Tag: ಡಮ್ಮಿ ನಾರಂಗ್

  • ಇಶಾ ಕೊಪ್ಪಿಕರ್ ಬಗ್ಗೆ ಕೇಳಿದ ಸುದ್ದಿ ಸುಳ್ಳಾಗಲಿ ಅಂತಿದ್ದಾರೆ ಫ್ಯಾನ್ಸ್

    ಇಶಾ ಕೊಪ್ಪಿಕರ್ ಬಗ್ಗೆ ಕೇಳಿದ ಸುದ್ದಿ ಸುಳ್ಳಾಗಲಿ ಅಂತಿದ್ದಾರೆ ಫ್ಯಾನ್ಸ್

    ನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಇಶಾ ಕೊಪ್ಪಿಕರ್ (Isha Koppikar) ಕುರಿತಾಗಿ ಆಘಾತಕಾರಿ ಸುದ್ದಿಯೊಂದು ಬಂದಿದೆ. ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದ ಇಶಾ, 14 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹದಿನಾಲ್ಕು ವರ್ಷಗಳ ಹಿಂದೆ ಉದ್ಯಮ ಟಮ್ಮಿ ನಾರಂಗ್ ಅವರನ್ನು ಇಶಾ ಮದುವೆ ಆಗಿದ್ದರು.

    ಹಲವು ವರ್ಷಗಳಿಂದ ಈ ಜೋಡಿಯ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮತ್ತೆ ಅದನ್ನು ಸರಿ ಮಾಡಲು ಸಾಧ್ಯವಾಗಲೇ ಇಲ್ಲವೆಂದು ಹೇಳಲಾಗುತ್ತಿದೆ. ಹಾಗಾಗಿ ಒಂಬತ್ತು ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು, ಗಂಡನ ಮನೆ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.

    ಕನ್ನಡದಲ್ಲಿ ರವಿಚಂದ್ರನ್ ನಟನೆ ಓ ನನ್ನ ನಲ್ಲೆ, ವಿಷ್ಣುವರ್ಧನ್  ನಟನೆಯ ಸೂರ್ಯವಂಶ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಬಾಲಿವುಡ್ ಸಿನಿಮಾ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ದಾಂಪತ್ಯ ಜೀವನಕ್ಕೆ ಅಂತ್ಯ ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

     

    ಈ ಕುರಿತಂತೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಗಂಡನ ಮನೆಯಿಂದ ಬಂದು ತುಂಬಾ ದಿನಗಳೆ ಆಗಿವೆ ಎನ್ನುತ್ತಾರೆ ನಟಿ ಆಪ್ತರು. ಐದಾರು ಭಾಷೆಗಳಲ್ಲಿ ನಟಿಸಿರುವ ಇಶಾರ ಬಾಳಲ್ಲಿ ಇಂತಹ ದಿನಗಳು ಬರಬಾರದಿತ್ತು ಎನ್ನೋದು ಅಭಿಮಾನಿಗಳ ನೋವಿನ ಸಂಗತಿ.