Tag: ಡಾಲಿ ಧನಂಜಯ

  • ಡಾಲಿ ಹುಟ್ಟುಹಬ್ಬಕ್ಕೆ ಜಿಂಗೋ ಲುಕ್ ಪೋಸ್ಟರ್ ರಿಲೀಸ್

    ಡಾಲಿ ಹುಟ್ಟುಹಬ್ಬಕ್ಕೆ ಜಿಂಗೋ ಲುಕ್ ಪೋಸ್ಟರ್ ರಿಲೀಸ್

    ಡಾಲಿ ಪಿಚ್ಚರ್ಸ್ ಮತ್ತು ತ್ರಿಶೂಲ್ ವಿಜನರಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ (Dolly Dhananjay) ಅಭಿನಯದ ಜಿಂಗೋ (Jingo) ಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ಅನ್ನು ನಟ ಧನಂಜಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಬಿಡುಗಡೆಯಾದ ಚಿತ್ರದ ಅನೌನ್ಸ್ಮೆಂಟ್ ವಿಡಿಯೋಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಚರ್ಚೆಯನ್ನು ಸೃಷ್ಟಿಸಿತು, ಡಾಲಿ ಧನಂಜಯ ಅವರ ಜಿಂಗೋ ಮೋನೋಲಾಗ್ ಮತ್ತು ಅದರ ಜೊತೆಗಿನ ಸಂಗೀತ ನರ ನರ ಜಿಂಗೋ ಜನರ ಮೆಚ್ಚುಗೆ ಪಡೆಯಿತು.

    ಪ್ರೇಕ್ಷಕರ ಅಗಾಧ ಪ್ರತಿಕ್ರಿಯೆಯಿಂದ ಉತ್ಸಾಹಗೊಂಡ ಚಿತ್ರ ನಿರ್ಮಾಪಕರು ಕಥೆಯ ವ್ಯಾಪ್ತಿ ಮತ್ತು ಚಿತ್ರದ ಕ್ಯಾನ್ವಾಸ್ ಅನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ. ಸಣ್ಣ ಪಟ್ಟಣದ ಕಥೆಯಾಗಿ ಆರಂಭವಾದದ್ದು ಇದೀಗ ಚಿತ್ರ ತನ್ನ ಕ್ಯಾನ್ವಾಸ್ ಅನ್ನು ವಿಸ್ತರಿಸಿಕೊಂಡಿದ್ದು ಒಂದು ಅಪ್ಪಟ ದೊಡ್ಡ ಪರದೆ ವೀಕ್ಷಣೆಗೆ ಸರಿಹೊಂದುವಂತೆ ದೃಶ್ಯಾವಳಿಗಳನ್ನು ಹೆಣೆಯಲಾಗಿದೆ.  ಇದನ್ನೂ ಓದಿ: ದರ್ಶನ್ ಬಳ್ಳಾರಿ ಜರ್ನಿ – ಆ.30ರಂದು ಅರ್ಜಿ ವಿಚಾರಣೆ

    ನಮಗೆ ಸಿಕ್ಕ ಪ್ರತಿಕ್ರಿಯೆ ನಮ್ಮನ್ನು ದೊಡ್ಡದಾಗಿ ಯೋಚಿಸಲು ಪ್ರೇರೇಪಿಸಿದೆ. 2026ರಲ್ಲಿ ವೀಕ್ಷಕರಿಗೆ ವಿಶಿಷ್ಟ ಚಿತ್ರರಂಗದ ಅನುಭವವನ್ನು ನೀಡುತ್ತದೆ. ಪೊಲಿಟಿಕಲ್ ಸಟೈರ್, ಕಾಮಿಡಿ, ಆಕ್ಷನ್, ಥ್ರಿಲ್ಲರ್ ಎಲ್ಲ ಅಂಶಗಳನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಅತ್ಯುತ್ತಮ ಮನರಂಜನೆ ಕೊಡಬೇಕು ಎಂಬುದೇ ನಮ್ಮ ಗುರಿ. ಸದ್ಯ ಕನ್ನಡ, ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಅತ್ಯುತ್ತಮ ನಟರ ತಾರಾ ಬಳಗವಿರುತ್ತದೆ ಎಂದು ನಿರ್ಮಾಣ ತಂಡ ತಿಳಿಸಿದೆ. ಇದನ್ನೂ ಓದಿ: ಯಶ್ ತಾಯಿ ಪುಷ್ಪಗೆ ದೀಪಿಕಾ ದಾಸ್ ತಿರುಗೇಟು: ಪುಷ್ಪಮ್ಮ ಹೇಳಿದ್ದೇನು?

    ಈಗ ಬಿಡುಗಡೆಯಾಗಿರುವ ಪೋಸ್ಟರ್ ಅಲ್ಲಿ ತುಂಬಾ ವಿವರಗಳಿವೆ. ಮೇಲ್ನೋಟಕ್ಕೆ ಒಂದು ಫನ್ ಪೋಸ್ಟರ್ ಥರ ಕಾಣುತ್ತೆ, ಸೂಕ್ಷ್ಮವಾಗಿ ನೋಡುತ್ತಾ ಹೋದಂತೆ ತೆರೆದುಕೊಳ್ಳುತ್ತೆ. ಸಿನಿಮಾ ಕೂಡ ಇದೇ ಇರುತ್ತದೆ. ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಇದರಲ್ಲಿ Takeaway ಗಳಿರುತ್ತದೆ, ಒಟ್ಟಿನಲ್ಲಿ 2026 ಕ್ಕೆ ಒಂದು ಮಜಾ ಚಿತ್ರಕ್ಕೆ ಪ್ರೇಕ್ಷಕರು ಸಜ್ಜಾಗಲಿ ಎನ್ನುತ್ತಾರೆ ನಿರ್ದೇಶಕ ಶಶಾಂಕ್ ಸೋಗಾಲ್.

  • ವಿದ್ಯಾಪತಿಗೆ ನಡುಕ ಹುಟ್ಟಿಸಿದ ‘ಕೆಜಿಎಫ್’ ಗರುಡ!

    ವಿದ್ಯಾಪತಿಗೆ ನಡುಕ ಹುಟ್ಟಿಸಿದ ‘ಕೆಜಿಎಫ್’ ಗರುಡ!

    ನಂಜಯ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಚಿತ್ರ ಇಂದು (ಏ.10) ಬಿಡುಗಡೆಯಾಗಿದೆ. ಸಾಕಷ್ಟು ಪಾತ್ರಗಳಲ್ಲಿ ಅಭಿನಯಿಸುತ್ತಾ, ಇತ್ತೀಚಿನ ದಿನಗಳಲ್ಲಿ ನಾಯಕ ನಟನಾಗಿ ಚಾಲ್ತಿಯಲ್ಲಿರುವ ನಾಗಭೂಷಣ್ (Nagabhushan) ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ನಾಗಭೂಷಣ್ ಈ ಸಿನಿಮಾ ನಾಯಕ ಎಂಬ ಸುದ್ದಿ ಹೊರ ಬಿದ್ದಾಕ್ಷಣವೇ ಬಹುತೇಕರ ಕಲ್ಪನೆ ಹಾಸ್ಯದ ಚೌಕಟ್ಟಿನಲ್ಲಿಯೇ ಗಿರಕಿ ಹೊಡೆದಿತ್ತು. ಆದರೆ ಟ್ರೈಲರ್ ಬಿಡುಗಡೆಗೊಳ್ಳುತ್ತಲೇ ಒಂದಿಡೀ ಚಿತ್ರಣವೇ ಬದಲಾಗಿ ಹೋಗಿತ್ತು. ಯಾಕೆಂದರೆ, ಅಲ್ಲಿ ಸುಳಿದಿದ್ದು ಭಿನ್ನ ಕಥನ, ಅದಕ್ಕೆ ತಕ್ಕುದಾದ ಪಾತ್ರಗಳ ಸುಳಿವು. ಹಾಸ್ಯವೆಂಬುದು ಈ ಸಿನಿಮಾದ ಕಥೆಯ ಆತ್ಮವೆಂಬುದು ನಿಜ. ಆದರೆ, ಅದರಾಚೆಗೂ ಹಬ್ಬಿಕೊಂಡಿರುವ ಬೆರಗಿನ ದೃಶ್ಯಗಳನ್ನು ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

    ಇಶಾಂ ಹಾಗೂ ಹಸೀಮ್ ಸಿದ್ಧಪಡಿಸಿದ್ದ ಕಥೆ ಕೇಳಿಯೇ ಡಾಲಿ ಧನಂಜಯ ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ತನ್ನ ಗೆಳೆಯ ನಾಗಭೂಷಣ್ ನಾಯಕನಾಗಿ ನಟಿಸುತ್ತಿರೋದರಿಂದ ನಿರ್ಮಾಣದಾಚೆಗಿನ ಕಾಳಜಿಯೂ ಡಾಲಿಗಿತ್ತು. ಕಡೆಗೂ ನಿರ್ದೇಶಕರು ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದರ ಬಗೆಗಿನ ಹೆಮ್ಮೆಯ ಭಾವ ಧನಂಜಯ ಮಾತುಗಳಲ್ಲಿ ಧ್ವನಿಸುತ್ತಿತ್ತು. ಅಂಥಾದ್ದೊಂದು ಮೆಚ್ಚುಗೆಯೀಗ ಸಿನಿಮಾ ನೋಡಿದವರೆಲ್ಲರಲ್ಲೂ ಮೂಡಿಕೊಂಡಿದೆ. ಅದುವೇ ‘ವಿದ್ಯಾಪತಿ’ಯ ಯಶಸ್ಸಿನ ಮುನ್ಸೂಚನೆಯಂತೆಯೂ ಕಾಣಿಸುತ್ತಿದೆ. ಇದನ್ನೂ ಓದಿ:ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?


    ಈ ಸಿನಿಮಾದಲ್ಲಿ ಹಲವಾರು ಆಕರ್ಷಣೆಗಳಿದ್ದಾವೆ. ಅದರಲ್ಲಿ ಪ್ರಧಾನವಾಗಿ ಹಾಸ್ಯದೊಂದಿಗೆ ಮಾಸ್ ಸನ್ನಿವೇಶಗಳೂ ಕೂಡ ಸ್ಥಾನ ಪಡೆದುಕೊಳ್ಳುತ್ತವೆ. ಅದರಲ್ಲಿಯೂ ವಿಶೇಷವಾಗಿ ಕೆಜಿಎಫ್ ಚಿತ್ರದ ಗರುಡ ಪಾತ್ರಧಾರಿಯಾಗಿ ಪ್ರಸಿದ್ಧಿ ಪಡೆದುಕೊಂಡಿರುವ ಗರುಡ ರಾಮ್ (Garuda Ram) ಈ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಆ ಪಾತ್ರದ ಮೂಲಕವೇ ವಿದ್ಯಾಪತಿಯ ಕಥನ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳುತ್ತದೆ. ಅದನ್ನು ಪ್ರೇಕ್ಷಕರೆಲ್ಲ ಸಂಭ್ರಮಿಸಿದ್ದಾರೆ. ಈ ಪಾತ್ರದ ಬಗ್ಗೆ, ಅದರ ಇರುವಿಕೆಯ ದೃಶ್ಯಾವಳಿಗಳನ್ನು ಸಿನಿಮಾ ಮಂದಿರಗಳಲ್ಲಿಯೇ ಹೋಗಿ ನೋಡಿದರೆ ನೈಜ ಅನುಭೂತಿ ದಕ್ಕಲು ಸಾಧ್ಯ. ಇದನ್ನೂ ಓದಿ: ಹಿಟ್ಲರ್ ಸಖಿ ಮಲೈಖಾ ಈಗ ಸೂಪರ್ ಸ್ಟಾರ್ ವಿದ್ಯಾ!

     

    View this post on Instagram

     

    A post shared by Garuda Ram (@garuda_ram_official)

    ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್ (Malaika Vasupal), ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಸಿನಿಮಾ ಬಗ್ಗೆ ಓರ್ವ ನಟನಾಗಿ ಅತೀವ ಪ್ರೀತಿ ಹೊಂದಿರುವ ಡಾಲಿ ಧನಂಜಯ, ಹೊಸಾ ಪ್ರತಿಭೆಗಳು ಮತ್ತು ತನ್ನ ವಲಯದವರನ್ನು ಬೆಳೆಸುವ ಗುಣ ಹೊಂದಿದ್ದಾರೆ. ಹಾಗಾಗಿ ಅವರು ‘ವಿದ್ಯಾಪತಿ’ (Vidyapati) ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಮೊದಲ ದಿನವೇ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರುವ ಭರಪೂರ ಮೆಚ್ಚುಗೆ ಕಂಡು ಚಿತ್ರತಂಡ ಖುಷಿಗೊಂಡಿದೆ. ಬೇಸಿಗೆ ರಜೆಯ ಮಜಕ್ಕೆ ಮತ್ತಷ್ಟು ಮೆರುಗು ತುಂಬಬಲ್ಲ ಈ ಸಿನಿಮಾ ಕುಟುಂಬ ಸಮೇತರಾಗಿ ನೋಡಿಸಿಕೊಳ್ಳುವ ಗುಣಗಳೊಂದಿಗೆ ಗಮನ ಸೆಳೆಯುತ್ತಿದೆ.

  • ಹಿಟ್ಲರ್ ಸಖಿ ಮಲೈಖಾ ಈಗ ಸೂಪರ್ ಸ್ಟಾರ್ ವಿದ್ಯಾ!

    ಹಿಟ್ಲರ್ ಸಖಿ ಮಲೈಖಾ ಈಗ ಸೂಪರ್ ಸ್ಟಾರ್ ವಿದ್ಯಾ!

    ‘ಉಪಾಧ್ಯಕ್ಷ’ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಮಲೈಕಾ ವಸುಪಾಲ್. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಾಯಕಿಯಾಗಿ ಪ್ರಸಿದ್ಧಿ ಪಡೆದುಕೊಂಡಿದ್ದ ಅವರು ಇದೀಗ ಡಾಲಿ ಧನಂಜಯ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಚಿತ್ರದ ಮೂಲಕ ಎರಡನೇ ಬಾರಿ ನಾಯಕಿಯಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಈ ಬಾರಿ ಮತ್ತೊಂದು ತೆರನಾದ ಚೆಂದದ ಪಾತ್ರ ಸಿಕ್ಕ ಖುಷಿಯೂ ಮಲೈಕಾರಲ್ಲಿದೆ. ಮೊದಲ ಹೆಜ್ಜೆಯಲ್ಲಿಯೇ ಸಿನಿಮಾ ರಂಗದಲ್ಲಿ ನೆಲೆ ಕಂಡುಕೊಳ್ಳುವ ಭರವಸೆ ಮೂಡಿಸಿಕೊಂಡಿದ್ದ ಮಲೈಕಾ, ಆ ನಂತರದಲ್ಲಿ ಭಿನ್ನ ಬಗೆಯ ಪಾತ್ರಕ್ಕಾಗಿ ಅನ್ವೇಷಣೆ ಆರಂಭಿಸಿದ್ದರು. ಆ ಹಾದಿಯಲ್ಲಿ ಅನೇಕ ಕಥೆಗಳೂ ಕೂಡಾ ಅವರನ್ನು ಅರಸಿ ಬಂದಿತ್ತು. ಅದೆಲ್ಲದರ ನಡುವೆ, ವರ್ಷದ ಹಿಂದೆ ಬಹುವಾಗಿ ಕಾಡಿದ್ದದ್ದು ‘ವಿದ್ಯಾಪತಿ’ (Vidyapati) ಚಿತ್ರದ ಪಾತ್ರ. ಆ ಕಾರಣದಿಂದಲೇ ಒಪ್ಪಿ ನಟಿಸಿರುವ ಮಲೈಕಾಗೀಗ (Malaika Vasupal) ಒಂದೊಳ್ಳೆ ಸಿನಿಮಾದ ಭಾಗವಾದ ತೃಪ್ತಿ ದೊರಕಿದೆ. ಇದನ್ನೂ ಓದಿ: ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!

    ‘ಹಿಟ್ಲರ್ ಕಲ್ಯಾಣ’ ಎಂಬ ಧಾರಾವಾಹಿಯ ಲವಲವಿಕೆಯ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆದ್ದವರು ಮಲೈಕಾ. ಪಕ್ಕಾ ಮಾಸ್ ಲುಕ್ಕಿನಲ್ಲಿಯೂ ಮಿಂಚಿದ್ದ ಈಕೆ ನಾಯಕಿಯಾಗಿ ಮಿಂಚುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದದ್ದು ನಿಜ. ಇಂಥಾ ಮಲೈಕಾ ವಿದ್ಯಾಪತಿ ಚಿತ್ರದ ನಾಯಕಿಯಾಗಬೇಕೆಂದು ಆರಂಭದಲ್ಲಿಯೇ ಚಿತ್ರತಂಡ ನಿರ್ಧರಿಸಿತ್ತಂತೆ. ಈ ಕುರಿತಾಗಿ ಕರೆ ಬಂದಾಗ ಆರಂಭಿಕವಾಗಿ ಮಲೈಕಾ ಒಪ್ಪಿಕೊಳ್ಳಲು ಕಾರಣವಾದದ್ದು ಅದು ಡಾಲಿ ನಿರ್ಮಾಣ ಮಾಡುತ್ತಿರೋ ಸಿನಿಮಾ ಅನ್ನೋದು. ಆ ನಂತರ ಒಂದಿಡೀ ಕಥೆ ಮತ್ತು ಪಾತ್ರದ ಬಗ್ಗೆ ಕೇಳಿದಾಗ ಮಲೈಕಾ ಅಕ್ಷರಶಃ ಥ್ರಿಲ್ ಆಗಿದ್ದರಂತೆ. ಇದನ್ನೂ ಓದಿ:ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?

    ಇಲ್ಲಿ ಅವರು ಸೂಪರ್ ಸ್ಟಾರ್ ನಟಿ ವಿದ್ಯಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ ಪಾತ್ರದ ಒಂದಷ್ಟು ಝಲಕ್ಕುಗಳು ಟ್ರೈಲರ್ ಮೂಲಕ ಅನಾವರಣಗೊಂಡಿವೆ. ಹಾಗಂತ ಅದರ ಚಹರೆ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಮಲೈಕಾ ಪಾತ್ರದ ಮತ್ತೊಂದಷ್ಟು ರಹಸ್ಯಗಳು ಚಿತ್ರಮಂದಿರದಲ್ಲಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ. ಇದೀಗ ಪ್ರತಿಭಾನ್ವಿತರ ತಂಡದೊಂದಿಗೆ, ಒಂದೊಳ್ಳೆ ಪಾತ್ರ ನಿರ್ವಹಿಸಿರುವ ಖುಷಿ ಹೊಂದಿರುವ ಮಲೈಕಾಗೆ, ವಿದ್ಯಾಪತಿ ಚಿತ್ರ ತನ್ನ ವೃತ್ತಿ ಬದುಕಿನ ದಿಕ್ಕುದೆಸೆ ಬದಲಿಸುತ್ತದೆಂಬ ಗಾಢ ನಂಬಿಕೆಯಿದೆ. ಈಗಾಗಲೇ ಅವರ ಪಾತ್ರದ ಬಗ್ಗೆ ಮೆಚ್ಚುಗೆಗಳು ಕೇಳಿ ಬರುತ್ತಿವೆ. ಈ ಬಾರಿ ನಾಗಭೂಷಣ್ ಮತ್ತು ಮಲೈಕಾ ಜೋಡಿ ಮೋಡಿ ಮಾಡುವ ಎಲ್ಲ ಲಕ್ಷಣಗಳೂ ಕಾಣಿಸಲಾರಂಭಿಸಿವೆ.

    ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಸಿನಿಮಾ ಬಗ್ಗೆ ಓರ್ವ ನಟನಾಗಿ ಅತೀವ ಪ್ರೀತಿ ಹೊಂದಿರುವ ಡಾಲಿ ಧನಂಜಯ, ಹೊಸಾ ಪ್ರತಿಭೆಗಳು ಮತ್ತು ತನ್ನ ವಲಯದವರನ್ನು ಬೆಳೆಸುವ ಗುಣ ಹೊಂದಿದ್ದಾರೆ. ಅಂತಾದ್ದೊಂದು ಅಕ್ಕರಾಸ್ಥೆಯಿಂದಲೇ ವಿದ್ಯಾಪತಿ ಚಿತ್ರವನ್ನವರು ನಿರ್ಮಾಣ ಮಾಡಿದ್ದಾರೆ. ಇಂದು (ಏ.10) ಸಿನಿಮಾ ರಿಲೀಸ್‌ ಆಗಿದೆ.

  • ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?

    ಹೆಂಡತಿ ಕಾಸಲ್ಲಿ ಶೋಕಿ ಮಾಡ್ತಾರಾ ನಟ ನಾಗಭೂಷಣ್?

    ಟ ನಾಗಭೂಷಣ್‌ (Nagabhushan) ನಟನೆಯ ‘ವಿದ್ಯಾಪತಿ’ (Vidyapati) ಸಿನಿಮಾ ಇಂದು (ಏ.10) ಬಿಡುಗಡೆಯಾಗಿದೆ. ಡಾಲಿ ಧನಂಜಯ ನಿರ್ಮಾಣ ಮಾಡಿರುವ ಈ ಸಿನಿಮಾದ ಟ್ರೈಲರ್ ಈಗಾಗಲೇ ಸಂಚಲನ ಸೃಷ್ಟಿಸಿದೆ. ಬಹುತೇಕ ಎಲ್ಲಾ ಅಭಿರುಚಿಯ ಪ್ರೇಕ್ಷಕರು ಕೂಡ ‘ವಿದ್ಯಾಪತಿ’ಯನ್ನು ಮೊದಲ ದಿನವೇ ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ‘ವಿದ್ಯಾಪತಿ’ ಭಿನ್ನ ಕಥಾನಕವನ್ನೊಳಗೊಂಡಿರೋ ಚಿತ್ರ. ಇದನ್ನೂ ಓದಿ:‘ಕಪಟ ನಾಟಕ ಸೂತ್ರಧಾರಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಿದರು ಡಾಲಿ!

    ಇಶಾಂ ಹಾಗೂ ಹಸೀಂ ನಿರ್ದೇಶನ ಮಾಡಿರುವ ಈ ಸಿನಿಮಾದ ಅಸಲಿ ಸ್ವಾದದ ಸುಳಿವು ಟ್ರೈಲರ್ ಮೂಲಕವೇ ಜಾಹೀರಾಗಿತ್ತು. ಒಟ್ಟಾರೆ ಕಥನದ ಕೊಂಬೆ ಕೋವೆಗಳ ಸೂಕ್ಷ್ಮಗಳೂ ಕೂಡ ಇದರೊಂದಿಗೆ ಜಾಹೀರಾದಂತಾಗಿತ್ತು. ಈ ಬಗ್ಗೆ ನಾಯಕ ನಟ ನಾಗಭೂಷಣ್ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ನಾಗಭೂಷಣ್ ಅವರಿಗೆ ಈ ಸಿನಿಮಾದಲ್ಲಿ ಅತ್ಯಪರೂಪದ ಪಾತ್ರ ಸಿಕ್ಕಿದೆ. ಸೂಪರ್ ಸ್ಟಾರ್ ವಿದ್ಯಾಳ ಪತಿ ಎಂಬುದನ್ನೇ ಬಲವಾಗಿಸಿಕೊಂಡು, ಅತೀವ ಹಣದ ವ್ಯಾಮೋಹದ ಪಾತ್ರದಲ್ಲಿ ಅವರು ನಟಿಸಿದ್ದಾರಂತೆ. ಅದರಾಚೆಗೆ ಪಕ್ಕಾ ಮಾಸ್ ಅವತಾರದಲ್ಲಿಯೂ ಕೂಡ ನಾಗಭೂಷಣ್ ಕಾಣಿಸಿಕೊಂಡಿದ್ದಾರಾ? ಇಂಥಾದ್ದೊಂದು ಪ್ರಶ್ನೆ ಟ್ರೈಲರ್ ನೋಡಿದ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಇಂದು ಮಜವಾದ ಉತ್ತರ ಸಿಗಲಿದೆ. ಇದನ್ನೂ ಓದಿ:ಕೊಲೆ ಕೇಸ್ ಸಾಕ್ಷ್ಯಿಧಾರನ ಜೊತೆ ಪ್ರಭಾವ ಬೀರುತ್ತಿದ್ದಾರಾ ದರ್ಶನ್?

    ಸೂಪರ್ ಸ್ಟಾರ್ ವಿದ್ಯಾಳ ಪತಿಯಾಗಿ, ಆ ಪ್ರಭೆಯಲ್ಲಿ ಶೋಕಿ ಮಾಡೋ ನಾಯಕನ ಪಾತ್ರಕ್ಕಿಲ್ಲ ಒಂದಷ್ಟು ಚಹರೆಗಳಿದ್ದಾವೆ. ಈ ಹಾದಿಯಲ್ಲಿ ಎಂತೆಂಥಾ ವಿಚಾರಗಳು ಘಟಿಸುತ್ತವೆಂಬುದೇ ಸಿನಿಮಾದ ಜೀವಾಳ. ಅನೇಕ ಟ್ವಿಸ್ಟುಗಳೊಂದಿಗೆ, ಭರಪೂರ ಮನೋರಂಜನಾತ್ಮಕವಾಗಿ ಈ ಸಿನಿಮಾವನ್ನು ರೂಪಿಸಲಾಗಿದೆ. ಆರಂಭ ಕಾಲದಲ್ಲಿ ಸಣ್ಣಪುಟ್ಟ ಪಪಾತ್ರಗಳನ್ನು ಮಾಡುತ್ತಾ ಬಂದಿದ್ದ ನಾಗಭೂಷಣ್ ಅವರ ಪಾಲಿಗೆ ನಾಯಕ ನಟನಾಗಬೇಕೆಂಬ ಯಾವ ಇರಾದೆಯೂ ಇರಲಿಲ್ಲ. ಸಿಕ್ಕ ಪಾತ್ರಗಳನ್ನು ಚೆಂದಗೆ ಬಳಸಿಕೊಂಡು ಉತ್ತಮ ನಟನಾಗಿ ನೆಲೆ ಕಂಡುಕೊಳ್ಳಬೇಕೆಂಬುದಷ್ಟೇ ಅವರ ಗುರಿಯಾಗಿತ್ತು. ಆದರೆ, ಅಚಾನಕ್ಕಾಗಿ ನಾಯಕನಾಗೋ ಅವಕಾಶ ಒಲಿದು ಬಂದು, ಆ ಹಾದಿಯಲ್ಲಿ ಮುಂದುವರೆಯುತ್ತಾ ಬಂದಿರುವ ನಾಗಭೂಷಣ್ ಪಾಲಿಗೆ ‘ವಿದ್ಯಾಪತಿ’ ರೋಮಾಂಚಕ ತಿರುವು ಕೊಡುವ ಲಕ್ಷಣಗಳು ಕಾಣಿಸುತ್ತಿವೆ.


    ಡಾಲಿ ಧನಂಜಯ (Daali Dhananjay) ಅತ್ಯಂತ ಮಹತ್ವಾಕಾಂಕ್ಷೆಯಿಂದ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ತಮ್ಮ ಗೆಳೆಯ ನಾಗಭೂಷಣ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಒಂದು ಪ್ರತಿಭಾನ್ವಿತ ತಂಡದೊಂದಿಗೆ ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್ (Malaika Vasupal), ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಡಾಲಿ ಧನಂಜಯ ನಿರ್ಮಾಣ ಮಾಡಿರುವ ಈ ಸಿನಿಮಾ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್‌ ಆಗಿದೆ.

  • ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!

    ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!

    ಡಾಲಿ ಧನಂಜಯ (Daali Dhananjay) ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ಚಿತ್ರ ‘ವಿದ್ಯಾಪತಿ’ ನಾಳೆ ಅಂದರೆ, ಏಪ್ರಿಲ್ 10ರಂದು ರಾಜ್ಯಾದ್ಯಂತ ರಿಲೀಸ್‌ ಆಗಲಿದೆ. ನಾನಾ ಪಾತ್ರಗಳನ್ನು ಮಾಡುತ್ತಾ, ಇತ್ತೀಚಿನ ದಿನಗಳಲ್ಲಿ ನಟನಾಗಿ ನೆಲೆ ಕಂಡುಕೊಳ್ಳುತ್ತಿರುವ ನಾಗಭೂಷಣ್ (Nagabhushana) ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದ ಕಥೆ ಯಾವ ಥರದ್ದಿರಬಹುದೆಂಬ ಕುತೂಹಲ ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್ ಮೂಲಕ ತಣಿದಿದೆ. ಆ ಮೂಲಕ ಜಾಹೀರಾಗಿದ್ದ ದೃಶ್ಯಗಳಲ್ಲಿನ ಕ್ವಾಲಿಟಿ, ವಿಭಿನ್ನ ಕಥಾನಕದ ಸುಳಿವುಗಳೇ ‘ವಿದ್ಯಾಪತಿ’ಯ ಸುತ್ತ ಗಾಢ ಕೌತುಕ ಮೂಡಿಕೊಳ್ಳುವಂತೆ ಮಾಡಿದೆ. ಹೇಳಿ ಕೇಳಿ ಇದು ಬೇಸಿಗೆ ರಜೆಯ ಕಾಲಮಾನ. ಈ ಘಳಿಗೆಯಲ್ಲಿ ಕುಟುಂಬ ಸಮೇತರಾಗಿ ಕೂತು ನೋಡುವಂಥ ಚಿತ್ರವಾಗಿಯೂ ‘ವಿದ್ಯಾಪತಿ’ ಗಮನ ಸೆಳೆದಿದೆ. ಇದನ್ನೂ ಓದಿ:ಭರತನಾಟ್ಯ ಪ್ರವೀಣೆ ಚರಿತ್ರಾಗೀಗ ಇಂಟರ್ವಲ್‌ನದ್ದೇ ಧ್ಯಾನ!

    ವಿದ್ಯಾಪತಿ ಚಿತ್ರವನ್ನು ಇಶಾಂ ಹಾಗೂ ಹಸೀನ್ ಸೇರಿ ನಿರ್ದೇಶನ ಮಾಡಿದ್ದಾರೆ. ನಾಗಭೂಷಣ್ ನಾಯಕರಾಗಿದ್ದಾರೆ ಅಂದಮೇಲೆ ಅಲ್ಲಿ ಹಾಸ್ಯದ ಇರುವಿಕೆ ಇರುತ್ತದೆಂದೇ ಅರ್ಥ. ‘ವಿದ್ಯಾಪತಿ’ ಚಿತ್ರದಲ್ಲಿ ಎಲ್ಲಿಯೂ ಮುಜುಗರ ತಂದೊಡ್ಡದ ಎಚ್ಚರಿಕೆಯಿಂದಲೇ ಭರಪೂರ ಮನರಂಜನೆ ನೀಡುವ ಫಾರ್ಮುಲಾವನ್ನು ಪ್ರಯೋಗಿಸಲಾಗಿದೆ. ಅದರ ಸ್ಪಷ್ಟ ಸೂಚನೆ ಟ್ರೈಲರ್‌ನಲ್ಲಿ ಕಾಣಿಸಿದೆ. ‘ಹಿಟ್ಲರ್ ಸೀರಿಯಲ್’ ಮೂಲಕ ಪ್ರಸಿದ್ಧಿ ಪಡೆದುಕೊಂಡು, ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಮಲೈಕಾ ವಸುಪಾಲ್ (Malaika Vasupal) ಈ ಸಿನಿಮಾದಲ್ಲಿ ಸ್ಟಾರ್ ನಟಿಯಾಗಿ, ನಾನಾ ಚಹರೆಗಳನ್ನು ಒಳಗೊಂಡಿರುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಗಭೂಷಣ್‌ಗೂ ಕೂಡ ಅವರೇ ಹೇಳಿಕೊಂಡಂತೆ ಬೋನಸ್ ನಂಥಾ ಚೆಂದದ ಪಾತ್ರವೇ ಸಿಕ್ಕಿದೆ. ಇದನ್ನೂ ಓದಿ:ಇಂಟರ್ವಲ್ ಬಗ್ಗೆ ಸೃಷ್ಟಿಕರ್ತ ಸುಕಿ ತೆರೆದಿಟ್ಟ ಬೆರಗಿನ ಸಂಗತಿ!

    ಸಾಮಾನ್ಯವಾಗಿ, ಬೇಸಿಗೆ ರಜೆ ಬರುತ್ತಲೇ ಕುಟುಂಬ ಸಮೇತರಾಗಿ ಚಿತ್ರಮಂದಿರಗಳಿಗೆ ತೆರಳುವ ಕ್ರೇಜ್ ಮೂಡಿಕೊಳ್ಳುತ್ತದೆ. ಈ ಬಾರಿ ಆ ಕ್ರೇಜ್ ಅನ್ನು ‘ವಿದ್ಯಾಪತಿ’ ಚಿತ್ರ ನೂರ್ಮಡಿಗೊಳಿಸಲಿದೆ. ಇಶಾಂ ಹಾಗೂ ಹಸೀಮ್ ನಿರ್ದೇಶನದೊಂದಿಗೆ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಡಾಲಿ ಧನಂಜಯ (Daali Dhananjay) ಆಸೆಯಿಂದ ನಿರ್ಮಾಣ ಮಾಡಿರುವ ಈ ಸಿನಿಮಾ ಏ.10ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ.

  • ಯುಗಾದಿ ಹಬ್ಬದ ಹಿನ್ನೆಲೆ ಪತ್ನಿ ಜೊತೆ ಡಾಲಿ ಟೆಂಪಲ್ ರನ್

    ಯುಗಾದಿ ಹಬ್ಬದ ಹಿನ್ನೆಲೆ ಪತ್ನಿ ಜೊತೆ ಡಾಲಿ ಟೆಂಪಲ್ ರನ್

    ಟ ಡಾಲಿ ಧನಂಜಯ (Daali dhananjay) ಮತ್ತು ಧನ್ಯತಾ (Dhanyatha) ದಂಪತಿ ಹಾಸನ ಜಿಲ್ಲೆಯ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ ನಿನ್ನೆ (ಮಾ.30) ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಇದನ್ನೂ ಓದಿ:L2: Empuraan ವಿವಾದ- ನನ್ನ ಮಗನನ್ನ ಬಲಿಪಶುವನ್ನಾಗಿ ಮಾಡಲಾಗಿದೆ: ಪೃಥ್ವಿರಾಜ್ ಸುಕುಮಾರನ್ ತಾಯಿ

    ಯುಗಾದಿ ಹಬ್ಬದ ಹಿನ್ನೆಲೆ ಪತ್ನಿಯೊಂದಿಗೆ ನಟ ಧನಂಜಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿರುವ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಬಳಿಕ ನೆಲದ ಮೇಲೆ ಕುಳಿತು ದಂಪತಿ ಪ್ರಸಾದ ಸ್ವೀಕರಿಸಿ ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಈ ವೇಳೆ ದಂಪತಿಗೆ ದೇವಾಲಯದ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದನ್ನೂ ಓದಿ:ವಿಜಯ್‌ ಸೇತುಪತಿಗೆ ‘ಅಪ್ಪು’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್- ಜೂನ್‌ನಿಂದ ಶೂಟಿಂಗ್‌ ಶುರು

    ಡಾ. ಧನ್ಯತಾ ಜೊತೆ ಈ ವರ್ಷ ಫೆ.16ರಂದು ಡಾಲಿ ಮೈಸೂರಿನಲ್ಲಿ ಮದುವೆಯಾದರು. ಮದುವೆ ಮತ್ತು ಆರತಕ್ಷತೆಗೆ ಸಿನಿಮಾ ರಂಗ ಮತ್ತು ರಾಜಕೀಯದ ಗಣ್ಯರು ಭಾಗಿಯಾಗಿ ಶುಭಹಾರೈಸಿದ್ದರು.

    ಇನ್ನೂ ಅಣ್ಣ ಫ್ರಮ್ ಮೆಕ್ಸಿಕೋ, ನಾಡಪ್ರಭು ಕೆಂಪೇಗೌಡ ಸೇರಿದಂತೆ ತೆಲುಗಿನಲ್ಲೂ ಡಾಲಿಗೆ ಹಲವು ಸಿನಿಮಾಗಳಿವೆ. ಹೊಸ ಪ್ರತಿಭೆಗಳಿಗೆ ತಮ್ಮದೇ ನಿರ್ಮಾಣ ಚಿತ್ರದಲ್ಲಿ ಅವಕಾಶವನ್ನು ಕೊಡುತ್ತಿದ್ದಾರೆ. ನಿರ್ಮಾಪಕನಾಗಿರೂ ಡಾಲಿ ತೊಡಗಿಸಿಕೊಂಡಿದ್ದಾರೆ.

  • ಮದುವೆ ಸಂಭ್ರಮದ ಖುಷಿ ಹಂಚಿಕೊಂಡ ಡಾಲಿ ದಂಪತಿ

    ಮದುವೆ ಸಂಭ್ರಮದ ಖುಷಿ ಹಂಚಿಕೊಂಡ ಡಾಲಿ ದಂಪತಿ

    – ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ ಎಂದ ಡಾಲಿ

    ಮೈಸೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ (Daali Dhananjaya) ಹಾಗೂ ಡಾಕ್ಟರ್ ಧನ್ಯತಾ (Dhanyatha) ವಿವಾಹ ಮೈಸೂರು ವಸ್ತುಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ದಂಪತಿ ಮದುವೆ ಸಂಭ್ರಮದ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಾಲಿ, ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಆಗಲ್ಲ. ಸಾವಿರಾರು ಜನರು ಬಂದು ಆಶೀರ್ವದಿಸಿದ್ದಾರೆ. ಮೈಸೂರು ಬಾಲ್ಯದ ಗೆಳೆಯರು, ನನ್ನ ಗುರುಗಳು ಬಂದಿದ್ದರು. ಮೈಸೂರಿನಲ್ಲಿ (Mysuru) ನನ್ನ ಮದುವೆ ಸಾರ್ಥಕ ಅನ್ನಿಸ್ತು ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರ ಹಣಕಾಸಿನ ನಿರ್ವಹಣೆಯಲ್ಲಿ ವಿಫಲವಾಗಿದೆ – ಬೊಮ್ಮಾಯಿ ವಾಗ್ದಾಳಿ

    ಮೈಸೂರು ಅಂದರೆ ಎಲ್ಲರಿಗೂ ಎಮೋಷನ್ ಇದ್ದೇ ಇದೆ. ಮದುವೆ ಕಾರ್ಯಕ್ರಮ ತುಂಬಾ ಚೆನ್ನಾಗಿ ಆಯಿತು. ಚಿತ್ರರಂಗಕ್ಕೆ ಯಾವಾಗಲೂ ನಾನು ಆಭಾರಿ. ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಎಲ್ಲರ ಸಪೋರ್ಟ್ ಇದೆ. ಈಗ ಜವಾಬ್ದಾರಿ ಜಾಸ್ತಿ ಆಗಿದೆ. ಎಲ್ಲರೂ ಖುಷಿ ಪಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ಲಾಟ್‌ಫಾರ್ಮ್ ಮೆಟ್ಟಿಲಿನಿಂದ ಪ್ರಯಾಣಿಕ ಜಾರಿ ಬಿದ್ದಿದ್ದು ಕಾಲ್ತುಳಿತಕ್ಕೆ ಕಾರಣ: ರೈಲ್ವೆ ಅಧಿಕಾರಿ

    ಎಲ್ಲರಿಗೂ ಧನ್ಯವಾದ. ಕಾರ್ಯಕ್ರಮ ಶಾಂತಿಯುತವಾಗಿ ಆಯಿತು. ಆರತಕ್ಷತೆಗೆ ಜನ ಬಂದಿದ್ದು ಖುಷಿ ಆಯಿತು. ನಾನು ಅಂದುಕೊಂಡಂತೆ ಆಗಿದೆ. ಎಲ್ಲರು ಖುಷಿ ಆಗಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕು ಗೊತ್ತಿಲ್ಲ. ಅಭಿಮಾನಿಗಳು ತುಂಬಾ ಶಾಂತಿಯುತವಾಗಿ ನಡೆದುಕೊಂಡಿದ್ದಾರೆ. ನಾನು ಜೀವನ ಕಂಡುಕೊಂಡಿದ್ದು ಮೈಸೂರಲ್ಲಿ, ಇಲ್ಲೇ ಮದುವೆ ಆಗಿದ್ದು ಖುಷಿ ಆಯ್ತು. ತಾಳಿ ಕಟ್ಟುವಾಗ ನನಗೆ ಭಯ ಯಾವುದು ಆಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಓವರ್‌ಟೆಕ್ ಮಾಡಲು ಹೋಗಿ ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ – ಓರ್ವ ಸಾವು

    ಇನ್ನು ಡಾಲಿ ಪತ್ನಿ ಧನ್ಯತಾ ಪ್ರತಿಕ್ರಿಯಿಸಿ, ಇಷ್ಟು ಜನರನ್ನ ನಾನು ನೋಡಿಲ್ಲ. ತುಂಬಾ ಭಾವುಕಳಾದೆ. ಡಾಲಿ ಕುಟುಂಬ ನನ್ನ ಕುಟುಂಬ. ನನ್ನ ಮನೆಗೆ ಹೋಗೋಕೆ ತುಂಬಾ ಖುಷಿ ಇದೆ. ನಾನು ಡಾಲಿ ಮನೆಗೆ ಹೋಗೋಕೆ ತುಂಬಾ ಕಾಯ್ತಾ ಇದ್ದೇನೆ. ಇಷ್ಟು ಪ್ರೀತಿ ಆಶೀರ್ವಾದ ನೋಡಿ ತುಂಬಾ ಖುಷಿ ಆಯಿತು ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ನಟ ದರ್ಶನ್ ಬ್ಯಾನರ್ ತೆರವು – ಫ್ಯಾನ್ಸ್‌ಗೆ ಶಾಕ್

  • ಡಾಲಿ-ಧನ್ಯತಾ ವಿವಾಹ; ನವಜೋಡಿಗೆ ಶುಭಹಾರೈಸಿದ ಸಿನಿ ತಾರೆಯರು

    ಡಾಲಿ-ಧನ್ಯತಾ ವಿವಾಹ; ನವಜೋಡಿಗೆ ಶುಭಹಾರೈಸಿದ ಸಿನಿ ತಾರೆಯರು

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ (Daali Dhananjay) ಹಾಗೂ ಧನ್ಯತಾ ಶುಭಮುಹೂರ್ತದಲ್ಲಿಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನ ಸ್ಟಾರ್ ಬಳಗ ಮದುವೆಗೆ ಆಗಮಿಸುತ್ತಿದ್ದು, ನವಜೋಡಿಗೆ ಶುಭಹಾರೈಸಿದ್ದಾರೆ.

    ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಆ್ಯಕ್ಟರ್-ಡಾಕ್ಟರ್ ಮದುವೆ ಅದ್ದೂರಿಯಾಗಿ ನೆರವೇರಿದ್ದು, ಸಿನಿರಂಗದ ನಟ-ನಟಿಯರು ಆಗಮಿಸಿ, ಧನಂಜಯ ಹಾಗೂ ಧನ್ಯತಾ ಜೋಡಿಗೆ ವಿಶ್ ಮಾಡಿದ್ದಾರೆ.ಇದನ್ನೂ ಓದಿ: ದರ್ಶನ್ ಬರ್ತ್‌ಡೇ ಸಂಭ್ರಮ – ಪತಿ ಜೊತೆಗಿನ ಫೋಟೊ ಹಂಚಿಕೊಂಡು ವಿಜಯಲಕ್ಷ್ಮೀ ವಿಶ್

    ಡಾಲಿ ಮದುವೆಗೆ ಆಗಮಿಸಿದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ನೇರಳೆ ಬಣ್ಣದ ಸೀರೆಯಲ್ಲಿ ಮಿಂಚುತ್ತಿದ್ದು, ಡಾಲಿಯನ್ನು ತಬ್ಬಿಕೊಂಡು ಶುಭಹಾರೈಸಿದರು. ಇನ್ನೂ ನಟ ಶಿವರಾಜಕುಮಾರ್, ಕಾಂತಾರ ಖ್ಯಾತಿಯ ಸಪ್ತಮಿ ಗೌಡ, ದೊಡ್ಡಣ್ಣ, ತರುಣ್ ಸುಧೀರ್-ಸೋನಲ್, ವಸಿಷ್ಠ ಸಿಂಹ, ಸಾಧು ಕೋಕಿಲ, ಯುವರಾಜ ಕುಮಾರ್, ವಿನಯ್ ರಾಜ್, ಬಿಗ್‌ಬಾಸ್ ಖ್ಯಾತಿಯ ದಿವ್ಯ ಉರುಡುಗ ಮದುವೆಗೆ ಬಂದು ಜೋಡಿಗೆ ವಿಶ್ ಮಾಡಿದ್ದಾರೆ.

    ಗೋಲ್ಡನ್ ಬಣ್ಣದ ಶೇರ್ವಾನಿಯಲ್ಲಿ ಡಾಲಿ ಹಾಗೂ ಗೋಲ್ಡನ್ ಬಣ್ಣದ ಸೀರೆಯಲ್ಲಿ ಧನ್ಯತಾ ಮಿಂಚಿದ್ದು, ಕುಟುಂಬಸ್ಥರು, ಆಪ್ತರು, ಸಿನಿರಂಗದ ತಾರೆಯರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಪಾಲ್ಗೊಂಡು ಶುಭಹಾರೈಸುತ್ತಿದ್ದಾರೆ.ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಕ್ಟರ್ & ಡಾಕ್ಟರ್ – ಮೈಸೂರಲ್ಲಿ ಅದ್ದೂರಿಯಾಗಿ ನಡೆದ ಡಾಲಿ, ಧನ್ಯತಾ ಮದುವೆ

     

  • ಭಾವಿ ಪತ್ನಿಗೆ ಡಾಲಿ ಪ್ರಪೋಸ್- ವಿಡಿಯೋ ವೈರಲ್

    ಭಾವಿ ಪತ್ನಿಗೆ ಡಾಲಿ ಪ್ರಪೋಸ್- ವಿಡಿಯೋ ವೈರಲ್

    ಟ ರಾಕ್ಷಸ ಡಾಲಿ ಧನಂಜಯ (Daali Dhananjay) ಅವರು ಇದೇ ಫೆ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ಆಕ್ಟರ್ ಡಾಲಿ ಲೈಫ್‌ಗೆ ಡಾಕ್ಟರ್ ಧನ್ಯತ ಎಂಟ್ರಿ ಕೊಟ್ಟಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದರ ನಡುವೆ ಭಾವಿ ಪತ್ನಿ ಧನ್ಯತಾಗೆ (Dhanyatha) ಉಂಗುರ ತೊಡಿಸಿ ವಿಶೇಷವಾಗಿ ಡಾಲಿ ಪ್ರಪೋಸ್ ಮಾಡಿದ್ದಾರೆ. ಹೊಸ ಜೋಡಿಯ ಪ್ರಪೋಸಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಧನ್ಯತ ಬರುವ ಮುನ್ನ ಡಾಲಿ ಸಿಂಗಲ್ ಲೈಫ್ ಹೇಗಿತ್ತು? ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ. ಡಾಲಿ ಆಪ್ತ ಸ್ನೇಹಿತ ನಾಗಭೂಷಣ್ ಧ್ವನಿಯಲ್ಲಿ ಈ ವಿಡಿಯೋ ಮೂಡಿ ಬಂದಿದೆ. ಬ್ಯಾಚುಲರ್ ಲೈಫ್ ಹೇಗಿತ್ತು? ಎಂಬುದನ್ನು ವಿವರಿಸಿ ನಂತರ ಧನ್ಯತ ಎಂಟ್ರಿ ಕೊಟ್ಟಿರೋದನ್ನು ತೋರಿಸಿದ್ದಾರೆ. ಇದನ್ನೂ ಓದಿ:ಕ್ರೇಜಿ ಕ್ವೀನ್‌ ರಕ್ಷಿತಾ ಸಹೋದರನ ಆರತಕ್ಷತೆ ಸಂಭ್ರಮದಲ್ಲಿ ದರ್ಶನ್

    ಡಾಕ್ಟರ್ ಅಮ್ಮ ಎಂದು ಡಾಲಿ ಹೇಳುತ್ತಾ, ಭಾವಿ ಪತ್ನಿಗೆ ಪ್ರೀತಿಯಿಂದ ಬೆರಳಿಗೆ ರಿಂಗ್ ತೊಡಿಸಿದ್ದಾರೆ. ಸಿಂಗಲ್ ಲೈಫ್ ಶುಭಂ ಹೇಳೋ ಸಮಯ ಬಂದಾಯ್ತು. ನೂರು ಬ್ಯಾಚುರಲ್ ಪಾರ್ಟಿಗಳೇ ಬರಲಿ. ನೂರು ಬ್ಯಾಚುಲರ್ ಪಾರ್ಟಿಗಳೇ ಬರಲಿ, ಸಾವಿರ ಸೋಲೋ ಟ್ರಿಪ್‌ಗಳೇ ಇರಲಿ. ನಿನ್ನಾ ಜೊತೆ ರೀಲ್ಸ್ ಮಾಡಿಕೊಂಡು ಇರುತ್ತೇನೆ. ಬನ್ನಿ ನಾವಿಬ್ಬರೂ ಹಸೆಮಣೆ ಏರುತ್ತಿರುವಾಗ ನೀವೆಲ್ಲಾ ಸಾಕ್ಷಿಯಾಗಿರಬೇಕು. ನೀವು ಅಕ್ಷತೆ ಹಾಕಬೇಕು. ಮಿಸ್ ಮಾಡದೇ ಬಂದು ಹಾರೈಸಿ ಹೋಳಿಗೆ ಊಟ ಮಾಡಿಕೊಂಡು ಹೋಗಿ. ಬ್ಯಾಚುಲರ್ ಆಗಿ ಉಳಿಯುವ ಗಂಡಿಗೆ ಬೆಲೆಯಿಲ್ಲ. ನಿಮ್ಮೆಲ್ಲರ ಹಾರೈಕೆಯೊಂದಿಗೆ ನಾನು ಬಿತ್ತಬೇಕಾಗಿರೋದು ಪ್ರೀತಿಯ ತೋಟ ಎಂದು ಡೈಲಾಗ್ ಹೊಡೆಯುತ್ತಾ ಭಾವಿ ಪತ್ನಿಗೆ ಕಿಸ್ ಮಾಡಿದ್ದಾರೆ ಡಾಲಿ.

     

    View this post on Instagram

     

    A post shared by Daali Pictures (@daalipictures)

    ಇನ್ನೂ ಇದೇ ಫೆ.15 ಹಾಗೂ ಫೆ.16ರಂದು ಡಾಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ವಸ್ತುಪ್ರದರ್ಶನ ಮೈದಾನ, ಅಂಬಾವಿಲಾಸ ಅರಮನೆ ಮುಂಭಾಗ ಮೈಸೂರಿನಲ್ಲಿ ಮದುವೆ ಜರುಗಲಿದೆ. ಈ ಸಂಭ್ರಮದಲ್ಲಿ ಸಿನಿಮಾ ರಂಗದ ಸ್ಟಾರ್ಸ್ ಹಾಗೂ ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

  • ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಬ್ಯಾಚುಲರ್ ಆಗಿದ್ದ ನಟ ಡಾಲಿ ಧನಂಜಯ (Daali Dhananjay) ಅವರು ಇದೇ ಫೆ.16ರಂದು ಮದುವೆಗೆ ಸಜ್ಜಾಗಿದ್ದಾರೆ. ಈ ಹಿನ್ನೆಲೆ ಹೈದರಾಬಾದ್‌ಗೆ ತೆರಳಿ ‘ಪುಷ್ಪ 2’ (Pushpa 2) ತಂಡವನ್ನು ಭೇಟಿಯಾಗಿ ಮದುವೆ ಆಮಂತ್ರಣ ಪತ್ರಿಕೆಯನ್ನು ಡಾಲಿ ನೀಡಿದ್ದಾರೆ. ಇದನ್ನೂ ಓದಿ:ಆರೋಗ್ಯ ಸಮಸ್ಯೆ ಇದೆ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಸೆಲೆಬ್ರಿಟಿಗಳಿಗೆ ದರ್ಶನ್‌ ಮನವಿ

    ‘ಪುಷ್ಪ’, ‘ಪುಷ್ಪ 2’ ಸಿನಿಮಾದಲ್ಲಿ ಡಾಲಿ ನಟಿಸಿ ಸೈ ಎನಿಸಿಕೊಂಡಿರೋದ್ರಿಂದ ತಂಡದ ಜೊತೆ ಉತ್ತಮ ಒಡನಾಟ ಇದೆ. ಹಾಗಾಗಿ ಹೈದರಾಬಾದ್‌ಗೆ ಆಗಮಿಸಿ ಅಲ್ಲು ಅರ್ಜುನ್(Allu Arjun), ಡೈರೆಕ್ಟರ್ ಸುಕುಮಾರ್ (Sukumar) ಹಾಗೂ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಭೇಟಿಯಾಗಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಇನ್ನೂ ಇದೇ ಫೆ.15 ಹಾಗೂ ಫೆ.16ರಂದು ಡಾಕ್ಟರ್ ಧನ್ಯತಾ ಜೊತೆ ಡಾಲಿ ಹಸೆಮಣೆ ಏರಲಿದ್ದಾರೆ. ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯಲಿರುವ ಈ ಮದುವೆಗೆ ರಾಜಕೀಯ ಗಣ್ಯರಿಗೆ ಹಾಗೂ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಬರಲಿದ್ದಾರೆ.