Tag: ಡಾಲಿ ಧನಂಜಯ್

  • ರೆಟ್ರೋ ಲುಕ್‌ನಲ್ಲಿ ಮಿಂಚಿದ ಶಿವಣ್ಣ, ಡಾಲಿ

    ರೆಟ್ರೋ ಲುಕ್‌ನಲ್ಲಿ ಮಿಂಚಿದ ಶಿವಣ್ಣ, ಡಾಲಿ

    ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು 666 ಆಪರೇಷನ್ ಡ್ರೀಮ್ ಥಿಯೇಟರ್ (666 Operation Dream Theatre). ಹೇಮಂತ್ ರಾವ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಒಂದು ಹೇಮಂತ್ ಡೈರೆಕ್ಷನ್ ಹಾಗೂ ಶಿವಣ್ಣ-ಧನಂಜಯ್ ಮತ್ತೆ ಒಂದಾಗಿರುವುದು. ಟಗರು (Tagaru) ಜೋಡಿಯ ಹೊಸ ಪ್ರಾಜೆಕ್ಟ್ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ಪೋಸ್ಟರ್ ಮೂಲಕವೇ ಪ್ರೇಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ರೆಟ್ರೋ ಲುಕ್‌ನಲ್ಲಿ ಶಿವಣ್ಣ ಹಾಗೂ ಧನಂಜಯ್ (Daali Dhananjay) ಕಾಣಿಸಿಕೊಂಡಿದ್ದು, ಈ ಲುಕ್ ನೋಡುತ್ತಿದ್ದರೆ ಡಾ. ರಾಜಕುಮಾರ್ ಅವರ ಸ್ಪೈ ಸಿನಿಮಾಗಳು ನೆನಪಾಗುತ್ತವೆ. ಸದ್ಯ ಚಿತ್ರತಂಡ ಮೊದಲ ಹಂತದ ಚಿತ್ರೀಕರಣ ಮುಗಿಸಿ, 2ನೇ ಹಂತಕ್ಕೆ ಸಜ್ಜಾಗುತ್ತಿದೆ.

    ಫಸ್ಟ್ ಶೆಡ್ಯೂಲ್ಡ್‌ ಶೂಟಿಂಗ್‌ನಲ್ಲಿ ಶಿವಣ್ಣ (Shiva Rajkumar) ಹಾಗೂ ಧನಂಜಯ್ ಭಾಗಿಯಾಗಿದ್ದರು. ಇದೀಗ ಇದೇ ತಿಂಗಳಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ. ಅದಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಬೃಹತ್ ಆಕಾರದ ಸೆಟ್ ನಲ್ಲಿ ಬರೋಬ್ಬರಿ 100 ದಿನಗಳ ಕಾಲ ಶೂಟಿಂಗ್ ನಡೆಸಲಾಗುವುದು.

    ಸೆಟ್ ಬಗ್ಗೆ ಮಾತನಾಡಿದ ನಿರ್ಮಾಪಕ ಡಾ. ವೈಶಾಕ್ ಜೆ ಗೌಡ, ‘666 ಆಪರೇಷನ್ ಡ್ರೀಮ್ ಥಿಯೇಟರ್ ಬಗ್ಗೆ ಎಲ್ಲವನ್ನೂ ಹೇಮಂತ್ ಎಂ ರಾವ್ ಮತ್ತು ಅವರ ತಂಡ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದೆ. ನಾವು ಇಂದಿನ ಪೀಳಿಗೆಯನ್ನು ಬೆರಗುಗೊಳಿಸುವ ಮತ್ತು ಹಿಂದಿನ ಪೀಳಿಗೆಯನ್ನು ನೆನಪಿನ ಹಾದಿಯಲ್ಲಿ ಕರೆದೊಯ್ಯುವ ಜಗತ್ತನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಯಾವ ಸೆಟ್‌ಗಳನ್ನ ನಿರ್ಮಿಸಲಾಗುತ್ತಿದೆ ಎಂಬುದನ್ನು ನಾನು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಪ್ರೇಕ್ಷಕರು ದೊಡ್ಡ ಪರದೆಯ ಮೇಲೆ ಅನುಭವಿಸಬಹುದಾದ ವಿಷಯ ಅದು. ದೊಡ್ಡ ಪ್ರಮಾಣದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಈ ಕುರಿತ ಮತ್ತಷ್ಟು ಅಪ್ ಡೇಟ್ ಶೀಘ್ರದಲ್ಲೇ ನೀಡುತ್ತೇವೆ’ ಎಂದು ಹೇಳಿದ್ದಾರೆ.

    ಧನಂಜಯ್ ಹಾಗೂ ಶಿವರಾಜ್ ಕುಮಾರ್ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸಲಾಗುತ್ತಿದೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ.ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

  • ಬರ್ತ್‌ ಡೇ ಸೆಲೆಬ್ರೇಷನ್ – ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟ ಡಾಲಿ ಧನಂಜಯ್!

    ಬರ್ತ್‌ ಡೇ ಸೆಲೆಬ್ರೇಷನ್ – ಅಭಿಮಾನಿಗಳಿಗೆ ಶಾಕ್ ಕೊಟ್ಟ ನಟ ಡಾಲಿ ಧನಂಜಯ್!

    ಸ್ಟಾರ್ ನಟರು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಇಷ್ಟಪಡೋದುಂಟು. ಆದರೆ ಕೆಲವು ಮುಖ್ಯ ಕಾರಣಕ್ಕೆ ಸ್ಟಾರ್‌ಗಳು ಅಭಿಮಾನಿಗಳೊಂದಿಗೆ (Fans) ಹುಟ್ಟುಹಬ್ಬ ಆಚರಿಸಿಕೊಳ್ಳೋದನ್ನ ಮಿಸ್ ಮಾಡ್ಕೊಳ್ತಾರೆ. ಇದೀಗ ಡಾಲಿ ಧನಂಜಯ್ (Daali Dhananjay) ಕೂಡ ಈ ಬಾರಿ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಕಾರಣವನ್ನೂ ತಿಳಿಸಿದ್ದಾರೆ ನಟ ರಾಕ್ಷಸ ಧನಂಜಯ್.

     

    View this post on Instagram

     

    A post shared by Daali Dhananjaya (@dhananjaya_ka) 

    ಆಗಸ್ಟ್ 23ಕ್ಕೆ ಧನಂಜಯ್ ಹುಟ್ಟುಹಬ್ಬ (Birthday) ಆಚರಿಸಿಕೊಳ್ತಿದ್ದಾರೆ. ಆದರೆ ಈ ಬಾರಿ ಧನಂಜಯ್ ಅಭಿಮಾನಿಗಳೊಂದು ಆಚರಿಸಿಕೊಳ್ತಿಲ್ಲ. ಕೆಲಸದ ನಿಮಿತ್ತ ಹೊರಗಡೆ ಹೋಗುವ ಕಾರಣಕ್ಕೆ ಸಂಭ್ರಮಾಚರಣೆಯನ್ನ ನಿಮ್ಮೊಂದಿಗೆ ಮಾಡುತ್ತಿಲ್ಲ ಎಂದಿದ್ದಾರೆ ಡಾಲಿ. ಅಂದಹಾಗೆ ಇದೀಗ ಧನಂಜಯ್ ಐತಿಹಾಸಿಕ ಹಲಗಲಿ (Halagali) ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.

    ಇನ್ನು 666 ಸಿನಿಮಾದಲ್ಲಿ ಶೂಟಿಂಗ್ ನಿಮಿತ್ತ ಬೇರೆ ಊರಿನಲ್ಲಿ ಇರುವ ಸಾಧ್ಯತೆ ಇದೆ. ಹೀಗಾಗಿ ಧನಂಜಯ್ ಈ ಬಾರಿ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಈ ಬಾರಿ ಬಹುತೇಕ ಸ್ಟಾರ್‌ಗಳು ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಅವರ ಸಾಲಿಗೆ ಇದೀಗ ಡಾಲಿ ಧನಂಜಯ್ ಕೂಡ ಸೇರಿದ್ದಾರೆ.

  • ಹಲಗಲಿ ಚಿತ್ರದ ಫಸ್ಟ್ ರೋರ್ ರಿಲೀಸ್ – ವಾರಿಯರ್ ಪಾತ್ರದಲ್ಲಿ ಧನಂಜಯ್

    ಹಲಗಲಿ ಚಿತ್ರದ ಫಸ್ಟ್ ರೋರ್ ರಿಲೀಸ್ – ವಾರಿಯರ್ ಪಾತ್ರದಲ್ಲಿ ಧನಂಜಯ್

    ಕನ್ನಡದ ಐತಿಹಾಸಿಕ ಸಿನಿಮಾ `ಹಲಗಲಿ’ (Halagali) ಚಿತ್ರಕ್ಕೆ ಡಾಲಿ ಧನಂಜಯ (Daali Dhananjaya) ಹೈಲೆಟ್. ಅವರಿಗೆ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಸುಕೇಶ್ ಡಿಕೆ (Suresh DK) ನಿರ್ದೇಶನದ ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಬಹು ತಾರಾಗಣದ ಅದ್ಧೂರಿ ಬಜೆಟ್ ಚಿತ್ರ ‘ಹಲಗಲಿ’ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಇದು ಸ್ವಾತಂತ್ರ್ಯ ವೀರರ ಕಥೆ.

    ಎರಡು ಭಾಗಗಳಲ್ಲಿ, ಮೂಡಿ ಬರಲಿರುವ ಈ ಸಿನಿಮಾ ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಐದು ಭಾಷೆಯಲ್ಲಿ ಅದ್ಧೂರಿಯಾಗಿ ಚಿತ್ರೀಕರಣವಾಗುತ್ತಿರುವ ಕನ್ನಡದ ಐತಿಹಾಸಿಕ ಸಿನಿಮಾದ ಫಸ್ಟ್ ರೋರ್ ಸಖತ್ ಆಗಿದೆ. ಕನ್ನಡ ಸೇರಿ ಐದು ಭಾಷೆಯಲ್ಲಿ ಮೂಡಿ ಬರುತ್ತಿರುವ ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆ ಇದಾಗಿದ್ದು, ವಿಶೇಷ ಸ್ಥಳಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಇದನ್ನೂ ಓದಿ: ದರ್ಶನ್ ಜೈಲಿಗೆ ಹೋಗಿದ್ದು ಬೇಸರ ತಂದಿದೆ, ಅಕ್ಕಪಕ್ಕದವ್ರ ಸಹವಾಸ ಬಿಡ್ಬೇಕು – ರಮ್ಯಾ ಸಾಫ್ಟ್ ಕಾರ್ನರ್

    daali dhananjaya

    ನಟ ಡಾಲಿ ಧನಂಜಯ ಅವರ ವೃತ್ತಿ ಪಯಣದಲ್ಲಿ ಮತ್ತೊಂದು ಮೈಲುಗಲ್ಲಿನ ಚಿತ್ರವಿದು ಅನ್ನೋದು ವಿಶೇಷ. ಇಲ್ಲಿವರೆಗೂ ಅವರನ್ನು ತೆರೆ ಮೇಲೆ ವಿಭಿನ್ನ ಪಾತ್ರಗಳಲ್ಲಿ ನೋಡಿ ಮೆಚ್ಚಿದ್ದ ಪ್ರೇಕ್ಷಕರು, ಈಗ ವಾರಿಯರ್ ಪಾತ್ರದಲ್ಲಿ ನೋಡಲಿದ್ದಾರೆ. ಇವರ ಕೈಗೆ ಬಿಲ್ಲು, ಬಾಣ, ಮದ್ದು- ಗುಂಡುಗಳನ್ನು ಕೊಟ್ಟು ಯುದ್ಧದ ಅಖಾಡಕ್ಕೆ ಇಳಿಸಿರುವುದು ಕನ್ನಡ ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ದಾಖಲಾಗಿರುವ ಒಂದು ರೋಚಕ ಇತಿಹಾಸ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಹಲಗಲಿ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ವಾರ್ ಮಾಡಿದ ನಮ್ಮದೇ ರಾಜ್ಯದ ಹಲಗಲಿಯ ಊರಿನ ಬೇಡರ ಕುರಿತು ನಾವು ಓದಿರುವ ಮತ್ತು ಕೇಳಿರುವ ಸಂಗತಿಗಳು ಬಹು ರೋಚಕ. ಕನ್ನಡ ನಾಡಿನ ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಸುಕೇಶ್ ಡಿ ಕೆ. ಇದನ್ನೂ ಓದಿ: ನಟ ದರ್ಶನ್‌ ಜಾಮೀನು ರದ್ದು – ಸುಪ್ರೀಂ ಕೋರ್ಟ್‌ ತೀರ್ಪಿನಲ್ಲೇನಿದೆ?

    Halagali

    ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ಮ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ. ಇವರು ಈಗಾಗಲೇ ತೆಲಗಿನಲ್ಲಿ ರಚಯತ ಚಿತ್ರವನ್ನು ನಿರ್ಮಿಸಿ, 20ಕ್ಕೂ ಹೆಚ್ಚು ಚಿತ್ರಗಳನ್ನು ಕನ್ನಡ ಹಾಗೂ ತೆಲುಗಿನಲ್ಲಿ ವಿತರಣೆ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಮೂಡಿ ಬರಲಿರುವ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಿದೆ. ಇದನ್ನೂ ಓದಿ: ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್

    ಚಿತ್ರಕ್ಕಾಗಿ ಬಹುದೊಡ್ಡ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ಕನ್ನಡದ ವಾಸುಕಿ ವೈಭವ್ ಸಂಗೀತ ಇದೆ. ವಿಶೇಷ ಎಂದರೆ ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಮ್ ಮೋರ್ ಅವರೇ ಹಲಗಲಿ ಚಿತ್ರಕ್ಕೆ ಸಾಹಸ ನಿರ್ದೇಶಕ. ಚಿತ್ರಕ್ಕಾಗಿ ನಾಲ್ಕೈದು ಬೃಹತ್ ಹಳ್ಳಿಯ ಸೆಟ್ ಗಳನ್ನು ಹಾಕಿರುವುದು ಮತ್ತೊಂದು ವಿಶೇಷ., ಹಲಗಲಿ ಗ್ರಾಮವನ್ನೇ ಮರುಸೃಷ್ಟಿಯ ಸೆಟ್ ಅನ್ನೇ ವಿಶೇಷವಾಗಿ ನಿರ್ಮಿಸಲಾಗಿದೆ.

  • ಬೇಡರ ನಾಯಕನಾಗಿ ಡಾಲಿ ಧನಂಜಯ್: ಗ್ಲಿಂಪ್ಸ್ ರಿಲೀಸ್

    ಬೇಡರ ನಾಯಕನಾಗಿ ಡಾಲಿ ಧನಂಜಯ್: ಗ್ಲಿಂಪ್ಸ್ ರಿಲೀಸ್

    ಡಾಲಿ ಧನಂಜಯ್ (Daali Dhananjaya) ನಾಯಕನಾಗಿ ನಟಿಸುತ್ತಿರುವ ‘ಹಲಗಲಿ’ ಚಿತ್ರದ ಫಸ್ಟ್ ಲುಕ್ ಗುರುವಾರ ಸಂಜೆ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಸಿನಿಮಾದ ಗ್ಲಿಂಪ್ಸ್ (Glimpse Release) ರಿಲೀಸ್ ಮಾಡಿದೆ ಚಿತ್ರತಂಡ. ಆ ಗ್ಲಿಂಪ್ಸ್ ನಾನಾ ಅರ್ಥಗಳನ್ನು ನೀಡುತ್ತಿದೆ. ಡಾಲಿ ಅಭಿಮಾನಿಗಳು ಅದನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ.

    ಬ್ರಿಟಿಷರ ವಿರುದ್ಧ ಮೊಟ್ಟ ಮೊದಲ ಗೆರಿಲ್ಲಾ ವಾರ್ ಮಾಡಿದ ಹಲಗಲಿ ವೀರರ ಕುರಿತು ಈ ಚಿತ್ರದಲ್ಲಿ ಡಾಲಿ ಅವರು ಬೇಡರ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಗ್ಲಿಂಪ್ಸ್ ಬಿಡುಗಡೆಗೂ ಮುನ್ನವೇ ಚಿತ್ರತಂಡ ಹಂಚಿಕೊಂಡಿರುವ ಈ ಎರಡೂ ಫೋಟೋಗಳು ಸಾಕಷ್ಟು ಕುತೂಹಲ ಮೂಡಿಸಿದೆ.

    ಸುಕೇಶ್ ನಾಯಕ್ ನಿರ್ದೇಶನದ ಈ ಚಿತ್ರವನ್ನು ಕಲ್ಯಾಣ್ ಚಕ್ರವರ್ತಿ ಡಿ ಅವರು 80 ಕೋಟಿ ವೆಚ್ಚಿದಲ್ಲಿ ನಿರ್ಮಿಸುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದೆ. ಮೊಟ್ಟ ಮೊದಲ ಬಾರಿಗೆ ಡಾಲಿ ಧನಂಜಯ್ ಅವರು ಐತಿಹಾಸಿಕ ಕತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    1857ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೊತ್ತಿದಾಗ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು, ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರಿಗೆ ಗೆರಿಲ್ಲಾ ವಾರ್ ಮೂಲಕ ಸಿಂಹಸ್ವಪ್ನವಾಗಿ ಕಾಡಿದ ಹಲಗಲಿ ಬೇಡರ ಈ ಚರಿತ್ರಿಕ ಕಥನವನ್ನು ದಾಖಲಿಸುವ ನಿಟ್ಟಿನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ.

  • ಡಾಲಿ ಧನಂಜಯ್ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್

    ಡಾಲಿ ಧನಂಜಯ್ ಹೊಸ ಸಿನಿಮಾದ ಫಸ್ಟ್ ಲುಕ್ ರಿಲೀಸ್

    666 ಆಪರೇಷನ್ ಡ್ರೀಮ್ ಥಿಯೇಟರ್ (666 Operation Dream Theatre) ಸಿನಿಮಾ ತನ್ನ ಘೋಷಣೆಯಿಂದಲೇ ಡಾ. ಶಿವರಾಜ್‌ಕುಮಾರ್ (Shivarajkumar) ಮತ್ತು ಧನಂಜಯ (Daali Dhananjaya) ಅವರ ಅಭಿಮಾನಿಗಳಿಂದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜೂನ್ ತಿಂಗಳಲ್ಲಿ ಬಂಡೆಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ ಡಾಲಿ ಧನಂಜಯ್ ಫಸ್ಟ್ ಲುಕ್‌ ಅನ್ನು ಅನಾವರಣ ಮಾಡಿದೆ.

    ಮಾಸ್ ಮತ್ತು Rugged ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಧನಂಜಯ್, 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರೆಟ್ರೋ ಲುಕ್‌ನಲ್ಲಿ ಡಾಲಿ ಧನಂಜಯ ಪ್ರತ್ಯಕ್ಷರಾಗಿದ್ದಾರೆ. ಮೊದಲ ನೋಟವು ಹಿಂದಿನ ಕಾಲದ ಚೌಕಟ್ಟಿನಲ್ಲಿ, ಪ್ರಕಾಶಮಾನವಾದ ಬಣ್ಣಗಳೊಂದಿಗೆ ಕ್ಲೋಸ್-ಅಪ್ ಅನ್ನು ನೀಡುತ್ತದೆ. ಧನಂಜಯ್ ಅವರು ತೀವ್ರವಾದ ಕಣ್ಣುಗಳು ಮತ್ತು ಚಂಡಮಾರುತದ ಮೊದಲು ಶಾಂತವಾದ ಅಭಿವ್ಯಕ್ತಿಯೊಂದಿಗೆ ಹಿಂದೆಂದೂ ನೋಡದ ನೋಟದಲ್ಲಿದ್ದಾರೆ. ಧನಂಜಯ ಅವರ ಈ ಭಾಗವು ರಹಸ್ಯ ಏಜೆಂಟ್‌ಗೆ ಸೂಕ್ತವಾದ ಶೈಲಿ ಮತ್ತು ವರ್ಗವನ್ನು ಹೊರಹೊಮ್ಮುತ್ತದೆ. ಇದನ್ನೂ ಓದಿ: ಕೊರಗಜ್ಜ ಚಿತ್ರಕ್ಕಾಗಿ ಖ್ಯಾತ ರಂಗಕರ್ಮಿ ಎಂ.ಎಸ್ ಸತ್ಯು ಕೊಟ್ಟ ಟಿಪ್ಸ್

    ಎರಡನೇ ನೋಟದಲ್ಲಿ, ಟಾಮಿ ಗನ್ ಹೊಂದಿರುವ ಧನಂಜಯ, ತಮಾಷೆಯ ಕೋಪ ಮತ್ತು ಕಾಲಾತೀತ ತೋರಣದ ಪ್ರಭಾವಲಯವನ್ನು ಹೊರಹಾಕುತ್ತಾನೆ. ಪೋಸ್ಟರ್‌ನಲ್ಲಿ ಐಕಾನಿಕ್ 999 ಸರಣಿಯ ಚಲನಚಿತ್ರಗಳ ಡಾ. ರಾಜ್‌ಕುಮಾರ್ ಅವರ ಉಲ್ಲೇಖ ಮತ್ತು ಪೋಸ್ಟರ್‌ನಲ್ಲಿ ಈಸ್ಟರ್ ಎಗ್ನಂತೆ ಮರೆಮಾಡಲಾಗಿರುವ ವಿಶೇಷ ನಿಗೂಢ ವ್ಯಕ್ತಿಯನ್ನು ಸಹ ಉಲ್ಲೇಖಿಸಲಾಗಿದೆ.

    ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಧನಂಜಯ್ ಅವರು, ‘ಒಬ್ಬ ನಟ ದೊಡ್ಡ ದೃಷ್ಟಿಕೋನ ಮತ್ತು ಸಿನಿಮಾದ ಬಗ್ಗೆ ಉತ್ಸಾಹ ಹೊಂದಿರುವ ನಿರ್ದೇಶಕರನ್ನು ಕಂಡುಕೊಂಡಾಗ, ಮಗುವಿನಂತೆ ನಟರು ನಟನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಆ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ತಂಡವು ತಮ್ಮ ಹೃದಯ ಮತ್ತು ಆತ್ಮವನ್ನು ಒಂದು ಯೋಜನೆಗೆ ಸೇರಿಸಿದಾಗ ಆ ನಟ ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಾನೆ. ಹೇಮಂತ್ ಎಂ.ರಾವ್, ನಿರ್ಮಾಪಕ ವೈಶಾಕ್ ಜೆ ಗೌಡ, ಸಿನಿಮಾವನ್ನು ಉಸಿರಾಡುವ ಉತ್ಸಾಹಿ ವ್ಯಕ್ತಿಗಳು. ಚರಣ್ ರಾಜ್ ಮತ್ತು ಅದ್ವೈತ ಗುರುಮೂರ್ತಿ ಅಂತಹ ಒಂದು ತಂಡದೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಅವರೆಲ್ಲರೂ ಸಿನಿಮಾದ ಸುತ್ತ ಮಾತ್ರ ಸುತ್ತುವ ವ್ಯಕ್ತಿಗಳು. ಲುಕ್ ಟೆಸ್ಟ್ ಸಮಯದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಕಂಡದ್ದು ಹೇಮಂತ್ ಮತ್ತು ಅವರ ತಂಡವು ನನ್ನ ಎಲ್ಲಾ ಚಿತ್ರಗಳ ಎಲ್ಲಾ ಲುಕ್‌ಗಳನ್ನು ಹೊಂದಿತ್ತು. ನಾನು ಮೊದಲು ಪ್ರಯತ್ನಿಸದ ಹೊಸ ಛಾಯೆಯಲ್ಲಿ ಈ ಪಾತ್ರಗಳನ್ನು ಅವರು ಪ್ರಸ್ತುತಪಡಿಸಬಹುದೇ ಎಂದು ನೋಡಲು ಅವರು ನನ್ನ ಎಲ್ಲಾ ಲುಕ್‌ಗಳ ಬಗ್ಗೆ ಸಂಶೋಧನೆ ಮಾಡಿದ್ದರು. ಸಂಶೋಧನೆ, ನಟನನ್ನು ಹೊಸ ಬೆಳಕಿನಲ್ಲಿ ತೋರಿಸಬೇಕೆಂಬ ಹಸಿವು ನನಗೆ ತುಂಬಾ ಪ್ರಭಾವಿತವಾಗಿತ್ತು’. ಚಿತ್ರದ ಪ್ರಕಾರದ ಬಗ್ಗೆ ಕೇಳಿದಾಗ, ಧನಂಜಯ, ‘666 ಆಪರೇಷನ್ ಡ್ರೀಮ್ ಥಿಯೇಟರ್, ಪ್ರೇಕ್ಷಕರನ್ನು ಆರಂಭದಿಂದಲೇ ಹಿಡಿದಿಟ್ಟುಕೊಳ್ಳುವ ಚಿತ್ರ. ನಾನು ಖಚಿತವಾಗಿ ಹೇಳಬಹುದಾದ ಒಂದು ವಿಷಯವೆಂದರೆ ಈ ಚಿತ್ರವು ವಿಭಿನ್ನ ಜಗತ್ತಿನಲ್ಲಿ ನಡೆಯುತ್ತದೆ ಮತ್ತು ನಾವು ಹಲವಾರು ಅಚ್ಚರಿಗಳನ್ನು ಜೋಡಿಸಿದ್ದೇವೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ಡಾ.ವೈಶಾಕ್ ಜೆ ಗೌಡ ಅವರ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾ ನಿರ್ಮಿಸಲಾಗುತ್ತಿದೆ. ಹೇಮಂತ್ ಎಂ ರಾವ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚರಣ್ ರಾಜ್ ಮತ್ತು ಅದ್ವೈತ ಗುರುಮೂರ್ತಿ ಅವರ ತಂಡವು ಕ್ರಮವಾಗಿ ಸಂಗೀತ ನಿರ್ದೇಶಕ ಮತ್ತು ಛಾಯಾಗ್ರಾಹಕ ಪಾತ್ರಗಳನ್ನು ವಹಿಸಿಕೊಂಡಿದೆ. ವಿಶ್ವಾಸ್ ಕಶ್ಯಪ್ ಈ ಮೂವರೂ ನಿರ್ಮಾಣ ವಿನ್ಯಾಸಕರಾಗಿ ಸೇರಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಂಡವು ಚಿತ್ರದ ತಾರಾಬಳಗ ಮತ್ತು ಪ್ರಕಾರದ ಕುರಿತು ಅಭಿಮಾನಿಗಳಿಗೆ ಹೆಚ್ಚಿನ ಮಾಹಿತಿಯನ್ನು ನೀಡುವ ರೋಮಾಂಚಕಾರಿ ಘೋಷಣೆಗಳ ಪಟ್ಟಿಯನ್ನು ಹೊಂದಿದೆ. ಡಾ. ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅವರ ಲುಕ್ ಬಿಡುಗಡೆಯಾಗುವ ಬಗ್ಗೆ ಈಗಾಗಲೇ ಊಹಾಪೋಹಗಳಿವೆ. 666 ಆಪರೇಷನ್ ಡ್ರೀಮ್ ಥಿಯೇಟರ್‌ನಲ್ಲಿ ಡಾ. ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜುಲೈನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುವ ಯೋಜನೆಗಳೊಂದಿಗೆ ದೊಡ್ಡ ಕ್ಯಾನ್ವಾಸ್ ಹೊಂದಿದೆ.

  • ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಡಾಲಿ, ಶಿವಣ್ಣ

    ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಡಾಲಿ, ಶಿವಣ್ಣ

    ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳ ಮೂಲಕ ವಿಶಿಷ್ಟ ಕಥಾನಕಗಳ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಿರ್ದೇಶಕ ಹೇಮಂತ್ ಎಂ ರಾವ್ (Hemanth M Rao), ಈಗ ತಮ್ಮ ಮುಂದಿನ ಚಿತ್ರ ‘666 ಆಪರೇಷನ್ ಡ್ರೀಮ್ ಥಿಯೇಟರ್’ (666 Operation Dream Theatre) ಮೂಲಕ ಮತ್ತೊಮ್ಮೆ ನಿರ್ದೇಶನದ ಹಾದಿಯಲ್ಲಿ.

    ಧನಂಜಯ ಕೆ.ಎ (Daali Dhananjaya) ಅವರ ಅಭಿನಯದಲ್ಲಿ ಮೂಡಿಬರಲಿರುವ ಈ ಚಿತ್ರವು, 70ರ ದಶಕದ ಶೈಲಿ ಚಿತ್ರದ ವೈಶಿಷ್ಟ್ಯತೆಯಾಗಿದೆ, ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರ ಶಕ್ತಿಯುತ ಪಾತ್ರ, ಪ್ರೇಕ್ಷಕರ ಮನಸ್ಸಿನಲ್ಲಿ ಸಂಚಲನ ಮೂಡಿಸಲಿದೆ. ಇದನ್ನೂ ಓದಿ: Exclusive | ಲಕ್ಷ ಲಕ್ಷ ಹಣ ವಂಚನೆ ಆರೋಪ – ನನ್ನ ಹೆಸರು ಹಾಳು ಮಾಡುವ ಉದ್ದೇಶ ಬಿಟ್ಟು ಬೇರೆನಿಲ್ಲ: ಗೋಲ್ಡ್‌ ಸುರೇಶ್‌

    ಈ ಚಿತ್ರವನ್ನು ಡಾ. ವೈಶಾಖ್ ಜೆ.ಗೌಡ ಅವರು ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡದಲ್ಲಿ ಚರಣ್ ರಾಜ್ ಸಂಗೀತ ಸಂಯೋಜನೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಮತ್ತು ವಿಶ್ವಾಸ್ ಕಾಶ್ಯಪ್ ಕಲಾ ನಿರ್ದೇಶನವನ್ನು ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಹೊಸ ಸಿನಿಮಾದ ರಗಡ್ ಲುಕ್ನಲ್ಲಿ ಕಾಣಿಸಿಕೊಂಡ ಅಜಯ್ ರಾವ್

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಕ್ಟರ್ & ಡಾಕ್ಟರ್ – ಮೈಸೂರಲ್ಲಿ ಅದ್ದೂರಿಯಾಗಿ ನಡೆದ ಡಾಲಿ, ಧನ್ಯತಾ ಮದುವೆ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಕ್ಟರ್ & ಡಾಕ್ಟರ್ – ಮೈಸೂರಲ್ಲಿ ಅದ್ದೂರಿಯಾಗಿ ನಡೆದ ಡಾಲಿ, ಧನ್ಯತಾ ಮದುವೆ

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ (Daali Dhananjay), ಡಾಕ್ಟರ್ ಧನ್ಯತಾ ಅವರ ಜೊತೆ ಭಾನುವಾರ ಶುಭ ಮುಹೂರ್ತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹೊಸಜೀವನಕ್ಕೆ ಕಾಲಿಟ್ಟ ನವಜೋಡಿಗೆ ಸಿನಿತಾರೆಯರು, ಗಣ್ಯರು, ಆಪ್ತರು, ಅಭಿಮಾನಿಗಳು ಶುಭಹಾರೈಸಿದರು.

    ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಟ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಜೋಡಿಯ ವಿವಾಹ ಅದ್ದೂರಿಯಾಗಿ ನೆರವೇರಿತು. ಬೆಳಗ್ಗೆ 8:30ರಿಂದ 10 ಗಂಟೆ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಇದನ್ನೂ ಓದಿ: ಡಾಲಿ ಧನಂಜಯ್ ಕಲ್ಯಾಣ ವೈಭೋಗ

    ಗೋಲ್ಡ್ ಕಲರ್ ಸೀರೆಯಲ್ಲಿ ಧನ್ಯತಾ ಮತ್ತು ಗೋಲ್ಡ್ ಕಲರ್ ಶೇರ್ವಾನಿಯಲ್ಲಿ ಧನಂಜಯ್ ಮಿಂಚಿದರು. ಧನ್ಯತಾ ಕುಟುಂಬದಿಂದ ಧಾರೆ ಶಾಸ್ತ್ರದ ಬಳಿಕ ಮಾಂಗಲ್ಯ ಧಾರಣೆ ನಡೆಯಿತು. ಡಾಲಿ ಮದುವೆಗೆ ಕುಟುಂಬಸ್ಥರು, ಮಠಾಧೀಶರು ಹಾಗೂ ಆಪ್ತರು ಸಾಕ್ಷಿಯಾದರು. ಜೋಡಿಗೆ ಅಕ್ಷತೆ ಹಾಕಿ ಹರಸಿದರು.

    ಡಾಲಿ ಮದುವೆಯಲ್ಲಿ ನಟ ಶಿವರಾಜ್‌ಕುಮಾರ್, ನಟಿ ರಮ್ಯಾ ವಸಿಷ್ಠ ಸಿಂಹ, ಯುವರಾಜ್ ಕುಮಾರ್, ಕಾಂತಾರ ಸಿನಿಮಾ ನಟಿ ಸಪ್ತಮಿ ಗೌಡ, ವಿನಯ್ ರಾಜ್, ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಸೇರಿದಂತೆ ಅನೇಕ ಸಿನಿಮಾ ತಾರೆಯರು ಪಾಲ್ಗೊಂಡು ಜೋಡಿಗೆ ವಿಶ್ ಮಾಡಿದರು. ಇದನ್ನೂ ಓದಿ: Dhananjay Wedding | ಡಾಲಿ ಆರತಕ್ಷತೆಯಲ್ಲಿ ಸೆಲೆಬ್ರಿಟಿಗಳ ದಂಡು – ಮೈಸೂರಿಗೆ ಬಂದ ‘ಪುಷ್ಪ’ ನಿರ್ದೇಶಕ ಸುಕುಮಾರ್

    25ಕ್ಕೂ ಹೆಚ್ಚು ಬಗೆಯ ಸ್ಪೆಷಲ್‌ ಖಾದ್ಯ
    ಧನಂಜಯ್‌ ಮತ್ತು ಧನ್ಯತಾ ಜೋಡಿ ಮದುವೆಗೆ ಆಗಮಿಸಿರುವ ಅತಿಥಿಗಳಿಗಾಗಿ 25 ಕ್ಕೂ ಹೆಚ್ಚು ಬಗೆ ಬಗೆಯ ವಿಶೇಷ ಖಾದ್ಯಗಳನ್ನು ಸಿದ್ಧತೆ ಮಾಡಲಾಗಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕುಟುಂಬಸ್ಥರು, ವಿಐಪಿ, ವಿವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 800 ಬಾಣಸಿಗರಿಂದ ಅಡುಗೆ ತಯಾರಿಯಾಗಿದೆ.

    ತಾಟಿಲಿಂಗು ಮಿಲ್ಕ್ ಶೇಕ್, ಆಮ್ ಪನ್ನ, ಜಾಕ್ ಫ್ರೂಟ್ ಪಾಯಸ, ಕಡ್ಲೆ ಉಸ್ಲಿ, ಫ್ರೂಟ್ ಕೋಸಂಬರಿ, ತೊಂಡೆಕಾಯಿ ಕ್ಯಾಷು ಪಲ್ಯ, ಪೈನಾಪಲ್ ಮದ್ದೂಲಿ, ಸುವರ್ಣ ಗೆಡ್ಡೆ ರವಾ ಫ್ರೈ, ಪನ್ನಿರ್ ಕುರ್ ಕುರೆ, ಅಕ್ಕಿ ರೊಟ್ಟಿ, ಇತಕಿದ ಬೆಳೆ ಕೂಟ್, ಪುದುಚ್ಚೆರಿ ಬಿರಿಯಾನಿ, ನುಗ್ಗೆಕಾಯಿ ಸಾಂಬಾರ್, ಉಡುಪಿ ತಿಳಿಸಾರು, ಸೌತೆಕಾಯಿ ರಸಂ, ಬೆಳೆ ಒಬ್ಬಟ್ಟು, 5 ರಿಂದ 6 ಬಗೆಯ ಸಿಹಿ ಖಾದ್ಯಗಳು ತಯಾರಾಗಿವೆ. ಇದನ್ನೂ ಓದಿ: ಮೈಸೂರು: ನಟ ಧನಂಜಯ್‌, ಡಾಕ್ಟರ್‌ ಧನ್ಯತಾ ಜೋಡಿ ಮದುವೆ – ನೆರವೇರಿದ ವಿವಿಧ ಶಾಸ್ತ್ರಗಳು

  • ಡಾಲಿ ಧನಂಜಯ್ ಕಲ್ಯಾಣ ವೈಭೋಗ

    ಡಾಲಿ ಧನಂಜಯ್ ಕಲ್ಯಾಣ ವೈಭೋಗ

    – ಡಾಕ್ಟರ್ ಜೊತೆ ಹಸೆಮಣೆ ಏರಲು ರೆಡಿಯಾದ ನಟ

    ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಧನಂಜಯ್ (Daali Dhananjay) ಮದುವೆ ಸಂಭ್ರಮ ಮನೆ ಮಾಡಿದೆ. ಡಾಕ್ಟರ್ ಧನ್ಯತಾ ಜೊತೆ ಸಪ್ತಪದಿ ತುಳಿಯಲು ನಟ ಡಾಲಿ ಸಜ್ಜಾಗಿದ್ದಾರೆ.

    ಇಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯುತ್ತಿರುವ ಅದ್ದೂರಿ ಮದುವೆ ಸಮಾರಂಭದಲ್ಲಿ ಧನ್ಯತಾ ಜೊತೆ ಧನಂಜಯ್ ಹಸೆಮಣೆ ಏರಲಿದ್ದಾರೆ. ಅರಸೀಕೆರೆಯ ಕಾಳೇನಹಳ್ಳಿ ಹುಡುಗ ಚಿತ್ರದುರ್ಗದ ಶಿವಪುರದ ಹುಡುಗಿಯ ಜೊತೆ ಕಲ್ಯಾಣವಾಗುತ್ತಿದ್ದಾರೆ.

    ಭಾನುವಾರ ಬೆಳಗ್ಗೆಯಿಂದಲೇ ಧಾರಾ ಮುಹೂರ್ತದ ದಿನದ ಶಾಸ್ತ್ರಗಳು ನಡೆಯುತ್ತಿವೆ. ಮೊದಲು ಮಂಟಪಕ್ಕೆ ದೇವತಾ ಪ್ರವೇಶ ನಂತರ ನವ ಪ್ರಧಾನ ಕಳಸ ಪೂಜೆ, ಕನ್ಯಾದಾನ, ಸಂಬಂಧ ಮಾಲೆ ಅರ್ಪಣೆ ಶಾಸ್ತ್ರ ನೆರವೇರಿದೆ.

    ವಧು-ವರರಿಗೆ ಧಾರಾ ಮುಹೂರ್ತ ನಡೆಯಲಿದೆ. ಶುಭ ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ 8:20 ರಿಂದ 10:00 ರ ವರೆಗೂ ನಡೆಯಲಿದೆ. ಮಾಂಗಲ್ಯ ಧಾರಣೆ ನಂತರ ಸಪ್ತಪದಿ ತುಳಿಯುವುದು, ಅರುಂಧತಿ ನಕ್ಷತ್ರ ದರ್ಶನ ನಡೆಯಲಿದೆ.

    ಬಾಸಿಂಗ ವಿಸರ್ಜನೆ ಶಾಸ್ತ್ರ ನೆರವೇರಲಿದೆ. ಇಂದು ಕೂಡಾ ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಗಣ್ಯರು, ಆಪ್ತರು ಆಗಮಿಸಲಿದ್ದಾರೆ. ನಟ ಯಶ್, ಶಿವಕುಮಾರ್, ಸುದೀಪ್ ಬರುವ ಸಾಧ್ಯತೆಯಿದೆ.

  • Dhananjay Wedding | ಡಾಲಿ ಆರತಕ್ಷತೆಯಲ್ಲಿ ಸೆಲೆಬ್ರಿಟಿಗಳ ದಂಡು – ಮೈಸೂರಿಗೆ ಬಂದ ‘ಪುಷ್ಪ’ ನಿರ್ದೇಶಕ ಸುಕುಮಾರ್

    Dhananjay Wedding | ಡಾಲಿ ಆರತಕ್ಷತೆಯಲ್ಲಿ ಸೆಲೆಬ್ರಿಟಿಗಳ ದಂಡು – ಮೈಸೂರಿಗೆ ಬಂದ ‘ಪುಷ್ಪ’ ನಿರ್ದೇಶಕ ಸುಕುಮಾರ್

    ನಟ ಡಾಲಿ ಧನಂಜಯ್ ಅದ್ಧೂರಿ ಮದುವೆಗೆ (Dhananjay Wedding) ಅದ್ಧೂರಿ ವೇದಿಕೆ ಸಜ್ಜಾಗಿದೆ. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಮದುವೆ ಸಮಾರಂಭ ಜೋರಾಗಿ ನಡೆಯುತ್ತಿದೆ.

    ಇಂದು (ಫೆಬ್ರವರಿ 15) ಧನಂಜಯ್ ಮದುವೆಯ ಆರತಕ್ಷತೆ (Daali Dhananjaya Reception) ನಡೆಯುತ್ತಿದ್ದು, ನಾಳೆ (ಫೆಬ್ರವರಿ 15) ಮದುವೆ ನಡೆಯಲಿದೆ. ಈಗಾಗಲೇ ಆರತಕ್ಷತೆಗೆ ದೇಶ ವಿದೇಶದಿಂದ ಧನಂಜಯ್ ಸ್ನೇಹಿತರು ಆತ್ಮೀಯರು ಆಗಮಿಸುತ್ತಿದ್ದಾರೆ. ನಟನ ಮದುವೆಗೆ ರಾಜಕೀಯ ಗಣ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳ ದಂಡೇ ಆಗಮಿಸಿದೆ.

    ಸೆಲೆಬ್ರಿಟಿಗಳ ದಂಡು:
    ಸ್ಯಾಂಡಲ್‌ವುಡ್‌ ತಾರೆಯರಾದ ಸಪ್ತಮಿ ಗೌಡ, ಅಜಯ್ ರಾವ್, ನೀನಾಸಂ ಸತೀಶ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಬೈಟ್, ಅವಿನಾಶ್, ಮಾಳವಿಕ ಅವಿನಾಶ್, ನಟ ಉಪೇಂದ್ರ, ಅರುಣ್‌ ಸಾಗರ್‌, ಶ್ರೀಮುರಳಿ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಧ್ರುವ ಸರ್ಜಾ, ಶ್ರದ್ಧಾ ಶ್ರೀನಾಥ್‌, ಶೃತಿ ಹರಿಹರನ್‌, ನಿಧಿ ಸುಬ್ಬಯ್ಯ ಆಗಮಿಸಿದ್ದಾರೆ. ಅಲ್ಲದೇ ರಾಜಕೀಯ ಗಣ್ಯರ ಪೈಕಿ ಸಚಿವ ಜಮೀರ್‌ ಅಹ್ಮದ್‌, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಶಾಸಕ ಶಿವಲಿಂಗೇಗೌಡ, ಸಚಿವ ಜಮೀರ್ ಅಹ್ಮದ್, ಕೇಂದ್ರ ಸಚಿವ ವಿ. ಸೋಮಣ್ಣ ಶಾಸಕ ಪ್ರದೀಪ್ ಈಶ್ವರ್, ಬಿ.ವೈ ವಿಜಯೇಂದ್ರ, ಸಂಸದ ಯದುವೀರ್ ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗೆ ಶುಭಹಾರೈಸಿದ್ದಾರೆ.

    ʻಪುಷ್ಪʼ ಸಿನಿಮಾ ನಿರ್ದೇಶಕ ಸುಕುಮಾರ್‌ ಭಾಗಿ:
    ವಿಶೇಷವೆಂದರೆ ಟಾಲಿವುಡ್‌ನ ಖ್ಯಾತ ಸಿನಿಮಾ ಬರಹಗಾರ, ‘ಪುಷ್ಪ’ ಚಿತ್ರದ ನಿರ್ದೇಶಕ ಸುಕುಮಾ‌ರ್ ಅವರು ಡಾಲಿ ಮದುವೆಗಾಗಿ ಮೈಸೂರಿಗೆ ಆಗಮಿಸಿದ್ದಾರೆ. ಆರತಕ್ಷತೆಗೂ ಮುನ್ನ ಖಾಸಗಿ ಹೋಟೆಲ್‌ನಲ್ಲಿ ಧನಂಜಯ್‌ ಅವರನ್ನ ಭೇಟಿಯಾದರು. ಬಳಿಕ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡರು. ಭಾನುವಾರ ಸುಕುಮಾರ್ ಅವರು ಡಾಲಿ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.

    ಪುಷ್ಪ-1, ಪುಷ್ಪ-2 ಸಿನಿಮಾದಲ್ಲಿ ಧನಂಜಯ್ ಅವರು ಜಾಲಿ ರೆಡ್ಡಿ ಪಾತ್ರದಲ್ಲಿ ಅಭಿನಯಿಸಿದ್ದರು. ಈ ತಿಂಗಳು ಆರಂಭದಲ್ಲಿ ಧನಂಜಯ್ ಹೈದರಾಬಾದ್‌ಗೆ ತೆರಳಿ ಪುಷ್ಪ ಚಿತ್ರತಂಡವನ್ನು ಮದುವೆಗೆ ಆಹ್ವಾನಿಸಿದ್ದರು.

    ಡಾಲಿ ಧನಂಜಯ್ ಮದುವೆ ಸಮಾರಂಭಕ್ಕೆ ಬುಧವಾರ 20,000ಕ್ಕೂ ಅಧಿಕ ಮಂದಿ ಆಗಮಿಸುವ ಸಾಧ್ಯತೆಯಿದೆ. ವೀಕೆಂಡ್‌ನಲ್ಲಿ ಮದುವೆ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆಯಿದೆ. ಹಾಗೇ ಇನ್ನೂ ಹೆಚ್ಚಿನ ಸೆಲೆಬ್ರಿಟಿಗಳು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಮಠಾಧೀಶರು ಡಾಲಿ ಮದುವೆ ಆಗಮಿಸಲಿದ್ದಾರೆ.

  • ಮೈಸೂರು: ನಟ ಧನಂಜಯ್‌, ಡಾಕ್ಟರ್‌ ಧನ್ಯತಾ ಜೋಡಿ ಮದುವೆ – ನೆರವೇರಿದ ವಿವಿಧ ಶಾಸ್ತ್ರಗಳು

    ಮೈಸೂರು: ನಟ ಧನಂಜಯ್‌, ಡಾಕ್ಟರ್‌ ಧನ್ಯತಾ ಜೋಡಿ ಮದುವೆ – ನೆರವೇರಿದ ವಿವಿಧ ಶಾಸ್ತ್ರಗಳು

    – ಆರತಕ್ಷತೆಗೆ 25,000 ಜನರಿಗೆ ಊಟದ ವ್ಯವಸ್ಥೆ; ಮೆನುವಿನಲ್ಲಿ ಏನೇನಿದೆ?

    ಮೈಸೂರು: ನಟ ಡಾಲಿ ಧನಂಜಯ್‌ (Daali Dhananjay) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಡಾಕ್ಟರ್‌ ಧನ್ಯತಾ ಅವರ ಜೊತೆ ನಟ ಡಾಲಿ ಹಸೆಮಣೆ ಏರಲಿದ್ದಾರೆ. ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಇಂದು ಮದುವೆ ಶಾಸ್ತ್ರಗಳು ನಡೆಯುತ್ತಿದೆ. ಇಂದು ಸಂಜೆ ಆರತಕ್ಷತೆ, ನಾಳೆ ಧಾರಾ ಮುಹೂರ್ತ ಶುಭಕಾರ್ಯ ನಡೆಯಲಿದೆ. ಗಣ್ಯರು, ಸಿನಿ ತಾರೆಯರು, ಆಪ್ತರು ಡಾಲಿ ಮದುವೆಯಲ್ಲಿ ಪಾಲ್ಗೊಂಡು ಜೋಡಿಗೆ ಶುಭಹಾರೈಸುತ್ತಿದ್ದಾರೆ.

    ಇಂದು ಬೆಳಗ್ಗೆಯಿಂದ ವಸ್ತುಪ್ರದರ್ಶನ ಮೈದಾನದಲ್ಲಿ ಹಲವು ಶಾಸ್ತ್ರಗಳು ನಡೆದವು. ಗಂಗೆ ತರೋ ಶಾಸ್ತ್ರ, ತಂದೆ-ತಾಯಿಯರ ವಾಗ್ದಾನ ಶಾಸ್ತ್ರ, ವಧು-ವರರ ನಿರೀಕ್ಷಣೆ ಶಾಸ್ತ್ರ ನಡೆಯಿತು. ಇದನ್ನೂ ಓದಿ: Photo Gallery: ಮೈಸೂರಲ್ಲಿ ನಟ ಡಾಲಿ ಧನಂಜಯ್‌ ಮದುವೆ ಸಂಭ್ರಮ

    ಗೌರಿ ಪೂಜೆ, ಬಳೆ ಶಾಸ್ತ್ರ, ವಧು-ವರರ ಪ್ರಥಮ ಶಾಸ್ತ್ರ ಕೂಡ ನಡೆಯಿತು. ನಟ ಡಾಲಿ ಮತ್ತು ಡಾಕ್ಟರ್‌ ಧನ್ಯತಾ ಜೋಡಿ ಪರಸ್ಪರರು ಹೂವಿನ ಹಾರ ಬದಲಾಯಿಸಿಕೊಂಡರು. ಧನ್ಯತಾ ಅವರ ಕಾಲಿಗೆ ನಟ ಕಾಲುಂಗುರು ತೊಡಿಸಿದರು.

    ಮದುವೆ ಸಂಭ್ರಮದಲ್ಲಿದ್ದ ನಟನಿಗೆ ‘ಪಬ್ಲಿಕ್‌ ಟಿವಿ’ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ ಅವರು ವಿಶ್‌ ಮಾಡಿದರು. ಇಂದು ಸಂಜೆ ಆರತಕ್ಷತೆ ಸಮಾರಂಭ ನಡೆಯಲಿದೆ. ಭಾನುವಾರ ಧಾರಾ ಮುಹೂರ್ತ ನಡೆಯಲಿದೆ. ಇದನ್ನೂ ಓದಿ: ಹಳದಿ ಶಾಸ್ತ್ರ ಸಂಭ್ರಮದಲ್ಲಿ ಮಿಂದೆದ್ದ ಡಾಲಿ ಧನಂಜಯ್‌, ಧನ್ಯತಾ ಜೋಡಿ

    ಆರತಕ್ಷತೆಗೆ 25,000 ಜನರಿಗೆ ಊಟದ ವ್ಯವಸ್ಥೆ
    ಸಂಜೆ ಆರತಕ್ಷತೆಗೆ 25,000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹೋಳಿಗೆ, ತುಪ್ಪ, ಹೆಸರುಬೆಳೆ ಪಾಯಸ, ಸ್ವೀಟ್ ಕಾರ್ನ್ ಕೊಸುಂಬರಿ, ಕಡ್ಲೆಕಾಳು ಉಸ್ಲಿ, ಮಸಾಲ್ ದೋಸೆ, ಕಾಯಿ ಚಟ್ನಿ, ರುಮಾಲಿ ರೊಟ್ಟಿ, ಪನ್ನೀರ್ ಗ್ರೇವಿ, ಬೆಂಡೆಕಾಯಿ ಪ್ರೈ, ಮೆಣಸಿನಕಾಯಿ ಬಜ್ಜಿ, ವೆಜ್ ಬಿರಿಯಾನಿ ರಾಯತ, ಅನ್ನ, ತುಪ್ಪ, ಆಂಧ್ರ ಪಪ್ಪು, ತಿಳಿಸಾರು, ಮೊಸರು ಮೆನುವಿನಲ್ಲಿದೆ.

    ಐದು ಕೌಂಟರ್ ಇದ್ದು, ಮಹಿಳೆಯರಿಗೆ ಪ್ರತ್ಯೇಕವಾದ ಕೌಂಟರ್ ಮಾಡಿದ್ದೇವೆ. ನಾಳೆ ಬೆಳಗ್ಗೆ ಟಿಫನ್ 5,000 ಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಮಧ್ಯಾಹ್ನ 15,000 ಜನಕ್ಕೆ ಊಟದ ವ್ಯವಸ್ಥೆ ಮಾಡ್ತಿದ್ದೇವೆ. 170 ಜನ ಬಾಣಸಿಗರಿಂದ ಅಡುಗೆ ತಯಾರಿ ನಡೆಯುತ್ತಿದೆ. ಡಾಲಿ ಹಾಗೂ ಅವರ ಮನೆಯವರಿಗೆ ಹೋಳಿಗೆ ಊಟ ಹಾಕಿಸ್ಬೇಕು ಅಂತ ಆಸೆ ಇತ್ತು. ಹಾಗಾಗಿ ಹೋಳಿಗೆ ಸಿದ್ಧ ಮಾಡ್ತಿದ್ದೀವಿ ಎಂದು ಎಂಎನ್‌ಜೆ ಕ್ಯಾಟರಿಂಗ್ ಮಾಲೀಕ ಜಗದೀಶ್ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಕೊಟ್ಟ ಗಿಫ್ಟ್