Tag: ಡಾಲಿ

  • ಸುದೀಪ್ ತಾಯಿ ಅಂತಿಮ ದರ್ಶನಕ್ಕೆ ಬಂದ ಶಿವಣ್ಣ, ತಾರಾ, ಡಾಲಿ

    ಸುದೀಪ್ ತಾಯಿ ಅಂತಿಮ ದರ್ಶನಕ್ಕೆ ಬಂದ ಶಿವಣ್ಣ, ತಾರಾ, ಡಾಲಿ

    ಟ ಸುದೀಪ್ (Sudeep) ಅವರ ತಾಯಿಯ (Mother) ಅಂತಿಮ ದರ್ಶನ ಪಡೆಯಲು ಶಿವರಾಜ್‌ಕುಮಾರ್ (Shivarajkumar) ದಂಪತಿ, ನಟಿ ತಾರಾ ಡಾಲಿ ಧನಂಜಯ (Daali Dhananjay) ಸೇರಿದಂತೆ ಅನೇಕರು ನಟನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಸುದೀಪ್‌ಗೆ ಮಾತೃ ವಿಯೋಗ- ಶ್ರದ್ಧಾಂಜಲಿ ಸಲ್ಲಿಸಿದ ದುನಿಯಾ ವಿಜಯ್

    ಸುದೀಪ್ ತಾಯಿಯ ಅಂತಿಮ ದರ್ಶನ ಪಡೆದ ಬಳಿಕ ದುಃಖದಲ್ಲಿರುವ ಸುದೀಪ್‌ರನ್ನು ಶಿವಣ್ಣ ಸಂತೈಸಿದ್ದಾರೆ. ಈ ವೇಳೆ, ಹಿರಿಯ ನಟಿ ತಾರಾ, ನಟ ಡಾಲಿ, ತರುಣ್ ಸುದೀರ್, ಅಭಿಮನ್ಯು ಕಾಶಿನಾಥ್, ಇಂದ್ರಜೀತ್ ಲಂಕೇಶ್, ರಕ್ಷಿತಾ ಪ್ರೇಮ್‌ ದಂಪತಿ ಸೇರಿದಂತೆ ಅನೇಕರು ನಟನ ಮನೆಗೆ ಆಗಮಿಸಿದ್ದಾರೆ. ಸುದೀಪ್ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಅಂದಹಾಗೆ, ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಇಂದು (ಅ.20) ಬೆಳಗ್ಗೆ ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

  • ಡಾಲಿಗೆ ಜೋಡಿಯಾದ ರೀಷ್ಮಾ ನಾಣಯ್ಯ

    ಡಾಲಿಗೆ ಜೋಡಿಯಾದ ರೀಷ್ಮಾ ನಾಣಯ್ಯ

    ಯುಐ, ಕೆಡಿ (KD) ಚಿತ್ರಗಳ ನಾಯಕಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ಇದೀಗ ಹೊಸ ಚಿತ್ರವೊಂದಕ್ಕೆ ಸೆಲೆಕ್ಟ್ ಆಗಿದ್ದಾರೆ. ಡಾಲಿ ಧನಂಜಯ ಜೊತೆ ರೀಷ್ಮಾ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:BBK 11: ಬಿಗ್‌ ಬಾಸ್‌ ನಿರೂಪಣೆಗೆ ಕಿಚ್ಚ ಸುದೀಪ್‌ ಗುಡ್‌ಬೈ

    ರಶ್ಮಿಕಾ ಮಂದಣ್ಣ (Rashmika Mandanna) ಬಳಿಕ ಮತ್ತೊರ್ವ ಕೊಡಗಿನ ಕುವರಿ ರೀಷ್ಮಾ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದಾರೆ. ಸ್ಟಾರ್ ನಟರ ಸಿನಿಮಾಗೆ ನಾಯಕಿಯಾಗಿ ನಟಿಸಲು ರೀಷ್ಮಾಗೆ ಬುಲಾವ್ ಬರುತ್ತಿದೆ. ಈಗ ಧನಂಜಯ (Daali Dhananjay) ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’ ಕೆಡಿ ಹೀರೋಯಿನ್ ರೀಷ್ಮಾ ನಾಯಕಿಯಾಗಿ ಫೈನಲ್ ಆಗಿದ್ದಾರೆ.

    ಈ ಚಿತ್ರದಲ್ಲಿ ರೀಷ್ಮಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಎಂದೂ ನಟಿಸಿರದ ಡಿಫರೆಂಟ್ ರೋಲ್‌ನಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.’ಬಡವ್ ರಾಸ್ಕರ್’ ನಿರ್ದೇಶಕ ಶಂಕರ್ ಗುರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸತ್ಯ ರಾಯಲ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:‘ಕೆರಳಿದ ಸಿಂಹ’ ಚಿತ್ರದ ನಿರ್ದೇಶಕ ಚಿ.ದತ್ತರಾಜ್ ನಿಧನ

    ಅಂದಹಾಗೆ, 2022ರಲ್ಲಿ ತೆರೆಕಂಡ ‘ಎಕ್ ಲವ್ ಯಾ’ ಚಿತ್ರದ ಮೂಲಕ ರಾಣಾಗೆ (Rana) ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾಗೆ ಜೋಗಿ ಪ್ರೇಮ್ (Jogi Prem) ನಿರ್ದೇಶನ ಮಾಡಿದರು.

  • ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಡಾಲಿ, ನವೀನ್‌ ಶಂಕರ್

    ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಡಾಲಿ, ನವೀನ್‌ ಶಂಕರ್

    ನ್ನಡದ ನಟ ಡಾಲಿ (Daali Dhananjay) ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಕೆಲಸಕ್ಕೆ ಬ್ರೇಕ್‌ ಸಿಕ್ಕ ಬೆನ್ನಲ್ಲೇ ಸ್ನೇಹಿತರ ಜೊತೆ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಡಾಲಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ:BBK 11: ಬಿಗ್‌ ಬಾಸ್‌ ನಿರೂಪಣೆಗೆ ಕಿಚ್ಚ ಸುದೀಪ್‌ ಗುಡ್‌ಬೈ

    ‘ಸಲಾರ್’ ನಟ ನವೀನ್ ಶಂಕರ್ (Naveen Shankar) ಜೊತೆ ಡಾಲಿ ಧನಂಜಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಈ ವೇಳೆ, ಡಾಲಿ ಮತ್ತು ನವೀನ್ ಶಂಕರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.

    ಅಂದಹಾಗೆ, ಅಣ್ಣ ಫ್ರಂ ಮೆಕ್ಸಿಕೋ, ಉತ್ತರಕಾಂಡ, ನಾಡಪ್ರಭು ಕೆಂಪೇಗೌಡ ಸೇರಿದಂತೆ ಡಾಲಿ ಕೈಯಲ್ಲಿ ಹಲವು ಸಿನಿಮಾಗಳಿವೆ. ಜೊತೆಗೆ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಧನಂಜಯ ಅವಕಾಶ ನೀಡುತ್ತಿದ್ದಾರೆ. ಇನ್ನೂ ಶಿವಣ್ಣ ನಟನೆಯ ಹೊಸ ಸಿನಿಮಾದಲ್ಲಿ ನವೀನ್ ಶಂಕರ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  • ದಸರಾ ಆನೆಗಳ ಮಾವುತರಿಗೆ ಪಾದರಕ್ಷೆ ಕೊಟ್ಟ ಡಾಲಿ

    ದಸರಾ ಆನೆಗಳ ಮಾವುತರಿಗೆ ಪಾದರಕ್ಷೆ ಕೊಟ್ಟ ಡಾಲಿ

    ಟ ಡಾಲಿ ಧನಂಜಯ (Daali Dhananjay) ಸದ್ಯ ಮೈಸೂರಿನಲ್ಲಿ ತಮ್ಮ ಮುಂದಿನ ಸಿನಿಮಾ ಚಿತ್ರೀಕರಣದ ನಡುವೆಯೂ ದಸರಾ (Dasara) ಸಂಭ್ರಮದಲ್ಲಿ ಭಾಗಿ ಆಗಿರುವ ಮಾವುತರಿಗೆ ಲಿಡ್ಕರ್ ಚಪ್ಪಲಿಗಳನ್ನ ನೀಡಿದ್ದಾರೆ. ಧನಂಜಯ ಲಿಡ್ಕರ್‌ನ ರಾಯಭಾರಿಯಾಗಿದ್ದು, ಅದೇ ಕಾರಣದಿಂದ ಈ ಬಾರಿ ಮಾವುತರಿಗೆ ಚಪ್ಪಲಿ ಉಡಗೊರೆಯಾಗಿ ನೀಡಿದ್ದಾರೆ.

    ಇದೇ ಸಮಯದಲ್ಲಿ ನಟ ಡಾಲಿ ಆನೆಯ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೆಲ ಕಾಲ ಮಾವುತರು ಹಾಗೂ ಅರಣ್ಯ ಅಧಿಕಾರಿಗಳ ಬಳಿ ಆನೆಯ ಬಗ್ಗೆ ಕುತೂಹಲಕಾರಿ ವಿಚಾರಗಳನ್ನ ಕೇಳಿ ತಿಳಿದುಕೊಂಡಿದ್ದಾರೆ. ಇದನ್ನೂ ಓದಿ:ಶೂಟಿಂಗ್ ಮುಗಿಸಿದ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ

    ತನ್ನದೇ ಹೆಸರಿನ ಆನೆಯನ್ನ ಕಂಡು ಧನಂಜಯ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೂ ಡಾಲಿ ಅರಸಿಕೆರೆ ಮೂಲದವರಾಗಿದರು ಕೂಡ ಮೈಸೂರಿನ ನಂಟನ್ನು ಹೆಚ್ಚಾಗಿ ಬೆಳಸಿಕೊಂಡಿದ್ದಾರೆ.

  • ರಾಖಿ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ರಾಖಿ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ಹೋದರ ಮತ್ತು ಸಹೋದರಿಯರ ಬಂಧವನ್ನು ಸಾರುವ ರಕ್ಷಾ ಬಂಧನವನ್ನು (Raksha Bandhan 2024) ಸಿನಿಮಾ ತಾರೆಯರು ಕೂಡ ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ. ಯಶ್, ನಟಿ ರಾಗಿಣಿ, ಡಾಲಿ ಧನಂಜಯ ಸೇರಿದಂತೆ ಅನೇಕರು ಸೆಲೆಬ್ರೆಟ್ ಮಾಡಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವು ಕೂಡ ತಪ್ಪದೇ ರಾಖಿ ಹಬ್ಬವನ್ನು ಆಚರಿಸಿದ್ದಾರೆ. ಸಹೋದರಿ ನಂದಿನಿ ಅವರು ಅಣ್ಣ ಯಶ್‌ಗೆ (Yash) ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಅದಷ್ಟೇ ಅಲ್ಲ, ಯಶ್ ಮಕ್ಕಳು ಕೂಡ ರಕ್ಷಾ ಬಂಧನ ಸೆಲೆಬ್ರೆಟ್ ಮಾಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನು ನಟಿ ರಾಧಿಕಾ ಹಂಚಿಕೊಂಡಿದ್ದಾರೆ.

    ಸಂಗೀತಾ ಶೃಂಗೇರಿ (Sangeetha Sringeri) ಅವರು ಅಣ್ಣ ಸಂತೋಷ್ ಮತ್ತು ಅತ್ತಿಗೆ ಇಬ್ಬರಿಗೂ ರಾಖಿ ಕಟ್ಟಿ ಆರತಿ ಬೆಳಗಿದ್ದಾರೆ. ಇದನ್ನೂ ಓದಿ:ನ್ಯಾಯಮೂರ್ತಿ ಹೇಮಾ ಸಮಿತಿ ವರದಿ: ಕೇರಳ ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ

    ಮುಂಬೈಗೆ ತೆರಳಿ ಸಹೋದರ ರುದ್ರಾಕ್ಷಗೆ ರಾಖಿ ಕಟ್ಟಿ ರಾಗಿಣಿ (Ragini Dwivedi) ಸಂಭ್ರಮಿಸಿದ್ದಾರೆ. ನಿನ್ನ ಮೇಲಿನ ನನ್ನ ಪ್ರೀತಿಯನ್ನು, ನಿನ್ನ ಬಗೆಗಿನ ನನ್ನ ಕಾಳಜಿಯನ್ನು, ನಿನಗಾಗಿ ನನ್ನ ರಕ್ಷಣೆಯನ್ನು, ನಿನ್ನನ್ನು ನನ್ನ ಜೀವನದಲ್ಲಿ ನನ್ನ ಸಹೋದರನಾಗಿ ಪಡೆದಿದ್ದಕ್ಕಾಗಿ ನನ್ನ ಶಾಶ್ವತ ಕೃತಜ್ಞತೆಯನ್ನು ಪದಗಳು ವ್ಯಕ್ತಪಡಿಸಲು ಸಾಧ್ಯವಿಲ್ಲ. ನೀವು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾಗಿರಬಹುದು. ಆದರೆ ಜೀವನದ ಪ್ರತಿ ಹಂತದಲ್ಲೂ ನೀವು ನನ್ನ ಶಕ್ತಿಯಾಗಿದ್ದೀರಿ, ನನಗೆ ಮಾರ್ಗದರ್ಶನ ನೀಡುವ ಶಕ್ತಿಯ ದಿಂಬು. ನಾನು ನಿನ್ನನ್ನು ಜಗತ್ತಿಗಿಂತ ಹೆಚ್ಚು ಪ್ರೀತಿಸುತ್ತೇನೆ ಎಂದು ಸಹೋದರನ ಜೊತೆಗಿನ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)

    ಸದಾ ನಗುತಿರು, ನಿನ್ನ ನಗುವೇ ನನಗೆ ಶ್ರೀರಕ್ಷೆ. ರಕ್ಷಾ ಬಂಧನದ ಶುಭಾಶಯಗಳು ಪುಟ್ಟಮ್ಮ ಎಂದು ಕಾರ್ತಿಕ್ ಮಹೇಶ್ (Karthik Mahesh) ತಂಗಿ ಜೊತೆಗಿನ ಫೋಟೋ ಶೇರ್ ಮಾಡಿ ಶುಭಕೋರಿದ್ದಾರೆ.

    ಇನ್ನೂ ‘ಕೋಟಿ’ ಸಿನಿಮಾದಲ್ಲಿ ಡಾಲಿ ಧನಂಜಯಗೆ (Daali Dhananjay) ತಂಗಿಯಾಗಿದ್ದ ನಟಿಸಿದ್ದ ಪೂಜಾ ಪ್ರಕಾಶ್‌ ಅವರು ಇದೀಗ ಡಾಲಿಗೆ ರಾಖಿ ಕಟ್ಟಿ ಹಬ್ಬದ ಆಚರಿಸಿದ್ದಾರೆ. ಅಕ್ಕ ತಂಗಿಯ ರಕ್ಷೆ ಎಂದು ಡಾಲಿ ಅಡಿಬರಹ ನೀಡಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

  • ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ಡಾಲಿ

    ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ಡಾಲಿ

    ನ್ನಡ ಚಿತ್ರರಂಗದ ಬಿಗ್ ಬಜೆಟ್ ‘ಹಲಗಲಿ’ (Halagali) ಸಿನಿಮಾ ಬಗ್ಗೆ ಇದೀಗ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಡಾರ್ಲಿಂಗ್ ಕೃಷ್ಣ ಈ ಚಿತ್ರದಿಂದ ಹೊರನಡೆದಿದ್ದರು. ಈ ಬೆನ್ನಲ್ಲೇ ಚಿತ್ರದ ಲೀಡ್ ಪಾತ್ರಕ್ಕೆ ನಟರಾಕ್ಷಸ ಡಾಲಿ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹಬ್ಬಿದೆ.

    ನಟ ಕಮ್ ನಿರ್ಮಾಪಕ ಡಾಲಿ ಧನಂಜಯ್ ಕನ್ನಡದ ಜೊತೆ ಪರಭಾಷಾ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಡಾಲಿ ಅವಕಾಶ ನೀಡುತ್ತಿದ್ದಾರೆ. ಇದನ್ನೂ ಓದಿ:ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ

    ‘ಹಲಗಲಿ’ ಸಿನಿಮಾ ಅತೀ ದೊಡ್ಡ ಪ್ರಾಜೆಕ್ಟ್ ಆಗಿದ್ದು, ಡಾಲಿ ಈ ಸಿನಿಮಾಗೆ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹಬ್ಬಿದೆ. ಸಿನಿಮಾ ಕಥೆ ಮತ್ತು ಪಾತ್ರದ ಬಗ್ಗೆ ಡಾಲಿ ಮಾತನಾಡಿ ಚಿತ್ರತಂಡ ಮಾತುಕತೆ ನಡೆಸಿದೆ. ಶೀಘ್ರದಲ್ಲೇ ಶೂಟಿಂಗ್‌ಗೆ ನಡೆಯಲಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬರಬೇಕಿದೆ.

    ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಹಲಗಲಿ ಬೇಡರ ಕಥೆಯನ್ನು ಸಿನಿಮಾ ನಿರ್ದೇಶಕ ಸುಕೇಶ್ ಡಿ.ಕೆ. ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದರಿಂದ ಮತ್ತು ಆ ಕಾಲ ಘಟ್ಟವನ್ನು ಕಟ್ಟಿ ಕೊಡಬೇಕಾಗಿದ್ದರಿಂದ ಬರೋಬ್ಬರಿ 80 ಕೋಟಿ ರೂಪಾಯಿಯನ್ನು ಈ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದಾರೆ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಳ್ಯ. ಇದೊಂದು ಅಪರೂಪದ ಕಥನವಾಗಿದ್ದರಿಂದ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

  • ‘ಕೋಟಿ’ ಡಾಲಿಗೆ ರಮೇಶ್ ಇಂದಿರಾ ವಿಲನ್

    ‘ಕೋಟಿ’ ಡಾಲಿಗೆ ರಮೇಶ್ ಇಂದಿರಾ ವಿಲನ್

    ಡಾಲಿ ಧನಂಜಯ (Daali Dhananjay) ನಟನೆಯ ‘ಕೋಟಿ’ (Kotee) ಟೀಸರ್ ನೋಡಿ ಚಿತ್ರದ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ಡಾಲಿ (Daali) ಮುಂದೆ ಅಬ್ಬರಿಸುವ ವಿಲನ್ ಬಗ್ಗೆ ಚಿತ್ರತಂಡ ಅಪ್‌ಡೇಟ್ ಹಂಚಿಕೊಂಡಿದೆ. ಇದನ್ನೂ ಓದಿ:‘ಬಂಧನ 2’ ಸಿನಿಮಾ ನಿಲ್ಲೋಕೆ ನಾನೇ ಕಾರಣ ಎಂದ ನಟ ಆದಿತ್ಯ

    ಈ ಹಿಂದೆ ಎಂದೂ ನಟಿಸಿರದ ಪಾತ್ರದಲ್ಲಿ ಡಾಲಿ ‘ಕೋಟಿ’ ಚಿತ್ರದಲ್ಲಿ ನಟಿಸಿದ್ದಾರೆ. ಡಾಲಿ ಮುಂದೆ ಖಳನಾಯಕನಾಗಿ ‘ಸಪ್ತಸಾಗರದಾಚೆ ಎಲ್ಲೋ 2’ ಖ್ಯಾತಿಯ ರಮೇಶ್ ಇಂದಿರಾ (Ramesh Indira) ನಟಿಸಿದ್ದಾರೆ. ಈ ಚಿತ್ರದಲ್ಲಿ ದಿನೂ ಸಾವ್ಕಾರ್ ಎಂಬ ಪಾತ್ರಕ್ಕೆ ನಟ ರಮೇಶ್ ಇಂದಿರಾ ಬಣ್ಣ ಹಚ್ಚಿದ್ದಾರೆ. ತಾನು ಹೇಳಿದ್ದನ್ನು ಎಲ್ಲರೂ ಕೇಳಲೇಬೇಕು ಎನ್ನುವ ಹಠವಾದಿ ಮತ್ತು ವಿಲನ್ ಪಾತ್ರವಾಗಿದೆ.

    ಅಂದಹಾಗೆ, ನಟಿಸುವ ಬದಲು ಪಾತ್ರವೇ ಆಗಿಬಿಡುವ ಧನಂಜಯ ಕನ್ನಡದ ಸೂಕ್ಷ್ಮ ನಟ. ತಮ್ಮ ಹೊಸ ಸಿನಿಮಾ ಕೋಟಿಯ ಪಾತ್ರದ ಬಗ್ಗೆ ಎಕ್ಸೈಟ್ ಆಗಿರುವ ಅವರು ಈ ಸಿನಿಮಾದಲ್ಲಿ ಅಭಿನಯದ ಹೊಸ ಮಗ್ಗುಲುಗಳನ್ನು ಅನ್ವೇಷಿಸಿದ್ದಾರೆ. ಒಂದೇ ಒಂದು ಕೋಟಿ ಸಿಕ್ಕಿಬಿಟ್ಟರೆ ಅಥವಾ ದುಡಿಯೋದಕ್ಕಾದರೆ ಸೆಟ್ಲ್ ಆಗಿಬಿಡಬಹುದು ಎಂದು ಎಲ್ಲರೂ ಅಂದ್ಕೊಳ್ತಿರ್ತಾರೆ. ನಮ್ ಕೋಟಿನೂ ಅಷ್ಟೇ. ಎಲ್ಲಾ ಮನೆಗಳಲ್ಲೂ ಈ ಕೋಟಿಯಂಥ ಅಣ್ಣ, ತಮ್ಮ, ಮಗ ನಿಮಗೆ ಸಿಕ್ತಾರೆ. ಕಷ್ಟಪಟ್ಟು ದುಡಿದು ಎಲ್ಲಾ ಸರಿ ಮಾಡ್ಕೋಬಹುದು ಅಂದ್ಕೋತಾ ಇರ್ತಾರೆ ಎಂದು ಪಾತ್ರದ ಬಗ್ಗೆ ‘ಕೋಟಿ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಧನಂಜಯ ಮಾತನಾಡಿದ್ದರು.

    ಮಜಾ ಅಂದ್ರೆ ಎಲ್ರೊಳಗೂ ಕೋಟಿಯಂಥ ಒಬ್ಬ ವ್ಯಕ್ತಿ ಇರ್ತಾನೆ. ಈ ಪಾತ್ರ, ನನ್ನೊಳಗಿನ ಕೋಟಿಯನ್ನು ನನಗೆ ಪರಿಚಯಿಸಿದೆ. ಹಾಗೆಯೇ ನಿಮ್ಮೊಳಗಿನ ಕೋಟಿಯನ್ನು ಪತ್ತೆ ಮಾಡಲು ನೀವು ಈ ಸಿನಿಮಾ ನೋಡಬೇಕು’ ಎಂದು ಸೇರಿಸಲು ಅವರು ಮರೆಯುವುದಿಲ್ಲ. ಈ ಸಿನಿಮಾ ನಿರ್ದೇಶಿಸುತ್ತಿರುವುದು ಪರಮ್. ಇದು ಅವರ ಚೊಚ್ಚಲ ಸಿನಿಮಾ. ಸಿನಿಮಾ ನಿರ್ದೇಶಕನಾಗಿ ಮೊದಲ ಅನುಭವವಾದರೂ ಕತೆ ಹೇಳುವುದು ಅವರಿಗೆ ಹೊಸದಲ್ಲ. ಟೆಲಿವಿಷನ್ ಚಾನೆಲ್ಲಿನಲ್ಲಿ ಹಲವು ಯಶಸ್ವೀ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ರೂಪಿಸಿದ ಅನುಭವವಿರುವ ಅವರು ಇಲ್ಲಿ ವಿಶಾಲ ಕ್ಯಾನ್ವಾಸಿನಲ್ಲಿ ಕತೆ ಹೇಳುವ ಸವಾಲನ್ನು ಸ್ವೀಕರಿಸಿದ್ದಾರೆ.

    ನನ್ನ ಕನಸು ಈ ಸಿನಿಮಾ ಮೂಲಕ ನಿಜವೇ ಆಗಿಬಿಟ್ಟಿರುವುದನ್ನು ವಿವರಿಸಲು ಶಬ್ದಗಳಿಲ್ಲ. ಇದು ಸಾಧ್ಯ ಆಗಿದ್ದು ಜಿಯೋ ಸ್ಟುಡಿಯೋಸ್ ಮತ್ತು ಜ್ಯೋತಿ ದೇಶಪಾಂಡೆ ನನ್ನ ಮೇಲೆ ಇಟ್ಟ ನಂಬಿಕೆಯಿಂದ. ಒಳ್ಳೆ ಕತೆಗಳನ್ನು ಹೇಳಬೇಕು, ಬೇರೆ ಕತೆಗಳನ್ನು ಹೇಳಬೇಕು, ಬೇರೆ ಧ್ವನಿಗಳು ಕೇಳಿಸಬೇಕು ಅನ್ನೋದು ಜಿಯೋ ಸ್ಟುಡಿಯೋಸ್ ನ ಮೂಲ ಉದ್ದೇಶ. ಕನ್ನಡದಲ್ಲೂ ಈ ಇದು ಮುಂದುವರೆಯಬೇಕು ಅನ್ನೋದರ ಕಡೆಗೆ ನಮ್ಮ ತಂಡ ಕೆಲಸ ಮಾಡುತ್ತೆ ಎನ್ನುತ್ತಾರೆ ನಿರ್ದೇಶಕ ಪರಮ್.

    ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಹಲವು ಜಾಹೀರಾತುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕೊಡಗಿನ ಮೂಲದ ಕನ್ನಡದ ನಟಿ ಮೋಕ್ಷಾಗೆ ಇದು ಮಹತ್ವದ ಸಿನಿಮಾ ಆಗಿದೆ.

  • ‘ಉತ್ತರಕಾಂಡ’ ಡಾಲಿಗೆ ತಮಿಳು ನಟಿ ಐಶ್ವರ್ಯಾ ರಾಜೇಶ್ ಜೋಡಿ

    ‘ಉತ್ತರಕಾಂಡ’ ಡಾಲಿಗೆ ತಮಿಳು ನಟಿ ಐಶ್ವರ್ಯಾ ರಾಜೇಶ್ ಜೋಡಿ

    ಶಿವರಾಜ್‌ಕುಮಾರ್, ಡಾಲಿ (Daali Dhananjay) ನಟನೆಯ ‘ಉತ್ತರಕಾಂಡ’ (Uttarakanda Film) ಸಿನಿಮಾ ತಂಡಕ್ಕೆ ಕಲಾವಿದರ ದಂಡೇ ಸೇರ್ಪಡೆಯಾಗುತ್ತಿದೆ. ಡಾಲಿಗೆ ಜೋಡಿಯಾಗೋ ಆ ನಾಯಕಿ ಯಾರು? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಡಾಲಿಗೆ ಜೋಡಿಯಾಗಿ ಐಶ್ವರ್ಯಾ ರಾಜೇಶ್ (Aishwarya Rajesh) ಎಂಟ್ರಿ ಕೊಡ್ತಿದ್ದಾರೆ.

    ಚೈತ್ರಾ ಆಚಾರ್, ದಿಗಂತ್ ಪಾತ್ರದ ಬಗ್ಗೆ ರಿವೀಲ್ ಆದ ಬೆನ್ನಲ್ಲೇ ಐಶ್ವರ್ಯಾ ರಾಜೇಶ್ ಕೂಡ ಸಿನಿಮಾ ತಂಡಕ್ಕೆ ಸಾಥ್ ನೀಡಲಿದ್ದಾರೆ. ಮುಖ್ಯ ಪಾತ್ರದಲ್ಲಿ ಡಾಲಿ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಮೂಲಕ ನಟಿ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಇದನ್ನೂ ಓದಿ:‘ಉತ್ತರಕಾಂಡ’ ಚಿತ್ರದಲ್ಲಿ ಲಚ್ಚಿ ಪಾತ್ರ ಬಣ್ಣಿಸಿದ ಚೈತ್ರಾ ಆಚಾರ್

    ಬಾಲನಟಿ, ನಾಯಕಿಯಾಗಿ ತೆಲುಗು, ತಮಿಳಿನಲ್ಲಿ ಗುರುತಿಸಿಕೊಂಡಿರುವ ಐಶ್ವರ್ಯಾಗೆ ‘ಉತ್ತರಕಾಂಡ’ ಚಿತ್ರದಲ್ಲಿನ ಪಾತ್ರದ ಬಗ್ಗೆ ಚಿತ್ರತಂಡ ಹೇಳಲಾಗಿದೆಯಂತೆ. ಕಥೆ ಮತ್ತು ಪಾತ್ರದ ಬಗ್ಗೆ ನಟಿ ಕೂಡ ಓಕೆ ಎಂದಿದ್ದಾರೆ ಎನ್ನಲಾಗಿದೆ.  ಹಾಗಂತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, ಇದೀಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ಐಶ್ವರ್ಯಾ ರಾಜೇಶ್ ಅವರೇ ಸಿನಿಮಾದ ನಾಯಕಿ ಆಗಿದ್ದಲ್ಲಿ ಸದ್ಯದಲ್ಲೇ ಚಿತ್ರತಂಡ ಬಗ್ಗೆ ಅಧಿಕೃತ ಮಾಹಿತಿ ನೀಡಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ. ಉತ್ತರಕಾಂಡ ಚಿತ್ರದ ಮೂಲಕ ತಮಿಳು ನಟಿ ಎಂಟ್ರಿ ಕೊಟ್ಟರೆ ಅವರ ಮೊದಲ ಕನ್ನಡದ ಸಿನಿಮಾ ಆಗಲಿದೆ. ಚಿತ್ರತಂಡದ ಕಡೆಯಿಂದ ಗುಡ್‌ ನ್ಯೂಸ್‌ ಸಿಗುತ್ತಾ? ಕಾದುನೋಡಬೇಕಿದೆ.

  • ‘ಉತ್ತರಕಾಂಡ’ ಚಿತ್ರದಲ್ಲಿ ಲಚ್ಚಿ ಪಾತ್ರ ಬಣ್ಣಿಸಿದ ಚೈತ್ರಾ ಆಚಾರ್

    ‘ಉತ್ತರಕಾಂಡ’ ಚಿತ್ರದಲ್ಲಿ ಲಚ್ಚಿ ಪಾತ್ರ ಬಣ್ಣಿಸಿದ ಚೈತ್ರಾ ಆಚಾರ್

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar), ಡಾಲಿ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ ‘ಟೋಬಿ’ (Toby Film) ನಟಿ ಎಂಟ್ರಿ ಕೊಟ್ಟಿದ್ದಾರೆ. ‘ಲಚ್ಚಿ’ ಪಾತ್ರಕ್ಕೆ ಚೈತ್ರಾ ಆಚಾರ್ (Chaithra Achar) ಬಣ್ಣ ಹಚ್ಚಲಿದ್ದಾರೆ. ಹಾಗಾದ್ರೆ ಚಿತ್ರದಲ್ಲಿ ಚೈತ್ರಾ ಪಾತ್ರ ಹೇಗಿದೆ? ಎಂಬುದನ್ನು ನಟಿ ಪಬ್ಲಿಕ್ ಟಿವಿ ಡಿಜಿಟಲ್‌ಗೆ ನಟಿ ವಿವರಿಸಿದ್ದಾರೆ.

    ಉತ್ತರ ಕರ್ನಾಟಕದ ಬಿಜಾಪುರದಲ್ಲಿ ವಾಸಿಸುತ್ತಿರುವ ಹೆಣ್ಣು ಮಗಳು. ನಾನು ಇದುವರೆಗೂ ಮಾಡಿರುವ ಪಾತ್ರಕ್ಕಿಂತ ಇದು ವಿಭಿನ್ನವಾಗಿದೆ. ನೈಜತೆಗೆ ಲಚ್ಚಿ ಪಾತ್ರ ಹತ್ತಿರವಿದೆ. ಜೀವನದಲ್ಲಿ ತುಂಬಾ ಆಸೆ ಇರುವಂತಹ ಹುಡುಗಿ, ಹೀಗೆ ಬದುಕಬೇಕೆಂದು ಆಸೆಗಳಿರುತ್ತದೆ. ತುಂಬಾ ಸೆನ್ಸಿಟಿವ್ ಆಗಿರುವ ಪಾತ್ರ ಇದಾಗಿದ್ದು, ಅದ್ಭುತವಾಗಿದೆ ಎಂದಿದ್ದಾರೆ ಚೈತ್ರಾ ಆಚಾರ್. ಇದನ್ನೂ ಓದಿ:ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ

    ಮದುವೆಯಾಗಿರುವ ಯಂಗ್ ಹುಡುಗಿಯ ಪಾತ್ರವಾಗಿದ್ದು, ಚಿತ್ರತಂಡದ ಜೊತೆ ಕೈಜೋಡಿಸಿರುವುದಕ್ಕೆ ಖುಷಿಯಿದೆ ಎಂದಿದ್ದಾರೆ. ತಮ್ಮ ಪಾತ್ರಕ್ಕಾಗಿ ಸಕಲ ತಯಾರಿ ಮಾಡಿಕೊಂಡಿರುವುದಾಗಿ ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ಮಾಲಿವುಡ್ ನಟ ಮೋಹನ್‌ಲಾಲ್‌ರನ್ನು ಭೇಟಿಯಾದ ರಿಷಬ್ ಶೆಟ್ಟಿ

    ಚೈತ್ರ ಆಚಾರ್ ‘ಉತ್ತರಕಾಂಡ’ (Uttarakanda Film) ತಾರಾಬಳಗಕ್ಕೆ ಸೇರ್ಪಡೆ ಆಗಿದ್ದು, ಈಗಾಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ‘ಉತ್ತರಕಾಂಡ’ ಒಂದು ಆ್ಯಕ್ಷನ್ ಡ್ರಾಮಾ ಚಿತ್ರವಾಗಿದ್ದು, ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಲಿದ್ದಾರೆ. ಕಾರ್ತಿಕ್ ಗೌಡ- ಯೋಗಿ ಜಿ.ರಾಜ್ ಕೆಆರ್‌ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.

    ಅಂದಹಾಗೆ, ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ, ಗಿಲ್ಕಿ, ಆ ದೃಶ್ಯ, ತಲೆದಂಡ, ಬ್ಲಿಂಕ್ ಸಿನಿಮಾಗಳ ಮೂಲಕ ಚೈತ್ರಾ ಆಚಾರ್ ಮನಗೆದ್ದಿದ್ದಾರೆ. ಗಾಯನದ ಮೂಲಕ ಕೂಡ ಸೈ ಎನಿಸಿಕೊಂಡಿದ್ದಾರೆ. ಉತ್ತರಕಾಂಡ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

  • ಶುರುವಾಯ್ತು ‘ವಿದ್ಯಾಪತಿಗೆ’ ಶೂಟಿಂಗ್-ಹೊಸ ಅವತಾರದಲ್ಲಿ ನಾಗಭೂಷಣ್,ರಂಗಾಯಣ ರಘು

    ಶುರುವಾಯ್ತು ‘ವಿದ್ಯಾಪತಿಗೆ’ ಶೂಟಿಂಗ್-ಹೊಸ ಅವತಾರದಲ್ಲಿ ನಾಗಭೂಷಣ್,ರಂಗಾಯಣ ರಘು

    ಪ್ರತಿಭಾನ್ವಿತ ನಿರ್ದೇಶಕರಿಗೆ ವೇದಿಕೆಯಾಗಿರುವ ಡಾಲಿ ಪಿಕ್ಚರ್ಸ್ ಮತ್ತೊಂದು ಹೊಸ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಡಾಲಿ ಪಿಕ್ಚರ್ಸ್ 4ನೇ ಕೊಡುಗೆ ನಾಗಭೂಷಣ್‌ ನಟನೆಯ ‘ವಿದ್ಯಾಪತಿ’ (Vidyapati Film) ಶೂಟಿಂಗ್‌ಗೆ ಕಿಕ್ ಸ್ಟಾರ್ಟ್ ಸಿಕ್ಕಿದೆ. ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗ್ತಿದೆ.

    ವಿದ್ಯಾಪತಿಯಾಗಿ ನಾಗಭೂಷಣ್ (Nagabhushan) ಬಣ್ಣ ಹಚ್ಚಿದ್ದು, ಅವರು ಕರಾಟೆ ಕಿಂಗ್ ಅವತಾರ ತಾಳಿದ್ದಾರೆ. ರಂಗಾಯಣ ರಘು ಕೂಡ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಿದ್ಯಾಪತಿ ಶೂಟಿಂಗ್ ಮೇಕಿಂಗ್ ವಿಡಿಯೋ ತುಣುಕನ್ನು ಚಿತ್ರತಂಡ ರಿವೀಲ್ ಮಾಡಿದೆ. 1 ನಿಮಿಷ ಮೇಕಿಂಗ್ ಝಲಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದನ್ನೂ ಓದಿ:ಬೇಸಿಗೆಯಲ್ಲಿ ಪುಟ್ಟಗೌರಿ ಮತ್ತಷ್ಟು ಹಾಟ್: ಕೂರ್ಗಿನಲ್ಲಿ ಸಾನ್ಯಾ ಅಯ್ಯರ್

     

    View this post on Instagram

     

    A post shared by Daali Pictures (@daalipictures)

    ಇಕ್ಕಟ್ ಕಥೆ ಹೇಳಿದ್ದ ಇಶಾಂ ಮತ್ತು ಹಸೀಂ ಖಾನ್ ‘ವಿದ್ಯಾಪತಿ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಆ್ಯಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಗಭೂಷಣ್‌ಗೆ ನಾಯಕಿಯಾಗಿ ‘ಉಪಾಧ್ಯಕ್ಷ’ ಬ್ಯೂಟಿ ಮಲೈಕಾ ವಸೂಪಾಲ್ (Malaika Vasupal) ಕಾಣಿಸಿಕೊಳ್ಳಲಿದ್ದಾರೆ.

    ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ‘ವಿದ್ಯಾಪತಿ’ ಸಿನಿಮಾಕ್ಕಿದೆ. ‘ಟಗರು ಪಲ್ಯ’ ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಮತ್ತೊಮ್ಮೆ ಡಾಲಿ ಜೊತೆ ಕೈ ಜೋಡಿಸಿದ್ದಾರೆ.