Tag: ಡಬ್ಬಿಂಗ್

  • ‘ಲವ್ ಲಿ’ ಎನ್ನುತ್ತಾ ಡಬ್ಬಿಂಗ್ ಕೆಲಸದಲ್ಲಿ ತೊಡಗಿದ ವಸಿಷ್ಠ ಸಿಂಹ

    ‘ಲವ್ ಲಿ’ ಎನ್ನುತ್ತಾ ಡಬ್ಬಿಂಗ್ ಕೆಲಸದಲ್ಲಿ ತೊಡಗಿದ ವಸಿಷ್ಠ ಸಿಂಹ

    ಸಿಷ್ಠ ಸಿಂಹ (Vasishtha Simha) ನಟನೆಯ ಬಹು ನಿರೀಕ್ಷಿತ ಚಿತ್ರ ‘ಲವ್ ಲಿ’ (Love Li). ಆರಂಭದಿಂದಲು ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ಚಿತ್ರಕ್ಕೆ ಚೇತನ್ ಕೇಶವ್ (Chetan Samiksha) ಆಕ್ಷನ್ ಕಟ್ ಹೇಳಿದ್ದಾರೆ. ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು, ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಡಬ್ಬಿಂಗ್ ನಲ್ಲಿ (Dubbing) ನಿರತವಾಗಿದೆ.

    ಲಂಡನ್ ನಲ್ಲಿ ಸೆರೆ ಹಿಡಿಯುವ ಸಾಂಗ್ ವೊಂದನ್ನು ಹೊರತು ಪಡಿಸಿ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಲವ್ ಲಿ ಟೀಂ ಕಳೆದ ಏಳು ದಿನದಿಂದ ಡಬ್ಬಿಂಗ್ ನಲ್ಲಿ ತೊಡಗಿದೆ. ವಸಿಷ್ಠ ಸಿಂಹ, ಸ್ಟೆಫಿ ಪಟೇಲ್, ದತ್ತಣ್ಣ, ರಂಗಾಯಣ ರಘು, ಅಚ್ಯುತ್ ಕುಮಾರ್, ವಂಶಿಕಾ, ಸೂರಜ್ ಚಿತ್ರದ ಡಬ್ಬಿಂಗ್ ಪೋಷನ್ ಕಂಪ್ಲೀಟ್ ಮಾಡಿದ್ದಾರೆ. ಐದು ದಿನಗಳ ಡಬ್ಬಿಂಗ್ ಕೆಲಸ ಬಾಕಿ ಇದೆ ಎಂದು ನಿರ್ದೇಶಕ ಚೇತನ್ ಕೇಶವ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಟ ಗೋಪಿಚಂದ್‌ಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್

    ‘ಲವ್ ಲಿ’ ಚೇತನ್ ಕೇಶವ್ ಅವರ ಮೊದಲ ಸಿನಿಮಾ ವೆಂಚರ್. ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ರೌಡಿಸಂ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ವಸಿಷ್ಠ ಸಿಂಹ ಡಿಫ್ರೆಂಟ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾ ಸ್ಯಾಂಪಲ್ ಗಳು ಭರವಸೆ ಮೂಡಿಸಿದ್ದು, ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಡಬ್ಬಿಂಗ್ ಕೆಲಸ ಮುಗಿಯುತ್ತಿದ್ದಂತೆ ಹಾಡಿನ ಚಿತ್ರೀಕರಣಕ್ಕೆ ಲಂಡನ್ ತೆರೆಳಲಿದೆ.

    ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ (Samiksha), ಸಾಧುಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ವಂಶಿಕಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಒಳಗೊಂಡ ದೊಡ್ಡ ತಾರಾಬಳಗ ‘ಲವ್ ಲಿ’ ಚಿತ್ರದಲ್ಲಿದೆ. ಎಂ.ಆರ್ ರವೀಂದ್ರ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಸಿನಿಮಾಗೆ ಅಶ್ವಿನ್ ಕೆನಡಿ ಕ್ಯಾಮೆರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ.

  • ಕನ್ನಡಕ್ಕೆ ಬರುವ ಡಬ್ಬಿಂಗ್ ಸಿನಿಮಾಗಳಿಗೆ ಇವರದ್ದೇ ಮಾತು, ಹಾಡು

    ಕನ್ನಡಕ್ಕೆ ಬರುವ ಡಬ್ಬಿಂಗ್ ಸಿನಿಮಾಗಳಿಗೆ ಇವರದ್ದೇ ಮಾತು, ಹಾಡು

    ರಭಾಷೆಗಳಿಂದ ಕನ್ನಡಕ್ಕೆ ಡಬ್  ಆಗಿ ಬರುವ ಚಿತ್ರಗಳಲ್ಲಿ ಒಂದು ಹೆಸರು ಬಹಳ ಕಾಮನ್  ಆಗಿರುತ್ತದೆ. ಅದು ವರದರಾಜ್  ಚಿಕ್ಕಬಳ್ಳಾಪುರ. 2019ರಲ್ಲಿ ಬಿಡುಗಡೆಯಾದ ‘ರಂಗಸ್ಥಳ’ ಚಿತ್ರಕ್ಕೆ ಹಾಡುಗಳನ್ನು ಬರೆಯುವ ಮೂಲಕ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟ ಅವರು, ನಾಲ್ಕು ವರ್ಷಗಳ ಅಂತರದಲ್ಲಿ 96 ಚಿತ್ರಗಳಿಗೆ ಸಂಭಾಷಣೆಕಾರರಾಗಿ, ಗೀತರಚನೆಕಾರರಾಗಿ  ಕೆಲಸ ಮಾಡಿದ್ದಾರೆ.

    ಮೂಲತಃ ಚಿಕ್ಕಬಳ್ಳಾಪುರದವರಾದ ವರದರಾಜ್ , ಬೆಂಗಳೂರಿನ ಆರ್ .ಸಿ. ಕಾಲೇಜಿನಲ್ಲಿ ಓದಿದವರು. ಬಿ.ಬಿ.ಎಂ, ಎಂ.ಬಿ.ಎ ಪದವಿಧರರು. ಚಿಕ್ಕಂದಿನಿಂದಲೂ ಕವನ, ಕಥೆಗಳನ್ನು ಬರೆಯುತ್ತಿದ್ದ ಅವರು, ಕಾಲೇಜಿನಲ್ಲಿ ತಮ್ಮದೇ ರಚನೆಯ ನಾಟಕಗಳನ್ನೂ ಆಡಿಸಿದ್ದಾರೆ. ಗಡಿ ಭಾಗದವರದ್ದಾರಿಂದ ಕನ್ನಡದ ಜೊತೆಗೆ ತೆಲುಗಿನಲ್ಲೂ ಹಿಡಿತ ಚೆನ್ನಾಗಿತ್ತು. ಕನ್ನಡ ಸಾಹಿತ್ಯವಲ್ಲದೆ, ತೆಲುಗು ಸಾಹಿತ್ಯವನ್ನೂ ಚೆನ್ನಾಗಿ ಓದಿ ಅರ್ಥ ಮಾಡಿಕೊಂಡಿದ್ದ ಅವರು, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2009ರಲ್ಲಿ. ಪೂಜಾ ಗಾಂಧಿ ಅಭಿನಯದ ‘ತವರಿನ ಋಣ’ ಚಿತ್ರಕ್ಕಾಗಿ ಅವರು ‘ಕೇಳೇ ಮೈನ’ ಎಂಬ ಹಾಡನ್ನು ಬರೆದರಾದರೂ ಆ ಚಿತ್ರ ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ನಂತರ ಒಂದು ದಶಕ ಕಾಲ ನೂರಾರು ಭಕ್ತಿ ಗೀತೆ, ವೀಡೀಯೋ ಸಾಂಗ್ ಗಳನ್ನು ರಚಿಸುವಲ್ಲಿ ತೊಡಗಿಸಿಕೊಂಡಿದ್ದರು ವರದರಾಜು.

    ಹೀಗಿರುವಾಗಲೇ, 2019ರಲ್ಲಿ ಡಬ್ಬಿಂಗ್ ಗೆ ಮುಕ್ತ ಅವಕಾಶ ಸಿಕ್ಕಿತ್ತು. ಈ ಸಂದರ್ಭದಲ್ಲಿ ರಾಮ್ ಚರಣ್  ತೇಜ ಅಭಿನಯದ ತೆಲುಗು ಚಿತ್ರ ‘ರಂಗಸ್ಥಲಂ’, ಕನ್ನಡಕ್ಕೆ ‘ರಂಗಸ್ಥಳ’ ಎಂಬ ಹೆಸರಿನಲ್ಲಿ ಡಬ್  ಆಗಿ ಬಿಡುಗಡೆಯಾಯಿತು. ಈ ಚಿತ್ರಕ್ಕಾಗಿ ಅವರು ಬರೆದ ‘ಎಂಥ ಮುದ್ದಾಗಿದೀಯೇ’ ‘ಗಂಗಮ್ಮ ರಂಗಮ್ಮ’ ಸೇರಿದಂತೆ ಎಲ್ಲ ಹಾಡುಗಳು ಯಶಸ್ವಿಯಾದವು. ನಂತರ ‘ಕಾಂಚನ 3’ ಚಿತ್ರಕ್ಕೆ ಸಾಹಿತ್ಯ ಬರೆದರು. ಈ ಚಿತ್ರವೂ ಹೆಸರು ತಂದುಕೊಟ್ಟಿತು. ಮೊದಲೆರಡು ಚಿತ್ರಗಳಿಗೆ ಸಾಹಿತ್ಯ ಮಾತ್ರ ಬರೆದ ಅವರು, ಮೂರನೆಯ ಚಿತ್ರವಾದ ‘ಸೈರಾ ನರಸಿಂಹ ರೆಡ್ಡಿ’ಗೆ ಹಾಡುಗಳ ಜೊತೆಗೆ ಸಂಭಾಷಣೆಗಳನ್ನೂ ರಚಿಸಿದರು. ಈ ಚಿತ್ರಗಳ ಯಶಸ್ಸಿನಿಂದ ವರದರಾಜ್  ಸಾಕಷ್ಟು ಬ್ಯುಸಿಯಾದರು.

    ತೆಲುಗು, ತಮಿಳು ಮಲಯಾಳಂ ಮತ್ತು ಹಿಂದಿಯಿಂದ ಕನ್ನಡಕ್ಕೆ ಡಬ್  ಆದ ‘ಮಾಸ್ಟರ್ ‘, ‘ಗೀತ ಗೋವಿಂದಂ’, ‘RRR’, ‘ಮಗಧೀರ’, ‘ಬೃಂದಾವನಂ’, ‘ಮಿಥುನಂ’, ‘ವಡ ಚೆನ್ನೈ’, ‘ಇಮೈಕ್ಕ ನೋಡಿಗಳ್ ‘, ‘ಕಾತುವಾಕ್ಕುಲ ರೆಂಡು ಕಾದಲ್’, ‘ಬೀಸ್ಟ್ ‘, ‘ವಿಕ್ರಮ್ ‘, ‘ಪೊನ್ನಿಯನ್  ಸೆಲ್ವನ್  1’, ‘ಪಾಲಾರ್’ ‘ಪುಷ್ಪ’ ಮುಂತಾದ ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್  ಆದ ಚಿತ್ರಗಳ ಜತೆಗೆ, ಕನ್ನಡದಿಂದ ಬೇರೆ ಭಾಷೆಗಳಿಗೆ ಡಬ್  ಆಗಿರುವ ‘ಕೆಂಪೇಗೌಡ 2’, ‘ಪೊಗರು’, ‘ಕಿಸ್ ‘, ‘ವಂಚನ’ ‘ರೆಮೋ’, ‘ಉಗ್ರಾವತಾರಂ’, ‘ ಅನಗನಗಾ ಓಕ ಅಡವಿ  ‘, ‘ಕಬ್ಜ’ ಮತ್ತು ‘ಟೆರರ್ ‘ ಮುಂತಾದ ಚಿತ್ರಗಳಿಗೆ ವರದರಾಜು ಸಾಹಿತ್ಯ ಮತ್ತು ಸಂಭಾಷಣೆ ರಚಿಸಿದ್ದಾರೆ. ವರದರಾಜು ಬರೆದಿರುವ ‘ಮಾಸ್ಟರ್ ‘ ಚಿತ್ರದ ‘ಮನಸೇ ಕರಗದಾ ಲೋಕವೀ ಲೋಕವು’, ‘ಪುಷ್ಪ’ ಚಿತ್ರದಲ್ಲಿ ‘ಶ್ರೀವಲ್ಲಿ’, ‘ಸಾಮಿ ಸಾಮಿ’, ‘ಹೂಂ ಅಂತೀಯ ಮಾಮ ಉಹೂಂ ಅಂತೀಯ ಮಾಮ’, ‘RRR’ ಚಿತ್ರದ ‘ಹಳ್ಳಿನಾಟು’, ‘ದೋಸ್ತಿ’, ‘ಜನನಿ’, ‘ಕೊಮರಂ ಭೀಮ್  ಉಧೋ’ ಮುಂತಾದ ಹಾಡುಗಳು ಸಾಕಷ್ಟು ಯಶಸ್ವಿಯಾಗಿವೆ.

    ಇದು ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳ ವಿಷಯವಾದರೆ, ಕನ್ನಡಕ್ಕೆ ಡಬ್  ಆಗುತ್ತಿರುವ ಚಿತ್ರಗಳು ಸಹ ದೊಡ್ಡ ಸಂಖ್ಯೆಯಲ್ಲಿದೆ. ‘ಶಾಕುಂತಲಂ’, ‘ಪುಷ್ಪ 2’, ‘ಪೊನ್ನಿಯನ್  ಸೆಲ್ವನ್  2’, ‘ಹರಿಹರ ವೀರಮಲ್ಲು’, ‘ದಸರಾ’ NTR 30, ಮುಂತಾದ ಚಿತ್ರಗಳಿಗೆ ವರದರಾಜು ಸಾಹಿತ್ಯ ಮತ್ತು ಸಂಭಾಷಣೆ ರಚಿಸಿದ್ದು, ಕೆಲ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿವೆ. ಇದನ್ನೂ ಓದಿ: `ಸೀತಾ ರಾಮಂ’ ನಾಯಕಿಗೆ ಮದುವೆ ಪ್ರಪೋಸಲ್‌, ಖಡಕ್‌ ಉತ್ತರ ಕೊಟ್ಟ ನಟಿ

    ಬಹಳ ಕಡಿಮೆ ಸಮಯದಲ್ಲಿ ವರದರಾಜ್  ಅತೀ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡುವುದರ ಜೊತೆಗೆ ಮಣಿರತ್ನಂ, ಎಸ್ .ಎಸ್ . ರಾಜಮೌಳಿ, ಸುಕುಮಾರ್ , ಎಂ.ಎಂ. ಕೀರವಾಣಿ ದೇವಿಶ್ರೀ ಪ್ರಸಾದ್ ಮುಂತಾದ ಖ್ಯಾತನಾಮರ ಜೊತೆಗೂ ಕೆಲಸ ಮಾಡಿದ್ದಾರೆ. ಹಾಗೆಯೇ, ಜ್ಯೂನಿಯರ್  ಎನ್ ಟಿಆರ್ , ರಾಮ್ ಚರಣ್  ತೇಜ ಅವರಿಗೆ ಕನ್ನಡವನ್ನು ತಿದ್ದಿ ತೀಡಿ, ಅವರಿಂದ ಡಬ್ಬಿಂಗ್  ಮಾಡಿಸಿರುವ ವರದರಾಜ್, ತಾವು ನಡೆದು ಬಂದ ಹಾದಿಯ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ. ಸದ್ಯದಲ್ಲೇ ಶತಕ ಪೂರೈಸುವುದರಲ್ಲಿರುವ ವರದರಾಜು ಚಿಕ್ಕಬಳ್ಳಾಪುರ, ಕನ್ನಡಕ್ಕೂ ಇತರೆ ಭಾಷೆಗಳಿಗೂ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತಾ ಮುಂದಿನ ದಿನಗಳಲ್ಲಿ ಇನ್ನಷ್ಟು ಸದಭಿರುಚಿಯ ಸಾಹಿತ್ಯ ರಚಿಸುತ್ತಾ ತಮ್ಮ ಬರವಣಿಗೆಯ ಮೂಲಕ ಇನ್ನಷ್ಟು ಕನ್ನಡ ಸೇವೆ ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತಾರೆ.

  • ಡಬ್ಬಿಂಗ್ ಸಿನಿಮಾದಿಂದ ತೆಲುಗು ಚಿತ್ರೋದ್ಯಮಕ್ಕೆ ಹಾನಿ: ಒಟ್ಟಾದ ನಿರ್ಮಾಪಕರು

    ಡಬ್ಬಿಂಗ್ ಸಿನಿಮಾದಿಂದ ತೆಲುಗು ಚಿತ್ರೋದ್ಯಮಕ್ಕೆ ಹಾನಿ: ಒಟ್ಟಾದ ನಿರ್ಮಾಪಕರು

    ರಭಾಷೆಯ ಚಿತ್ರಗಳು ತೆಲುಗಿಗೆ ಡಬ್ ಆಗಿ ಬಂದು ಮೂಲ ತೆಲುಗು ಸಿನಿಮಾಗಳಿಗೆ ತೊಂದರೆ ಮಾಡುತ್ತಿವೆ ಎಂದು ಅಲ್ಲಿನ ನಿರ್ಮಾಪಕರು ದೂರಿದ್ದಾರೆ. ಈ ಕಾರಣದಿಂದಾಗಿಯೇ ಅವರು ಮಹತ್ವದ ನಿರ್ಣಯವೊಂದನ್ನು ತಗೆದುಕೊಂಡಿದ್ದು, ಹಬ್ಬಗಳಲ್ಲಿ ಹೆಚ್ಚೆಚ್ಚು ತೆಲುಗು ಸಿನಿಮಾಗಳಿಗೆ ಚಿತ್ರಮಂದಿರ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಡಬ್ಬಿಂಗ್ ಸಿನಿಮಾಗಳಿಗೆ ಕಡಿವಾಣ ಹಾಕುವಂತಹ ಕೆಲಸಗಳು ಆಗಬೇಕು ಎಂದು ಹೇಳಿದ್ದಾರೆ.

    ಡಬ್ಬಿಂಗ್ ಸಿನಿಮಾಗಳಿಂದ ಮೂಲ ತೆಲುಗು ಚಿತ್ರಗಳಿಗೆ ಹಾನಿ ಆಗುತ್ತಿರುವುದನ್ನು ಗಮನಿಸಿ ಇಂಥದ್ದೊಂದು ತೀರ್ಮಾನ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ದೊಡ್ಡ ಹಬ್ಬಗಳಲ್ಲಿ ಈ ಬಾರಿ ತೆಲುಗಿಗಿಂತ ಬೇರೆ ಭಾಷೆ ಚಿತ್ರಗಳೇ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದ್ದು, ಅಲ್ಲಿನ ನಿರ್ಮಾಪಕರಿಗೆ ನಿದ್ದೆಗೆಡಿಸಿದೆ. ಅಲ್ಲದೇ, ಕೆಲವರು ಬೇರೆ ಭಾಷೆಯ ಸಿನಿಮಾಗಳಿಗೆ ಮಣೆ ಹಾಕುತ್ತಿರುವುದರಿಂದ ತೆಲುಗು ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೂ ಓದಿ:ದೊಡ್ಮನೆಯಲ್ಲಿ ರಂಪಾಟ: ಕೈ ಕೈ ಮಿಲಾಯಿಸಿದ ಸಂಬರ್ಗಿ-ಗೊಬ್ಬರಗಾಲ

    ನಿರ್ಮಾಪಕರೆಲ್ಲ ಒಟ್ಟಾಗಿ ತೆಲುಗು ಚಿತ್ರೋದ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಹಲವು ಮೀಟಿಂಗ್ ಗಳನ್ನು ಮಾಡಿದ್ದು, ಅದರಲ್ಲಿ ಕೆಲ ನಿರ್ಣಯಗಳನ್ನೂ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ದೊಡ್ಡ ಹಬ್ಬಗಳಲ್ಲಿ ಚಿತ್ರಮಂದಿರಗಳು ತೆಲುಗು ಸಿನಿಮಾಗೇ ಮೀಸಲಿಡಬೇಕು. ಆ ವೇಳೆಯಲ್ಲಿ ಆದಷ್ಟು ಡಬ್ಬಿಂಗ್ ಸಿನಿಮಾಗಳನ್ನು ದೂರಿಡಬೇಕು ಎನ್ನುವುದು ಅಲ್ಲಿನ ನಿರ್ಮಾಪಕರ ಆಗ್ರಹ ಕೂಡ ಆಗಿದೆಯಂತೆ.

    ತೆಲುಗು ನಿರ್ಮಾಪಕರು ಅಂಥದ್ದೊಂದು ನಿರ್ಧಾರ ತಗೆದುಕೊಳ್ಳಲು ನೇರವಾಗಿ ಕೆಜಿಎಫ್ 2, ಕಾಂತಾರ ಸಿನಿಮಾ  ಕಾರಣ ಎನ್ನವ ಚರ್ಚೆಯೂ ಆಗುತ್ತಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಕೋಟಿ ಕೋಟಿ ಬಾಚಿದ್ದರಿಂದ ನಿರ್ಮಾಪಕರು ಒಟ್ಟಾಗಿ, ಚರ್ಚಿಸಿ ಇಂಥದ್ದೊಂದು ತೀರ್ಮಾನ ತಗೆದುಕೊಳ್ಳಲು ಒಂದಾಗಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ‘ಕಾಂತಾರ’ ತುಳುವಿನಲ್ಲಿ ಬಿಡುಗಡೆ ಆಗುವುದು ಪಕ್ಕಾ ಎಂದ ರಿಷಬ್ ಶೆಟ್ಟಿ

    ‘ಕಾಂತಾರ’ ತುಳುವಿನಲ್ಲಿ ಬಿಡುಗಡೆ ಆಗುವುದು ಪಕ್ಕಾ ಎಂದ ರಿಷಬ್ ಶೆಟ್ಟಿ

    ನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಕಾಂತಾರ (Kantara) ಸಿನಿಮಾ ರಿಲೀಸ್ ಆಗಿದೆ. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಡಬ್ (Dubbed) ಆಗಿ ಸಿನಿಮಾ ಬಿಡುಗಡೆ ಆಗಿದ್ದು, ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ತುಳುನಾಡಿನ ಆರಾದ್ಯ ದೈವದ ಕುರಿತಾದ ಸಿನಿಮಾ ಇದಾಗಿದ್ದರಿಂದ, ಈ ಸಿನಿಮಾವನ್ನು ತುಳುವಿಗೂ ಡಬ್ ಮಾಡಬೇಕು ಎನ್ನುವುದು ನಿರ್ಮಾಪಕ ವಿಜಯ್ ಕಿರಗಂದೂರು ಆಸೆಯಂತೆ. ಹಾಗಾಗಿ ಈ ಸಿನಿಮಾವನ್ನು ತುಳುವಿಗೂ ಡಬ್ ಮಾಡುತ್ತಾರಂತೆ ಚಿತ್ರತಂಡ.

    ಈ ಕುರಿತು ಧರ್ಮಸ್ಥಳದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ (Rishabh Shetty), ‘ಕಾಂತಾರ ಸಿನಿಮಾವನ್ನು ತುಳು ಭಾಷೆಗೆ ಡಬ್ ಮಾಡಬೇಕು ಎನ್ನುವುದು ನಿರ್ಮಾಪಕರ ಆಸೆ. ಹಾಗಾಗಿ ಈ ಚಿತ್ರವನ್ನು ತುಳುಗೆ (Tulu) ಡಬ್ ಮಾಡಲಾಗುತ್ತದೆ. ಈಗಾಗಲೇ ಸಿನಿಮಾ ಎಲ್ಲ ಕಡೆ ಪ್ರದರ್ಶನ ಕಂಡಿದೆ. ದಾಖಲೆ ರೀತಿಯಲ್ಲಿ ಗೆಲುವು ಸಾಧಿಸಿದೆ. ಇದೆಲ್ಲ ಸಾಧ್ಯವಾಗಿದ್ದು ದೈವದ ಕಾರಣದಿಂದ. ಹಾಗಾಗಿ ಈ ಸಿನಿಮಾವನ್ನು ತುಳುವಿನಲ್ಲೂ ಡಬ್ ಮಾಡಲ ಯೋಚನೆ ಮಾಡಿದ್ದೇವೆ. ಆದಷ್ಟು ಬೇಗ ಮಾಡಲಾಗುವುದು’ ಎಂದಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ವಿಜಯ್ ದೇವರಕೊಂಡ- ರಶ್ಮಿಕಾ

    ಕಾಂತಾರ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಬರುವ ವರಾಹ ರೂಪಂ ಹಾಡಿನ ವಿವಾದ ಕುರಿತು ಈ ಸಂದರ್ಭದಲ್ಲಿ ಮಾತನಾಡಿರುವ ರಿಷಬ್, ‘ನಾವು ಕದ್ದಿಲ್ಲ. ಸುಖಾಸುಮ್ಮನೆ ಜನರನ್ನು ಹಾದಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಯಾರೇ ಕೇಳಿದರೂ, ನಾವು ಅದನ್ನು ಕದ್ದ ಹಾಡಲ್ಲ ಎಂದು ಸಾಬೀತು ಪಡಿಸುತ್ತೇವೆ ಎಂದು ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಸ್ಥಳದ ಮಂಜುನಾಥನ ದರ್ಶನಕ್ಕೆ ಆಗಮಿಸಿದ್ದ ರಿಷಬ್ ಶೆಟ್ಟಿ ದಂಪತಿ, ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ಅದು ಕದ್ದ ಮ್ಯೂಸಿಕ್ ಅಲ್ಲ ಎಂದು ನುಡಿದಿದ್ದಾರೆ.

    ಕಾಂತಾರ ಸಿನಿಮಾ ಅಂದಾಕ್ಷಣ ಥಟ್ಟನೆ ನೆನಪಾಗುವ ಹಾಡು ‘ವರಾಹ ರೂಪಂ’ ಗೀತೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಈ ಗೀತೆಯು ಸಿನಿಮಾದ ಗಟ್ಟಿತನವನ್ನು ಮತ್ತಷ್ಟು ಹೆಚ್ಚಿಸಿತ್ತು. ಕ್ಲೈಮ್ಯಾಕ್ಸ್ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಲು ಕಾರಣವೂ ಆಗಿತ್ತು. ಈ ಹಾಡಿನ ವಿರುದ್ಧ ಟ್ಯೂನ್ ಕದ್ದ ಆರೋಪ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‍ ನ ಸದಸ್ಯರು ಕೋರ್ಟಿಗೆ ಮೊರೆ ಹೋಗಿದ್ದರು. ಹಾಗಾಗಿ ಕೋಯಿಕ್ಕೋಡ್ ಕೋರ್ಟ್ ಸಿನಿಮಾದಲ್ಲಿ ಈ ಹಾಡು ಬಳಸದಂತೆ ತಡೆಯಾಜ್ಞೆ ನೀಡಿತ್ತು.

    ಆದರೂ, ಕಾಂತರ ಸಿನಿಮಾದ ತಂಡ ನಾವು ಯಾವುದೇ ರೀತಿಯಲ್ಲಿ ಹಾಡನ್ನು ಕಾಪಿ ಮಾಡಿಲ್ಲ. ಹಾಗಾಗಿ ಚಿತ್ರದಲ್ಲಿ ಆ ಹಾಡು ಇರತ್ತೆ ಎಂದು ಈವರೆಗೂ ಥಿಯೇಟರ್ ನಲ್ಲಿ ಅದನ್ನು ಮುಂದುವರೆಸಿಕೊಂಡು ಬಂದಿದ್ದರು. ಇದೀಗ ಮತ್ತೊಂದು ಕೇಸ್ ದಾಖಲಾಗಿದ್ದು, ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯು ಮತ್ತೆ ಕೋರ್ಟ್ ಮೊರೆ ಹೋಗಿದೆ. ಹಾಗಾಗಿ ಅರ್ಜಿಯ ವಿಚಾರಣೆ ನಡೆಸಿರುವ ಪಾಲಕ್ಕಾಡ್ ಕೋರ್ಟ್ ಮುಂದಿನ ಆದೇಶ ಬರುವವರೆಗೂ ಈ ಹಾಡನ್ನು ಎಲ್ಲಿಯೂ ಹಂಚಿಕೆ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ‘ಉಪಾಧ್ಯಕ್ಷ’ನಿಗೆ ಡಬ್ಬಿಂಗ್ ಮಾಡುತ್ತಿರುವ ಹಾಸ್ಯ ನಟ ಚಿಕ್ಕಣ್ಣ

    ‘ಉಪಾಧ್ಯಕ್ಷ’ನಿಗೆ ಡಬ್ಬಿಂಗ್ ಮಾಡುತ್ತಿರುವ ಹಾಸ್ಯ ನಟ ಚಿಕ್ಕಣ್ಣ

    ಧ್ಯಕ್ಷ ಚಿತ್ರದಲ್ಲಿ (Chikkanna) ಚಿಕ್ಕಣ್ಣ “ಉಪಾಧ್ಯಕ್ಷ” (Upadyaksha) ರಾಗಿ ಜನಪ್ರಿಯರಾಗಿದ್ದರು. ಈಗ “ಉಪಾಧ್ಯಕ್ಷ” ಚಿತ್ರದಲ್ಲಿ ಅವರೆ ನಾಯಕರಾಗಿ ನಟಿಸುತ್ತಿದ್ದಾರೆ.  ಉಮಾಪತಿ ಫಿಲಂಸ್ ಅರ್ಪಿಸುವ, ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಹಾಗೂ ನಿರ್ಮಲ ಶ್ರೀನಿವಾಸ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾಧುಕೋಕಿಲ ಅವರ ಲೂಪ್  ಸ್ಟುಡಿಯೋದಲ್ಲಿ ಮಾತಿನ (Dubbing) ಜೋಡಣೆ ನಡೆಯುತ್ತಿದೆ. ಅನಿಲ್ ಕುಮಾರ್ (Anil Kumar) ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

    ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ ಮುಂತಾದ ಕಡೆ ಐವತ್ತಕ್ಕೂ ಅಧಿಕ ದಿನಗಳ ಚಿತ್ರೀಕರಣ ನಡೆದಿದೆ. ಡಬ್ಬಿಂಗ್ ಮುಗಿದ ನಂತರ ಮತ್ತೆ ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಆದಷ್ಟು ಬೇಗ ಶೂಟಿಂಗ್ ಶುರು ಮಾಡಲಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ:ಮತ್ತೆ ಒಂದಾದ ʻಪಂಚರಂಗಿ’ ದಿಗಂತ್‌- ನಿಧಿ ಸುಬ್ಬಯ್ಯ ಜೋಡಿ

    ಚಿಕ್ಕಣ್ಣ ಅವರಿಗೆ ನಾಯಕಿಯಾಗಿ ಮಲೈಕ (Malaika) ನಟಿಸುತ್ತಿದ್ದಾರೆ. ಸಾಧುಕೋಕಿಲ, ರವಿಶಂಕರ್, ವೀಣಾಸುಂದರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ಈ ಸಿನಿಮಾ ಕೂಡ ಅಧ್ಯಕ್ಷ ಸಿನಿಮಾದಂತೆಯೇ ಹಿಟ್ ಆಗಲಿದೆ ಎನ್ನುವ ವಿಶ್ವಾಸ ಚಿತ್ರತಂಡದ್ದು.

    Live Tv
    [brid partner=56869869 player=32851 video=960834 autoplay=true]

  • ಸಮಂತ ಪಾತ್ರಕ್ಕೆ ಡಬ್ ಮಾಡಲಾರೆ ಎಂದು ಘೋಷಿಸಿದ ಗಾಯಕಿ ಚಿನ್ಮಯಿ ಶ್ರೀಪಾದ್

    ಸಮಂತ ಪಾತ್ರಕ್ಕೆ ಡಬ್ ಮಾಡಲಾರೆ ಎಂದು ಘೋಷಿಸಿದ ಗಾಯಕಿ ಚಿನ್ಮಯಿ ಶ್ರೀಪಾದ್

    ಮಿಳು ಸಿನಿಮಾ ರಂಗದ ಖ್ಯಾತ ಗಾಯಕಿ, ಡಬ್ಬಿಂಗ್ ಕಲಾವಿದ ಚಿನ್ಮಯಿ ಶ್ರೀಪಾದ್, ತಮಿಳು ಸಿನಿಮಾ ರಂಗದಲ್ಲಿ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದ್ದಾರೆ. ಈ ಹಿಂದೆ ಸ್ಟಾರ್ ನಟ ನಟಿಯರ ಖಾಸಗಿ ಸಂಗತಿಗಳನ್ನು ಆಚೆ ಹಾಕಿ, ಸಿನಿಮಾ ರಂಗದಲ್ಲೇ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಚಿನ್ಮಯಿ ಹಲವು ದಿನಗಳಿಂದ ಸಮಂತಾ ಜೊತೆಗೆ ಮುಸುಕಿನ ಗುದ್ದಾಟ ನಡೆಸಿದ್ದರು. ಇದೀಗ ಶಾಶ್ವತವಾದ ಸಂಬಂಧವನ್ನು ಕಳೆದುಕೊಳ್ಳಲು ಅವರು ನಿರ್ಧಾರಿಸಿದ್ದಾರೆ.

    ಸಮಂತಾ ಶರೀರವಾದರೆ, ಚಿನ್ಮಯಿ ಶ್ರೀಪಾದ್ ಶಾರೀರದಂತಿದ್ದರು. ಸಮಂತಾ ಅವರ ಬಹುತೇಕ ಪಾತ್ರಗಳಿಗೆ ಚಿನ್ಮಯಿ ಅವರೇ ಡಬ್ ಮಾಡುತ್ತಿದ್ದರು. ಹಾಗಾಗಿ ಸಮಂತಾ ಪಾತ್ರಗಳಿಗೆ ಬೇರೆಯದ್ದೇ ತೂಕ ಇರುತ್ತಿತ್ತು. ಇದೀಗ ಚಿನ್ಮಯಿ ಅವರು ಸಮಂತಾ ಮೇಲೆ ಕೋಪ ಮಾಡಿಕೊಂಡಿದ್ದು, ಇನ್ಮುಂದೆ ಸಮಂತಾ ಪಾತ್ರಕ್ಕೆ ತಾವು ಡಬ್ ಮಾಡುವುದಿಲ್ಲಿ ಎಂದು ಘೋಷಿಸಿದ್ದಾರೆ. ಅಲ್ಲದೇ, ಇನ್ಮುಂದೆ ಯಾವುದೇ ರೀತಿಯ ಕಾಂಟ್ಯಾಕ್ಟ್ ಕೂಡ ಇಟ್ಟುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ಹಲವು ತಿಂಗಳುಗಳಿಂದ ಸಮಂತಾ ಮತ್ತು ಚಿನ್ಮಯಿ ಹಲವು ಕಾರಣಗಳಿಂದಾಗಿ ಮನಸ್ತಾಪ ಮಾಡಿಕೊಂಡಿದ್ದರಂತೆ. ಅದು ಮತ್ತೆ ಸರಿ ಹೊಂದದ ಹಾಗೆ ಆಗಿದೆಯಂತೆ. ಹಾಗಾಗಿ ಚಿನ್ಮಯಿ ಇಂಥದ್ದೊಂದು ಖಡಕ್ ನಿರ್ಧಾರ ತಗೆದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಸಮಂತಾ ಸಿನಿಮಾದಲ್ಲಿ ಕೆಲಸ ಮಾಡಲಾರೆ ಎಂದು ಚಿನ್ಮಯಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಪೇಂದ್ರ- ಸುದೀಪ್ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್

    ಉಪೇಂದ್ರ- ಸುದೀಪ್ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್

    ಆರ್.ಚಂದ್ರು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ “ಕಬ್ಜ” ಚಿತ್ರ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಸಿನಿಮಾದ ಬಹುತೇಕ ಶೂಟಿಂಗ್ ಮುಗಿಸಿರುವ ನಿರ್ದೇಶಕರು ನಿನ್ನೆಯಿಂದ ಡಬ್ಬಿಂಗ್ ಕಾರ್ಯ ಶುರು ಮಾಡಿದ್ದಾರೆ. ಒಟ್ಟು ಏಳು ಭಾಷೆಗಳಲ್ಲಿ ಈ ಸಿನಿಮಾ ಡಬ್ ಆಗಲಿದೆ.

    ಈ ಕುರಿತು ಮಾತನಾಡಿರುವ ನಿರ್ದೇಶಕರು, ‘ನಾವು ಅಂದುಕೊಂಡಂತೆ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಒಂದು ಹಾಡಿನ ಚಿತ್ರೀಕರಣ ಬಿಟ್ಟು, ಉಳಿದ ಚಿತ್ರೀಕರಣ  ಮುಕ್ತಾಯವಾಗಿದೆ.  ಏಕಕಾಲದಲ್ಲಿ ಏಳುಭಾಷೆಗಳಲ್ಲೂ ಡಬ್ಬಿಂಗ್ ಸಹ ಸದ್ದಿಲ್ಲದೆ ನಡೆಯುತ್ತಿದೆ. ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಸಿನಿಮಾ ರಿಲೀಸ್ ಮಾಡಲಾಗುವುದು’ ಎಂದಿದ್ದಾರೆ.

    1940ರ ಕಾಲಘಟ್ಟದ ಕಥೆ ಅದ್ಭುತವಾಗಿದೆ. ಮೋಷನ್ ಪೋಸ್ಟರ್ ಹಾಗೂ ಸ್ಟಿಲ್ಸ್ ಜನಮನಸೂರೆಗೊಂಡಿದೆ. ಮೇಕಿಂಗ್ ತುಣುಕು ನೋಡಿದವರಂತು ಫಿದಾ ಆಗಿದ್ದಾರೆ. ಭಾರತ ದೇಶವೇ ತಿರುಗಿ ನೋಡುವ ಸಿನಿಮಾ ಇದಾಗಲಿದೆ ಎನ್ನುತ್ತಾರೆ ಚಂದ್ರು. ಇದನ್ನೂ ಓದಿ: ಹೇಗಿದ್ದೀರಾ, ಚೆನ್ನಾಗಿದ್ದೀರಾ? ಎಂದು ಕೇಳುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ : ಧ್ರುವ ಸರ್ಜಾ

    ಕಬ್ಬ  ಚಿತ್ರ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಮೈಲಿಗಲ್ಲಾಗಲಿ ಎಂಬುದೇ ಕನ್ನಡಿಗರ ಆಶಯ. ಚಿತ್ರದ. ಟೀಸರ್ ನೋಡುವ ಕಾತುರದಲ್ಲಿದ್ದೇವೆ. ಆದಷ್ಟು ಬೇಗ ಬಿಡುಗಡೆ ಮಾಡಿ ಎಂದು ಸಿನಿಪ್ರೇಕ್ಷಕರು ಚಂದ್ರು ಅವರನ್ನು ಒತ್ತಾಯಿಸುತ್ತಿದ್ದಾರಂತೆ ಅಭಿಮಾನಿಗಳು.

  • ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ

    ಹಿಂದಿ ರಾಷ್ಟ್ರ ಭಾಷೆ : ಕರ್ನಾಟಕದಲ್ಲಿ ಅಜಯ್ ದೇವಗನ್ ಸಿನಿಮಾ ರಿಲೀಸ್ ಅಡ್ಡಿ : ಕರವೇಯಿಂದ ಪ್ರತಿಭಟನೆ

    ಹಿಂದಿ ರಾಷ್ಟ್ರ ಭಾಷೆ. ನೀವು ಒಪ್ಪಿಕೊಳ್ಳದೇ ಇದ್ದರೆ ನಿಮ್ಮ ಸಿನಿಮಾವನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ ಎಂದು ಕಿಚ್ಚ ಸುದೀಪ್ ಅವರ ಮಾತಿಗೆ ಟ್ವಿಟ್ ಮಾಡಿದ್ದ ಅಜಯ್ ದೇವಗನ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ನಿನ್ನೆಯಷ್ಟೇ ಸ್ಯಾಂಡಲ್ ವುಡ್ ಬಹುತೇಕ ನಟರು ಅಜಯ್ ದೇವಗನ್ ಮಾತನ್ನು ಖಂಡಿಸಿದ್ದರು. ಇಂದು ಅಜಯ್ ದೇವಗನ್ ವಿರುದ್ಧ ಕರಾವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

    ಈ ಕುರಿತು ಮಾತನಾಡಿರುವ ಪ್ರವೀಣ್ ಶೆಟ್ಟಿ, ‘ನಾವು ಹಿಂದಿ ಭಾಷಿಗರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಅಜಯ್ ದೇವಗನ್ ನಟನೆಯ ಸಿನಿಮಾಗಳನ್ನು ರಿಲೀಸ್ ಮಾಡಲು ಬಿಡುವುದಿಲ್ಲ. ಅವರು ಕನ್ನಡದ ವಿಷಯದಲ್ಲಿ ತಲೆ ಹಾಕುವುದು ಬೇಡ’ ಎಂದಿದ್ದಾರೆ. ಇಂದು ಬೆಂಗಳೂರಿನ ಮೈಸೂರು ವೃತ್ತದಲ್ಲಿ ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

    ನಿನ್ನೆ ನಡೆದ ಟ್ವಿಟ್ ವಾರ್ ನಲ್ಲಿ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಕನ್ನಡ ಪರ ಮಾತನಾಡಿದ್ದ ಸುದೀಪ್ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅಜಯ್ ದೇವಗನ್ ಹೇಳಿಕೆ ಖಂಡಿಸಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡ ಟ್ವಿಟ್ ಮಾಡಿದ್ದರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ಕೇವಲ ಸ್ಯಾಂಡಲ್ ವುಡ್ ನಟರು ಮಾತ್ರವಲ್ಲ, ದಕ್ಷಿಣದ ಅನೇಕ ತಾರೆಯರು ಕಿಚ್ಚನ ಬೆನ್ನಿಗೆ ನಿಂತಿದ್ದರು. ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಿಚ್ಚನನ್ನು ಬೆಂಬಲಿಸಿ ಸರಣಿ ಟ್ವಿಟ್ ಮಾಡಿದ್ದರು. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನ ಜೈಕಾರವೇ ಹಾಕಲಾಯಿತು.

  • ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವೀಟ್‌ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

    ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವೀಟ್‌ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

    ಹಿಂದಿ ರಾಷ್ಟ್ರ ಭಾಷೆಯ ವಿಚಾರವಾಗಿ ಕನ್ನಡದ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಅಜಯ್ ದೇವಗನ್ ನಡುವೆ ಟ್ವೀಟ್ ಸರಣಿ ನಡೆದಿತ್ತು. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದು ಸುದೀಪ್ ಹೇಳಿದ್ದಕ್ಕೆ, ನೀವೇಕೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಬಿಡುತ್ತೀರಿ ಎಂದು ಅಜಯ್ ದೇವಗನ್ ಟ್ವೀಟ್‌ ಮಾಡುವ ಮೂಲಕ ಪ್ರಶ್ನೆ ಮಾಡಿದ್ದರು. ಇದರಿಂದಾಗಿ ಇಬ್ಬರು ಸ್ಟಾರ್ ಗಳ ನಡುವೆ ಟ್ವಿಟ್ಟರ್‌ ನಲ್ಲೇ ಪ್ರಶ್ನೋತ್ತರ ನಡೆದಿತ್ತು.  ಇದನ್ನೂ ಓದಿ : ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

    ಅಜಯ್ ದೇವಗನ್  ಮಾಡಿದ್ದ ಟ್ವೀಟ್‌ಗೆ  ಉತ್ತರ ನೀಡಿರುವ ಸುದೀಪ್, ‘ನಾನು ದೇಶದ ಪ್ರತಿ ಭಾಷೆಯನ್ನೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಕೇಳಿಕೊಳ್ಳುವೆ. ನಾನು ಆ ಸಾಲುಗಳನ್ನು ಯಾವ ಸನ್ನಿವೇಶದಲ್ಲಿ ಹೇಳಿದ್ದೇನೆ ಎನ್ನುವುದು ಇಲ್ಲಿ ಮುಖ್ಯ. ಮಚ್ ಲವ್. ಶೀಘ್ರದಲ್ಲೇ ನಿಮ್ಮನ್ನು ಕಾಣುವೆ. ಶುಭಾಶಯಗಳು’ ಎಂದು ಒಂದು ಟ್ವೀಟ್ ಮಾಡಿದ್ದರೆ. ಮತ್ತೊಂದು ಟ್ವಿಟ್ ನಲ್ಲಿ ವಿಷಾದದ ಅರ್ಥದಲ್ಲಿಯೂ ಬರೆದಿದ್ದಾರೆ.

    ನಾನು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೇನೆ ಎನ್ನುವುದನ್ನು ಖುದ್ದಾಗಿ ತಮ್ಮನ್ನು ಭೇಟಿಯಾದ ನಂತರ ವಿವರಿಸುವೆ. ನನ್ನ ಹೇಳಿಕೆ ಸಂಪೂರ್ಣ ವಿಭಿನ್ನವಾದದ್ದು. ಯಾರನ್ನೂ ನೋಯಿಸಲು, ಪ್ರಚೋದಿಸಲು ಮತ್ತು ಚರ್ಚೆ ಮಾಡಲು ಅದನ್ನು ಹೇಳಿದ್ದಂತೂ ಅಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ ಕಿಚ್ಚ ಸುದೀಪ್. ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ಈ ಟ್ವೀಟ್‌ಗೆ ಉತ್ತರಿಸಿರುವ ಅಜಯ್ ದೇವಗನ್ , ತಪ್ಪು ತಿಳುವಳಿಕೆಯಿಂದಾಗಿ ಇಷ್ಟೆಲ್ಲ ಆಯಿತು. ಈ ವಿಷಯವನ್ನು ತಿಳಿಗೊಳಿಸಿದ್ದಕ್ಕೆ ಧನ್ಯವಾದಗಳು ಸ್ನೇಹಿತ ಸುದೀಪ್. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಮತ್ತು ಪ್ರತಿಯೊಬ್ಬರೂ ನಮ್ಮ ಭಾಷೆಯನ್ನು ಗೌರವಿಸಬೇಕು ಎಂದು ನಿರೀಕ್ಷಿಸುತ್ತೇವೆ. ಬಹುಶಃ ಅನುವಾದದಲ್ಲಿ ಏನೋ ಮಿಸ್ ಆಗಿರಬಹುದು’ ಎಂದು ಅಜಯ್ ದೇವಗನ್ ಟ್ವಿಟ್ ಮಾಡುವ ಮೂಲಕ ಈ ಪ್ರಕರಣಕ್ಕೆ ಸುಖಾಂತ್ಯ ಹಾಡಿದ್ದಾರೆ.

  • ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

    ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

    ಕೆಲ ಗಂಟೆಗಳ ಹಿಂದೆಯಷ್ಟೇ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿ, ‘ಹಿಂದಿ ರಾಷ್ಟ್ರ ಭಾಷೆ ಅಲ್ಲದೇ ಇದ್ದರೆ, ಹಿಂದಿ ಭಾಷೆಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಯಾಕೆ ರಿಲೀಸ್ ಮಾಡುತ್ತೀರಿ?’ ಎಂದು ನೇರವಾಗಿ ಕಿಚ್ಚ ಸುದೀಪ್ ಅವರಿಗೆ ಪ್ರಶ್ನೆ ಮಾಡಿದ್ದರು. ನಮಗೆ ಹಿಂದಿ ರಾಷ್ಟ್ರ ಭಾಷೆ ಮತ್ತು ಮಾತೃ ಭಾಷೆ ಎಂದು ಹೇಳಿಕೊಂಡಿದ್ದರು. ಈ ಟ್ವೀಟ್ ಗೆ ಕಿಚ್ಚ ಸುದೀಪ್ ಕೂಡ ಉತ್ತರಿಸಿದ್ದಾರೆ. ಇದನ್ನೂ ಓದಿ: ‘ಗುರು’ ಹೆಸರು ‘ಯುವ’ ರಾಜಕುಮಾರ್ ಬದಲಾಗಿದ್ದು ಹೇಗೆ? : ನಾಮಬಲ ನಂಬಿಕೆಯ ಡಾ.ರಾಜ್ ಕುಟುಂಬ

    ಅಜಯ್ ದೇವಗನ್  ಮಾಡಿದ್ದ ಟ್ವೀಟ್ ಗೆ ಉತ್ತರ ನೀಡಿರುವ ಸುದೀಪ್, ‘ನಾನು ದೇಶದ ಪ್ರತಿ ಭಾಷೆಯನ್ನೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಡುವಂತೆ ಕೇಳಿಕೊಳ್ಳುವೆ. ನಾನು ಆ ಸಾಲುಗಳನ್ನು ಯಾವ ಸನ್ನಿವೇಶದಲ್ಲಿ ಹೇಳಿದ್ದೇನೆ ಎನ್ನುವುದು ಇಲ್ಲಿ ಮುಖ್ಯ. ಮಚ್ ಲವ್. ಶೀಘ್ರದಲ್ಲೇ ನಿಮ್ಮನ್ನು ಕಾಣುವೆ. ಶುಭಾಶಯಗಳು’ ಎಂದು ಒಂದು ರೀಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ವಿಷಾದದ ಅರ್ಥದಲ್ಲಿಯೂ ಬರೆದಿದ್ದಾರೆ. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್‌ನಿಂದ ಯುವರಾಜ್ ಕುಮಾರ್ ಲಾಂಚ್: ನಿನ್ನೆಯೇ ಬ್ರೇಕ್ ಮಾಡಿತ್ತು ಪಬ್ಲಿಕ್ ಟಿವಿ

    ನಾನು ಯಾವ ಅರ್ಥದಲ್ಲಿ ಆ ಮಾತನ್ನು ಹೇಳಿದ್ದೇನೆ ಎನ್ನುವುದನ್ನು ಖುದ್ದಾಗಿ ತಮ್ಮನ್ನು ಭೇಟಿಯಾದ ನಂತರ ವಿವರಿಸುವೆ. ನನ್ನ ಹೇಳಿಕೆ ಸಂಪೂರ್ಣ ವಿಭಿನ್ನವಾದದ್ದು. ಯಾರನ್ನೂ ನೋಯಿಸಲು, ಪ್ರಚೋದಿಸಲು ಮತ್ತು ಚರ್ಚೆ ಮಾಡಲು ಅದನ್ನು ಹೇಳಿದ್ದಂತೂ ಅಲ್ಲ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ ಕಿಚ್ಚ ಸುದೀಪ್.  

    ಈ ವಿಷಯವಾಗಿ ಮೂರನೇ ಟ್ವೀಟ್ ಮಾಡಿರುವ ಸುದೀಪ್, ನೀವು ಹಿಂದಿಯಲ್ಲೇ ಕಳುಹಿಸಿದ ಟೆಕ್ಸ್ಸ್ಟ್ ಅರ್ಥವಾಯಿತು. ನಾವೆಲ್ಲರೂ ಹಿಂದಿಯನ್ನು ಗೌರವಸಿದ್ದೇವೆ ಮತ್ತು ಪ್ರೀತಿಸುತ್ತೇವೆ. ನನ್ನ ಉತ್ತರವನ್ನು ಕನ್ನಡದಲ್ಲೇ ಟೈಪ್ ಮಾಡಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಅಚ್ಚರಿ ಪಡುತ್ತಿದ್ದೇನೆ. ನಾವೆಲ್ಲರೂ ಭಾರತಕ್ಕೆ ಸೇರಿದವರು ಎಂದು ಟ್ವೀಟ್ ಮಾಡಿದ್ದಾರೆ.