ಸ್ಯಾಂಡಲ್‌ವುಡ್ ಮೋಹಕ ತಾರೆ ರಮ್ಯಾ (Ramya) ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ. ರಮ್ಯಾ ಕಮ್‌ಬ್ಯಾಕ್ ಸಿನಿಮಾ ಉತ್ತರಕಾಂಡ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ರಮ್ಯಾ ಸದ್ಯದಲ್ಲೇ ಉತ್ತರಕಾಂಡ (Uttarakanda) ಸಿನಿಮಾ ಶೂಟಿಂಗ್‌ಗೆ ಹಾಜರಿ ಹಾಕ್ತಿದ್ದಾರೆ.
‘ಉತ್ತರಕಾಂಡ’ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಯಾಕೆಂದ್ರೆ, ರಮ್ಯಾ (Ramya) ಕಮ್‌ಬ್ಯಾಕ್ ಸಿನಿಮಾ ಆಗಿರುವ ಕಾರಣ, ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಅದಷ್ಟೇ ಅಲ್ಲ, ರಮ್ಯಾ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar), ಡಾಲಿ (Daali) ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇದೇ ಎಪ್ರಿಲ್‌ನಿಂದ ಶುರುವಾಗಲಿದೆ. ಚಿತ್ರೀಕರಣದಲ್ಲಿ ಡಾಲಿ, ರಮ್ಯಾ, ಶಿವಣ್ಣ ಮೂವರು ಭಾಗಿಯಾಗುತ್ತಿದ್ದಾರೆ.
‘ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಉತ್ತರಕಾಂಡ ಸಿನಿಮಾ ಪಕ್ಕಾ ಆ್ಯಕ್ಷನ್ ಸೀಕ್ವೇನ್ಸ್ ಇರುವ ಚಿತ್ರವಾಗಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಸ್ಪರ್ಧಿ ತುಕಾಲಿ ಸಂತೋಷ್ ಕಾರು ಅಪಘಾತ
ಇನ್ನೂ ಶಿವಣ್ಣ, ರಮ್ಯಾ, ಡಾಲಿ ಮೂವರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣ, ಕಥೆ ಮತ್ತು ಪಾತ್ರ ಹೇಗಿರಲಿದೆ ಎಂಬ ಕೌತುಕ ಮೂಡಿಸಿದೆ.
ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ (Bengaluru Film Festival) ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ಚಿತ್ರೋತ್ಸವದ ರಾಯಭಾರಿ ನಟ ಡಾಲಿ, ಕಾಟೇರ ನಟಿ ಆರಾಧನಾ, ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕ್ಕಿ ಕೇಜ್, ಪೂಜಾ ಗಾಂಧಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ಸಿನಿಮೋತ್ಸವಕ್ಕೆ ಡಾಲಿ ಧನಂಜಯ್ ರಾಯಭಾರಿ
ಫೆ.29ರಿಂದ ಮಾರ್ಚ್ 7ರ ವರೆಗೆ ಸುಮಾರು ಎಂಟು ದಿನಗಳ ಕಾಲ ಈ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ದೇಶವಿದೇಶಗಳಲ್ಲಿ ಮನ್ನಣೆ ಪಡೆದಿದ್ದು, ಇದರಲ್ಲಿ 50 ರಾಷ್ಟ್ರಗಳ ಸುಮಾರು 180 ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇದನ್ನೂ ಓದಿ:ಪ್ರೆಗ್ನೆನ್ಸಿ ಖಚಿತ ಪಡಿಸಿದ ನಟಿ ದೀಪಿಕಾ ಪಡುಕೋಣೆ
ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮತ್ತು ಕರ್ನಾಟಕದ 50 ವರ್ಷಗಳ ಸಂಭ್ರಮದಲ್ಲಿ ಕನ್ನಡ ವಿಶೇಷ ವಿಭಾಗದಲ್ಲಿ 30 ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಏಷ್ಯನ್ ಸಿನಿಮಾ ಸ್ಪರ್ಧೆಗೆ ಅಂತಾರಾಷ್ಟ್ರೀಯ ತೀರ್ಪುಗಾರರು, ಭಾರತೀಯ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಮತ್ತು ರಾಷ್ಟ್ರೀಯ ತೀರ್ಪುಗಾರರು ಕನ್ನಡ ಸಿನಿಮಾ ಸ್ಪರ್ಧೆಗಾಗಿ ಅಂತರಾಷ್ಟ್ರೀಯ ವಿಮರ್ಶಕ ತೀರ್ಪುಗಾರರು ಮತ್ತು ರಾಷ್ಟ್ರೀಯ ತೀರ್ಪುಗಾರರು ಸೇರಿದಂತೆ ಚಿತ್ರೋತ್ಸವದಲ್ಲಿ ಐದು ತೀರ್ಪುಗಾರ ತಂಡಗಳಿರುತ್ತವೆ. ವಿದೇಶದಿಂದ ದೃಢಪಡಿಸಿದ ಅಂತಾರಾರಾಷ್ಟ್ರೀಯ ತೀರ್ಪುಗಾರರ ಸದಸ್ಯರಲ್ಲಿ ರಷ್ಯಾದಿಂದ ನೀನಾ ಕೊಚೆಲೆವಾ, ಸ್ಪೇನ್‌ನ ರೊಸಾನ್ನಾ ಜಿ ಅಲೋನ್ಸೆ, ಬಾಂಗ್ಲಾದೇಶದ ಆರಿ ಹಕ್ ಬಾಂಧೋನ್, ಯುಕೆಯಿಂದ ಕ್ಯಾರಿ ರಾಜಿಂದರ್ ಸಾಹಿ, ಫ್ಲೋವಾಕಿಯಾದ ವೈರಾ ಲಾಂಗರೋವಾ, ತೈವಾನ್‌ನಿಂದ ಹ್ಯಾನ್ ಟಿಯೆನ್, ಆಸ್ಟ್ರೇಲಿಯಾದಿಂದ ಮ್ಯಾಕ್ಸಿ ವಿಲಿಯಮ್ಮನ್ ಮತ್ತು ಬಿಲ್ಲೇರಿಯಾದ ಆಂಡೋನಿಕಾ ಮಾರ್ಟೂನೊವಾ ಸೇರಿದ್ದಾರೆ. ರಾಷ್ಟ್ರೀಯ ತೀರ್ಪುಗಾರರ ಸದಸ್ಯರಲ್ಲಿ ಒರಿಸ್ಸಾದಿಂದ ವಿಜಯಾ ಜೆನಾ, ಮಣಿಪುರದಿಂದ ಮೇಘಚಂದ್ರ ಕೊಂಗ್ರಾಮ್, ಕೊಲ್ನೋತಾದಿಂದ ಶೇಖರ್ ದಾಸ್, ಮಹಾರಾಷ್ಟ್ರದಿಂದ ಸಂಜಯ್ ಕೃಷ್ಣಾಜಿ ಪಾಟೀಲ್, ಅಸ್ಸಾಂನಿಂದ ಜಾದುಮೋನಿ ದತ್ತಾ ಸೇರಿದ್ದಾರೆ. ಇವರೆಲ್ಲ ಹೆಸರಾಂತ ನಿರ್ದೇಶಕರು ಇಲ್ಲವೇ ವಿಮರ್ಶಕರು. ಸ್ಥಳೀಯ ಚಿತ್ರನಿರ್ದೇಶಕರು, ವಿಮರ್ಶಕರು, ಪತ್ರಕರ್ತರು ಕೆಲವರು ರಾಷ್ಟ್ರೀಯ, ಅಂತಾರಾಷ್ಟ್ರೀಯ ತೀರ್ಪುಗಾರ ತಂಡದ ಭಾಗವಾಗಿರುತ್ತಾರೆ.
ಕನ್ನಡ ಜನಪ್ರಿಯ ಮನರಂಜನಾ ಚಲನಚಿತ್ರಗಳ ವಿಭಾಗದಲ್ಲಿ 11 ಚಿತ್ರಗಳಿವೆ. ದೇಶ ಕೇಂದ್ರಿತ ವಿಭಾಗದಲ್ಲಿ ನಿರ್ದಿಷ್ಟ ದೇಶದಿಂದ ಸಮಕಾಲೀನ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, ಈ ಬಾರಿ ಜರ್ಮನಿಯ ಸಿನಿಮಾಗಳ ಮೇಲೆ ಗಮನ ಹರಿಸಲಾಗಿದೆ. ಅದ್ಭುತ ಬಾರತ ನಮ್ಮ ಉತ್ಸವದ ಅನನ್ಯ ವಿಭಾಗ. ಇದರಲ್ಲಿ ಭಾರತದ ಕಡಿಮೆ ತಿಳಿದಿರುವ ಭಾಷೆಗಳಲ್ಲಿ ತಯಾರಾದ ಚಿತ್ರಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡಲಾಗುತ್ತದೆ. ಈ ಆವೃತ್ತಿಯಲ್ಲಿ ತುಳು, ಕೊಡವ, ಬಂಜಾರ, ಅರೆಬಾಷೆ, ಮಾರ್ಕೋಡಿ, ಗಾಲೊ, ರಾಭ, ಸಂತಾಲಿ, ತಾಯಿಫಾಕೆ, ಭಾಷೆಗಳ 9 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪುನರವಲೋಕನ ವಿಭಾಗಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಮೃಣಾಲ್ ಸೇನ್ ಮತ್ತು ಇರಾನಿನ ಚಲನಚಿತ್ರ ನಿರ್ಮಾಪಕ ಅಬ್ಬಾಸ್ ಕೈರೋಸ್ಟೋಮಿ ಅವರನ್ನು ಆಯ್ಕೆ ಮಾಡಿದ್ದು, ಅವರ ಆಯ್ದ ಚಿತ್ರಗಳು ಈ ವಿಭಾಗದಲ್ಲಿ ಪ್ರದರ್ಶನ ಕಾಣಲಿವೆ.
ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಸಂಗೀತ ಸಂಯೋಜಕ ವಿಜಯಭಾಸ್ಕರ್ ಶತಮಾನೋತ್ಸವ ಸ್ಮರಣೆಯಾಗಿ ಅವರ ಒಂದೆರಡು ಚಲನಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುವುದು. ಅವರು ಸಿನಿಮಾ ಸಂಗೀತಕ್ಕೆ ನೀಡಿದ ಕೊಡುಗೆಯ ಕುರಿತು ವಿಶೇಷ ಪ್ರಸ್ತುತಿ ಇರುತ್ತದೆ. ಛಾಯಾಗ್ರಾಹಕ ಎನ್ ಜಿ ರಾವ್ ಅವರ ಚಿತ್ರವೊಂದನ್ನು ಪ್ರದರ್ಶಿಸುವ ಮೂಲಕ ಅವರಿಗೆ ಶತಮಾನೋತ್ಸವದ ಗೌರವವನ್ನು ಸಲ್ಲಿಸಲಾಗುವುದು. ಕಳೆದವರ್ಷ ನಮ್ಮನ್ನು ಅಗಲಿದ ಹೆಸರಾಂತ ತಾರೆ, ನಿರ್ಮಾಪಕಿ ಲೀಲಾವತಿ, ನಿರ್ದೇಶಕರಾದ ಭಗವಾನ್, ಸಿ.ವಿ. ಶಿವಶಂಕರ್ ಮತ್ತು ಗಾಯಕಿ ವಾಣಿ ಜಯರಾಂ ಗೌರವಾರ್ಥ ಅವರ ಚಲನಚಿತ್ರ ಪ್ರದರ್ಶನ ಇದೆ. 15 ಗಂಟೆಗಳ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರಗಳ ವಿಭಾಗವು ಮಾನವ ಘನತೆ ಸಾಮಾಜಿಕ ನ್ಯಾಯ, ಪರಿಸರ ಕಾಳಜಿಗಳು ಮತ್ತು ಲಿಂಗ ಅಸಮಾನತೆಗಳನ್ನು ಸರಿಪಡಿಸುವ ಕಾಳಜಿಯ ಚಲನಚಿತ್ರಗಳ ಮೇಲೆ ವಿಶೇಷ ಗಮನವನ್ನು ಹೊಂದಿದೆ.
ಸಂಕಲನ, ಛಾಯಾಗ್ರಹಣ, ಕಲೆ ಮತ್ತು ನಿರ್ಮಾಣ ವಿನ್ಯಾಸ, ಸಂಗೀತ, ಭಾರತೀಯ ಸಿನಿಮಾದಲ್ಲಿ ಸಾಂವಿಧಾನಿಕ ಮೌಲ್ಯಗಳು, ಚಲನಚಿತ್ರ ವಿಮರ್ಶೆ, ಚಲನಚಿತ್ರ ಸಹ ನಿರ್ಮಾಣ ಮತ್ತು ಮಾರುಕಟ್ಟೆ ಸಾಧ್ಯತೆಗಳು, ಲಿಂಗ ಸಂವೇದನೆ, ಚಲನಚಿತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪ್ರಭಾವದ ಕುರಿತು ಮಾತುಕತೆಗಳು, ವಿಚಾರಸಂಕಿರಣಗಳು, ಕಾರ್ಯಾಗಾರಗಳು, ತಜ್ಞರಿಂದ ಉಪನ್ಯಾಸ, ಸಂವಾದ ಇತ್ಯಾದಿ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಒಳಗೊಂಡಿವೆ. ಬೇರೆ ದೇಶಗಳ ತೀರ್ಪುಗಾರರು, ವಿದೇಶದಿಂದ ಮತ್ತು ಭಾರತದ ಇತರ ಭಾಗಗಳ ಚಲನಚಿತ್ರ ತಯಾರಕರು, ವಿಮರ್ಶಕರು/ಪತ್ರಕರ್ತರು, ಚಲನಚಿತ್ರೋತ್ಸವ ಪ್ರತಿನಿಧಿಗಳು, ಪ್ರೋಗ್ರಾಮರ್‌ಗಳು, ಸಲಹೆಗಾರರು ಮೊದಲಾದವರು ಅತಿಥಿಗಳಾಗಿ ಬರಲಿದ್ದಾರೆ. ವಿದೇಶದಿಂದ ಸುಮಾರು 20 ಮಂದಿ ಸೇರಿದಂತೆ ಸುಮಾರು 70 ಅತಿಥಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀಲಂಕಾ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇರಾನ್, ಉಜೇಕಿಸ್ತಾನ್, ಜೆಕ್ ರಿಪಬ್ಲಿಕ್, ಯುಕೆ, ಬಲ್ಲೇರಿಯಾ, ತೈವಾನ್, ಸ್ಪೇನ್, ಜರ್ಮನಿ ಮತ್ತು ರಷ್ಯಾವನ್ನು ಪ್ರತಿನಿಧಿಗಳು, ಸ್ಥಳೀಯ ಚಲನಚಿತ್ರ ಮತ್ತು ಸಾಂಸ್ಕೃತಿಕ ಮಂದಿ, ಬೆಂಗಳೂರಿನಲ್ಲಿರುವ ವಿದೇಶಿ ಸಂಸ್ಥೆಗಳ ಪ್ರತಿನಿಧಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ಪ್ರದಾನದೊಂದಿಗೆ ಸಮಾರೋಪ ಸಮಾರಂಭವು, ಮಾರ್ಚ್ 7, 2024, ಗುರುವಾರದಂದು ವಿಧಾನಸೌಧದ ಬ್ಯಾಂಕೈಟ್ ಹಾಲ್‌ನಲ್ಲಿ ನಡೆಯಲಿದೆ.
ಕಿರುತೆರೆಯ ಜನಪ್ರಿಯ ‘ಹಿಟ್ಲರ್ ಕಲ್ಯಾಣ’ (Hitler Kalyana) ಸೀರಿಯಲ್ ನಟಿ ಮಲೈಕಾ ವಸುಪಾಲ್ (Malaika Vasupal) ಇದೀಗ ಬಂಪರ್ ಆಫರ್‌ವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ‘ಉಪಾಧ್ಯಕ್ಷ’ ಚಿತ್ರ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಳ್ತಿದ್ದಂತೆ ಇತ್ತ ಮಲೈಕಾಗೆ ಡಾಲಿ ನಿರ್ಮಾಣದ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ. ಇದನ್ನೂ ಓದಿ:ಪೊಲೀಸ್ ಜೊತೆ ನಟಿಯ ರಂಪಾಟ: ಸೌಮ್ಯ ವಿರುದ್ಧ ದೂರು ದಾಖಲು
ವಿದ್ಯಾಪತಿಯಾಗಿರುವ ನಾಗಭೂಷಣ್‌ಗೆ (Nagabhushan) ಜೋಡಿ ಸಿಕ್ಕಾಗಿದೆ. ‘ಉಪಾಧ್ಯಕ್ಷ’ ಸುಂದರಿ ಈಗ ಡಾಲಿ ಬಳಗ ಸೇರ್ಪಡೆಯಾಗಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ (Daali Pictures) ‘ಟಗರು ಪಲ್ಯ’ ಸಕ್ಸಸ್ ಬಳಿಕ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ಮತ್ತೊಮ್ಮೆ ಡಾಲಿ (Daali) ಹಾಗೂ ನಾಗಭೂಷಣ್ ಕೈ ಜೋಡಿಸಿದ್ದು, ಈ ಚಿತ್ರಕ್ಕೆ ವಿದ್ಯಾಪತಿ (Vidyapathi) ಎಂಬ ಟೈಟಲ್ ಇಡಲಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ ಇಂದು ನಾಯಕಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.
ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಚಿಕ್ಕಣ್ಣನಿಗೆ ‘ಉಪಾಧ್ಯಕ್ಷ’ ಸಿನಿಮಾದಲ್ಲಿ ನಾಯಕಿ ಮಿಂಚಿದ್ದ ಮಲೈಕಾ ಈಗ ವಿದ್ಯಾಪತಿಗೆ ಜೋಡಿಯಾಗಿದ್ದಾರೆ. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಮಲೈಕಾ ‘ಉಪಾಧ್ಯಕ್ಷ’ ಚಿತ್ರದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾವೇ ಅವರಿಗೆ ದೊಡ್ಡ ಸಕ್ಸಸ್ ತಂದು ಕೊಟ್ಟಿದೆ. ಉಪಾಧ್ಯಕ್ಷ ಸಿನಿಮಾದಲ್ಲಿ ಇವ್ರ ನಟನೆ ನೋಡಿ ಮೆಚ್ಚಿಕೊಂಡಿರುವ ‘ವಿದ್ಯಾಪತಿ’ ಟೀಂ ತಮ್ಮ ತಂಡಕ್ಕೆ ಅವರನ್ನು ಸ್ವಾಗತಿಸಿದೆ.
ವಿದ್ಯಾಪತಿ ಸಿನಿಮಾದಲ್ಲಿ ಮಲೈಕಾ ವಿದ್ಯಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಸಿಂಪಲ್ ಆಗಿರುವ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಹಿಂದೆ ‘ಇಕ್ಕಟ್’ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.
ಆ್ಯಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ‘ವಿದ್ಯಾಪತಿ’ ಚಿತ್ರದಲ್ಲಿ ನಾಗಭೂಷಣ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ವಿದ್ಯಾಪತಿ ಸಿನಿಮಾಕ್ಕಿದೆ. ಮಾರ್ಚ್ ತಿಂಗಳಿನಿಂದ ವಿದ್ಯಾಪತಿ ನಾಯಕಿ ಮಲೈಕಾ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.
ಡಾಲಿ, ರಮ್ಯಾ (Ramya) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಉತ್ತರಕಾಂಡ’ಗೆ (Uttarakanda Film) ಶೂಟಿಂಗ್‌ಗೆ ಶಿವಣ್ಣನ ಎಂಟ್ರಿಯಾಗಿದೆ. ರಮ್ಯಾ ಕಮ್‌ಬ್ಯಾಕ್ ಚಿತ್ರಕ್ಕೆ ಶಿವರಾಜ್‌ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಇದರ ಬಗ್ಗೆ ನಿರ್ಮಾಣ ಸಂಸ್ಥೆ ‘ಕೆಆರ್‌ಜಿ’ ಸ್ಟುಡಿಯೋ ಮಾಹಿತಿ ನೀಡಿದೆ.
‘ಉತ್ತರಕಾಂಡ’ (Uttarakanda) ಸಾಕಷ್ಟು ವಿಚಾರಗಳಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಮ್ಯಾ ಕಮ್ ಬ್ಯಾಕ್ ಚಿತ್ರ ಎಂಬ ನಿರೀಕ್ಷೆಯ ಜೊತೆ ಹಿಟ್ ಜೋಡಿ ಡಾಲಿ- ಶಿವಣ್ಣ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿರೋದು ಮತ್ತೊಂದು ಖುಷಿ. ಸದ್ಯ ಶೂಟಿಂಗ್‌ಗೆ ಹಾಜರಿ ಹಾಕಿರುವ ಶಿವಣ್ಣಗೆ ಚಿತ್ರತಂಡ ಸ್ವಾಗತ ಕೋರಿದೆ.
‘ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಜೈಲರ್, ಘೋಸ್ಟ್ ಚಿತ್ರದ ಸಕ್ಸಸ್ ನಂತರ ‘ಉತ್ತರಕಾಂಡ’ ಶೂಟಿಂಗ್‌ಗೆ ಎಂಟ್ರಿ ಕೊಟ್ಟಿರೋ ಶಿವರಾಜ್‌ಕುಮಾರ್‌ಗೆ ಈ ಚಿತ್ರದಲ್ಲಿ ಖಡಕ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಡಾಲಿ, ಸತ್ಯದೇವ್ ನಟನೆಯ ‘ಝೀಬ್ರಾ’ ಸಿನಿಮಾ
‘ಜೈಲರ್’ (Jailer) ಸಕ್ಸಸ್ ಬಳಿಕ ಶಿವಣ್ಣಗೆ ತಮಿಳಿನಿಂದ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಶಿವಣ್ಣಗೆ ಯಾವುದೇ ಪಾತ್ರ ನೀಡಿದರೂ ತೂಕವಾಗಿ ನಟಿಸುತ್ತಾರೆ. ಹಾಗಾಗಿ ಉತ್ತರಕಾಂಡ ಚಿತ್ರದಲ್ಲಿ ಶಿವಣ್ಣಗೆ ತೂಕವಾಗಿರೋ ಪಾತ್ರವೇ ಇದೆ.
ಇದೀಗ ‘ಉತ್ತರಕಾಂಡ’ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಡಾಲಿ, ರಮ್ಯಾ, ಶಿವಣ್ಣ ಮೂವರು ಈ ಚಿತ್ರದಲ್ಲಿ ಇರುವ ಕಾರಣ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.
ಚಂದ್ರಯಾನ-3 (Chandrayana 3) ಯಶಸ್ಸಿನ ಹೊಸ್ತಿಲಲ್ಲಿದೆ. ಇಂದು ಚಂದ್ರನ ಮೇಲೆ ಇಸ್ರೋದ ವಿಕ್ರಮ್ ಇಳಿಯಲಿದೆ. ಹೀಗಿರುವಾಗ ಇಸ್ರೋದ ಸಾಧನೆಯನ್ನು ಸ್ಯಾಂಡಲ್‌ವುಡ್ ಕಲಾವಿದರು ಕೊಂಡಾಡಿದ್ದಾರೆ. ಯಾರೆಲ್ಲಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಇಲ್ಲಿದೆ ಮಾಹಿತಿ.
ಎಲ್ಲಾ ಭಾರತೀಯರಿಗೂ ಇದು ಹೆಮ್ಮೆಯ ಕ್ಷಣವಿದು. ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗುತ್ತಿದೆ. ನಾವೆಲ್ಲರೂ ಇದಕ್ಕೆ ಹೆಮ್ಮೆ ಪಡಬೇಕು. ಇಸ್ರೋ ಆಲ್ ದಿ ಬೆಸ್ಟ್ ಎಂದು ಶಿವಣ್ಣ (Shivarajkumar) ಶುಭಕೋರಿದ್ದಾರೆ.
ಚಂದ್ರಯಾನ -3 ಬಗ್ಗೆ ಡಾಲಿ (Daali) ರಿಯಾಕ್ಟ್ ಮಾಡಿದ್ದಾರೆ. ನಮ್ಮ ವಿಜ್ಞಾನಿಗಳ ಎಲ್ಲ ಪರಿಶ್ರಮ ಸಾರ್ಥಕವಾಗುವ ಗಳಿಗೆ ಅದು. ನಮ್ಮ ಇಸ್ರೋ ವಿಜ್ಞಾನಿಗಳು ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಅವರಿಗೆ ಧನ್ಯವಾದ ಇನ್ನೂ ಇಂತಹ ಅನೇಕ ಕೆಲಸಗಳು ಅವರಿಂದ ಆಗಲಿ. ಜಗತ್ತಿನಲ್ಲಿ ಎಲ್ಲವೂ ಒಂದೇ ಬಾರಿಗೆ ಸಕ್ಸಸ್ ಆಗಲ್ಲ. ಕೆಲವೊಮ್ಮೆ ವಿಫಲವಾಗುತ್ತೆ. ಹಾಗೆಯೇ ನಮ್ಮ ಇಸ್ರೋ ಚಂದ್ರಯಾನ 3 ಸಕ್ಸಸ್ ಆಗುತ್ತೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ:ನಾನು ಮದುವೆಗೂ ಮುನ್ನ ಗರ್ಭಿಣಿ ಆಗಿದ್ದೆ, ಆದಿಲ್ ಮೋಸ ಮಾಡಿದ: ನಟಿ ರಾಖಿ
ಇಡೀ ಜಗತ್ತು ಕ್ರಿಯೆಟ್ ಆಗಿರೋದು ವಿಜ್ಞಾನದ ಮುಖಾಂತರ. ನಾನು ಸೈನ್ಸ್ ತುಂಬಾ ನಂಬುವವನು. ಇವತ್ತು ನಮ್ಮ ವಿಜ್ಞಾನಿಗಳು ತಯಾರಿಸುವಂತಹ ಉಪಗ್ರಹ ಉಡಾವಣೆ ಆಗೋದ್ರಲ್ಲಿದೆ. ನಾವೆಲ್ಲರೂ ಭಾರತೀಯರು ಹೆಮ್ಮೆ ಪಡುವಂತಹ ವಿಷಯವಿದು ಎಂದು ನೀನಾಸಂ ಸತೀಶ್ (Ninasum Satish) ಶುಭಹಾರೈಸಿದ್ದಾರೆ. ಇದನ್ನೂ ಓದಿ:Yash 19 ಸಿನಿಮಾ KVN ನಿರ್ಮಾಣ ಮಾಡ್ತಿದ್ಯಾ? ಇಲ್ಲಿದೆ ಸೀಕ್ರೆಟ್
ನಟಿ, ರಾಜಕಾರಣಿ ಸುಮಲತಾ ಕೂಡ ಚಂದ್ರಯಾನ 3 ಬಗ್ಗೆ ಮಾತನಾಡಿದ್ದಾರೆ. ಚಂದ್ರನ ಮೇಲೆ ಚಂದ್ರಯಾನ 3 ಲ್ಯಾಂಡ್ ಆಗುತ್ತಿದೆ. ಶುಭ ಘಳಿಗೆ ನೋಡಲು 140 ಕೋಟಿ ಜನರು ಕಾಯ್ತಿದ್ದಾರೆ. ಚಂದ್ರಯಾನ 3 ಯಶಸ್ಸಾಗಲಿ ಭಾರತೀಯರಿಗೆ ಇಂದು ಹೆಮ್ಮೆಯ ಕ್ಷಣ. ತಂಡಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ.
ಇಂದು ಸಂಜೆ ಚಂದ್ರಯಾನ 3 ಚಂದ್ರ ಮಂಡಲದ ಮೇಲೆ ಲ್ಯಾಂಡ್ ಆಗುತ್ತೆ. ಆ ಲ್ಯಾಂಡಿಂಗ್ ಯಶಸ್ವಿಯಾಗಲಿ. ಆಲ್ ದಿ ಬೆಸ್ಟ್ ಇಸ್ರೋ ಎಂದು ರಮೇಶ್ ಅರವಿಂದ್ (Ramesh Aravind) ವಿಶ್ ಮಾಡಿದ್ದಾರೆ.
ಇವತ್ತು ತುಂಬಾನೇ ವಿಶೇಷವಾಗಿರುವ ದಿನ, ನನ್ನ ಸಿನಿಮಾ ಲಾಂಚ್ ಆಗುತ್ತಿದೆ. ಜೊತೆಗೆ ಇವತ್ತು ಇಡೀ ದೇಶ ಹೆಮ್ಮೆ ಪಡುವಂತಹ ದಿನ ಅಂತಾ ಹೇಳಬಹುದು. ಚಂದ್ರಯಾನ 3 ಸಕ್ಸಸ್‌ಫುಲ್ ಆಗುವಂತಹ ದಿನ. ನನ್ನ ಕಡೆಯಿಂದ ಆಲ್ ದಿ ಬೆಸ್ಟ್ ಹೇಳ್ತೀನಿ ಎಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ(Roopesh Shetty) ಹೇಳಿದ್ದಾರೆ.
ಭಾರತ ದೇಶದಲ್ಲಿ ಇವತ್ತು ಖುಷಿ ಪಡುವಂತಹ, ಜಗತ್ತೇ ನಮ್ಮನ್ನ ಮೆಚ್ಚಿಕೊಳ್ಳುವಂತಹ ಚಂದ್ರಯಾನ 3 ಯಶಸ್ವಿಯಾಗಿ ಪೂರೈಸುತ್ತಾರೆ ಎಂಬ ನಂಬಿಕೆಯಿದೆ. ನಾವು ಚಿಕ್ಕವರು ಇರುವಾಗ ಚಂದಮಾಮನನ್ನ ತೋರಿಸಿ ಊಟ ಮಾಡಿಸುತ್ತಾ ಇದ್ದರು. ಈಗ ಚಂದ್ರನಲ್ಲಿ ಏನೇನಿದೆ ಎಂಬ ಕುತೂಹಲವನ್ನ ತೋರಿಸುತ್ತಾ ಹೋದರು. ಭಾರತ 4ನೇ ರಾಷ್ಟ್ರವಾಗಿದ್ರು. ಚಂದ್ರನ ದಕ್ಷಿಣ ಭಾಗಕ್ಕೆ ಹೋಗುತ್ತಿರುವ ಮೊದಲ ರಾಷ್ಟ್ರವಾಗಿದೆ. ಇಸ್ರೋಗೆ ಶುಭವಾಗಲಿ ಎಂದು ನಟಿ ತಾರಾ ಹಾರೈಸಿದ್ದಾರೆ.
ಬೆಂಗಳೂರು: ಚಂದ್ರಯಾನ-3 (Chandrayaan-3) ಸಕ್ಸಸ್ ಆಗ್ತಿದೆ, ನನ್ನ ಹುಟ್ಟುಹಬ್ಬದ ದಿನವೇ ಆಗ್ತಿರೋದು ತುಂಬಾ ಖುಷಿ ತಂದಿದೆ ಎಂದು ನಟ ಡಾಲಿ ಧನಂಜಯ್ (Dhananjay) ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನಮ್ಮ ವಿಜ್ಞಾನಿಗಳ ಎಲ್ಲ ಪರಿಶ್ರಮ ಸಾರ್ಥಕವಾಗುವ ಗಳಿಗೆ ಅದು. ನಮ್ಮ ಇಸ್ರೋ (ISRO), ಇಸ್ರೋ ವಿಜ್ಞಾನಿಗಳು ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಅವರಿಗೆ ಧನ್ಯವಾದ ಇನ್ನೂ ಇಂತಹ ಅನೇಕ ಕೆಲಸಗಳು ಅವರಿಂದ ಆಗಲಿ. ಜಗತ್ತಿನಲ್ಲಿ ಎಲ್ಲವೂ ಒಂದೇ ಬಾರಿಗೆ ಸಕ್ಸಸ್ ಆಗಲ್ಲ. ಕೆಲವೊಮ್ಮೆ ವಿಫಲವಾಗುತ್ತೆ. ಹಾಗೆಯೇ ನಮ್ಮ ಇಸ್ರೋ ಚಂದ್ರಯಾನ 3 ಸಕ್ಸಸ್ ಆಗುತ್ತೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಯೋಗಿಗಳ ಕಾಲು ಹಿಡಿಯುವುದು ನನ್ನ ಅಭ್ಯಾಸ : ರಜನಿ ಖಡಕ್ ಉತ್ತರ
ನಿನ್ನೆ ಚಂದ್ರಯಾನ-3 ಕುರಿತಂತೆ ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ದಕ್ಷಿಣ ಭಾರತದ ಹೆಸರಾಂತ ನಟ ಪ್ರಕಾಶ್ ರಾಜ್ ಮತ್ತೊಂದು ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದರು. ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುತ್ತದೆ. ನಾನು ಉಲ್ಲೇಖಿಸಿದ್ದು ನಮ್ಮ ಕೇರಳದ ಚಾಯ್‌ವಾಲಾರನ್ನ ವಿಜೃಂಭಿಸುವ ಆರ್ಮ್ಸ್ಟ್ರಾಂಗ್ ಕಾಲದ ಜೋಕ್. ಟ್ರೋಲಿಗರ ಕಣ್ಣಿಗೆ ಕಾಣಿಸಿದ ಚಾಯ್‌ವಾಲಾ ಯಾರು? ನಿಮಗೆ ಜೋಕ್ ಅರ್ಥವಾಗದಿದ್ದರೆ, ಅದು ನಿಮ್ಮ ಮೇಲೆಯೇ ಮಾಡಿದ ಜೋಕ್ ಆಗುತ್ತದೆ. ಬಾಲಿಶವಾಗಿ ವರ್ತಿಸುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಮೈಸೂರು ಹುಡುಗನ ಬೆತ್ತಲೆ ವಿಡಿಯೋ ಇಟ್ಕೊಂಡಿದ್ದಾರಂತೆ ನಟಿ ರಾಖಿ
ಪ್ರಕಾಶ್ ರಾಜ್ ಅವರ ಪ್ರತಿಕ್ರಿಯೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇಡೀ ದೇಶವೇ ಹೆಮ್ಮೆ ಪಡುವಂತೆ ನಿಮ್ಮ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಜಗತ್ತೇ ಈ ಕೆಲಸಕ್ಕಾಗಿ ಕೊಂಡಾಡುತ್ತಿದೆ. ಆದರೆ ಪ್ರಕಾಶ್ ರೈ ಈ ರೀತಿ ಗೇಲಿ ಮಾಡುವುದು ಸರಿಯಲ್ಲ. ಭಾರತದ ಅಸ್ಮಿತೆಯನ್ನೇ ಪ್ರಶ್ನೆ ಮಾಡುವ ನಟನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದರು. ಇಂದು ಸಚಿವರೂ ಕೂಡ ಗರಂ ಆಗಿದ್ದಾರೆ.
ನಟ ಡಾಲಿ ಧನಂಜಯ್ (Dhananjay) ಹುಟ್ಟು ಹಬ್ಬದ (Birthday) ಮುನ್ನಾ ದಿನ ಇಂದು ಉತ್ತರಕಾಂಡ ಸಿನಿಮಾದ ಟೀಸರ್ (Teaser) ರಿಲೀಸ್ ಆಗಿದೆ. ಜೊತೆಗೆ ಗಬ್ರು (Gabru) ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ‘ಉತ್ತರಕಾಂಡ’ ಸಿನಿಮಾದ ಮುಹೂರ್ತವಾಗಿ ಹಲವು ತಿಂಗಳುಗಳೇ ಕಳೆದಿವೆ. ಮುಹೂರ್ತದ ನಂತರ ಯಾವುದೇ ಅಪ್ ಡೇಟ್ ನೀಡಿರಲಿಲ್ಲ ಚಿತ್ರತಂಡ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿಲ್ಲ ಎಂದು ಹೇಳಲಾಗಿತ್ತು. ಇದೀಗ ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ.
ರೋಹಿತ್ ಪದಕಿ ನಿರ್ದೇಶನದಲ್ಲಿ ಉತ್ತರಕಾಂಡ (Uttarkanda) ಸಿನಿಮಾ ಮೂಡಿ ಬರಲಿದ್ದು, ಮೋಹಕ ತಾರೆ ರಮ್ಯಾ ಮತ್ತೆ ಈ ಸಿನಿಮಾದ ಮೂಲಕ ನಟಿಯಾಗಿ ಚಿತ್ರೋದ್ಯಮಕ್ಕೆ ವಾಪಸ್ಸಾಗಿದ್ದಾರೆ. ಇದೇ ಮೊದಲ ಬಾರಿಗೆ ಡಾಲಿ ಜೊತೆ ರಮ್ಯಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಅದ್ದೂರಿ ಹುಟ್ಟು ಹಬ್ಬಕ್ಕೆ ಸಿದ್ಧತೆ
ತನ್ನ ಬರ್ತಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿರುವ ಡಾಲಿ, ಅಂದು ತಾವು ಯಾವೆಲ್ಲ ಸ್ಥಳದಲ್ಲಿ ಸಿಗುತ್ತೇನೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಹುಟ್ಟು ಹಬ್ಬದ ದಿನದಂದು ತಾವು ಮನೆಯಲ್ಲಿ ಇರದೇ ಇರುವ ಕಾರಣಕ್ಕಾಗಿ ಯಾರೂ ಮನೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇಂದು ರಾತ್ರಿಯೇ 11 ಗಂಟೆಯಿಂದ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವುದಕ್ಕೂ ಡಾಲಿ ಸಿಗುತ್ತಾರಂತೆ. ಆಗಸ್ಟ್ 23ಕ್ಕೆ ಡಾಲಿ ಹುಟ್ಟು ಹಬ್ಬ. ಅಂದು ಮತ್ತೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಂದಿ ಲಿಂಕ್ಸ್ ಗ್ರೌಂಡ್ ನಲ್ಲೇ ಧನಂಜಯ್ ಅಭಿಮಾನಿಗಳೊಂದಿಗೆ ಸಮಯ ಕಳೆಯುವುದಾಗಿ ತಿಳಿಸಿದ್ದಾರೆ. ಹುಟ್ಟು ಹಬ್ಬಕ್ಕೆ ಬರುವವರು ಕೇಕ್, ಹಾರ ತರಬೇಡಿ ಎಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು ‘ಅಭಿಮಾನದ ತೇರು ಎಳೆಯೋಣ ಬನ್ನಿ’ ಎಂದು ಟ್ಯಾಗ್ ಲೈನ್ ಇಡಲಾಗಿದೆ. ಇಂದಿನಿಂದಲೇ ಅಭಿಮಾನಿಗಳು ಉತ್ಸವಕ್ಕೆ ರೆಡಿಯಾಗಿದ್ದಾರೆ. 4 ವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಡಾಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಧನಂಜಯ್ ಅವರಿಗೆ ತುಂಬಾ ವಿಶೇಷವಾಗಿದೆ.
ನೆರೆ, ಕೊರೊನಾ, ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಕಾರಣದಿಂದ ಧನಂಜಯ್ ಕಳೆದ 4 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅಭಿಮಾನಿಗಳ ಕೈಗೂ ಸಿಕ್ಕಿರಲಿಲ್ಲ. ಹಾಗಾಗಿ ಈ ಬಾರಿ ದೊಡ್ಡ ಮಟ್ಟದಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದು ಹುಟ್ಟುಹಬ್ಬದ ದಿನ ಅಭಿಮಾನಿಗಳ ಜೊತೆಯೇ ಸಮಯ ಕಳೆಯಲು ನಿರ್ಧರಿಸಿದ್ದಾರೆ.
ಡಾಲಿ ಧನಂಜಯ್ (Dhananjay) ನಟನೆಯ ‘ಉತ್ತರಕಾಂಡ’ (Uttarkanda) ಸಿನಿಮಾದ ಮುಹೂರ್ತವಾಗಿ ಹಲವು ತಿಂಗಳುಗಳೇ ಕಳೆದಿವೆ. ಮುಹೂರ್ತದ ನಂತರ ಯಾವುದೇ ಅಪ್ ಡೇಟ್ ನೀಡಿರಲಿಲ್ಲ ಚಿತ್ರತಂಡ. ಸಿನಿಮಾ ಶೂಟಿಂಗ್ ಕೂಡ ಶುರುವಾಗಿಲ್ಲ ಎಂದು ಹೇಳಲಾಗಿತ್ತು. ಇದೀಗ ಚಿತ್ರತಂಡದಿಂದ ಹೊಸ ಅಪ್ ಡೇಟ್ ಸಿಕ್ಕಿದ್ದು, ಧನಂಜಯ್ ಹುಟ್ಟು ಹಬಕ್ಕಾಗಿ ಟೀಸರ್ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.
ಡಾಲಿ ಹುಟ್ಟು ಹಬ್ಬದ (Birthday) ಮುನ್ನ ದಿನ ಆ.22 ರಂದು ಉತ್ತರಕಾಂಡ ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಸಂಜೆ 5.30ಕ್ಕೆ ಸಂತೋಷ ಚಿತ್ರಮಂದಿರದಲ್ಲಿ ಟೀಸರ್ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲಿಯೇ ಸಿನಿಮಾ ಟೀಮ್ ನೆಚ್ಚಿನ ನಟನ ಹುಟ್ಟು ಹಬ್ಬವನ್ನೂ ಆಚರಿಸಲಿದೆ.
ಅದ್ದೂರಿ ಹುಟ್ಟು ಹಬ್ಬಕ್ಕೆ ಸಿದ್ಧತೆ
ತನ್ನಬರ್ತಡೇದಿನಅಭಿಮಾನಿಗಳಜೊತೆಸಮಯಕಳೆಯಲುನಿರ್ಧರಿಸಿರುವ ಡಾಲಿ, ಅಂದು ತಾವು ಯಾವೆಲ್ಲ ಸ್ಥಳದಲ್ಲಿ ಸಿಗುತ್ತೇನೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಹುಟ್ಟು ಹಬ್ಬದ ದಿನದಂದು ತಾವು ಮನೆಯಲ್ಲಿ ಇರದೇ ಇರುವ ಕಾರಣಕ್ಕಾಗಿ ಯಾರೂ ಮನೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಅಂದು ರಾತ್ರಿಯೇ 11 ಗಂಟೆಯಿಂದ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವುದಕ್ಕೂ ಡಾಲಿ ಸಿಗುತ್ತಾರಂತೆ. ಆಗಸ್ಟ್ 23ಕ್ಕೆ ಡಾಲಿ ಹುಟ್ಟು ಹಬ್ಬ. ಅಂದು ಮತ್ತೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಂದಿ ಲಿಂಕ್ಸ್ ಗ್ರೌಂಡ್ ನಲ್ಲೇ ಧನಂಜಯ್ ಅಭಿಮಾನಿಗಳೊಂದಿಗೆ ಸಮಯ ಕಳೆಯುವುದಾಗಿ ತಿಳಿಸಿದ್ದಾರೆ. ಹುಟ್ಟು ಹಬ್ಬಕ್ಕೆ ಬರುವವರು ಕೇಕ್, ಹಾರ ತರಬೇಡಿ ಎಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಡಾಲಿ (Dali) ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ (Dhananjay) ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟನಾಗಿ, ನಿರ್ಮಾಪಕನಾಗಿ ಖ್ಯಾತಿಗಳಿಸಿರುವ ಡಾಲಿ ಧನಂಜಯ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ‘ಕಾಮನ್ ಮ್ಯಾನ್ ಹೀರೋ’ ಅಂತನೇ ಬಿರುದು ಪಡೆದಿರುವ ಡಾಲಿ ಈ ಬಾರಿ ಹುಟ್ಟುಹಬ್ಬವನ್ನು (Birthday) ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ತನ್ನ ಬರ್ತಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿರುವ ಡಾಲಿ, ಅಂದು ತಾವು ಯಾವೆಲ್ಲ ಸ್ಥಳದಲ್ಲಿ ಸಿಗುತ್ತೇನೆ ಎನ್ನುವುದನ್ನು ಹೇಳಿಕೊಂಡಿದ್ದಾರೆ. ಹುಟ್ಟು ಹಬ್ಬದ ದಿನದಂದು ತಾವು ಮನೆಯಲ್ಲಿ ಇರದೇ ಇರುವ ಕಾರಣಕ್ಕಾಗಿ ಯಾರೂ ಮನೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹುಟ್ಟು ಹಬ್ಬದ ಮುನ್ನ ದಿನ ಆ.22 ರಂದು ಉತ್ತರಕಾಂಡ (Uttarkanda) ಸಿನಿಮಾದ ಟೀಸರ್ ರಿಲೀಸ್ ಆಗುವುದರಿಂದ ಅಂದು ಸಂಜೆ 5.30ಕ್ಕೆ ಸಂತೋಷ ಚಿತ್ರಮಂದಿರದಲ್ಲಿ ಸಿಗುತ್ತಾರಂತೆ.
ಅಂದು ರಾತ್ರಿಯೇ 11 ಗಂಟೆಯಿಂದ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವುದಕ್ಕೂ ಡಾಲಿ ಸಿಗುತ್ತಾರಂತೆ. ಆಗಸ್ಟ್ 23ಕ್ಕೆ ಡಾಲಿ ಹುಟ್ಟು ಹಬ್ಬ. ಅಂದು ಮತ್ತೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಂದಿ ಲಿಂಕ್ಸ್ ಗ್ರೌಂಡ್ ನಲ್ಲೇ ಧನಂಜಯ್ ಅಭಿಮಾನಿಗಳೊಂದಿಗೆ ಸಮಯ ಕಳೆಯುವುದಾಗಿ ತಿಳಿಸಿದ್ದಾರೆ. ಹುಟ್ಟು ಹಬ್ಬಕ್ಕೆ ಬರುವವರು ಕೇಕ್, ಹಾರ ತರಬೇಡಿ ಎಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಈ ಬಾರಿಯ ಹುಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ (Dali festival) ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು ‘ಅಭಿಮಾನದ ತೇರು ಎಳೆಯೋಣ ಬನ್ನಿ’ ಎಂದು ಟ್ಯಾಗ್ ಲೈನ್ ಇಡಲಾಗಿದೆ. ಇಂದಿನಿಂದಲೇ ಅಭಿಮಾನಿಗಳು ಉತ್ಸವಕ್ಕೆ ರೆಡಿಯಾಗಿದ್ದಾರೆ. 4 ವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಡಾಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ಧನಂಜಯ್ ಅವರಿಗೆ ತುಂಬಾ ವಿಶೇಷವಾಗಿದೆ.
ನೆರೆ, ಕೊರೊನಾ, ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಕಾರಣದಿಂದ ಧನಂಜಯ್ ಕಳೆದ 4 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಅಭಿಮಾನಿಗಳ ಕೈಗೂ ಸಿಕ್ಕಿರಲಿಲ್ಲ. ಹಾಗಾಗಿ ಈ ಬಾರಿ ದೊಡ್ಡ ಮಟ್ಟದಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದು ಹುಟ್ಟುಹಬ್ಬದ ದಿನ ಅಭಿಮಾನಿಗಳ ಜೊತೆಯೇ ಸಮಯ ಕಳೆಯಲು ನಿರ್ಧರಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ (Independence Day) ಸಂಭ್ರಮ ಕನ್ನಡ ಚಿತ್ರರಂಗದಲ್ಲೂ ಮನೆ ಮಾಡಿದೆ. 77ನೇ ಸ್ವಾತಂತ್ರ್ಯದಿನವನ್ನ ಸ್ಯಾಂಡಲ್‌ವುಡ್ (Sandalwood) ತಾರೆಯರು ಕೂಡ ಆಚರಿಸಿದ್ದಾರೆ. ತಮ್ಮದೇ ಭಿನ್ನ ಶೈಲಿಯಲ್ಲಿ ತಾರೆಯರು ಶುಭಕೋರಿದ್ದಾರೆ. ಈ ದಿನದ ಸಂಭ್ರಮದ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
‘ಕಾಂತಾರ’ (Kantara) ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ತ್ರಿವರ್ಣ ಧ್ವಜ ಹಿಡಿದು ದೇಶ ಭಕ್ತಿ ಮೆರೆದಿದ್ದಾರೆ. ಬಿಳಿ ಶರ್ಟ್- ಪಂಚೆಯಲ್ಲಿ ರಿಷಬ್ ಕಂಗೊಳಿಸಿದ್ದಾರೆ.
ಸ್ಯಾಂಡಲ್‌ವುಡ್ ನಟ ಡಾಲಿ(Daali) ಮತ್ತು ರಾಬರ್ಟ್ ಬ್ಯೂಟಿ ಆಶಾ ಭಟ್ (Asha Bhat) ಅವರು ಹೆಮ್ಮೆಯಿಂದ ರಾಷ್ಟ್ರ ಧ್ವಜ ಹಿಡಿದು ನಿಂತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ್ದಾರೆ.
ನಟ ನೆನಪಿರಲಿ ಪ್ರೇಮ್ (Nenapirali Prem) ಅವರು ವಿಶೇಷವಾದ ಫೋಟೋ ಹಂಚಿಕೊಂಡಿದ್ದಾರೆ. ಮುಖದ ಮೇಲೆ ತ್ರಿವರ್ಣ ಧ್ವಜದ ಚಿತ್ರ ಬರೆದುಕೊಂಡಿರುವ ಅವರು ಸೆಲ್ಯೂಟ್ ಮಾಡಿದ್ದಾರೆ. ಈ ಮೂಲಕ ಅವರು ಸ್ವಾತಂತ್ರ‍್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.
ಬಿಗ್ ಬಾಸ್ ಅರವಿಂದ್ ಕೆಪಿ (Bigg Boss Aravind Kp) ಮತ್ತು ಮೇಘನಾ ರಾಜ್ (Meghana Raj) ಪುತ್ರ ರಾಯನ್ ರಾಜ್ ಸರ್ಜಾ (Rayan Raj Sarja) ತ್ರಿವರ್ಣ ಧ್ವಜ ಹಿಡಿದು ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಗೆ ಶುಭಕೋರಿದ್ದಾರೆ.