Tag: ಡಬ್ಲ್ಯೂಟಿಸಿ

  • ರೋಹಿತ್‌ ನಾಯಕತ್ವದಲ್ಲಿ WTC ಫೈನಲ್‌, ಚಾಂಪಿಯನ್ಸ್‌ ಟ್ರೋಫಿ ಗೆಲ್ಲುತ್ತೇವೆ: ಜಯ್‌ ಶಾ ವಿಶ್ವಾಸ

    ರೋಹಿತ್‌ ನಾಯಕತ್ವದಲ್ಲಿ WTC ಫೈನಲ್‌, ಚಾಂಪಿಯನ್ಸ್‌ ಟ್ರೋಫಿ ಗೆಲ್ಲುತ್ತೇವೆ: ಜಯ್‌ ಶಾ ವಿಶ್ವಾಸ

    ಮುಂಬೈ: ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ನಾವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ಗೆಲ್ಲುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಜಯ್‌ ಶಾ (Jay Shah) ಹೇಳಿದ್ದಾರೆ.

    ಈ ಮೂಲಕ ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಯುವುದನ್ನು ಬಿಸಿಸಿಐ ಖಚಿತ ಪಡಿಸಿದಂತಾಗಿದೆ. ವಿಡಿಯೋ ಮೂಲಕ ಜಯ್‌ ಶಾ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.

     

    ಟಿ20 ವಿಶ್ವಕಪ್‌ (T20 World Cup) ಗೆಲುವನ್ನು ಮುಖ್ಯ ಕೋಚ್‌ ರಾಹುಲ್ ದ್ರಾವಿಡ್, ಟಿ20 ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರಿಗೆ ಜಯ್‌ ಶಾ ಅರ್ಪಿಸಿದ್ದಾರೆ.

    ಒಂದು ವರ್ಷದೊಳಗೆ ನಾವು ಮೂರು ಫೈನಲ್‌ ಪಂದ್ಯ ಆಡಿದ್ದೇವೆ. ಕಳೆದ ವರ್ಷ ಜೂನ್ 11 ರಂದು ನಾವು WTC ಫೈನಲ್‌ನಲ್ಲಿ ಸೋತಿದ್ದೇವೆ. ನವೆಂಬರ್ 19 ರಂದು 10 ಪಂದ್ಯಗಳನ್ನು ಗೆದ್ದು ನಾವು ಹೃದಯಗಳನ್ನು ಗೆದ್ದರೂ ಏಕದಿನ ವಿಶ್ವಕಪ್‌ ಗೆಲ್ಲಲು ವಿಫಲವಾಗಿದ್ದೇವೆ. ಆದರೆ ಈ ವರ್ಷದ ಆರಂಭದಲ್ಲಿ ರಾಜ್‌ಕೋಟ್‌ನಲ್ಲಿ ನಾನು ಹೇಳಿದಂತೆ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಹೃದಯಗಳನ್ನು ಮತ್ತು ವಿಶ್ವಕಪ್ ಗೆದ್ದಿದೆ ಎಂದು ತಿಳಿಸಿದರು.

    ಫೈನಲ್‌ನ ಕೊನೆಯ ಐದು ಓವರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಜೊತೆಗೆ ಬೌಂಡರಿ ಲೈನ್‌ ಬಳಿ ಅತ್ಯುತ್ತಮ ಕ್ಯಾಚ್‌ ಹಿಡಿದ ಸೂರ್ಯಕುಮಾರ್‌ ಯಾದವ್‌ ಅವರನ್ನು ಜಯ್‌ ಶಾ ಶ್ಲಾಘಿಸಿದರು.

    2025 ರ ಫೆಬ್ರವರಿ-ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಶಾ ಅವರ ಹೇಳಿಕೆಯಿಂದ ಭಾರತ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವುದು ಖಚಿತವಾಗಿದೆ. ಆದರೆ ಪಾಕಿಸ್ತಾನಕ್ಕೆ ತೆರಳುತ್ತಾ ಇಲ್ಲವೋ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

    ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಎರಡು ಬಾರಿ ರೋಹಿತ್‌ ಶರ್ಮಾ ನಾಯಕತ್ವದ ಅಡಿಯಲ್ಲಿ ಫೈನಲ್‌ ಆಡಿ ರನ್ನರ್‌ ಅಪ್‌ ಸ್ಥಾನವನ್ನು ಪಡೆದುಕೊಂಡಿದೆ.

    202-25ರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಆಡಿದ 9 ಟೆಸ್ಟ್‌ ಪಂದ್ಯಗಳಲ್ಲಿ 6 ಪಂದ್ಯ ಗೆದ್ದು74 ಅಂಕ ಸಂಪಾದಿಸಿ 68.52 ಪಿಸಿಟಿಯೊಂದಿಗೆ (ಪರ್ಸಂಟೇಜ್‌ ಆಫ್‌ ಪಾಯಿಂಟ್‌) ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಪಂದ್ಯವಾಡಿದ್ದು 8 ಪಂದ್ಯ ಗೆದ್ದು90 ಅಂಕ ಸಂಪಾದಿಸಿ 62.50 ಪಿಸಿಟಿಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಮೂರು ಟೆಸ್ಟ್ ಸರಣಿ ಆಡಲಿದೆ.

  • ICC Ranking: ದೈತ್ಯ ಆಸೀಸ್‌ ಹಿಂದಿಕ್ಕಿ ಮತ್ತೆ ನಂ.1 ಪಟ್ಟಕ್ಕೇರಿದ ಭಾರತ

    – ಕ್ರಿಕೆಟ್‌ ಲೋಕದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ ಟೀಂ ಇಂಡಿಯಾ

    ಮುಂಬೈ: ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅಮೋಘ ಜಯ ಸಾಧಿಸಿದ ಬಳಿಕ ಭಾರತ, ದೈತ್ಯ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್‌ ರ‍್ಯಾಕಿಂಗ್‌ನಲ್ಲಿ (ICC Test Ranking) ಮತ್ತೊಮ್ಮೆ ನಂ.1 ಪಟ್ಟವನ್ನು ಕಸಿದುಕೊಂಡಿದೆ. ಇದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ವಿಶೇಷ ಪೋಸ್ಟರ್‌ ಹಂಚಿಕೊಂಡಿದೆ.

    ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿ ಡ್ರಾನಲ್ಲಿ ಅಂತ್ಯಗೊಂಡ ಬಳಿಕ ಭಾರತ ಐಸಿಸಿ ಟೆಸ್ಟ್‌ ರ‍್ಯಾಕಿಂಗ್‌ನಲ್ಲಿ ನಂ.1 ಸ್ಥಾನ ಕಳೆದುಕೊಂಡಿತ್ತು. ಆಗ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಟೀಂ ಇಂಡಿಯಾದ ಕನಸನ್ನು ಭಗ್ನಗೊಳಿಸಿದ್ದ ಆಸ್ಟ್ರೇಲಿಯಾ (Australia) ತಂಡ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದುಕೊಂಡಿತ್ತು. 2 ತಿಂಗಳ ನಂತರ ಭಾರತ ಮತ್ತೆ ಅಗ್ರಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದನ್ನೂ ಓದಿ:  WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್‌ ನಾಯಕತ್ವಕ್ಕೆ ಮೆಚ್ಚುಗೆ

    ಅಲ್ಲದೇ 6 ತಿಂಗಳ ಬಳಿಕ ಟೆಸ್ಟ್‌, ಏಕದಿನ ಹಾಗೂ T20 ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅಗ್ರಸ್ಥಾನಕ್ಕೇರಿದ್ದು ಇತಿಹಾಸ ಬರೆದಿದೆ. 2023ರ ಏಕದಿನ ವಿಶ್ವಕಪ್‌ಗೂ (ODI World Cup) ಮುನ್ನ ಭಾರತ ಈ ವೀಶೇಷ ಸಾಧನೆ ಮಾಡಿತ್ತು. ಇದೀಗ ಮತ್ತೊಮ್ಮೆ ಮೂರು ಮಾದರಿಗಳಲ್ಲಿ ನಂ.1 ಸ್ಥಾನ ತನ್ನದಾಗಿಸಿಕೊಂಡಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 122 ರೇಟಿಂಗ್ಸ್‌, ಏಕದಿನ ಕ್ರಿಕೆಟ್‌ನಲ್ಲಿ 121 ರೇಟಿಂಗ್ಸ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ 266 ರೇಟಿಂಗ್ಸ್‌ನೊಂದಿಗೆ ಅಗ್ರಸ್ಥಾನಕ್ಕೇರಿದೆ. ಜೊತೆಗೆ 68.51 ಪಿಸಿಟಿಯೊಂದಿಗೆ (Percentage Of Points Earned) ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲೂ ಅಗ್ರಸ್ಥಾನ ಉಳಿಸಿಕೊಂಡಿದೆ. ಇದನ್ನೂ ಓದಿ: RCB ಖರೀದಿಸಿದ ದುಬಾರಿ ಆಟಗಾರನಿಗೆ ದೀರ್ಘಕಾಲದ ಕಿಡ್ನಿ ಕಾಯಿಲೆ – ಸತ್ಯ ಬಹಿರಂಗಪಡಿಸಿದ ಗ್ರೀನ್‌

    ಟೆಸ್ಟ್‌ ರ‍್ಯಾಂಕಿಂಗ್‌ನ ಟಾಪ್‌-5 ತಂಡಗಳು
    ಭಾರತ – 122 ರೇಟಿಂಗ್ಸ್‌
    ಆಸ್ಟ್ರೇಲಿಯಾ – 120 ರೇಟಿಂಗ್ಸ್‌
    ಇಂಗ್ಲೆಂಡ್‌ – 111 ರೇಟಿಂಗ್ಸ್‌
    ದಕ್ಷಿಣ ಆಫ್ರಿಕಾ – 99 ರೇಟಿಂಗ್ಸ್‌
    ನ್ಯೂಜಿಲೆಂಡ್‌ – 98 ರೇಟಿಂಗ್ಸ್‌

    ಏಕದಿನ ರ‍್ಯಾಂಕಿಂಗ್‌ನ ಟಾಪ್‌-5 ತಂಡಗಳು
    ಭಾರತ – 121 ರೇಟಿಂಗ್ಸ್‌
    ಆಸ್ಟ್ರೇಲಿಯಾ – 118 ರೇಟಿಂಗ್ಸ್‌
    ದಕ್ಷಿಣ ಆಫ್ರಿಕಾ – 110 ರೇಟಿಂಗ್ಸ್‌
    ಪಾಕಿಸ್ತಾನ – 109 ರೇಟಿಂಗ್ಸ್‌
    ನ್ಯೂಜಿಲೆಂಡ್‌ – 102 ರೇಟಿಂಗ್ಸ್‌

    ಟಿ20 ರ‍್ಯಾಂಕಿಂಗ್‌ನ ಟಾಪ್‌-5 ತಂಡಗಳು
    ಭಾರತ – 266 ರೇಟಿಂಗ್ಸ್‌
    ಇಂಗ್ಲೆಂಡ್‌ – 256 ರೇಟಿಂಗ್ಸ್‌
    ಆಸ್ಟ್ರೇಲಿಯಾ – 255 ರೇಟಿಂಗ್ಸ್‌
    ನ್ಯೂಜಿಲೆಂಡ್‌ – 254 ರೇಟಿಂಗ್ಸ್‌
    ಪಾಕಿಸ್ತಾನ – 249 ರೇಟಿಂಗ್ಸ್‌

  • ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ

    ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ

    ಮುಂಬೈ: ನಾಕೌಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ (Team India) ಮಾನಸಿಕ ಒತ್ತಡಕ್ಕಿಂತಲೂ ಹೆಚ್ಚಾಗಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲವಾದ್ದರಿಂದ ಸೋಲನ್ನು ಎದುರಿಸುತ್ತಿದೆ ಎಂದು ಬಿಸಿಸಿಐ (BCCI) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ತಿಳಿಸಿದ್ದಾರೆ.

    ಶನಿವಾರವಷ್ಟೇ ತಮ್ಮ 51ನೇ ಹುಟ್ಟುಹಬ್ಬ ಆಚರಿಸಿಕೊಂಡ ಗಂಗೂಲಿ, ನಾಕೌಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆಲ್ಲಲು ಏಕೆ ಹೆಣಗಾಡುತ್ತಿದೆ ಎಂಬುದನ್ನ ವಿವರಿಸಿದ್ದಾರೆ. ಇದನ್ನೂ ಓದಿ: ICC World Cup 2023: ಟೀಂ ಇಂಡಿಯಾ ಪರಿಷ್ಕೃತ ವೇಳಾಪಟ್ಟಿ ರಿಲೀಸ್‌ – ಇಲ್ಲಿದೆ ಡಿಟೇಲ್ಸ್‌

    ಹೌದು. 2013ರಲ್ಲಿ ಎಂ.ಎಸ್ ಧೋನಿ (MS Dhoni) ನಾಯಕತ್ವದಲ್ಲಿದ್ದಾಗ ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಚಾಂಪಿಯನ್ ಟ್ರೋಫಿ ಗೆದ್ದಿತ್ತು. ಆ ನಂತರ ಐಸಿಸಿ (ICC) ಟೂರ್ನಿಗಳಲ್ಲಿ ಯಾವುದೇ ಟ್ರೋಫಿ ಗೆದ್ದಿಲ್ಲ. 2013ರ ನಂತರ ಭಾರತ 4 ಬಾರಿ ಫೈನಲ್ ಹಾಗೂ ಅನೇಕ ಸೆಮಿಫೈನಲ್ ಪಂದ್ಯಗಳಲ್ಲಿ ಸೋತು ಮುಖಭಂಗ ಅನುಭವಿಸಿದೆ. ಇದನ್ನೂ ಓದಿ: ಯಾರ ಜೊತೆ, ಎಲ್ಲಿ ಬೇಕಾದ್ರೂ ಆಡೋಕೆ ನಾವ್‌ ರೆಡಿ – ಪಾಕ್‌ ತಂಡ ಭಾರತಕ್ಕೆ ಬರೋದು ಖಚಿತ; ಬಾಬರ್‌ ಆಜಂ

    ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ಗಂಗೂಲಿ, ನಿರ್ಣಾಯಕ ಹಂತಗಳಲ್ಲಿ ನಾವು ಕೆಲವೊಮ್ಮೆ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದು ಮಾನಸಿಕ ಒತ್ತಡ ಮಾತ್ರವೆಂದು ನಾನು ಭಾವಿಸುವುದಿಲ್ಲ. ಮಾನಸಿಕ ಒತ್ತಡಕ್ಕಿಂತ ನಿರೀಕ್ಷಿತ ಪ್ರದರ್ಶನ ನೀಡದಿರುವುದು ಎದ್ದು ಕಾಣುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಈ ಬಾರಿ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದು ಸಾಧನೆಯೇ ಆಗಿದೆ. ಈ ಬಾರಿ ವಿಶ್ವಕಪ್‌ನಲ್ಲೂ ನಮಗೆ ಗೆಲ್ಲುವ ಎಲ್ಲ ಅವಕಾಶಗಳಿವೆ. ಉತ್ತಮ ಆಟಗಾರರೂ ಇದ್ದಾರೆ. ಪ್ರಯತ್ನಪಟ್ಟರೇ ಎಲ್ಲವೂ ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

    ಕಳೆದ ವರ್ಷ ಟಿ20 ಏಷ್ಯಾಕಪ್‌ನಲ್ಲಿ ಸೂಪರ್ ಫೋರ್ ಹಂತದಲ್ಲಿ ಎಡವಿದ್ದ ಭಾರತ, ನಂತರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿತ್ತು. ಇನ್ನೂ ಈ ವರ್ಷದ ಆರಂಭದಿಂದ ನಡೆದ ಶ್ರೀಲಂಕಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆದ ಸರಣಿಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದ ಭಾರತ ತಂಡ, ಇತ್ತೀಚೆಗೆ ನಡೆದ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಹೀನಾಯ ಸೋಲನುಭವಿಸಿ, ಸತತ 2ನೇ ಬಾರಿಗೆ ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]