Tag: ಡಯಾಲಿಸಿಸ್

  • ಕಿಡ್ನಿ ರೋಗಿಗಳ ನೆರವಿಗಾಗಿ ʻಬಿರಿಯಾನಿ ಚಾಲೆಂಜ್ʼ – ಕೊಡಗಿನ ಯುವಕರ ತಂಡದಿಂದ ವಿಭಿನ್ನ ಆಲೋಚನೆ!

    ಕಿಡ್ನಿ ರೋಗಿಗಳ ನೆರವಿಗಾಗಿ ʻಬಿರಿಯಾನಿ ಚಾಲೆಂಜ್ʼ – ಕೊಡಗಿನ ಯುವಕರ ತಂಡದಿಂದ ವಿಭಿನ್ನ ಆಲೋಚನೆ!

    ಮಡಿಕೇರಿ: ಆ ಊರಿನಲ್ಲಿ ಬಡ ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ (Kidney Patients) ಖಾಸಗಿ ಸಂಸ್ಥೆಯೊಂದು ಉಚಿತವಾಗಿ ಡಯಾಲಿಸಿಸ್ ಮಾಡುವ ಮೂಲಕ ಆಶ್ರಯವಾಗಿತ್ತು. ಆದರೆ ದಿನ ಕಳೆದಂತೆ ಆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಉಚಿತವಾಗಿ ಡಯಲಿಸಿಸ್ ಮಾಡುವುದೇ ಕಷ್ಟಕರವಾಗಿದ್ದ ಸಂದರ್ಭದಲ್ಲಿ ಯುವಕರ ತಂಡ ವಿಭಿನ್ನ ಚಿಂತನೆಯೊಂದಿಗೆ ನೆರವಾಗಿದೆ. ʻಬಿರಿಯಾನಿ ಚಾಲೆಂಜ್ʼ (Biryani Challenge) ಎನ್ನುವ ವಿಭಿನ್ನ ಚಿಂತನೆಯೊಂದಿಗೆ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಆ ಸಂಸ್ಥೆಗೆ ನೀಡಿದೆ. ಏನ್ನಿದು ಬಿರಿಯಾನಿ ಚಾಲೆಂಜ್ ಅಂತೀರಾ ಮುಂದೆ ಓದಿ…

    ಮನುಷ್ಯರು ಒಳ್ಳೆಯವರಾದ್ರೆ ಸಾಲದು ಒಳ್ಳೆಯ ಕೆಲಸಗಳನ್ನ ಮಾಡಬೇಕು ಆಗ ಮಾತ್ರ ನಾವು ಸಮಾಜ ಸೇವಕರು ಎನಿಸಿಕೊಳ್ಳಲು ಸಾಧ್ಯ. ಯೆಸ್ ಅಂಥಹದ್ದೊಂದು ಕೆಲಸವನ್ನ ಕೊಡಗಿನ ಯುವಕರ ಗುಂಪು ಮಾಡ್ತಿದೆ. ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಸೇವೆ ನೀಡಲು ಯುವಕರ ತಂಡವೊಂದು ನಿರ್ಧರಿಸಿದೆ. ಇದರಿಂದ ಬಡ ರೋಗಿಗಳ ಪಾಲಿನ ಆಶಾಕಿರಣ ಎನಿಸಿದ್ದಾರೆ. ತಾಲ್ಲೂಕಿನಲ್ಲಿ ʻದಯಾ ರಿಯಾಬ್ಲಿಟೇಷನ್ ಟ್ರಸ್ಟ್ ತಣಲ್ʼ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸಲಾದ ಡಯಾಲಿಸಿಸ್ ಕೇಂದ್ರವು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿತ್ತು. ದಾನಿಗಳ ಸಹಕಾರದೊಂದಿಗೆ ರಿಯಾಯಿತಿ ದರದಲ್ಲಿ ಡಯಾಲಿಸಿಸ್ ಸೇವೆಯನ್ನ ನೀಡುತ್ತಿರುವ ಈ ಸಂಸ್ಥೆ ಈಗ ಸಾಲದ ಸುಳಿಯಲ್ಲಿ ಸಿಲುಕಿದೆ. ಕಳೆದ 6 ವರ್ಷಗಳಲ್ಲಿ ಸುಮಾರು 34 ರೋಗಿಗಳಿಗೆ 8,208 ಡಯಾಲಿಸಿಸ್ ಸೇವೆಯನ್ನ ನೀಡಿದ್ದು, 7 ಮಂದಿ ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೇವೆಯನ್ನು ನೀಡುತ್ತಿದೆ.

    ಡಯಾಲಿಸಿಸ್ ಘಟಕ ಆರ್ಥಿಕ ಸಂಕಷ್ಟದಿಂದ ಪಾರುಮಾಡುವ ನಿಟ್ಟಿನಲ್ಲಿ ಬಿರಿಯಾನಿ ಚಾಲೆಂಜ್ ಎಂಬ ವಿನೂತನ ಕಾರ್ಯಕ್ರಮವನ್ನು ಯುವಕರ ತಂಡ ಪರಿಚಯಿಸಿತ್ತು. ದಾನಿಗಳಿಂದ ಬಿರಿಯಾನಿ ತಯಾರಿಕೆಗೆ ಬೇಕಾದ ಅಕ್ಕಿ, ಮಾಂಸ, ಸಂಬಾರ ಪದಾರ್ಥಗಳನ್ನು ಸಂಗ್ರಹಿಸಿ ಬಿರಿಯಾನಿ ತಯಾರಿಸಿ ನಂತರ ಇದನ್ನು ಸಂಘ ಸಂಸ್ಥೆಗಳು, ಕಚೇರಿಗಳು, ಮನೆಗಳಿಗೆ ಮಾರಾಟ ಮಾಡಿ, ಬಂದ ಹಣವನ್ನು ಸಂಸ್ಥೆಗೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ನೆಲ್ಲಿಹುದಿಕೇರಿ ಗ್ರಾಮದಲ್ಲಿರುವ ಶಾದಿ ಮಾಹಲ್‌ನಲ್ಲಿ ಬಿರಿಯಾನಿ ತಯಾರಿಸಿ 200ಕ್ಕೂ ಅಧಿಕ ಯುವಕರು ಮಧ್ಯಾಹ್ನ ಸಮಯದಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಬಿರಿಯಾನಿಗಳನ್ನು ಮಾರಾಟ ಮಾಡಿದ್ದಾರೆ. ಸುಮಾರು 12 ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿ ಡಯಾಲಿಸಿಸ್ ಸೆಂಟರ್‌ನ ವ್ಯವಸ್ಥಾಪಕರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

    ಒಟ್ನಲ್ಲಿ ಬಡ ಕಿಡ್ನಿ ರೋಗಿಗಳಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿರುವ ಡಯಾಲಿಸಿಸ್ ಕೇಂದ್ರ ನಿರ್ವಹಣೆಗೆ 1.75 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳವರೆಗೆ ವೆಚ್ಚವಾಗುತ್ತಿದೆ. ಅಲ್ಲದೆ ಸಂಸ್ಥೆ ಪ್ರಸ್ತುತ 5 ಲಕ್ಷ ರೂ. ಸಾಲ ಹೊಂದಿದೆ. ಬಿರಿಯಾನಿ ಚಾಲೆಂಜ್ ಮೂಲಕ ಈ ಸಾಲ ಪಾವತಿಸುವುದರೊಂದಿಗೆ ನೆರವು ಒದಗಿಸುವ ಪ್ರಯತ್ನವನ್ನು ಯುವಕರ ತಂಡ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

  • ಬುಧವಾರದಿಂದ ರಾಜ್ಯಾದ್ಯಂತ ಡಯಾಲಿಸಿಸ್ ಸೇವೆ ಬಂದ್

    ಬುಧವಾರದಿಂದ ರಾಜ್ಯಾದ್ಯಂತ ಡಯಾಲಿಸಿಸ್ ಸೇವೆ ಬಂದ್

    ಬೆಂಗಳೂರು: ಬುಧವಾರದಿಂದ ರಾಜ್ಯಾದ್ಯಂತ ಡಯಾಲಿಸಿಸ್ (Dialysis) ಸೇವೆ ಬಂದ್ ಮಾಡಲು ರಾಜ್ಯ ಡಯಾಲಿಸಿಸ್ ನೌಕರರ ಸಂಘ ನಿರ್ಧರಿಸಿದೆ. ಇದರಿಂದಾಗಿ ಡಯಾಲಿಸಿಸ್ ರೋಗಿಗಳಿಗೆ ಆಪತ್ತು ಉಂಟಾಗುವ ಆತಂಕ ಶುರುವಾಗಿದೆ.

    ಕಳೆದ ಎರಡು ವರ್ಷಗಳಿಂದ ಸರಿಯಾದ ವೇತನ ನೀಡದಿರುವುದು ಹಾಗೂ ಕೆಲ ಸೌಲಭ್ಯಗಳನ್ನು ನೀಡದ ಹಿನ್ನೆಲೆ, ರಾಜ್ಯಾದ್ಯಂತ ಡಯಾಲಿಸಿಸ್ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ಲಿ (Freedom Park) ಅನಿರ್ಧಿಷ್ಟಾವಧಿ ಪ್ರತಿಭಟನೆ (Protest) ಮಾಡಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಉಡುಪಿ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್‌, ಬೆದರಿಕೆ

    ರಾಜ್ಯದ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಒಟ್ಟು 167 ಡಯಾಲಿಸಿಸ್ ಕೇಂದ್ರಗಳಿದ್ದು, 1 ಸಾವಿರಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದ ಮೇಲೆ ಡಯಾಲಿಸಿಸ್ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಆರ್‌ಎಸ್ ಮತ್ತು ಸಂಜೀವಿನಿ ಸಂಸ್ಥೆಗಳ ಅಡಿಯಲ್ಲಿ ಕೆಲಸ ಮಾಡುತ್ತಿರುವ ಡಯಾಲಿಸಿಸ್ ನೌಕರರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ಇದನ್ನೂ ಓದಿ: ಆಗಸ್ಟ್ 1ರಿಂದ ಎಕ್ಸ್‌ಪ್ರೆಸ್ ಹೈವೇಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳ ನಿಷೇಧ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಆರೋಗ್ಯ ಸ್ಥಿತಿ ಗಂಭೀರ

    ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಆರೋಗ್ಯ ಸ್ಥಿತಿ ಗಂಭೀರ

    ಭಾರತ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಶ್ಯಾಮ್ ಬೆನಗಲ್ (Shyam Benegal) ಆರೋಗ್ಯ (Health) ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಎರಡೂ ಕಿಡ್ನಿ ಫೇಲ್ (Kidney) ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲೇ ಅವರು ಡಯಾಲಿಸಿಸ್ ಗೆ (Dialysis) ಒಳಗಾಗಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಅವರ ಕಛೇರಿ ಸಿಬ್ಬಂದಿ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

    ಭಾರತ ಸಿನಿಮಾ ರಂಗ ಕಂಡ ಅತ್ಯಂತ ಪ್ರತಿಭಾವಂತ ಮತ್ತು ವಿಶೇಷ ಸಿನಿಮಾಗಳನ್ನು ನೀಡಿದ ನಿರ್ದೇಶಕರು. ಎಂಟು ರಾಷ್ಟ್ರ ಪ್ರಶಸ್ತಿಗಳನ್ನು ಇವರ ಚಿತ್ರಗಳು ಪಡೆದುಕೊಂಡಿವೆ. ಅಲ್ಲದೇ, ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣವನ್ನೂ ಪಡೆದಿದ್ದಾರೆ. ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಭಾರತ ಸರಕಾರವು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 2005ರಲ್ಲೇ ನೀಡಿ ಗೌರವಿಸಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಶಬಾನಾ ಅಜ್ಮಿ ಮತ್ತು ಅನಂತ್ ನಾಗ್ ಕಾಂಬಿನೇಷನ್ ನ ಅಂಕುರ್ ಇವರ ಮೊದಲ ಸಿನಿಮಾ. ಆನಂತರ ಮಥಣ್, ಭೂಮಿಕಾ: ದಿ ರೋಲ್, ವೆಲ್ ಡನ್ ಅಬ್ಬಾ, ಆರೋಹನ್, ನೇತಾಜಿ ಸುಭಾಸ್ ಚಂದ್ರ ಬೋಸ್ ಸೇರಿದಂತೆ ಸಾಕಷ್ಟು ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಅನೇಕ ಕಲಾವಿದರು ಸೂಪರ್ ಸ್ಟಾರ್ ಆಗಿ ಮಿಂಚಿದ್ದಾರೆ. ಸ್ಟಾರ್ ಗಳನ್ನು ತಯಾರಿಸಿದ ಅಪರೂಪದ ನಿರ್ದೇಶಕರು ಕೂಡ ಇವರಾಗಿದ್ದಾರೆ.

  • ಸಿಬ್ಬಂದಿ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲಿ ಕರ್ಕೊಂಡು ಬಂದ್ರೆ ವ್ಯಕ್ತಿ ಮರುದಿನವೇ ಬಸ್ ಹತ್ತಿ ಹೋದ!

    ಸಿಬ್ಬಂದಿ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲಿ ಕರ್ಕೊಂಡು ಬಂದ್ರೆ ವ್ಯಕ್ತಿ ಮರುದಿನವೇ ಬಸ್ ಹತ್ತಿ ಹೋದ!

    ಧಾರವಾಡ: ಕೊರೊನಾ ಸೋಂಕಿತ ಎಂದು ವ್ಯಕ್ತಿಯೋರ್ವನನ್ನು ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ ಮರುದಿನವೇ ಆತ ಏಕಾಂಗಿಯಾಗಿ ಬಸ್ ಏರಿ ತನ್ನೂರು ಸೇರಿಕೊಂಡಿರುವ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ನಿಯಮಿತವಾಗಿ ಡಯಾಲಿಸಿಸ್ ಒಳಗಾಗುತ್ತಿದ್ದ ಅಳ್ನಾವರ ತಾಲೂಕಿನ ಡೋರಿ ಗ್ರಾಮದ ವ್ಯಕ್ತಿಯೋರ್ವನಿಗೆ ಆಂಟಿಜನ್ ಟೆಸ್ಟಿನಲ್ಲಿ ನೆಗಟಿವ್ ರಿಪೋರ್ಟ್ ಬಂದಿದೆ. ಆದರೂ ಮುಂದೆ ಸ್ವ್ಯಾಬ್ ಟೆಸ್ಟಿನಲ್ಲಿ ಆತನಿಗೆ ಪಾಸಿಟಿವ್ ಬರುತ್ತೆ ಎಂದು ಅಂದಾಜಿಸಿಕೊಂಡ ಸ್ಥಳಿಯ ಆರೋಗ್ಯ ಇಲಾಖೆ ಸಿಬ್ಬಂದಿ, ಆತನಿಗೆ ಪಾಸಿಟಿವ್ ಇದೆ ಅಂತ ಆತನ ಊರಿನಿಂದ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಇಲ್ಲಿ ಬಂದ ಬಳಿಕ ಆತನಿಗೆ ಮರುದಿನ ಕೇವಲ ಡಯಾಲಿಸಿಸ್ ಮಾಡಿರುವ ವೈದ್ಯರು ಹಾಗೆಯೇ ಬಿಟ್ಟು ಕಳುಹಿಸಿ ಬಿಟ್ಟಿದ್ದಾರೆ.

    ತನಗೆ ಕೊರೊನಾ ಇಲ್ಲವೇ ಇಲ್ಲ ಎಂದು ಅರಿತ ಆತ ನೇರವಾಗಿ ಧಾರವಾಡ ಹಳೆ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಅಳ್ನಾವರ ಬಸ್ ಏರಿ ತನ್ನೂರಿಗೆ ಬಂದು ಸೇರಿದ್ದಾನೆ. ಒಂದು ವೇಳೆ ಆತನಿಗೆ ಪಾಸಿಟಿವ್ ಇದ್ದದ್ದೇ ಆದಲ್ಲಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಆತನನ್ನು ಬಿಟ್ಟು ಕಳುಹಿಸಿದ್ದಾದ್ರೂ ಹೇಗೆ ಎನ್ನುವ ಪ್ರಶ್ನೆ ಈಗ ಉದ್ಭವಿಸ್ತಿದೆ. ತಾಲೂಕು ಆಡಳಿತ ಮತ್ತು ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಮಧ್ಯದ ಸಂವಹನ ಕೊರತೆಯ ಜೊತೆಗೆ ಬೇಜವಾಬ್ದಾರಿಯೂ ಸಹ ಇಲ್ಲಿ ಎದ್ದು ಕಾಣುತ್ತಿದೆ.

    ಒಂದು ವೇಳೆ ಆತ ಸೋಂಕಿತ ಅಲ್ಲದೇ ಇದ್ದಲ್ಲಿ, ಆತನನ್ನು ಕರೆದುಕೊಂಡು ಬಂದು ತಾಲೂಕು ಆಡಳಿತದ ತಪ್ಪು ಮಾಡಿಂತಾಗುತ್ತದೆ. ಇಲ್ಲವೇ ಪಾಸಿಟಿವ್ ಇದ್ದದ್ದೇ ಆದಲ್ಲಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಲೋಪ ಎದ್ದು ಕಾಣುತ್ತೆ. ಪಾಸಿಟಿವ್ ಇದ್ದದ್ದೇ ಆದಲ್ಲಿ ಆತ ಸಾರ್ವಜನಿಕವಾಗಿ ಸಾರಿಗೆ ಸಂಸ್ಥೆ ಬಸ್ಸಿಲ್ಲಿಯೇ ಮನೆಗೆ ಹೋಗಿದ್ದರಿಂದ ಈ ಮೂಲಕ ಅನೇಕರಿಗೆ ಸೋಂಕು ತಗುಲಿಸಲು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯೇ ಈಗ ಕಾರಣವಾದಂತೆ ಆಗಿದ್ದು, ಅಧಿಕಾರಿಗಳ ಈ ಯದ್ವಾತದ್ವಾ ಕಾರ್ಯದಿಂದ ಆತನಿಗೂ ಈಗ ನಾನು ಸೊಂಕಿತನೋ? ಅಲ್ಲವೋ ಎನ್ನುವ ಗೊಂದಲ ಉಂಟಾಗಿದೆ. ಅಲ್ಲದೇ ಈತನ ಗ್ರಾಮದ ಜನರಿಗೆ ಕೂಡ ಈಗ ಇದು ದೊಡ್ಡ ಪ್ರಶ್ನೆಯಾಗಿದೆ.