Tag: ಡಬ್ಲ್ಯುಟಿಸಿ

  • ಬಾಲಕಿಯ ಚಿಕಿತ್ಸೆಗಾಗಿ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡಿದ ಜೆರ್ಸಿಯನ್ನು ಹರಾಜಿಗಿಟ್ಟ ಆಟಗಾರ

    ಬಾಲಕಿಯ ಚಿಕಿತ್ಸೆಗಾಗಿ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡಿದ ಜೆರ್ಸಿಯನ್ನು ಹರಾಜಿಗಿಟ್ಟ ಆಟಗಾರ

    ವೆಲ್ಲಿಂಗ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಧರಿಸಿದ್ದ ಬಟ್ಟೆಯನ್ನು, ಎಂಟು ವರ್ಷದ ಬಾಲಕಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಹರಾಜಿಗಿಡುವ ಮೂಲಕ ಟಿಮ್ ಸೌಥಿ ಮಾನವೀಯತೆ ಮೆರೆದಿದ್ದಾರೆ.

    ನ್ಯೂಜಿಲೆಂಡ್‍ನಲ್ಲಿ 8 ವರ್ಷದ ಬಾಲಕಿ ಹಾಲ್ಲೀ ಬೀಟಿಯಾ ನ್ಯೂರೋಬ್ಲಾಸ್ಟೊಮಾ ಎಂಬ ಅಪರೂಪದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು 2018ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನು ತಿಳಿದ ನ್ಯೂಜಿಲೆಂಡ್ ತಂಡದ ಹಿರಿಯ ವೇಗಿ ಟಿಮ್ ಸೌಥಿ ಆ ಬಾಲಕಿಯ ಚಿಕಿತ್ಸೆಗೆ ನೆರವಾಗಲು ಡಬ್ಲ್ಯುಟಿಸಿ ಫೈನಲ್‍ನಲ್ಲಿ ತಾನು ಧರಿಸಿದ್ದ ಬಟ್ಟೆಯೊಂದನ್ನು ಹರಾಜಿಗೆ ಇಟ್ಟಿದ್ದಾರೆ. ಹರಾಜಿನಲ್ಲಿ ಬಂದ ಹಣವನ್ನು ಆ ಬಾಲಕಿಯ ಚಿಕಿತ್ಸೆಗೆ ಭರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕೊನೆಗೂ ಕನಸು ನನಸು: ಐಸಿಸಿ ಟೆಸ್ಟ್ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್

    ಟಿಮ್ ಸೌಥಿ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡುವಾಗ ಧರಿಸಿದ್ದ ಈ ಒಂದು ಬಟ್ಟೆಯಲ್ಲಿ ತಂಡದ ಎಲ್ಲಾ ಸದಸ್ಯರು ಕೂಡ ತಮ್ಮ ಹಸ್ತಾಕ್ಷರ ಹಾಕಿದ್ದಾರೆ. ಆ ಬಟ್ಟೆಯನ್ನೇ ಇದೀಗ ಹರಾಜಿಗಿಟ್ಟಿರುವ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸೌಥಿ ಪೋಸ್ಟ್ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Tim Southee (@tim_southee)

    ಸೌಥಿ ಪೋಸ್ಟ್ ಹಾಕುತ್ತಿದ್ದಂತೆ ಅವರ ಜೆರ್ಸಿಯನ್ನು ಖರೀದಿಸಲು ಸಾವಿರಾರು ಮಂದಿ ಮುಂದೆ ಬಂದಿದ್ದಾರೆ. ಸೌಥಿಗಿಂತ ಮೊದಲು ಮಾರ್ಟಿನ್ ಗಪ್ಟಿಲ್ ತಮ್ಮ ಬ್ಯಾಟನ್ನು ಹರಾಜಿಗಿಟ್ಟು ಹಾಲ್ಲೀ ಬೀಟಿಯಾ ಚಿಕಿತ್ಸೆಗೆ ನೆರವಾಗಿದ್ದರು. ಇದನ್ನೂ ಓದಿ: ಟೆಸ್ಟ್ ಚಾಂಪಿಯನ್ ಆದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡದಿಂದ ಹೊಸ ನಿರ್ಧಾರ..?

    ಟಿಮ್ ಸೌಥಿ ವಿಶ್ವಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ನ್ಯೂಜಿಲೆಂಡ್ ಚಾಂಪಿಯನ್ ಆಗಲು ಸಾಕಷ್ಟು ಸಹಕಾರಿಯಾಗಿದ್ದಾರೆ. ಫೈನಲ್‍ನಲ್ಲಿ ಭಾರತದ ವಿರುದ್ಧ 112ರನ್ ನೀಡಿ ಐದು ವಿಕೆಟ್ ಕಬಳಿಸಿದ್ದರು. ಅಷ್ಟೆ ಅಲ್ಲದೆ ಬ್ಯಾಟಿಂಗ್‍ನಲ್ಲಿ ಕೂಡ ನ್ಯೂಜಿಲೆಂಡ್ ತಂಡಕ್ಕೆ ನೆರವಾಗಿದ್ದರು. ಇದೀಗ ಕ್ಯಾನ್ಸರ್ ಪೀಡಿತ ಬಾಲಕಿಗೆ ನೆರವಾಗುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

  • ಶಮಿ, ಇಶಾಂತ್ ಸೂಪರ್ ಸ್ಪೆಲ್  – ಭಾರತಕ್ಕೆ ಅಲ್ಪ ಮುನ್ನಡೆ

    ಶಮಿ, ಇಶಾಂತ್ ಸೂಪರ್ ಸ್ಪೆಲ್ – ಭಾರತಕ್ಕೆ ಅಲ್ಪ ಮುನ್ನಡೆ

    ಸೌಂಥಾಪ್ಟನ್: ಭಾರತ ತಂಡದ ವೇಗಿಗಳಾದ ಮೊಹಮದ್ ಶಮಿ ಮತ್ತು ಇಶಾಂತ್ ಶರ್ಮಾ ಅವರ ಸೂಪರ್ ಸ್ಪೆಲ್ ನಿಂದಾಗಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್‍ನ 5ನೇ ದಿನ ನ್ಯೂಜಿಲ್ಯಾಂಡ್ ತಂಡವನ್ನು ಮೊದಲ ಇನ್ನಿಂಗ್ ನಲ್ಲಿ 249ರನ್‍ಗೆ ಆಲೌಟ್ ಮಾಡಿದೆ. ಆದರು ಕಿವೀಸ್ 32ರನ್‍ಗಳ ಅಲ್ಪ ಮುನ್ನಡೆ ಸಾಧಿಸಿದೆ.

    ನಾಲ್ಕನೇ ದಿನ ಮಳೆಯಿಂದಾಗಿ ದಿನದಾಟ ರದ್ದಾಗಿತ್ತು. ಬಳಿಕ ಐದನೇ ದಿನ ಪಂದ್ಯ ಸರಾಗವಾಗಿ ನಡೆಯಿತು. 3ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿದ್ದ  ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮುಂದುವರಿಸಿ 249ಕ್ಕೆ ಆಲೌಟ್ ಆಯಿತು. ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ವೇಗಿಗಳಾದ ಶಮಿ 26 ಓವರ್ ಎಸೆದು 4 ವಿಕೆಟ್ ಪಡೆದರೆ, ಇಶಾಂತ್ 25 ಓವರ್ ಎಸೆದು 3 ವಿಕೆಟ್ ಕಿತ್ತು ಕಿವೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಇದನ್ನೂ ಓದಿ: ಶೇನ್ ವಾರ್ನ್‍ಗೆ ಅಭಿಮಾನಿಯಿಂದ ಸ್ಪಿನ್ ಪಾಠ – ಗೂಗ್ಲಿ ಎಸೆದ ಸೆಹ್ವಾಗ್

    ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತದ ಪರ ಆರಂಭಿಕ ಆಟಗಾರ ಶುಭನ್ ಗಿಲ್ ಮತ್ತೆ ನಿರಾಸೆ ಮೂಡಿಸಿದರು ಕೇವಲ 8 ರನ್(55 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ಆದರೆ ಇನ್ನೋರ್ವ ಓಪನರ್ ರೋಹಿತ್ ಶರ್ಮಾ 30 ರನ್(81 ಎಸೆತ, 2 ಬೌಂಡರಿ) ಸಿಡಿಸಿ ಉತ್ತಮವಾಗಿ ಆಡುತ್ತಿದ್ದಾಗ ದಾಳಿಗಿಳಿದ ಸೌಥಿ, ಎಲ್‍ಬಿ ಬಲೆಗೆ ಬಿಳಿಸಿ ವಿಕೆಟ್ ಕಿತ್ತರು. ಬಳಿಕ ದಿನದಾಟದ ಅಂತ್ಯಕ್ಕೆ ಭಾರತ 64 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು 32ರನ್ ಗಳ ಮುನ್ನಡೆ ಪಡೆದುಕೊಂಡಿದೆ. ಪಂದ್ಯದಲ್ಲಿ ಮೀಸಲು ದಿನವನ್ನು ಬಳಕೆ ಮಾಡಲು ಐಸಿಸಿ ನಿರ್ಧರಿಸಿರುವ ಕಾರಣ ಭಾರತ ಪರ ಚೇತೇಶ್ವರ ಪೂಜಾರ 12 ರನ್(55 ಎಸೆತ, 2 ಬೌಂಡರಿ) ಮತ್ತು ವಿರಾಟ್ ಕೊಹ್ಲಿ 8ರನ್ (12 ಎಸೆತ) ಮಾಡಿ 6ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  ಇದನ್ನೂ ಓದಿ: ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    ಆರನೇ ದಿನದಾಟ ಭಾರೀ ಕುತೂಹಲ ಮೂಡಿಸಿದ್ದು, ಭಾರತ ಬೃಹತ್ ಮೊತ್ತ ಪೇರಿಸಿ ಕಿವೀಸ್‍ಗೆ ಒತ್ತಡ ಹಾಕಲು ಎದುರು ನೋಡುತ್ತಿದ್ದರೆ, ನ್ಯೂಜಿಲೆಂಡ್ ಭಾರತವನ್ನು ಆದಷ್ಟು ಬೇಗ ಆಲೌಟ್ ಮಾಡಿ ಗೆಲುವಿನ ಸಂಭ್ರಮ ಆಚರಿಸಲು ಹಾತೊರೆಯುತ್ತಿದೆ. ಈ ನಡುವೆ ಪಂದ್ಯ ಡ್ರಾ ಆಗುವ ಸಾಧ್ಯತೆಯು ಹೆಚ್ಚಿದೆ. ಹಾಗಾಗಿ ಅಭಿಮಾನಿಗಳಲ್ಲಿ ಕ್ಲೈಮ್ಯಾಕ್ಸ್ ಕುತೂಹಲ ಮೂಡಿಸಿದೆ.

    ಮೊದಲ ಇನ್ನಿಂಗ್ಸ್ ಕುಸಿದ ಕೀವಿಸ್:
    ಐದನೇ ದಿನದಾಟ ಆರಂಭಿಸಿದ ಕಿವೀಸ್ ದಿನದ ಮೊದಲ ಅವಧಿಯಲ್ಲಿ 23 ಓವರ್‍ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಕೇವಲ 34 ರನ್‍ಗಳಿಸಿತು. ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದ ಕೇನ್ ವಿಲಿಯಮ್ಸನ್ ಒಂದು ಕಡೆ ನಿಧಾನವಾಗಿ ರನ್ ಗಳಿಸಲು ಆರಂಭಿಸಿದರು ಆದರೆ ಇವರಿಗೆ ಮಧ್ಯಮ ಕ್ರಮಾಂಕದ ಆಟಗಾರ ಬೆಂಬಲ ಸಿಗಲಿಲ್ಲ. ರಾಸ್ ಟೇಲರ್ 11ರನ್(37 ಎಸೆತ, 2 ಬೌಂಡರಿ), ಬಿಜೆ ವಾಟ್ಲಿಂಗ್ 1ರನ್, ಡಿ ಗ್ರ್ಯಾಂಡ್‍ಹೋಮ್ 13ರನ್(30 ಎಸೆತ,1 ಬೌಂಡರಿ) ಕೈಲ್ ಜೇಮಿಸನ್ 21 ರನ್ (16 ಎಸೆತ 1ಸಿಕ್ಸ್), ಬಾರಿಸಿ ಔಟ್ ಆದರು ಇವರೊಂದಿಗೆ ವಿಲಿಯಮ್ಸನ್ 49 ರನ್(177 ಎಸೆತ,6 ಬೌಂಡರಿ) ಸಿಡಿಸಿ ಪೇವಿಲಿಯನ್ ಸೇರಿಕೊಂಡರು. ಬಳಿಕ ಟಿಮ್ ಸೌಥಿ 30ರನ್ (46 ಎಸೆತ, 1ಬೌಂಡರಿ, 1 ಸಿಕ್ಸ್) ಸಿಡಿಸಿ ಕಿವೀಸ್‍ಗೆ ಮುನ್ನಡೆ ತಂದು ಕೊಟ್ಟರು.

  • WTC ಫೈನಲ್ ಭಾರತ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ

    WTC ಫೈನಲ್ ಭಾರತ ಗೆದ್ದರೆ ಬೆತ್ತಲಾಗುವೆ – ಪೂನಂ ಪಾಂಡೆ

    ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ನಡೆಯುತ್ತಿದೆ. ಫೈನಲ್‍ನಲ್ಲಿ ಭಾರತ ತಂಡ ಗೆದ್ದರೆ ನಾನು ಬೆತ್ತಲಾಗುವುದಾಗಿ ನಟಿ ಪೂನಂ ಪಾಂಡೆ ಕೊಹ್ಲಿ ಪಡೆಗೆ ಬಿಗ್ ಆಫರ್ ಒಂದನ್ನು ನೀಡಿದ್ದಾರೆ.

    2011ರ ಏಕದಿನ ವಿಶ್ವಕಪ್ ವೇಳೆ ಎಂಎಸ್ ಧೋನಿ ಬಳಗ ಗೆದ್ದರೆ ನಾನು ಬೆತ್ತಲಾಗುವುದಾಗಿ ಹೇಳಿಕೊಂಡಿದ್ದ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ಇದೀಗ ಕೊಹ್ಲಿ ಸೈನ್ಯಕ್ಕೆ ಇದೇ ರೀತಿಯ ಆಫರ್ ನೀಡಿದ್ದಾರೆ. ಇದನ್ನೂ ಓದಿ: ಜೇಮಿಸನ್ ಬಿಗುವಿನ ದಾಳಿ – ಭಾರತ 217ರನ್‍ಗೆ ಆಲೌಟ್

    ಕೊಹ್ಲಿ ಪಡೆ ವಿಶ್ವಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಕೀವಿಸ್ ವಿರುದ್ಧ ಸೆಣಸಾಡುತ್ತಿರುವ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಪೂನಂ ಪಾಂಡೆ, ಕ್ರಿಕೆಟ್ ಚಾಲು ಹೈ, ಲೋಗ್ ಕ್ರಿಕೆಟ್ ಖೇಲ್ ರಹೇ ಹೈ. ಈ ಬಾರಿ ಮತ್ತೆ ಹೇಳುತ್ತಿದ್ದೇನೆ ಭಾರತ ತಂಡ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್ ಗೆದ್ದರೆ ಮತ್ತೆ ಬೆತ್ತಲಾಗಿ ವಿವಾದ ಎದುರಿಸಲು ಸಿದ್ಧ ಎಂದಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    2011ರಲ್ಲಿ ಈ ರೀತಿ ಭಾರತ ತಂಡಕ್ಕೆ ಆಫರ್ ನೀಡಿ ಬಳಿಕ ಪೂನಂ ಪಾಂಡೆ ತನ್ನ ಕೆಲವು ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು. ಇದೀಗ ಮತ್ತೆ ಬೆತ್ತಲಾಗುದಾಗಿ ಹೇಳಿ ಪಡ್ಡೆ ಹುಡುಗರಿಗೆ ಮೈ ಬಿಸಿಯಾಗುವಂತೆ ಮಾಡಿದ್ದಾರೆ.

  • ಜೇಮಿಸನ್ ಬಿಗುವಿನ ದಾಳಿ – ಭಾರತ 217ರನ್‍ಗೆ ಆಲೌಟ್

    ಜೇಮಿಸನ್ ಬಿಗುವಿನ ದಾಳಿ – ಭಾರತ 217ರನ್‍ಗೆ ಆಲೌಟ್

    ಸೌಂಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ವಿಶ್ವಚಾಂಪಿಯನ್ ಶಿಪ್ ಪಂದ್ಯದ ಮೂರನೇ ದಿನ ನ್ಯೂಜಿಲೆಂಡ್‍ನ ವೇಗದ ಬೌಲರ್ ಕೈಲ್ ಜೇಮಿಸನ್ ದಾಳಿಗೆ ಭಾರತ ತತ್ತರಿಸಿ 217 ರನ್‍ಗೆ ಆಲೌಟ್ ಆಗಿದೆ. ದಿನದಾಟದ ಅಂತ್ಯಕ್ಕೆ ಕೀವಿಸ್ 2 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿ 116ರನ್ ಹಿನ್ನಡೆ ಅನುಭವಿಸಿದೆ.

    2ನೇ ದಿನ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 146 ರನ್ ಪೇರಿಸಿದ್ದ ಭಾರತ 3ನೇ ದಿನ ಈ ಮೊತ್ತಕ್ಕೆ ಕೇವಲ 71ರನ್ ಸೇರಿಸಿ 7 ವಿಕೆಟ್ ಕಳೆದುಕೊಂಡು 217ರನ್‍ಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಜೇಮಿಸನ್ 5 ವಿಕೆಟ್ ಕಿತ್ತು ಭಾರತವನ್ನು ಕಾಡಿದರು.  ಇದನ್ನೂ ಓದಿ : ನಾಯಕನಾಗಿ ಗುರುವಿನ ದಾಖಲೆ ಮುರಿದ ವಿರಾಟ್ ಕೊಹ್ಲಿ

    2ನೇ ದಿನದಾಟದ ಅಂತ್ಯಕ್ಕೆ 44 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಆ ಮೊತ್ತಕ್ಕೆ ಒಂದೇ ಒಂದು ರನ್ ಸೇರಿಸಲಾಗದೆ ಜೇಮಿಸನ್‍ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಷಬ್ ಪಂತ್ ಕೇವಲ 4 ರನ್(22 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಉತ್ತಮವಾಗಿ ಅಡುತ್ತಿದ್ದ ಅಜಿಂಕ್ಯ ರಹಾನೆ ಅರ್ಧಶತಕ ಹೊಸ್ತಿಲಲ್ಲಿ ಎಡವಿದರೂ 49ರನ್(117 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರು. ಆ ಬಳಿಕ ವಿಕೆಟ್ ಕಳೆದುಕೊಂಡು ಸಾಗಿದ ಭಾರತಕ್ಕೆ ಮಧ್ಯಮಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ನೆರವಾಗಲಿಲ್ಲ.

    ರವೀಂದ್ರ ಜಡೇಜಾ 15ರನ್(53 ಎಸೆತ, 2 ಬೌಂಡರಿ) ಮತ್ತು ರವಿಚಂದ್ರನ್ ಅಶ್ವಿನ್ 22ರನ್(27 ಎಸೆತ,3 ಬೌಂಡರಿ) ಬಾರಿಸಿ ಭಾರತದ ರನ್ 200 ರನ್ ಗಡಿದಾಟುವಂತೆ ಮಾಡಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್‌ ಕೂಡ ಎರಡಂಕ್ಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ ಭಾರತ 92.1 ಓವರ್‍ ಗಳಲ್ಲಿ 217ರನ್‍ಗೆ ಇನ್ನಿಂಗ್ಸ್ ಕೊನೆಗೊಳಿಸಿತು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಮತ್ತು ನೆಲಿ ವ್ಯಾಗ್ನರ್ ತಲಾ 2 ವಿಕೆಟ್ ಕಿತ್ತರೆ, ಟಿಮ್ ಸೌಥಿ 1 ವಿಕೆಟ್ ಪಡೆದರು. ಇದನ್ನೂ ಓದಿ : 18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕೀವಿಸ್ ವಿರುದ್ಧ ಭಾರತ ಗೆದ್ದಿಲ್ಲ – ಈ ಬಾರಿ ಗೆಲುವು ಯಾರಿಗೆ?

    ಕೀವಿಸ್ ಎಚ್ಚರಿಕೆಯ ಆರಂಭ:
    ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಟಾಮ್ ಲೇಥಮ್ ಮತ್ತು ಡೆವೂನ್ ಕಾನ್‍ವೇ ಎಚ್ಚರಿಕೆಯ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‍ಗೆ 70 ರನ್(206 ಎಸೆತ) ಕಲೆಹಾಕಿತು. ಈ ವೇಳೆ ದಾಳಿಗಿಳಿದ ಅಶ್ವಿನ್ 30ರನ್(104 ಎಸೆತ, 3 ಬೌಂಡರಿ) ಬಾರಿಸಿ ಉತ್ತಮವಾಗಿ ಆಡುತ್ತಿದ್ದ ಲೇಥಮ್ ಅವರ ವಿಕೆಟ್ ಪಡೆದರು. ಆ ಬಳಿಕ ನಾಯಕ ಕೇನ್ ವಿಲಿಯಮ್ಸನ್ ಜೊತೆ ಸೇರಿಕೊಂಡ ಕಾನ್‍ವೇ ಅರ್ಧಶತಕ ಬಾರಿಸಿ 54ರನ್(153 ಎಸೆತ, 6ಬೌಂಡರಿ) ಬಾರಿಸಿ ಔಟ್ ಆದರು. ಭಾರತದ ಪರ ಇಶಾಂತ್ ಶರ್ಮಾ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರು.

    ಕೀವಿಸ್ ಪರ ಕೇನ್ ವಿಲಿಯಮ್ಸನ್ 12 ರನ್(37 ಎಸೆತ, 1 ಬೌಂಡರಿ) ಮತ್ತು ರಾಸ್ ಟೇಲರ್ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • WTC ಫೈನಲ್ ಭಾರತ, ನ್ಯೂಜಿಲೆಂಡ್ ತಂಡದ ವೇಗಿಗಳ ಬಲಾಬಲ

    WTC ಫೈನಲ್ ಭಾರತ, ನ್ಯೂಜಿಲೆಂಡ್ ತಂಡದ ವೇಗಿಗಳ ಬಲಾಬಲ

    ಲಂಡನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಎರಡು ತಂಡಗಳು ಸಿದ್ಧಗೊಂಡು ಮೈದಾನಕ್ಕಿಳಿಯಲು ತುದಿಗಾಲಲ್ಲಿ ನಿಂತಿದೆ. ಈ ನಡುವೆ ಇಂಗ್ಲೆಂಡ್‍ನಲ್ಲಿ ಪಂದ್ಯ ನಡೆಯುವ ಕಾರಣ ಅಲ್ಲಿನ ಪಿಚ್ ವೇಗಿಗಳಿಗೆ ನೆರವು ನೀಡಲಿದೆ. ಹಾಗಾಗಿ ಎರಡು ತಂಡಗಳಲ್ಲೂ ಘಟಾನುಘಟಿ ವೇಗಿಗಳಿದ್ದು ಇವರ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ನಿಂತಿದೆ.

    ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ಕೂಡ ಬಲಿಷ್ಠವಾಗಿದ್ದು, ಯಾವ ತಂಡ ಕೂಡ ಅಷ್ಟು ಬೇಗ ಸೋಲೊಪ್ಪಿಕೊಳ್ಳುವ ತಂಡವಲ್ಲ, ಈ ತಂಡಗಳು ಇಂಗ್ಲೆಂಡ್‍ನ ಸೌತಾಂಪ್ಟನ್‍ನ ಏಜಸ್ ಬೌಲ್ ಕ್ರೀಡಾಂಗಣದಲ್ಲಿ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯವಾಡುತ್ತಿದೆ. ಇಲ್ಲಿನ ಬಹುತೇಕ ಪಿಚ್ ಪೇಸ್ ಮತ್ತು ಬೌನ್ಸಿ ಪಿಚ್ ಆಗಿರುವುದರಿಂದಾಗಿ ವೇಗಿಗಳಿಗೆ ನೆರವು ನೀಡುತ್ತದೆ. ಹಾಗಾಗಿ ಎರಡು ತಂಡಗಳಲ್ಲಿರುವ ವೇಗಿಗಳು ತಂಡಗಳ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಭಾರತ ಹಾಗೂ ನ್ಯೂಜಿಲೆಂಡ್ ತಂಡದಲ್ಲಿ ಕೂಡ ವಿಶ್ವ ಶ್ರೇಷ್ಠ ವೇಗಿಗಳ ದಂಡೇ ಇದೆ. ಭಾರತದ ಪಾಲಯದಲ್ಲಿ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರಿತ್ ಬುಮ್ರಾ, ಮಹಮದ್ ಸಿರಾಜ್ ಇದ್ದಾರೆ. ಇತ್ತ ನ್ಯೂಜಿಲೆಂಡ್ ತಂಡದಲ್ಲಿ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವೇಗ್‍ನರ್, ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಕೈಲ್ ಜೇಮಿಸನ್ ಮತ್ತು ಹೆನ್ರಿ ಅವರನ್ನು ಕಾಣಬಹುದಾಗಿದೆ. ಇದನ್ನೂ ಓದಿ:ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ

    ಈ ಎರಡು ತಂಡಗಳ ವೇಗಿಗಳ ಈವರೆಗಿನ ಬಲಾಬಲ ಗಮನಿಸಿದಾಗ ಭಾರತ ವೇಗಿಗಳಾದ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರಿತ್ ಬುಮ್ರಾ, ಮಹಮದ್ ಸಿರಾಜ್ ಈವರೆಗೆ ಒಟ್ಟು 223 ಟೆಸ್ಟ್ ಪಂದ್ಯವಾಡಿ 730 ವಿಕೆಟ್ ಕಬಳಿಸಿದ್ದಾರೆ. 29.53 ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಭಾರತ ವೇಗಿಗಳು 25 ಬಾರಿ 5 ವಿಕೆಟ್ ಗೊಂಚಲು ಪಡೆದರೆ 10 ವಿಕೆಟ್‍ಗಳನ್ನು 2 ಬಾರಿ ಪಡೆದಿದ್ದಾರೆ.  ಇದನ್ನೂ ಓದಿ:ಅಂದು ಧೋನಿಯೊಂದಿಗಿದ್ದ ಪುಟ್ಟ ಬಾಲಕ ಇಂದು ಸ್ಟಾರ್ ಕ್ರಿಕೆಟರ್!

    ನ್ಯೂಜಿಲೆಂಡ್ ವೇಗಿಗಳಾದ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವೇಗ್‍ನರ್, ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಕೈಲ್ ಜೇಮಿಸನ್ ಮತ್ತು ಹೆನ್ರಿ ಈವರೆಗೆ ಒಟ್ಟು 249 ಟೆಸ್ಟ್ ಪಂದ್ಯವಾಡಿ 945 ವಿಕೆಟ್ ಪಡೆದಿದ್ದಾರೆ. 28.08 ಎಕಾನಮಿಯಲ್ಲಿ ಬೌಲಿಂಗ್ ಮಾಡಿ 34 ಬಾರಿ 5 ವಿಕೆಟ್ ಗೊಂಚಲು ಪಡೆದರೆ 3 ಬಾರಿ 10 ವಿಕೆಟ್ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: ಕೊಹ್ಲಿ, ವಿಲಿಯಮ್ಸನ್ ನಾಯಕತ್ವ ರೆಕಾರ್ಡ್ – ಯಾರು ಬೆಸ್ಟ್ ?

    ಈ ರೆಕಾರ್ಡ್‍ಗಳನ್ನು ಗಮನಿಸಿದಾಗ ಎರಡು ತಂಡದ ವೇಗದ ಬೌಲಿಂಗ್ ವಿಭಾಗ ತಂಡದ ಪ್ರಮುಖ ಅಸ್ತ್ರವಾಗಿದೆ. ಹಾಗಾಗಿ ವಿಶ್ವದ ಈ ಎರಡು ಬಲಾಢ್ಯ ತಂಡಗಳ ಕಾದಾಟ ಎಲ್ಲರ ಗಮನಸೆಳೆಯುತ್ತಿದೆ.