Tag: ಡಾ ಕೆ ಸುಧಾಕರ್

  • ಡ್ರೈವರ್‌ ಬಾಬು ಆತ್ಮಹತ್ಯೆ ಕೇಸ್‌ – ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ FIR

    ಡ್ರೈವರ್‌ ಬಾಬು ಆತ್ಮಹತ್ಯೆ ಕೇಸ್‌ – ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ FIR

    ಚಿಕ್ಕಬಳ್ಳಾಪುರ: ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ (Congress Vs BJP) ನಡುವೆ ರಾಜಕೀಯ ಜಟಾಪಟಿ ಜೋರಾಗಿದೆ.

    ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಸಂಸದ ಸುಧಾಕರ್ (Dr. K Sudhakar) ಬೆಂಬಲಿಗರ ನಡುವೆ ಫೋಸ್ಟರ್ ವಾರ್ ನಡೆದಿತ್ತು. ಇದೀಗ ಘಟನೆ ಸಂಬಂಧಿಸಿದಂತೆ ಸಂಸದ ಸುಧಾಕರ್ ಬೆಂಬಲಿಗ, ಮುನಿರಾಜು ಎಂಬಾತ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರಾದ ವಿನಯ್ ಬಂಗಾರಿ, ಹಮೀಮ್, ಸುಧಾಕರ್, ದೀಪು, ಸಲೀಂ ವಿರುದ್ಧ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿದ ಆರೋಪದಡಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಶಾಸಕ ಪ್ರದೀಪ್‌ ಈಶ್ವರ್‌ ಬೆಂಬಲಿಗರ ವಿರುದ್ಧ ಆಟ್ರಾಸಿಟಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಸಂಸದ ಸುಧಾಕರ್‌ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಕೇಸ್‌ – ಮೃತ ಬಾಬು ಮನೆಗೆ ಪ್ರದೀಪ್‌ ಈಶ್ವರ್‌ ಭೇಟಿ

    ಸುಧಾಕರ್ ಬೆಂಬಲಿಗರ ವಿರುದ್ಧವೂ ಪ್ರತಿದೂರು
    ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ ದೂರು ದಾಖಲಾಗ್ತಿದ್ದಂತೆ ಇತ್ತ ಸಂಸದ ಸುಧಾಕರ್ ಬೆಂಬಲಿಗರ ವಿರುದ್ಧವೂ ದೂರು ದಾಖಲಿಸಲಾಗಿದೆ. ಸಂಸದ ಸುಧಾಕರ್ ಬೆಂಬಲಿಗರಾದ ನಗರಸಭೆ ಅಧ್ಯಕ್ಷ ಗಜೇಂದ್ರ ಆತನ ಸಹೋದರ ರವಿ, ಅತ್ತಿಗೆ ಶೋಭಾ ಸೇರಿ ಮುನಿರಾಜು ವಿರುದ್ಧ ದೂರು ದಾಖಲು ಮಾಡಲಾಗಿದೆ. ಇದನ್ನೂ ಓದಿ: ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

    ಪ್ರದೀಪ್ ಈಶ್ವರ್ ಬೆಂಬಲಿಗ ಮೊಹಮ್ಮದ್‌ ಹಮೀಮ್ ಎಂಬಾತ ಹಲ್ಲೆ ಮಾಡಿ ಪ್ರಾಣ ಬೆದರಕೆ ಹಾಕಿರುವುದಾಗಿ ದೂರು ಸಲ್ಲಿಕೆ ಮಾಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಎರಡು ಕಡೆ ದೂರು ಹಾಗೂ ಪ್ರತಿದೂರುಗಳು ದಾಖಲಾಗಿವೆ. ಇದನ್ನೂ ಓದಿ: ವಿಪಕ್ಷದ ನಾಯಕರಿಗೆ ಕಿರುಕುಳ ನೀಡಲು ಪೊಲೀಸರ ಬಳಕೆ, ಸಂಸದ ಸುಧಾಕರ್‌ ಗುರಿಯಾಗಿಸಿ FIR: ಆರ್‌.ಅಶೋಕ್‌ ಕಿಡಿ

  • ವಿಪಕ್ಷದ ನಾಯಕರಿಗೆ ಕಿರುಕುಳ ನೀಡಲು ಪೊಲೀಸರ ಬಳಕೆ, ಸಂಸದ ಸುಧಾಕರ್‌ ಗುರಿಯಾಗಿಸಿ FIR: ಆರ್‌.ಅಶೋಕ್‌ ಕಿಡಿ

    ವಿಪಕ್ಷದ ನಾಯಕರಿಗೆ ಕಿರುಕುಳ ನೀಡಲು ಪೊಲೀಸರ ಬಳಕೆ, ಸಂಸದ ಸುಧಾಕರ್‌ ಗುರಿಯಾಗಿಸಿ FIR: ಆರ್‌.ಅಶೋಕ್‌ ಕಿಡಿ

    ಬೆಂಗಳೂರು: ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಲು ಸರ್ಕಾರ ಪೊಲೀಸರನ್ನು ಬಳಸುತ್ತಿದೆ. ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ, ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್‌ ಅವರ ಪಾತ್ರ ಇಲ್ಲದಿದ್ದರೂ ಅವರ ವಿರುದ್ಧ ಎಫ್‌ಐಆರ್‌ (FIR) ದಾಖಲಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R Ashok) ಆಕ್ರೋಶ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಡಾ.ಕೆ.ಸುಧಾಕರ್‌ (K Sudhakar) ವಿರುದ್ಧ ಎಫ್‌ಐಆರ್‌ ಮಾಡಿ ಎ1 ಆರೋಪಿ ಮಾಡಿದ್ದಾರೆ. ಆತ್ಮಹತ್ಯೆಗೆ ಅವರೇ ಸಂಪೂರ್ಣ ಒತ್ತಡ ಹೇರಿದರೆ ಮಾತ್ರ ಈ ರೀತಿ ಎಫ್‌ಐಆರ್‌ ಮಾಡಬೇಕಾಗುತ್ತದೆ. ಆದರೆ ಸುಧಾಕರ್‌ ಚಾಲಕ ಬಾಬು ಅವರ ಜೊತೆ ಆಪ್ತ ಸಂಬಂಧವೇನೂ ಇಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಜಾತಿ ನಿಂದನೆಯ ಆರೋಪ ಬರುವುದೇ ಇಲ್ಲ. ಸುಧಾಕರ್‌ ಆ ವ್ಯಕ್ತಿಯನ್ನು ಎದುರಿಗೆ ನಿಲ್ಲಿಸಿಕೊಂಡು ನಿಂದಿಸಿಲ್ಲ, ಅಥವಾ ಸಂದೇಶ ಕಳುಹಿಸಿಲ್ಲ. ಕಾಂಗ್ರೆಸ್‌ ಸರ್ಕಾರ ವಿಪಕ್ಷಗಳ ನಾಯಕರನ್ನು ಗುರಿಯಾಗಿಸುವುದು ಸ್ಪಷ್ಟವಾಗಿದೆ ಎಂದರು. ಇದನ್ನೂ ಓದಿ: ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷ್ಣಭೈರೇಗೌಡ ನೇಮಕ

    ಈ ಹಿಂದೆ ಶಾಸಕ ಬೈರತಿ ಬಸವರಾಜ್‌ ಅವರ ಮೇಲೂ ಇದೇ ರೀತಿ ಕ್ರಮ ಕೈಗೊಳ್ಳಲಾಗಿದೆ. ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಡೆತ್‌ನೋಟ್‌ ಬರೆದಿಟ್ಟು ಸತ್ತಿದ್ದರು. ಆದರೆ ಕಾಂಗ್ರೆಸ್‌ ಶಾಸಕರಾದ ಎ.ಎಸ್‌.ಪೊನ್ನಣ್ಣ ಹಾಗೂ ಮಂಥರ್‌ ಗೌಡ ಅವರ ಹೆಸರು ಎಫ್‌ಐಆರ್‌ನಲ್ಲಿ ಬರಲೇ ಇಲ್ಲ. ಪೊಲೀಸರು ಎಲ್ಲರಿಗೂ ಸಮಾನವಾಗಿ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ʻಕುಣಿಯಲು ಬಾರದೇ ನೆಲ ಡೊಂಕುʼ ರಾಹುಲ್‌ ಗಾಂಧಿ ಮತಗಳ್ಳತನ ಆರೋಪಕ್ಕೆ ಪ್ರಹ್ಲಾದ್ ಜೋಶಿ‌ ವ್ಯಂಗ್ಯ

    ಚಾಲಕ ಬಾಬು ಬೇರೆ ಬೇರೆ ಕಾರಣಗಳಿಂದ ಸಾಲ ಮಾಡಿದ್ದರು. ಅವರಿಗೆ ಕೆಲವರು ವಂಚನೆ ಮಾಡಿದ್ದರು. ಆದರೆ ಇದರಲ್ಲಿ ಡಾ.ಕೆ.ಸುಧಾಕರ್‌ ಪಾತ್ರವೇನು ಎಂಬುದು ಸ್ಪಷ್ಟವಾಗಿಲ್ಲ. ವಿರೋಧ ಪಕ್ಷದವರಿಗೆ ಕಿರುಕುಳ ಕೊಡಲು ಸರ್ಕಾರ ಹೀಗೆ ಮಾಡುತ್ತಿದೆ. ಈ ಪ್ರಕರಣದಲ್ಲಿ ಡೆತ್‌ನೋಟ್‌ ಮುಂಚಿತವಾಗಿಯೇ ಸಿಕ್ಕರೂ ಅದನ್ನು ಪೊಲೀಸರಿಗೆ ತಿಳಿಸಿಲ್ಲ. ಚಾಲಕ ಬಾಬು ಅವರ ಕುಟುಂಬದವರು ಡಾ.ಕೆ.ಸುಧಾಕರ್‌ ಹೆಸರು ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ್ದರೂ, ಅವರನ್ನು ಎ1 ಆರೋಪಿ ಮಾಡಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ಆರಾಧನಾ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಸಪ್ತರಾತ್ರೋತ್ಸವಕ್ಕೆ ಚಾಲನೆ

  • ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್

    ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್

    ನವದೆಹಲಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ನನ್ನ ಹೆಸರು ಯಾಕೆ ಉಲ್ಲೇಖ ಮಾಡಿದ್ದಾರೆ ಎಂಬುದೂ ಗೊತ್ತಿಲ್ಲ ಎಂದು ಸಂಸದ ಡಾ ಕೆ.ಸುಧಾಕರ್ (Dr K Sudhakar) ಹೇಳಿದ್ದಾರೆ.

    ಜಿಲ್ಲಾ ಪಂಚಾಯಿತಿ ಸಿಇಎ ಅವರ ಕಾರು ಚಾಲಕ ಡೆತ್‌ನೋಟ್‌ನಲ್ಲಿ (Death Note) ತಮ್ಮ ಹೆಸರು ಬರೆದಿಟ್ಟು ನೇಣಿಗೆ ಶರಣಾದ ಬಗ್ಗೆ ಅವರು ನವದೆಹಲಿಯಲ್ಲಿ (New Delhi) ಪ್ರತಿಕ್ರಿಯೆ ನೀಡಿದ್ದಾರೆ. ಬಾಬು ಆತ್ಮಹತ್ಯೆ (Suicide) ನನಗೆ ನೋವು ತಂದಿದೆ. ನನಗೆ ಬಾಬು ಎಂಬ ವ್ಯಕ್ತಿ ಗೊತ್ತಿಲ್ಲ. ನಾನು ಆತನ ಮುಖ ಸಹ ನೋಡಿಲ್ಲ. ಈ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ನಾಗೇಶ್ ಅವರ ಮಾವ ಚಿಕ್ಕಾಡಗನಹಳ್ಳಿ ಕೃಷ್ಣಮೂರ್ತಿಯ ಪರಿಚಯ ಇದೆ ಎಂದಿದ್ದಾರೆ. ಇದನ್ನೂ ಓದಿ: ಕೆ ಸುಧಾಕರ್‌ ಹೆಸರು ಬರೆದು ಕಾರು ಚಾಲಕ ಆತ್ಮಹತ್ಯೆ

    ಬಾಬು ಕುಟುಂಬದವರು ದೂರು ಕೊಡಲು ಠಾಣೆಗೆ ಹೋದಾಗ ಅಲ್ಲಿನ ಪಿಎಸ್‌ಐ ಡೆತ್‌ನೋಟ್‌ನಲ್ಲಿರುವಂತೆ ದೂರು ಕೊಡಿ ಎಂದಿದ್ದಾರೆ. ಇದರಲ್ಲಿ ಶಾಸಕರ, ಉಸ್ತುವಾರಿ ಸಚಿವರ ರಾಜಕೀಯ ಇದೆ. ನನ್ನನ್ನೂ ಒಳಗೊಂಡಂತೆ ಯಾರೇ ತಪ್ಪಿತಸ್ಥರು ಇದ್ದರೂ ಅವರಿಗೆ ಉಗ್ರ ಶಿಕ್ಷೆಯಾಗಲಿ. ಕಾನೂನು ಏನೇ ಇರಲಿ ತನಿಖೆ ಪಾರದರ್ಶಕವಾಗಿರಲಿ. ಇದು ಮಾಧ್ಯಮದ ಟ್ರಯಲ್ ಆಗೋದು ಬೇಡ. ಸರಿಯಾಗಿ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 25 ಲಕ್ಷ ವಂಚನೆ, ಸುಧಾಕರ್‌ ಹೆಸರು ಬರೆದಿಟ್ಟು ಚಾಲಕ ಸೂಸೈಡ್‌ – ಡೆತ್‌ನೋಟ್‌ನಲ್ಲಿ ಏನಿದೆ?

    ದೆಹಲಿಯಿಂದ ವಾಪಾಸ್ಸಾದ ಬಳಿಕ ಮೃತನ ಕುಟುಂಬ ಸದಸ್ಯರನ್ನು ನಾನು ಭೇಟಿ ಮಾಡುತ್ತೇನೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ. ಇದು ಜಗಜ್ಜಾಹೀರಾಗಿದೆ. ಕಾಂಗ್ರೆಸ್ ಶಾಸಕರ ಹೆಸರು ಬಂದ್ರೆ ಒಂದು ಕಾನೂನು. ಬಿಜೆಪಿ ಶಾಸಕರು, ಸಂಸದರು ಹೆಸರು ಬಂದ್ರೆ ಬೇರೆ ಕಾನೂನು. ಬಾಬು ಸಾವನ್ನು ರಾಜಕೀಯ ಕಾರಣಕ್ಕೆ ಎಳೆದು ತರುವುದು ಸರಿ ಅಲ್ಲ. ಕೊಡಗು ಪ್ರಕರಣದಲ್ಲಿ ಶಾಸಕರ ಹೆಸರು ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಏನಿದು ಪ್ರಕರಣ?
    ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ನೌಕರ ಕಾರು ಚಾಲಕ ಬಾಬು ಜಿಲ್ಲಾಡಳಿತ ಭವನದ ಆವರಣದಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದ ಪಕ್ಕದ ಮರದಡಿಯಲ್ಲೇ ಸರ್ಕಾರಿ ಕಾರು ನಿಲ್ಲಿಸಿ ಕಾರಿನ ಮೇಲೆ ಹತ್ತಿ ಹೊಂಗೆ ಮರಕ್ಕೆ ನೇಣು ಹಾಕಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬಾಬು ಅವರು ಡೆತ್‌ನೋಟ್ ಅನ್ನು ಮಹಿಳಾ ಸಿಬ್ಬಂದಿಗೆ ಕಳುಹಿಸಿದ್ದರು. ಡೆತ್‌ನೋಟ್‌ನಲ್ಲಿ 25 ಲಕ್ಷ ರೂ. ವಂಚನೆ ಆರೋಪ ಮಾಡಿ, ನನ್ನ ಸಾವಿಗೆ ಡಾ ಕೆ.ಸುಧಾಕರ್ ಹಾಗೂ ನಾಗೇಶ್ ಕಾರಣ ಎಂದು ಉಲ್ಲೇಖಿಸಿದ್ದಾರೆ.

  • ಹೆಚ್‌ಎನ್ ವ್ಯಾಲಿ ನೀರನ್ನ ಸಂಪುಟ ಸದಸ್ಯರಿಗೆ ಕುಡಿಸಿ ಶುದ್ಧತೆ ಸಾಬೀತುಪಡಿಸಲಿ: ಸಚಿವ ಸುಧಾಕರ್‌ಗೆ ಸಂಸದ ಸುಧಾಕರ್‌ ಸವಾಲ್‌

    ಹೆಚ್‌ಎನ್ ವ್ಯಾಲಿ ನೀರನ್ನ ಸಂಪುಟ ಸದಸ್ಯರಿಗೆ ಕುಡಿಸಿ ಶುದ್ಧತೆ ಸಾಬೀತುಪಡಿಸಲಿ: ಸಚಿವ ಸುಧಾಕರ್‌ಗೆ ಸಂಸದ ಸುಧಾಕರ್‌ ಸವಾಲ್‌

    – ಕೆಸಿ ವ್ಯಾಲಿ ಮತ್ತು ಹೆಚ್ಎ‌ನ್‌ ವ್ಯಾಲಿ 3ನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ ಎಂಬ ಕಾಂಗ್ರೆಸ್‌ ಧೋರಣೆಗೆ ಖಂಡನೆ

    ಚಿಕ್ಕಬಳ್ಳಾಪುರ: ಕೆ.ಸಿ.ವ್ಯಾಲಿ ಮತ್ತು ಹೆಚ್‌.ಎನ್‌ ವ್ಯಾಲಿ ಯೋಜನೆಗಳಡಿ (HN Valley Project) 3ನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ ಎಂಬ ಕಾಂಗ್ರೆಸ್‌ ಸರ್ಕಾರದ ಧೋರಣೆಯನ್ನು ಸಂಸದ ಡಾ.ಕೆ ಸುಧಾಕರ್‌ (K Sudhakar) ಖಂಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರವು (Congress Government) ಜನರು ಸುರಕ್ಷಿತವಲ್ಲದ ನೀರನ್ನ ಕುಡಿಯಬೇಕೆಂದು ಬಯಸುತ್ತಿದೆಯಾ? ಸಾರ್ವಜನಿಕ ಆರೋಗ್ಯ ಸುರಕ್ಷತೆ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲವಾ? ಕೆ.ಸಿ ವ್ಯಾಲಿ (KC Valley Project) ಮತ್ತು ಹೆಚ್.ಎನ್ ವ್ಯಾಲಿ ಯೋಜನೆ ಕುಡಿತು ನೀಡಿದ ಹೇಳಿಕೆಗಳು ಕಳವಳ ಕಾರಿ ಮತ್ತು ಖಂಡನೀಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಅವರೇ, 3ನೇ ಹಂತದ ಶುದ್ಧೀಕರಣ ಇಲ್ಲದೇ ಈ ನೀರನ್ನ ಕುಡಿಯಲು ಬಳಸಬಹುದು ಎಂದು ಹೇಳಿದ್ದಾರೆ. ಈ ನೀರನ್ನು ಮೊದಲು ಸಚಿವರೇ ಕುಡಿದು ಹಾಗೂ ತಮ್ಮ ಮನೆಗಳಲ್ಲಿ ಉಪಯೋಗಿಸಿ ತೋರಿಸಲಿ. ಹಾಗೆಯೇ ಕಾಂಗ್ರೆಸ್‌ ಶಾಸಕರಿಗೆ ಮತ್ತು ಸಂಪುಟ ಸಹೋದ್ಯೋಗಿಗಳಿಗೆ ಕುಡಿಯಲು ಕೊಡಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್‌ ಸರ್ಕಾರ ದಿವಾಳಿ ಆಗಿದೆ ಅಥವಾ 3ನೇ ಹಂತದ ಶುದ್ಧೀಕರಣ ಮಾಡಲು ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂದು ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳಲಿ. ಅದು ಬಿಟ್ಟು 3ನೇ ಹಂತದ ಶುದ್ಧೀಕರಣವೇ ಅಗತ್ಯವಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವುದು ಯಾವ ಸೀಮೆ ನ್ಯಾಯ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    ಕಾಂಗ್ರೆಸ್‌ನ ದಿವಾಳಿ ಸರ್ಕಾರದ ಪಾಪಕ್ಕೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜನತೆ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಕಾ? ತಮ್ಮ ಪಾಪರ್ ಸರ್ಕಾರದ ಅಯೋಗ್ಯತೆಗೆ ಅಮಾಯಕ ಜನರು ಬಲಿಯಾಗಬೇಕಾ? ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇದ್ದರೆ 3ನೇ ಹಂತದ ಶುದ್ಧೀಕರಣ ಮಾಡಿಸಲಿ. ಇಲ್ಲವಾದ್ರೆ 2028 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 3ನೇ ಹಂತದ ಶುದ್ಧೀಕರಣ ಯೋಜನೆ ಜಾರಿ ಮಾಡಲಿದೆ ಎಂದು ಅವರು ಹೇಳಿದ್ದಾರೆ.

  • ಬಾಣಂತಿಯರ ಸಾವು ಪ್ರಕರಣ – ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಪತ್ರ ಬರೆದ ಸಂಸದ ಸುಧಾಕರ್‌

    ಬಾಣಂತಿಯರ ಸಾವು ಪ್ರಕರಣ – ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಪತ್ರ ಬರೆದ ಸಂಸದ ಸುಧಾಕರ್‌

    – ಸಾವಿಗೆ ಕಾರಣ ಪತ್ತೆ ಮಾಡಿ, ಪರಿಹಾರ ಸೂಚಿಸುವಂತೆ ಮನವಿ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿಯರ ಸಾವಿಗೆ (Maternal Death) ನ್ಯಾಯ ಕೊಡಿಸಲು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಸಂಶೋಧನಾ ತಂಡವನ್ನು ಕಳುಹಿಸಿ ಪರಿಶೀಲಿಸಬೇಕೆಂದು ಸಂಸದ ಡಾ.ಕೆ ಸುಧಾಕರ್‌ (K Sudhakar) ಅವರು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ (JP Nadda) ಅವರಿಗೆ ಮನವಿ ಮಾಡಿದ್ದಾರೆ.

    ಈ ಕುರಿತು ಅವರು ಸಚಿವರಿಗೆ ಪತ್ರ ಬರೆದಿರುವ ಸುಧಾಕರ್‌, ಕಳೆದ ಕೆಲವು ತಿಂಗಳಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಮೃತಪಡುವ ಘಟನೆ ವರದಿಯಾಗುತ್ತಿದೆ. 2024ರ ನವೆಂಬರ್‌ವರೆಗೆ 348 ತಾಯಂದಿರು ಮೃತಪಟ್ಟಿದ್ದಾರೆ. ಆಗಸ್ಟ್‌ನಿಂದ ನವೆಂಬರ್‌ವರೆಗೆ ಕೇವಲ 4 ತಿಂಗಳಲ್ಲಿ 217 ಪ್ರಕರಣ ವರದಿಯಾಗಿದೆ. ಈ 217 ಪ್ರಕರಣಗಳಲ್ಲಿ 179 ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದ್ದಾಗಿದೆ. ಹೆಚ್ಚಿನವು ಪಿಪಿಎಚ್‌ ಹಾಗೂ ಎಎಫ್‌ಇ, ಅನೀಮಿಯ ಹಾಗೂ ನಿರ್ವಹಣೆಯಲ್ಲಿ ಲೋಪಕ್ಕೆ ಸಂಬಂಧಿಸಿದೆ. ಆಂಟಿಬಯೋಟಿಕ್‌ ಕೊರತೆ, ತರಬೇತಿ ಹೊಂದಿರುವ ಸಿಬ್ಬಂದಿ ಕೊರತೆ ಮೊದಲಾದವು ಕೂಡ ಇದಕ್ಕೆ ಕಾರಣ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್; ಆರ್ಥಿಕ ಸುಧಾರಣೆಗೆ ಐದು ವಲಯಗಳಲ್ಲಿ ಬದಲಾವಣೆ ನಿರೀಕ್ಷೆ

    ಇದರಲ್ಲಿ ಲಿಂಜರ್ಸ್‌ ಲ್ಯಾಕ್ಟೇಟ್‌ ದ್ರಾವಣದಲ್ಲಿ ದೋಷ ಕೂಡ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಸಮಗ್ರವಾದ ಪರಿಶೀಲನೆ ನಡೆಯುವ ಅಗತ್ಯವಿದೆ. ಮೊದಲಿಗೆ, ತಾಯಂದಿರ ಮರಣಕ್ಕೆ ಕಾರಣ ಪತ್ತೆ ಮಾಡಲು ತುರ್ತಾಗಿ ಕಾರ್ಯಯೋಜನೆ ರೂಪಿಸಬೇಕಿದೆ. ಜೊತೆಗೆ ಕೇಂದ್ರ ಸರ್ಕಾರದಿಂದ ಸಂಶೋಧನಾ ತಂಡವನ್ನು ಕಳುಹಿಸಿ, ಕಾರಣ ಪತ್ತೆ ಜೊತೆಗೆ, ಪರಿಹಾರ ಶಿಫಾರಸು ಮಾಡಬೇಕಿದೆ. ಗರ್ಭಿಣಿಯರ ಆರೈಕೆ ಹಾಗೂ ಹೆರಿಗೆ ಸಮಯದಲ್ಲಿ ಉತ್ತಮ ಸೇವೆ ನೀಡಲು ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕಿದೆ. ಕಬ್ಬಿಣಾಂಶದ ಆಹಾರ ಸೇವನೆ, ತುರ್ತು ಆರೈಕೆ, ಪ್ರತಿ ದಿನ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗರ್ಭಿಣಿಯರಿಗೆ ಮಾಹಿತಿ ನೀಡಿ ಅರಿವು ಮೂಡಿಸಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ. ಇದನ್ನೂ ಓದಿ: ಕ್ಯಾಲಿಫೋರ್ನಿಯಾದಲ್ಲಿ ಕಟ್ಟಡಕ್ಕೆ ಡಿಕ್ಕಿಯಾಗಿ ವಿಮಾನ ಪತನ; 2 ಸಾವು

    ದೇಶದ ಭವಿಷ್ಯದ ದೃಷ್ಟಿಯಿಂದ ನವಜಾತ ಶಿಶು ಹಾಗೂ ತಾಯಂದಿರ ಜೀವ ಕಾಪಾಡುವುದು ಬಹಳ ಅಗತ್ಯ. ಆದ್ದರಿಂದ ತಾವು ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವ ಮೂಲಕ ಕರ್ನಾಟಕದಲ್ಲಿ ಹಾಗೂ ಭಾರತದ ಯಾವುದೇ ಭಾಗದಲ್ಲಿ ತಾಯಂದಿರು ಮೃತಪಡದಂತೆ ಎಚ್ಚರ ವಹಿಸಲು ಸಾಧ್ಯವಾಗುತ್ತದೆ. ಈ ಎಲ್ಲ ಕಾರ್ಯಗಳಿಗೆ ನಾನು ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: BBK 11: 2ನೇ ಮಗುವಿನ ಬಗ್ಗೆ ಮಾತನಾಡಿದ ಧನರಾಜ್‌- ನಾಚಿ ನೀರಾದ ಪತ್ನಿ

  • ವಕ್ಫ್‌ ಬೋರ್ಡ್‌ ರಾಕ್ಷಸನನ್ನ ಮೋದಿ ಸಂಹಾರ ಮಾಡ್ತಾರೆ: ಆರ್.‌ ಅಶೋಕ್‌

    ವಕ್ಫ್‌ ಬೋರ್ಡ್‌ ರಾಕ್ಷಸನನ್ನ ಮೋದಿ ಸಂಹಾರ ಮಾಡ್ತಾರೆ: ಆರ್.‌ ಅಶೋಕ್‌

    – ಸರ್ಕಾರ ಹಿಂದೂಗಳನ್ನ 2ನೇ ದರ್ಜೆಯ ಪ್ರಜೆಗಳನ್ನಾಗಿ ಕಾಣ್ತಿದೆ ಎಂದ ಸುಧಾಕರ್‌

    ಚಿಕ್ಕಬಳ್ಳಾಪುರ: ಮುಂದಿನ ಸಂಸತ್‌ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಕ್ಫ್‌ ಬೋರ್ಡ್‌ ಎಂಬ ರಾಕ್ಷಸನನ್ನ ಸಂಹಾರ ಮಾಡ್ತಾರೆ ಎಂದು ವಿಪಕ್ಷ ನಾಯಕ ಆರ್.‌ ಅಶೋಕ್‌ (R. Ashok) ಗುಡುಗಿದರು.

    ನಗರದಲ್ಲಿ ವಕ್ಫ್‌ ಬೋರ್ಡ್‌ನಿಂದ (Waqf Board) ಶಾಲೆ, ದೇವಸ್ಥಾನ ಆಸ್ತಿ ಅತಿಕ್ರಮಣ ಖಂಡಿಸಿ ಚಿಕ್ಕಬಳ್ಳಾಪುರ ಬಿಜೆಪಿ ಘಟಕ ಬೃಹತ್‌ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಆರ್‌. ಅಶೋಕ್‌, ವಕ್ಫ್‌ ಬೋರ್ಡ್ ಎಂಬುದು ತಿಮಿಂಗಲ, ಪಿಶಾಚಿ, ಕೊಳ್ಳಿ ದೆವ್ವ, ರಾಕ್ಷಸ ಇದ್ದ ಹಾಗೆ. ಈ ವಕ್ಫ್‌ ಬೋರ್ಡ್‌ ಎಂಬ ರಾಕ್ಷಸನನ್ನು ಪ್ರಧಾನಿ ಮೋದಿ ಸಂಹಾರ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: PublicTV Explainer: ಆಗಸದಲ್ಲೂ ಹಾರುತ್ತೆ, ನೀರಲ್ಲೂ ಲ್ಯಾಂಡ್‌ ಆಗುತ್ತೆ; ಏನಿದು ಸೀ ಪ್ಲೇನ್? – ಕರ್ನಾಟಕಕ್ಕೂ ಜಲ ವಿಮಾನ ಬರುತ್ತಾ?

    ವಕ್ಫ್‌ ಕೊಳ್ಳಿ ದೆವ್ವ ಇದ್ದ ಹಾಗೆ, ಅವರು ಕಾಲಿಟ್ಟ ಜಾಗವೆಲ್ಲ ಅವರದ್ದೇ ಅಂತಾರೆ. ಇಂತಹ ಬೋರ್ಡ್‌ ಇರಬೇಕಾ? ಖಂಡಿತಾ ವಜಾ ಆಗಬೇಕು. ಹಿಂದೂ, ಬೌದ್ಧರು, ಕ್ರೈಸ್ತರಿಗಿಲ್ಲದ ವಿಶೇಷ ಸ್ಥಾನಮಾನ ಇವರಿಗೆ ಯಾಕೆ? ಅಂಬೇಡ್ಕರ್ ಸಂವಿಧಾನ ಇವರಿಗೆ ಅನ್ವಯ ಆಗಲ್ವಾ? ಇದು ಕಾಂಗ್ರೆಸ್ ಮನೆಹಾಳು ಬುದ್ದಿ ಹಾಗಾಗಿ ಅಧಿವೇಶನದಲ್ಲಿ ನಾವು ಸಹ ವಕ್ಫ್‌ ಬೋರ್ಡ್ ವಜಾ ಮಾಡಬೇಕು ಅಂತ ಹೋರಾಟ ಮಾಡ್ತೇವೆ ಎಂದು ಗುಡುಗಿದರು. ಇದನ್ನೂ ಓದಿ: ಸರ್ಕಾರದ ಬೊಕ್ಕಸ ಖಾಲಿ ಮಾಡಿರೋದೆ ಸಿದ್ದರಾಮಯ್ಯ ಸಾಧನೆ – ಸಿಎಂ ವಿರುದ್ಧ ಜೆಡಿಎಸ್ ಕಿಡಿ

    ವಕ್ಫ್‌ ಬೋರ್ಡ್‌ಗೆ ತಿಮಿಂಗಲ ಬೋರ್ಡ್ ಅಂತ ಹೆಸರಿಡಬೇಕು. ತಿಮಿಂಗಲದ ಕೆಲಸ ಎಲ್ಲವನ್ನೂ ನುಂಗಿ ಹಾಕೋದು. ಅದೇ ರೀತಿ ವಕ್ಫ್‌ ಬೋರ್ಡ್ ಸಹ ರೈತರ ಎಲ್ಲರ ಜಮೀನು ನುಂಗಿ ಹಾಕುತ್ತಿದೆ. ಹಾಗಾಗಿ ಅಧಿವೇಶನದ ಸಮಯದಲ್ಲಿ ಜನ ಬೀದಿಗಿಳಿದು ಹೋರಾಟ ಮಾಡಿ, ಸಂಸತ್ ಅಧಿವೇಶನದಲ್ಲಿ ವಕ್ಫ್‌ ಬೋರ್ಡ್‌ ರಾಕ್ಷಸನನ್ನ ಮೋದಿ ಸಂಹಾರ ಮಾಡ್ತಾರೆ ಎಂದು ನುಡಿದರು.

    ಇನ್ನೂ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಸದ ಡಾ.ಕೆ ಸುಧಾಕರ್‌ (Dr. K.Sudhakar), ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಲ್ಯಾಂಡ್ ಜಿಹಾದ್ ಘೋಷಣೆ ಮಾಡಿದೆ. ರೈತರ ಜಮೀನು ಉಳಿಸುವ ಸಲುವಾಗಿ ಬಿಜೆಪಿ ವತಿಯಿಂದ ಹೋರಾಟ ಮಾಡ್ತಿದ್ದೇವೆ. ಮರಳಿ ರೈತರಿಗೆ ವಾಪಾಸ್ ಕೊಡಿಸುವ ಕ್ರಮ ವಹಿಸುತ್ತಿದ್ದೇವೆ. ಬ್ರಿಟಿಷರು ಹೊಡೆದು ಆಳುತ್ತಿದ್ದರು ಅದನ್ನೇ ಕಾಂಗ್ರೆಸ್ ಸರ್ಕಾರ ಕಲಿತಿದೆ. ಜನರನ್ನ ಹೊಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: 1,000 ದಿನ ಪೂರೈಸಿದ ರಷ್ಯಾ-ಉಕ್ರೇನ್‌ ಯುದ್ಧ; ಪರಮಾಣು ಶಸ್ತ್ರಾಸ್ತ್ರ ಬಳಕೆ ಎಚ್ಚರಿಕೆ ನೀಡಿದ ಪುಟಿನ್‌

    ಹಿಂದೂಗಳನ್ನ 2ನೇ ದರ್ಜೆ ಪ್ರಜೆಗಳನ್ನಾಗಿ ಕಾಣ್ತಿದೆ:
    ಹನುಮ ಧ್ವಜ ಕಟ್ಟಿದರೆ ಇಳಿಸ್ತಾರೆ, ಅಯೋಧ್ಯೆ ರಾಮಮಂದಿರ ಕಟ್ಟಿದ್ರೆ ಹೋಗಲ್ಲ ಅಂತಾರೆ, ಕರ ಸೇವಕರನ್ನ ಬಂಧಿಸ್ತಾರೆ, ವಿನಾಯಕ ಮೆರವಣಿಗೆ ಮಾಡಿದ್ರೆ ಗಣೇಶನನ್ನ ಬಂಧಿಸ್ತಾರೆ. ಡಿಜೆ ಹಾಕೋ ಆಗಿಲ್ಲ ಅಂತ ಆಕ್ರೋಶ ಹೊರ ಹಾಕಿದರು. ಎಸ್ಪಿ, ಡಿವೈಎಸ್ಪಿ, ಎಸ್‌ಐ ಕಾಂಗ್ರೆಸ್‌ನವರ ತರ ಆಳ್ವಿಕೆ ಮಾಡ್ತಿದ್ದಾರೆ. ರೈತರ ಜಮೀನು ವಕ್ಫ್‌ ಆಸ್ತಿ ಆಗ್ತಿದೆ, ದೇವಾಲಯ ಖಬರಸ್ತಾನ್‌ ಆಗ್ತಿದೆ. ಇದಕ್ಕೆ ಪುಷ್ಟಿ ಕೊಡ್ತಿರೋದು ಕಾಂಗ್ರೆಸ್ ಸರ್ಕಾರ. ಹಿಂದೂಗಳ ಮೇಲೆ ವಕ್ಪ್ ಗಧಾಪ್ರಹಾರ ಮಾಡ್ತಿದೆ, ವಕ್ಫ್‌ಗೆ ಸಾವಿರಾರು ಎಕೆರೆಗಳಿವೆ ನೂರಾರು ಕೋಟಿ ಆದಾಯ ಇದೆ. ಆದ್ರೆ ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಎಂಬಂತೆ ಹಿಂದೂಗಳನ್ನು 2ನೇ ದರ್ಜೆ ಪ್ರಜೆಗಳನ್ನಾಗಿ ಸರ್ಕಾರ ಕಾಣ್ತಿದೆ ಅಂತ ತೀವ್ರ ವಾಗ್ದಾಳಿ ನಡೆಸಿದರು.

  • ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 60ಕ್ಕೂ ಅಧಿಕ ರೈಲ್ವೆ ಯೋಜನೆಗಳ ಕುರಿತು ಸಂಸದ ಸುಧಾಕರ್‌ ಚರ್ಚೆ

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ 60ಕ್ಕೂ ಅಧಿಕ ರೈಲ್ವೆ ಯೋಜನೆಗಳ ಕುರಿತು ಸಂಸದ ಸುಧಾಕರ್‌ ಚರ್ಚೆ

    ಚಿಕ್ಕಬಳ್ಳಾಪುರ: ಉಪನಗರ ರೈಲು ಸೇರಿದಂತೆ ಚಿಕ್ಕಬಳ್ಳಾಪುರ (Chikkaballapur) ಲೋಕಸಭಾ ಕ್ಷೇತ್ರದ 60ಕ್ಕೂ ಅಧಿಕ ರೈಲ್ವೆ ಯೋಜನೆಗಳ ಕುರಿತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಕೆಲವು ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದ್ದು, ಈ ಕುರಿತು ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ ಕೆ ಸುಧಾಕರ್ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೊಸ ರೈಲ್ವೆ ಯೋಜನೆ ಹಾಗೂ ಜಾರಿಯಲ್ಲಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಲು ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್‌ ಪಾಲ್ಗೊಂಡಿದ್ದರು. ಬೆಂಗಳೂರು ಉಪನಗರ ರೈಲು ಯೋಜನೆ, ಹೊಸ ರೈಲು ಮಾರ್ಗಗಳು, ಡಬ್ಲಿಂಗ್, ವಿದ್ಯುದೀಕರಣ, ಲೆವೆಲ್ ಕ್ರಾಸಿಂಗ್‌ನಲ್ಲಿ ಮೇಲ್ಸೇತುವೆ, ರೈಲು ನಿಲುಗಡೆ, ರೈಲು ನಿಲ್ದಾಣಗಳ ಅಭಿವೃದ್ಧಿ ಸೇರಿದಂತೆ 60ಕ್ಕೂ ಹೆಚ್ಚು ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ.

    ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್‌, ಅಭಿವೃದ್ಧಿಯ ಎಂಜಿನ್‌ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಡೆಗೆ ಸಾಗುತ್ತಿದ್ದು, ಇದು ಹೊಸ ಬೆಂಗಳೂರಾಗಿ ಪರಿವರ್ತನೆಯಾಗುತ್ತಿದೆ. ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ, ಚಿಕ್ಕಬಳ್ಳಾಪುರ-ಪುಟ್ಟಪರ್ತಿ, ಚಿಕ್ಕಬಳ್ಳಾಪುರ-ಗೌರಿಬಿದನೂರು, ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ, ದೇವನಹಳ್ಳಿ-ದೊಡ್ಡಬಳ್ಳಾಪುರ-ಯಲಹಂಕ ಸೇರಿದಂತೆ 60ಕ್ಕೂ ಅಧಿಕ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

    ಕೆಲವು ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇನ್ನೂ ಕೆಲ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಕಾರ ಬೇಕಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಚಿವರೊಂದಿಗೆ ಚರ್ಚಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಹಿಂದಿನ ಸರ್ಕಾರಗಳು ನೀಡುತ್ತಿದ್ದ ಅನುದಾನಕ್ಕಿಂತ ಏಳು ಪಟ್ಟು ಅಧಿಕ ಅನುದಾನವನ್ನು ಎನ್‌ಡಿಎ ಸರ್ಕಾರ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ನೀಡಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ವಲಯಕ್ಕೆ ಯಾರೂ ಹೆಚ್ಚು ಆದ್ಯತೆ ನೀಡಿರಲಿಲ್ಲ. ನಾನು ಈ ಕುರಿತು ಹೆಚ್ಚು ಗಮನಹರಿಸಿದ್ದೇನೆ ಎಂದರು.

  • ಸಂಸದ ಸುಧಾಕರ್ ಬಾಗಿನ ಅರ್ಪಣೆಗೆ ಆಗಮಿಸುವಷ್ಟರಲ್ಲಿ ಹೆಜ್ಜೇನು ದಾಳಿ – ನಗರಸಭಾ ಸದಸ್ಯರು ಸೇರಿ ಹಲವರು ಆಸ್ಪತ್ರೆಗೆ ದಾಖಲು

    ಸಂಸದ ಸುಧಾಕರ್ ಬಾಗಿನ ಅರ್ಪಣೆಗೆ ಆಗಮಿಸುವಷ್ಟರಲ್ಲಿ ಹೆಜ್ಜೇನು ದಾಳಿ – ನಗರಸಭಾ ಸದಸ್ಯರು ಸೇರಿ ಹಲವರು ಆಸ್ಪತ್ರೆಗೆ ದಾಖಲು

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ (Chikkaballapura) ತಾಲೂಕು ಜಕ್ಕಲಮಡುಗು ಜಲಾಶಯಕ್ಕೆ ಬಾಗಿನ ಅರ್ಪಣೆಗೆ ಸಂಸದ ಸುಧಾಕರ್ ಆಗಮಿಸುವಷ್ಟರಲ್ಲಿ ಹೆಜ್ಜೇನು ಹುಳುಗಳು ದಾಳಿ ನಡೆಸಿದ್ದು ದಾಳಿಯಿಂದ ನಗರಸಭಾ ಸದಸ್ಯರು ಸೇರಿ ಹಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ಅಂದಹಾಗೆ ಜಕ್ಕಲಮಡುಗು ಜಲಾಶಯ ನಿನ್ನೆಯಷ್ಟೇ ಕೋಡಿ ಹರಿದಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತೆರಳಿ ಶಾಸ್ತ್ರೋಕ್ತವಾಗಿ ಬಾಗಿನ ಅರ್ಪಿಸಿದ್ದರು. ಇದನ್ನೂ ಓದಿ: ಕೆಂಗೇರಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ 5 ಲಕ್ಷ ಪರಿಹಾರ: ಡಿಕೆಶಿ ಘೋಷಣೆ

    ಇಂದು ಬೆಳಗ್ಗೆ 11 ಗಂಟೆಗೆ ಸಂಸದ ಸಧಾಕರ್ ಸಹ ಬಾಗಿನ ಅರ್ಪಣೆಗೆ ಸಮಯ ನಿಗದಿ ಮಾಡಿದ್ದರು. ಆದ್ರೆ ರಾಹುಕಾಲ ಸಮಯ ಸರಿ ಇಲ್ಲ ಅಂತ ಹಾಗೂ ವಿವಿಧ ಕಾರ್ಯಕ್ರಮಗಳ ಒತ್ತಡದಿಂದ ಸಂಜೆ 4 ಗಂಟೆಗೆ ಬಾಗಿನ ಕಾರ್ಯಕ್ರಮಕ್ಕೆ ಸಕಲ ತಯಾರಿ ಮಾಡಿಕೊಂಡಿದ್ದರು.

    ಇನ್ನೇನು ಸಂಸದ ಸುಧಾಕರ್ ಸಹ ಬಾಗಿನ ಅರ್ಪಣೆಗೆ ಜಲಾಶಯದ ಸಮೀಪ ಆಗಮಿಸಿದ್ರು. ಅಷ್ಟರಲ್ಲೇ ಹೆಜ್ಜೇನು ದಾಳಿ ಮಾಡಿದ್ದು ಬಾಗಿನ ಅರ್ಪಣೆಗೆ ಆಗಮಿಸಿದ್ದ ಅರ್ಚಕರು, ಅಧಿಕಾರಿಗಳು ಸೇರಿ ಸಂಸದ ಸುಧಾಕರ್ ಬೆಂಬಲಿತರು, ನಗರಸಭಾ ಸದಸ್ಯರು ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯಿಂದ ಬಾಗಿನ ಕಾರ್ಯಕ್ರಮ ರದ್ದು ಮಾಡಿ ಅಲ್ಲಿಂದ ಸಂಸದರು ವಾಪಾಸ್ಸಾಗಿದ್ದಾರೆ. ಇದನ್ನೂ ಓದಿ: ಅಮರಾವತಿ ಡ್ರೋನ್ ಸಮ್ಮೇಳನ 2024 | ಆಕಾಶವನ್ನೇ ಬೆಳಗಿದ 5,500 ಡ್ರೋನ್, 5 ಗಿನ್ನಿಸ್ ರೆಕಾರ್ಡ್ 

  • 20 ವರ್ಷದಲ್ಲಿ ನಾನು ಎಂದೂ ಮದ್ಯ ಹಂಚಿ ರಾಜಕಾರಣ ಮಾಡಿಲ್ಲ: ಡಾ.ಕೆ.ಸುಧಾಕರ್

    20 ವರ್ಷದಲ್ಲಿ ನಾನು ಎಂದೂ ಮದ್ಯ ಹಂಚಿ ರಾಜಕಾರಣ ಮಾಡಿಲ್ಲ: ಡಾ.ಕೆ.ಸುಧಾಕರ್

    ಬೆಂಗಳೂರು: 20 ವರ್ಷದ ರಾಜಕಾರಣದಲ್ಲಿ ನಾನು ಎಂದೂ ಮದ್ಯ ಹಂಚಿ ರಾಜಕಾರಣ ಮಾಡಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ನೂತನ ಸಂಸದ ಡಾ.ಕೆ.ಸುಧಾಕರ್ ಗೆ (Dr Sudhakar) ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಬಾಡೂಟದ ಜೊತೆಯಲ್ಲಿ ಮದ್ಯ ಹಂಚಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಚಿಕ್ಕಬಳ್ಳಾಪರ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿ ಮಾತನಾಡಿದ ಡಾ.ಕೆ.ಸುಧಾಕರ್, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ನಂತರ ಘಟನೆ ಬಗ್ಗೆ ತಿಳಿಯಿತು. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನನಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡಿದ್ರು ಎಂದರು.

    ನಾನು ಹಾಗೂ ಆರ್ ಆಶೋಕ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಭೆಯಲ್ಲಿ ಮಾತನಾಡಿ ಬಂದೆ. ಆದರೆ ಮದ್ಯ ಹಂಚಿಕೆ ಮಾಡಿದ್ದು ಆಯೋಜಕರಾ..? ಅಥವಾ ಅಲ್ಲಿ ಬಂದಿದ್ದೇವರೇ ಸೇವನೆ ಮಾಡಿದ್ರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ- ಅಭ್ಯರ್ಥಿ ವಿಚಾರದಲ್ಲಿ ದೋಸ್ತಿಗಳ ಮಧ್ಯೆ ಭಿನ್ನಾಭಿಪ್ರಾಯ

    ನಮ್ಮದೇ ಕಾರ್ಯಕರ್ತರು ಮದ್ಯ ಹಂಚಿಕೆ ಮಾಡಿದ್ರೆ ಅದು ತಪ್ಪು. 20 ವರ್ಷದ ರಾಜಕಾರಣದಲ್ಲಿ ನಾನು ಎಂದೂ ಮದ್ಯ ಹಂಚಿ ರಾಜಕಾರಣ ಮಾಡಿಲ್ಲ, ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ, ನನಗೂ ನೋವಾಗಿದೆ ಇದು ಅಕ್ಷಮ್ಯ ಅಪರಾಧ ಎಂದರು.

  • ರಾಜೀನಾಮೆ ಪತ್ರ ವೈರಲ್-‌ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದೇನು?

    ರಾಜೀನಾಮೆ ಪತ್ರ ವೈರಲ್-‌ ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದ್ದೇನು?

    ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಕೆ. ಸುಧಾಕರ್‌ (K sudhakar) ಗೆಲುವಿನ ಬೆನ್ನಲ್ಲೇ ಶಾಸಕ ಪ್ರದೀಪ್ ಈಶ್ವರ್ ಹೆಸರಿನ ರಾಜೀನಾಮೆ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಸಂಬಂಧ ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಇದೊಂದು ನಕಲಿ ಪತ್ರ. ಆ ಪತ್ರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಕಿಡಿಗೇಡಿಗಳು ನಕಲಿ ರಾಜೀನಾಮೆ ಪತ್ರ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ರಾಜೀನಾಮೆ ನೀಡ್ತೀನಿ ಅಂದಿದ್ದ ಶಾಸಕರು: ಚಿಕ್ಕಬಳ್ಳಾಪುರ (Chikkaballapur) ಲೋಕಸಭಾ ಚುನಾವಣಾ ಪ್ರಚಾರದ ವೇಳೆ ವಿಧಾನಸಭಾ ಕ್ಷೇತ್ರದಲ್ಲಿ ಡಾ. ಕೆ ಸುಧಾಕರ್ ಒಂದು ಮತ ಹೆಚ್ಚಿಗೆ ಲೀಡ್ ಪಡೆದರೆ ನಾನು ರಾಜೀನಾಮೆ ನೀಡುವುದಾಗಿ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಜೊತೆಯಲ್ಲಿ ಇದನ್ನ ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಸವಾಲಾಗಿ ಸ್ವೀಕರಿಸಬೇಕು ಎಂಬ ಆಗ್ರಹವನ್ನು ಕೂಡ ಮಾಡಿದ್ದರು. ಆದರೆ ಪ್ರದೀಪ್ ಈಶ್ವರ್ ಸವಾಲಿಗೆ ಡಾಕ್ಟರ್ ಕೆ ಸುಧಾಕರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಇದನ್ನೂ ಓದಿ: ಎರಡಂಕಿ ಫಲಿತಾಂಶ ಬರದಿರಲು ನಮ್ಮ ನಾಯಕರ ಓವರ್ ಕಾನ್ಫಿಡೆನ್ಸ್ ಕಾರಣ – ಸತೀಶ್ ಜಾರಕಿಹೊಳಿ

    ಇತ್ತ ಕೆಲವು ಕಡೆ ಪ್ರದೀಪ್ ಈಶ್ವರ್ (Pradeep Eshwar) ತಮ್ಮ ಹಳೆಯ ಹೇಳಿಕೆಯನ್ನೇ ಮರು ಉಚ್ಚರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಹೇಳಿಕೆಯನ್ನು ಸಹ ಕೊಟ್ಟಿದ್ದರು. ಮಂಗಳವಾರ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾಕ್ಟರ್ ಕೆ ಸುಧಾಕರ್ 20,941 ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ. ಹೀಗಾಗಿ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ಕೊಡಬೇಕು ಅಂತ ಹಲವರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇಂದು ನಕಲಿ ರಾಜೀನಾಮೆ ಪತ್ರವೊಂದು ಸಾಕಷ್ಟು ವೈರಲ್ ಆಗಿ ಚರ್ಚೆಗೀಡಾಗಿದೆ.