Tag: ಡಾಕ್ಟರೇಟ್ ಪದವಿ

  • ಮುಂಬೈ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ‘ಚಾರ್‌ಮಿನಾರ್‌’ ನಟಿ ಮೇಘನಾ

    ಮುಂಬೈ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ‘ಚಾರ್‌ಮಿನಾರ್‌’ ನಟಿ ಮೇಘನಾ

    ‘ಚಾರ್‌ಮಿನಾರ್’ ನಟಿ ಮೇಘನಾ ಗಾಂವ್ಕರ್ (Meghana Gaonkar) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 6 ವರ್ಷಗಳ ಸತತ ಶ್ರಮಕ್ಕೆ ಇದೀಗ ಫಲ ಸಿಕ್ಕಿದೆ. ಮುಂಬೈ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಮತ್ತು ಸಾಹಿತ್ಯ ವಿಷಯದಲ್ಲಿ ನಟಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಸಂಭ್ರಮವನ್ನು ಮೇಘನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌, ರಜತ್‌ ಬಂಧನ ಕೇಸ್‌ಗೆ ಟ್ವಿಸ್ಟ್‌ – ಮಧ್ಯರಾತ್ರಿಯೇ ಇಬ್ಬರೂ ರಿಲೀಸ್‌

    ತಾವು ಪಿಎಚ್‌ಡಿ ಮಾಡಿದ ಜರ್ನಿ ಬಗ್ಗೆ ಮೇಘನಾ ಮಾತನಾಡಿ, ಇವತ್ತು ನಾನು ನಿಮ್ಮೆಲ್ಲರ ಜೊತೆ ಹೆಮ್ಮೆಯ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ 6 ವರ್ಷಗಳಿಂದ ನಾನು ನನ್ನ ಪಿಎಚ್‌ಡಿ ಮಾಡುತ್ತಿದ್ದೆ. 2024ರ ಅಕ್ಟೋಬರ್‌ನಲ್ಲಿ ನಾನು ನನ್ನ ಪಿಎಚ್‌ಡಿ ವರದಿಯನ್ನು ಯಶಸ್ವಿಯಾಗಿ ಸಲ್ಲಿಸಿದ್ದೆ. ಕಳೆದ ವಾರ ನನ್ನ ವೈವಾ ಕೂಡ ಆಯ್ತು. ಇವತ್ತು ನಾನು ನನ್ನ ಡಾಕ್ಟರೇಟ್ ಪದವಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಇದು ತುಂಬಾ ವಿಶೇಷವಾದದ್ದು. ಯಾಕೆಂದರೆ ಈ ಪಿಎಚ್‌ಡಿ ಪಯಣ ಅಷ್ಟು ಸುಲಭ ಆಗಿರಲಿಲ್ಲ ಎಂದಿದ್ದಾರೆ.

     

    View this post on Instagram

     

    A post shared by Meghana Gaonkar (@meghanagaonkar)

    ನಾನು ನನ್ನ ಈ ಪಿಎಚ್‌ಡಿ ಡಾಕ್ಟರೇಟ್ ಪದವಿಯನ್ನು ನನ್ನ ತಂದೆಗೆ ಅರ್ಪಿಸುತ್ತೇನೆ. ಯಾಕೆಂದರೆ ನಾನು ಪಿಎಚ್‌ಡಿ ಮಾಡಬೇಕು ಎನ್ನುವುದು ನನ್ನ ತಂದೆಯ ಕನಸಾಗಿತ್ತು. ನನ್ನ ಪಿಎಚ್‌ಡಿ ವಿಷಯ ಸಿನಿಮಾ ಮತ್ತು ಸಾಹಿತ್ಯ ಆಗಿತ್ತು. ಈ ವಿಷಯ ನನಗೆ ತುಂಬಾ ಹತ್ತಿರವಾಗಿತ್ತು. ಈ ವಿಡಿಯೋ ಮೂಲಕ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಯಾಕೆಂದರೆ ನಾನು ಮೊದಲು ಪಿಎಚ್‌ಡಿ ಬಗ್ಗೆ ಹೇಳಿಕೊಂಡ ದಿನದಿಂದ ಈವರೆಗೆ ನೀವೆಲ್ಲರೂ ನನಗೆ ತುಂಬಾ ಬೆಂಬಲಿಸಿದ್ದೀರಿ. ಈ ಪಯಣದಲ್ಲಿ ನನ್ನ ಜೊತೆಯಲ್ಲಿ ನಿಂತಿರುವುದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು ಎಂದಿದ್ದಾರೆ. ನಟಿಯ ಸಾಧನೆಗೆ ಅಭಿಮಾನಿಗಳು, ಸ್ಯಾಂಡಲ್‌ವುಡ್ ಕಲಾವಿದರು ಮೆಚ್ಚುಗೆ ಸೂಚಿಸಿದ್ದಾರೆ.

     

    View this post on Instagram

     

    A post shared by Meghana Gaonkar (@meghanagaonkar)

    ಅಂದಹಾಗೆ, ಚಾರ್‌ಮಿನಾರ್, ಛೂ ಮಂತರ್, ದಿ ಜಡ್ಜ್‌ಮೆಂಟ್‌, ಶಿವಾಜಿ ಸುರತ್ಕಲ್ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಮೇಘನಾ ನಾಯಕಿಯಾಗಿ ನಟಿಸಿದ್ದಾರೆ.

  • ಸಚಿವ ಮಹದೇವಪ್ಪ ಪುತ್ರ ಈಗ ಆಗಿದ್ದಾರೆ ಡಾ. ಸುನೀಲ್‍ಬೋಸ್!

    ಸಚಿವ ಮಹದೇವಪ್ಪ ಪುತ್ರ ಈಗ ಆಗಿದ್ದಾರೆ ಡಾ. ಸುನೀಲ್‍ಬೋಸ್!

    ಮೈಸೂರು: ಲೋಕೋಪಯೋಗಿ ಸಚಿವ ಡಾ.ಹೆಚ್‍ಸಿ ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರಿಗೆ ಡಾಕ್ಟರೇಟ್ ಪದವಿ ಪಡೆದಿದ್ದಾರಾ..? ಅವರು ಇನ್ಮುಂದೆ ಬರೀ ಸುನೀಲ್ ಬೋಸ್ ಅಲ್ಲ ಡಾ.ಸುನೀಲ್ ಬೋಸ್ ಎನ್ನುವಂತಾಗಿದೆ.

    ಇದೇನಪ್ಪಾ ಸುನೀಲ್ ಬೋಸ್ ಯಾವಾಗ ಡಾಕ್ಟರೇಟ್ ಪಡೆದರು? ಯಾವ ವಿಚಾರದಲ್ಲಿ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ರು? ಅಥವಾ ಅವರ ಉತ್ತಮ ಸೇವೆ ಗುರುತಿಸಿ ಯಾವುದಾದರೂ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಬಿಡ್ತಾ ಅಂತಾ ನೀವು ಪ್ರಶ್ನೆ ಕೇಳಿದರೆ ನಮ್ಮ ಬಳಿಯೂ ಉತ್ತರ ಇಲ್ಲ.

    ಈ ಪ್ರಶ್ನೆಗೆ ಉತ್ತರ ಗೊತ್ತಿರುವುದು ಮೈಸೂರು ಜಿಲ್ಲೆಯ ಛಲವಾದಿ ಮಹಾ ಸಭಾ ಸಂಘಟನೆಗೆ ಮಾತ್ರ. ಏಕೆಂದರೆ ಆ ಸಂಘಟನೆಯೇ ತನ್ನ ಪೋಸ್ಟರ್ ಹಾಕಿ ಡಾ.ಸುನೀಲ್ ಬೋಸ್ ಅವರಿಗೆ ಶುಭಾಶಯ ಕೋರಿದೆ. ಟಿ. ನರಸೀಪುರದಲ್ಲಿ ಬಹುತೇಕ ಫ್ಲೆಕ್ಸ್, ಪೋಸ್ಟರ್ ಗಳಲ್ಲಿ ಡಾ.ಸುನಿಲ್ ಬೋಸ್ ಎಂದೇ ಬರೆಯಲಾಗಿದೆ.

    ಛಲವಾದಿ ಮಹಾಸಭಾದ ಸಂಘಟಕರು ಡಾಕ್ಟರೇಟ್ ಕೊಡುವ ಮೂಲಕ ಫ್ಲೆಕ್ಸ್ ಗಳಲ್ಲಿ ಸುನಿಲ್ ಬೋಸ್ ಅವರನ್ನು ಹೊಗಳಿ ತಮ್ಮ ನಾಯಕನ ಮೇಲಿನ ಪ್ರೀತಿ ಪ್ರದರ್ಶಿಸಿದ್ದಾರೆ. ಸಮಾಜಕ್ಕೆ ಉತ್ತಮ ಸೇವೆ ಹಾಗೂ ಕೊಡುಗೆಗಳನ್ನ ನೀಡುವ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಗುತ್ತೆ. ಆದರೆ ಇತ್ತೀಚೆಗಷ್ಟೆ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಸುನಿಲ್ ಬೋಸ್ ಅವರಿಗೆ ಈ ರೀತಿ ಡಾಕ್ಟರೇಟ್ ಸೇರಿಸಿದ್ದು ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಟಿ.ನರಸೀಪುರದ ಜನರಲ್ಲಿ ಮೂಡಿದೆ.