Tag: ಡಾಲಿ ಪಿಕ್ಚರ್ಸ್

  • ಉಪ್ಪಿ ಪುತ್ರಿಗೆ ಬಿಗ್ ಆಫರ್: ದೊಡ್ಮನೆ ಯುವರಾಜನಿಗೆ ಐಶ್ವರ್ಯ ನಾಯಕಿ

    ಉಪ್ಪಿ ಪುತ್ರಿಗೆ ಬಿಗ್ ಆಫರ್: ದೊಡ್ಮನೆ ಯುವರಾಜನಿಗೆ ಐಶ್ವರ್ಯ ನಾಯಕಿ

    ಗಾಂಧಿನಗರದಲ್ಲಿ ಸೂಪರ್ ಸ್ಟಾರ್‌ಗಳ ಮಕ್ಕಳ ಎಂಟ್ರಿಯಾಗುತ್ತಿದೆ. `ನೆನಪಿರಲಿ’ ಪ್ರೇಮ್ (Nenapirali Prem)  ಪುತ್ರಿ ಅಮೃತಾ (Amrutha Prem) ನಟನೆಗೆ ಎಂಟ್ರಿ ಕೊಡ್ತಿರುವ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಮಗಳು ಐಶ್ವರ್ಯ ಎಂಟ್ರಿಯ ಬಗ್ಗೆ ಗುಸು ಗುಸು ಶುರುವಾಗಿದೆ.

    ಇತ್ತೀಚೆಗಷ್ಟೇ ಡಾಲಿ ಪಿಕ್ಚರ್ಸ್ ನಿರ್ಮಾಣದ `ಟಗರು ಪಲ್ಯ’ (Tagaru Palya) ಚಿತ್ರದಲ್ಲಿ ಅಮೃತಾ ಪ್ರೇಮ್ (Amrutha) ನಾಯಕಿಯಾಗಿರುವ ಬೆನ್ನಲ್ಲೇ ನಟ ಉಪೇಂದ್ರ ಮಗಳ ಬರುವಿಕೆಗೆ ಕೌಂಟ್‌ಡೌನ್ ಶುರುವಾಗಿದೆ. ಸ್ಟಾರ್ ನಟ ನಟಿಯರ ಮಕ್ಕಳು ಚಿತ್ರರಂಗಕ್ಕೆ ಹೆಜ್ಜೆ ಇಡ್ತಿದ್ದಾರೆ. ಇದನ್ನೂ ಓದಿ: `ಕೆಜಿಎಫ್’ ತಾತ ಕೃಷ್ಣ ಜಿ. ರಾವ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    ಪ್ರತಿಷ್ಠಿತ ಸಂಸ್ಥೆ ಹೊಂಬಾಳೆ ಬ್ಯಾನರ್ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವರಾಜ್‌ಕುಮಾರ್ ಅವರನ್ನ ಲಾಂಚ್ ಮಾಡ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ ಹೊಸ ಚಿತ್ರದಲ್ಲಿ ಯುವಗೆ ನಾಯಕಿಯಾಗಿ ಐಶ್ವರ್ಯ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    ಹೊಂಬಾಳೆ ಸಂಸ್ಥೆಯಡಿ ನಾಯಕಿಯಾಗಿ ನಟಿಸುವಂತೆ ಉಪ್ಪಿ ಪುತ್ರಿಗೆ ಆಫರ್ ನೀಡಲಾಗಿದೆಯಂತೆ. ಮಗಳ ಸಿನಿ ಜರ್ನಿಗೆ ಉಪ್ಪಿ ಕುಟುಂಬ ಗ್ರೀನ್ ಸಿಗ್ನಲ್ ಕೊಡ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮ ಬ್ಯಾನರ್ ನಿಂದ ವರ್ಷಕ್ಕೆ ಎರಡು ಸಿನಿಮಾ ಘೋಷಿಸಿದ ಡಾಲಿ ಧನಂಜಯ್

    ತಮ್ಮ ಬ್ಯಾನರ್ ನಿಂದ ವರ್ಷಕ್ಕೆ ಎರಡು ಸಿನಿಮಾ ಘೋಷಿಸಿದ ಡಾಲಿ ಧನಂಜಯ್

    ಇಂದು ಡಾಲಿ ಧನಂಜಯ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಅವರು ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳದೇ ಇದ್ದರೂ, ಅಭಿಮಾನಿಗಳ ಹಾರೈಕೆಯಿಂದ ಹುಟ್ಟು ಹಬ್ಬ ಸಂಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಅವರು ಮಹತ್ವದ ನಿರ್ಣಯವೊಂದನ್ನು ತಗೆದುಕೊಂಡಿದ್ದು, ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಧನಂಜಯ್ ಅವರಿಗೆ ಸಿನಿಮಾ ರಂಗದ ಯಾವುದೇ ಹಿನ್ನೆಲೆ ಇರದೇ ಇದ್ದರೂ, ಕಷ್ಟ ಪಟ್ಟು ಇವತ್ತು ಸ್ಟಾರ್ ಪಟ್ಟ ಏರಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರ ಕೈಯಲ್ಲಿ ಬರೋಬ್ಬರಿ ಏಳು ಚಿತ್ರಗಳಿವೆ. ಅಲ್ಲದೇ, ಡಾಲಿ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನೂ ಅವರು ಹುಟ್ಟು ಹಾಕಿದ್ದಾರೆ. ಆ ಡಾಲಿ ಪಿಕ್ಚರ್ಸ್ ಮೂಲಕ ತಮ್ಮ ಹುಟ್ಟು ಹಬ್ಬದ ದಿನದಂದು ಖುಷಿ ಸುದ್ದಿಯೊಂದನ್ನು ನೀಡಿದ್ದು, ವರ್ಷಕ್ಕೆ ಎರಡು ಸಿನಿಮಾಗಳ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಇದು ಹುಟ್ಟು ಹಬ್ಬಕ್ಕೆ ಕೊಡುತ್ತಿರುವ ಗಿಫ್ಟ್ ಎಂದು ಡಾಲಿ ಸಂಸ್ಥೆ ಹೇಳಿಕೊಂಡಿದೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ವರ್ಷಕ್ಕೆ ಎರಡು ಸಿನಿಮಾಗಳನ್ನು ಘೋಷಣೆ ಮಾಡಿರುವ ಡಾಲಿ ಪಿಕ್ಚರ್ಸ್ ಒಂದು ಸಿನಿಮಾವನ್ನು ಸಂಪೂರ್ಣ ಹೊಸಬರಿಗಾಗಿಯೇ ಮಾಡುವುದಾಗಿಯೂ ಹೇಳಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ದೃಷ್ಟಿಯಿಂದ ಒಂದು ಸಿನಿಮಾ ಅವರಿಗಾಗಿ ಮೀಸಲು ಎಂದಿದೆ ಸಂಸ್ಥೆ. ಈ ಮೂಲಕ ಹೊಸಬರನ್ನು ಬೆಳೆಸುವ ಪ್ರಯತ್ನಕ್ಕೂ ಡಾಲಿ ಮುಂದಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]