Tag: ಡಾ.ಎಚ್.ಸಿ. ಮಹದೇವಪ್ಪ

  • ಸಿದ್ದರಾಮಯ್ಯ ಇರೋವರೆಗೂ ಸಿಎಂ ಬದಲಾವಣೆ ಚರ್ಚೆ ಇಲ್ಲ: ಮಹದೇವಪ್ಪ

    ಸಿದ್ದರಾಮಯ್ಯ ಇರೋವರೆಗೂ ಸಿಎಂ ಬದಲಾವಣೆ ಚರ್ಚೆ ಇಲ್ಲ: ಮಹದೇವಪ್ಪ

    ಬೆಂಗಳೂರು: ಸಿದ್ದರಾಮಯ್ಯ (Siddaramaiah) ಇರುವವರೆಗೂ ಸಿಎಂ ಬದಲಾವಣೆ ಚರ್ಚೆಯೇ ಇಲ್ಲ ಎಂದು ಸಚಿವ ಮಹದೇವಪ್ಪ ( H C  Mahadevappa) ತಿಳಿಸಿದ್ದಾರೆ.

    ಉಪಚುನಾವಣೆ (By Election) ಫಲಿತಾಂಶ ಸಿಎಂ ಸ್ಥಾನದ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 136 ಸ್ಥಾನ ನಾವು ಇದ್ದೇವೆ. ಒಂದು ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದೆ. ಒಂದು ಸ್ಥಾನದಿಂದ ಸಿಎಂ ಸ್ಥಾನಕ್ಕೆ ಯಾಕೆ ಪರಿಣಾಮ ಬೀರುತ್ತದೆ. ಮುಖ್ಯಮಂತ್ರಿ ಸ್ಥಾನ ಯಾಕೆ ಅಲ್ಲಾಡುತ್ತದೆ. ಕೋಳಿವಾಡ ಹೇಳಿಕೆ ಅವರ ವೈಯಕ್ತಿಕ. ಹರಿಯಾಣ ಸೋಲಿಗೆ ಬೇರೆ ಕಾರಣ ಇದೆ. ಸಿಎಂ ಬದಲಾವಣೆ ಚರ್ಚೆಯೇ ಇಲ್ಲ ಎಂದರು. ಇದನ್ನೂ ಓದಿ: ಭುಗಿಲೆದ್ದ ವಕ್ಫ್‌ ಆಸ್ತಿ ವಿವಾದ – ರಾಜ್ಯಾದ್ಯಂತ ಕೇಸರಿ ಪಡೆಯ ಪ್ರತಿಭಟನೆ ಜೋರು

    ಸಿದ್ದರಾಮಯ್ಯ ಇರುವವರೆಗೂ ಸಿಎಂ ಬದಲಾವಣೆಯ ಯಾವುದೇ ಮಾತು ಇಲ್ಲ. ಕಾಂಗ್ರೆಸ್ (Congress) ಮುಂದೆ ಸಿಎಂ ಬದಲಾವಣೆ ವಿಷಯ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಅವರೇ ಮುಂದುವರೆಯತ್ತಾರೆ ಎಂದು ಸ್ಪಷ್ಟಪಡಿಸಿದರು.  ಇದನ್ನೂ ಓದಿ: ಜಮೀರ್ ಇಸ್ಲಾಂ ಧರ್ಮ, ವಕ್ಫ್ ಬೋರ್ಡ್‌ಗೆ ನ್ಯಾಯ ಒದಗಿಸೋ ಪ್ರಯತ್ನದಲ್ಲಿದ್ದಾರೆ: ಮಾದಾರ ಚನ್ನಯ್ಯ ಶ್ರೀ

  • ಮೈಸೂರಿನ ಜನರಿಗೆ ನವಿಲು ಯಾವುದು? ಕೆಂಭೂತ ಯಾವುದು ಎಂಬುದು ಗೊತ್ತಿದೆ: ಮಹದೇವಪ್ಪ

    ಮೈಸೂರಿನ ಜನರಿಗೆ ನವಿಲು ಯಾವುದು? ಕೆಂಭೂತ ಯಾವುದು ಎಂಬುದು ಗೊತ್ತಿದೆ: ಮಹದೇವಪ್ಪ

    ಮೈಸೂರು: ಮೈಸೂರು-ಬೆಂಗಳೂರು ದಶಪಥ ರಸ್ತೆ ಯೋಜನೆ ಶುರು ಮಾಡಿದ್ದು ಯಾರು ಅಂತಾ ಜನರಿಗೆ ಗೊತ್ತಿದೆ. ನಾನೇ ಮಾಡಿದ್ದು ನಾನೇ ಮಾಡಿದ್ದು ಎಂದು ನಾನು ಎಂದು ಹೇಳುವುದಿಲ್ಲ. ಮೈಸೂರಿನ ಜನರಿಗೆ ನವಿಲು ಯಾವುದು ಕೆಂಭೂತ ಯಾವುದು ಎಂದು ಗೊತ್ತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಹದೇವಪ್ಪ, ಮೈಸೂರು-ಬೆಂಗಳೂರು ದಶಪಥ ರಸ್ತೆ ಯೋಜನೆ ಶುರು ಮಾಡಿದ್ದು ಯಾರು ಅಂತಾ ಜನರಿಗೆ ಗೊತ್ತಿದೆ. ನಾನೇ ಮಾಡಿದ್ದು ನಾನೇ ಮಾಡಿದ್ದು ಎಂದು ನಾನು ಯಾವತ್ತು ಹೇಳುವುದಿಲ್ಲ. ಈ ರಸ್ತೆ ವಿಚಾರದಲ್ಲೇ ಯಡಿಯೂರಪ್ಪ ಅವರು ನನಗೆ ಹುಬ್ಬಳ್ಳಿಯಲ್ಲಿ ಸನ್ಮಾನ ಮಾಡಿದ್ದಾರೆ. ಇದಕ್ಕಿಂತಾ ಸಾಕ್ಷಿ ಇನ್ನು ಏನು ಬೇಕು ಎಂದರು. ಇದನ್ನೂ ಓದಿ: ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹೆಸರಿಡಿ: ಪ್ರತಾಪ್ ಸಿಂಹ

    ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿರುವ ಬಗ್ಗೆ ಮಾತನಾಡಿ, ಅವರು ಸದ್ಯ ಭಾರತದ ಹೆಸರು ಬದಲಾಯಿಸಲು ಮುಂದಾಗುತ್ತಿಲ್ಲವಲ್ಲ ಅಷ್ಟೇ ಸಾಕು. ಹೆಸರುಗಳ ಬದಲಾವಣೆ ಅವರ ಮನಃಸ್ಥಿತಿ ತೋರಿಸುತ್ತದೆ. ಹೆಸರು ಬದಲಾವಣೆಗೆ ತೋರಿಸಿರುವ ಆಸಕ್ತಿಯನ್ನು ರಾಷ್ಟ್ರೀಯ ಉದ್ಯಾನವನದ ಸಂರಕ್ಷಣೆಗೆ, ಅಲ್ಲಿನ ಪ್ರಾಣಿಗಳ ಸಂರಕ್ಷಣೆಗೆ ವಹಿಸಬೇಕೆಂದು ಮಹದೇವಪ್ಪ ಟಾಂಗ್ ನೀಡಿದರು. ಇದನ್ನೂ ಓದಿ: ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ

  • ಬಿಜೆಪಿಯಲ್ಲೂ ಪೌರತ್ವ ಕಾಯ್ದೆ ವಿರೋಧಿಸೋರು ಇದ್ದಾರೆ: ಡಾ.ಎಚ್.ಸಿ. ಮಹದೇವಪ್ಪ

    ಬಿಜೆಪಿಯಲ್ಲೂ ಪೌರತ್ವ ಕಾಯ್ದೆ ವಿರೋಧಿಸೋರು ಇದ್ದಾರೆ: ಡಾ.ಎಚ್.ಸಿ. ಮಹದೇವಪ್ಪ

    ಮೈಸೂರು: ಬಿಜೆಪಿಯಲ್ಲೂ ಪೌರತ್ವ ಕಾಯ್ದೆ ವಿರೋಧಿಸುವವರು ಇದ್ದಾರೆ. ಆದರೆ ಅವರು ತಮ್ಮ ನಿಲುವುವನ್ನ ಅಂತಕರ್ಣದಲ್ಲೆ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.

    ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪೌರತ್ವ ಕಾಯ್ದೆಯಲ್ಲಿನ ಅಂಶಗಳು ಸಂವಿಧಾನ ಆಶಯದ ವಿರೋಧಿಯಾಗಿವೆ. ಸಂವಿಧಾನದ 14 ವಿಧಿಯ ಮೂಲತತ್ವಕ್ಕೆ ಈ ಕಾಯ್ದೆ ವಿರುದ್ಧವಾಗಿದೆ. ಪೌರತ್ವ ಕಾಯ್ದೆಯನ್ನು ವಿರೋಧಿಸಿ ಕೇವಲ ರಾಜಕೀಯ ಪಕ್ಷಗಳು ಪ್ರತಿಭಟನೆ ಮಾಡುತ್ತಿಲ್ಲ. ಎಲ್ಲರೂ ತಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಪಿತೂರಿ ಮಾಡುವ ಅಗತ್ಯವೇ ಇಲ್ಲ ಎಂದ ಅವರು, ಇದು ಸಂವಿಧಾನ ವಿರೋಧಿ ಅಂತ ಹೇಳಲು ಪಿತೂರಿ ಬೇಕಾ ಎಂದು ಪ್ರಶ್ನಿಸಿದರು.

    ಮಂಗಳೂರು ಗಲಭೆ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ಆಗಬೇಕು. ಮೃತರ ಕುಟುಂಬಕ್ಕೆ ರಕ್ಷಣೆ ಜೊತೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಇದು ಸರ್ವಾಧಿಕಾರಿ ಧೋರಣೆಯ ಸಂಕೇತವಾಗುತ್ತೆ ಎಂದು ತಿಳಿಸಿದರು.

  • ಅಂಬೇಡ್ಕರ್ ಕಟೌಟ್ ಅಳವಡಿಸುವಾಗ ವಿದ್ಯುತ್ ಸ್ಪರ್ಶದಿಂದ ಮೂವರ ಸಾವು

    ಅಂಬೇಡ್ಕರ್ ಕಟೌಟ್ ಅಳವಡಿಸುವಾಗ ವಿದ್ಯುತ್ ಸ್ಪರ್ಶದಿಂದ ಮೂವರ ಸಾವು

    ಮೈಸೂರು: ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬೃಹತ್ ಕಟೌಟ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಮೃತಪಟ್ಟು ಆರು ಜನರು ಗಂಭೀರವಾಗಿ ಗಾಯಗೊಂಡಿರೋ ಘಟನೆ ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.

    ಮಣಿಕಂಠ (27), ಕುಮಾರ್ (40), ಶಿವು (25) ಸಾವನ್ನಪ್ಪಿದ ದುರ್ದೈವಿಗಳು. ಕ್ಯಾತಮಾರನಹಳ್ಳಿಯ ಎಕೆ ಕಾಲೋನಿಯ ನಿಂಬೆಯಣ್ಣ ವೃತ್ತದ ಬಳಿ ಗುರುವಾರ ರಾತ್ರಿ ಅಂಬೇಡ್ಕರ್ ಅವರ ಬೃಹತ್ ಕಟೌಟ್ ಅಳವಡಿಸಲು ಸಿದ್ಧತೆ ಮಾಡಲಾಗಿತ್ತು. ಅಂಬೇಡ್ಕರ್ ಅವರ 30 ಅಡಿ ಎತ್ತರದ ಕಟೌಟ್‍ಗೆ ಕಬ್ಬಿಣದ ಫ್ರೇಂ ಹಾಕಿ ಕಟ್ಟಲಾಗುತ್ತಿತ್ತು. ಕಬ್ಬಿಣದ ಫ್ರೇಂ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

    ಗಂಭೀರವಾಗಿ ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ಕೆಆರ್ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹಗಳನ್ನ ಇರಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಅಲ್ಲದೆ, ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದರು.