Tag: ಡಾನ್ 3

  • ರಣವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಶುರುವಾಗೋದು ಯಾವಾಗ?- ಸಿಕ್ತು ಅಪ್‌ಡೇಟ್

    ರಣವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಶುರುವಾಗೋದು ಯಾವಾಗ?- ಸಿಕ್ತು ಅಪ್‌ಡೇಟ್

    ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಮಗಳ ಆರೈಕೆಗಾಗಿ ಪತ್ನಿ ದೀಪಿಕಾಗೆ ಸಾಥ್ ನೀಡುತ್ತಿದ್ದಾರೆ. ಇದರೊಂದಿಗೆ ಹೊಸ ಸಿನಿಮಾಗಾಗಿ ತಯಾರಿ ಕೂಡ ಮಾಡಿಕೊಳ್ತಿದ್ದಾರೆ. ಇದರ ನಡುವೆ ‘ಡಾನ್ 3’ ಸಿನಿಮಾಗೆ (Don 3) ಶೂಟಿಂಗ್ ಮುಹೂರ್ತ ಫಿಕ್ಸ್ ಆಗಿದೆ. ಇದನ್ನೂ ಓದಿ:ಮತ್ತೆ ಪ್ರೀತಿಯಲ್ಲಿ ಬಿದ್ರಾ ನಟಿ?- ನಿರ್ಮಾಪಕನ ತೋಳಲ್ಲಿ ತಲೆಯಿಟ್ಟು ಮಲಗಿದ ಸಮಂತಾ

    ರಣವೀರ್ ನಟನೆಯ ಬಹುನಿರೀಕ್ಷಿತ ‘ಡಾನ್ 3’ ಚಿತ್ರ ಕಾರಣಾಂತರಗಳಿಂದ ತಡವಾಗ್ತಿದೆ. ಕಿಯಾರಾ ಪ್ರೆಗ್ನೆಂಟ್ ಆಗಿರೋ ಹಿನ್ನೆಲೆ ಡಾನ್ 3 ಚಿತ್ರದಿಂದ ನಿರ್ಗಮಿಸಿದ್ದರು. ಈ ಬೆನ್ನಲ್ಲೇ ಕೃತಿ ಸನೋನ್ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ಈಗ ಸೆಪ್ಟೆಂಬರ್‌ನಲ್ಲಿ ಸಿನಿಮಾ ಶೂಟಿಂಗ್ ಶುರು ಮಾಡಲು ಚಿತ್ರತಂಡ ನಿರ್ಧರಿಸಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ

    ‘ಡಾನ್ 3’ ಚಿತ್ರದಲ್ಲಿ ರಣವೀರ್ ಸಿಂಗ್ ಮುಂದೆ ವಿಕ್ರಾಂತ್ ಮಾಸ್ಸಿ ಅಬ್ಬರಿಸಲಿದ್ದಾರೆ. ಈ ಇಬ್ಬರೂ ಸ್ಟಾರ್ ನಟರಿಗೆ ಫರ್ಹಾನ್ ಅಖ್ತರ್ ನಿರ್ದೇಶನ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳಲಿದೆ.

  • ಕೃತಿ ಸನೋನ್‌ಗೆ ಬಂಪರ್ ಆಫರ್- ಸ್ಟಾರ್ ನಟನ ಜೊತೆ ರೊಮ್ಯಾನ್ಸ್

    ಕೃತಿ ಸನೋನ್‌ಗೆ ಬಂಪರ್ ಆಫರ್- ಸ್ಟಾರ್ ನಟನ ಜೊತೆ ರೊಮ್ಯಾನ್ಸ್

    ಬಾಲಿವುಡ್ ಬೆಡಗಿ ಕೃತಿ ಸನೋನ್‌ಗೆ (Kriti Sanon) ಬಾಲಿವುಡ್‌ನಲ್ಲಿ ಬಂಪರ್ ಅವಕಾಶಗಳು ಬರುತ್ತಿವೆ. ಕಮ್ಮಿ ಸಿನಿಮಾ ಮಾಡಿದ್ರೂ ಕಥೆ ಹಾಗೂ ಪಾತ್ರಕ್ಕೆ ಪ್ರಾಮುಖ್ಯತೆ ಇರೋ ಸಿನಿಮಾದಲ್ಲಿ ಅವರು ನಟಿಸುತ್ತಾರೆ. ಸದ್ಯ ‘ಡಾನ್ 3’ (Don 3) ಸಿನಿಮಾದಲ್ಲಿ ಕೃತಿ ನಟಿಸಲಿದ್ದಾರೆ. ಇದನ್ನೂ ಓದಿ:ಕೇರಳದಲ್ಲಿ ತಲೈವಾ- ನೆಚ್ಚಿನ ನಟನನ್ನು ನೋಡಿ ಫ್ಯಾನ್ಸ್ ಜೈಕಾರ

    ‘ಡಾನ್ 3’ ಸಿನಿಮಾದಲ್ಲಿ ರಣವೀರ್ ಸಿಂಗ್ (Ranveer Singh) ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವರಿಗೆ ಜೋಡಿಯಾಗಿ ಈ ಹಿಂದೆ ಕಿಯಾರಾ ಅಡ್ವಾಣಿ ಆಯ್ಕೆ ಆಗಿದ್ದರು. ಆದರೆ ಅವರು ಪ್ರೆಗ್ನೆಂಟ್ ಆಗಿರುವ ಹಿನ್ನೆಲೆ ಈ ಚಿತ್ರವನ್ನು ಕೈಬಿಟ್ಟರು. ಅವರ ಜಾಗಕ್ಕೆ ನಟಿ ಶಾರ್ವರಿ ಆಯ್ಕೆಯಾಗಿದ್ದಾರೆ ಎನ್ನಲಾಗಿತ್ತು. ಆದರೀಗ ಕೃತಿ ಸನೋನ್ ನಾಯಕಿ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:‘ನಾಗ್‌ಜಿಲ್ಲಾ’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್- ಪೋಸ್ಟರ್ ಔಟ್

    ಈಗಾಗಲೇ ಚಿತ್ರತಂಡ ಕೃತಿ ಅವರನ್ನು ‘ಡಾನ್ 3’ ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಆದರೆ ಈ ಚಿತ್ರಕ್ಕೆ ಅವರು ಓಕೆ ಎಂದ್ರಾ ಎಂಬುದು ಖಾತ್ರಿಯಾಗಿಲ್ಲ. ಈ ಬಗ್ಗೆ ಚಿತ್ರತಂಡ ಕಡೆಯಿಂದ ಅಧಿಕೃತ ಅಪ್‌ಡೇಟ್‌ ಸಿಗುವವರೆಗೂ ಕಾಯಬೇಕಿದೆ. ಸದ್ಯ ಈ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ಅಂದಹಾಗೆ, ಕ್ರೀವ್, ದೋ ಪಾಟಿ ಸಿನಿಮಾ ಬಳಿಕ ಅವರು ತೇರೆ ಇಷ್ಕ್ ಮೈನ್, ಕಾಕ್‌ಟೈಲ್ 2 ಸಿನಿಮಾಗಳಲ್ಲಿ ಕೃತಿ ತೊಡಗಿಸಿಕೊಂಡಿದ್ದಾರೆ. ಕಾಕ್‌ಟೈಲ್‌ 2ನಲ್ಲಿ ಶಾಹಿದ್‌ ಕಪೂರ್‌ ಹಾಗೂ ರಶ್ಮಿಕಾ ಮಂದಣ್ಣ ಜೊತೆ ತೆರೆಹಂಚಿಕೊಳ್ಳಲಿದ್ದಾರೆ.

  • Don 3: ಕಿಯಾರಾ ಬದಲು ರಣವೀರ್ ಸಿಂಗ್‌ಗೆ ನಾಯಕಿಯಾಗಲಿದ್ದಾರೆ ಶಾರ್ವರಿ

    Don 3: ಕಿಯಾರಾ ಬದಲು ರಣವೀರ್ ಸಿಂಗ್‌ಗೆ ನಾಯಕಿಯಾಗಲಿದ್ದಾರೆ ಶಾರ್ವರಿ

    ಣವೀರ್ ಸಿಂಗ್ (Ranveer Singh) ನಟನೆಯ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರಕ್ಕೆ ಕಿಯಾರಾ ಅಡ್ವಾಣಿ (Kiara Advani) ಬದಲು ಶಾರ್ವರಿ ವಾಘ್ ನಾಯಕಿಯಾಗಿದ್ದಾರೆ. ರಣವೀರ್ ಜೊತೆ ಶಾರ್ವರಿ (Sharvari) ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್‌ ಅಭಿನಯದ ‘ಬಿಲ್ಲ ರಂಗ ಬಾಷಾ’ ಸಿನಿಮಾ ಶೂಟಿಂಗ್‌ ಶುರು – BRB ಫಸ್ಟ್‌ ಲುಕ್‌ ರಿವೀಲ್‌

    ‘ಡಾನ್ 3’ಗೆ ಈ ಮೊದಲು ಕಿಯಾರಾ ನಾಯಕಿಯಾಗಿದ್ದರು. ಆದರೆ ಅವರು ಪ್ರೆಗ್ನೆಂಟ್ ಆಗಿರೋದ್ರಿಂದ ಈ ಚಿತ್ರವನ್ನು ಕೈಬಿಟ್ಟಿದ್ದರು. ಈ ಹಿನ್ನೆಲೆ ಕಿಯಾರಾ ಜಾಗಕ್ಕೆ ಶಾರ್ವರಿ ವಾಘ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್ ರೋಲ್‌ನಲ್ಲಿ ಅವರು ನಟಿಸಲಿದ್ದಾರೆ. ಇದನ್ನೂ ಓದಿ:ಮುಂಬೈ ಬಳಿ 9.85 ಕೋಟಿಗೆ ಭೂಮಿ ಖರೀದಿಸಿದ ಅಳಿಯ ಕೆಎಲ್‌ ರಾಹುಲ್‌, ಮಾವ ಸುನೀಲ್‌ ಶೆಟ್ಟಿ

    ಆಲಿಯಾ ಭಟ್ (Alia Bhatt) ಜೊತೆ ಶಾರ್ವರಿ ನಟಿಸಿರುವ ‘ಆಲ್ಫಾ’ ಸಿನಿಮಾ ಡಿ.25ರಂದು ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಕೆಲಸದಲ್ಲಿ ಶಾರ್ವರಿ ಬ್ಯುಸಿಯಾಗಿದ್ದಾರೆ. ‘ಆಲ್ಫಾ’ ಚಿತ್ರದ ಜೊತೆ ‘ಡಾನ್ 3’ ಕೂಡ ಮಾಡಲಿದ್ದಾರೆ.

  • ರಣ್‌ವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಮುಂದೂಡಿದ ಫರ್ಹಾನ್ ಅಖ್ತರ್

    ರಣ್‌ವೀರ್ ಸಿಂಗ್ ನಟನೆಯ ‘ಡಾನ್ 3’ ಸಿನಿಮಾ ಮುಂದೂಡಿದ ಫರ್ಹಾನ್ ಅಖ್ತರ್

    ಣ್‌ವೀರ್ ಸಿಂಗ್ (Ranveer Singh) ಮತ್ತು ಕಿಯಾರಾ (Kiara Advani) ನಟನೆಯ ‘ಡಾನ್ 3’ (Don 3) ಚಿತ್ರೀಕರಣವನ್ನು ಡೈರೆಕ್ಟರ್ ಫರ್ಹಾನ್ ಅಖ್ತರ್ ಮುಂದೂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ‘ಡಾನ್ 3’ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಚಿತ್ರತಂಡ ಸೇರಿಕೊಂಡ ಅಮೆರಿಕದ ನಟ

    ನಟ ಕಮ್ ನಿರ್ದೇಶಕ ಫರ್ಹಾನ್ ಅಖ್ತರ್ ಡೈರೆಕ್ಷನ್ ಸಿನಿಮಾ ‘ಡಾನ್ 3’ ಇದೇ ಆಗಸ್ಟ್‌ನಿಂದ ಚಿತ್ರೀಕರಣ ಶುರುವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದಿನ ಮೇ ಅಥವಾ ಜೂನ್‌ನಿಂದ ಶೂಟಿಂಗ್ ಶುರು ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಇದನ್ನೂ ಓದಿ:ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ

     

    View this post on Instagram

     

    A post shared by Farhan Akhtar (@faroutakhtar)

    ಆ ಕಡೆ ಆದಿತ್ಯಾ ಧರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ರಣ್‌ವೀರ್ ಬ್ಯುಸಿಯಾಗಿದ್ರೆ, ಇತ್ತ ಕಿಯಾರಾ ‘ವಾರ್ 2’ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರ ಡೇಟ್ಸ್ ಬ್ಯುಸಿಯಿರುವ ಹಿನ್ನೆಲೆ ತಾವು ನಟಿಸಲು ಒಪ್ಪಿಕೊಂಡಿದ್ದ ಸಿನಿಮಾಗೆ ಫರ್ಹಾನ್ ಗ್ರೀನ್ ಕೊಟ್ಟಿದ್ದಾರೆ. ‘120 ಬಹದ್ದೂರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಕುರಿತು ನಿರ್ದೇಶಕ ಅಧಿಕೃತ ಮಾಹಿತಿ ಕೂಡ ನೀಡಿದ್ದಾರೆ.

    ಇನ್ನೂ ‘ಡಾನ್ 3’ ಚಿತ್ರವನ್ನು ಮುಂದಿನ ವರ್ಷ ಮೇಯಿಂದ ಶೂಟಿಂಗ್ ಶುರು ಮಾಡಲು ತಂಡ ನಿರ್ಧರಿಸಿದೆ. ಅಷ್ಟರಲ್ಲಿ ಫರ್ಹಾನ್, ರಣ್‌ವೀರ್, ಕಿಯಾರಾ (Kiara Advani) ಪ್ರಸ್ತುತ ನಟಿಸುತ್ತಿರುವ ಸಿನಿಮಾಗಳ ಚಿತ್ರೀಕರಣ ಮುಗಿಸಿಕೊಡಬೇಕಿದೆ.

  • ರಣ್‌ವೀರ್ ಸಿಂಗ್ ಜೊತೆ ಹೆಜ್ಜೆ ಹಾಕಲಿದ್ದಾರೆ ನಾಗಚೈತನ್ಯ ಭಾವಿ ಪತ್ನಿ

    ರಣ್‌ವೀರ್ ಸಿಂಗ್ ಜೊತೆ ಹೆಜ್ಜೆ ಹಾಕಲಿದ್ದಾರೆ ನಾಗಚೈತನ್ಯ ಭಾವಿ ಪತ್ನಿ

    ಸೌತ್ ನಟಿ ಸಮಂತಾ (Samantha) ಅವರ ಮಾಜಿ ಪತಿ ನಾಗಚೈತನ್ಯ (Nagachaitanya) ಜೊತೆ ಶೋಭಿತಾ (Sobhita) ಎಂಗೇಜ್‌ಮೆಂಟ್ ಆದ್ಮೇಲೆ ಭಾರೀ ಸುದ್ದಿಯಲ್ಲಿದ್ದಾರೆ. ಈ ಬೆನ್ನಲ್ಲೇ ಬಂಪರ್ ಆಫರ್‌ವೊಂದನ್ನು ಬಾಚಿಕೊಂಡಿದ್ದಾರೆ. ಹೊಸ ಚಿತ್ರದಲ್ಲಿ ರಣ್‌ವೀರ್ ಸಿಂಗ್ ಜೊತೆ ನಟಿ ಶೋಭಿತಾ ಹೆಜ್ಜೆ ಹಾಕಲಿದ್ದಾರೆ. ಇದನ್ನೂ ಓದಿ:ಶಾರ್ಟ್ ಡ್ರೆಸ್‌ನಲ್ಲಿ ಕುಣಿದ ರೀಲ್ಸ್ ರಾಣಿ ಸೋನು

    ನಾಗಚೈತನ್ಯ ಜೊತೆ ನಿಶ್ಚಿತಾರ್ಥ ಆದ್ಮೇಲೆ ಎಲ್ಲರ ಗಮನ ಶೋಭಿತಾ ಮೇಲಿದೆ. ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗ್ತಿರೋ ನಟಿಗೆ ಈಗ ‘ಡಾನ್ 3’ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ಶೋಭಿತಾನೇ ಸೂಕ್ತ ಅಂತ ಫರ್ಹಾನ್ ಅಖ್ತರ್ ತಂಡ ನಟಿಯನ್ನು ಸಂಪರ್ಕಿಸಿದೆ.

    ಇನ್ನೂ ರಣ್‌ವೀರ್ (Ranveer Singh) ಮತ್ತು ನಾಯಕಿ ಕಿಯಾರಾ (Kiara Advani) ಜೊತೆ ಶೋಭಿತಾಗೂ ಪ್ರಾಮುಖ್ಯತೆ ಇದ್ದು, ಸಾಂಗ್ ಕೂಡ ಪಡ್ಡೆಹುಡುಗರಿಗೆ ಕಿಕ್ ಕೊಡುವಂತಿದೆಯಂತೆ. ಹಾಗಾಗಿ ‘ಡಾನ್ 3’ ಸಿನಿಮಾದ ಭಾಗವಾಗಲು ಶೋಭಿತಾ ಕೂಡ ಓಕೆ ಎಂದಿದ್ದಾರೆ ಎಂಬುದು ಇನ್‌ಸೈಡ್ ಸುದ್ದಿ. ಆದರೆ ಇದು ನಿಜನಾ ಎಂಬುದುನ್ನು ಚಿತ್ರತಂಡವೇ ತಿಳಿಸಬೇಕಿದೆ.

    ಇನ್ನೂ ವಿಭಿನ್ನ ಕಥೆಯಲ್ಲಿ ಎಂದೂ ನಟಿಸಿರದ ರೋಲ್‌ನಲ್ಲಿ ರಣ್‌ವೀರ್ ಮತ್ತು ಕಿಯಾರಾ ಕಾಣಿಸಿಕೊಳ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

  • Don 3: ಯಾವಾಗ ಶುರುವಾಗಲಿದೆ ರಣ್‌ವೀರ್ ಸಿಂಗ್, ಕಿಯಾರಾ ಸಿನಿಮಾ?

    Don 3: ಯಾವಾಗ ಶುರುವಾಗಲಿದೆ ರಣ್‌ವೀರ್ ಸಿಂಗ್, ಕಿಯಾರಾ ಸಿನಿಮಾ?

    ಬಾಲಿವುಡ್ ನಟ ರಣ್‌ವೀರ್ ಸಿಂಗ್- ಕಿಯಾರಾ ಅಡ್ವಾಣಿ (Kiara Advani) ಜೋಡಿಯಾಗಿ ಬರುತ್ತಿದ್ದಾರೆ. ಡಾನ್-3 ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದ್ರೆ ಇಬ್ಬರೂ ತೆರೆಯ ಮೇಲೆ ರೊಮ್ಯಾನ್ಸ್ ಮಾಡೋದನ್ನು ನೋಡೋದು ಯಾವಾಗ? ಅದಕ್ಕೆ ಮುಹೂರ್ತ ಕೂಡ ಫಿಕ್ಸ್‌ ಆಗಿದೆ.

    ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್-3’ ಚಿತ್ರದಲ್ಲಿ ರಣ್‌ವೀರ್ ಸಿಂಗ್‌ಗೆ (Ranveer Singh) ಕಿಯಾರಾ ನಾಯಕಿಯಾಗಿದ್ದಾರೆ. ಹೆಸರಿಗೆ ಮಾತ್ರ ‘ಡಾನ್-3’ ಆದರೆ ಸಖತ್ ಆ್ಯಕ್ಷನ್, ಲವ್ ಸ್ಟೋರಿ, ಎಮೋಷನ್ಸ್ ಎಲ್ಲವೂ ಈ ಸಿನಿಮಾದಲ್ಲಿ ಇರಲಿದೆ. ಹೊಸ ಬಗೆಯ ಕಥೆಯನ್ನೇ ಫರ್ಹಾನ್‌ ರೆಡಿ ಮಾಡಿದ್ದಾರೆ.

    ಸಂದರ್ಶನವೊಂದರಲ್ಲಿ ನಟ ಕಮ್ ನಿರ್ದೇಶಕ ಫರ್ಹಾನ್ ‘ಡಾನ್ 3’ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ವರ್ಷ ಜುಲೈನಿಂದ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮತ್ತೆ ಪತಿ ಜೊತೆ ಒಂದಾಗುವ ಸೂಚನೆ ನೀಡಿದ ಆಲಿಯಾ ಸಿದ್ದಿಕಿ

    ಈಗಾಗಲೇ ಶಾರುಖ್ ಖಾನ್ (Sharukh Khan) ನಟಿಸಿರುವ ‘ಡಾನ್’ ಸರಣಿ ಸಿನಿಮಾಗಳು ಪ್ರೇಕ್ಷಕರಿಗೆ ಮೆಚ್ಚುಗೆಯಾಗಿತ್ತು. ಡಾನ್ ಪಾರ್ಟ್ 3ನಲ್ಲಿ ರಣ್‌ವೀರ್ ಸಿಂಗ್ ನಟಿಸುತ್ತಿರುವ ಕಾರಣ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಣ್‌ವೀರ್‌ಗೆ ಈ ಚಿತ್ರದ ಮೂಲಕ ಬ್ರೇಕ್‌ ಸಿಗುತ್ತಾ? ಕಾದುನೋಡಬೇಕಿದೆ.

  • Don 3: ರಣ್‌ವೀರ್ ಜೊತೆ ರೊಮ್ಯಾನ್ಸ್ ಮಾಡಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ಕಿಯಾರಾ

    Don 3: ರಣ್‌ವೀರ್ ಜೊತೆ ರೊಮ್ಯಾನ್ಸ್ ಮಾಡಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ಕಿಯಾರಾ

    ಬಾಲಿವುಡ್ ನಟಿ ಕಿಯಾರಾ ಅಡ್ವಾಣಿಗೆ (Kiara Advani) ಮದುವೆಯಾದ್ಮೇಲೂ ಬಾಲಿವುಡ್‌ನಲ್ಲಿ ಭಾರೀ ಬೇಡಿಕೆಯಿದೆ. ಮದುವೆಯ ಬಳಿಕ ಮತ್ತಷ್ಟು ಹಾಟ್ ಆಗಿ ನಟಿ ಕಾಣಿಸಿಕೊಳ್ತಿದ್ದಾರೆ. ಇದೀಗ ‘ಡಾನ್ 3’ (Don 3) ಚಿತ್ರದಲ್ಲಿ ರಣ್‌ವೀರ್ ಸಿಂಗ್ (Ranveer Singh) ಜೊತೆ ನಟಿಸಲು 50%ರಷ್ಟು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ನಟಿಯ ಸಂಭಾವನೆ ಕೇಳಿ ಬಾಲಿವುಡ್ ಮಂದಿ ದಂಗಾಗಿದ್ದಾರೆ.

    Kiara Advani

    ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಚಿತ್ರದಲ್ಲಿ ರಣ್‌ವೀರ್ ಸಿಂಗ್ ಹೀರೋ ಆಗಿ ನಟಿಸಲಿದ್ದಾರೆ. ಅವರಿಗೆ ಕಿಯಾರಾ ಅಡ್ವಾಣಿ ಹೀರೋಯಿನ್ ಆಗಿ ನಟಿಸುವ ಚಾನ್ಸ್ ಸಿಕ್ಕಿದೆ. ಈ ಸಿನಿಮಾದಲ್ಲಿ ನಟಿಸಲು ಕಿಯಾರಾ, 13 ಕೋಟಿ ರೂ. ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಲೂಸ್ ಮಾದ ಯೋಗಿ ನಟನೆಯ ‘ರೋಸಿ’ ಸಿನಿಮಾದಲ್ಲಿ ಒರಟ ಪ್ರಶಾಂತ್

    Kiara Advani

    ಕಿಯಾರಾ ನಟಿಸಿದ ಎಂ.ಎಸ್ ಧೋನಿ, ಶೇರ್ಷಾ, ಕಬೀರ್ ಸಿಂಗ್, ಭೂಲ್ ಭುಲಯ್ಯ 2, ಚಿತ್ರಗಳು ಸೂಪರ್ ಹಿಟ್ ಆಗಿದೆ. ಈ ಹಿಂದೆ 4ರಿಂದ 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ಈಗ ಡಾನ್ ಪಾರ್ಟ್ 3ಗೆ 13 ಕೋಟಿ ರೂ. ಡಿಮ್ಯಾಂಡ್ ಮಾಡಿ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಆ ಪಾತ್ರಕ್ಕೆ ಕಿಯಾರಾನೇ ಸೂಕ್ತ ಎಂದು ನಟಿಯ ಬೇಡಿಕೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರಂತೆ ಚಿತ್ರತಂಡ.

    ‘ಡಾನ್ 3’ ಸಿನಿಮಾದಲ್ಲಿ ಸಾಹಸ ದೃಶ್ಯಗಳು ಹೆಚ್ಚಾಗಿರಲಿದೆ. ಚಿತ್ರದ ಆ್ಯಕ್ಷನ್ ದೃಶ್ಯಗಳಿಗಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಎಂದೂ ನಟಿಸಿರದ ಪಾತ್ರದಲ್ಲಿ ಕಿಯಾರಾ ನಟಿಸುತ್ತಿದ್ದಾರೆ. ರಣ್‌ವೀರ್ ಸಿಂಗ್- ಕಿಯಾರಾ ರೊಮ್ಯಾನ್ಸ್ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಕೇಡಿ ಲೇಡಿಯಾಗಿ ಅಬ್ಬರಿಸಲಿದ್ದಾರೆ ಕಿಯಾರಾ ಅಡ್ವಾಣಿ

    ಕೇಡಿ ಲೇಡಿಯಾಗಿ ಅಬ್ಬರಿಸಲಿದ್ದಾರೆ ಕಿಯಾರಾ ಅಡ್ವಾಣಿ

    ಬಾಲಿವುಡ್ (Bollywood) ಗ್ಲ್ಯಾಮರಸ್ ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಹೊಸ ಬಗೆಯ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಒಂದು ಸಿನಿಮಾದಿಂದ ಮತ್ತೊಂದು ಚಿತ್ರದಲ್ಲಿ ವಿಭಿನ್ನ ರೋಲ್‌ಗಳನ್ನ ಮಾಡ್ತಿದ್ದಾರೆ. ಈಗ ಅವರು ವಿಲನ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಇಲ್ಲಿದೆ ಅಪ್‌ಡೇಟ್

    ಮದುವೆಯಾದ್ಮೇಲೂ ಕಿಯಾರಾ (Kiara Advani) ನಾಯಕಿಯಾಗಿ ಮಿಂಚ್ತಿದ್ದಾರೆ. ಹೀಗಿರುವಾಗ ಡಾನ್ 3 (Don 3) ಚಿತ್ರದಲ್ಲಿ ಲೇಡಿ ವಿಲನ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಹೀರೋ ರಣ್‌ವೀರ್ ಸಿಂಗ್‌ಗೆ ಕೇಡಿ ಲೇಡಿಯಾಗಲು ಹೊರಟಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ

    ಈ ಹಿಂದೆ ‘ಡಾನ್ 2’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಪೊಲೀಸ್ ಪಾತ್ರ ಮಾಡಿದರೆ ಶಾರುಖ್ ಖಾನ್ (Sharukh Khan) ಅವರು ಡಾನ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ‘ಡಾನ್ 3’ (Don 3) ಚಿತ್ರದಲ್ಲಿ ಪಾತ್ರವರ್ಗ ಬದಲಾಗುತ್ತಿದೆ. ಶಾರುಖ್ ಖಾನ್ ಬದಲು ರಣವೀರ್ ಸಿಂಗ್ (Ranveer Singh) ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಕಿಯಾರಾಗೆ ಪ್ರಮುಖ ಪಾತ್ರವೊಂದನ್ನು ನೀಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಹಾಲಿವುಡ್‌ನಲ್ಲಿ ಸೆಟಲ್ ಆಗಿದ್ದಾರೆ. ಅವರು ಬಾಲಿವುಡ್‌ಗೆ ಮರಳುವುದು ಅನುಮಾನ. ಹೀಗಾಗಿ ಅವರು ಮಾಡಿದ್ದ ರೋಮಾ ಪಾತ್ರಕ್ಕೆ ಮತ್ತೊಬ್ಬರ ಆಯ್ಕೆ ನಡೆಯಬೇಕಿದೆ. ಈಗ ಕಿಯಾರಾ ಮಾಡುತ್ತಿರುವುದು ರೋಮಾ ಪಾತ್ರ ಅಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳಿಗೆ ಚಿತ್ರತಂಡದಿಂದಲೇ ಸ್ಪಷ್ಟನೆ ಸಿಗಬೇಕಿದೆ.

    ಕಿಯಾರಾ ಅಡ್ವಾಣಿ ಅವರು ವಿಲನ್ ರೀತಿಯ ಪಾತ್ರಗಳನ್ನು ಈವರೆಗೆ ನಿರ್ವಹಿಸಿಲ್ಲ. ಹೀಗಾಗಿ, ಅವರು ಈ ಪಾತ್ರ ಒಪ್ಪಿಕೊಂಡಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಸೃಷ್ಟಿ ಆಗಿದೆ. ಅವರು ಈ ಚಿತ್ರದ ಮೂಲಕ ಹೊಸ ರೀತಿಯಲ್ಲಿ ಪ್ರೇಕ್ಷಕರ ಎದುರು ಬರಲು ರೆಡಿ ಆಗುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಡಾನ್ 3’ ಸಿನಿಮಾದಿಂದ ಹೊರಬಂದ ಶಾರುಖ್ ಖಾನ್

    ‘ಡಾನ್ 3’ ಸಿನಿಮಾದಿಂದ ಹೊರಬಂದ ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ವೃತ್ತಿ ಬದುಕಿಗೆ ಸಾಥ್ ನೀಡಿದ ಚಿತ್ರದ ಸರಣಿಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಶಾರುಖ್ ಖಾನ್ ಈ ಹಿಂದೆ ಡಾನ್, ಡಾನ್ 2 ಸರಣಿಯಲ್ಲಿ ನಟಿಸಿದ್ದರು. ಇದೀಗ ಡಾನ್ 3 ಸಿನಿಮಾ ಮಾಡಲು ನಿರ್ದೇಶಕ ಫರ್ಹಾನ್ ಅಖ್ತರ್ ಸಿದ್ಧತೆ ಮಾಡಿಕೊಂಡಿದ್ದು, ಈ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.

    ಇತ್ತೀಚೆಗಷ್ಟೇ ರಿತೇಶ್ ಮಾತನಾಡುತ್ತಾ ತಮ್ಮ ಎಕ್ಸೆಲ್ ಎಂಟರ್ ಟೇನ್ಮೆಂಟ್ ನಿರ್ಮಾಣ ಸಂಸ್ಥೆಯಿಂದ ಡಾನ್ 3 ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಫರ್ಹಾನ್ ಈಗಾಗಲೇ ಆ ಸಿನಿಮಾದ ತಯಾರಿ ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿಯೂ ತಿಳಿಸಿದ್ದರು. ಸದ್ಯ ಸಿಗುತ್ತಿರುವ ಮಾಹಿತಿಯ ಪ್ರಕಾರ ಶಾರುಖ್ ಖಾನ್ ಈ ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅತೀ ಶೀಘ್ರದಲ್ಲೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ದಿ ಕೇರಳ ಸ್ಟೋರಿ

    ಡಾನ್ 3 ಸಿನಿಮಾದ ಕಥೆಯು ಶಾರುಖ್ ಖಾನ್ ಗೆ ಇಷ್ಟವಾಗಿಲ್ಲವಂತೆ. ಅಲ್ಲದೇ, ಮತ್ತದೆ ಗಿಮಿಕ್ ಮಾಡುವಂತಹ ಸಿನಿಮಾದಲ್ಲಿ ತಾವು ನಟಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರಂತೆ. ಜೊತೆಗೆ ಸಂಭಾವನೆ ವಿಚಾರದಲ್ಲೂ ಕಿರಿಕ್ ಆಗಿದೆ ಎಂದು ಹೇಳಲಾಗುತ್ತಿದೆ. ಡಾನ್ 3 ಸಿನಿಮಾ ಮಾಡಿದರೆ ಲಾಭದಲ್ಲಿ ಪರ್ಸಂಟೇಜ್ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.