Tag: ಡಾನ್ಸ್ ಕರ್ನಾಟಕ ಡಾನ್ಸ್

  • ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗೆಲುವಿನ ಜೋಡಿಗೆ ಸಿಕ್ತು ಭರ್ಜರಿ ಬಹುಮಾನ ಜೊತೆ ಅಪ್ಪು ಟ್ರೋಫಿ

    ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗೆಲುವಿನ ಜೋಡಿಗೆ ಸಿಕ್ತು ಭರ್ಜರಿ ಬಹುಮಾನ ಜೊತೆ ಅಪ್ಪು ಟ್ರೋಫಿ

    ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – 6  (Dance Karnataka Dance 6), ಇಡೀ ಕರ್ನಾಟಕವೇ ಮೆಚ್ಚಿ ಮೆರೆಸಿದ ಅದ್ಧೂರಿ ಡ್ಯಾನ್ಸ್ ಶೋ . ಡ್ಯಾನ್ಸಿಂಗ್ ಮಹಾಗುರು ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಯಶಸ್ವಿಗೊಂಡ ಈ ಕಾರ್ಯಕ್ರಮ ಕಳೆದ ಶನಿವಾರವಷ್ಟೇ ಭರ್ಜರಿಯಾಗಿ ಫಿನಾಲೆ ಮುಗಿಸಿದೆ. ಈ ಸೀಸನ್ ನ ಆರಂಭದಿಂದಲೂ ನೃತ್ಯದ ಅನೇಕ ಪ್ರಯೋಗಗಳಿಂದ ವೀಕ್ಷಕರ ಮನಸೆಳೆದಿದ್ದ ಈ ಶೋ ಕೊನೆಯ ಹಂತದಲ್ಲೂ ಅದನ್ನು ಮುಂದುವರೆಸಿ ದೊಡ್ಡ ಮಟ್ಟದ ಚಪ್ಪಾಳೆ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ ವಾರದಿಂದ ವಾರಕ್ಕೆ ಸ್ಪರ್ಧಿಗಳ ಧೈರ್ಯ , ಶಿಸ್ತು ಮತ್ತು ಛಲದಿಂದ ಸ್ಪರ್ಧೆ ಕಠಿಣವಾಗುತ್ತಿದ್ದಿದ್ದು ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

    ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ” ಪವರ್ ಸ್ಟಾರ್ ಟ್ರೋಫಿ ” (Trophy). ಇಡೀ ರಾಜ್ಯದಾದ್ಯಂತ ಸಂಚರಿಸಿ ಅಭಿಮಾನಿಗಳ ಅಪ್ಪುಗೆ (Appu) ಪಡೆದು ಬಂದಿದ್ದ ಈ ಟ್ರೋಫಿಯನ್ನು ಹಾಗು ಅಪ್ಪು ಅವರ ಆಶೀರ್ವಾದವನ್ನು ಪಡೆದಿದ್ದಾರೆ ” ಸಧ್ವಿನ್ – ಶಾರಿಕಾ” ಜೋಡಿ. ಶಿವಣ್ಣ (Shivraj Kumar)ಅವರ ಕೈಯಿಂದ ಈ ಪ್ರಶಸ್ತಿಯನ್ನು ಪಡೆದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ ಆರರ ವಿಜೇತರಾಗಿದ್ದಾರೆ. ಇದನ್ನೂ ಓದಿ:‘ಸಂಸ್ಕಾರ ಭಾರತ’ದಲ್ಲಿ ಅನಾಮಿಕನ ರೋಚಕ ಸ್ಟೋರಿ

    ಈ ಫಿನಾಲೆ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆಗಟ್ಟಿದವರು ಎಂದರೆ ಇದೇ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗುತ್ತಿರುವ ನವರಸನಾಯಕ ಜಗ್ಗೇಶ್ (Jaggesh)   , ಅದಿತಿ ಪ್ರಭುದೇವ ಮತ್ತು ನಟ ರಾಕ್ಷಸ ಡಾಲಿ ಧನಂಜಯ ಅಭಿನಯದ ” ತೋತಾಪುರಿ ” ಚಿತ್ರತಂಡ .  ಸೂಪರ್ ಹಿಟ್ ಸಿನಿಮಾ ಸಿದ್ಲಿಂಗು ಖ್ಯಾತಿಯ ಎಂ . ಸಿ . ವಿಜಯ್ ಪ್ರಸಾದ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸುರೇಶ್ .ಕೆಎ  ಅವರು ಹಣಹೂಡಿಕೆ ಮಾಡಿದ್ದಾರೆ.

    ಫಿನಾಲೆ ಕಾರ್ಯಕ್ರಮದ ವೇದಿಕೆಯಲ್ಲೊಂದು ಸಾರ್ಥಕ ಕ್ಷಣಕ್ಕೆ ಕಾರಣರಾದ ಈ ತಂಡ ಹಾಗು ನಿರ್ಮಾಪಕ ಸುರೇಶ್ ಅವರು ನವರಸ ನಾಯಕ ಜಗ್ಗೇಶ್ ಮತ್ತು ಡಾ . ಶಿವರಾಜ್ ಕುಮಾರ್ ಹಾಗು “ತೋತಾಪುರಿ ” ಚಿತ್ರ ತಂಡದ ಸಮ್ಮುಖದಲ್ಲಿ ಡಿಕೆಡಿ -6 ಕಾರ್ಯಕ್ರಮದ ವಿಶೇಷ ಪ್ರತಿಭೆಗಳಾದ ಹೃಷಿಕೇಶ್ ಮತ್ತು ಸಹನಾ ಜೋಡಿಗೆ ತಲಾ 1 ಲಕ್ಷ ರೂ ವನ್ನು ಬಹುಮಾನವಾಗಿ ನೀಡಿ ಪ್ರೋತ್ಸಾಹಿಸಿದ್ದಾರೆ.

    ಇದೇ ಸೆಪ್ಟೆಂಬರ್ 30 ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗಿತ್ತಿರುವ ಈ ವಿಶೇಷ ಸಿನಿಮಾಕ್ಕೆ ಅದ್ಧೂರಿಯಾದ ಯಶಸ್ಸು ಸಿಗಲಿ ಕನ್ನಡ ಚಿತ್ರೋದ್ಯಮ , ಚಿತ್ರಪ್ರೇಮಿಗಳು ಇದನ್ನು ಪ್ರೀತಿಯಿಂದ ಒಪ್ಪಿಕೊಂಡು ಅಪ್ಪಿಕೊಳ್ಳಲಿ ಎಂದು ಜೀ ಕನ್ನಡ ವಾಹಿನಿ ಈ ಮೂಲಕ ಆಶಿಸಿ , ಹಾರೈಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಸೆ.21ಕ್ಕೆ ‘ಡಾನ್ಸ್ ಕರ್ನಾಟಕ ಡಾನ್ಸ್’ ಫಿನಾಲೆ : ಯಾರ ಪಾಲಾಗಲಿದೆ ಪವರ್ ಸ್ಟಾರ್ ಟ್ರೋಫಿ?

    ಸೆ.21ಕ್ಕೆ ‘ಡಾನ್ಸ್ ಕರ್ನಾಟಕ ಡಾನ್ಸ್’ ಫಿನಾಲೆ : ಯಾರ ಪಾಲಾಗಲಿದೆ ಪವರ್ ಸ್ಟಾರ್ ಟ್ರೋಫಿ?

    ದಾ  ವಿನೂತನ ಮನರಂಜನೆ  ನೀಡುತ್ತಿರುವ ಜೀ ಕನ್ನಡ ವಾಹಿನಿಯವರು ಕರ್ನಾಟಕದ ಪ್ರತಿಭೆಗಳಿಗೆಂದೇ  ಅನೇಕ  ಕಾರ್ಯಕ್ರಮಗಳನ್ನು ಮೀಸಲಿಡುತ್ತ ಬಂದಿದ್ದಾರೆ. ಯಶಸ್ವಿ 5 ಸೀಸನ್ ಗಳನ್ನು ಪೂರೈಸಿ ಇದೀಗ 6 ನೇ ಸೀಸನ್ ಅಂತಿಮ ಘಟ್ಟ ತಲುಪಿದೆ ದಕ್ಷಿಣ ಭಾರತದ ಅತಿ ದೊಡ್ಡ ಡಾನ್ಸ್ ರಿಯಾಲಿಟಿ ಶೋ  ಡಾನ್ಸ್ ಕರ್ನಾಟಕ ಡಾನ್ಸ್ -6. (Dance Karnataka Dance)ಇದೇ ಶನಿವಾರ ಸಂಜೆ 6.00 ಕ್ಕೆ ಇದರ ಗ್ರ್ಯಾಂಡ್ ಫಿನಾಲೆ  ಪ್ರಸಾರವಾಗಲಿದೆ.

    ವಿಭಿನ್ನ ರೀತಿಯ ನೃತ್ಯ ಪ್ರಯೋಗಗಳಿಗೆ ಸಾಕ್ಷಿಯಾಗಿರುವ ಈ ವೇದಿಕೆ ನಾಟ್ಯ ವೈಭವವನ್ನು ಇಡೀ ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದೆ. ಅದರಲ್ಲೂ ವಿಶೇಷವಾಗಿ ಈ ಬಾರಿ ನಮ್ಮೆಲ್ಲರ ನೆಚ್ಚಿನ ಅಪ್ಪು ಪುನೀತ್ ರಾಜ್ ಕುಮಾರ್ (Puneeth Rajkumar)ಅವರ ” ಪವರ್ ಸ್ಟಾರ್ ಟ್ರೋಫಿ ” ಯನ್ನು ಭರ್ಜರಿಯಾಗಿ ಅನಾವರಣಗೊಳಿಸಿದ್ದು ಆ ವಿಶಿಷ್ಟ ಟ್ರೋಫಿ ವಿಜೇತರ ಪಾಲಾಗಲಿದೆ. ಅಷ್ಟೇ ಅಲ್ಲದೆ ಅದು ಯಾರ ಕೈಸೇರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ. ಇದನ್ನೂ ಓದಿ:ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಸತತ ಐದು ತಿಂಗಳುಗಳ ಕಾಲ ವೀಕ್ಷಕರನ್ನು ಕುಣಿಸಿ ರಂಜಿಸಿದ ಈ ಕಾರ್ಯಕ್ರಮ ಕಳೆದ ಐದು ಸೀಸನ್ ಗಳಿಗಿಂತ ವಿಶಿಷ್ಟವಾಗಿತ್ತು. ಈ ಬಾರಿ ಕರುನಾಡ ಚಕ್ರವರ್ತಿ ಡಾ . ಶಿವರಾಜ್ ಕುಮಾರ್ (Shivraj Kumar) ಅವರು ಡ್ಯಾನ್ಸಿಂಗ್ ಮಹಾಗುರುವಾಗಿ ಆಗಮಿಸಿದ್ದರಿಂದ ವೇದಿಕೆಗೆ ಮತ್ತಷ್ಟು ಕಳೆಗಟ್ಟಿತು ಹಾಗು ಘನತೆ ಹೆಚ್ಚಿತು ಎನ್ನುವುದು ನೋಡುಗರ ಅಭಿಪ್ರಾಯವಾಗಿದೆ.

    ಆರಂಭದಿಂದಲೂ ಭರ್ಜರಿ ರೇಟಿಂಗ್ ಗಳಿಸುವುದರ ಮೂಲಕ ದಾಖಲೆ ನಿರ್ಮಿಸದ ಈ ಶೋ ವಾರದಿಂದ ವಾರಕ್ಕೆ ತನ್ನ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಅಂತಿಮವಾಗಿ 7 ಜೋಡಿಗಳು ಫಿನಾಲೆ (Finale) ಹಂತಕ್ಕೆ ತಲುಪಿದ್ದು ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎನ್ನುವುದನ್ನು ವೀಕ್ಷಕರು ತುದಿಗಾಲಿನಲ್ಲಿ ನಿಂತು ಕಾಯುವಂತೆ ಮಾಡಿದೆ.

    ಇನ್ನು ಕಾರ್ಯಕ್ರಮಕ್ಕೆ ಮತ್ತಷ್ಟು ರಂಗುತುಂಬಿದವರೆಂದರೆ ತೀರ್ಪುಗಾರರರಾದ ದೇಶದ ಹೆಮ್ಮೆಯ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ , ಸ್ಯಾಂಡಲ್ ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ (Rakshita) , ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ (Arjun Janya) ಮತ್ತು ಡ್ಯಾನ್ಸಿಂಗ್ ಮಹಾಗುರುವಾಗಿದ್ದ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು. ಎಂದಿನಂತೆ ಅನುಶ್ರೀ (Anushree) ಅವರ ನಿರೂಪಣೆ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ -6 ನ ಗ್ರಾಂಡ್ ಫಿನಾಲೆ ಚಿತ್ರೀಕರಣ ಇದೇ ಸೆಪ್ಟೆಂಬರ್ 21 ಬುಧವಾರದಂದು ಸಂಜೆ 5.30 ಕ್ಕೆ ಕನಕಪುರದ ರೂರಲ್ ಡಿಗ್ರಿ ಕಾಲೇಜ್ ಮೈದಾನದಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]