Tag: ಡಾಕ್ಯುಮೆಂಟರಿ

  • ‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್  ಟ್ರೈಲರ್ : ನರಮೇಧದ ಕರಾಳ ಅಧ್ಯಾಯ

    ‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್ ಟ್ರೈಲರ್ : ನರಮೇಧದ ಕರಾಳ ಅಧ್ಯಾಯ

    ಬಾಲಿವುಡ್‌ನಲ್ಲಿ (Bollywood) ಹೊಸ ಅಲೆ ಸೃಷ್ಟಿಸಿದ ಸಿನಿಮಾ ಅಂದರೆ ಅದು ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ. 2022ರಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ವಿವೇಕ್ ಅಗ್ನಿಹೋತ್ರಿ ನಿರ್ದೇಶದ ಸಿನಿಮಾ ಸೌಂಡ್ ಮಾಡಿತ್ತು. ಈ ಚಿತ್ರದ ನಿರ್ದೇಶಕ ಫ್ಯಾನ್ಸ್ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಬಾರಿ ಅವರು ಮತ್ತೊಂದು ‘ದಿ ಕಾಶ್ಮೀರ್ ಫೈಲ್ಸ್’ ಜೊತೆ ಬರೋದಾಗಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇನ್ನೂ ಎಲ್ಲೂ ಹೇಳಿರದ ಸಾಕಷ್ಟು ವಿಚಾರಗಳನ್ನ ಒಟಿಟಿ ಮೂಲಕ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ.

    2022ರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನುಪಮ್ ಖೇರ್ (Anupam Kher) ಅವರು ಪ್ರಮುಖವಾಗಿ ನಟಿಸಿದ್ದರು. ಕಾಶ್ಮೀರ ಪಂಡಿತರನ್ನ ಆಧರಿಸಿ ನೈಜ ಕಥೆಯನ್ನೇ ಈ ಸಿನಿಮಾ ಮೂಲಕ ತೋರಿಸಿಲಾಗಿತ್ತು. ಅನೇಕರು ಈ ಸಿನಿಮಾವನ್ನು ಖಂಡಿಸಿದ್ದರು. ಆದರೆ ಸಾಕಷ್ಟು ಟೀಕೆ, ವಿರೋಧದ ನಡುವೆಯೂ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು.

    ವಿವೇಕ್ ಅಗ್ನಿಹೋತ್ರಿ ಅವರು ‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್’ ಎಂಬ ಪ್ರಾಜೆಕ್ಟ್ ಈಗ ಘೋಷಣೆ ಮಾಡಿದ್ದಾರೆ. ಇದರ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅನೇಕ ಕಾಶ್ಮೀರಿ ಹಿಂದೂಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದರ ಜೊತೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ತುಣುಕುಗಳನ್ನ ಸೇರಿಸಲಾಗಿದೆ. ಈ ಬಾರಿ ಒಟಿಟಿ ಮೂಲಕ ಸಿನಿಮಾ ರಿಲೀಸ್ ಆಗಲಿದೆ.

    ಈ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ವಿವೇಕ್, ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಾಗಿ ಮಾಡಿದ ಸಂಶೋಧನೆ, ಘಟನೆಯ ಕುರಿತಾಗಿ ಮಾತನಾಡಿಸಿದವರು ವಿಡಿಯೋ ಮತ್ತು ಆ ಹೊತ್ತಿನ ಕೆಲವು ಮಹತ್ವದ ದಾಖಲೆಗಳನ್ನು ಇದರಲ್ಲಿ ಸೇರಿಸಲಾಗಿದೆ. ನನ್ನ ಸಂಶೋಧನೆ ಒಟ್ಟು ಭಾಗ ಇದಾಗಿದೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಐಶ್ವರ್ಯಾ

    ನರಮೇಧ ನಡೆದಿದೆ ಎಂದು ಒಪ್ಪದವರು, ಭಯೋತ್ಪಾದಕ ಬೆಂಬಲಿಗರು ಮತ್ತು ಭಾರತದ ಶತ್ರುಗಳು ಕಾಶ್ಮೀರ ಫೈಲ್ಸ್ನ ಪ್ರಶ್ನಿಸಿದರು. ಕಾಶ್ಮೀರ ಹಿಂದೂಗಳ ಹತ್ಯಾಕಾಂಡದ ಭೀಕರ ಸತ್ಯವನ್ನು ಈಗ ನಿಮ್ಮ ಮುಂದಿಡುತ್ತಿದ್ದೇನೆ. ಇದನ್ನು ದೆವ್ವಗಳು ಮಾತ್ರ ಪ್ರಶ್ನಿಸಬಹುದು. ಶೀಘ್ರದಲ್ಲೇ ಬರಲಿದೆ #KashmirUnreported ಎಂದು ವಿವೇಕ್ ಅಗ್ನಿಹೋತ್ರಿ ಬರೆದುಕೊಂಡಿದ್ದಾರೆ. ಕಾಶ್ಮೀರಿ ಪಂಡಿತರ ಇತಿಹಾಸದ ನಿರ್ಲಕ್ಷಿತ ಅಧ್ಯಾಯಗಳ ಮರುಶೋಧ ಎಂದು ಖಾಸಗಿ ಒಟಿಟಿವೊಂದು ಟ್ವೀಟ್ ಮಾಡಿಕೊಂಡಿದೆ.

     

    ‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್’ (Kashmir Files Unreported) ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಹೆಚ್ಚಿನ ಅಪ್‌ಡೇಟ್‌ಗೆ ಕಾದುನೋಡಬೇಕಿದೆ. ವಿವೇಕ್ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಟಿ ಕಾಂತಾರ ಬೆಡಗಿ ಸಪ್ತಮಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಈ ವರ್ಷದ ಅಂತ್ಯದಲ್ಲಿ ತೆರೆಗೆ ಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಗಂಧದ ಗುಡಿ’ಗಾಗಿ ಫಸ್ಟ್ ಟೈಮ್ ಧ್ವನಿದಾನ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

    ‘ಗಂಧದ ಗುಡಿ’ಗಾಗಿ ಫಸ್ಟ್ ಟೈಮ್ ಧ್ವನಿದಾನ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

    ಪುನೀತ್ ರಾಜ್‌ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ (Gandhad Gudi) ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಇದೇ ತಿಂಗಳು 28 ರಂದು ದೇಶಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಪ್ರಿ ರಿಲೀಸ್ ಇವೆಂಟ್ ಆಯೋಜನೆ ಮಾಡಿದೆ. ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗೆ ಗಂಧದ ಗುಡಿಗೆ ಏನೆಲ್ಲ ಶಕ್ತಿ ತುಂಬಬೇಕೋ ಆ ಕೆಲಸವನ್ನು ಪುನೀತ್ ಅವರ ಪತ್ನಿ ಅಶ್ವಿನಿ (Ashwini Puneeth) ಮಾಡುತ್ತಿದ್ದಾರೆ.

    ಗಂಧದ ಗುಡಿ ವಿಚಾರವಾಗಿ ಪುನೀತ್ (Puneeth Rajkumar) ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟಿರುವ ಅಶ್ವಿನಿ ಅವರು, ಇದೇ ಮೊದಲ ಬಾರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಗಂಧದ ಗುಡಿಯ ಆಶಯವನ್ನು ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಹೇಳಿದ್ದಾರಂತೆ. ಹಾಗಾಗಿ ಈ ಡಾಕ್ಯುಮೆಂಟರಿ (Documentary) ಮಾದರಿ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ರಾಜ್‌ಕುಮಾರ್ ಧ್ವನಿಯನ್ನು (Voiceover) ಕೇಳಬಹುದಾಗಿದೆ. ಇದನ್ನೂ ಓದಿ:ರೂಪೇಶ್-ಸಾನ್ಯ ಲವ್‌ಸ್ಟೋರಿಯಲ್ಲಿ ಹೊಸ ಟ್ವಿಸ್ಟ್: ಗುರೂಜಿ ಸೊಸೆಯಂತೆ ಸಾನ್ಯ

    ಪ್ರಿ ರಿಲೀಸ್ ಇವೆಂಟ್‌ಗಾಗಿ ಈಗಿನಿಂದಲೇ ಬೆಂಗಳೂರಿನ ಅರಮನೆ ಮೈದಾನ ಸಿದ್ಧವಾಗುತ್ತಿದೆ. ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದು, ಭಾರತೀಯ ಸಿನಿಮಾ ರಂಗದ ದಿಗ್ಗಜರು ಈ ಇವೆಂಟ್‌ಗೆ ಸಾಕ್ಷಿಯಾಗಲಿದ್ದಾರೆ. ಅಲ್ಲದೇ, ಕನ್ನಡದ ಬಹುತೇಕ ನಟ-ನಟಿಯರು ಹಾಗೂ ತಂತ್ರಜ್ಞರಿಗೆ ಈಗಾಗಲೇ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ರಾಜ್ ಕುಟುಂಬ ಆಹ್ವಾನ ನೀಡಿದೆ.

    ಗಂಧದ ಗುಡಿ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಅನೇಕರು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುನೀತ್ ವೃತ್ತಿ ಜೀವನದಲ್ಲಿ ಇದೊಂದು ಅಪರೂಪದ ಸಿನಿಮಾ ಆಗಲಿದೆ ಎಂದು ವಿಶ್ಲೇಷಿಸಿದ್ದಾರೆ. ನಾಡಿನ ಕಾಡು, ಜಲ ಸಂಪತ್ತು, ಜೀವ ಸಂಪತ್ತು ಹಾಗೂ ಕಾಡು ಪ್ರಾಣಿಗಳ ಹೊಸ ಲೋಕವನ್ನೇ ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಹಿಡಿದಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ನಟನೆಯ ಕೊನೆ ಸಿನಿಮಾ ಇದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಳಿಗೆ ಅವಮಾನ : ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಲುಕ್ ಔಟ್ ಸಂಕಟ

    ಕಾಳಿಗೆ ಅವಮಾನ : ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಲುಕ್ ಔಟ್ ಸಂಕಟ

    ಹಿಂದೂ ದೇವರನ್ನು ಸತತವಾಗಿ ಅವಮಾನಿಸುತ್ತಿರುವ ಲೀನಾ ಮಣಿಮೇಕಲೈ ವಿರುದ್ಧ ದೇಶಾದ್ಯಂತ ದೂರುಗಳು ದಾಖಲಾಗುತ್ತಿವೆ. ಕಾಳಿ ಕೈಯಲ್ಲಿ ಸಿಗರೇಟು ಮತ್ತು ಎಲ್‍ಜಿಬಿಡಿಕ್ಯೂ ಧ್ವಜ ಕೊಟ್ಟು ಹಿಂದೂಗಳ ಕಂಗೆಣ್ಣಿಗೆ ಗುರಿಯಾಗಿದ್ದ ಲೀನಾ, ಮೊನ್ನೆಯಷ್ಟೇ ಶಿವ ಪಾರ್ವತಿ ಕೈಯಲ್ಲೂ ಸಿಗರೇಟು ಕೊಟ್ಟು ಅಪಮಾನ ಮಾಡಿದ್ದಾರೆ. ಹೀಗಾಗಿ ಲೀನಾ ವಿರುದ್ಧ ದೂರುಗಳ ಮಹಾಪುರವೇ ಹರಿದು ಬರುತ್ತಿವೆ. ಅವರನ್ನು ಕೂಡಲೇ ಬಂಧಿಸಬೇಕು ಎಂಬ ಆಗ್ರಹ ಶುರುವಾಗಿದೆ.

    ಮಧ್ಯ ಪ್ರದೇಶದಲ್ಲಿ ಅತೀ ಹೆಚ್ಚು ದೂರುಗಳು ಲೀನಾ ಮೇಲೆ ದಾಖಲಾಗಿರುವುದರಿಂದ, ಮಧ್ಯಪ್ರದೇಶ ಪೊಲೀಸರು ಲೀನಾ ವಿರುದ್ಧ ಲುಕ್‍ ಔಟ್ ಸುತ್ತೋಲೆ ಹೊರಡಿಸಿದ್ದಾರೆ. ಐಪಿಸಿ ಸೆಕ್ಸನ್ 295 ಎ (ಧಾರ್ಮಿಕ ನಂಬಿಕೆಗಳಿಗೆ ಉದ್ದೇಶಪೂರ್ವಕವಾಗಿ ಭಾವನೆಗಳನ್ನು ಕೆರಳಿಸುವ ಕೃತ್ಯ) ಅಡಿಯಲ್ಲಿ ಭೋಪಾಲ್ ನಲ್ಲಿ ಎಫ್.ಐ.ಆರ್ ದಾಖಲಾಗಿದೆ. ಇದನ್ನೂ ಓದಿ:ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ಎಫ್.ಐ.ಆರ್ ದಾಖಲಾಗುತ್ತಿದ್ದಂತೆಯೇ ಮಧ್ಯ ಪ್ರದೇಶದ ಗೃಹ ಸಚಿವಾಲಯದ ಆದೇಶದ ಮೇರೆಗೆ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಲೀನಾ ಮಣಿಮೇಕಲೈ ಕಾಳಿ ಬಗ್ಗೆ ಸಾಕ್ಷ್ಯ ಚಿತ್ರವನ್ನು ತಯಾರಿಸಿ ಅದನ್ನು ಈಗ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಕಳುಹಿಸಿದ್ದಾರೆ. ಹಾಗಾಗಿ ಜುಲೈ 4 ರಂದು ಕಾಳಿಯ ಕೈಯಲ್ಲಿ ಸಿಗರೇಟು ಇರುವಂತಹ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಈ ಪೋಸ್ಟರ್ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ

    ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ

    ಪುನೀತ್ ರಾಜ್ ಕುಮಾರ್ ಕನಸಿನ ಕೂಸಾಗಿರುವ ಗಂಧದ ಗುಡಿ ಪ್ರಾಜೆಕ್ಟ್ ಬಗ್ಗೆ ಹೊಸದೊಂದು ಸುದ್ದಿ ಬಂದಿದೆ. ಅಪ್ಪು ತುಂಬಾ ಇಷ್ಟಪಟ್ಟು ಮಾಡಿರುವ ಡಾಕ್ಯುಮೆಂಟರಿ ಇದಾಗಿದ್ದು, ಇದಕ್ಕಾಗಿ ಅವರು ಹರಸಾಹಸವನ್ನೇ ಪಟ್ಟಿದ್ದಾರೆ. ಈ ಡಾಕ್ಯುಮೆಂಟರಿಯ ಟ್ರೈಲರ್ ಕಳೆದ ವರ್ಷ ನವೆಂಬರ್ ಒಂದರಂದು ರಿಲೀಸ್ ಆಗಬೇಕಿತ್ತು. ಅದಕ್ಕೂ ಮುನ್ನ ಪುನೀತ್ ಅಗಲಿದರು. ಕನ್ನಡ ರಾಜ್ಯೋತ್ಸವಕ್ಕೆ ಉಡುಗೊರೆಯಾಗಿ ಗಂಧದ ಗುಡಿ ಟ್ರೈಲರ್ ಕೊಡಬೇಕು ಎನ್ನುವ ಅವರ ಕನಸು ಇದೀಗ ಈಡೇರಲಿದೆ.

    ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ಟ್ರೈಲರ್ ರಿಲೀಸ್ ಮಾಡಬೇಕೆನ್ನುವುದು ಅಪ್ಪು ಕನಸಾಗಿದ್ದರಿಂದ ಅದೇ ತಿಂಗಳು ಗಂಧದ ಗುಡಿ ಡಾಕ್ಯುಮೆಂಟರಿಯನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನವೆಂಬರ್ ನಲ್ಲಿ ನೂರಾರು ಥಿಯೇಟರ್ ನಲ್ಲಿ ಈ ಡಾಕ್ಯುಮೆಂಟರಿ ತೆರೆ ಕಾಣಲಿದೆ. ಥಿಯೇಟರ್ ನಲ್ಲೇ ಇದನ್ನು ಪ್ರೇಕ್ಷಕರಿಗೆ ತೋರಿಸಬೇಕು ಎನ್ನುವುದು ಅಪ್ಪು ಪ್ಲ್ಯಾನ್ ಕೂಡ ಆಗಿತ್ತು. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಈ ಡಾಕ್ಯುಮೆಂಟರಿಗಾಗಿ ಅನೇಕ ದಿನಗಳ ಕಾಲ ಪುನೀತ್ ರಾಜ್ ಕುಮಾರ್ ಕಾಡು ಮೇಡು ಸುತ್ತಿದ್ದರು. ಸಮುದ್ರದಾಳಕ್ಕೂ ಇಳಿದಿದ್ದರು. ಮುರುಡೇಶ್ವರ ಸೇರಿದಂತೆ ಹಲವು ಕಡೆ ಈ ಡಾಕ್ಯುಮೆಂಟರಿಯ ಚಿತ್ರೀಕರಣ ಮಾಡಿದ್ದರು. ಇದೊಂದು ರೀತಿಯಲ್ಲೇ ಸಿನಿಮಾದ ಮಾದರಿಯಲ್ಲೇ ಶೂಟ್ ಆಗಿರುವುದರಿಂದ ಒಂದು ಗಂಟೆಗೂ ಅಧಿಕ ಸಮಯದ ಡಾಕ್ಯುಮೆಂಟರಿ ಇದಾಗಿದೆಯಂತೆ. ಅಲ್ಲದೇ, ಉನ್ನತ ತಂತ್ರಜ್ಞಾನವನ್ನು ಇದಕ್ಕಾಗಿ ಬಳಕೆ ಮಾಡಲಾಗಿದೆಯಂತೆ.

    Live Tv
    [brid partner=56869869 player=32851 video=960834 autoplay=true]

  • ಗಂಧದಗುಡಿ ಚಿಕ್ಕಪ್ಪನ ಕನಸಿನ ಯೋಜನೆ, ಕರ್ನಾಟಕದ ವೈಭವವನ್ನು ತೋರುವುದು: ವಿನಯ್ ರಾಜ್‍ಕುಮಾರ್

    ಗಂಧದಗುಡಿ ಚಿಕ್ಕಪ್ಪನ ಕನಸಿನ ಯೋಜನೆ, ಕರ್ನಾಟಕದ ವೈಭವವನ್ನು ತೋರುವುದು: ವಿನಯ್ ರಾಜ್‍ಕುಮಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್‍ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿರುವ ಗಂಧದಗುಡಿ ಸಾಕ್ಷಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿಕ್ಕಪ್ಪ ಅಪ್ಪು ಕುರಿತಾಗಿ ವಿನಯ್ ರಾಜ್‍ಕುಮಾರ್ ಅವರು ಭಾವುಕವಾದ ಕೆಲವು ನುಡಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಈ ಚಿತ್ರವು ಹಲವು ಕಾರಣಗಳಿಂದ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಮೊದಲನೆಯದಾಗಿ ಇದು ಚಿಕ್ಕಪ್ಪನ ಕನಸಿನ ಯೋಜನೆಯಾಗಿ ಕರ್ನಾಟಕದ ವೈಭವವನ್ನು ತೋರುವುದು, ಪ್ರೀತಿಯ ಅಭಿಮಾನಿಗಳಿಗೆ ಈ ಚಿತ್ರದ ಮೂಲಕ ನಟನಾಗಿ ಅಥವಾ ಸೂಪರ್ ಸ್ಟಾರ್‌ ಆಗಿ ಅಲ್ಲದೆ, ಅವರದೇ ಆದ ವೈಯಕ್ತಿಕ ದೃಷ್ಟಿಕೋನವನ್ನು ನೀಡುವುದು. ಎರಡನೆಯದಾಗಿ, ಇದು ನೈಸರ್ಗಿಕ ಪ್ರಪಂಚ, ಅದರ ವಿಶೇಷತೆಗಳು ಮತ್ತು ಅದು ನಮಗೆ ಪ್ರತಿದಿನವು ಕಲಿಸುವ ಪಾಠಗಳ ಬಗ್ಗೆ. ಏಕೆಂದರೆ ಇದು ನನ್ನ ತಾತನಿಗೆ ತುಂಬಾ ಹತ್ತಿರವಿದ್ದ ವಿಷಯ, ಚಿಕ್ಕಪ್ಪ ಅವರಿಗೆ ಇತ್ತೀಚೆಗೆ ಬೆಳವಣಿಗೆಯಾದ ಆಸಕ್ತಿ, ಹಾಗೆಯೇ ನನ್ನ ಜೀವನದ ಉತ್ಸಾಹ ಕೂಡ. ಅಜ್ಜಿಯ ಜನ್ಮದಿನದಂದು, ಈ ಕನಸು ನನಸಾಗುತ್ತಿರುವುದು ನನಗೆ ತುಂಬಾ ಖುಷಿ. ಇದುವರೆಗೂ ಕಂಡಿರದ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಅನುಭವ ಗಂಧದ ಗುಡಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ವಿನಯ್ ರಾಜ್‍ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Vinay Rajkumar (@vinayrajkumar)

    ಗಂಧದಗುಡಿ ಚರಿತ್ರೆಯನ್ನು ಮರುಕಳಿಸುವಂತಿದೆ ಈ ಗಂಧದಗುಡಿ ಟೀಸರ್ ಕರ್ನಾಟಕ ಅರಣ್ಯ ಸಂಪತ್ತಿನ ಮಾಹಿತಿಯನ್ನು ಮತ್ತು ಪ್ರಕೃತಿ ಸೌಂದರ್ಯದ ಬಗ್ಗೆ ಇರುವ ವಿಶೇಷ ಕಾಳಜಿಯ ಡಾಕ್ಯುಮೆಂಟರಿ ಇದಾಗಿದೆ. ಡಾ.ರಾಜ್‍ಕುಮಾರ್ ಹಾಗೂ ಶಿವರಾಜ್‍ಕುಮಾರ್ ಅವರು ಕೂಡ ಗಂಧದಗುಡಿ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಅಣ್ಣಾವ್ರ ಗಂಧದಗುಡಿ ಸಿನಿಮಾ ದಾಖಲೆ ಸೃಷ್ಟಿಸಿತ್ತು. ಶಿವಣ್ಣ ಅವರ ಗಂಧದ ಗುಡಿ ಸಾಕಷ್ಟು ಹೆಸರು ಮಾಡಿತ್ತು. ಇದೀಗ ಅದೇ ಹೆಸರಿನಲ್ಲಿ ಅಪ್ಪು ಅವರ ಡಾಕ್ಯುಮೆಂಟರಿ ಚಿತ್ರ ಸಿದ್ಧವಾಗಿದೆ ಸಿನಿಮಾದಲ್ಲಿ ಪ್ರಾಣಿ, ಪರಿಸರ ಸಂರಕ್ಷಣೆಯ ಕುರಿತಾಗಿ ಸಂದೇಶವನ್ನು ಸಾರುವ ಸಿನಿಮಾವನ್ನು ಮಾಡಿದ್ದರು. ಇದೀಗ ತಂದೆ ಮತ್ತು ಅಣ್ಣನ ಹಾದಿಯಲ್ಲೇ ಅಪ್ಪು ಕೂಡಾ ಇದೇ ರೀತಿಯ ಪ್ರಯೋಗವನ್ನು ಮಾಡಲು ಮುಂದಾಗಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ:  ರಾಜ್‌ ಕುಟುಂಬದಿಂದ ಗಂಧದಗುಡಿ‌ಯ 3ನೇ ಪ್ರಯೋಗ

    ಟೀಸರ್‌ನಲ್ಲಿ ದಟ್ಟಕಾಡಿನ ನಡುವೆ ಪುನೀತ್ ರಾಜ್‍ಕುಮಾರ್ ಅವರು ಜರ್ನಿಯನ್ನು ಆರಂಭಿಸುತ್ತಾರೆ.  ಬೆಟ್ಟ, ಗುಡ್ಡ ಪ್ರಕೃತಿಯ ಸೌಂದರ್ಯದ ನಡುವೆ  ಆನೆ, ಹುಲಿ, ಹಾವು ಸುಮುದ್ರ, ನದಿ  ಹಾಗೂ ಇನ್ನಿತರ ಸುಂದರವಾದ ತಾಣಗಳ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಮನಸ್ಸಲ್ಲಿ ಅಚ್ಚಾಗಿ ಉಳಿಯುವಂತೆ ಅದ್ಭುತವಾಗಿ ಸೆರೆ ಹಿಡಿಯಲಾಗಿದೆ.  ಟೀಸರ್ ಕೊನೆಯಲ್ಲಿ  ರಾಜ್ ಕುಮಾರ್  ಅವರ ಧ್ವನಿಯಲ್ಲಿ ನಿನ್ನ ಕೈ ಮುಗಿಯುತ್ತೆನೆ ಅಭಯಾರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು ಎಂದು ಹೇಳುತ್ತಿರುವ ಸಂದೇಶದ ಸಾಲುಗಳನ್ನು ಕೇಳ ಬಹುದಾಗಿದೆ. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

    ಅಮೋಘವರ್ಷ ನಿರ್ದೇಶನದ ಡಾಕ್ಯುಮೆಂಟರಿ ಇದಾಗಿದೆ. ಸಾಮಾನ್ಯವಾಗಿ ಡಾಕ್ಯುಮೆಂಟರಿ ಸಿನಿಮಾಗಳನ್ನು ಥಿಯೇಟರ್‍ನಲ್ಲಿ ರಿಲೀಸ್ ಮಾಡುವುದು ಕಡಿಮೆ. ಆದರೆ ಅಪ್ಪು ಅವರ ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್ ಆಗಲಿದ್ದು, ಮುಂದಿನ  ವರ್ಷ 2022ರಲ್ಲಿ ತೆರೆಕಾಣಲಿದೆ.

  • ಸಕ್ರೆಬೈಲು ಆನೆ ಬಿಡಾರದಲ್ಲಿ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಪವರ್ ಸ್ಟಾರ್

    ಸಕ್ರೆಬೈಲು ಆನೆ ಬಿಡಾರದಲ್ಲಿ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಪವರ್ ಸ್ಟಾರ್

    ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಡಾಕ್ಯುಮೆಂಟರಿ ಶೂಟಿಂಗ್‍ನಲ್ಲಿ ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಭಾಗಿಯಾಗಿದ್ದರು.

    ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಡಾಕ್ಯುಮೆಂಟರಿ ಚಿತ್ರೀಕರಣಕ್ಕಾಗಿ ಭೇಟಿ ನೀಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಆನೆ ಬಿಡಾರದ ಬಳಿ ಜಮಾಯಿಸಿದ್ದರು. ಇದನ್ನೂ ಓದಿ: ಮೋದಿ ಸರ್ಕಾರ ಮಾಡಿದ ತಪ್ಪನ್ನ ರಾಜ್ಯ ಸರ್ಕಾರವೂ ಮಾಡುತ್ತಿದೆ: ಕಿಮ್ಮನೆ ರತ್ನಾಕರ್

    ಸಾಕ್ಷ್ಯ ಚಿತ್ರದ ಚಿತ್ರೀಕರಣದ ಸಲುವಾಗಿ ಆನೆ ಬಿಡಾರದ ಕ್ರಾಲ್ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಯಿತು. ಚಿತ್ರೀಕರಣ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕ್ರಾಲ್ ಪ್ರದೇಶಕ್ಕೆ ಮಾಧ್ಯಮದವರು ಸೇರಿದಂತೆ ಸಾರ್ವಜನಿಕರ ಪ್ರವೇಶಕ್ಕೆ ನಿಬರ್ಂಧ ವಿಧಿಸಲಾಗಿತ್ತು.

    ಅಭಿಮಾನಿಗಳು ಆನೆ ಬಿಡಾರದ ಬಳಿ ಜಮಾಯಿಸಿರುವ ವಿಷಯ ತಿಳಿದ ಅಪ್ಪು ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಕ್ರಾಲ್ ಪ್ರದೇಶದಿಂದ ಹೊರಗೆ ಬಂದು ಅಭಿಮಾನಿಗಳಿಗೆ ಕೈ ಮುಗಿದು ನಮಸ್ಕರಿಸಿದರು. ಅಲ್ಲದೇ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡು ಮತ್ತೆ ಚಿತ್ರಿಕರಣದತ್ತ ತೆರಳಿದರು.