Tag: ಡಾಲಿ

  • ಡಾಲಿ ಟೆಂಪಲ್ ರನ್, ಹುಟ್ಟೂರಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ

    ಡಾಲಿ ಟೆಂಪಲ್ ರನ್, ಹುಟ್ಟೂರಿನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ (Daali Dhananjay) ಅವರು ಅರಸೀಕೆರೆಯ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶೂಟಿಂಗ್‌ಗೆ ಬ್ರೇಕ್ ಹಾಕಿ ಸಹೋದರರ ಜೊತೆ ದೇವರ ಸನ್ನಿಧಿಗೆ ಡಾಲಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ನಟಿ ಶ್ರುತಿ

    ಚಂದನವನದ ನಟ, ನಿರ್ಮಾಪಕ (Producer) ಡಾಲಿ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆ ತೆಲುಗು ಸಿನಿಮಾಗಳಲ್ಲಿ ಅವರು ಆಕ್ಟೀವ್ ಆಗಿದ್ದಾರೆ. ಚಿತ್ರೀಕರಣದಲ್ಲಿ ಬ್ಯುಸಿ ಇದ್ದ ನಟ, ಶೂಟಿಂಗ್‌ಗೆ ಕೊಂಚ ಬ್ರೇಕ್ ನೀಡಿ ಹುಟ್ಟಿದ ಊರಿಗೆ ಡಾಲಿ ಭೇಟಿ ನೀಡಿದ್ದಾರೆ. ಅರಸೀಕೆರೆಯ (Arasikere) ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ಸಹೋದರರ ಜೊತೆ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಬಾಲ್ಯದ ದಿನಗಳನ್ನ ಸ್ಮರಿಸಿದ್ದಾರೆ.

    ನಟ ಧನಂಜಯ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟನಾಗಿ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಡಾಲಿ ಧನಂಜಯ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಮನ್ ಮ್ಯಾನ್ ಹೀರೋ ಅಂತನೇ ಬಿರುದು ಪಡೆದಿರುವ ಡಾಲಿ ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ಬರ್ತಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರೆ. ಅಂದಹಾಗೆ ಧನಂಜಯ್ ಹುಟ್ಟುಹಬ್ಬ ಆಗಸ್ಟ್ 23ರಂದು ಇದ್ದು, ಈಗಾಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಡಾಲಿ ಉತ್ಸವಕ್ಕೆ ಅಭಿಮಾನಿಗಳು ಸಜ್ಜಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

    ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು ಅಭಿಮಾನದ ತೇರು ಎಳೆಯೋಣ ಬನ್ನಿ ಎಂದು ಟ್ಯಾಗ್ ಲೈನ್ ಇಡಲಾಗಿದೆ. ಈಗಾಗಲೇ ಅಭಿಮಾನಿಗಳು ಉತ್ಸವಕ್ಕೆ ರೆಡಿಯಾಗಿದ್ದಾರೆ. ಅಂದಹಾಗೆ ಈ ಬಾರಿಯ ಧನಂಜಯ್ ಹುಟ್ಟುಹಬ್ಬ ತುಂಬನೇ ವಿಶೇಷ. 4 ವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಜೊತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಧನಂಜಯ್ ಅವರಿಗೆ ತುಂಬಾ ವಿಶೇಷವಾಗಿದೆ. ಅಂದಹಾಗೆ, ಡಾಲಿ ಪ್ರಸ್ತುತ ಪರಮೇಶ್ವರ್‌ ಗುಂಡ್ಕಲ್‌ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಮೈಸೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 4 ವರ್ಷದ ನಂತರ ‘ಡಾಲಿ ಉತ್ಸವ’: ಅದ್ಧೂರಿಯಾಗಿ ಆಚರಿಸಲು ಸಜ್ಜಾದ ಫ್ಯಾನ್ಸ್

    4 ವರ್ಷದ ನಂತರ ‘ಡಾಲಿ ಉತ್ಸವ’: ಅದ್ಧೂರಿಯಾಗಿ ಆಚರಿಸಲು ಸಜ್ಜಾದ ಫ್ಯಾನ್ಸ್

    ಸ್ಯಾಂಡಲ್‌ವುಡ್ ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ (Dhananjay) ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟನಾಗಿ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಡಾಲಿ ಧನಂಜಯ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ‘ಕಾಮನ್ ಮ್ಯಾನ್ ಹೀರೋ’ ಅಂತನೇ ಬಿರುದು ಪಡೆದಿರುವ ಡಾಲಿ  ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ತನ್ನ ಬರ್ತಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರೆ. ಅಂದಹಾಗೆ ಧನಂಜಯ್ ಹುಟ್ಟುಹಬ್ಬ (Birthday) ಆಗಸ್ಟ್ 23. ಆದರೆ ಈಗಾಗಲೇ ಅಭಿಮಾನಿಗಳ ಸಂಭ್ರಮ ಶುರುವಾಗಿದೆ. ಡಾಲಿ ಉತ್ಸವಕ್ಕೆ (Dali Utsav) ಅಭಿಮಾನಿಗಳು ಸಜ್ಜಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

    ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು ‘ಅಭಿಮಾನದ ತೇರು ಎಳೆಯೋಣ ಬನ್ನಿ’ ಎಂದು ಟ್ಯಾಗ್ ಲೈನ್ ಇಡಲಾಗಿದೆ. ಇವತ್ತಿಗೆ ಸರಿಯಾಗಿ 25 ದಿನಗಳು ಬಾಕಿ ಉಳಿದಿದ್ದು. ಇಂದಿನಿಂದನೆ ಅಭಿಮಾನಿಗಳು ಉತ್ಸವಕ್ಕೆ ರೆಡಿಯಾಗಿದ್ದಾರೆ. ಅಂದಹಾಗೆ ಈ ಬಾರಿಯ ಧನಂಜಯ್ ಹುಟ್ಟುಹಬ್ಬ ತುಂಬನೇ ವಿಶೇಷ. 4 ವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಜೊತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಧನಂಜಯ್ ಅವರಿಗೆ ತುಂಬಾ ವಿಶೇಷವಾಗಿದೆ.

    ನೆರೆ, ಕೊರೊನಾ, ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಕಾರಣದಿಂದ ಧನಂಜಯ್ ಕಳೆದ 4 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅಭಿಮಾನಿಗಳ ಕೈಗೂ ಸಿಕ್ಕಿರಲಿಲ್ಲ. ಹಾಗಾಗಿ ಈ ಬಾರಿ ದೊಡ್ಡ ಮಟ್ಟದಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದು ಹುಟ್ಟುಹಬ್ಬದ ದಿನ ಅಭಿಮಾನಿಗಳ ಜೊತೆಯೇ ಸಮಯ ಕಳೆಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ:‘ನಾಗರಹಾವು’ ಚಿತ್ರದ ನಂತರ ಮತ್ತೆ ಒಂದಾಗಲಿದ್ದಾರೆ ದಿಗಂತ್-ರಮ್ಯಾ

    ಜೆಪಿ ನಗರದ ಗ್ರೌಂಡ್‌ನಲ್ಲಿ ಸೆಲೆಬ್ರೇಷನ್

    ಧನಂಜಯ್ ಬರ್ತಡೇ ಸೆಲೆಬ್ರೇಷನ್ ಜೆಪಿ ನಗರದ ಗ್ರೌಂಡ್‌ನಲ್ಲಿ ನಡೆಯಲಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಬರುವ ಕಾರಣ ದೊಡ್ಡ ಗ್ರೌಂಡ್‌ನಲ್ಲಿ ಆಚರಣೆ ಮಾಡಿಕೊಳ್ಳಲು ಧನಂಜಯ್ ನಿರ್ಧರಿಸಿದ್ದಾರೆ. ಆಗಸ್ಟ್ 22ರ ರಾತ್ರಿಯಿಂದನೇ ಸೆಲೆಬ್ರೇಷನ್ ಶುರುವಾಗಲಿದೆ. 23ರಂದು ಗ್ರೌಂಡ್‌ನಲ್ಲಿ ಧನಂಜಯ್ ಎಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಿ ಅಭಿಮಾನಿಗಳ ಪ್ರೀತಿಯ ವಿಶ್ ಸ್ವೀಕರಿಸಲಿದ್ದಾರೆ.

    ಊಟದ ವ್ಯವಸ್ಥೆ

    ದೂರ ಊರುಗಳಿಂದ ಅಭಿಮಾನಿಗಳು ಬರುವ ಕಾರಣದಿಂದ ಊಟದ ವ್ಯವಸ್ಥೆ ಕೂಡ ಇರಲಿದೆ ಎನ್ನಲಾಗಿದೆ. ಮಾಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿಸಲಾಗಿದ್ದು ಎಲ್ಲಾ ಅಭಿಮಾನಿಗಳು ಊಟ ಮಾಡಿ ಸುರಕ್ಷಿತವಾಗಿ ಮತ್ತೆ ತಮ್ಮ ಊರುಗಳಿಗೆ ಮರಳಬೇಕು ಎನ್ನುವುದು ಧನಂಜಯ್ ಅವರ ಆಸೆ. ಹಾಗಾಗಿ  ಡಾಲಿ ಉತ್ಸವ ಎಲ್ಲಾ ರೀತಿಯ ಸಕಲ ಸಿದ್ಧತೆ ಈಗಾಗಲೇ ನಡೆಯುತ್ತಿದ್ದು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಾಲಿ ಜೊತೆಗಿನ ಗೆಳೆತನದ ಬಗ್ಗೆ ಅಮೃತಾ ಅಯ್ಯಂಗಾರ್ ಸ್ಪಷ್ಟನೆ

    ಡಾಲಿ ಜೊತೆಗಿನ ಗೆಳೆತನದ ಬಗ್ಗೆ ಅಮೃತಾ ಅಯ್ಯಂಗಾರ್ ಸ್ಪಷ್ಟನೆ

    ತೆರೆಯ ಮೇಲೆ ಬೆಸ್ಟ್‌ ಜೋಡಿಯಾಗಿ ಮಿಂಚಿರೋ ಡಾಲಿ- ಅಮೃತಾಗೆ ಅಪಾರ ಅಭಿಮಾನಿಗಳ ಬಳಗವಿದೆ. ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಈ ಜೋಡಿ ಜಂಟಿಯಾದರೆ ಚೆನ್ನಾಗಿರುತ್ತೆ ಆಶಿಸುವ ಅಭಿಮಾನಿಗಳಿದ್ದಾರೆ. ಹೀಗಿರುವಾಗ ಇಬ್ಬರು ಎಂಗೇಜ್‌ ಆಗಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ಈ ಸುದ್ದಿ ನಿಜಾನಾ? ಇಬ್ಬರ ಗೆಳೆತನ ಹೇಗಿದೆ ಎಂಬುದರ ಬಗ್ಗೆ ಅಮೃತಾ ಅಯ್ಯಂಗಾರ್‌ ಮಾತನಾಡಿದ್ದಾರೆ.

    ‘ಪಾಪ್ ಕಾರ್ನ್ ಮಂಕಿ ಟೈಗರ್’, ಬಡವ ರಾಸ್ಕಲ್, ಹೊಯ್ಸಳ ಸಿನಿಮಾದಲ್ಲಿ ಡಾಲಿ- ಅಮೃತಾ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿ ಜನರಿಗೆ ಇಷ್ಟವಾಗಿದೆ. ಇಬ್ಬರ ಜೋಡಿ ಇಷ್ಟವಾಗುತ್ತಿದ್ದಂತೆ ಗಾಸಿಪ್ ಕೂಡ ದೊಡ್ಡ ಮಟ್ಟದಲ್ಲಿ ಹಬ್ಬಿತ್ತು. ಇಬ್ಬರು ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಸಾಕಷ್ಟು ಕಡೆ ಇಬ್ಬರಿಗೂ, ಮದುವೆ ಬಗ್ಗೆ ಸ್ನೇಹಿತರು & ಅಭಿಮಾನಿಗಳು ಕೇಳ್ತಾ ಇದ್ರು. ಇದಕ್ಕೆಲ್ಲಾ ನಟಿ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಟಿಪ್ಪು ಸುಲ್ತಾನ್ ಕುರಿತ ಸಿನಿಮಾಗೆ ಬಿತ್ತು ಬ್ರೇಕ್- ಅಸಲಿ ಕಾರಣ ಬಿಚ್ಚಿಟ್ಟ ನಿರ್ಮಾಪಕ

    ಡಾಲಿ- ಅಮೃತಾ ಡೇಟಿಂಗ್ ಮಾಡ್ತಿದ್ದಾರಾ ಎಂಬ ಬಗ್ಗೆ ಅಮೃತಾ ನೇರವಾಗಿ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಗೊತ್ತು ಅಭಿಮಾನಿಗಳು ನನ್ನ ಮತ್ತು ಡಾಲಿ ಜೋಡಿಯನ್ನ ತೆರೆಯ ಮೇಲೆ ನೋಡೋದಕ್ಕೆ ಇಷ್ಟಪಡ್ತಾರೆ ಅಂತಾ. ನಾವು ಮೂರು ಸಿನಿಮಾಗಳನ್ನ ಒಟ್ಟಿಗೆ ಮಾಡಿದ್ದೇವೆ. ಹಾಗಾಗಿ ನಮ್ಮನ್ನ ನೋಡಿ ನಮ್ಮ ನಡುವೆ ಏನೋ ಇದೆ ಅಂತಾ ಊಹೆ ಮಾಡುತ್ತಾರೆ.

    ತೆರೆಮೇಲಿನ ಕೆಮಿಸ್ಟ್ರಿಗಿಂತ ತೆರೆಹಿಂದೆ ಬೇರೇ ಏನೋ ಇದೆ ಅಂತಾ ನಮ್ಮ ಬಗ್ಗೆ ಯೋಚಿಸುತ್ತಾರೆ. ನಾನು ಡಾಲಿ ಅವರೊಂದಿಗೆ ಕೆಲಸ ಮಾಡಲು ಕಂಫರ್ಟ್ ಆಗಿದ್ದೇನೆ. ನಮ್ಮ ನಡುವೆ ಒಳ್ಳೆಯ ಸ್ನೇಹವಿದೆ ಎಂದಿದ್ದಾರೆ. ನಾನಿನ್ನೂ ಸಿಂಗಲ್ ಆಗಿದ್ದೇನೆ ಎಂದು ನಟಿ ಅಮೃತಾ ಡಾಲಿ ಜೊತೆಗಿನ ಡೇಟಿಂಗ್ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ನಮ್ಮ ನಡುವೆ ಏನಿಲ್ಲ, ನಾವು ಒಳ್ಳೆಯ ಸ್ನೇಹಿತರು ಎಂದು ನಟಿ ಖಚಿತಪಡಿಸಿದ್ದಾರೆ.

    ‘ಹೊಯ್ಸಳ’ (Hoysala)ಸಿನಿಮಾದ ಸಕ್ಸಸ್ ನಂತರ ಅಧ್ಯಕ್ಷ ನಟ ಶರಣ್‌ಗೆ (Sharan) ಅಮೃತಾ (Amrutha) ನಾಯಕಿಯಾಗಿದ್ದಾರೆ. ಡಿಫರೆಂಟ್ ಆಗಿರೋ ಕಥೆಯಲ್ಲಿ ಅಮೃತಾ ಪಾತ್ರಕ್ಕೂ ಪ್ರಾಮುಖ್ಯತೆಯಿದೆ. ಸಿನಿಮಾಗಾಗಿ ಉತ್ತರ ಕರ್ನಾಟಕ ಭಾಷೆಯನ್ನ ನಟಿ ಕಲಿಯುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಗಮ್ಮ ಜಾತ್ರೆಯಲ್ಲಿ ‘ಪುಷ್ಪ 2’ ರೀತಿ ವೇಷ ಧರಿಸಿ ಎಂಟ್ರಿ ಕೊಟ್ಟ ಸಂಸದ

    ಗಂಗಮ್ಮ ಜಾತ್ರೆಯಲ್ಲಿ ‘ಪುಷ್ಪ 2’ ರೀತಿ ವೇಷ ಧರಿಸಿ ಎಂಟ್ರಿ ಕೊಟ್ಟ ಸಂಸದ

    ಲ್ಲು ಅರ್ಜುನ್ ಅವರು ‘ಪುಷ್ಪ’ (Pushpa) ಸಿನಿಮಾದ ಸಕ್ಸಸ್ ಅಲೆಯಲ್ಲಿದ್ದಾರೆ. ‘ಪುಷ್ಪ 2’ (Pushpa 2) ಶೂಟಿಂಗ್‌ನಲ್ಲಿ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ‘ಪುಷ್ಪ 2’ ಚಿತ್ರದಲ್ಲಿನ ಅಲ್ಲು ಅರ್ಜುನ್ (Allu Arjun) ಲುಕ್ ಸದ್ದು ಮಾಡಿತ್ತು. ತಿರುಪತಿ ಗಂಗಮ್ಮ ಜಾತ್ರೆಯಲ್ಲಿ ಪುಷ್ಪ 2 ಲುಕ್‌ನಂತೆಯೇ ಸಂಸದ ಗುರುಮೂರ್ತಿ ಎಂಟ್ರಿ ಕೊಟ್ಟಿದ್ದಾರೆ.

    ಐಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ, ಡಾಲಿ ನಟನೆಯ ‘ಪುಷ್ಪ’ (Pushpa) ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಪುಷ್ಪ 2ನಲ್ಲಿ ಅಲ್ಲು ಅರ್ಜುನ್ ಡಿಫರೆಂಟ್ ಗೆಟಪ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ಅಲ್ಲದೇ ಅನೇಕರು ಅದೇ ರೀತಿ ವೇಷ ಧರಿಸಿಕೊಂಡು ರೀಲ್ಸ್ ಮಾಡಿ ಗಮನ ಸೆಳೆದಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಅದಕ್ಕೆ ಬೆಸ್ಟ್ ಉದಾಹರಣೆ ಇಲ್ಲಿದೆ. ತಿರುಪತಿ ಸಂಸದ ಗುರುಮೂರ್ತಿ ಅವರು ‘ಪುಷ್ಪ 2’ (Pushpa) ರೀತಿ ವೇಷ ಧರಿಸಿದ್ದಾರೆ. ಅವರ ಫೋಟೋ ವೈರಲ್ ಆಗಿವೆ. ಇದನ್ನೂ ಓದಿ:ನಾವೂ ಕೂಡ ಸಹಜೀವನ ನಡೆಸುತ್ತಿದ್ದೇವೆ : ನರೇಶ್-ಪವಿತ್ರಾ ಲೋಕೇಶ್

    ತಿರುಪತಿ ಗಂಗಮ್ಮ ಜಾತ್ರೆಯಲ್ಲಿ ಈ ರೀತಿ ವೇಷ ಧರಿಸಿಕೊಂಡು ಪೂಜೆ ಸಲ್ಲಿಸುವ ಪದ್ಧತಿ ಇದೆ. ಅದನ್ನೇ ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಕಾಪಿ ಮಾಡಿದ್ದಾರೆ. ವಿಶೇಷ ಎಂದರೆ ತಿರುಪತಿ ಸಂಸದ ಗುರುಮೂರ್ತಿ ಅವರು ಪುಷ್ಪ 2 ಅಲ್ಲಿನ ಅಲ್ಲು ಅರ್ಜುನ್ ಅವರಂತೆಯೇ ವೇಷ ಧರಿಸಿಕೊಂಡು ಗಂಗಮ್ಮ ಜಾತ್ರೆಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದರಿಂದ ಸಿನಿಮಾದ ಮೇಲಿನ ಕ್ರೇಜ್ ಹೆಚ್ಚುವಂತಾಗಿದೆ.

    ‘ಪುಷ್ಪ 2’ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ಧನಂಜಯ್, ವಿಜಯ್ ಸೇತುಪತಿ, ನಟಿಸಿದ್ದಾರೆ. ಚಿತ್ರದಲ್ಲಿ ನಿಹಾರಿಕಾ ಕೊನಿಡೆಲಾ ಕೂಡ ಅಭಿನಯಿಸಿದ್ದಾರೆ ಎನ್ನಲಾಗುತ್ತಿದೆ.

  • ಡಾಲಿ ಪೋಲಿತನ ಬಗ್ಗೆ ಗುಣಗಾನ ಮಾಡಿದ ‘ಕಾಂತಾರ’ ಲೀಲಾ

    ಡಾಲಿ ಪೋಲಿತನ ಬಗ್ಗೆ ಗುಣಗಾನ ಮಾಡಿದ ‘ಕಾಂತಾರ’ ಲೀಲಾ

    ಕಿರುತೆರೆಯ ಬಿಗ್ ಶೋ Weekend With Ramesh ಕಾರ್ಯಕ್ರಮದಲ್ಲಿ ಡಾಲಿ ಧನಂಜಯ (Daali Dhananjay) ಅವರು ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ರಂಗಾಯಣ, ಸಿನಿಮಾ ಜರ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನ ಡಾಲಿ ಹಂಚಿಕೊಂಡಿದ್ದಾರೆ. ಈ ವೇಳೆ ಡಾಲಿ ಸಹನಟಿ ‘ಕಾಂತಾರ’ (Kantara) ನಟಿ ಸಪ್ತಮಿ ಭಾಗಿಯಾಗಿ, ಧನಂಜಯ ಬಗ್ಗೆ ಹಾಡಿಹೊಗಳಿದ್ದಾರೆ.

    ‘ಕಾಂತಾರ’ ಸಿನಿಮಾ ಸಂಚಲನ ಮೂಡಿಸಿದ ಸಪ್ತಮಿ ಗೌಡ ಅವರು ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಚಂದನವನಕ್ಕೆ ಡಾಲಿಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ವೀಕೆಂಡ್ ಟೆಂಟ್‌ನಲ್ಲಿ ಭಾಗಿಯಾಗಿರುವ ಸಪ್ತಮಿ ಗೌಡ ಅವರು, ಧನಂಜಯ (Dhananjay) ಅವರು ಮುಗ್ಧರ ರೀತಿ ಕಾಣ್ತಾರೆ, ಆದರೆ ಅವರು ಮುಗ್ಧರಲ್ಲ, ತುಂಬಾ ಪೋಲಿ. ನಾವೆಲ್ಲ ಅವರ ಜೋಕ್‌ಗಳನ್ನು ಕೇಳಿದ್ದೇವೆ. ನಮ್ಮ ಕಾಲೇಜ್‌ಗೆ ಮುಖ್ಯ ಅತಿಥಿಯಾಗಿ ಧನಂಜಯ ಅವರು ಬಂದಿದ್ದರು. ಆಗಲೇ ನಾನು ಅವರನ್ನು ಮೊದಲು ಭೇಟಿ ಮಾಡಿದ್ದೆ. ಸ್ವಲ್ಪ ದಿನದ ಹಿಂದೆ ಲಿಫ್ಟ್‌ನಲ್ಲಿದ್ದಾಗ ಯಾರೋ ಬಂದು ಧನಂಜಯ ಜೊತೆ ಸೆಲ್ಫಿ ತಗೊಂಡರು. ಆಗ ಡಾಲಿ ಇಲ್ಲಿ ಸಪ್ತಮಿ ಗೌಡ ಕೂಡ ಇಲ್ಲೇ ಇದ್ದಾರೆ ಎಂದರು. ನಾನು ಬೆಳೆಯಬೇಕು, ನಮ್ಮವರೂ ಬೆಳೆಯಬೇಕು ಎನ್ನುವ ಗುಣ ಧನಂಜಯ ಅವರಿಗೆ ಇದೆ. ಸೆಲ್ಫ್ ಮೇಡ್ ವ್ಯಕ್ತಿಗೆ ಕಷ್ಟ ಬರಬಾರದು, ಯಾವಾಗಲೂ ನಗುತ್ತಾ ಇರಬೇಕು. ಇನ್ನು ನಾನು ಅವರ ಹೆಸರನ್ನು ನನ್ನ ಫೋನ್‌ನಲ್ಲಿ ದಕ್ಷಿಣಾಪಥೇಶ್ವರ ಅಂತ ಸೇವ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

    ‘ಕಾಂತಾರ’ ನಟಿ ಬಗ್ಗೆ ಡಾಲಿ ಮಾತನಾಡಿ, ಸಪ್ತಮಿ ಗೌಡ(Saptami Gowda) ಅವರು ಇಲ್ಲಿಗೆ ಬರುತ್ತಾರೆ ಅಂತ ಅಂದುಕೊಂಡಿರಲಿಲ್ಲ. ‘ಕಾಂತಾರ’ ಸಿನಿಮಾ ಹಿಟ್ ಆದ ನಂತರ ಹಿಂದಿಯವರೆಲ್ಲ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ತಾರೆ ಅಂತ ರೇಗಿಸುತ್ತಿರುತ್ತೇವೆ. ಸಪ್ತಮಿಯನ್ನು ನಾನು ಉಮೇಶಣ್ಣನ ಮಗಳು ಅಂತ ಕರಿತೀನಿ. ಸಪ್ತಮಿ ಗೌಡ ಇರೋ ಕಾಲೇಜ್‌ಗೆ ಬರಬೇಕು ಅಂತ ನಂಗೆ ಹೇಳಿದಾಗ ನಾನು ಹೋದೆ, ಅಲ್ಲಿ ಸಪ್ತಮಿ ಎಲ್ಲ ಹುಡುಗರನ್ನು ಕಂಟ್ರೋಲ್ ಮಾಡ್ತಿದ್ರು, ಡಾನ್ ತರ ಅವಾಜ್ ಹಾಕ್ತಿದ್ರು. ಆಗಲೇ ಪೊಲೀಸಪ್ಪನ ಮಗಳು ಅಂತ ಗೊತ್ತಾಯ್ತು. ‘ಪಾಪ್‌ಕಾರ್ನ್ ಮಂಕಿ ಟೈಗರ್’ ಪಾತ್ರದಲ್ಲಿ ಸಪ್ತಮಿಯನ್ನು ಹಾಕಿಕೊಳ್ತೀನಿ ಅಂತ ಸೂರಿ ಸರ್ (Director Soori) ಹೇಳಿದಾಗ ಸಪ್ತಮಿ ಕಾಲೇಜಿನಲ್ಲಿ ವರ್ತಿಸಿದ್ದು ನೆನಪಾಯ್ತು. ಆಗಲೇ ಕ್ಯಾರೆಕ್ಟರ್‌ಗೆ ಹೊಂದಿಕೆ ಆಗುತ್ತೆ ಅಂತಾ ಫಿಕ್ಸ್ ಆದೆ ಎಂದು ಧನಂಜಯ ಹೇಳಿದ್ದಾರೆ. ಇದನ್ನೂ ಓದಿ:ಪಸಂದಾಗಿದೆ ‘ರವಿಕೆ ಪ್ರಸಂಗ’ ಎಂದ ಗೀತಾಭಾರತಿ ಭಟ್

    ಇದೀಗ ‘ಉತ್ತರಾಕಾಂಡ’ ಸಿನಿಮಾದಲ್ಲಿ ಮತ್ತೆ ಡಾಲಿ ಮತ್ತು ಸಪ್ತಮಿ ಗೌಡ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಮೋಹಕ ತಾರೆ ರಮ್ಯಾ (Ramya) ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  • Weekend With Ramesh 5: ಮದುವೆ ಬಗ್ಗೆ ಗುಟ್ಟು ರಟ್ಟು ಮಾಡಿದ ಡಾಲಿ ಧನಂಜಯ್‌

    Weekend With Ramesh 5: ಮದುವೆ ಬಗ್ಗೆ ಗುಟ್ಟು ರಟ್ಟು ಮಾಡಿದ ಡಾಲಿ ಧನಂಜಯ್‌

    ಕಿರುತೆರೆಯ ಬಿಗ್ ಶೋ Weekend With Ramesh 5 ಕಾರ್ಯಕ್ರಮಕ್ಕೆ ನಟರಾಕ್ಷಸ ಡಾಲಿ ಎಂಟ್ರಿಯಾಗಿದೆ. ಸೋಲು -ಸವಾಲಿನ ದಿನಗಳ ಬಗ್ಗೆ ನಟ ಕಮ್ ನಿರೂಪಕ ರಮೇಶ್ ಅರವಿಂದ್ ಜೊತೆ ಧನಂಜಯ್ ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಡಾಲಿ (Daali) ಮದುವೆ ಚರ್ಚೆ ಕೂಡ ಆಗಿದೆ. ಡಾಲಿ ಹುಡುಗಿ ಎಂದು ಗುಟ್ಟು ರಟ್ಟಾಗಿದೆ.

    ಡಾಲಿ ಸ್ನೇಹಿತ ವಸಿಷ್ಠ ಸಿಂಹ ಮದುವೆಯಾದ್ಮೇಲೆ ಅಂತೂ ಡಾಲಿ ಮದುವೆ ಯಾವಾಗ ಅಂತಾ ಕೇಳುವವರು ಸಂಖ್ಯೆ ಜಾಸ್ತಿಯಾಗಿದೆ. ಅದು ಆಗೋ ಸಮಯಕ್ಕೆ ಆಗುತ್ತೆ ಅಂತಾ ಉತ್ತರ ನೀಡುತ್ತಲೇ ಬಂದಿದ್ದಾರೆ. ಆಗಾಗ ಅಮೃತಾ ಜೊತೆ ಡಾಲಿ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡಿತ್ತು. ನಾವಿಬ್ಬರು ಫ್ರೆಂಡ್ಸ್ ಅಷ್ಟೇ ಅಂತಾ, ಅಂತೆ -ಕಂತೆ ಸುದ್ದಿಗೆ ಬ್ರೇಕ್ ಹಾಕಿದ್ದರು. ಈಗ ಮತ್ತೆ ಡಾಲಿ ಮದುವೆ ಯಾವಾಗ ಎಂದು ಪ್ರಶ್ನೆ Weekend With Ramesh ಶೋನಲ್ಲಿ ಎದುರಾಗಿದೆ.

    ಕಾರ್ಯಕ್ರಮದಲ್ಲಿ ಡಾಲಿ ಧನಂಜಯ್ ಅವರ ಅಜ್ಜಿ, ಅವನು ಮದುವೆಯಾಗಬೇಕು ಎಂದು ಹೇಳಿದ್ದಾರೆ. ಅದಕ್ಕೆ ನಟ ರಮೇಶ್, ಹುಡುಗಿ ಹುಡುಕಿ ಅಂತಾರೆ. ಆಗ ಅಜ್ಜಿ ನಾವು ಹುಡುಕಿದ ಹುಡುಗಿಯನ್ನು ಅವರು ಒಪ್ಪಲ್ಲ ಎಂದು ಹೇಳ್ತಾರೆ. ಧನಂಜಯ್ ಅವರ ಅಕ್ಕ ಸಹ ಧನಂಜಯ್ ಅವರಿಗೆ ಮದುವೆಯಾಗೋಕೆ ಹೇಳಿ ಎಂದು ರಮೇಶ್ ಅರವಿಂದ್‌ಗೆ ಹೇಳ್ತಾರೆ. ಎಲ್ಲರ ಮಾತು ಕೇಳಿ ಧನಂಜಯ್ ಅವರು ನಗುತ್ತಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ನಂಬರ್ ಬ್ಲಾಕ್ ಮಾಡಿದ್ದರಂತೆ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ!

    ಶಿವಣ್ಣ ಕೂಡ ಮದುವೆ ಯಾವಾಗ ಅಂತಾ ಪ್ರಶ್ನೆ ಮಾಡಿದ್ದಾರೆ. ಆಗ ಡಾಲಿ, ನಾನು ಯಾವತ್ತೂ ಶಿವಣ್ಣನ ಮಾತು ತೆಗೆದು ಹಾಕಿಲ್ಲ. ಖಂಡಿತಾ ಮದುವೆ ಆಗ್ತೀನಿ ಎಂದು ಡಾಲಿ ಹೇಳಿದ್ದಾರೆ. ಮನಸ್ಸಿನಲ್ಲಿ ಯಾರಾದರೂ ಇದ್ದರೆ, ನನಗೆ ಮಾತ್ರ ಹೇಳಿ ಅಂತಾ ನಟ ರಮೇಶ್ ಡಾಲಿ ಬಳಿ ಹೇಳುತ್ತಾರೆ. ಆಗ ಡಾಲಿ, ರಮೇಶ್ ಕಿವಿಯಲ್ಲಿ ಏನೋ ಹೇಳ್ತಾರೆ. ಡಾಲಿ ಮಾತು ಕೇಳಿ ರಮೇಶ್ ಶಾಕ್ ಆಗುತ್ತಾರೆ. ದೊಡ್ಡ ಅನೌನ್ಸ್ ಮಾಡ್ತೀನಿ ಎಂದು ನಟ ಹೇಳ್ತಾರೆ, ಎಲ್ಲರೂ ನಗ್ತಾರೆ.

    ಡಾಲಿ ಧನಂಜಯ್ ಈಗಾಗಲೇ ಎಂಗೇಜ್ ಆಗಿದ್ದಾರಾ? ಮದುವೆಯಾಗ್ತಾರಾ? ಡಾಲಿ ಮದುವೆಯಾಗುವ ಹುಡುಗಿ ಈ ಎಲ್ಲಾ ಪ್ರಶ್ನೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಿಗಲಿದೆ.

  • ಐರನ್ ಲೆಗ್ ಎಂದು ಕಟುಕಿದ ದಿನಗಳ ಬಗ್ಗೆ ಕಣ್ಣೀರಿಟ್ಟ ಡಾಲಿ

    ಐರನ್ ಲೆಗ್ ಎಂದು ಕಟುಕಿದ ದಿನಗಳ ಬಗ್ಗೆ ಕಣ್ಣೀರಿಟ್ಟ ಡಾಲಿ

    ಟಿವಿ ಪರದೆ ಮೂಲಕ ಅಪಾರ ಅಭಿಮಾನಿಗಳನ್ನ ಗೆದ್ದಂತಹ Weekend With Ramesh 5 ಶೋನಲ್ಲಿ ಡಾಲಿ ಧನಂಜಯ್ ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ಬಣ್ಣದ ಬದುಕಿಗೆ ಕಾಲಿಟ್ಟಾಗ ಡಾಲಿಗೆ ಎದುರಾದ ಅವಕಾಶಗಳ ಕೊರತೆ, ಹೀಯಾಳಿಸಿದ ದಿನಗಳ ಬಗ್ಗೆ ಕಣ್ಣೀರಿಟ್ಟಿದ್ದಾರೆ. ಐರನ್ ಲೆಗ್ ಎಂದು ಕೆಟ್ಟ ಪದಗಳಲ್ಲಿ ಕುಟುಕಿದ ದಿನಗಳ ಬಗ್ಗೆ ಡಾಲಿ ಭಾವುಕರಾಗಿದ್ದಾರೆ.

    2013ರಲ್ಲಿ ‌’ಡೈರೆಕ್ಟರ್ಸ್‌ ಸ್ಪೆಷಲ್ʼ (Directors Special) ಸಿನಿಮಾ ಮೂಲಕ ಡಾಲಿ ಧನಂಜಯ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಹೀರೋ ಆಗಿ ನಟಿಸುತ್ತಿದ್ದ ಡಾಲಿಗೆ, ತಿರುವು ಕೊಟ್ಟ ಸಿನಿಮಾ ಅಂದ್ರೆ ಶಿವಣ್ಣ ಜೊತೆಗಿನ ‘ಟಗರು’ (Tagaru) ಚಿತ್ರ. ಶಿವರಾಜ್‌ಕುಮಾರ್ ಮುಂದೆ ಡಾಲಿ (Daali) ಆಗಿ ಅಬ್ಬರಿಸಿದ ಮೇಲೆಯೇ ಧನಂಜಯ್ ಲಕ್ ಚೇಂಜ್ ಆಗಿದ್ದು, ಪ್ರತಿಭಾನ್ವಿತ ನಟ ಡಾಲಿಗೆ ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬಂದ್ವು. ಇಂದು ನಟ, ನಿರ್ಮಾಪಕ, ಲಿರಿಕ್ಸ್ ರೈಟರ್ ಆಗಿ ಬೆಳೆದಿದ್ದಾರೆ. ಆದರೆ ತಾವು ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಮ್ಮ ಕಷ್ಟದ ದಿನಗಳು ಹೇಗಿತ್ತು ಎಂಬುದನ್ನ ಮಾತನಾಡಿದ್ದಾರೆ. ಇದನ್ನೂ ಓದಿ:ಚುನಾವಣಾ ರಾಯಭಾರಿಯಾಗಿ ಖ್ಯಾತನಟ ಸತೀಶ್ ನೀನಾಸಂ ನೇಮಕ

    ಧನಂಜಯ್ ಐರನ್ ಲೆಗ್ (Iron Leg) ಅವನನ್ನು ಹಾಕೋಂಡು ಸಿನಿಮಾ ಮಾಡಿದರೆ ಜನ ಬರಲ್ಲ ಅಂತ ಹೇಳುತ್ತಿದ್ದರು. ಎಲ್ಲಾ ತೆಗೆದುಕೊಂಡು ಧನಂಜಯ್ ಮೇಲೆ ಹಾಕಿದ್ರೆ ಹೇಗೆ ಎಲ್ಲರ ಎದುರು ಕೆಟ್ಟ ಪದಗಳಲ್ಲಿ ಹೇಳಿಬಿಟ್ಟರೆ ನಮಗೆ ಹೇಗಾಗುತ್ತೆ. ಯಾಕೆ ನೀವು ನಿಮ್ಮ ಹೀರೋನಾ ಹೀರೋ ರೀತಿ ನೋಡಿಕೊಳ್ಳಲ್ಲ. ನಾನು ಸಿನಿಮಾ ಕಲಿತುಕೊಂಡು ಬಂದಿದ್ದೀನಿ ಅಲ್ವಾ? ಹೀಗಾಗಿ ನನ್ನ ಕೋಪ ಎಲ್ಲಾ ತೆಗೆದು ಡಾಲಿ ಮೇಲೆ ಹಾಕಿ ಪಾತ್ರ ಮಾಡಿದಕ್ಕೆ ಇಂಡಸ್ಟ್ರಿಯಲ್ಲಿ ನಿಂತುಕೊಂಡೆ ಎಂದು ಧನಂಜಯ್ ಹೇಳಿದ್ದಾರೆ.

    ಬಳಿಕ ಡಾಲಿ ಬಗ್ಗೆ ಶಿವಣ್ಣ ಹಾಡಿ ಹೊಗಳಿದ್ದಾರೆ. ಧನಂಜಯ್ ಜೊತೆ ಕೆಲಸ ಮಾಡುವುದಕ್ಕೆ ಖುಷಿ ಇದೆ. ಅವರಲ್ಲಿ ಸದಾ ಜೋಶ್ ಇರುತ್ತೆ. ನನ್ನ ಪ್ರೀತಿ ಮತ್ತು ವಿಶ್ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ವಿಡಿಯೋ ಮೂಲಕ ಮಾತನಾಡಿದ್ದಾರೆ. ಶಿವಣ್ಣ ಅವರ ಜೊತೆ ನಾನು ಎಮೋಷನಲ್ ಆಗಿ ಕನೆಕ್ಟ್ ಆಗುತ್ತೀನಿ ನನ್ನನ್ನು ಮಗನ ರೀತಿ ನೋಡಿಕೊಂಡಿದ್ದಾರೆ ಎಂದು ಧನಂಜಯ್ ಹೇಳಿದ್ದಾರೆ. ಮತ್ತೊಂದು ಖುಷಿ ಏನೆಂದರೆ ಅಪ್ಪು ಸರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು, ನೆನಪುಗಳು ಅಷ್ಟೇ ನಮ್ಮ ಜೀವನದಲ್ಲಿ ದೊಡ್ಡ ಕಲೆಕ್ಷನ್ ಆಗಿ ಉಳಿಯುವುದು. ಏನ್ ಏನ್ ಕೊಡಬೇಕು ಪ್ರತಿಯೊಂದನ್ನು ತುಂಬಾ ಪ್ರೀತಿಯಿಂದ ಕೊಟ್ಟಿದ್ದಾರೆ ಎಂದು ಡಾಲಿ ಮಾತನಾಡಿದ್ದಾರೆ.

  • ಸಿನಿಮಾದವರಿಗೆ ಹೆಣ್ಣು ಯಾಕೆ ಕೊಡಲ್ಲ ಎಂದು ರೇಗಾಡಿದ ಡಾಲಿ

    ಸಿನಿಮಾದವರಿಗೆ ಹೆಣ್ಣು ಯಾಕೆ ಕೊಡಲ್ಲ ಎಂದು ರೇಗಾಡಿದ ಡಾಲಿ

    ಟರಾಕ್ಷಸ ಡಾಲಿ (Daali) ಚಂದನವನದ ಸಕ್ಸಸ್‌ಫುಲ್ ನಟ, ನಾಯಕ, ವಿಲನ್, ನಿರ್ಮಾಪಕ, ಲಿರಿಕ್ಸ್ ರೈಟರ್ ಆಗಿ ಸೈ ಎನಿಸಿಕೊಂಡಿದ್ದಾರೆ. ಆಗಾಗ ಸಿನಿಮಾಗಿಂತ ಡಾಲಿ ಮದುವೆ ವಿಚಾರವೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದೀಗ ಧನಂಜಯ ಸಿನಿಮಾದವರಿಗೆ ಹೆಣ್ಣು ಯಾಕೆ ಕೊಡಲ್ಲ ಅಂತಾ ಫುಲ್ ಗರಂ ಆಗಿದ್ದಾರೆ. ಇದನ್ನೂ ಓದಿ:ಸಿಎಂ ಬೊಮ್ಮಾಯಿ ಜೊತೆ ಕಾಣಿಸಿಕೊಂಡ ರಿಷಬ್ ಶೆಟ್ಟಿ

    ಆಗಾಗ ನೆಟ್ಟಿಗರ ಬಾಯಿಗೆ ಚರ್ಚೆಯಾಗುವ ವಿಷ್ಯ ಅಂದರೆ ಡಾಲಿ – ಅಮೃತಾ ಡೇಟಿಂಗ್ ಸುದ್ದಿ. ಅದೆಷ್ಟೇ ಬಾರಿ ನಾವಿಬ್ಬರು ಫ್ರೆಂಡ್ಸ್‌ ಅಷ್ಟೇ ಎಂದು ಸ್ಪಷ್ಟನೆ ಕೊಟ್ರು ಕೂಡ ಈ ಜೋಡಿ ಹೆಸರು ತಳಕು ಹಾಕಿಕೊಳ್ಳುತ್ತಲೇ ಇರುತ್ತದೆ. ಈಗ ನಾನಿನ್ನೂ ಸಿಂಗಲ್ ನನ್ನ ಹೃದಯ ಖಾಲಿ ಇದೆ ಅಂತಿದ್ದಾರೆ ಡಾಲಿ. ಸಿನಿಮಾದವ್ರು ಅಂತಾ ಹೆಣ್ಣು ಕೊಡುತ್ತಿಲ್ಲ ಅಂದ್ರೆ ಬೇಡ ಬಿಡಯ್ಯ. ತೆರೆಯ ಮೇಲೆ 10 ಮದುವೆ ಆಗ್ತೀನಿ ಎಂದು ಡಾಲಿ ರೇಗಾಡಿದ್ದಾರೆ. ಈ ಕುರಿತ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Hombale Films (@hombalefilms)

    ಅಂದಹಾಗೆ ಜಗ್ಗೇಶ್ ನಟನೆಯ Raghavendra Stores ಚಿತ್ರದ ಸಿಂಗಲ್ ಸುಂದ್ರ ಎಂಬ ಸಾಂಗ್ ಏ.12ಕ್ಕೆ ರಿಲೀಸ್ ಆಗಿದೆ. ಹಾಗಾಗಿ ಸಿಂಗಲ್ ಆಗಿರುವ ಡಾಲಿ ಕಡೆಯಿಂದ ವಿಶೇಷವಾಗಿ ಅನೌನ್ಸ್‌ಮೆಂಟ್ ಮಾಡಿಸಿದ್ದಾರೆ ಸಿನಿಮಾ ಟೀಂ. ಮದುವೆಯಾಗದೇ ಸಿಂಗಲ್ ಆಗಿ ಇರೋರಿಗಾಗಿ ಈ ಹಾಡು ಮೂಡಿ ಬಂದಿದೆ. ಈ ಹಾಡನ್ನ ಸ್ಯಾಂಡಲ್‌ವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ Rakshit Shetty ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

    ನವರಸ ನಾಯಕ ಜಗ್ಗೇಶ್, ಶ್ವೇತಾ ಶ್ರೀವಾಸ್ತವ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಇದೇ ಏ.28ಕ್ಕೆ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದೆ.

  • ಅಲ್ಲು ಅರ್ಜುನ್-ಸುಕುಮಾರ್ ಕಾಂಬೋ ಬ್ಯಾಕ್, ಧೂಳ್ ಎಬ್ಬಿಸಿದ ‘ಪುಷ್ಪ 2’ ಗ್ಲಿಂಪ್ಸ್

    ಅಲ್ಲು ಅರ್ಜುನ್-ಸುಕುಮಾರ್ ಕಾಂಬೋ ಬ್ಯಾಕ್, ಧೂಳ್ ಎಬ್ಬಿಸಿದ ‘ಪುಷ್ಪ 2’ ಗ್ಲಿಂಪ್ಸ್

    ʻಪುಷ್ಪʼ (Pushpa) ಸಿನಿಮಾದ ಸೂಪರ್‌ ಸಕ್ಸಸ್‌ ನಂತರ ‘ಪುಷ್ಪ 2’ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಗುಡ್‌ ನ್ಯೂಸ್‌ ಸಿಕ್ಕಿದೆ. ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun)  ನಟನೆಯ ಪುಷ್ಪ ಪಾರ್ಟ್‌ 2 ಬಗ್ಗೆ ಬಿಗ್‌ ಅಪ್‌ಡೇಟ್‌ ಸಿಕ್ಕಿದೆ.

    ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಸುಕುಮಾರ್ (Sukumar) ಜೋಡಿಯ ಪುಷ್ಪ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳ್ ಎಬ್ಬಿಸಿತ್ತು. ಕಳೆದ ವರ್ಷದ ತೆರೆಗೆ ಬಂದ ಈ ಚಿತ್ರ ವಿಶ್ವಾದ್ಯಂತ 400 ಕೋಟಿಗೂ ಅಧಿಕ ಮೊತ್ತದ ಕಲೆಕ್ಷನ್ ಮಾಡಿತ್ತು. ರಕ್ತಚಂದನ ಕಳ್ಳ ಸಾಗಾಣಿಕೆ ಕಥಾಹಂದರದ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅಬ್ಬರಿಸಿ ಬೊಬ್ಬಿರಿದ್ದರು. ಅಲ್ಲು ಆಕ್ಟಿಂಗ್, ಸುಕುಮಾರ್ ಟೀಕಿಂಗ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಬೆಳ್ಳಿಪರದೆಯಲ್ಲಿ ಅಖಂಡ ಗೆಲುವು ಕಂಡ ಪುಷ್ಪ ಪಾರ್ಟ್-2 ಮೇಲೆ ನಿರೀಕ್ಷೆ ಹೆಚ್ಚಿದೆ. ಪುಷ್ಪ ಸೀಕ್ವೆಲ್ ಹೇಗಿರುತ್ತದೆ ಎಂಬ ಕೌತಕದ ನಡುವೆ ‘ಪುಷ್ಪ-2’ ಅಂಗಳದಿಂದ ಹೊಸ ಅಪ್ ಡೇಟ್ ರಿಲೀಸ್ ಆಗಿದೆ. ಇದನ್ನೂ ಓದಿ:‘ಜಲಪಾತ’ ಚಿತ್ರ ಕೈಗೆತ್ತಿಕೊಂಡ ‘ವೈಶಂಪಾಯನ ತೀರ’ ನಿರ್ದೇಶಕ ರಮೇಶ್ ಬೇಗಾರ್

    ಪುಷ್ಪ-2 ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ಕೊಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಅದಕ್ಕೂ ಮುನ್ನವೇ ಸುಕುಮಾರ್ ತಂಡ ಸಣ್ಣದೊಂದು ವಿಡಿಯೋ ತುಣುಕು ರಿವೀಲ್ ಮಾಡಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದ್ದಾರೆ. ಬುಲೆಟ್ ನಿಂದ ಗಾಯಗೊಂಡ ಪುಷ್ಪ ತಿರುಪತಿ ಜೈಲಿನಿಂದ ಎಸ್ಕೇಪ್ ಆಗಿರ್ತಾನೆ. ಎಲ್ಲೆಡೆ ಪುಷ್ಪನಿಗಾಗಿ ಹುಡುಗಾಟ ನಡೆಸಲಾಗ್ತಿದೆ. ಪುಷ್ಪ ಎಲ್ಲಿ ಎಂಬ ನಿರೀಕ್ಷೆಯಿಂದಿಗೆ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 7ರಂದು ಅಲ್ಲು ಅರ್ಜುನ್ ಬರ್ತ್ ಡೇಗೆ ಫುಲ್ ಟೀಸರ್ ರಿಲೀಸ್ ಆಗಲಿದ್ದು, ಐಕಾನ್ ಸ್ಟಾರ್ ಫ್ಯಾನ್ಸ್ ಪಿಕ್ಚರ್ ಅಭಿ ಬಾಕಿ ಹೈ ಎನ್ನುತ್ತಿದ್ದಾರೆ.

    ‘ಪುಷ್ಪ-2’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ.