Tag: ಡಬ್ಬಿಂಗ್

  • ‘ಜಲಂಧರ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಪ್ರಮೋದ್ ಶೆಟ್ಟಿ

    ‘ಜಲಂಧರ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಪ್ರಮೋದ್ ಶೆಟ್ಟಿ

    ಲಂಧರ ಚಿತ್ರತಂಡ ಇತ್ತೀಚೆಗೆ ಪ್ರಮೋದ್ ಶೆಟ್ಟಿ (Pramod Shetty) ಅವರ ಹುಟ್ಟು ಹಬ್ಬದ ಉಡುಗೊರೆಯಾಗಿ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿತ್ತು.  ಚಿತ್ರದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ  ಜನಪ್ರಿಯತೆ ಗಳಿಸಿದ ಬೆನ್ನಲ್ಲೆ  ಜಲಂಧರ (Jalandhar) ಚಿತ್ರತಂಡ, ಮಾತಿನ ಮರು ಜೋಡಣೆ ( ಡಬ್ಬಿಂಗ್ ) (Dubbing) ಅನ್ನು  ಯಶಸ್ವಿಯಾಗಿ  ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ.

    ಸ್ಟೇಪ್ ಅಪ್ ಲೋಕೇಶ್ ನಟಿಸಿ, ಕತೆ ಬರೆದು ಸ್ಟೇಪ್ ಅಪ್ ಪಿಚ್ಚರ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿರುವ ಜಲಂಧರ ಚಿತ್ರಕ್ಕೆ ಮದನ್ ಎಸ್, ಚಂದ್ರ ಮೋಹನ್.ಸಿ ಎಲ್, ರಮೇಶ್ ರಾಮಚಂದರ್ ಹಾಗೂ ಪದ್ಮನಾಭನ್ ಹಣ ಹಾಕಿ ಕೈ ಜೋಡಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಮೊದಲ ಬಾರಿಗೆ ವಿಷ್ಣು ವಿ ಪ್ರಸನ್ನ ನಿರ್ದೇಶನ ಮಾಡಿದ್ದಾರೆ. ಇದನ್ನೂ ಓದಿ:ಕಣ್ಮುಂದೆಯೇ ರಶ್ಮಿಕಾ ಇದ್ದರೂ ಮುಖ ತಿರುಗಿಸಿಕೊಂಡು ಹೋದ ಶ್ರದ್ಧಾ ಕಪೂರ್

    ರಶ್ಮಿತ್ ಕುಮಾರ್  ನಿರ್ಮಾಣ ನಿರ್ವಹಣೆಯ ಕಾರ್ಯವನ್ನು  ವಹಿಸಿಕೊಂಡಿದ್ದು ಇನ್ನು ಚಿತ್ರಕ್ಕೆ ನುರಿತ ಸಂಕಲನಕಾರ ವೆಂಕಿ UDV ಕತ್ತರಿ ಹಾಕಿದ್ದಾರೆ. ಕೇರಳ ಮೂಲದ ಛಾಯಾಗ್ರಹಕರಾದ ವಿದ್ಯಾಶಂಕರ್ ಮತ್ತು ಸರಿನ್ ರವೀಂದ್ರನ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಯುವ ಸಂಗೀತ ನಿರ್ದೇಶಕ ಜತಿನ್ ದರ್ಶನ್ ಸಂಗೀತ ನೀಡಿರುವ ಜಲಂಧರ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಅಕ್ಷಯ್ ಕುಮಾರ್ ಎಮ್, ಕಲಾ ನಿರ್ದೇಶನ ರಾಜು ವೈವಿಧ್ಯ, ಸಾಹಸ  ನಿರ್ದೇಶಕರಾದ ಕೌರವ ವೆಂಕಟೇಶ್, ಪತ್ರಿಕಾ ಸಂಪರ್ಕ ಸುದೀಂದ್ರ ವೆಂಕಟೇಶ್ ರವರು ಕೈ ಜೋಡಿಸಿದ್ದಾರೆ.

    ಚಿತ್ರದ ಮುಖ್ಯ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಟಗರು ಖ್ಯಾತಿಯ ರುಷಿಕಾ ರಾಜ್, ರಾಘು ರಾಮನಕೊಪ್ಪ, ಅರೋಹಿತಾ ಗೌಡ, ಬಲ ರಾಜ್ವಡಿ, ಆದಿ ಕೇಶವರೆಡ್ಡಿ, ಭೀಷ್ಮ ರಾಮಯ್ಯ, ಪ್ರತಾಪ ನೆನಪು, ನವೀನ್ ಸಾಗರ್, ವಿಶಾಲ್ ಪಾಟೀಲ್, ಪ್ರಸಾದ್ ಸೂರನಹಳ್ಳಿ, ಅಂಬು, ವಿಜಯ್ ರಾಜ್ ಮತ್ತು ನಂದಿನಿ ರಾಜ್ ಅಭಿನಯಿಸಿದ್ದಾರೆ.  ಜಲಂಧರ ಚಿತ್ರ ತಂಡವೂ ತಮ್ಮ ಚಿತ್ರದ ಪ್ರತಿ ಸಣ್ಣ ತುಣುಕುಗಳನ್ನು ವಿಭಿನ್ನವಾಗಿ ಪ್ರಚಾರ ಮಾಡುತ್ತಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆ ಹುಟ್ಟಿಸುತ್ತಾ ಚಿತ್ರದ ಅಂತಿಮ ಘಟ್ಟದತ್ತ ಸಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜಪಾನ್’ ಸಿನಿಮಾಗೆ ಕಾರ್ತಿ ಡಬ್ಬಿಂಗ್

    ‘ಜಪಾನ್’ ಸಿನಿಮಾಗೆ ಕಾರ್ತಿ ಡಬ್ಬಿಂಗ್

    ಮಿಳು ನಟ ಕಾರ್ತಿ (Karthi) ನಟಿಸುತ್ತಿರುವ 25ನೇ ಸಿನಿಮಾ ಜಪಾನ್ (Japan). ಇತ್ತೀಚೆಗೆ ರಿಲೀಸ್ ಆಗಿದ್ದ ಈ ಸಿನಿಮಾದ ಕ್ಯಾರೆಕ್ಟರ್ ಟೀಸರ್ ಭಾರೀ ಸದ್ದು ಮಾಡಿತ್ತು. ಇದೀಗ ಡಬ್ಬಿಂಗ್ (Dubbing) ಮನೆಯಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಅಂದರೆ ಜಪಾನ್ ಸಿನಿಮಾದ ಡಬ್ಬಿಂಗ್ ಶುರುವಾಗಿದೆ. ಸಣ್ಣದಾಗಿರುವ ಝಲಕ್ ಮೂಲಕ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

    ಜೋಕರ್ ಸಿನಿಮಾ ಮೂಲಕ ನ್ಯಾಷನಲ್ ಅವಾರ್ಡ್ ಗೆ ಮುತ್ತಿಟ್ಟಿದ್ದ ನಿರ್ದೇಶಕ ರಾಜು ಮುರುಗನ್ (Raju Murugan), ನಿರ್ಮಾಪಕರಾದ ಎಸ್. ಆರ್. ಪ್ರಕಾಶ್ ಬಾಬು ಹಾಗೂ ಎಸ್. ಆರ್. ಪ್ರಭು ‘ಜಪಾನ್’ ಸಿನಿಮಾ ಮೂಲಕ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ.

    ಜಪಾನ್ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದ್ದು, ಅನು ಇಮ್ಯಾನುಯೆಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಟಾಲಿವುಡ್‌ನ ಹಾಸ್ಯನಟನಾಗಿ ಸುನಿಲ್ ಈ ಚಿತ್ರದ ಮೂಲಕ ತಮಿಳುಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಫಿಲೋಮಿನ್ ರಾಜ್ ಸಂಕಲನ,  ಭಾರತೀಯ ಚಿತ್ರರಂಗದ ಐಕಾನಿಕ್ ಸಿನಿಮಾಟೋಗ್ರಾಫರ್ ರವಿವರ್ಮನ್ ಕ್ಯಾಮೆರಾ ಹಿಡಿದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬ್ಯುಸಿ ನಡುವೆಯೂ ‘ಉಸಿರೇ ಉಸಿರೇ’ ಚಿತ್ರದ ಡಬ್ಬಿಂಗ್ ಮುಗಿಸಿದ ಕಿಚ್ಚ

    ಬ್ಯುಸಿ ನಡುವೆಯೂ ‘ಉಸಿರೇ ಉಸಿರೇ’ ಚಿತ್ರದ ಡಬ್ಬಿಂಗ್ ಮುಗಿಸಿದ ಕಿಚ್ಚ

    ಸಿರೇ ಉಸಿರೇ (Usire Usire) ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ತಮ್ಮ ಹುಟ್ಟು ಹಬ್ಬದ ಹಿಂದಿನ ದಿನವೇ ಈ ಚಿತ್ರದ ಡಬ್ಬಿಂಗ್ (Dubbing) ಮುಗಿಸಿಕೊಟ್ಟಿದ್ದಾರೆ. ಇದೊಂದು ನವೀರದ ಪ್ರೇಮಕಥೆ ಎನ್ನುವ ನಿರ್ಮಾಪಕ ಪ್ರದೀಪ್ ಯಾದವ್,  ಇದು ನನ್ನ ಮೊದಲ ನಿರ್ಮಾಣದ ಚಿತ್ರ.‌ ನಾನು ಚಿತ್ರ ನಿರ್ಮಾಣ ಮಾಡಲು ಕಿಚ್ಚ ಸುದೀಪ್ ಅವರೆ ಸ್ಫೂರ್ತಿ. ಅವರು ನನ್ನ ಬೆನ್ನೆಲುಬಾಗಿ ನಿಂತರು ಹಾಗೂ ಪ್ರಮುಖಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಸುದೀಪ್ ಅವರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ ತಿಳಿಸುತ್ತಾರೆ.

    ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಅಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ.  ಉಸಿರೇ ಉಸಿರೇ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ರಾಜೀವ್ (Rajeev) ಅವರಿಗೆ ನಾಯಕಿಯಾಗಿ ಶ್ರೀಜಿತ ನಟಿಸಿದ್ದಾರೆ. ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

    ತೆಲುಗಿನ ಖ್ಯಾತ ನಟರಾದ ಆಲಿ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರು, ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿ  ಗಿನ್ನಿಸ್ ರೆಕಾರ್ಡ್ ಮಾಡಿರುವ ಬ್ರಹ್ಮಾನಂದಂ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್, ಸಾಧುಕೋಕಿಲ, ಮಂಜು ಪಾವಗಡ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಶೈನಿಂಗ್ ಸೀತಾರಾಮು,ಜಗಪ್ಪ, ಸುಶ್ಮಿತಾ  ಮುಂತಾದವರ ತಾರಾಬಳಗವಿದೆ.

     

    ಸಿ.ಎಂ.ವಿಜಯ್ (C.M. Vijay) ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು,  ಮನು ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಣ್ಣ ಚಿರು ನಟನೆಯ ಕೊನೆಯ ಚಿತ್ರದ ಡಬ್ಬಿಂಗ್ ಮುಗಿಸಿದ ಧ್ರುವ ಸರ್ಜಾ

    ಅಣ್ಣ ಚಿರು ನಟನೆಯ ಕೊನೆಯ ಚಿತ್ರದ ಡಬ್ಬಿಂಗ್ ಮುಗಿಸಿದ ಧ್ರುವ ಸರ್ಜಾ

    ಚಿರಂಜೀವಿ ಸರ್ಜಾ (Chiranjeevi Sarja) ಅಭಿನಯದ ಕೊನೆಯ ಚಿತ್ರ ‘ರಾಜ ಮಾರ್ತಾಂಡ’ದ (Raja Marthanda) ಡಬ್ಬಿಂಗ್ (Dubbing)ಕೆಲಸವನ್ನು ಮಾಡಿಕೊಡುವುದಾಗಿ ಧ್ರುವ ಸರ್ಜಾ ಹೇಳಿಕೊಂಡಿದ್ದರು. ಅಣ್ಣನ ಪಾತ್ರಕ್ಕೆ ತಾವೇ ಡಬ್ ಮಾಡುವುದಾಗಿಯೂ ತಿಳಿಸಿದ್ದರು. ಇದೀಗ ಡಬ್ಬಿಂಗ್ ಕೆಲಸವನ್ನೂ ಧ್ರುವ ಸರ್ಜಾ ಪೂರ್ಣಗೊಳಿಸಿದ್ದಾರೆ. ಆ ವಿಡಿಯೋ ವೈರಲ್ ಕೂಡ ಆಗಿದೆ.

    ಚಿರು ಸರ್ ನಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಡಬ್ಬಿಂಗ್ ಮಾಡುವುದು ಮಾತ್ರ ಬಾಕಿಯಿತ್ತು. ಆನಂತರ ನಡೆಯ ಬಾರದ ನಟನೆ ನಡೆದದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ಚಿರು ಅವರ ಪಾರ್ಥಿವ ಶರೀರ ನೋಡಲು ಹೋದಾಗ, ಧ್ರುವ ಸರ್ಜಾ (Dhruva Sarja) ಕೇಳಿದ ಮೊದಲ ಮಾತು, ಅಣ್ಣ ಡಬ್ಬಿಂಗ್ ಮುಗಿಸಿದ್ದಾರಾ? ನಾನು ಇಲ್ಲ ಅಂದೆ. ನಾನು ಮಾಡಿಕೊಡುತ್ತೀನಿ ಅಂದರು. ಹಾಗೆ ಟ್ರೇಲರ್ ಗೆ ಧ್ರುವ ಧ್ವನಿ ನೀಡಿದ್ದಾರೆ. ಮೇಘನಾರಾಜ್ ಹಾಗೂ ಸುಂದರರಾಜ್ ಅವರಂತೂ ನಮ್ಮ ಬೆಂಬಲಕ್ಕೆ ಸದಾ ಇದ್ದಾರೆ. ರಾಯನ್ ರಾಜ್ ಸರ್ಜಾ ಸಹ ನಮ್ಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಧನ್ಯವಾದ ಎಂದಿದ್ದರು ನಿರ್ದೇಶಕ ರಾಮ್ ನಾರಾಯಣ್.

    ಅದೇನೊ ಗೊತ್ತಿಲ್ಲ. ಅವರು ನಟಿಸುವ ಬೇರೆ ಚಿತ್ರಗಳ ಸಂಭಾಷಣೆನ್ನು ಅಲ್ಲೇ ಹೇಳಿ, ಹತ್ತು ನಿಮಿಷಕ್ಕೆ ಮರೆತು ಹೋಗತ್ತಿದ್ದರು. ಆದರೆ ಈ ಚಿತ್ರದ ಸಂಭಾಷಣೆ ಮಾತ್ರ ಯಾವಾಗಲೂ ಹೇಳುತ್ತಿದ್ದರು. ಕೊನೆಗೆ ಚಿರು ಬಂದರೆ ನಾವೆಲ್ಲಾ ಆ ಡೈಲಾಗ್ ಹೇಳುತ್ತಿದ್ದೆವು. ಅಷ್ಟು ಈ ಚಿತ್ರವನ್ನು ಹಚ್ಚಿಕೊಂಡಿದ್ದರು. ಅವರಿಲ್ಲದ ಈ ಸಮಯದಲ್ಲಿ ಚಿತ್ರತಂಡಕ್ಕೆ ಬೆಂಬಲ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ಎರಡು ಕುಟುಂಬಗಳ ಸಹಕಾರ ಚಿತ್ರಕ್ಕೆ ಇರಲಿದೆ ಎನ್ನುವುದು ಮೇಘನಾ ರಾಜ್ ಮಾತು. ಇದನ್ನೂ ಓದಿ:‘ಟೈಗರ್ ನಾಗೇಶ್ವರ್ ರಾವ್’ ಟೀಸರ್ ಔಟ್- ಮಾಸ್ ಆಗಿ ಎಂಟ್ರಿ ಕೊಟ್ಟ ರವಿತೇಜ

    ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು  ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

     

    ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಪಾನ್ ನಲ್ಲಿ ಕೆಜಿಎಫ್ : ಜಪಾನ್ ಭಾಷೆಯಲ್ಲೇ ಚಿತ್ರ ನೋಡಿ ಎಂದ ಯಶ್

    ಜಪಾನ್ ನಲ್ಲಿ ಕೆಜಿಎಫ್ : ಜಪಾನ್ ಭಾಷೆಯಲ್ಲೇ ಚಿತ್ರ ನೋಡಿ ಎಂದ ಯಶ್

    ರ್.ಆರ್.ಆರ್ ಸಿನಿಮಾದ ನಂತರ ದಕ್ಷಿಣದ ಮತ್ತೊಂದು ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಯಶ್ (Yash) ಮತ್ತು ಪ್ರಶಾಂತ್ ನೀಲ್ (Prashant Neel) ಕಾಂಬಿನೇಷನ್ ನ ‘ಕೆಜಿಎಫ್ 1’ (KGF) ಹಾಗೂ ‘ಕೆಜಿಎಫ್ 2’ ಚಿತ್ರವು ಜಪಾನ್ (Japan) ಭಾಷೆಗೆ ಡಬ್ ಆಗಿದ್ದು, ಶೀಘ್ರದಲ್ಲೇ ಸಿನಿಮಾ ರಿಲೀಸ್ ಆಗಲಿದೆಯಂತೆ. ಅದಕ್ಕಾಗಿಯೇ ಯಶ್ ಜಪಾನ್ ಭಾಷೆಯಲ್ಲೇ ವಿಡಿಯೋವೊಂದನ್ನು ಮಾಡಿ, ಸಿನಿಮಾ ನೋಡುವಂತೆ ಅಲ್ಲಿನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಆರ್.ಆರ್.ಆರ್ ಸಿನಿಮಾ ಕೂಡ ಈ ಹಿಂದೆ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿತ್ತು. ನೂರು ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ಲೂಟಿ ಮಾಡಿತ್ತು. ಆ ಸಿನಿಮಾ ಗೆಲುವು ಕಂಡ ಬೆನ್ನಲ್ಲೇ ಕೆಜಿಎಫ್ ಸಿನಿಮಾವನ್ನೂ ಜಪಾನ್ ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇದೀಗ ಸಿನಿಮಾ ರಿಲೀಸ್ ಮಾಡಲು ಹೊರಟಿದೆ.

    ಇದೇ ಜುಲೈ 14 ರಂದು ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಕೂಡ ಜಪಾನ್ ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಪಠಾಣ್ ಸಿನಿಮಾ ಕೂಡ ಈ ವರ್ಷ ಹಿಟ್ ಆದ ಬಾಲಿವುಡ್ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿದೆ. ಜಪಾನ್ ನಲ್ಲಿ ಶಾರುಖ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಶಾರುಖ್ ಖಾನ್ ಸಿನಿಮಾಗಳು ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಲೇ ಇರುತ್ತವೆ. ಇದನ್ನೂ ಓದಿ:‘ಟೋಬಿ’ ಶೆಟ್ಟರ ಕೆನ್ನೆಗೆ ಮುತ್ತಿಟ್ಟ ಚೈತ್ರಾ- ರಾಜ್ ಬಿ ಶೆಟ್ಟಿ ಸ್ಪಷನೆ

    ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಕೆಜಿಎಫ್.  ಈ ಹಿಂದೆ ಕೆಜಿಎಫ್ ಸಿನಿಮಾ 50ನೇ ದಿನದತ್ತ ದಾಪುಗಾಲಿಡುತ್ತಿರುವ ಸಂದರ್ಭದಲ್ಲಿ, ಜಪಾನ್‍ನ ಟೋಕಿಯೋದ ಚಿತ್ರಮಂದಿರವೊಂದರಲ್ಲಿ ಚಿತ್ರದ ಪ್ರದರ್ಶನ  ನಡೆದಿತ್ತು. ಜಪಾನ್‍ನಲ್ಲೂ ಅಪಾರ ಕನ್ನಡ ಅಭಿಮಾನಿಗಳು ಇದ್ದು, ಅವರು ಕೆಜಿಎಫ್ ಸಿನಿಮಾ ವೀಕ್ಷಿಸಿದ್ದರು.

    ಈ ವೇಳೆ ಅಲ್ಲಿನ ಕನ್ನಡಾಭಿಮಾನಿಗಳು ಯಶ್ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಸಿನಿಮಾ ಚೆನ್ನಾಗಿದೆ, ಕನ್ನಡ ಭಾಷೆಯಲ್ಲಿ ನೋಡುತ್ತಿದ್ದೇವೆ ಎಂದು ಹೇಳಿ ಯಶ್ ಅವರಿಗೆ ಶುಭಾಶಯ ತಿಳಿಸಿದ್ದರು. ಅಲ್ಲದೇ ಇದೇ ವೇಳೆ ಅಭಿಮಾನಿಗಳು ಸಿನಿಮಾದ ಒಂದು ಡೈಲಾಗ್ ಹೇಳಿ ಎಂದು ಮನವಿ ಮಾಡಿಕೊಂಡಿದ್ದರು.

     

    ಅಭಿಮಾನಿಗಳ ಒತ್ತಾಯದ ಮೇರೆಗೆ ಯಶ್ ಫೋನ್ ಮೂಲಕವೇ ಡೈಲಾಗ್ ಹೇಳಿದ್ದಾರೆ. ಯಶ್ ಡೈಲಾಗ್ ಹೇಳಿದ ಬಳಿಕ ಚಿತ್ರಮಂದಿರದಲ್ಲಿದ್ದ ಅಭಿಮಾನಿಯೊಬ್ಬರು, ಯಶ್ ನನ್ನ ರಕ್ತಾನೂ ಕೆಂಪಗೇ ಇದೆಯಲ್ಲಾ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕೆಂಡದ ಸೆರಗು’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಕನಸಿನರಾಣಿ ಮಾಲಾಶ್ರೀ

    ‘ಕೆಂಡದ ಸೆರಗು’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ ಕನಸಿನರಾಣಿ ಮಾಲಾಶ್ರೀ

    ಕೆಂಡದ ಸೆರಗು (Kendada Seragu) ಎನ್ನುವ ಕುಸ್ತಿ ಆಧಾರಿತ ಕಾದಂಬರಿ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಲಾಶ್ರೀ (Malashree) ಅವರು ತಾವೇ ಸ್ವತಃ ಡಬ್ಬಿಂಗ್ (Dubbing) ಮಾಡಿ ಮುಗಿಸಿದ್ದಾರೆ. ಮಾಲಾಶ್ರೀ ಅವರು ನಟಿಸಿರುವ ಸಿನಿಮಾಗಳಲ್ಲಿ ಕೆಲವೇ ಕೆಲವು ಸಿನಿಮಾಗಳಿಗೆ  ಮಾತ್ರ ತಮ್ಮ ಧ್ವನಿ ಕೊಡುತ್ತಾರೆ. ತುಂಬ ವರ್ಷಗಳ ನಂತರ ಕೆಂಡದ ಸೆರಗು ಸಿನಿಮಾಗೆ ಮಾಲಾಶ್ರೀ ಅವರು ಧ್ವನಿ ಕೊಟ್ಟಿದ್ದು ಚಿತ್ರತಂಡಕ್ಕೆ ಮತ್ತೊಂದು ಶಕ್ತಿ ಇದ್ದಂತೆ ಎಂದು ತಿಳಿಸಿದ್ದಾರೆ ನಿರ್ದೇಶಕ ರಾಕಿ‌ ಸೋಮ್ಲಿ (Rocky Somli) ಅವರು.

    ಈ ಹಿಂದೆ ಕೆಂಡದ ಸೆರಗು ಸಿನಿಮಾದ ಪ್ರೆಸ್ ಮಿಟ್ ನಲ್ಲಿ ಮಾತಾನಾಡಿದ್ದ ಮಾಲಾಶ್ರೀ ಅವರು, ಕೆಂಡದ ಸೆರಗು ದೇಶಿಯ ಕುಸ್ತಿ ಕಥೆಯ ಜೊತೆಗೆ ಹೃದಯ ಅಂಟುವ ಭಾವನಾತ್ಮಕ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಸಿನಿಮಾ, ಒಂದೊಂದು ಪಾತ್ರವೂ ಸಹ ತುಂಬ ವಿಶೇಷವಾದ ಪಾತ್ರಗಳು. ತಂಡದ ಪ್ರತಿ ಒಬ್ಬರು ಸಹ ಸಿನಿಮಾವನ್ನು ಆರಾಧಿಸುವ ತಂತ್ರಜ್ಞಾನದ ತಂಡ. ನಾನು ತುಂಬ ಖುಷಿಯಿಂದ ಸೆಟ್ ನಲ್ಲಿ ಪ್ರೀತಿಯಿಂದ ಕೆಲಸ ಮಾಡಿದ್ದೇನೆ. ತಂಡದ ಪ್ರತಿ ಒಬ್ಬರು ಸಹ ತುಂಬಾನೇ ಶ್ರಮವಹಿಸಿ ಈ ಸಿನಿಮಾದ ಕೆಲಸ ಮಾಡುತ್ತಿದ್ದಾರೆ. ಖಂಡಿತವಾಗಿ ಇದು ಗೆಲ್ಲುವ ಸಿನಿಮಾ. ಈ ವರ್ಷದ ಸಾಲಿನಲ್ಲಿ ನಿಲ್ಲುವ ಸಿನಿಮಾ. ಈ ತಂಡದ ಜೊತೆಗೆ ನಾ ಸದಾ ಇರುತ್ತೇನೆ ಎಂದಿದ್ದರು. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    ಚಿತ್ರಿಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕೆಂಡದ ಸೆರಗು ಇನ್ನೆರಡು ತಿಂಗಳಲ್ಲಿ ಬಿಡುಗಡೆಗೆ ನೀರಿಕ್ಷೆಯಲ್ಲಿದೆ. ಸಿನಿಮಾದಲ್ಲಿ ಒಟ್ಟು ನಾಲ್ಕು ಫೈಟ್, ಆರು ಹಾಡುಗಳಿದ್ದು ಈಗಾಗಲೇ ಒಂದು ಹಾಡು ಮತ್ತು ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಇನ್ನೂ ಉಳಿದ ತಾರಾಗಣದಲ್ಲಿ ಯಶ್ ಶೆಟ್ಟಿ, ವರ್ಧನ್, ಬಾಲುರಾಜ್ ವಾಡಿ, ಶೋಭಿತ, ಹರೀಶ್ ಅರಸು, ಪ್ರತಿಮಾ, ಮೋಹನ್, ಸಿಂಧನೂರು ಉಮೇಶ್, ಸಿಂಧೂ ಲೋಕನಾಥ್ ಅಭಿನಯಿಸಿದ್ದಾರೆ.

    ಈ ಚಿತ್ರಕ್ಕೆ ವಿಪಿನ್ ರಾಜ್ ಅವರ ಛಾಯಾಗ್ರಹಣ, ವೀರೇಶ್ ಕಬ್ಳಿ ಅವರ ಸಂಗೀತ, ಶ್ರೀಕಾಂತ್ ಅವರ ಸಂಕಲನ, ಶ್ರೀಮುತ್ತು ಟಾಕೀಸ್ ಅಡಿಯಲ್ಲಿ, ಕೊಟ್ರೇಶ್ ಗೌಡ ಅವರು ಬಂಡವಾಳ ಹೂಡಿದ್ದು  ಗೆಲ್ಲುವ ಎಲ್ಲಾ ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ.

  • ಬೆಂಗಳೂರಿನಲ್ಲಿ ರಜನಿ-ಶಿವಣ್ಣ  ನಟನೆ ಜೈಲರ್ ಸಿನಿಮಾದ ಡಬ್ಬಿಂಗ್

    ಬೆಂಗಳೂರಿನಲ್ಲಿ ರಜನಿ-ಶಿವಣ್ಣ ನಟನೆ ಜೈಲರ್ ಸಿನಿಮಾದ ಡಬ್ಬಿಂಗ್

    ಶಿವರಾಜ್ ಕುಮಾರ್ (Shivaraj Kumar) ಮತ್ತು ರಜನಿಕಾಂತ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ತಮಿಳಿನ ಜೈಲರ್ ಸಿನಿಮಾದ ಡಬ್ಬಿಂಗ್ (dubbing) ಕಾರ್ಯ ಬೆಂಗಳೂರಿನಲ್ಲೇ ನಡೆಯುತ್ತಿದೆ. ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಮಾತಿನ ಮರುಲೇಪನ ಕಾರ್ಯಕ್ಕೆಂದೇ ಬೆಂಗಳೂರಿಗೆ ಬಂದಿಳಿದಿದ್ದಾರೆ. ಶಿವಣ್ಣ ಡಬ್ಬಿಂಗ್ ಸ್ಟುಡಿಯೋದಲ್ಲಿರುವ ಫೋಟೋವನ್ನು ಎನ್.ಎಸ್. ರಾಜಕುಮಾರ್ ಅವರು ಹಂಚಿಕೊಂಡಿದ್ದಾರೆ.

    ರಜನಿಕಾಂತ್‌ (Rajanikanth) ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಕಾಲಿವುಡ್‌ನ (Kollywood) ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, `ಜೈಲರ್’ (Jailer) ಸಿನಿಮಾ ಬಿಡುಗಡೆಗೆ ದಿನಾಂಕ ಕೂಡ ಘೋಷಣೆಯಾಗಿದೆ. ಮುಂದಿನ ಆಗಸ್ಟ್ 10 ರಂದು ತೆರೆಗೆ ಬರಲಿದೆ. ದಕ್ಷಿಣ ಭಾರತದ ಸ್ಟಾರ್‌ ನಟರು ನಟಿಸಿರುವ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ (Nelson Dilip Kumar) ಆಕ್ಷನ್‌ ಕಟ್‌ ಹೇಳಿದ್ದಾರೆ.

    ರಜನಿಕಾಂತ್, ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌, ಮೋಹನ್ ಲಾಲ್, ತಮನ್ನಾ ಭಾಟಿಯಾ ಇನ್ನೂ ಅನೇಕ ತಾರೆಯರು ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ನಟಿಸುತ್ತಿರುವುದು ಅಭಿಮಾನಿಗಳಿಗೆ ಹಬ್ಬವಾಗಿದೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಅಲ್ಲದೇ ಶಿವಣ್ಣ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ (Tamil Cinema) ನಟಿಸುತ್ತಿದ್ದು, ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹು ತಾರಾಗಣ ಹೊಂದಿರುವ ಈ ಸಿನಿಮಾ ಪೋಸ್ಟರ್‌ ಮೂಲಕವೇ ನಿರೀಕ್ಷೆ ಹುಟ್ಟಿಸಿತ್ತು. ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ಚಿತ್ರತಂಡ ಟೀಸರ್‌ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ತಲೈವಾ ನಟನೆಯ 169ನೇ ಸಿನಿಮಾ ಆಗಿರುವ ಕಾರಣ, ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

  • ‘ಮ್ಯಾಟ್ನಿ’ ಚಿತ್ರಕ್ಕೆ ಡಬ್ಬಿಂಗ್ ಮಾಡಿ ನಿರೀಕ್ಷೆ ಹೆಚ್ಚಿಸಿದ ಸತೀಶ್ ನೀನಾಸಂ

    ‘ಮ್ಯಾಟ್ನಿ’ ಚಿತ್ರಕ್ಕೆ ಡಬ್ಬಿಂಗ್ ಮಾಡಿ ನಿರೀಕ್ಷೆ ಹೆಚ್ಚಿಸಿದ ಸತೀಶ್ ನೀನಾಸಂ

    ನ್ನಡ ಸಿನಿಮಾ ರಂಗದ ಪ್ರತಿಭಾನ್ವಿತ ನಟ ಸತೀಶ್ ನೀನಾಸಂ (Satish Ninasam) ನಟನೆಯ, ನಿರೀಕ್ಷಿತ ‘ಮ್ಯಾಟ್ನಿ’ (Matney) ಸಿನಿಮಾದ ಡಬ್ಬಿಂಗ್ (Dubbing) ಕೆಲಸ ನಡೆಯುತ್ತಿದೆ. ಈಗಾಗಲೇ ತಮ್ಮ ಭಾಗದ ಮಾತಿನ ಮರುಲೇಪನವನ್ನು ಮಾಡಿರುವುದಾಗಿ ಸತೀಶ್ ಹೇಳಿದ್ದಾರೆ. ಮ್ಯಾಟ್ನಿಗೆ ಡಬ್ಬಿಂಗ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಿನಿಮಾ ಬಿಡುಗಡೆ ತಯಾರಿಗೆ ಅನುವು ಮಾಡಿಕೊಟ್ಟಿದ್ದಾರೆ.

    ಅಯೋಗ್ಯ ಸಿನಿಮಾದ ಹಿಟ್ ಕಾಂಬಿನೇಶನ್ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ (Rachita Ram) ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಒಂದಾಗಿರುವ ಚಿತ್ರ ‘ಮ್ಯಾಟ್ನಿ’. ಸ್ಯಾಂಡಲ್‍ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಲು ಸಜ್ಜಾಗಿರುವ ಮನೋಹರ್ ಕಾಂಪಲಿ (Manohar Kampali)  ಚೊಚ್ಚಲ ನಿರ್ದೇಶನದ ಚಿತ್ರವಿದು. ಪ್ರೇಮಿಗಳ ದಿನಕ್ಕೆ ಟೀಸರ್ ಉಡುಗೊರೆಯಾಗಿ ನೀಡಿತ್ತು. ಟೀಸರ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು.

    ‘ಮ್ಯಾಟ್ನಿ’ಯ ಟೀಸರ್ ಕಲರ್ ಫುಲ್ ಸೆಟ್, ಮನ ಸೆಳೆಯೋ ಬ್ಯಾಗ್ರೌಂಡ್ ಮ್ಯೂಸಿಕ್, ರಚ್ಚು ಲುಕ್ ಎಲ್ಲವೂ ಕಣ್ಣಿಗೆ ಹಬ್ಬ ನೀಡಿದ್ದರೆ, ಸತೀಶ್ ನೀನಾಸಂ ಪ್ರೇಮ ನಿವೇದನೆ, ಪ್ರೀತಿಯ ಸಾಲುಗಳು ಕಣ್ಮನ ಸೆಳೆದಿದ್ದವು.  ಮನೋಹರ್ ಕಾಂಪಲಿ ಇಬ್ಬರು ಸ್ಟಾರ್ ಜೋಡಿಗೆ ಸರಿ ಹೊಂದುವಂತಹ ಒಂದೊಳ್ಳೆ ಕಥೆ ಹೆಣೆದಿದ್ದು ನಿರ್ದೇಶಕನಾಗಿ ತಮ್ಮನ್ನು ಸಹ ಪ್ರೂವ್ ಮಾಡಿಕೊಳ್ಳಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

    ರೋಮ್ಯಾಂಟಿಕ್ ಲವ್ ಸ್ಟೋರಿ ಸಬ್ಜೆಕ್ಟ್ ಇರುವ ಮ್ಯಾಟ್ನಿ ಚಿತ್ರದಲ್ಲಿ ಸತೀಶ್ ನೀನಾಸಂ ಶ್ರೀಮಂತ ಮನೆತನದ ಹುಡುಗನ ಪಾತ್ರಕ್ಕೆ ಬಣ್ಣಹಚ್ಚಿದ್ದು, ಲವರ್ ಬಾಯ್ ಅವತಾರವೆತ್ತಿದ್ದಾರೆ. ಈಗಾಗಲೇ ಅಯೋಗ್ಯ ಸಿನಿಮಾದಲ್ಲಿ ಸತೀಶ್ ಹಾಗೂ ರಚ್ಚು ಜೋಡಿ ಹಿಟ್ ನೀಡಿದ್ದು, `ಮ್ಯಾಟ್ನಿ’ ಸಿನಿಮಾದಲ್ಲೂ ಈ ಜೋಡಿ ಮೋಡಿ ಮಾಡಲಿದೆ ಎನ್ನುವ ನಿರೀಕ್ಷೆಯೂ ಹೆಚ್ಚಿದೆ.

    ಸದ್ಯ ಇದೊಂದು ಲವ್ ಸ್ಟೋರಿ ಎಂದಿರುವ ನಿರ್ದೇಶಕರು ಸಿನಿಮಾ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.  ಎಫ್ 3 ಪ್ರೊಡಕ್ಷನ್ಸ್ ಬ್ಯಾನರ್ ನಡಿ ಪಾರ್ವತಿ ಎಸ್ ಗೌಡ ಚಿತ್ರವನ್ನು ನಿರ್ಮಿಸಿದ್ದು, ಲೂಸಿಯ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸುಧಾಕರ್ ಸಿನಿಮಾಟೋಗ್ರಫಿ. ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ.

  • ಹೀರೋ ದಿಗಂತ್ ಮಿಸ್ಸಿಂಗ್ ಎಂದು ವಿಡಿಯೋ ಹಂಚಿಕೊಂಡ ಚಿತ್ರತಂಡ

    ಹೀರೋ ದಿಗಂತ್ ಮಿಸ್ಸಿಂಗ್ ಎಂದು ವಿಡಿಯೋ ಹಂಚಿಕೊಂಡ ಚಿತ್ರತಂಡ

    ದೂದ್ ಪೇಡ ದಿಗಂತ್ (Diganth) ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ (edagai Apaghatakke  Karana) ಸಿನಿಮಾದ ಡಬ್ಬಿಂಗ್ (Dubbing) ಶುರುವಾಗಿದೆ. ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ, ಕೃಷ್ಣ ಹೆಬ್ಬಾಳೆ, ಧನು ಹರ್ಷ ತಮ್ಮ ಪಾತ್ರಗಳಿಗೆ ಮಾತು ಪೊಣಿಸಿದ್ದಾರೆ. ಆದರೆ ನಾಯಕ ದಿಗಂತ್ ಫೈಲ್ ಮಿಸ್ (Missing) ಆಗಿದೆ. ಹಾಗಿದ್ರೆ ದೂದ್ ಪೇಡೆ ಎಲ್ಲಿ? ಎಂಬ ವಿಡಿಯೋ ತುಣುಕನ್ನು ಚಿತ್ರತಂಡ ರಿವೀಲ್ ಮಾಡಿದೆ.

    ಸಸ್ಪೆನ್ಸ್ ಥ್ರಿಲ್ಲರ್ ಡ್ರಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ಸಮರ್ಥ್ ಬಿ ಕಡ್ಕೋಲ್ ಆಕ್ಷನ್ ಕಟ್ ಹೇಳಿದ್ದು, ಗುರುದತ್ತ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ದಿಗಂತ್ ಗೆ ಜೋಡಿಯಾಗಿ ಯುವನಟಿ ಧನು ಹರ್ಷ ನಟಿಸಿದ್ದಾರೆ. ಅಭಿಮನ್ಯು ಸದಾನಂದ್ ಛಾಯಾಗ್ರಾಹಣ ಮಾಡಿದ್ದಾರೆ. ಇದನ್ನೂ ಓದಿ:‘ಸಲಾರ್’ ಅಡ್ಡಾಗೆ ಎಂಟ್ರಿ ಕೊಟ್ಟ ಕನ್ನಡದ ನಟ ಸೌರವ್ ಲೋಕಿ

    ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ. ಈ ಸಿನಿಮಾದಲ್ಲಿ ಪ್ರತಿ ಕೆಲಸಕ್ಕೂ ಎಡಗೈ ಬಳಸುವವರ ಸಮಸ್ಯೆಗಳ ಬಗ್ಗೆಯೇ ತೋರಿಸಲಾಗಿದೆ. ಅವರು ದಿನನಿತ್ಯದ ಜೀವನದಲ್ಲಿ ಎದುರಿಸುವ ಸವಾಲುಗಳ ಕುರಿತಾಗಿಯೇ ಫೋಕಸ್ ಮಾಡಲಾಗಿದೆಯಂತೆ. ಸದ್ಯ ಎಡಗೈ ಅಪಘಾತಕ್ಕೆ ಕಾರಣ ಸಿನಿಮಾದ ಡಬ್ಬಿಂಗ್ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ.

  • ‘ಸೂತ್ರಧಾರಿ’ಗೆ ಡಬ್ಬಿಂಗ್ ಶುರು ಮಾಡಿದ ಚಂದನ್ ಶೆಟ್ಟಿ

    ‘ಸೂತ್ರಧಾರಿ’ಗೆ ಡಬ್ಬಿಂಗ್ ಶುರು ಮಾಡಿದ ಚಂದನ್ ಶೆಟ್ಟಿ

    ಗಾಯಕನಾಗಿ, ಗೀತರಚನೆಕಾರನಾಗಿ,‌ ಸಂಗೀತ ನಿರ್ದೇಶಕನಾಗಿ ಜನಪ್ರಿಯತೆ ಪಡೆದಿರುವ ಚಂದನ್ ಶೆಟ್ಟಿ,  ಈಗ ನಾಯಕನಾಗಿಯೂ‌ ಚಿರಪರಿಚಿತ. ಪ್ರಸ್ತುತ ಚಂದನ್ ಶೆಟ್ಟಿ (Chandan Shetty) ‘ಸೂತ್ರಧಾರಿ’ (Sutradhari) ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಡಬ್ಬಿಂಗ್ (Dubbing) ಕೆಲಸ ಆರಂಭವಾಗಿದ್ದು, ಇಂದಿನಿಂದ ಚಂದನ್ ಮಾತಿನ ಮರುಲೇಪನ ಮಾಡುತ್ತಿದ್ದಾರೆ. ಇದು ಇವರು ನಾಯಕನಾಗಿ ನಟಿಸುತ್ತಿರುವ ಎರಡನೇ ಚಿತ್ರವಾಗಿದೆ. ಮೈ ಮೂವೀ ಬಜಾರ್ ನ ನವರಸನ್ ಈ ಚಿತ್ರ ನಿರ್ಮಿಸುತ್ತಿದ್ದು, ಕ್ರಿಯೇಟಿವ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಕಿರಣ್ ಕುಮಾರ್ (Kiran Kumar) ನಿರ್ದೇಶನ ಮಾಡುತ್ತಿದ್ದಾರೆ.

    ಇದು ನನ್ನ ನಿರ್ಮಾಣದ ಐದನೇ ಚಿತ್ರ. ಈವರೆಗೂ ನಮ್ಮ ಸಂಸ್ಥೆಯ ಮೂಲಕ 180ಕ್ಕೂ ಹೆಚ್ಚು ಚಿತ್ರಗಳ ಇವೆಂಟ್ ನಡೆಸಿಕೊಟ್ಟಿದ್ದೇನೆ. ನಿರ್ದೇಶನದೊಂದಿಗೆ ವಿತರಕನಾಗೂ ಕಾರ್ಯ ನಿರ್ವಹಿಸಿದ್ದೇನೆ. ಪ್ರಸ್ತುತ ಸೂತ್ರಧಾರಿ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಮ್ಮ‌ ತಂಡದವರೇ ಆದ ಕಿರಣ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಂದನ್ ಶೆಟ್ಟಿ ನಾಯಕನಾಗಿ, ಅಪೂರ್ವ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದಿದ್ದಾರೆ ನಿರ್ಮಾಪಕ ನವರಸನ್. ಇದನ್ನೂ ಓದಿ:ರಾಕಿ ಭಾಯ್ ಲೆಜೆಂಡ್ ಎಂದು ಹಾಡಿ ಹೊಗಳಿದ ಪೂಜಾ ಹೆಗ್ಡೆ

    ನಾಯಕನಾಗಿ ನಾನು ಅಭಿನಯಿಸುತ್ತಿರುವ ಮೊದಲ ಚಿತ್ರ ‘ಎಲ್ರ ಕಾಲೆಳಿಯುತ್ತೆ ಕಾಲ’. ಆ ಚಿತ್ರ ರೆಟ್ರೊ ಶೈಲಿಯಲ್ಲಿ ಇರುತ್ತದೆ.  ಸೂತ್ರಧಾರಿ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಿರಣ್ ಕುಮಾರ್ ಉತ್ತಮ ಕಥೆ ಬರೆದಿದ್ದಾರೆ. ಮರ್ಡರ್ ಮಿಸ್ಟರಿ ಕಥೆ‌ ಅಂತ ಹೇಳಬಹುದು. ಈ ಚಿತ್ರಕ್ಕಾಗಿ ನಾನು ಹನ್ನೆರಡು ಕೆಜಿ ತೂಕ ಇಳಿಸಿಕೊಂಡಿದ್ದೀನಿ. ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ. ‌ಎಲ್ಲರೂ ಗುನಗುವಂತಹ ಹಾಡುಗಳನ್ನು ಕೊಟ್ಟಿದ್ದೇನೆ ಎಂದಿದ್ದಾರೆ ಚಂದನ್ ಶೆಟ್ಟಿ.

    ಸೂತ್ರಧಾರಿ ಎಲ್ಲರಿಗೂ ಮೆಚ್ಚುಗೆಯಾಗುವಂತಹ ಕಥಾಹಂದರ ಹೊಂದಿದೆ. ನಾನು ನವರಸನ್ (Navarasan) ಅವರ ಬಳಿ ಸಹ ನಿರ್ದೇಶಕನಾಗಿ  ಹಾಗೂ ಪಿ.ಕೆ.ಹೆಚ್ ದಾಸ್ ಅವರ ಹತ್ತಿರ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ‌ ಮಾಡಿದ್ದೇನೆ.‌ ನಿರ್ದೇಶಕನಾಗಿ ಇದು ಮೊದಲ ಚಿತ್ರ ಎಂದು ಹೇಳಿದ್ದ ನಿರ್ದೇಶಕ ಕಿರಣ್ ಕುಮಾರ್, ಅವಕಾಶ ಕೊಟ್ಟ ನವರಸನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ‌ನಾಯಕಿಯಾಗಿ ಅಪೂರ್ವ (Apoorva), ಹಿರಿಯ ನಟ ತಬಲ ನಾಣಿ ಹಾಗೂ ಗಣೇಶ್ ನಾರಾಯಣ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.