Tag: ಡಾಲರ್

  • ಚಿನ್ನ, ಬೆಳ್ಳಿ ದರ ದಿಢೀರ್‌ ಭಾರೀ ಇಳಿಕೆ

    ಚಿನ್ನ, ಬೆಳ್ಳಿ ದರ ದಿಢೀರ್‌ ಭಾರೀ ಇಳಿಕೆ

    ನವದೆಹಲಿ: ಕೋವಿಡ್‌ 19 ಸಮಯದಲ್ಲಿ ಏರಿಕೆ ಕಾಣುತ್ತಿದ್ದ ಚಿನ್ನದ ದರ ಈಗ ದಿಢೀರ್‌ ಭಾರೀ ಇಳಿಕೆ ಕಂಡಿದೆ.

    ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವೂ ಚಿನ್ನ, ಬೆಳಿ ದರದಲ್ಲಿ ಇಳಿಕೆ ಆಗಿದೆ. 10 ಗ್ರಾಂ ಚಿನ್ನದ ದರ ಬುಧವಾರ 650 ರೂ. ಇಳಿಕೆಯಾಗಿದ್ದರೆ ಗುರುವಾರ 1,492 ರೂ. ಇಳಿಕೆಯಾಗಿ 52,819 ರೂ.ನಲ್ಲಿ ಮಾರಾಟವಾಗಿದೆ.

    ಬುಧವಾರ 1 ಕೆಜಿ ಬೆಳ್ಳಿ ದರ 3,112 ರೂ. ಇಳಿಕೆಯಾಗಿದ್ದರೆ ಗುರುವಾರ 1,476 ರೂ. ಇಳಿಕೆಯಾಗಿ 67,924 ರೂ. ನಲ್ಲಿ ಮಾರಾಟ ಕಂಡಿತು.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಕುಸಿದ ಕಾರಣ ದೇಶದಲ್ಲೂ ಚಿನ್ನ, ಬೆಳ್ಳಿ ದರ ಕಡಿಮೆಯಾಗಿದೆ. ಡಾಲರ್‌ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ಚಿನ್ನದ ಬೆಲೆ ಭಾರತದಲ್ಲೂ ಕಡಿಮೆಯಾಗುತ್ತಿದೆ.  ಇದನ್ನೂ ಓದಿ: ಭಾರತದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಚಿನ್ನ.. ದರ ಏರಿಕೆಗೆ ಕಾರಣ ಏನು?

  • RBI ಅಧಿಕಾರಿ, ಅಮೆರಿಕದ ನರ್ಸ್ ಎಂದು ಹೇಳ್ಕೊಂಡು ಬೆಂಗ್ಳೂರು ಟೆಕ್ಕಿಗೆ 4.70 ಲಕ್ಷ ಹಣ ವಂಚನೆ

    RBI ಅಧಿಕಾರಿ, ಅಮೆರಿಕದ ನರ್ಸ್ ಎಂದು ಹೇಳ್ಕೊಂಡು ಬೆಂಗ್ಳೂರು ಟೆಕ್ಕಿಗೆ 4.70 ಲಕ್ಷ ಹಣ ವಂಚನೆ

    ಬೆಂಗಳೂರು: ಅಮೆರಿಕದ ನರ್ಸ್, ಆರ್‍ಬಿಐ ಆಫೀಸರ್, ಕಸ್ಟಮ್ಸ್ ಅಧಿಕಾರಿ ಹೀಗೆ ನಾನಾ ಹೆಸರಿನಲ್ಲಿ ಟೆಕ್ಕಿಗೆ ಲಕ್ಷಾಂತರ ರೂ. ಹಣ ವಂಚಿಸಿರೋ ಘಟನೆ ಬೆಳಕಿಗೆ ಬಂದಿದೆ.

    ನೆಲಮಂಗಲದ ರಮೇಶ್ ವಂಚನೆಗೊಳಗಾದ ಟೆಕ್ಕಿ. ಸಾಫ್ಟ್ ವೇರ್ ಉದ್ಯೋಗಿ ರಮೇಶ್ ರಿಂದ 4.70 ಲಕ್ಷ ರೂಪಾಯಿ ಹಣವನ್ನ ಅಕೌಂಟ್ ಗೆ ಹಾಕಿಸಿಕೊಂಡು ವಂಚಿಸಲಾಗಿದೆ. ರಮೇಶ್‍ ಗೆ ಫೇಸ್‍ ಬುಕ್ ನಲ್ಲಿ ರಚನಾ ಕರಂ ವೈದ್ಯ ಎಂಬಾಕೆಯ ಪರಿಚಯವಾಗಿತ್ತು. ಬಳಿಕ ಪರಸ್ಪರ ಮೊಬೈಲ್ ನಂಬರ್ ತೆಗೆದುಕೊಂಡು ಸಂಭಾಷಣೆ ನಡೆಸಿದ್ದರು.

    ರಚನಾ ಅಮೆರಿಕದಲ್ಲಿ ನರ್ಸ್ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಳು. ಸದ್ಯದಲ್ಲೇ ಬೆಂಗಳೂರಿಗೆ ಬರುತ್ತಿದ್ದೇನೆ. ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲು ಹಾಗೂ ನಾನು ಉಳಿದುಕೊಳ್ಳಲು ಒಂದು ಮನೆಯನ್ನು ನೋಡಿರಬೇಕೆಂದು ರಚನಾ ತಿಳಿಸಿದ್ದಳು. ಇದಕ್ಕೆಲ್ಲ ತನ್ನ ಬಳಿ ಸದ್ಯ ಹಣವಿಲ್ಲ ಎಂದು ರಮೇಶ್ ಹೇಳಿದ್ದರು. ಡಾಲರ್ ಗಳು ಹಾಗೂ ಚಿನ್ನಾಭರಣಗಳನ್ನು ಪಾರ್ಸಲ್ ಮೂಲಕ ಕಳುಹಿಸುತ್ತೇನೆ. ಡಾಲರ್ ಗಳನ್ನು ರೂಪಾಯಿಗೆ ಬದಲಾಯಿಸಿಕೊಳ್ಳಿ ಎಂದು ರಚನಾ ಹೇಳಿದ್ದಳು. ಇದಕ್ಕೆ ಒಪ್ಪಿಕೊಂಡಿದ್ದ ರಮೇಶ್ ಆಕೆಯ ಅಕೌಂಟ್ ಗೆ ಹಣ ಹಾಕಿದ್ದರು.

    ಕಸ್ಟಮ್ಸ್ ಅಧಿಕಾರಿ ಎಂದು ಹೇಳಿ ಮತ್ತೆ ವಂಚನೆ: ಅಕ್ಟೊಂಬರ್ 2 ರಂದು ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿ ನಿಶಾಕುಮಾರಿ ಎಂದು ಹೇಳಿಕೊಂಡು ಕರೆ ಬಂದಿತ್ತು. ಮೊದಲು ಕಸ್ಟಮ್ಸ್ ಶುಲ್ಕವನ್ನು ನಿಲ್ದಾಣದ ಅಧಿಕಾರಿಯಾದ ಸುಮನ್ ದೇವಿ ಅವರ ಖಾತೆಗೆ ವರ್ಗಾಯಿಸಿ. ನಂತರ ಪಾರ್ಸಲ್ ನಿಮ್ಮ ವಿಳಾಸಕ್ಕೆ ತಲುಪಿಸುತ್ತೇವೆ ಎಂದು ಕರೆ ಮಾಡಿ ಹೇಳಿದ್ದಳು ಅಂತ ರಮೇಶ್ ಹೇಳಿದ್ದಾರೆ.

    ರಚನಾಗೆ ಲೆಕ್ಕ ತೋರಿಸಿ ಹಣ ಪಡೆದರಾಯಿತು ಎಂದು ರಮೇಶ್ ಅಕ್ಟೊಂಬರ್ 3 ರಂದು ಆ ಖಾತೆಗೆ ಹಣ ಜಮೆ ಮಾಡಿದ್ದರು. ಮತ್ತೆ ನಿಶಾಕುಮಾರಿ ಸರ್ವಿಸ್ ಕ್ಲಿಯರೆನ್ಸ್ ಹೆಸರಿನಲ್ಲಿ 1.62 ಲಕ್ಷ ರೂ. ಹಾಕಿಸಿಕೊಂಡಿದ್ದಳು. ಆದಾದ ಬಳಿಕ ಪಾರ್ಸಲ್ ತೂಕ ಜಾಸ್ತಿ ಇದೆ ಎಂದು ಹೇಳಿ ಟ್ಯಾಕ್ಸ್ ಕೋಡ್ ಬೇಕಾಗುತ್ತದೆ ಎಂದು ಹೇಳಿ ಮತ್ತೆ ಕರೆ ಬಂದಿತ್ತು. ಆ ಪಾರ್ಸಲ್ ಪಡೆಯಲು ಮಾನ್‍ಸಿಂಗ್ ಖಾರೆ ಎಂಬ ಅಧಿಕಾರಿಯ ಅಕೌಂಟಿಗೆ 2.70 ಲಕ್ಷ ರೂ. ವರ್ಗಾಯಿಸಬೇಕೆಂದು ಹೇಳಿದ್ರು. ಅದನ್ನೂ ನಂಬಿ ಹಣ ಹಾಕಿದೆ ಎಂದು ರಮೇಶ್ ತಿಳಿಸಿದ್ದಾರೆ.

    ಕೊನೆಗೆ ಅಕ್ಟೊಂಬರ್ 25 ರಂದು ಆರ್‍ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಸ್ವರಭ್ ಜೋಷಿ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ ಅಮೆರಿಕದ ಪಾರ್ಸಲ್ ಗಾಗಿ ವಿವಿಧ ಖಾತೆಗಳಿಗೆ ನಿಮ್ಮ ಹಣ ಜಮೆ ಆಗಿಲ್ಲ ಎಂದು ಹೇಳಿದ್ದರು. ಹೀಗಾಗಿ ಮತ್ತೆ 4.70 ಲಕ್ಷ ರೂ. ಹಣವನ್ನು ಖಾತೆಗೆ ಜಮಾಯಿಸಬೇಕು ಎಂದು ತಿಳಿಸಿದ್ದರು.

    ರಮೇಶ್ ಆಗ ಅನುಮಾನಗೊಂಡು ಆರ್‍ಬಿಐ ಕಚೇರಿಗೆ ಹೋಗಿ ವಿಚಾರಿಸಿದಾಗ ವಂಚನೆಯಾಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ರಮೇಶ್ ಅಶೋಕ್ ನಗರ ಠಾಣೆಗೆ ದೂರು ನೀಡಿದ್ದಾರೆ. ಸೈಬರ್ ಕ್ರೈಂ ಪೊಲೀಸರ ಸಹಾಯದಿಂದ ಪೊಲೀಸರು ವಂಚಕಿಗಾಗಿ ಬಲೆ ಬಿಸಿದ್ದಾರೆ.