Tag: ಡಾಲ್ಚೆ&ಗಬ್ಬಾನಾ

  • ಮಾಡೆಲ್‍ಗಳಿಗೆ ಸೆಡ್ಡು- ಬ್ಯಾಗ್ ಹಿಡಿದು ರ‍್ಯಾಂಪ್ ಮೇಲೆ ಹಾರಿದ ಡ್ರೋನ್‍ಗಳು!

    ಮಾಡೆಲ್‍ಗಳಿಗೆ ಸೆಡ್ಡು- ಬ್ಯಾಗ್ ಹಿಡಿದು ರ‍್ಯಾಂಪ್ ಮೇಲೆ ಹಾರಿದ ಡ್ರೋನ್‍ಗಳು!

    ಮಿಲಾನ್: ಭವಿಷ್ಯದಲ್ಲಿ ಫ್ಯಾಶನ್ ಶೋಗಳು ಹೀಗಿರಲಿವೆಯಾ? ಈ ಫ್ಯಾಶನ್ ಶೋ ನೋಡಿದ ಮೇಲೆ ನಿಮಗೆ ಈ ರೀತಿಯ ಪ್ರಶ್ನೆ ಕಾಡದೆ ಇರದು.

    ಭಾನುವಾರದಂದು ಮಿಲಾನ್‍ನಲ್ಲಿ ನಡೆದ ಡಾಲ್ಚೆ&ಗಬ್ಬಾನಾ ಫ್ಯಾಶನ್ ಶೋ ನಲ್ಲಿ ರೂಪದರ್ಶಿಯರು ವೇದಿಕೆ ಮೇಲೆ ಹೆಜ್ಜೆ ಹಾಕಲಿಲ್ಲ. ಬದಲಿಗೆ ಡ್ರೋನ್‍ಗಳು ಮಾಡೆಲ್‍ಗಳು ರೀತಿಯಲ್ಲಿ ಬ್ಯಾಗ್‍ಗಳನ್ನ ಹಿಡಿದು ಹಾರಿದ್ವು.

     

    ಡಾಲ್ಚೆ&ಗಬ್ಬಾನಾದ ಹೊಸ ವಿನ್ಯಾಸದ ಬ್ಯಾಗ್‍ಗಳನ್ನ ಡ್ರೋನ್‍ಗಳು ಪ್ರದರ್ಶಿಸಿದ್ದನ್ನು ಕಂಡು ನೋಡುಗರು ಆಶ್ಚರ್ಯಪಟ್ಟರು. 2018-19ರ ಚಳಿಗಾಲದ ಕೆಲಕ್ಷನ್ ಪ್ರದರ್ಶನದ ವಿಡಿಯೋವನ್ನ ಡಾಲ್ಚೆ&ಗಬ್ಬಾನಾದ ಯೂಟ್ಯೂಬ್ ಚಾನೆಲ್‍ನಲ್ಲಿ ಹಂಚಿಕೊಳ್ಳಲಾಗಿದೆ.

    ವೇದಿಕೆ ಮೇಲೆ ವಿನ್ಯಾಸಗೊಳಿಸಲಾಗಿದ್ದ ಚರ್ಚ್‍ನ ಬಾಗಿಲುಗಳು ತೆರೆದುಕೊಂಡು ಸಂಗೀತ ಶುರುವಾಗುತ್ತದೆ. ನಂತರ ಒಂದು ಸಣ್ಣ ಡ್ರೋನ್ ಕೆಂಪು ಬಣ್ಣದ ಬ್ಯಾಗ್ ಹಿಡಿದುಕೊಂಡು ಹಾರಿ ಬರುತ್ತದೆ. ಅನಂತರ ಒಂದರ ನಂತರ ಒಂದು ಹಲವಾರು ಡ್ರೋನ್‍ಗಳು ವಿವಿಧ ಬಣ್ಣದ ಬ್ಯಾಗ್‍ಗಳನ್ನ ಹಿಡಿದು ಹಿಂಬಾಲಿಸುತ್ತವೆ.

    ವರದಿಯ ಪ್ರಾಕಾರ ಫ್ಯಾಶನ್ ಶೋ ವೇಳೆ, ಡ್ರೋನ್ ಸಿಗ್ನಲ್‍ಗೆ ಅಡ್ಡಿಯಾಗಬಾರದೆಂದು ಅತಿಥಿಗಳ ಮೊಬೈಲ್ ವೈಫೈ ಸ್ವಿಚ್ ಆಫ್ ಮಾಡುವಂತೆ ಹೇಳಲಾಗಿತ್ತು. ಇದರಿಂದ ಸುಮಾರು 45 ನಿಮಿಷ ಗೊಂದಲ ಉಂಟಾಗಿ, ಲೌಡ್‍ಸ್ಪೀಕರ್ ಮೂಲಕ ಇನ್ನೂ ವೈಫೈ ಸ್ವಿಚ್ ಆಫ್ ಮಾಡದವರ ಯೂಸರ್ ನೇಮ್ ಕರೆದು, ನಿಮ್ಮ ಹಾಟ್‍ಸ್ಪಾಟ್ ಸ್ವಿಚ್ ಆಫ್ ಮಾಡಿ ಶೋ ಪ್ರಾರಂಭಿಸಲು ಅನುವು ಮಾಡಿಕೊಡಿ ಎಂದು ಹೇಳಲಾಗಿತ್ತು.

    ಶೋ ಆರಂಭವಾಗುತ್ತಿದ್ದಂತೆ ಅಲ್ಲಿ ನೆರೆದಿದ್ದ ಅತಿಥಿಗಳು ಕಣ್ ಕಣ್ ಬಿಟ್ಟು ನೋಡುವಂತಾಗಿತ್ತು. ರೂಪದರ್ಶಿಗಳ ಬದಲು ಡ್ರೋನ್‍ಗಳು ರ‍್ಯಾಂಪ್ ವಾಕ್ ಮಾಡಿದ್ದು ನೋಡಿ ಎಲ್ಲರೂ ಹುಬ್ಬೇರಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ.

    ಆದರೂ ಡ್ರೋನ್‍ಗಳು ವೇದಿಕೆ ಹಿಂಭಾಗಕ್ಕೆ ಹೋದ ಬಳಿಕ ರೂಪದರ್ಶಿಯರು ಕೂಡ ಹೆಜ್ಜೆ ಹಾಕಿ ಬ್ಯಾಗ್‍ಗಳನ್ನ ಪ್ರದರ್ಶಿಸಿದ್ದಾರೆ.

    https://twitter.com/MEENAVOGUEE/status/967773394665197571?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fwatch-drones-fly-down-the-runway-carrying-dolce-gabbana-handbags-1817390