಅದೇನ್ ಬಿಚ್ಚಿಡ್ತಾರೋ ಬಿಚ್ಚಿಡಲಿ- ಹೆಚ್‍ಡಿಕೆಗೆ ಡಿಕೆಶಿ ಸವಾಲು

    ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ನಡೆದ ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರು ಬೇಡಿಕೆ ಸಲ್ಲಿಸಿದ್ದು, ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡುವಂತೆ ಕೇಳಿಕೊಂಡಿದ್ದೇವೆ. ತುಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಗಮನಕ್ಕೆ ಬಂದರೆ ತನಿಖೆ ನಡೆಸಲಾಗುವುದು. ಬರಪೀಡಿತ ತಾಲೂಕು ಘೋಷಣೆ ಬಗ್ಗೆ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ವಿವರಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ ಮೀಸೆಗೆ ಹೆದರಿದ್ರಾ ಜಿ.ಪರಮೇಶ್ವರ್?

    ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ ಮೀಸೆಗೆ ಹೆದರಿದ್ರಾ ಜಿ.ಪರಮೇಶ್ವರ್?

    ತುಮಕೂರು: ಚುನಾವಣಾ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ ಇತ್ತ ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಡಿಕೊಂಡು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಇದೀಗ ಮಾಜಿ ಡಿಸಿಎಂ ಜಿ.ಪರಮೇಶ್ವರ್ (Dr. G Parameshwar) ಅವರ ಕಣ್ಣು ಕೊರಟಗೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಮೀಸೆ ಮೇಲೆ ಬಿದ್ದಂಗಿದೆ. ಈ ಮೂಲಕ ಅನಿಲ್ ಕುಮಾರ್ (Anil Kumar) ಮೀಸೆಗೆ ಪರಂ ಹೆದರಿದ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

    ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಬೆಂಬಲಿತ ಒಕ್ಕಲಿಗ ಮುಖಂಡರ ಸಮಾವೇಶದಲ್ಲಿ ಮಾತನಾಡಿದ ಅವರು, ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ ಎಂದು ಡಾ.ಜಿ.ಪರಮೇಶ್ವರ್ ಸವಾಲೆಸೆದರು. ಯಾವ ಮೀಸೆನೂ ಇಲ್ಲ ಗೀಸೆಗೂ ನಾನು ಹೆದರೋಲ್ಲ ಎಂದು ಪರೋಕ್ಷವಾಗಿ ಅನಿಲ್ ಕುಮಾರ್ ಗೆ ಟಾಂಗ್ ನೀಡಿದರು. ಸಾವಿರ ಜನ ಕರೆದ್ರು ಬೆಂಗಳೂರಿಗೆ ಬನ್ನಿ ಅಂತಾ. ಆದರೆ ನಾನು ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತೀನಿ ಎಂದರು. ಇದನ್ನೂ ಓದಿ: ಚುನಾವಣೆಗೆ‌ ಸ್ಪರ್ಧಿಸಲು ಗೂಳಿಹಟ್ಟಿ ಶೇಖರ್‌ಗೆ ದೇಣಿಗೆ ನೀಡಿದ ಮತದಾರರು

    ಇಷ್ಟು ವರ್ಷ ಕೊರಟಗೆರೆಯಲ್ಲಿ ಕಾಂಗ್ರೆಸ್‍ಗೆ ಕೇವಲ ಜೆಡಿಎಸ್ (JDS) ಮಾತ್ರ ಪ್ರತಿಸ್ಪರ್ಧಿ ಆಗಿತ್ತು. ಈಗ ಬಿಜೆಪಿಯ ಅನಿಲ್ ಕುಮಾರ್ ಪ್ರಬಲ ಪೈಪೋಟಿ ಕೊಡುವ ಸಾಧ್ಯತೆ ಇದೆ. ಭಾನುವಾರ ಬಿ.ವೈ ವಿಜಯೇಂದ್ರ (B Y Vijayendra), ತೇಜಸ್ವಿ ಸೂರ್ಯ (Tejaswi Surya)ಉಪಸ್ಥಿತಿಯಲ್ಲಿ ಅನಿಲ್ ಕುಮಾರ್ ಅವರು ಬೃಹತ್ ರ್ಯಾಲಿ ನಡೆಸಿದ್ದರು. ಹಾಗಾಗಿ ಪದೇ ಪದೇ ಅನಿಲ್ ಕುಮಾರ್ ಮೀಸೆ ಬಗ್ಗೆ ಪರಂ ತಮ್ಮ ಭಾಷಣದುದ್ದಕ್ಕೂ ಲೇವಡಿ ಮಾಡಿದರು.

  • ಪೊಲೀಸ್ ಠಾಣೆ ಮೆಟ್ಟಿಲೇರಿದ ಡಾ. ಜಿ. ಪರಮೇಶ್ವರ್!

    ಪೊಲೀಸ್ ಠಾಣೆ ಮೆಟ್ಟಿಲೇರಿದ ಡಾ. ಜಿ. ಪರಮೇಶ್ವರ್!

    ಬೆಂಗಳೂರು: ಸೋಶಿಯಲ್ ಮೀಡಿಯಾ (Social Media) ಹಾವಳಿಯಿಂದ ಬೇಸತ್ತ ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr. G Parameshwar) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಅವಹೇಳನ ಬರವಣಿಗೆ ವಿರುದ್ಧ ಪರಮೇಶ್ವರ್ ದೂರು ನೀಡಿದ್ದಾರೆ. ಫೇಸ್‍ಬುಕ್ (Facebook) ಮತ್ತು ಯೂಟ್ಯೂಬ್ (Youtube) ನಲ್ಲಿ ತಮ್ಮ ಮತ್ತು ತಮ್ಮ ಮಗಳ ಬಗ್ಗೆ ವೀಡಿಯೋ ಹಾಕಿ ಅವಹೇಳನ ಮಾಡಿದ್ದು, ಫೇಸ್ ಬುಕ್ ಮತ್ತು ಯೂಟ್ಯೂಬ್ ನಲ್ಲಿ ನಕಲಿ ಖಾತೆ ತೆರೆದು ವೀಡಿಯೋ ಅಪ್ಲೋಡ್ ಮಾಡಲಾಗ್ತಿದೆ. ರಾಜಕೀಯವಾಗಿ ತಗ್ಗಿಸಲು ಸಾಮಾಜಿಕ ಜಾಲತಾಣಗಳನ್ನ ಬಳಸಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ. ಇದನ್ನೂ ಓದಿ: ಕಾಯಕಯೋಗಿಗಳಿಂದ ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜು

    ಇಬ್ಬರ ಬಗ್ಗೆ ಅವಹೇಳನಕಾರಿ ವೀಡಿಯೋಗಳನ್ನ ಅಪ್ಲೋಡ್ ಮಾಡುವುದರ ಜೊತೆಗೆ ಪರಮೇಶ್ವರ್ ಘನತೆಗೆ ಕುಂದು ತರಲು ಯತ್ನಿಸಿದ್ದಾರೆ ಅಂತಾ ಪೊಲೀಸ್ ಠಾಣೆಗೆ ತಮ್ಮ ಆಪ್ತನ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ

    ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್‍ಐಆರ್ ದಾಖಲಾಗಿದೆ.

  • ಕೇವಲ 5 ನಿಮಿಷ- ಭಾರೀ ಅನಾಹುತದಿಂದ ಪಾರಾದ್ರು ಡಾ. ಜಿ ಪರಮೇಶ್ವರ್!

    ಕೇವಲ 5 ನಿಮಿಷ- ಭಾರೀ ಅನಾಹುತದಿಂದ ಪಾರಾದ್ರು ಡಾ. ಜಿ ಪರಮೇಶ್ವರ್!

    ತುಮಕೂರು: ಗೊರವನಹಳ್ಳಿಯಿಂದ ತೀತಾಗೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದಾಗಿ ಕುಸಿದು ಬಿದ್ದಿದ್ದು, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ಬಳಿಕ ಕೇವಲ 5 ನಿಮಿಷಕ್ಕೆ ತೀತಾ ಸೇತುವೆ ಕುಸಿತವಾಗಿದೆ.

    ಕೊರಟಗೆರೆ ತಾಲೂಕಿನ ತೀತಾ ಸೇತುವೆ ಗುರುವಾರ ರಾತ್ರಿಯ ಮಳೆಗೆ ಮುಂಜಾನೆ ಅರ್ಧ ಕುಸಿದಿತ್ತು. ಕುಸಿತದ ಹಿನ್ನೆಲೆ ಸ್ಥಳ ವೀಕ್ಷಿಸಲು ಪರಮೆಶ್ವರ್ ಇಂದು ಸಂಜೆ ಆಗಮಿಸಿದ್ದರು. ಪರಮೇಶ್ವರ್ ಅವರು ಸೇತುವೆ ಮೇಲೆಯೇ ನಿಂತು ಕುಸಿತವಾಗಿದ್ದ ಭಾಗವನ್ನು ವೀಕ್ಷಿಸಿದ್ದರು. ಇದನ್ನೂ ಓದಿ: ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ಲೇಡಿ ಸಿಂಗಂ ಇನ್ನಿಲ್ಲ!

    ಸ್ಥಳ ವೀಕ್ಷಣೆ ಬಳಿಕ ಪರಮೇಶ್ವರ್ ಅಲ್ಲಿಂದ ಮುಂದೆ ಹೋಗಿದ್ದರು. ಅವರು ತೆರಳಿದ ಕೇವಲ 5 ನಿಮಿಷಗಳ ಬಳಿಕ ಸೇತುವೆಯ ಇನ್ನೊಂದು ಭಾಗವೂ ಕುಸಿತವಾಗಿದೆ. ಪರಮೇಶ್ವರ್ ನಿಂತಿದ್ದ ಜಾಗವೂ ಕುಸಿತವಾಗಿದ್ದು, ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

    ಸೇತುವೆ ಕುಸಿತದ ಹಿನ್ನೆಲೆ ಗೊರವನಹಳ್ಳಿಯಿಂದ ತೀತಾಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಸದ್ಯ ಪರ್ಯಾಯ ಮಾರ್ಗದ ಮೂಲಕ ವಾಹನಗಳು ಸಂಚರಿಸುತ್ತಿವೆ. ಇದನ್ನೂ ಓದಿ: BMTCಗೆ ನಷ್ಟದ ಮೇಲೆ ನಷ್ಟ- ಬೆಂಗ್ಳೂರಿನಲ್ಲಿ ವೋಲ್ವೊಗಿಂತ ಎಲೆಕ್ಟ್ರಿಕ್‌ ಬಸ್ಸುಗಳಿಗೇ ಡಿಮ್ಯಾಂಡ್

    Live Tv
    [brid partner=56869869 player=32851 video=960834 autoplay=true]

  • ನಮಗೆ ಇಡೀ ಜಿಲ್ಲೆ ಅಭಿವೃದ್ದಿ ಮುಖ್ಯ, ಅಂತಹ ಪಾಪದ ಕೆಲಸ ನಾವು ಮಾಡಿಲ್ಲ: ಮಾಧುಸ್ವಾಮಿ

    ನಮಗೆ ಇಡೀ ಜಿಲ್ಲೆ ಅಭಿವೃದ್ದಿ ಮುಖ್ಯ, ಅಂತಹ ಪಾಪದ ಕೆಲಸ ನಾವು ಮಾಡಿಲ್ಲ: ಮಾಧುಸ್ವಾಮಿ

    ತುಮಕೂರು: ನಮಗೆ ಇಡೀ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಅಂತಹ ಪಾಪದ ಕೆಲಸ ನಾವು ಮಾಡಿಲ್ಲ ಎಂದು ಸಚಿವ ಮಾಧುಸ್ವಾಮಿ ಅವರು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಕ್ಷೇತ್ರದ ಅನುದಾನವನ್ನು ಬಿಜೆಪಿ ಸರ್ಕಾರ ಹಿಂಪಡೆದಿದೆ ಎಂಬ ಪರಂ ಆರೋಪಕ್ಕೆ ಪ್ರತಿಕ್ರಿಯಿಸಿದರು. ಜಿ.ಪರಮೇಶ್ವರ್ ಜಿಲ್ಲಾ ಮಂತ್ರಿಗಳಾಗಿದ್ದಾಗ ತಾರತಮ್ಯ ನೀತಿ ಅನುಸರಿಸಿದ್ದರು. ಕೇವಲ ಮಧುಗಿರಿ ಮತ್ತು ಕೊರಟಗೆರೆಗೆ 110 ಭವನಗಳನ್ನ ಕೊಟ್ಟಿದ್ರು. ಚಿಕ್ಕನಾಯಕನಹಳ್ಳಿಗೆ 2 ಮಾತ್ರ ಭವನ ಕೊಟ್ಟಿದ್ರು. ಇದು ಮಾನ ಮರ್ಯಾದೇ ಇರುವವರು ಮಾಡೊ ಕೆಲಸನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಯಲಲಿತಾ ನಿವಾಸ ಸ್ವಾಧೀನ- ತಮಿಳುನಾಡು ಸರ್ಕಾರದ ನಿಲುವಿಗೆ ಹೈಕೋರ್ಟ್ ತಡೆ

    ನಮಗೆ ಇಡೀ ಜಿಲ್ಲೆ ಅಭಿವೃದ್ದಿ ಮುಖ್ಯ, ಅಂತಹ ಪಾಪದ ಕೆಲಸ ನಾವು ಮಾಡಿಲ್ಲ. ಇವರ ಸರ್ಕಾರ ಇದ್ದಾಗ ಇಚ್ಚಾನುಸಾರ ಅನುದಾನ ಮಂಜೂರು ಮಾಡಿಕೊಂಡಿದ್ರು. ಅದಕ್ಕೆಲ್ಲ ಅಡ್ಡಗೋಡೆ ಹಾಕಿ ಕಂಟ್ರೋಲ್ ಮಾಡಿದ್ವಿ. ಎಲ್ಲಾ ಕಡೆ ಅನುದಾನ ಸಮರ್ಪಕವಾಗಿ ಹಂಚಲು ವಾತವರಣ ಸೃಷ್ಟಿ ಮಾಡಿದ್ದೇವೆ. ಮಂತ್ರಿಯಾಗಿ ನಿಮ್ಮ ಜನ್ಮಕ್ಕೆ ನಾಚಿಕೆಯಾಗಲ್ವಾ..? ಕೊರಟಗೆರೆ ಕ್ಷೇತ್ರಕ್ಕೆ ಮನೆಗಳ ಮಹಾಪೂರ ಹರಿಸಿದ್ರಿ. ಬೇರೆ ಕ್ಷೇತ್ರಗಳಿಗೆ ಏಕೆ ಮಾಡ್ಲಿಲ್ಲ ಎಂದು ಮಾಧುಸ್ವಾಮಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಂಹಕ್ಕೆ ಆಹಾರವಾಗುತ್ತಿದ್ದ ಯುವಕ: ತಪ್ಪಿತು ಭಾರೀ ದುರಂತ