Tag: ಡಯಾಸ್‌ ಗಾಜು

  • ಜಮೀರ್ ರೋಷಾವೇಶದ‌ ಭಾಷಣಕ್ಕೆ ಗ್ಲಾಸ್‌ ಪೀಸ್‌ ಪೀಸ್!

    ಜಮೀರ್ ರೋಷಾವೇಶದ‌ ಭಾಷಣಕ್ಕೆ ಗ್ಲಾಸ್‌ ಪೀಸ್‌ ಪೀಸ್!

    ಬೆಳಗಾವಿ: ಸಚಿವ ಜಮೀರ್‌ ಅಹ್ಮದ್‌ (Zameer Ahemad Khan) ಅವರು ಇಂದು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಡಯಾಸ್‌ ಗಾಜನ್ನು ಕೈಯಿಂದ ಗುದ್ದಿ ಒಡೆದು ಹಾಕಿದ ಪ್ರಸಂಗವೊಂದು ಬೆಳಗಾವಿಯಲ್ಲಿ (Belagavi) ನಡೆದಿದೆ.

    ಜಮೀರ್‌ ಅವರು ಇಂದು ಬೆಳಗಾವಿಯ ಗೋಕಾಕ್ ನಗರದ ಕೆ.ಜಿ ಎನ್ ಹಾಲ್‌ ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್ ಪರ ಪ್ರಚಾರ ಭಾಷಣದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಸಚಿವರು ರೋಷಾವೇಶ ತೋರಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂಬುಲೆನ್ಸ್‌ನಿಂದ ಸರಣಿ ಅಪಘಾತ – ಚಾಲಕನ ಬಂಧನ

    ಸಾರೇ ಜಹಾಂಸೇ ಅಚ್ಚಾ ಎಂದು ಹೇಳುತ್ತ ನಾವೆಲ್ಲಾ ಒಂದು. ದೇಶ ಹಮಾರಾ ಹೈ ಹಮಾರಾ ಹೈ ಎನ್ನುತ್ತಾ ಜಮೀರ್‌ ಅವರು ಕೈಯಿಂದ ಡಯಾಸ್ ಗಾಜಿಗೆ ಗುದ್ದಿದ್ದಾರೆ. ಜಮೀರ್ ಗುದ್ದುತ್ತಿದ್ದಂತೆಯೇ ಡಯಾಸ್ ಗೆ ಅಳವಡಿಸಿದ ಗಾಜು ಒಡೆದು ಚೂರಾಗಿದೆ. ಗಾಜು ಪೀಸ್ ಪೀಸ್ ಆಗುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಕೂಗ ತೊಡಗಿದ್ದಾರೆ.